ಮಹೀಂದ್ರಾ ಸ್ಕಾರ್ಪಿಯೋ
ಮಹೀಂದ್ರಾ ಸ್ಕಾರ್ಪಿಯೋ ಒಂದು ಎಸ್‌ಯುವಿ (ಸ್ಪೋರ್ಟ್ಸ್ ಯುಟಿಲಿಟಿ ವೆಹಿಕಲ್) ವಾಹನವಾಗಿದೆ. ಇದನ್ನು ಮಹೀಂದ್ರಾ ಗ್ರೂಪ್‌ನ ಪ್ರಮುಖ ಕಂಪನಿಯಾದ ಮಹೀಂದ್ರಾ & ಮಹೀಂದ್ರಾ ಲಿಮಿಟೆಡ್ ತಯಾರಿಸುತ್ತಿದೆ. ಇದು ಕಂಪನಿಯು ಜಾಗತಿಕ ಮಾರುಕಟ್ಟೆಗಾಗಿ ನಿರ್ಮಿಸಿದ ಮೊಟ್ಟಮೊದಲ ಎಸ್‌ಯುವಿ ವಾಹನವಾಗಿದೆ. ವಿಶ್ವಾದ್ಯಂತ ಅಂತಾರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಸ್ಕಾರ್ಪಿಯೋವನ್ನು ಬಹಳ ಯಶಸ್ವಿಯಾಗಿ ಸ್ವೀಕರಿಸಲಾಗಿದೆ. ಜೊತೆಗೆ ಸದ್ಯದಲ್ಲಿಯೇ ಇದನ್ನು ಯುಎಸ್‌ನಲ್ಲಿ ಬಿಡುಗಡೆ ಮಾಡಲಾಗುವುದು.[೩]
Manufacturer | Mahindra and Mahindra Limited |
---|---|
Also called | Mahindra Goa (in Europe) |
Production | 2002–present |
Assembly | Nasik, India[೧] 6th of October City, ಈಜಿಪ್ಟ್[೨] |
Class | Sport utility vehicle |
Body style | 4-door SUV |
Engine | 2.1L Petrol I4 116 hp 2.6L Turbodiesel I4 115 hp 2.2L M-Hawk Turbodiesel I4 120 hp |
Transmission | 5 speed man./6 speed Auto / optional 4-wheel drive |
Wheelbase | 105.5 in (2,680 mm) |
Length | 176.9 in (4,493 mm) |
Width | 71.5 in (1,816 mm) |
Height | 77.8 in (1,976 mm) |
Curb weight | 5,534 lb (2,510 kg) (2WD) 5,754 lb (2,610 kg) (4WD) |
Related | Mahindra Scorpio Getaway |
