ಮುಂಬಯಿನ ರಂಗನಟ, ನಿರ್ದೇಶಕ, ರಂಗಸಂಯೋಜಕ, ಟಿವಿ ಸೀರಿಯಲ್, ಸಾಕ್ಷ್ಯಚಿತ್ರ ಮತ್ತು ಚಲನಚಿತ್ರಗಳ ನಿರ್ಮಾಪಕ, ನಾಟಕ, ಕಥೆ, ಕಾದಂಬರಿಗಳ ಲೇಖಕ, ಪ್ರಕಾಶಕ, ಕೆಲವಾರು ಪ್ರತಿಷ್ಠಾನಗಳಿಗೆ ಪ್ರಾಯೋಜಕ, ನಾಟಕರಂಗಕಲೆಯ ತರಬೇತಿಗಾರನಾಗಿ ಸೇವೆಸಲ್ಲಿಸುತ್ತಿರುವ ದಣಿವರಿಯದ ೮೫ರ ಹರೆಯದ ಸದಾನಂದ ಸುವರ್ಣರು, ಸದಾ ಹಸನ್ಮುಖಿ ಮತ್ತು ಜೀವನೋಲ್ಲಾಸದ ಕಣಜವೆಂದೇ ಖ್ಯಾತರಾಗಿದ್ದಾರೆ.

'ಸದಾನಂದ ಸುವರ್ಣ'
'ಸದಾನಂದ ಸುವರ್ಣ'
ಜನನ
ಸದಾನಂದ. ದಕ್ಷಿಣ ಕನ್ನಡಜಿಲ್ಲೆಯ ಮುಲ್ಕಿಯಲ್ಲಿ, ೨೪-೧೨-೧೯೩೧ ರಲ್ಲಿ ಜನಿಸಿದರು. ತಂದೆ,'ರುಕ್ಕ ಕೋಟ್ಯಾನ್, ಬ್ಯಾಂಕ್ ಆಫ್ ಬರೋಡದಲ್ಲಿ ನೌಕರರು. ತಾಯಿ 'ಪೂವಮ್ಮ'.
ರಾಷ್ಟ್ರೀಯತೆಭಾರತೀಯ
ವಿದ್ಯಾರ್ಹತೆ'ಮುಲ್ಕಿಯ ಬೋರ್ಡ್ ಹೈಸ್ಕೂಲ್' ನಲ್ಲಿ ಐದನೆಯ ಇಯತ್ತೆವರೆಗೆ ಓದಿದರು. ಮುಂದೆ ಮುಂಬಯಿನಲ್ಲಿ 'ಥಿಯೇಟರ್ ಟ್ರೇನಿಂಗ್ ಡಿಪ್ಲೊಮ ಕೋರ್ಸ್' ಗೆ ಸೇರಿ ಅಲ್ಲಿ ರಂಗ ತಜ್ಞರ ಜೊತೆಯಲ್ಲಿ ವಿಚಾರ-ವಿನಿಮಯ, ವಿಮರ್ಶೆ,ನಡೆಸಿ, ಆಳವಾದ ಜ್ಞಾನವನ್ನು ಸಂಪಾದಿಸಿದರು.
ಉದ್ಯೋಗ'ಮುಂಬಯಿನ ರಂಗನಟ, ನಿರ್ದೇಶಕ, ರಂಗಸಂಯೋಜಕ, ಟಿ.ವಿ,ಸೀರಿಯಲ್, ಸಾಕ್ಷ್ಯಚಿತ್ರ ಮತ್ತು ಚಲನಚಿತ್ರಗಳ ನಿರ್ಮಾಪಕ, ನಾಟಕ, ಕಥೆ, ಕಾದಂಬರಿಗಳ ಲೇಖಕ, ಪ್ರಕಾಶಕ, ಕೆಲವಾರು ಪ್ರತಿಷ್ಠಾನಗಳಿಗೆ ಪ್ರಾಯೋಜಕ. ನಿರ್ದೇಶಿಸಿದ ನಾಟಕಗಳು : * ಈಡಿಪಸ್, * ಕದಡಿದ ನೀರು,* ಪ್ರಜಾಪ್ರಭುತ್ವ-ಲೊಳಲೊಟ್ಟೆ, * ಧರ್ಮ ಚಕ್ತ್ರ, * ಸತ್ಯಂ ವದ-ಧರ್ಮಂ ಚರ, * ಯಾರು ನನ್ನವರು ?
ಇದಕ್ಕೆ ಖ್ಯಾತರುಚಲನಚಿತ್ರ, 'ಘಟಶ್ರಾದ್ಧ’ ತಯಾರಿಸಿದರು. ಅದು, ೧೮ ಪ್ರಶಸ್ತಿಗಳನ್ನುಗಳಿಸಿದ, ಭಾರತದಲ್ಲಿ ಕಳೆದ ಶನಮಾನದಲ್ಲಿ ತಯಾರಾದ ಉತ್ಕೃಷ್ತ ೧೦೦ ಚಲನಚಿತ್ರಗಳಲ್ಲಿ ಒಂದಾದ ಹೆಗ್ಗಳಿಕೆಯನ್ನು ಪಡೆಯಿತು. ಅನೇಕ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆಯಿತು. ಇದಲ್ಲದೆ ಅವರು ತಯಾರಿಸಿದ ಬೇರೆ ಚಿತ್ರಗಳು : * ಕುಬಿ, * ಇಯಾಲ. ತುಳು ಭಾಷೆಯಲ್ಲಿ ಬರೆದ ನಾಟಕ, ’ಗುಡ್ಡದ ಭೂತ', 'ಕೋರ್ಟ್ ಮಾರ್ಷಲ್,' ನಾಟಕ. ಪ್ರಶಸ್ತಿಗಳು : * ೨೦೧೦ ರಲ್ಲಿ,'ಸಾಧನ ಶಿಖರ ಪ್ರಶಸ್ತಿ, * ೨೦೧೧ ರಲ್ಲಿ, ಆತ್ಮ ಶಕ್ತಿ ಪತ್ರಿಕೆಯ ಪ್ರಶಸ್ತಿ

