ಕರ್ನಾಟಕದ ಮಹಾನಗರಪಾಲಿಕೆಗಳು

(ಮಹಾನಗರಪಾಲಿಕೆಗಳು ಇಂದ ಪುನರ್ನಿರ್ದೇಶಿತ)

ಮಹಾನಗರಪಾಲಿಕೆಗಳು ಮಹಾನಗರಗಳ ಆಡಳಿತವನ್ನು ನಡೆಸುತ್ತವೆ. ಕರ್ನಾಟಕ ಮಹಾನಗರ ಪಾಲಿಕೆ ಕಾಯ್ದೆಯಂತೆ ಒಂದು ನಗರ ಮಹಾನಗರಪಾಲಿಕೆ ದರ್ಜೆಗೇರಲು ಪೂರ್ಣ ನಗರ ಪ್ರದೇಶದಲ್ಲಿ ೨ ಲಕ್ಷ ಜನಸಂಖ್ಯೆ ಮತ್ತು ಸುತ್ತಲಿನ ಪ್ರದೇಶದಲ್ಲಿ ೧ ಲಕ್ಷ ಜನಸಂಖ್ಯೆ ಅಂದರೆ ಒಟ್ಟಾರೆ ೩ ಲಕ್ಷ ಜನಸಂಖ್ಯೆ ಇರಬೇಕು. ನಗರದ ಕಂದಾಯ ೬ ಕೋಟಿ ರೂಪಾಯಿಗಳಿಗೂ ಮಿಕ್ಕಿರಬೇಕು ಮತ್ತು ಜನಸಾಂದ್ರತೆ ಪ್ರತಿ ಚದರ ಕಿ.ಮಿ.ಗೆ ೩೦೦೦ ಮಿಕ್ಕಿರಬೇಕು.

ಕರ್ನಾಟಕದಲ್ಲಿ ೨೦೧೧ರಲ್ಲಿರುವಂತೆ ರಾಜಧಾನಿ ಬೆಂಗಳೂರು ಸೇರಿದಂತೆ ೧೧ ನಗರಗಳು ಮಹಾನಗರಪಾಲಿಕೆ ಸ್ಥಾನಮಾನ ಹೊಂದಿವೆ.

ಕರ್ನಾಟಕದಲ್ಲಿರುವ ಮಹಾನಗರಪಾಲಿಕೆಗಳು

ಬದಲಾಯಿಸಿ
ನಗರ ಪಾಲಿಕೆ ಜನಸಂಖ್ಯೆ(೨೦೦೧ ಜನಗಣತಿ) ಪಾಲಿಕೆಯಾದ ವರ್ಷ
ಬೆಂಗಳೂರು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ; ಬೆಂಗಳೂರು ಮಹಾನಗರ ಪಾಲಿಕೆ ೬೮ ಲಕ್ಷ ೨೦೦೭
ಹುಬ್ಬಳ್ಳಿ - ಧಾರವಾಡ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ೭.೮೬ ಲಕ್ಷ ೧೯೬೨
ಮೈಸೂರು ಮೈಸೂರು ಮಹಾನಗರ ಪಾಲಿಕೆ ೮ ಲಕ್ಷ ೧೯೭೭
ಮಂಗಳೂರು ಮಂಗಳೂರು ಮಹಾನಗರ ಪಾಲಿಕೆ ೫.೩೮ ಲಕ್ಷ ೧೯೮೩
ಬೆಳಗಾವಿ ಬೆಳಗಾವಿ ಮಹಾನಗರ ಪಾಲಿಕೆ ೫.೬೪ ಲಕ್ಷ ೧೯೮೮
ಗುಲ್ಬರ್ಗಾ ಗುಲ್ಬರ್ಗಾ ಮಹಾನಗರ ಪಾಲಿಕೆ ೪.೨೭ ಲಕ್ಷ ೧೯೯೬
ಬಳ್ಳಾರಿ ಬಳ್ಳಾರಿ ಮಹಾನಗರಪಾಲಿಕೆ ೩.೧೭ ಲಕ್ಷ ೨೦೦೩
ದಾವಣಗೆರೆ ದಾವಣಗೆರೆ ಮಹಾನಗರ ಪಾಲಿಕೆ ೩.೬೪ ಲಕ್ಷ ೨೦೦೭
ತುಮಕೂರು ತುಮಕೂರು ಮಹಾನಗರ ಪಾಲಿಕೆ ೩.೪೮ ಲಕ್ಷ ೨೦೦೯
ಶಿವಮೊಗ್ಗ ಶಿವಮೊಗ್ಗ ಮಹಾನಗರ ಪಾಲಿಕೆ ೩.೩೪ ಲಕ್ಷ ೨೦೦೯
ಬಿಜಾಪುರ ಬಿಜಾಪುರ ಮಹಾನಗರ ಪಾಲಿಕೆ ೩.೨೮ ಲಕ್ಷ ೨೦೧೧ ಉಡುಪಿ
 ಉಡುಪಿ ಮಹಾನಗರ ಪಾಲಿಕೆ
.೪.೩೪ ಲಕ್ಷ
 ೨೦೨೩
==ಮಹಾನಗರಪಾಲಿಕೆಗಳಾಗಿ ಭಡ್ತಿಗೊಳ್ಳಬೇಕಿರುವ ನಗರಗಳು==
ಬದಲಾಯಿಸಿ

ರಾಯಚೂರು, ಬೀದರ್ ,ಮಂಡ್ಯ ಉಡುಪಿ ಕುಂದಾಪುರ Hassan ತೆಕ್ಕಟ್ಟೆ, ನಗರಗಳು ೨ ಲಕ್ಷಕ್ಕೂ ಮಿಕ್ಕಿ ಜನಸಂಖ್ಯೆ ಹೊಂದಿದ್ದು ಮುಂದಿನ ೫ ವರ್ಷಗಳಲ್ಲಿ ಭಡ್ತಿ ಹೊಂದುವ ಸಾಧ್ಯತೆ ಇವೆ. ಮುಂದಿನ ನಗರಗಳಲ್ಲಿ ಜನಸಂಖ್ಯೆ ಹೆಚ್ಚುವ ಸಾಧ್ಯತೆ ಇದ್ದು, ಮಹಾನಗರಪಾಲಿಕೆ ಹೊಂದುವ ಅರ್ಹತೆಯನ್ನು ಪಡೆಯಲಿವೆ.

ಉಲ್ಲೇಖಗಳು

ಬದಲಾಯಿಸಿ

[೧] Archived 2008-03-30 ವೇಬ್ಯಾಕ್ ಮೆಷಿನ್ ನಲ್ಲಿ. [೨] Archived 2009-02-13 ವೇಬ್ಯಾಕ್ ಮೆಷಿನ್ ನಲ್ಲಿ. ವರ್ಗ:ಮಹಾನಗರಪಾಲಿಕೆಗಳು