ಎಂ&ಎಂ ಕಂಪನಿಯೊಳಗೇ ಇರುವ ಸಮಗ್ರ ವಿನ್ಯಾಸ ಮತ್ತು ತಯಾರಿಕಾ (ಐಡಿಎಎಂ) ತಂಡದಿಂದ ಸ್ಕಾರ್ಪಿಯೋದ ಪರಿಕಲ್ಪನೆ ಮಾಡಿ, ವಿನ್ಯಾಸಗೊಳಿಸಲಾಗಿದೆ. ಈ ಕಾರು ಮೂರು ಪ್ರತಿಷ್ಠಿತ ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿದೆ. ಅವೆಂದರೆ-ಬ್ಯುಸಿನೆಸ್ ಸ್ಟಾಂಡರ್ಡ್ ಮೋಟರಿಂಗ್ ನೀಡುವ "ಕಾರ್ ಆಫ್ ದಿ ಇಯರ್", ಬಿಬಿಸಿ ವರ್ಲ್ಡ್ ವೀಲ್ಸ್ ಕೊಡುವ "ಬೆಸ್ಟ್ ಎಸ್‌ಯುವಿ ಆಫ್ ದಿ ಈಯರ್" ಹಾಗೂ ಮತ್ತೊಮ್ಮೆ ಬಿಬಿಸಿ ವರ್ಲ್ಡ್ ವೀಲ್ಸ್/2}ನಿಂದ "ಬೆಸ್ಟ್ ಕಾರ್ ಆಫ್ ದಿ ಇಯರ್" ಪ್ರಶಸ್ತಿ.[೪]
ಅಭಿವೃದ್ಧಿ
ಬದಲಾಯಿಸಿತೊಂಬತ್ತರ ಮಧ್ಯ ಭಾಗದಲ್ಲಿ, ಮಹೀಂದ್ರಾ & ಮಹೀಂದ್ರಾ ಆಟೋಮೊಬೈಲ್ ಅಸೆಂಬ್ಲಿ ಕಂಪನಿಯಾಗಿತ್ತು. ಕಂಪನಿಯು ವಿಲ್ಲಿಸ್ ಜೀಪ್‌ಗಳನ್ನು ಮತ್ತು ಅದರ ಚಿಕ್ಕಪುಟ್ಟ ಪರಿಷ್ಕೃತ ಆವೃತ್ತಿಯ ವಾಹನಗಳನ್ನು ತಯಾರಿಸುತ್ತಿತ್ತು (ಪರಿಷ್ಕರಣೆಗಳನ್ನು ಭಾರತದಲ್ಲಿ ಮಾಡಲಾಗುತ್ತಿತ್ತು). 1996ರಲ್ಲಿ ಕಂಪನಿಯು, ಜಾಗತಿಕವಾಗಿ ಸ್ಪರ್ಧಿಸಬಲ್ಲ ಒಂದು ಹೊಸ ಉತ್ಪನ್ನದೊಂದಿಗೆ ಎಸ್‌ಯುವಿ ವಲಯವನ್ನು ಪ್ರವೇಶಿಸಲು ಯೋಜನೆ ಮಾಡಿತು. ಎಂ & ಎಂಗೆ ಈ ಹೊಸ ಉತ್ಪನ್ನವನ್ನು ಹೇಗೆ ಮಾಡುವುದೆಂಬ ತಾಂತ್ರಿಕ ವಿಚಾರಗಳು ಗೊತ್ತಿರಲಿಲ್ಲ. ಹೀಗಾಗಿ ಅವರು ಭಾರತೀಯ ಆಟೋ ಕಂಪನಿಗಳಲ್ಲಿ ಒಂದು ಹೊಸ ಪರಿಕಲ್ಪನೆಯನ್ನು ರೂಪಿಸಿದರು. ಪಾಶ್ಚಿಮಾತ್ಯ ದೇಶಗಳ ಆಟೋ ಉದ್ಯಮದಲ್ಲಿ ಕೆಲಸ ಮಾಡಿದ್ದ ಡಾ. ಪವನ್ ಗೋಯೆಂಕಾ ಮತ್ತು ಅಲಾನ್ ಡ್ಯುರಾಂಟ್ ಅವರಂತಹ ಹೊಸ ಅಧಿಕಾರಿಗಳನ್ನು ತನ್ನಲ್ಲಿಗೆ ಸೆಳೆದುಕೊಂಡ ಕಂಪನಿಯು, ಆಟೋತಯಾರಕರು ತಮ್ಮ ಸ್ವಂತ ವಾಹನಗಳನ್ನು ತಾವೇ ವಿನ್ಯಾಸಗೊಳಿಸಿ, ಇಂಜಿನಿಯರಿಂಗ್ ಮಾಡಿ, ಪರೀಕ್ಷಿಸಬೇಕೆಂಬ (ಈ ಪ್ರಕ್ರಿಯೆಯಲ್ಲಿ ಲಕ್ಷಾಂತರ ಡಾಲರ್ ಹಣವನ್ನು ವ್ಯಯಿಸಿ) ನಿಯಮವನ್ನು ಮುರಿದರು. ಹೊಸ ಮಹೀಂದ್ರಾ ಸ್ಕಾರ್ಪಿಯೋ ಎಸ್‌ಯುವಿ ತನ್ನೆಲ್ಲ ಪ್ರಮುಖ ವ್ಯವಸ್ಥೆಗಳನ್ನು