ಜನನ ಮತ್ತು ಬಾಲ್ಯದ ದಿನಗಳು ಸಂಪಾದಿಸಿ

ದಕ್ಷಿಣ ಕನ್ನಡಜಿಲ್ಲೆಯ ಮುಲ್ಕಿಯಲ್ಲಿ, ೨೪-೧೨-೧೯೩೧ ರಲ್ಲಿ ಜನಿಸಿದರು. ತಾಯಿ 'ಪೂವಮ್ಮ', ತಂದೆ,'ರುಕ್ಕ ಕೋಟ್ಯಾನ್'. ಅವರ ಪ್ರಾಥಮಿಕಶಿಕ್ಷಣ ತಾಯಿಯ ತವರಿನಲ್ಲಿ ಅಜ್ಜಿಯ ಆಶ್ರಯದಲ್ಲಿ 'ಮುಲ್ಕಿಯ ಬೋರ್ಡ್ ಹೈಸ್ಕೂಲ್' ನಲ್ಲಿ ಐದನೆಯ ಇಯತ್ತೆವರೆಗೆ ನಡೆಯಿತು. ತಮ್ಮ ಚಿಕ್ಕವಯಸ್ಸಿನಲ್ಲೇ ಬೊಂಬಾಯಿಗೆ ಆಗಮಿಸಿದರು. ತಂದೆ 'ಬ್ಯಾಂಕ್ ಆಫ್ ಬರೋಡ'ದಲ್ಲಿ ಕೆಲಸಮಾಡುತ್ತಿದ್ದರು. ಮೊಗವೀರ ರಾತ್ರಿಶಾಲೆಯಲ್ಲಿ ತಮ್ಮ ವ್ಯಾಸಂಗವನ್ನು ಮುಂದುವರೆಸಿದರು. ನಾಟಕ ಪ್ರಿಯ ಸುವರ್ಣರು, ’ಕುರುಡನ ಸಂಗೀತ’,ವೆಂಬ ನಾಟಕವನ್ನು ದಿಗ್ದರ್ಶಿಸಿದರು. ಸಾಹಿತ್ಯಾಭಿಲಾಶಿಯಾಗಿದ್ದ ಅವರಿಗೆ ಗುಜರಾತಿ, ಮರಾಠಿ, ಇಂಗ್ಲೀಷ್ ರಂಗಭೂಮಿಗಳನ್ನು ಅರಿಯುವ ತೀವ್ರ ಆಶೆಯಾಯಿತು. ಪ್ರಯೋಗಗಳನ್ನು ಅತ್ಯಂತ ಗಮನವಿಟ್ಟು ಅವುಗಳಲ್ಲಿನ ಕಾಲಾವಿಶೇಷತೆಗಳ ರಸಗ್ರಹಣ ಮಾಡಿದರು. ಅವುಗಳಲ್ಲಿನ ಹೊಸತನಗಳನ್ನು ಕನ್ನಡ ರಂಗಭೂಮಿಗೆ ಅಳವಡಿಸುವ ಪ್ರಯತ್ನ ನಡೆಸಿದರು.

