ಮೀಸೆ ಮೀನು
ಮೀಸೆ ಮೀನು ಎಂಬುದು ಸೈಲ್ಯೂರಿಫಾರ‍್ಮಿಸ್ ಗಣಕ್ಕೆ ಸೇರಿದ ಕ್ಲಾರಿಯಿಡೆ, ಸೈಲ್ಯೂರಿಡೆ (ಗೊಡ್ಲೆ, ಕೆಂಬಾರಿ, ಬಾಳೆ) ಹೆಟಿರೊಪ್ನೆಸ್ಟಿಡೆ (ಚೇಳು ಮೀನು), ಬಾಗ್ರಿಡೆ (ತೊರವಿ), ಏರಿಯಿಡೆ (ತೇಡೆ), ಕುಟುಂಬಗಳಿಗೆ ಸೇರಿದ ಹಲವಾರು ಜಾತಿಯ ಮೀನುಗಳಿಗೆ ಅನ್ವಯವಾಗುವ ಸಾಮಾನ್ಯ ಹೆಸರು (ಕ್ಯಾಟ್ ಫಿಶ್). ಇವೆಲ್ಲವೂ ಬೇರೆ ಬೇರೆ ಕುಟುಂಬಕ್ಕೆ ಸೇರಿದ ಹಲವಾರು ಜಾತಿಯ ಮೀನುಗಳಾದರೂ ಇವುಗಳ ಮೂತಿಯ ಮೇಲೆ 3-4 ಜೊತೆ ಮೀಸೆಗಳಂಥ ರಚನೆಗಳು (ಬಾರ್ಬೆಲ್ಸ್) ಗಳಿರುವುದರಿಂದ ಎಲ್ಲವಕ್ಕೂ ಮೀಸೆ ಮೀನು ಎಂಬ ಹೆಸರು ಬಂದಿದೆ. ಅಲ್ಲದೆ ಅವುಗಳಿಗೇ ಆದ ಬೇರೆ ಹೆಸರುಗಳೂ ಇವೆ.
ಮೀಸೆ ಮೀನು | |
---|---|
ಬ್ಲ್ಯಾಕ್ ಬುಲ್‍ಹೆಡ್ | |
Scientific classification | |
ಕ್ಷೇತ್ರ: | ಯೂಕ್ಯಾರ್ಯೋಟಾ |
ಸಾಮ್ರಾಜ್ಯ: | ಅನಿಮೇಲಿಯ |
ವಿಭಾಗ: | ಕಾರ್ಡೇಟಾ |
ವರ್ಗ: | ಆ್ಯಕ್ಟಿನೋಟೆರಿಜೀ |
(ಶ್ರೇಣಿಯಿಲ್ಲದ್ದು): | ಆಟೊಫ಼ೈಸಿ |
ಗಣ: | ಸೈಲ್ಯುರೀಫ಼ಾರ್ಮಿಸ್ G. Cuvier, 1817 |
Type species | |
ಸೈಲ್ಯುರಿಸ್ ಗ್ಲ್ಯಾನಿಸ್ Linnaeus, 1758
| |
ಕುಟುಂಬಗಳು[೨] | |
ಅಸ್ತಿತ್ವದಲ್ಲಿರುವ ಕುಟುಂಬಗಳು:
ಅಳಿದುಹೋಗಿರುವ ಕುಟುಂಬ:
|
ಇವುಗಳ ಪೈಕಿ ಏರಿಯಿಡೆ ಕುಟುಂಬಕ್ಕೆ ಸೇರಿದ ಮೀನುಗಳು ಕಡಲ ವಾಸಿಗಳು. ಉಳಿದವು ಒಳನಾಡಿನ ನದಿ, ಕೆರೆ, ಹಳ್ಳಗಳಲ್ಲಿ ವಾಸಿಸುವಂತಹವು. ಭಾರತ, ಪಾಕಿಸ್ತಾನ, ನೇಪಾಳ, ಬಾಂಗ್ಲಾದೇಶ ಮುಂತಾದ ಏಷ್ಯಾ ಖಂಡದ ದೇಶಗಳಲ್ಲಿ ವಿಪುಲವಾಗಿ ದೊರೆಯತ್ತವೆ. ಇವುಗಳಲ್ಲಿ ಬಹುಪಾಲು ಮೀನುಗಳು ಆಹಾರ ಯೋಗ್ಯವಾಗಿದ್ದು ಉತ್ತಮ ಬೇಡಿಕೆ ಇರುವುದರಿಂದ ಮೀನುಗಾರಿಕೆಯಲ್ಲಿ ಪ್ರಮುಖವಾಗಿವೆ. ಉದಾಹರಣೆಗೆ, ಏರಿಯಸ್ ಡುಸ್ಸುಮಿಯರಿ (ಶೇಡೆ), ಕ್ಲಾರಿಯಸ್ ಬಟ್ರಾಕಸ್ (ಮರ‍್ಗೋಡು), ಓಂಪಾಕ್ ಬೈಮ್ಯಾಕ್ಯುಲೇಟಸ್ (ಗೊದ್ಲೆ) , ವಲಾಗೋ ಅಟ್ಟು (ಬಾಳೆ ಮೀನು), ಬಗೇರಿಯಸ್ ಯಾರೆಲ್ಲಿಯೈ (ಕುರುಡಿ ಮೀನು), ಮಿಸ್ಟಸ್ ಸೀಂಗ್ಹಾಲಾ (ಬಿಳಿ ಸುರಗಿ), ಮಿಸ್ಟಸ್ ಓರ್ (ಕಪ್ಪು ಸುರಗಿ) ಮಿಸ್ಟಸ್ ವಿಟ್ಟೇಟಸ್ (ಕೆಳತಿ ಮೀನು, ಜಲ್ಲ, ಗರ‍್ಲು), ಹೆಟಿರೋಪ್ನೆಸ್ಟಿಸ್ ಫಾಸಿಲಿಸ್ (ಚೇಳು ಮೀನು), ಇನ್ನೂ ಮುಂತಾದವು.
ಉಲ್ಲೇಖಗಳು
ಬದಲಾಯಿಸಿ- ↑ ೧.೦ ೧.೧ Wang, Jing; Lu, Bin; Zan, Ruiguang; Chai, Jing; Ma, Wei; Jin, Wei; Duan, Rongyao; Luo, Jing; Murphy, Robert W.; Xiao, Heng; Chen, Ziming (2016). "Phylogenetic Relationships of Five Asian Schilbid Genera Including Clupisoma (Siluriformes: Schilbeidae)". PLOS ONE. 11 (1): e0145675. Bibcode:2016PLoSO..1145675W. doi:10.1371/journal.pone.0145675. PMC 4713424. PMID 26751688.
- ↑ Froese, Rainer, and Daniel Pauly, eds. (2011). "Siluriformes" in FishBase. December 2011 version.
ಹೊರಗಿನ ಕೊಂಡಿಗಳು
ಬದಲಾಯಿಸಿ- All catfish species inventory
- "Giant Baghair caught in Jamuna" Archived 29 November 2014 ವೇಬ್ಯಾಕ್ ಮೆಷಿನ್ ನಲ್ಲಿ. in The Daily Star (Bangladesh), 12 May 2009
- Skelton, Paul H. and Teugels, Guy G. 1992. Ichthyological Bulletin; No. 56: Neotype description for the African catfish Clarias Gariepinus (Burchell, 1822) (Pisces: Siluroidei: Clariidae). J.L.B. Smith Institute of Ichthyology, Rhodes University, Grahamstown, South Africa