ನೇರವಾಗಿ ಪೂರೈಕೆದಾರರಿಂದ ವಿನ್ಯಾಸ ಮಾಡಿಸಿಕೊಂಡಿತ್ತು. ಕೇವಲ ವಿನ್ಯಾಸ, ಕಾರ್ಯಕ್ಷಮತೆ ನಿರ್ದಿಷ್ಟತೆಗಳು ಮತ್ತು ಪ್ರೋಗ್ರಾಮ್ ವೆಚ್ಚ ಮಾತ್ರ ಮಹೀಂದ್ರಾದ ಇನ್‌ಪುಟ್ ಆಗಿತ್ತು. ವಾಹನವ್ಯವಸ್ಥೆಯ ವಿನ್ಯಾಸ ಮತ್ತು ಎಂಜಿನಿಯರಿಂಗ್ ಅಂಶವನ್ನು ಪೂರೈಕೆದಾರರು ಮಾಡಿದರು, ಜೊತೆಗೆ ಪರೀಕ್ಷಣೆ, ಊರ್ಜಿತಗೊಳಿಸುವುದು ಮತ್ತು ವಸ್ತುಗಳ ಆಯ್ಕೆಯೂ ಅವರದೇ ಆಗಿತ್ತು. ಸಂಪನ್ಮೂಲ ಮತ್ತು ಇಂಜಿನಿಯರಿಂಗ್ ಸ್ಥಳಗಳನ್ನು ಕೂಡ ಪೂರೈಕೆದಾರರೇ ಆಯ್ಕೆ ಮಾಡಿದರು. ಬಿಡಿಭಾಗಗಳನ್ನು ನಂತರ ಮಹೀಂದ್ರಾ ಬ್ಯಾಡ್ಜ್‌ನಲ್ಲಿರುವ ಮಹೀಂದ್ರಾ ಘಟಕದಲ್ಲಿ ಜೋಡಿಸಲಾಯಿತು (ಭಾರತದಲ್ಲಿ ಎಂಯುವಿ ವಲಯದಲ್ಲಿ ಮಹೀಂದ್ರಾ ಒಂದು ಪ್ರಸಿದ್ಧ ಬ್ರಾಂಡ್ ಆಗಿದೆ). ಈ ವಿಧಾನವನ್ನು ಬಳಸಿಕೊಂಡು ಕಂಪನಿಯು, ವಸ್ತುಶಃ ಶೇ. 100ರಷ್ಟು ಪೂರೈಕೆದಾರರ ತೊಡಗಿಸಿಕೊಳ್ಳುವಿಕೆಯೊಂದಿಗೆ ಕಚ್ಚಾ ವಸ್ತುಗಳಿಂದ ಒಂದು ಹೊಸ ವಾಹನವನ್ನು ನಿರ್ಮಿಸಲು ಸಮರ್ಥವಾಯಿತು. ಘಟಕವನ್ನು ಉತ್ತಮಪಡಿಸುವುದೂ ಸೇರಿದಂತೆ, ಪರಿಕಲ್ಪನೆಯ ಹಂತದಿಂದ 120 ಮಿಲಿಯನ್ ಡಾಲರ್ ವಹಿವಾಟಿನವರೆಗೆ ಪೂರೈಕೆದಾರರ ತೊಡಗಿಸಿಕೊಳ್ಳುವಿಕೆ ಇತ್ತು. ಯೋಜನೆಯು ಪರಿಕಲ್ಪನೆಯಿಂದ ಅಂತಿಮ ಉತ್ಪನ್ನದವರೆಗೆ ಸಾಗಲು ಐದು ವರ್ಷಗಳನ್ನು ತೆಗೆದುಕೊಂಡಿತು.
2006ರ ಏಪ್ರಿಲ್‌ನಲ್ಲಿ, ಕಂಪನಿಯು ಇನ್ನೊಂದು ಪರಿಷ್ಕೃತ/ಮೇಲ್ದರ್ಜೆಗೇರಿಸಿದ ಮಾದರಿಯನ್ನು ಬಿಡುಗಡೆ ಮಾಡಿತು-ಅದನ್ನು 'ಆಲ್-ನ್ಯೂ' ಸ್ಕಾರ್ಪಿಯೋ ಎಂದು ಕರೆಯಿತು. 2007ರ ಜೂನ್‌ನಲ್ಲಿ, ಮಹೀಂದ್ರಾ ಸ್ಕಾರ್ಪಿಯೋ ಗೆಟ್‌ಅವೇ ಎಂಬ ಒಂದು ಪಿಕ್-ಅಪ್ ಆವೃತ್ತಿಯನ್ನು ಭಾರತದಲ್ಲಿ ಆರಂಭಿಸಿತು. ಇತ್ತೀಚೆಗೆ, ಎಂ & ಎಂ ಮಾದರಿಯ ಮುಂಭಾಗವನ್ನು ಸ್ವಲ್ಪ ಎತ್ತಿರುವ ಒಂದು ಆವೃತ್ತಿಯನ್ನು ಬಿಡುಗಡೆ ಮಾಡಿದೆ.