ಉದಯ ಕಲಾ ನಿಕೇತನ ಸಂಪಾದಿಸಿ

ಇದೊಂದು ಹವ್ಯಾಸಿ ಕಲಾ ರಂಗ-ಪ್ರಾಕಾರ. ೭೦ ರದಶಕದಲ್ಲಿ ಹಲವಾರು ಉದಯನ್ಮುಖಿ ರಂಗಕರ್ಮಿಗಳಿಗೆ ಕಲಾಕಾರರಿಗೆ ಪ್ರೋತ್ಸಾಹನೀಡಿ ಅವರು ತಮ್ಮ ಪ್ರಯೋಗಗಳನ್ನು ಯಶಸ್ವಿಯಾಗಿ ನಡೆಸಲು ಸಹಾಯಮಾಡಿದರು. ಈ ಸಂಸ್ಥೆಯ ವತಿಯಿಂದ ತಾವೇ ಬರೆದ ಕೆಲವಾರು ನಾಟಕಗಳನ್ನು ಪ್ರದರ್ಶಿಸಿ ಅದರಲ್ಲಿ ಯಶಸ್ಸನ್ನು ಹಾಸಲುಮಾಡಿದರು. ಕಾಲೇಜಿನ ವಾರ್ಷಿಕೋತ್ಸವಗಳಿಗಾಗಿಯೇ ವಿಶೇಷವಾಗಿ ರಚಿಸಿದ ನಾಟಕಗಳನ್ನು ತಾವೇ ನಿರ್ದೇಶಿಸಿ, ಅಭಿನಯಿಸಿ ಯಶಸ್ಸನ್ನು ಕಂಡರು. ಥಿಯೇಟರ್ ಟ್ರೇನಿಂಗ್ ಡಿಪ್ಲೊಮ ಕೋರ್ಸ್ ಗೆ ಸೇರಿ ಅಲ್ಲಿ ರಂಗ ತಜ್ಞರ ಜೊತೆಯಲ್ಲಿ ವಿಚಾರ-ವಿನಿಮಯ, ವಿಮರ್ಶೆ, ರಸಆಸ್ವಾನ, ಜಿಜ್ಞಾಸೆ ನಡೆಸಿ, ಆಳವಾದ ಜ್ಞಾನವನ್ನು ಸಂಪಾದಿಸಿದರು. ಸಾಮೂಹಿಕ ಮಾಧ್ಯಮಗಳಲ್ಲಿ ಭಾಗವಹಿಸಿ, ಮುಂಬಯಿನ ಐ. ಎ. ಸೊಸೈಟಿಯ ಫೋಟೋಗ್ರಫಿಯ ವಿಶೇಷ ತರಪೇತಿ ಪಡೆದು, ಅನೇಕ ನಾಟಕಗಳನ್ನು ದಿಗ್ದರ್ಶಿಸಿದ್ದಾರೆ. ಪ್ರಮುಖ ನಾಟಕಗಳಲ್ಲಿ :

