ಬಾಲಕೃಷ್ಣ ನಿಡ್ವಣ್ಣಾಯ
ಬಾಲಕೃಷ್ಣ ನಿಡ್ವಣ್ಣಾಯ ಸತ್ಯಭಾಮಾ ದಂಪತಿಗಳು | |
---|---|
Born | ಬಾಲಕೃಷ್ಣ ೬, ಆಗಸ್ಟ್, ೧೯೩೭ ರಲ್ಲಿ ನೂಜಜೆ, ದಕ್ಷಿಣ ಕನ್ನಡ |
Alma mater | ಕರ್ನಾಟಕ ಪಾಲಿಟೆಕ್ನಿಕ್,ಮಂಗಳೂರು. |
Occupation | ರಂಗಕರ್ಮಿ |
Known for | ಹಿತ್ತಾಳೆಕಿವಿ, ಯಾರು ಹಿತವರು, ವಸಂತ ಕುಸುಮ |
ಬಾಲಕೃಷ್ಣ ನಿಡ್ವಣ್ಣಾಯರವರ, ಪರಿಚಯ
ಬದಲಾಯಿಸಿಮುಂಬಯಿ ಮಹಾನಗರದ ಕನ್ನಡ ರಸಿಕರಿಗೆ, ಚಿರಪರಿಚಿತರಾದ, ಬಾಲಕೃಷ್ಣ ನಿಡ್ವಣ್ಣಾಯರವರು,[೧] ಕನ್ನಡ ರಂಗಭೂಮಿಯಹಿರಿಯನಟರಾದ ಅವರು,ತಮ್ಮ ನಾಟಕರಚನೆ, ನಿರ್ದೇಶನ, ನಟನೆಗಳಿಂದ ಮುಂಬಯಿನ ಎಲ್ಲಾ ವರ್ಗದ ಜನರ ಮನಗಳನ್ನು ರಂಜಿಸಿದ್ದಾರೆ. ಯುವ, ಉದಯೋನ್ಮುಖ ಕಲಾಕಾರರನ್ನು ಗುರುತಿಸಿ, ಒಂದು ಹೊಸ ಕಲಾಕಾರರ ಪೀಳಿಗೆಯನ್ನು ನಿರ್ಮಾಣಮಾಡುವ ಹಾದಿಯಲ್ಲಿ ಶ್ರಮಿಸುತ್ತಿದ್ದಾರೆ. ಅವರ ಈ ಕಾರ್ಯದಲ್ಲಿ ಸಮರ್ಥವಾಗಿ ದುಡಿಯುತ್ತಿರುವ ಕಲಾವಿದೆ, ಶ್ರೀಮತಿ ಸತ್ಯಭಾಮಾ ಬಾಲಕೃಷ್ಣ ನಿಡ್ವಣ್ಣಾಯ. ತಮ್ಮ ಕಲೆಗಳಿಗೆ ಸ್ಪಂದಿಸಿ, ಒಬ್ಬರಿಗೊಬ್ಬರು ಪೂರಕವಾಗಿ ಕನ್ನಡ ರಂಗಭೂಮಿಯ ಏಳಿಗೆಗೆ ಸತತವಾಗಿ ೬೦ ವರ್ಷಗಳಿಂದ ದುಡಿಯುತ್ತಿದ್ದಾರೆ. ಬಾಲಕೃಷ್ಣರು ಜನಿಸಿದ್ದು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಸಮೀಪದ ' ನೂಜಜೆ ' ಎಂಬ ಚಿಕ್ಕ ಗ್ರಾಮದಲ್ಲಿ. ೬, ಆಗಸ್ಟ್, ೧೯೩೭ ರಲ್ಲಿ. ತಂದೆ ದಿ. ಸುಬ್ರಾಯ ನಿಡ್ವಣ್ಣಾಯ , ಮತ್ತು ತಾಯಿ, ದಿ. ಕಾವೇರಮ್ಮ. ತಮ್ಮ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣಗಳನ್ನು ಪುತ್ತೂರಿನಲ್ಲೇ ಮುಗಿಸಿದರು. ಮಂಗಳೂರಿಗೆ ಹೋಗಿ, ಕರ್ನಾಟಕ ಪೊಲಿಟೆಕ್ನಿಕ್ ನಲ್ಲಿ ಎಲೆಕ್ಟ್ರಿಕಲ್ ಇಂಜಿನಿಯರಿಂಗ್ ಡಿಪ್ಲೊಮಾ, ಪಡೆದರು. ಅವರು ೧೯೬೦ ರ ಅಂಚಿನಲ್ಲಿ ಮುಂಬಯಿನಗರಕ್ಕೆ ಪಾದಾರ್ಪಣೆಮಾಡಿದರು.[೨]
ಬಾಲ್ಯದಿಂದಲೂ ಸತತವಾಗಿ ನಾಟಕಗಳ ಗೀಳು
ಬದಲಾಯಿಸಿಬಾಲಕೃಷ್ಣ ನಿಡ್ವಣ್ಣಾಯ ರವರಿಗೆ, ಡಾ. ಶಿವರಾಮ ಕಾರಂತರ, ಆದರ್ಶ, ಹಾಗೂ ಕಾರ್ಯಾಚರಣೆಗಳು, ಅತ್ಯಂತ ಗಾಡವಾದ ಪರಿಣಾಮವನ್ನು ಬೀರಿದ್ದವು. ತಮ್ಮ ವಿದ್ಯಾರ್ಥಿ ಜೀವನದಲ್ಲಿದ್ದಾಗಲೇ, ನಾಟಕರಚನೆಯ ಗೀಳನ್ನು ಹಚ್ಚಿಕೊಂಡಿದ್ದರು. ಅದರ ಜೊತೆಗೆ, ನಿರ್ದೇಶನ, ಹಾಗೂ ನಟನಾಕಲೆಯನ್ನೂ ಕರಗತಮಾಡಿಕೊಂಡರು. ೧೯೬೦ ರ ಹೊತ್ತಿಗೆ, ಅವರು ಬೊಂಬಾಯಿಮಹಾನಗರಕ್ಕೆ ಪಾದಾರ್ಪಣೆಮಾಡಿದರು. ಅಲ್ಲಿಯೂ , ರಂಗಭೂಮಿ ಅವರನ್ನು ಅಕರ್ಷಿಸಿತು. ಆಗಲೇ ಹೆಸರುಮಾಡಿದ್ದ, ವೆಂಕಟ್ರಾಯ ತಲೆಗೇರಿ, ಸದಾನಂದ ಸುವರ್ಣ, ಎಚ್.ಮೋಹನ್, ಇಮ್ತಿಯಾಜ್ ಹುಸೇನ್, ಮತ್ತು ಕರ್ನಾಟಕ ನಾಟಕ ಅಕ್ಯಾಡಮಿಯಿಂದ ಪುರಸ್ಕೃತರಾದ ಭರತ್ ಕುಮಾರ್ ಪೊಲಿಪು, ಮುಂತಾದ ಸಮರ್ಥ ನಿರ್ದೇಶಕರ ಗರಡಿಯಲ್ಲಿ, ನಾಯಕ-ಪಾತ್ರಮಾಡಿ ಜನಪ್ರಿಯತೆಯನ್ನು ಗಳಿಸಿದರು.