ಮೊದಲ ತಲೆಮಾರು
ಬದಲಾಯಿಸಿಭಾರದತಲ್ಲಿ ಮಹೀಂದ್ರಾ ಸ್ಕಾರ್ಪಿಯೋವನ್ನು 2002ರಲ್ಲಿ ಬಿಡುಗಡೆ ಮಾಡಲಾಯಿತು. ಸ್ಕಾರ್ಪಿಯೋದ ಯಶಸ್ಸಿನ ನಂತರ, ಮಹೀಂದ್ರಾ ಕಂಪನಿಯು ಪ್ಲಶ್ ಸೀಟ್‌ಗಳು ಮತ್ತು ರೇರ್ ಸೆಂಟರ್ ಆರ್ಮ್ ರೆಸ್ಟ್, ಡ್ಯುಯೆಲ್ ಟೋನ್ ಹೊರಭಾಗದ ಬಣ್ಣ ಮತ್ತು ವಿವಿಧ ಚಿಕ್ಕ ಪುಟ್ಟ ಬದಲಾವಣೆಗಳೊಂದಿಗೆ ಸ್ಕಾರ್ಪಿಯೋದ ಪರಿಷ್ಕೃತ ಮಾದರಿಯನ್ನು ಬಿಡುಗಡೆ ಮಾಡಿತು.
ದೆಹಲಿಯಲ್ಲಿ ನಡೆದ 2006ರ ಆಟೋ ಎಕ್ಸ್‌ಪೊ ಪ್ರದರ್ಶನದಲ್ಲಿ, ಸ್ಕಾರ್ಪಿಯೋ ಮಾದರಿಯ ಕುರಿತ ತಮ್ಮ ಭಾವೀ ಯೋಜನೆಗಳನ್ನು ಮಹೀಂದ್ರಾ ಪ್ರದರ್ಶಿಸಿತು. ಇಲ್ಲಿ ಸಿಆರ್‌ಡಿಇ ಎಂಜಿನ್ ಮತ್ತು ಪಿಕ್-ಅಪ್ ಟ್ರಕ್ ಆಧರಿತ ಸ್ಕಾರ್ಪಿಯೋ ಹೊಂದಿದ ಒಂದು ಹೈಬ್ರಿಡ್ ಸ್ಕಾರ್ಪಿಯೋವನ್ನು ಪ್ರದರ್ಶಿಸಿದರು. ಭಾರತದಲ್ಲಿ ಅಭಿವೃದ್ಧಿಪಡಿಸಲಾದ ಅಂತಹ ಮೊದಲ ಹೈಬ್ರಿಡ್ ವಾಹನವನ್ನು ಮೊದಲು ಫೋರ್ಡ್ ಕಂಪನಿಯ ಉದ್ಯೋಗಿಯಾಗಿದ್ದು, ನಂತರ ಮಹೀಂದ್ರಾಕ್ಕೆ ಸೇರಿದ ಅರುಣ್ ಜೌರಾ ಅಭಿವೃದ್ಧಿಪಡಿಸಿದ್ದರು. ಆತನ ಹಿರಿಯ ಅಧಿಕಾರಿ, ಡಾ. ಪವನ್ ಗೋಯೆಂಕಾ, ಮೊದಲು ಜಿಎಂ ಎಂಜಿನಿಯರ್‌ನಲ್ಲಿದ್ದವರು, ಈಗ ಮಹೀಂದ್ರಾದ ಆಟೋಮೊಟಿವ್ ವಿಭಾಗದ ಮುಖ್ಯಸ್ಥರಾಗಿದ್ದು, ಒಟ್ಟಾರೆ ಸ್ಕಾರ್ಪಿಯೋ ಯೋಜನೆಯನ್ನು ನೋಡಿಕೊಳ್ಳುತ್ತಾರೆ.