ಪತ್ರಿಕೆಗಳಲ್ಲಿ ಸಿಕ್ಕ ಪ್ರಚಾರ ಸಂಪಾದಿಸಿ

ಈ ನಾಟಕಗಳ ಸಮಯದಲ್ಲಿ ಸಿಕ್ಕ ಪ್ರತಿಫಲ ಅವರಿಗೆ ಸ್ಪೂರ್ಥಿಯನ್ನು ನೀಡಿತು. ಹೊಸ ರಂಗ ಪ್ರಯೋಗಗಳು, ಆದಿನದ ಯುವಪ್ರತಿಭೆಗಳನ್ನು ರಂಗಭೂಮಿಯತ್ತ ಸೆಳೆಯಲು ಅವಕಾಶವಾಯಿತು. ತಮ್ಮ ಸ್ವಂತ ಕೃತಿಗಳ ಜೊತೆಗೆ, ಉದಯೋನ್ಮುಖ ಲೇಖಕ-ಲೇಖಕಿಯರ ಕೃತಿಗಳನ್ನು ಬೆಳಕಿಗೆ ತರುವ ನಿಟ್ಟಿನಲ್ಲಿ ಶ್ರಮವಹಿಸಿದರು. ಮೊಗವೀರ ಪತ್ರಿಕೆಯಲ್ಲಿ ಬರೆದ ’ಮನೆ ಬೆಳಕು ಕಾದಂಬರಿ’ ಧಾರಾವಾಹಿಯಾಗಿ ಪ್ರಕಟಗೊಂಡಿತು. ಸದಾನಂದ ಸುವರ್ಣರ ಜೀವನದಲ್ಲಿ ವಿಶೇಷವಾಗಿ ಜನಪ್ರಿಯತೆಯನ್ನು ತಂದುಕೊಟ್ಟ ಘಟನೆಯಾಗಿತ್ತು. ’ಘಟಶ್ರಾದ್ಧ’ ಚಲನಚಿತ್ರ, ಭಾರತದಲ್ಲಿ ಕಳೆದ ಶನಮಾನದಲ್ಲಿ ತಯಾರಾದ ಉತ್ಕೃಷ್ತ ೧೦೦ ಚಲನಚಿತ್ರಗಳಲ್ಲಿ ಒಂದಾದ ಹೆಗ್ಗಳಿಕೆಯನ್ನು ಪಡೆಯಿತು. ೧೮ ಪ್ರಶಸ್ತಿಗಳನ್ನು ಹೆಗಲಿಗೇರಿಸಿದ ಈ ಚಿತ್ರ, ಅನೇಕ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆಯಿತು. ಇದಲ್ಲದೆ ಅವರು ತಯಾರಿಸಿದ ಬೇರೆ ಚಿತ್ರಗಳು :

ತುಳು ಭಾಷೆಯಲ್ಲಿ ಬರೆದ ನಾಟಕ, ’ಗುಡ್ಡದ ಭೂತ,’ ಅವರ ಸೃಜನ ಶೀಲ ಸಾಹಿತ್ಯಕ್ಕೆ ಉದಾಹರಣೆಯಾಗಿದೆ. ಯಶಸ್ಸಿನ ಶಿಖರದ ಮೇಲಿದ್ದ ಈ ಪ್ರಯೋಗಕ್ಕೆ ಮತ್ತೊಂದು ಗರಿಮೂಡಿದ್ದು ಅದನ್ನು ಧಾರಾವಾಹಿಯಾಗಿ ದೂರದರ್ಶನದಲ್ಲಿ ಪ್ರದರ್ಶಿಸಿದಮೇಲೆ.

