ಮುಂಬೈ ನಗರದ ಕನ್ನಡ ರಂಗಭೂಮಿ ಕಲಾವಿದರು

ಹಿಂದೆ ಬಾಂಬೆ ಯೆಂದು ಕರಯಲ್ಪಡುತ್ತಿದ್ದ, ಇಂದಿನ ಮುಂಬಯಿ ನಗರ, ಭಾರತದ ಅತ್ಯಂತ ಪ್ರಭಾವಿ ಔದ್ಯೋಗಿಕ ರಾಜಧಾನಿಯೆಂದು ಹೆಸರುಪಡೆದಿದೆ. ಈ ಮಹಾನಗರದಲ್ಲಿ, ಕನ್ನಡ ಭಾಷೆಯನ್ನು ಮಾತಾಡುವವರು ಸುಮಾರು ೧.೫ ಮಿಲಿಯಕ್ಕಿಂತ ಹೆಚ್ಚಾಗಿದ್ದಾರೆ. ಅವರೆಲ್ಲಾ ಕರ್ನಾಟಕದ ಹಲವು ಕಡೆಗಳಿಂದ ಬಂದು ಮುಂಬಯಿನಗರದ ಮುಖ್ಯವಾಹಿನಿಯಲ್ಲಿ ಬೆರೆತುಹೋಗಿದ್ದಾರೆ. ಇಲ್ಲಿನ ಸ್ಥಳೀಯ ಸಂಸ್ಕೄತಿ, ಸಾಹಿತ್ಯ ಸಂಗೀತವನ್ನು ತಮ್ಮದಾಗಿಸಿಕೊಳ್ಳುವುದಲ್ಲದೇ ತಮ್ಮದೇ ಆದ ದೇಸಿ-ಸೊಗಡ ನ್ನೂ ಉಳಿಸಿ-ಬೆಳೆಸಿದ್ದಾರೆ. ದಕ್ಷಿಣ ಕನ್ನಡ, ಉತ್ತರ ಕನ್ನಡ. ಗುಲ್ಬರ್ಗಾ, ಬಿಜಾಪುರ, ಹಾಗೂ ಹಾವೇರಿ, ಹೊಸಪೇಟೆಗಳಿಂದ ಬಂದು ನೆಲಸಿರುವ ಜನರಿದ್ದಾರೆ. ಹಳೆಮೈಸೂರಿನ ಜನ ಸ್ವಲ್ಪ ಕಡಿಮೆ. ಅದರಂತೆ, ಒಂದು ಭಾಗದ ಕನ್ನಡಜನ, ತಮ್ಮ ಪ್ರದೇಶದ ಜನ-ಜೀವನವನ್ನು ಪ್ರತಿಬಿಂಬಿಸಲು, ಪ್ರತ್ಯೇಕ ಸಂಘ ಸಂಸ್ಥೆಗಳನ್ನು ಕಟ್ಟಿಕೊಂಡು ಅದರಲ್ಲಿ ಸಕ್ರಿಯವಾಗಿ ಪಾಲುಗೊಳ್ಳುತ್ತಿದ್ದಾರೆ. ಸುಮಾರು ೮೩ ವರ್ಷಗಳ ಸುದೀರ್ಘ ಇತಿಹಾಸವಿರುವ ಮೈಸೂರ್ ಅಸೊಸಿಯೇಷನ್, ಮಾಟುಂಗದಲ್ಲಿದೆ. ಕರ್ನಾಟಕ ಸಂಘ, ಮಾಹಿಮ್, ಕನ್ನಡ-ಸಂಘ, ಮಾಟುಂಗ, ಗೊರೆಗಾಂ, ಡೊಂಬಿವಲಿ, ಮುಂತಾದ ಸ್ಥಳಗಳಲ್ಲಿ ಕನ್ನಡಿಗರೆಲ್ಲಾ ಒಗ್ಗಟ್ಟಾಗಿ ಸೇರಿ ಕನ್ನಡ ಸಂಘಗಳನ್ನು ಸ್ಥಾಪಿಸಿಕೊಂಡಿದ್ದಾರೆ. ಅವರೆಲ್ಲ ಕನ್ನಡವನ್ನು ಮುಂಬಯಿ ಮಹಾನಗರದಲ್ಲಿ ಕಟ್ಟಿ, ಬೆಳಸುವ ಕ್ರಿಯೆಯಲ್ಲಿ ತೊಡಗಿದ್ದಾರೆ.