2007ರ ನವೆಂಬರ್‌ನಲ್ಲಿ, ಮಹೀಂದ್ರಾ ತಮ್ಮ ಹೊಸ ಸ್ಕಾರ್ಪಿಯೋ ಮಾದರಿಗಾಗಿ ಒಂದು ಟೀಸರ್ ಕ್ಯಾಂಪೇನ್ ಎಂ-ಹಾಕ್( m_Hawk) ಅನ್ನು ತಮ್ಮ ಅಧಿಕೃತ ವೆಬ್‌ಸೈಟ್‌ನಲ್ಲಿ ಆರಂಭಿಸಿದರು.[೫]
2008ರ ಏಪ್ರಿಲ್ 14ರಂದು, ಮಹೀಂದ್ರಾ ತಮ್ಮ ಸ್ಕಾರ್ಪಿಯೋ ಎಸ್‌ಯುವಿಯ ಡೀಸೆಲ್-ಎಲೆಕ್ಟ್ರಿಕ್ ಹೈಬ್ರಿಡ್ ಆವೃತ್ತಿಯ ಪರಿಕಲ್ಪನೆಯನ್ನು 2008ರ ಎಸ್‌ಎಇ ವರ್ಲ್ಡ್ ಕಾಂಗ್ರೆಸ್‌ನಲ್ಲಿ ಪ್ರಕಟಿಸಿದರು.[೬]
2008ರ ಸೆಪ್ಟೆಂಬರ್ 21ರಂದು ಮಹೀಂದ್ರಾ ತಮ್ಮ ಇತ್ತೀಚಿನ ಸ್ಕಾರ್ಪಿಯೋವನ್ನು 6 ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಶನ್ ಗಿಯರ್‌ಗಳ ಜೊತೆ ಬಿಡುಗಡೆ ಮಾಡಿದ್ದಾರೆ.
ಮಹೀಂದ್ರಾ ಕಂಪನಿಯು ಡೀಸೆಲ್-ಎಲೆಕ್ಟ್ರಿಕ್ ಹೈಬ್ರಿಡ್ನೊಂದಿಗೆ ಸಂಯುಕ್ತ ಸಂಸ್ತಾನಕ್ಕೆ ರಫ್ತು ಮಾಡುವ ಯೋಚನೆಯಲ್ಲಿದೆ.[೭] 2006ರಲ್ಲಿ, ಕಂಪನಿಯು ಮಹೀಂದ್ರಾ ವಾಹನಗಳನ್ನು ರಫ್ತು ಮಾಡಲು ಮತ್ತು ಹಂಚಿಕೆ ಮಾಡಲು ಗ್ಲೋಬಲ್ ವೆಹಿಕಲ್ಸ್ ಯುಎಸ್‌ಎ ಜೊತೆ ಒಂದು ಒಪ್ಪಂದವನ್ನು ಮಾಡಿಕೊಂಡಿತು.[೮] ಕಂಪನಿಯು ಸ್ಕಾರ್ಪಿಯೋದ ಒಂದು ಪರಿಷ್ಕೃತ ಪಿಕ್-ಅಪ್ ಆವೃತ್ತಿಯನ್ನು (ಇನ್ನೂ ಹೆಸರಿಟ್ಟಿಲ್ಲ, ಏಕೆಂದರೆ ಫೋರ್ಡ್ ಸ್ಕಾರ್ಪಿಯೋ ಜೊತೆ ಟ್ರೇಡ್‌ಮಾರ್ಕ್ ಕುರಿತ ಸಮಸ್ಯೆಗಳಿವೆ) ಅಮೆರಿಕದಲ್ಲಿ 2009ರ ಕೊನೆಯಲ್ಲಿ ಬಿಡುಗಡೆ ಮಾಡಲು ಯೋಜಿಸಿದೆ.[೯] ಈ ವಾಹನವನ್ನು 20,000 ಡಾಲರ್‌ನಷ್ಟು ಕಡಿಮೆ ಬೆಲೆಗೆ ನೀಡಲಾಗುವುದು.
ರಫ್ತುಗಳು
ಬದಲಾಯಿಸಿಮಹೀಂದ್ರಾ ಸ್ಕಾರ್ಪಿಯೋ ವಿಶ್ವದ ಈ ಕೆಳಗಿನ ವಿವಿಧ ದೇಶಗಳಲ್ಲಿ ಮಾರಲಾಗುತ್ತಿದೆ:
- ಭಾರತ
- ಇಟಲಿ
- ಫ್ರಾನ್ಸ್
- ಸ್ಪೈನ್
- ತುರ್ಕಿ
- ಶ್ರೀಲಂಕಾ
- ನೇಪಾಳ
- ಬಾಂಗ್ಲಾದೇಶ
- ಈಜಿಪ್ಟ್
- ರಷ್ಯಾ
- ಮಲೇಷಿಯಾ
- ದಕ್ಷಿಣ ಆಫ್ರಿಕಾ
- ಕತಾರ್
- ಬ್ರೆಜಿಲ್
- ಚಿಲಿ: ಸ್ಕಾರ್ಪಿಯೋ ಪಿಕ್ ಅಪ್ ಚಿಲಿಯಲ್ಲಿ ಬಿಡುಗಡೆ ಮಾಡಿದ ಮಹೀಂದ್ರಾ ಬ್ರಾಂಡ್ನ ಮೊಟ್ಟಮೊದಲ ಪ್ರಯಾಣಿಕ ವಾಹನವಾಗಿತ್ತು ಮತ್ತು ಎರಡನ್ನೂ 2007ರ ಜುಲೈ 25ರಂದು ರಾತ್ರಿ ಪತ್ರಿಕೆಗಳಿಗೆ ಪ್ರದರ್ಶಿಸಲಾಯಿತು.