ವಿವಾಹ
ಬದಲಾಯಿಸಿಬೊಂಬಾಯಿನಗರದ ಕನ್ನಡ ರಂಗನಟಿ, ಸತ್ಯಭಾಮಾರವರನ್ನು ೧೯೬೯ ರಲ್ಲಿ ಮದುವೆಯಾದರು.[೩]
ಕೆಲವು ಪ್ರಮುಖ ನಾಟಕಗಳ ಹೆಸರುಗಳು
ಬದಲಾಯಿಸಿಗೃಹಪ್ರವೇಶ, ೨. ಹಿತ್ತಾಳೆಕಿವಿ, ೩. ಯಾರು ಹಿತವರು, ೪. ವಸಂತ ಕುಸುಮ, ೫. ಬಾಳಬಂಧನ, ೬. ಹೃದಯಾಘಾತ, ೭. ಹುಚ್ಚರ್ಯಾರು, ೮. ನಾವ್ಕಂಡ ನಮ್ಗಂಡ, ೯. ವೃದ್ಧಾಶ್ರಮ, ೧೦. ಕನಸೋ ನನಸೋ, ೧೧, ರಂಗಮಂಚ, ೧೨. ತಿರುಗುಬಾಣ, ೧೩. ಆಪ್ತಮಿತ್ರ, ೧೪. ಮೃಷಾನ್ನ, ೧೫. ಋಣಾನುಬಂಧ, ೧೬. ಯಾರಿಗೆ ಯಾರುಂಟು, ೧೭. ಸತ್ಯಮೆವಜಯತೆ, ೧೮. ದುರಾಸೆ ದುಃಸ್ವಪ್ನ , ೧೯. ಕೈಗೆ ಬಂದ ತುತ್ತು ಮುಂತಾದ ಹಲವು ನಾಟಕಗಳನ್ನು ರಚಿಸಿದ ಖ್ಯಾತಿ ಇವರದು. ಇವರ ನಾಟಕಗಳು ಸಾರುವ ಸಂದೇಶ, ಬಳಸುವ ಪ್ರಭಾವೀ ಭಾಷೆ, ನಾಟಕದ ಕೊನೆಯವರೆಗೂ ಕಾಯ್ದಿಟ್ಟುಕೊಳ್ಳುವ ಕುತೂಹಲವನ್ನು ಜೀವಂತವಾಗಿಡುವ ವಿಧಾನಗಳು, ರಸಿಕರಿಗೆ ಮುದನೀಡುತ್ತಿವೆ. ೫ ನೇ ತರಗತಿಗೆ ಆಯ್ಕೆಯಾಗಿರುವ ಮಹಾರಾಷ್ಟ್ರ ರಾಜ್ಯ-ಸರ್ಕಾರದ ಕನ್ನಡ ಪಠ್ಯಪುಸ್ತಕದಲ್ಲಿ, ಪ್ರಕೃತಿ ಔಂದರ್ಯ, ವೆಂಬ ಮಕ್ಕಳನಾಟಕದ ಭಾಗವಿದೆ.
ಚಂದನ ಟಿ.ವಿ, ಯಲ್ಲಿ ಪ್ರಸ್ತುತಪಡಿಸಿದ ನಾಟಕ, " ಹುಚ್ಚ ರ್ಯಾರು ? ," ಜನಮನ್ನಣೆ ಗಳಿಸಿತ್ತು. ೧೯೬೦ ರಲ್ಲಿ, " ವಿಶಾಲ ಮೈಸೂರು ಸಂಗೀತ ನಾಟಕ ಅಕ್ಯಾಡಮಿ, "ಯವರು ಏರ್ಪಡಿಸಿದ್ದ ೪೮ ನಾಟಕ ಸ್ಪರ್ಧೆಯಲ್ಲಿ, ಪರ್ವತವಾಣಿಯವರು ಬರೆದ, "ಉಂಡಾಡಿಗುಂಡ " ನಾಟಕ ಕ್ಕೆ, ಪ್ರಥಮ ಬಹುಮಾನ ದೊರೆಯಿತು. ಈ ನಾಟಕದ ಅಭಿನಯಕ್ಕಾಗಿ ಬಾಲಕೃಷ್ಣರಿಗೆ ’ಅತ್ಯುತ್ತಮ ನಟ- ಪ್ರಥಮ’ ಬಹುಮಾನ ದೊರಕಿತ್ತು.