 
ಸುವರ್ಣ ರಂಗ ಸಮ್ಮಾನ

ಸದಾನಂದ ಸುವರ್ಣ ಪ್ರತಿಷ್ಠಾನದ ಸ್ಥಾಪನೆ ಸಂಪಾದಿಸಿ

ತಮ್ಮ ಯಶಸ್ಸನ್ನು ಮುಂದುವರೆಸುತ್ತಾ ಸ್ಥಾಪಿಸಿದರು. ಪ್ರತಿವರ್ಷವೂ ಕಾರಂತರ ಜೀವನದ ಮೇಲೆ ಬೆಳಕುಚೆಲ್ಲುವ ಕೃತಿಗಳಿಗೆ, ಮತ್ತು ಹಲವಾರು ವಿಶಯಗಳ ಬಗ್ಗೆ ವಿದ್ವಾಂಸರನ್ನು ಆಹ್ವಾನಿಸಿ, ಉಪನ್ಯಾಸಗಳನ್ನು ಏರ್ಪಡಿಸುವ ಸಾಹಿತ್ಯ-ಸಾಂಸ್ಕೃತಿಕ ಕಾರ್ಯಕ್ರಮಗಳು ಎಲ್ಲರ ಮನ್ನಣೆಗೆ ಪಾತ್ರವಾದವು. ’ಕಾರಂತ ದರ್ಶನ[೧] Archived 2009-12-21 ವೇಬ್ಯಾಕ್ ಮೆಷಿನ್ ನಲ್ಲಿ. ವೆಂಬ ಸುವರ್ಣರು ಸಾಹಿತ್ಯ ಜೀವನವನ್ನು ಕುರಿತು ಬರೆದು ನಿರ್ಮಿಸಿದ ಸಾಕ್ಷ್ಯಚಿತ್ರವು ’ಈ ಟಿವಿ’ ಕನ್ನಡದಲ್ಲಿ ಯಶಸ್ವಿಯಾಯಿತು. [೧]

ರಂಗಸ್ಥಳದ ವಿಶಿಷ್ಠತೆ ಸಂಪಾದಿಸಿ

'ರಂಗಸ್ಥಳ'-ಉದಯೋನ್ಮುಖ ಕಲಾವಿದರ ಮೊದಲ-ಮೆಟ್ಟಿಲೆಂದು ಹೆಸರಾಗಿತ್ತು. ಹೊಸ ಕಲಾವಿದರಿಗೆ, ಕಲಾಪ್ರೌಢಿಮೆಯನ್ನುಗಳಿಸಲು ಹೇಳಿಮಾಡಿಸಿ ನಿರ್ಮಿಸಿದ ವೇದಿಕೆಯಾಗಿದೆ. ’ಗೋರೆಗಾಂ ಕರ್ನಾಟಕ ಸಂಘ’ ದವರುಇದನ್ನು ಬಹಳಕಾಲ ನಡೆಸಿಕೊಂಡು ಬಂದರು. ಬೇರೆ ಕನ್ನಡ ಸಂಘಗಳೂ ತಮ್ಮ ವೇದಿಕೆಯಮೇಲೆ ಸದಾನಂದ ಸುವರ್ಣರ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿವೆ.

'ಕೋರ್ಟ್ ಮಾರ್ಷಲ್,' ನಾಟಕ ಸಂಪಾದಿಸಿ

ಸದಾನಂದ ಸುವರ್ಣರು ಮಂಗಳೂರಿನ ರಂಗ-ಕುಶಲಕರ್ಮಿಗಳ ಕೂಟದಿಂದ ತಾವು ಕೆಲವು ನಾಟಕಗಳನ್ನು ಬರೆದು ನಿರ್ದೇಶಿಸಿದರು. ಇದೊಂದು ಉತ್ತಮ ಪ್ರಯೋಗಕ್ಕೆ ಸಾಕ್ಷಿಯಾಗಿದೆ. ೭೭ ರ ಹರೆಯದ ಸುವರ್ಣರು, ಈಗಲೂ ಒಂದು ಉತ್ಸಾಹದ ಕಾರಂಜಿಯಂತೆ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಜೀವನವನ್ನು ಅತೀವವಾಗಿ ಪ್ರೀತಿಸುವ ಸದಾನಂದ ಸುವರ್ಣರು, ಆಸಕ್ತಿ, ಪರಿಶ್ರಮ, ಹಾಗೂ ಆತ್ಮವಿಶ್ವಾಸಗಳು ಗುರಿಮುಟ್ಟಲು ಸಹಾಯಕವಾಗುವುವೆಂದು ನಂಬಿದ್ದಾರೆ.