ಪಶ್ಚಿಮ ಯೋರೋಪ್‌ನಲ್ಲಿ, ಇದೇ ಹೆಸರನ್ನು ಹೊಂದಿದ ಫೋರ್ಡ್‌ನ ಮೊದಲಿನ ವಾಹನದೊಂದಿಗೆ ಗೊಂದಲವಾಗದಿರಲೆಂದು, ಮಹೀಂದ್ರಾ ಗೋವಾ ಎಂದು ಕರೆಯಲಾಗಿದೆ.
ಸುರಕ್ಷತೆ
ಬದಲಾಯಿಸಿಪರಿಷ್ಕೃತ ಮಹೀಂದ್ರಾ ಸ್ಕಾರ್ಪಿಯೋ ಗೆಟ್‌ಅವೇಯನ್ನು ಭಾರತದ ಮಾದರಿಗೆ ಹೆಚ್ಚುವರಿ ಸುರಕ್ಷತಾ ಲಕ್ಷಣಗಳನ್ನು ಸೇರಿಸಿ, ಆಸ್ಟ್ರೇಲಿಯಾದಲ್ಲಿ 2009ರ ಮಧ್ಯಭಾಗದಲ್ಲಿ ಬಿಡುಗಡೆ ಮಾಡಲಾಯಿತು. ಸದ್ಯದ 2 ಸ್ಟಾರ್ ಎಎನ್‌ಸಿಎಪಿ(ANCAP) ರೇಟಿಂಗ್‌ನಿಂದ ಕನಿಷ್ಠ 3 ಸ್ಟಾರ್‌ಗಳಿಗೆ ರೇಟಿಂಗ್ ಏರಿಸುವ ಪ್ರಯತ್ನವಾಗಿ ಎಬಿಎಸ್ ಬ್ರೇಕ್ಸ್ ಮತ್ತು ಏರ್‌ಬ್ಯಾಗ್ಸ್ಗಳನ್ನು ಹೆಚ್ಚುವರಿಯಾಗಿ ಸೇರಿಸಲಾಯಿತು.
ನಿರ್ದಿಷ್ಟ ವಿವರಣೆಗಳು
ಬದಲಾಯಿಸಿ- ಎಂಜಿನ್: ಮೇಲುಗಡೆ ಇರುವ ಇಂಟರ್‌ಕೂಲರ್, ಇಂಟರ್‌ಕೂಲ್ಡ್, ಎಂಹಾಕ್ (mHawk)ಸಿಆರ್‌ಡಿಇ, 4 ಸ್ಟ್ರೋಕ್, ಟರ್ಬೋ ಚಾರ್ಜ್‌ಡ್, ಡಿಐ
- ಕ್ಯುಬಿಕ್ ಸಾಮರ್ಥ್ಯ: 2179ಸಿಸಿ
- ಗರಿಷ್ಠ ಗ್ರಾಸ್ ಪವರ್:120 bhp (89 kW) @ 4000 ಆರ್‌ಪಿಎಂ
- ಗರಿಷ್ಠ ಗ್ರಾಸ್ ಟಾರ್ಕ್: 290 N⋅m (210 lbf⋅ft) @ 1800-2800 ಆರ್‌ಪಿಎಂ
- ಗಿಯರ್ ಬಾಕ್ಸ್: 5 ಸ್ಪೀಡ್ ಮ್ಯಾನ್ಯುಯೆಲ್ ಮತ್ತು 6 ಸ್ಪೀಡ್ ಆಟೋಮ್ಯಾಟಿಕ್
- ಟೈರ್‌ಗಳು: P235/70 R16, ರೇಡಿಯಲ್ ಟ್ಯೂಬ್‌ಲೆಸ್
- ಮುಂದಿನ ಬ್ರೇಕ್‌ಗಳು: ಡಿಸ್ಕ್ & ಕ್ಯಾಲಿಪರ್ ಮಾದರಿಯದು, ಟ್ವಿನ್‌ಪಾಡ್ & ಟಾಂಡೆಮ್ ಬೂಸ್ಟರ್
- ರೇರ್ ಬ್ರೇಕ್ಸ್: ಡ್ರಮ್ ಮಾದರಿಯದು
- ಫ್ಯುಯೆಲ್ ಟ್ಯಾಂಕ್ ಸಾಮರ್ಥ್ಯ: 60 L (13 imp gal; 16 US gal)
- ಫ್ಯುಯೆಲ್ ಟೈಪ್: ಡೀಸೆಲ್
- ಟರ್ನಿಂಗ್ ಸರ್ಕಲ್ ರೇಡಿಯಸ್: 5.6 m (18 ft) 2WD
ಉಲ್ಲೇಖಗಳು
ಬದಲಾಯಿಸಿ- ↑ "Mahindra Corporate". Mahindra.com. 1981-02-08. Archived from the original on 2010-01-02. Retrieved 2009-10-24.