ಮೈಸೂರ್ ಅಸೋಸಿಯೇಷನ್ ನ, ಕಲಾವಿದರು ಬದಲಾಯಿಸಿ

ಕನ್ನಡ ನಾಟಕಗಳನ್ನು ರಚಿಸಿ, ಅವನ್ನು ಸುದೀರ್ಘಕಾಲ ಆಡಿದ ಪರಂಪರೆ, 'ಮೈಸೂರ್ ಅಸೋಸಿಯೇಷನ್' ಗಿದೆ. ಕರ್ನಾಟಕ ನಾಟಕ ಪಿತಾಮಹನೆಂದು ಪ್ರಸಿದ್ಧಿಪಡೆದ, ಟಿ.ಪಿ.ಕೈಲಾಸಂ, ರವರು, ಆಗ, 'ಮುಂಬಯಿನ ಮೈಸೂರ್ ಅಸೊಸಿಯೇಷನ್' ನಲ್ಲಿ ಕೆಲವು ವಾರ ತಂಗಿದ್ದರು. ಸ್ನೇಹಿತರಿಗೆಲ್ಲಾ ಕುಟ್ಟಿಯೆಂದೇ ಪ್ರಖ್ಯಾತರಾಗಿದ್ದ, 'ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ವಿಜೇತ, ' ಶ್ರೀ.ವಿ.ಕೆ.ಮೂರ್ತಿಯವರು, ಪುಟ್ಟಣ್ಣಯ್ಯ, , ಕುಂತಿ ದುಗ್ಗಪ್ಪಯ್ಯ, ಶ್ರೀಮತಿ. ಉಷಾಜೈರಾಂ, ಶ್ರೀ. ಅಚ್ಯುತಸ್ವಾಮಿ, ಶ್ರೀ.ಎಸ್.ಆರ್. ಪ್ರಸನ್ನ, ಡಾ.ಬಿ.ಆರ್.ಮಂಜುನಾಥ್, ಕೆ.ಮಂಜುನಾಥಯ್ಯ, ಗೀತಾ ವಿಶ್ವನಾಥ್, ಮುಂತಾದವರು ಮುಂಚೂಣಿಯಲ್ಲಿದ್ದಾರೆ.