ಸಾಧನ ಶಿಖರ’ ಪ್ರಶಸ್ತಿ’ ಸಂಪಾದಿಸಿ

ಸದಾನಂದ ಸುವರ್ಣರಿಗೆ ಮುಂಬಯಿನ ಕರ್ನಾಟಕ ಸಂಘವು ೨೮-೦೩-೨೦೧೦ ರಂದು ಅವರ ಕಲೆ, ಸಾಹಿತ್ಯ, ರಂಗಭೂಮಿ, ಪುಸ್ತಕಪ್ರಕಾಶನ, ಮತ್ತು ಚಲನ-ಚಿತ್ರ ರಂಗದಲ್ಲಿ ಮಾಡಿದ ಅನುಪಮ ಸೇವೆಗಳ, ಸಾಧನೆಗಳನ್ನು ಗುರುತಿಸಿ ಗೌರವ ಸಲ್ಲಿಸಿತು. ಇದು ಸದಾನಂದ ಸುವರ್ಣರ, ಕಲಾಜೀವನದ ಉದ್ದಕ್ಕೂ ಸಲ್ಲಿಸಿದ ಸೇವೆಗೆ ಸಂದ 'ಕಿರು ಕಾಣಿಕೆ'ಯಾಗಿದೆ.

ಆತ್ಮ ಶಕ್ತಿ ಪತ್ರಿಕೆಯ ಪ್ರಶಸ್ತಿ ಸಂಪಾದಿಸಿ

ಸನ್ ೨೦೧೧ ರ, 'ವಾರ್ಷಿಕ ಸಮಾರಂಭ'ದಲ್ಲಿ ಈ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.

ತೊಂಬತ್ತರ ಹುಟ್ಟುಹಬ್ಬದ ಆಚರಣೆ ಸಂಪಾದಿಸಿ

  • "ತೊಂಬತ್ತರ ಹುಟ್ಟುಹಬ್ಬದ ಸಂಭ್ರಮದಲ್ಲಿ ಸುವರ್ಣರು"-ಶ್ರೀನಿವಾಸ ಜೋಕಟ್ಟೆ [೨]

ಉಲ್ಲೇಖಗಳು ಸಂಪಾದಿಸಿ

  1. http://www.hindu.com/2009/10/08/stories/2009100857940300.htm Archived 2009-12-21 ವೇಬ್ಯಾಕ್ ಮೆಷಿನ್ ನಲ್ಲಿ.
  2. [೩]
  1. name="daijiworld.com">http://www.daijiworld.com/news/news_disp.asp?n_id=194734[ಶಾಶ್ವತವಾಗಿ ಮಡಿದ ಕೊಂಡಿ]
  2. ನಮ್ಮವರು,ಅನಿವಾಸಿ ಕನ್ನಡಿಗರ ಜಾಗತಿಕ ಇ-ಪತ್ರಿಕೆ, "ತೊಂಬತ್ತರ ಹುಟ್ಟುಹಬ್ಬದ ಸಂಭ್ರಮದಲ್ಲಿ ಸುವರ್ಣರು"-ಶ್ರೀನಿವಾಸ ಜೋಕಟ್ಟೆ.ವಿಶ್ವಧ್ವನಿ, ೩೦,ಡಿಸೆಂಬರ್,೨೦೨೧
  3. ಉಲ್ಲೇಖ ದೋಷ: Invalid <ref> tag; no text was provided for refs named daijiworld.com