- ↑ "ಆರ್ಕೈವ್ ನಕಲು". Archived from the original on 2010-07-22. Retrieved 2011-01-20.
- ↑ "Guess what? US has appetite for Indian cars". dnaindia.com. 2009-08-05. Retrieved 2009-10-24.
- ↑ /suvs-articles/mahindra-scorpio-suv-pikup-range-launched-in-brazil-314948.html ] ಬ್ರೆಜಿಲ್‌ನಲ್ಲಿ ಬಿಡುಗಡೆ ಮಾಡಿದ ಸ್ಕಾರ್ಪಿಯೋ ಎಸ್‌ಯುವಿ & ಪಿಕ್-ಅಪ್ ಶ್ರೇಣಿಗಳು
- ↑ "- ಜಾಲತಾಣ". Archived from the original on 2010-12-17. Retrieved 2011-01-20.
- ↑ Wojdyla, Ben (2008-04-14). "Indian Mahindra Scorpio Diesel-Electric Hybrid SUV: First Pictures Of First Indian Hybrid - 2008 SAE". Jalopnik. Retrieved 2009-10-24.
- ↑ "Scorpio set to burn rubber on US highways - India Business - Business - The Times of India". Timesofindia.indiatimes.com. 2006-11-21. Retrieved 2009-10-24.
- ↑ "Mahindra Clean Diesel Pickup Trucks and SUVs". Mahindrana.com. Retrieved 2009-10-24.
- ↑ "Mahindra to enter US market with fuel-efficient pickup truck". domain-b.com. 2009-07-15. Retrieved 2009-10-24.
ಬಾಹ್ಯ ಕೊಂಡಿಗಳು
ಬದಲಾಯಿಸಿ- ಮಹೀಂದ್ರಾ ಸ್ಕಾರ್ಪಿಯೋ Archived 2010-12-17 ವೇಬ್ಯಾಕ್ ಮೆಷಿನ್ ನಲ್ಲಿ.
- ಸ್ಕಾರ್ಪಿಯೋಫ್ಯಾನ್ಸ್.ಕಾಮ್ - ಮಹೀಂದ್ರಾ ಸ್ಕಾರ್ಪಿಯೋ ಮಾಲೀಕರ ದೊಡ್ಡ ಗುಂಪಿನ ಸ್ವಾಮ್ಯದಲ್ಲಿರುವ ಮತ್ತು ಅವರು ಪರಸ್ಕರಣೆ ಮಾಡುವ ಜಾಲತಾಣ. Archived 2011-02-01 ವೇಬ್ಯಾಕ್ ಮೆಷಿನ್ ನಲ್ಲಿ.
- ಮಹೀಂದ್ರಾ ಸ್ಕಾರ್ಪಿಯೋ ಸ್ಟಿಲ್ ಗೋಯಿಂಗ್ ಸ್ಟ್ರಾಂಗ್
- ಮಹೀಂದ್ರಾ ಸ್ಕಾರ್ಪಿಯೋ ಮಾದರಿಗಳು ಮತ್ತು ದರ ಪಟ್ಟಿ Archived 2010-12-21 ವೇಬ್ಯಾಕ್ ಮೆಷಿನ್ ನಲ್ಲಿ.