ವಿವಿಧ ಕನ್ನಡ ಸಂಘ-ಸಂಸ್ಥೆಗಳ ಕಲಾವಿದರು ಬದಲಾಯಿಸಿ

ಸಂಗೀತ ಕಲಾಕ್ಷೇತ್ರ, ಕರ್ನಾಟಕ ಸಂಘಗಳು, ತಮ್ಮದೇ ಆದ ರೀತಿಯಲ್ಲಿ ಸದ್ದು ಗದ್ದಲವಿಲ್ಲದೇ ಕನ್ನಡಪರ ಚಟುವಟಿಕೆಗಳನ್ನು ನಿರಂತರವಾಗಿ ನಡೆಸಿಕೊಂಡುಬರುತ್ತಿವೆ. ಮುಂಬಯಿನ ಉಪನಗರ, ಮಹೀಮ್ ನಲ್ಲಿನ, 'ಕರ್ನಾಟಕ ಸಂಘ' ದಲ್ಲಿ ಅನೇಕ ಪ್ರತಿಭಾವಂತ, ಶ್ರೇಷ್ಠ ಕಲಾವಿದರಿದ್ದಾರೆ. ಶೈಲಿನಿ ರಾವ್, ಅಹಲ್ಯ ಬಲ್ಲಾಳ್, ಕುಸುಮ್ ಬಲ್ಲಾಳ್, ಸಾ ದಯಾ, ಮೋಹನ್ ಮಾರ್ನಾಡ್, ಅವಿನಾಶ್ ಕಾಮತ್, ಸುರೇಂದ್ರಕುಮಾರ್ ಮಾರ್ನಾಡ್, ಉಷಾ ಭಟ್, ವೀಣಾ ಬಂಗೇರ,ರಾಜೀವ್ ನಾಯಕ್, ಗೀತಾ ಶಂಕರ್ ಮತ್ತು ಹಿರಿಯ ಕಲಾವಿದರಾದ, ಬಾಲಕೃಷ್ಣ ನಿಡ್ವಣ್ಣಾಯ ಹಾಗೂ ಸತ್ಯಭಾಮಾ ನಿಡ್ವಣ್ಣಾಯ ' ಕಲಾರತ್ನ ದಂಪತಿಗಳು' : ಮುಂಬಯಿನ ಕನ್ನಡ ರಂಗಭೂಮಿಗೆ ಮಾಡುತ್ತಿರುವ ಕಲಾಸೇವೆ ಅನನ್ಯವಾದದ್ದು. ಬಾಲಕೃಷ್ಣರವರು ಇಂದಿಗೂ ಕರ್ನಾಟಕ ಸಂಘದ ಸದಸ್ಯರಾಗಿ ಸಕ್ರಿಯವಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಈಗಲೂ ತಮ್ಮ ಅತ್ಯಮೋಘ ಚಟುವಟಿಕೆಗಳಿಂದ ಎಲ್ಲರ ಗಮನ ಸೆಳೆಯುತ್ತಿರುವ, ಇಂದಿಗೂಕಾಲಕ್ಕೆ ತಕ್ಕಂತೆ ಮಾರ್ಪಾಡಾಗಿ, ರಸಿಕಜನಕ್ಕೆ ಬೇಕಾದ ಮನರಂಜನೆಯನ್ನು ಕೊಡುತ್ತಿರುವ ,ಬಾಲಕೃಷ್ಣ ನಿಡ್ವಣ್ಣಾಯ ಕಲಾವಂತ ದಂಪತಿಗಳು, ಸ್ತುತ್ಯಾರ್ಹರು. ನಿಡ್ವಣ್ಣಾಯರವರು ತಮ್ಮ ೭೦ ನೆಯ ಜಯಂತ್ಯೋತ್ಸವವನ್ನು, ೨೦, ಅಕ್ಟೋಬರ್, ೨೦೦೭ ರಂದು ಕರ್ನಾಟಕ ಸಂಘದ 'ವಿಶ್ವೇಶ್ವರಯ್ಯ ಸಭಾಂಗಣ'ದಲ್ಲಿ ತುಂಬಿದ ರಸಿಕ-ಕಲಾಸಕ್ತರ ಸಮ್ಮುಖದಲ್ಲಿ ನೆರೆವೇರಿಸಿಕೊಂಡರು. ಅವರು ತಮ್ಮ ವೃತ್ತಿಜೀವನದಲ್ಲಿ ೬೦ ಕನ್ನಡ ನಾಟಕಗಳಲ್ಲಿ, ತಮ್ಮ ಅಮೋಘ ಪಾತ್ರಗಳ ಪ್ರದರ್ಶನ ನೀಡಿದ್ದಾರೆ. ಸಮಾರಂಭದಲ್ಲಿ. ಡಾ.ಜಿ.ವಿ.ಕುಲಕರ್ಣಿ, ಡಾ. ಜಿ. ಎನ್. ಉಪಾಧ್ಯ, ಶ್ರೀ. ವಿಶ್ವೇಶ್ವರ ಭಟ್, ಶ್ರೀಮತಿ ರಾವ್, ಶ್ರೀ ಮನೋಹರ ಎಂ. ಕೋರಿ ಮುಂತಾದ ಗಣ್ಯರು ಉಪಸ್ಥಿತರಿದ್ದರು.

'ಯಕ್ಷಗಾನ ಕಲಾವಿದರ ಬಹುದೊಡ್ಡ ಬಳಗ ಬದಲಾಯಿಸಿ

'ಕರ್ನಾಟಕ ಸಂಘ', ಪ್ರತಿತಿಂಗಳೂ 'ಯಕ್ಷಗಾನ ಕಾರ್ಯಕ್ರಮ'ವನ್ನು ಕ್ರಮಬದ್ಧವಾಗಿ ತಪ್ಪದೆ, ನಡೆಸಿಕೊಂಡು ಬರುತ್ತಿದೆ. 'ಸಯಾಂ' ಉಪನಗರದಲ್ಲಿರುವ 'ಗೋಕುಲ ಸಂಸ್ಥೆ' ಯಲ್ಲಿ, ಯಕ್ಷಗಾನ ಕಲಾವಿದರ ಬಗ್ಗೆ ಹೆಚ್ಚಿನ ಮಾಹಿತಿ ದೊರೆಯುತ್ತದೆ. ಅಲ್ಲಿ 'ಆಟ'ಗಳನ್ನೂ ಹಮ್ಮಿಕೊಳ್ಳುತ್ತಾರೆ.

ಉಲ್ಲೇಖಗಳು ಬದಲಾಯಿಸಿ