ಸತ್ಯಭಾಮಾರವರ ಸ್ಥೂಲ ಪರಿಚಯ
ಬದಲಾಯಿಸಿಸಂಗೀತ, ನಾಟಕಗಳಿಂದ ಅಗಲೇ ಹೆಸರುಮಾಡಿದ್ದ ಸತ್ಯಭಾಮಾರವರು, ೧೯೬೭ ರಲ್ಲಿ ನಿಡ್ವಣ್ಣಾರವರು ಬರೆದ ನಾಟಕ, ಬಾಳಬಂಧನ ದಲ್ಲಿ ಪ್ರಮುಖ ಸ್ತ್ರೀಪಾತ್ರಧಾರಿಯಾಗಿ ನಟಿಸಿದ್ದರು. ಅವರು ನಟಿಸಿದ್ದ ನಾಟಕಗಳು : ಊರೆಲ್ಲಾ ಹೆಳ್ಬೇಡಿ, ಅತ್ತೆ ಬೇಕಾಗಿದ್ದಾರೆ, ಬಾಡಿಗೆಗೆ, ರಾವಿನದಿ ದಂಡೆಯಲ್ಲಿ, ತುಳು, ಹಿಂದಿ ಭಾಷೆಯ ನಾಟಕಗಳಲ್ಲೂ ಪಾತ್ರನಿರ್ವಹಣೆ. ಶ್ರೀವಾಸ್ತವರವರ ನಿರ್ದೇಶನದ ಅಡಿಯಲ್ಲಿ ಹಾಮ್ಲೆಟ್, ನಾಟಕ ಪ್ರದರ್ಶನ.
ಹಿಂದಿ ಭಾಷೆಯ ಧಾರಾವಾಹಿಗಳು
ಬದಲಾಯಿಸಿ- ಹಸ್ರತೆ,
- ಕಿಸ್ಸಾ ಶಾಂತಿ ಕಾ,
- ಹಸ್ತರೇಖಾ,
- ಏಕ್ ಕಹಾನಿ ಧಾರವಾಹಿಯಲ್ಲಿ ’ನಾ ಕಿನ್ನಿನಾ’ ಮುಂತಾದವುಗಳು.
- ಟೆಲಿಫಿಲ್ಮ್- ದಿಲ್ ಬಡಾ, ಯಾ ದೌಲತ್.
- ಪ್ರತಿಫಲ್,
ಸತ್ಯಭಾಮಾರವರ ನಿಧನ
ಬದಲಾಯಿಸಿಸತ್ಯಭಾಮಾ ನಿಡ್ವಣ್ಣಾಯರವರು, ೧೯, ಶುಕ್ರವಾರ, ನವೆಂಬರ್, ೨೦೨೧ ರಂದು ಮುಂಬಯಿನ ಆಸ್ಪತ್ರೆಯೊಂದರಲ್ಲಿ ನಿಧನರಾದರು.
ಉಲ್ಲೇಖಗಳು
ಬದಲಾಯಿಸಿ- ↑ "asambhava balakrishna nidwannaya 'ಅಸಂಭವ ಕೃತಿಯ ರಚನಕಾರರು,ಬಾಲಕೃಷ್ಣ ನಿಡ್ವಣ್ಣಾಯ'". Archived from the original on 2016-03-04. Retrieved 2014-07-28.
- ↑ ಸೊಬಗು,ಬಾಲಕೃಷ್ಣ ನಿಡ್ವಣ್ಣಾಯ, ಹಾಗೂ ಸತ್ಯಭಾಮಾ ನಿಡ್ವಣ್ಣಾಯ
- ↑ "'ಈ ದಂಪತಿಗಳು-ಮುಂಬೈಕನ್ನಡರಂಗಭೂಮಿಯ ಅಪೂರ್ವ ಕಲಾರತ್ನಗಳು' ! ಸಂಪದ,October 17, 2007". Archived from the original on ಅಕ್ಟೋಬರ್ 11, 2008. Retrieved ಜುಲೈ 28, 2014.