ಕುಮಾರ ಗುಪ್ತ I
(ಮೊದಲನೇ ಕುಮಾರಗುಪ್ತ ಇಂದ ಪುನರ್ನಿರ್ದೇಶಿತ)
ಕುಮಾರ ಗುಪ್ತ I ಗುಪ್ತ ಸಾರ್ವಭೌಮರಲ್ಲಿ ಪ್ರಸಿದ್ಧನಾದ ಎರಡನೆಯ ಚಂದ್ರಗುಪ್ತ ಮತ್ತು ಆತನ ಪಟ್ಟದ ರಾಣಿ ಧೃವಾ ದೇವಿಯ ಮಗ. ಇವನಿಗೆ ಮಹೇಂದ್ರಾದಿತ್ಯ ಮತ್ತು ಶಂಕರಾದಿತ್ಯ ಎಂಬ ಬಿರುದುಗಳಿದ್ದವು.[೨]
ಕುಮಾರ ಗುಪ್ತ I | |
---|---|
ಕುಮಾರ ಗುಪ್ತ ಹೊರಡಿಸಿದ ಚಿನ್ನದ ನಾಣ್ಯ | |
7th Gupta Emperor | |
ಆಳ್ವಿಕೆ | c. 414 – c. 455 CE |
ಪೂರ್ವಾಧಿಕಾರಿ | ಚಂದ್ರಗುಪ್ತ II |
ಉತ್ತರಾಧಿಕಾರಿ | ಸ್ಕಂದಗುಪ್ತ |
ಸಂತಾನ | |
Skandagupta Purugupta[೧] | |
ತಂದೆ | ಚಂದ್ರಗುಪ್ತ II |
ತಾಯಿ | ಧ್ರುವದೇವಿ |
ರಾಜ್ಯಭಾರ
ಬದಲಾಯಿಸಿತನ್ನ ತಂದೆಯ ತರುವಾಯ ಈತ ಸಿಂಹಾಸನವನ್ನೇರಿ 415 ರಿಂದ 455 ವರೆಗೆ 40 ವರ್ಷಕಾಲ ರಾಜ್ಯವಾಳಿದ. ಈತ ಸ್ಕಂಧ ಕಾರ್ತಿಕೇಯನ ಭಕ್ತ. ಆ ದೇವತೆಯ ಚಿತ್ರವಿದ್ದ ನಾಣ್ಯಗಳನ್ನು ಹೊರಡಿಸಿದ. ಕಾಳಿದಾಸ ಮಹಾಕವಿಯ ಕುಮಾರಸಂಭವ ಕಾವ್ಯದ ನಾಯಕ ಕುಮಾರಗುಪ್ತನೆಂಬುದು ವಿದ್ವಾಂಸರ ಅಭಿಪ್ರಾಯ. ಇವನು ಅನೇಕ ಜೈತ್ರಯಾತ್ರೆಗಳನ್ನು ಕೈಗೊಂಡು ಅಶ್ವಮೇಧ ಯಾಗ ಮಾಡಿದ. ಕುಮಾರಗುಪ್ತನ ಆಡಳಿತ ಕಾಲದಲ್ಲಿ ಶಾಂತಿ ಸುಭದ್ರತೆಗಳು ನೆಲಸಿದ್ದುವು. ಆದರೆ ಇವನ ಆಳ್ವಿಕೆಯ ಕೊನೆಯ ಭಾಗದಲ್ಲಿ ಹೂಣರ ದಾಳಿ ಆರಂಭವಾಯಿತು. ಇವನೂ ಇವರ ಮಗ ಸ್ಕಂಧಗುಪ್ತನೂ ಪರಾಕ್ರಮದಿಂದ ಹೋರಾಡಿ ಹೂಣರ ದಾಳಿಯನ್ನು ಹಿಮ್ಮೆಟ್ಟಿಸಿದರು. ಕುಮಾರ ಗುಪ್ತನ ಮರಣಾನಂತರ ಸ್ಕಂಧಗುಪ್ತ ಪಟ್ಟಕ್ಕೆ ಬಂದ.
ವಂಶಾವಳಿ
ಬದಲಾಯಿಸಿಉಲ್ಲೇಖಗಳು
ಬದಲಾಯಿಸಿ- ↑ Kulke, Hermann; Rothermund, Dietmar (2004). A History of India (Fourth ed.). Routledge. pp. 94–97. Archived from the original on 4 ಅಕ್ಟೋಬರ್ 2014. Retrieved 1 October 2014.
- ↑ ಕುಮಾರ ಗುಪ್ತ I
ಬಾಹ್ಯ ಸಂಪರ್ಕಗಳು
ಬದಲಾಯಿಸಿವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: