ಮಮತಾ ಬ್ಯಾನರ್ಜಿ

ಮಮತಾ ಬ್ಯಾನರ್ಜಿ (ಬಂಗಾಳಿ:মমতা বন্দ্যোপাধ্যায়, [mɔːmoːt̪ʰaː bɛːnaːrjiː]; ೫ ಜನವರಿ ೧೯೫೫ರಂದು ಜನನ) ಯವರು, ಪಶ್ಚಿಮ ಬಂಗಾಳದ ಮುಖ್ಯಮಂತ್ರಿ,

ಮಮತಾ ಬ್ಯಾನರ್ಜಿ
Portrait of ಮಮತಾ ಬ್ಯಾನರ್ಜಿ

ಹಾಲಿ
ಅಧಿಕಾರ ಸ್ವೀಕಾರ 
20 May 2011
ರಾಜ್ಯಪಾಲ M. K. Narayanan
ಪೂರ್ವಾಧಿಕಾರಿ Buddhadeb Bhattacharjee

ಅಧಿಕಾರ ಅವಧಿ
22 May 2009 – 19 May 2011
ಪೂರ್ವಾಧಿಕಾರಿ Lalu Prasad Yadav
ಉತ್ತರಾಧಿಕಾರಿ Manmohan Singh (pro tem)

Member of Parliament
ಅಧಿಕಾರ ಅವಧಿ
1991 – 2011
ಪೂರ್ವಾಧಿಕಾರಿ Biplab Dasgupta[೧]
ವೈಯಕ್ತಿಕ ಮಾಹಿತಿ
ಜನನ (1955-01-05) 5 January 1955 (age 66)
ಕೊಲ್ಕತ್ತ, West Bengal, India
ರಾಷ್ಟ್ರೀಯತೆ Indian
ರಾಜಕೀಯ ಪಕ್ಷ Indian National Congress (1970–1997)
Trinamool Congress
(1997–present)
ವಾಸಸ್ಥಾನ Harish Chatterjee Street, ಕೊಲ್ಕತ್ತ, West Bengal, India
ಅಭ್ಯಸಿಸಿದ ವಿದ್ಯಾಪೀಠ University of Calcutta
ಉದ್ಯೋಗ Politician
Advocate
Social Worker
ಸಹಿ ಮಮತಾ ಬ್ಯಾನರ್ಜಿ's signature
ಜಾಲತಾಣ Mamata Banerjee

ತೃಣ ಮೂಲ ಕಾಂಗ್ರೆಸ್‌‌ನ ಮುಖಂಡರಾಗಿದ್ದು, ಅವರು ಪಕ್ಷರೆ. ಮಮತಾ ಬ್ಯಾನರ್ಜಿಯವರನ್ನು ಪಶ್ಚಿಮ ಬಂಗಾಳದಲ್ಲಿ ಅವರ ಅನುಯಾಯಿಗಳು "ದೀದಿ" ಅಂದರೆ ಅಕ್ಕ ಎಂದು ಪ್ರೀತಿಯಿಂದ ಕರೆಯುತ್ತಾರೆರು. ವಿಶೇಷ ಆರ್ಥಿಕ ವಲಯಗಳನ್ನು ವಿರೋಧಿಸುವುದರ ಮೂಲಕ ಹಾಗೂ ಪಶ್ಚಿಮ ಬಂಗಾಳದಲ್ಲಿ ಕೈಗಾರಿಕೆಗಳ ಸ್ಥಾಪನೆಗೋಸ್ಕರ ಕೃಷಿಕರು ಹಾಗೂ ರೈತರ ಜಮೀನುಗಳನ್ನು ಬಲವಂತವಾಗಿ ಸ್ವಾಧೀನ ಪಡಿಸಿಕೊಳ್ಳುವುದರ ವಿರುದ್ಧ ಹೋರಾಡುವುದರ ಮೂಲಕ ತಮ್ಮನ್ನು ಗುರುತಿಸಿಕೊಂಡರು.

ಜೀವನ ಚರಿತ್ರೆಸಂಪಾದಿಸಿ

ಮಮತಾ ಬ್ಯಾನರ್ಜಿಯವರು ೫ ಜನವರಿ ೧೯೫೫ರಂದು ಶ್ರೀ ಪ್ರೊಮಿಲೇಶ್ವರ ಬ್ಯಾನರ್ಜಿ ಹಾಗೂ ಶ್ರೀಮತಿ. ಗಾಯತ್ರಿ ಬ್ಯಾನರ್ಜಿಯವರ ಪುತ್ರಿಯಾಗಿ ಭಾರತದ ಈಗಿನ ಪಶ್ಚಿಮ ಬಂಗಾಳದ ಕಲ್ಕತ್ತಾ (ಈಗಿನ ಕೊಲ್ಕತ್ತಾ) ದಲ್ಲಿ ಜನಿಸಿದರು. ಒಂದು ಕೆಳ ಮಧ್ಯಮ ವರ್ಗದ ಕುಟುಂಬದಲ್ಲಿ ಬೆಳೆದ ಇವರು ತಮ್ಮ ರಾಜಕೀಯ ವೃತ್ತಿ ಜೀವನವನ್ನು ಕಾಂಗ್ರೆಸ್ ಸೇರುವುದರ ಮೂಲಕ ಪ್ರಾರಂಭಿಸಿದರು. ಮತ್ತು ಒಬ್ಬ ಯುವ ಮಹಿಳೆಯಾಗಿ ೧೯೭೦ರಲ್ಲಿ ಅತಿ ಶೀಘ್ರದಲ್ಲೇ ರಾಜ್ಯದ ಮಹಿಳಾ ಕಾಂಗ್ರೆಸ್ (೧೯೭೬–೮೦) ನ ಪ್ರಧಾನ ಕಾರ್ಯದರ್ಶಿ ಹುದ್ದೆಯನ್ನು ಏರಿದರು. ಎಪ್ಪತ್ತರ ದಶಕದ ಮಧ್ಯದಲ್ಲಿ ಬಂಗಾಳದಲ್ಲಿ ಕಳಪೆ ಮಟ್ಟಕೆ ಇಳಿದ ರಾಜಕೀಯವನ್ನು ಒಗ್ಗೂಡಿಸುವ ಆರಂಭದಲ್ಲಿದ್ದಾಗ ಅವರು ಒಬ್ಬ ವಯಸ್ಕ ಕಾಲೇಜು ವಿದ್ಯಾರ್ಥಿನಿಯಾಗಿದ್ದರು. ಒಂದು ಸಾರಿ, ಅವರು ಜಯಪ್ರಕಾಶ ನಾರಾಯಣ್' ಅವರ ಕಾರಿನ ಬಾನೆಟ್ ಮೇಲೆ ತಮ್ಮನ್ನು ತಡೆಯುವುದರೊಳಗಾಗಿ ಹಾರಿಯೇ ಬಿಟ್ಟಿದ್ದರು. ತಮ್ಮ ರಾಜಕೀಯ ಜೀವನದುದ್ದಕ್ಕೂ ಅತಿ ಸರಳವಾದ ಜೀವನ ಶೈಲಿಯನ್ನು ಅನುಸರಿಸಿದರು. ಅವರು ಎಂದು ಹಣವನ್ನು ತಮ್ಮ ಬಟ್ಟೆ, ಸೌಂದರ್ಯವರ್ಧಕಗಳು ಅಥವಾ ಒಡವೆಗಳಿಗಾಗಿ ಅಪವ್ಯಯ ಮಾಡಲಿಲ್ಲ. ಯಾವಾಗಲೂ ತಮ್ಮ ಹೆಗಲಿಗೆ ಒಂದು ಖಾದಿ ಚೀಲವನ್ನು ಹಾಕಿಕೊಂಡು ಸರಳವಾಗಿರುತ್ತಿದ್ದರು. ತಮ್ಮ ಜೀವನ ಪರ್ಯಂತರವಿಡೀ ಅವರು ಒಂಟಿಯಾಗಿಯೇ ಉಳಿದರು.[೨][೩]

ಅವರು ಕೊಲ್ಕತ್ತಾಕೊಲ್ಕತ್ತಾ ವಿಶ್ವವಿದ್ಯಾನಿಲಯದ ಮಹಿಳಾ ಕಾಲೇಜಿನಿಂದ ಮಾನ್ಯತೆ ಪಡೆದ ಜೋಗಾಮಯ ದೇವಿ ಕಾಲೇಜ್ನಿಂದ ಕಲಾ ವಿಭಾಗದಲ್ಲಿ ಪದವಿಯನ್ನು ಪಡೆದರು.[೪]]]]] ನಂತರ ಅವರು ಸ್ನಾತಕೋತ್ತರ ಪದವಿಯನ್ನು ಅದೇ ವಿಶ್ವವಿದ್ಯಾನಿಲಯದಿಂದ ಪಡೆದರು. ಅದೇ ವಿಶ್ವ ವಿದ್ಯಾನಿಲಯದಿಂದ ಮಾನ್ಯತೆಯಿಂದ ಪಡೆದ ಶ್ರೀ ಶಿಕ್ಷಯತಾನ್ ಕಾಲೇಜಿನಿಂದ ಅವರು ಬಿ.ಎಡ್. ಪದವಿಯನ್ನು ಪಡೆದರು. ನಂತರ ಅವರು ಕೊಲ್ಕತ್ತಾದ ಜೋಗೀಶ್ ಚಂದ್ರ ಚೌದರಿ ಕಾನೂನು ಮಹಾವಿದ್ಯಾಲಯದಿಂದ ಎಲ್.ಎಲ್.ಬಿ. ಪದವಿಯನ್ನು ಪಡೆದರು.[೫]

ರಾಜಕೀಯ ಜೀವನಸಂಪಾದಿಸಿ

ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ಸಂಪಾದಿಸಿ

ಅವರು ತಮ್ಮ ರಾಜಕೀಯ ವೃತ್ತಿ ಜೀವನವನ್ನು ಕಾಂಗ್ರೆಸ್(I) ಗೆ ಸೇರುವುದರ ಮೂಲಕ ಪ್ರಾರಂಭಿಸಿದರು.ಒಬ್ಬ ಯುವ ಮಹಿಳೆಯಾಗಿ ೧೯೭೦ರಲ್ಲಿ ಅತಿ ಬೇಗನೇ ಸ್ಥಳೀಯ ಕಾಂಗ್ರೆಸ್‌ನಲ್ಲಿ ಉನ್ನತ ಸ್ಥಾನಗಳಿಗೆ ಏರಿದರು. ಪಶ್ಚಿಮ ಬಂಗಾಳದಲ್ಲಿ ೧೯೭೬ರಿಂದ ೧೯೮೦ರವರೆಗೆ ಮಹಿಳಾ ಕಾಂಗ್ರೆಸ್(I) ನ ಕಾರ್ಯದರ್ಶಿಯಾಗಿ ಉಳಿದರು.[೬] ೧೯೮೪ರ ಸಾರ್ವತ್ರಿಕ ಚುನಾವಣೆಯಲ್ಲಿ, ಪಶ್ಚಿಮ ಬಂಗಾಳದ ಜಾದವ್ ಪುರ್ ಲೋಕ ಸಭಾ ಕ್ಷೇತ್ರ ದಿಂದ ಸ್ಪರ್ಧಿಸಿದ್ದ ಹಳೆಯ ಕಮ್ಯುನಿಸ್ಟ್ ರಾಜಕೀಯ ಮುತ್ಸದಿಯಾದ ಸೋಮನಾಥ್ ಚಟರ್ಜಿಯವರನ್ನು ಸೋಲಿಸುವುದರ ಮೂಲಕ ಭಾರತದ ಅತ್ಯಂತ ಕಿರಿಯ ಸಂಸದರಾದರು. ನಂತರ ಅವರು ಅಖಿಲ ಭಾರತ ಯುವ ಕಾಂಗ್ರೆಸ್‌ನ ಕಾರ್ಯದರ್ಶಿಯೂ ಆದರು. ೧೯೮೯ರಲ್ಲಿ ಕಾಂಗ್ರೆಸ್ ವಿರೋಧಿ ಅಲೆಯಲ್ಲಿ ತಮ್ಮ ಸ್ಥಾನವನ್ನು ಕಳೆದುಕೊಂಡ ನಂತರ ೧೯೯೧ರ ಸಾರ್ವತ್ರಿಕ ಚುನಾವಣೆಯಲ್ಲಿ ಗೆದ್ದು ,ಕೊಲ್ಕತ್ತ ದಕ್ಷಿಣ ಕ್ಷೇತ್ರದಲ್ಲಿ ಶಾಶ್ವತವಾದ ಸ್ಥಾನ ಕಂಡುಕೊಂಡರು ೧೯೯೬, ೧೯೯೮, ೧೯೯೯, ೨೦೦೪ ಹಾಗೂ 2009 ರ ಸಾರ್ವತ್ರಿಕ ಚುನಾವಣೆಗಳಲ್ಲಿ ಅವರು ದಕ್ಷಿಣ ಕೊಲ್ಕತ್ತದಲ್ಲಿ ತಮ್ಮ ಸ್ಥಾನವನ್ನು ಉಳಿಸಿಕೊಂಡರು.

೧೯೯೧ರಲ್ಲಿ ರಾವ್ ರವರ ಸರ್ಕಾರದ ರಚನೆಯ ಸಮಯದಲ್ಲಿ , ಮಮತಾ ಬ್ಯಾನರ್ಜಿಯವರನ್ನು ಮಾನವ ಸಂಪನ್ಮೂಲ ಅಭಿವೃದ್ಧಿ, ಯುವ ಹಾಗೂ ಕ್ರೀಡಾ, ಮತ್ತು ಮಹಿಳಾ ಮತ್ತು ಮಕ್ಕಳ ಕಲ್ಯಾಣದ ರಾಜ್ಯದ ಕೇಂದ್ರ ಸಚಿವರನ್ನಾಗಿ ಮಾಡಲಾಯಿತು. ಒಬ್ಬ ಕ್ರೀಡಾ ಸಚಿವರಾಗಿ, ದೇಶದಲ್ಲಿ ಕ್ರೀಡೆಗಳನ್ನು ಅಭಿವೃದ್ಧಿಗೊಳಿಸಲು ತಾವು ಮುಂದಿಟ್ಟ ಪ್ರಸ್ತಾವನೆಗಳಿಗೆ ಸರ್ಕಾರವು ಮಲತಾಯಿ ಧೋರಣೆಯನ್ನು ಅನುಸರಿಸುವುದರ ವಿರುದ್ಧ ತಮ್ಮ ಸಚಿವ ಸ್ಥಾನಕ್ಕೆ ರಾಜನಾಮೆ ನೀಡಿ ,ಕೊಲ್ಕತ್ತದ ಬ್ರಿಗೇಡ್ ಪೆರೇಡ್ ಮೈದಾನದಲ್ಲಿ ನಡೆಯುವ ರಾಲಿಯಲ್ಲಿ ಭಾಗವಹಿಸಿ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುವುದಾಗಿ ಘೋಷಿಸಿದರು.[೭] ೧೯೯೩ರಲ್ಲಿ ಅವರನ್ನು ತಮ್ಮ ಖಾತೆಗಳಿಂದ ಉಚ್ಛಾಟಿಸಲಾಯಿತು. ೧೯೯೬ಏಪ್ರಿಲ್‌ನಲ್ಲಿ , ಪಶ್ಚಿಮ ಬಂಗಾಳದಲ್ಲಿ ಸಿಪಿಐ-ಎಮ್ ಕಾಂಗ್ರೆಸ್‌ನ ಸೂತ್ರದ ಗೊಂಬೆಯಂತೆ ನಡೆದುಕೊಳ್ಳುತ್ತಿದೆ ಎಂದು ಆರೋಪಿಸಿದರು. ತಮ್ಮದು ಪ್ರತಿಭಟನೆಯ ಏಕೈಕ ಧ್ವನಿಯಾಗಿದ್ದು ," ಸ್ವಚ್ಛಂದ ಕಾಂಗ್ರೆಸ್" ತಮಗೆ ಅಗತ್ಯ ಎಂದು ಹೇಳಿದರು. ಕೊಲ್ಕತ್ತದ ಆಲಿಪೋರ್ ನಲ್ಲಿ ನಡೆದ ರಾಲಿಯಲ್ಲಿ ,ಮಮತಾ ಬ್ಯಾನರ್ಜಿಯವರು ತಮ್ಮ ಕೊರಳಿನ ಸುತ್ತ ಕಪ್ಪು ಶಾಲನ್ನು ಸುತ್ತಿಕೊಂಡು ಅದರಿಂದ ನೇಣು ಬಿಗಿದುಕೊಳ್ಳುವುದಾಗಿ ಬೆದರಿಕೆಯೊಡ್ಡಿದರು.[೮] ಜುಲೈ ೨೦೦೬ರಲ್ಲಿ , ಬ್ಯಾನರ್ಜಿಯವರು ತಾವು ಸರ್ಕಾರದ ಒಂದು ಭಾಗವಾಗಿದ್ದರೂ ಸಹ ಪೆಟ್ರೋಲಿಯಂ ಬೆಲೆ ಏರಿಕೆಯನ್ನು ಪ್ರತಿಭಟಿಸಿ ಲೋಕಸಭೆಯ ಎದುರು ಧರಣಿ ಕುಳಿತರು. ಅದೇ ಸಮಯದಲ್ಲಿ ಅವರು ಸಂಸದರಾದ ಅಮರ್ ಸಿಂಗ್‌ರವರ ಕೊರಳ ಪಟ್ಟಿಯನ್ನು ಹಿಡಿದು ಸಂಸತ್ತಿನ ಎದುರಲ್ಲೇ ಅವರನ್ನು ಎಳೆದರು. ೧೯೯೭ ಫೆಬ್ರವರಿಯಲ್ಲಿ ಲೋಕಸಭೆಯಲ್ಲಿ ರೈಲ್ವೆ ಬಜೆಟ್ ಅನ್ನು ಮಂಡಿಸುವ ಸಮಯದಲ್ಲಿ, ರೈಲ್ವೆ ಮಂತ್ರಿಯಾದ ರಾಮ್ ವಿಲಾಸ್ ಪಾಸ್ವಾನ್‌ರವರು ಪಶ್ಚಿಮ ಬಂಗಾಳವನ್ನು ಕಡೆಗಣಿಸಿದರೆಂಬ ಕಾರಣಕ್ಕಾಗಿ ಮಮತಾ ಬ್ಯಾನರ್ಜಿಯವರು ತಮ್ಮ ಮೆಲು ಹೊದಿಕೆಯನ್ನು ಅವರ ಮೇಲೆ ಎಸೆದು, ತಾವು ರಾಜಿನಾಮೆ ನೀಡುವುದಾಗಿ ಘೋಷಿಸಿದರು. ಆದರೆ ಸಭಾಪತಿಯಾದ ಪಿ.ಎ ಸಾಂಗ್ಮಾರವರು ಅವರ ರಾಜಿನಾಮೆಯನ್ನು ನಿರಾಕರಿಸಿದ್ದಲ್ಲದೆ ಕ್ಷಮೆ ಕೇಳುವಂತೆ ಕೋರಿದರು. ನಂತರ ಸಂತೋಷ ಮೋಹನ್ ದೇಬ್‌ರವರ ಮಧ್ಯಸ್ಥಿಕೆಯಲ್ಲಿ ಪುನಃ ವಾಪಾಸಾದರು.

ತೃಣಮೂಲ ಕಾಂಗ್ರೆಸ್ಸಂಪಾದಿಸಿ

 
ತೃಣಮೂಲ ಕಾಂಗ್ರೆಸ್‌ನ ಬಾವುಟ

೧೯೯೭ರಲ್ಲಿ ಮಮತಾ ಬ್ಯಾನರ್ಜಿಯವರು ಪಶ್ಚಿಮ ಬಂಗಾಳದ ಕಾಂಗ್ರೆಸ್‌ನಿಂದ ಹೊರ ಬಂದು ಅಖಿಲ ಭಾರತ ತೃಣಮೂಲ ಕಾಂಗ್ರೆಸ್‌ ಅನ್ನು ಸ್ಥಾಪಿಸಿದರು ಇದು ಶೀಘ್ರದಲ್ಲೇ ರಾಜ್ಯದಲ್ಲಿ ದೀರ್ಘಕಾಲದಿಂದಲೂ ಆಡಳಿತದಲ್ಲಿದ್ದ ಕಮ್ಯುನಿಸ್ಟ್ ಸರ್ಕಾರದ ಪ್ರಪ್ರಥಮ ವಿರೋಧಿ ಪಕ್ಷವಾಗಿ ಹೊರಹೊಮ್ಮಿತು. ೧೯೯೮ ಡಿಸೆಂಬರ್ ೧೧ರಂದು ಸಮಾಜವಾದಿ ಪಕ್ಷದ ಸಂಸದರಾದ ದರೋಗಾ ಪ್ರಸಾದ್ ಸರೊಜ್‌ರವರು ಮಹಿಳಾ ಮೀಸಲಾತಿ ಮಸೂದೆಯನ್ನು ವಿರೋಧಿಸಿದ್ದರಿಂದ ಬ್ಯಾನರ್ಜಿಯವರು ವಿವಾದಾತ್ಮಕವಾಗಿ ಅವರ ಕೊರಳು ಪಟ್ಟಿ ಹಿಡಿದು ಲೋಕಸಭೆಯಿಂದ ಹೊರಕ್ಕೆ ಎಳೆದು ಹಾಕಿದ್ದರು.[೯]

೧೯೯೯ರಲ್ಲಿ ಬಿ.ಜೆ.ಪಿ.- ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಮೈತ್ರಿ (ಎನ್‌ಡಿಎ) ಸರ್ಕಾರವನ್ನು ಸೇರಿಕೊಂಡರು . ನಂತರ ಅವರಿಗೆ ರೈಲ್ವೆ ಖಾತೆಯನ್ನು ನೀಡಲಾಯಿತು.

ರೈಲ್ವೆ ಮಂತ್ರಿಯಾಗಿ ಮೊದಲ ಅವಧಿಸಂಪಾದಿಸಿ

೨೦೦೦ರಲ್ಲಿ ಮಮತಾ ಬ್ಯಾನರ್ಜಿಯವರು ತಮ್ಮ ಮೊದಲನೇ ರೈಲ್ವೇ ಬಜೆಟ್ ಅನ್ನು ಮಂಡಿಸಿದರು. ಇದರಲ್ಲಿ ತಮ್ಮ ತವರು ರಾಜ್ಯವಾದ ಪಶ್ಚಿಮ ಬಂಗಾಳಕ್ಕೆ ನೀಡಿದ ಹಲವಾರು ಆಶ್ವಾಸನೆಗಳನ್ನು ಪೂರೈಸಿದರು.[೧೦] ಅವರು ಪರಿಚಯಿಸಿದ ರೈಲುಗಳು, ಎರಡುವಾರಕ್ಕೊಮ್ಮೆ ನವ ದೆಹಲಿ-ಸೆಲ್ಡಾಃ ರಾಜಧಾನಿ ಎಕ್ಸ್‌ಪ್ರೆಸ್ ಟ್ರೈನ್ ಹಾಗೂ ನಾಲ್ಕು ಎಕ್ಸ್‌ಪ್ರೆಸ್ ರೈಲುಗಳು ಪಶ್ಚಿಮ ಬಂಗಾಳದ ಹಲವಾರು ಮಾರ್ಗಗಳಲ್ಲಿ, ಅವೆಂದರೆ ಹೌರಾಹ್-ಪುರುಲಿಯಾ ಎಕ್ಸ್‌ಪ್ರೆಸ್, ಸೆಲ್ಡಾಹ್-ನ್ಯೂ ಜಲ್ಪೈಗುರಿ ಎಕ್ಸ್‌ಪ್ರೆಸ್, ಶಾಲಿಮಾರ್-ಬಂಕುರ ಎಕ್ಸ್‌ಪ್ರೆಸ್ ಹಾಗೂ ಸೆಲ್ಡಾಹ್-ಅಮೃತಸರ ಅತಿವೇಗದ ಎಕ್ಸ್‌ಪ್ರೆಸ್ (ವಾರಕ್ಕೊಮ್ಮೆ).[೧೦] ಪುಣೆ-ಹೌರಾ ಅಜಾದ್ ಹಿಂದ್ ಎಕ್ಸ್‌ಪ್ರೆಸ್‌ನ ಸೇವೆಯನ್ನು ವೃದ್ಧಿಗೊಳಿಸಿದ್ದಲ್ಲದೇ, ಕನಿಷ್ಠ ಮೂರು ರೈಲ್ವೆ ಸೇವೆಗಳನ್ನು ವಿಸ್ತರಿಸುವಲ್ಲಿ ಯಶಸ್ವಿಯಾದರು. ಅವರ ಸಂಕ್ಷಿಪ್ತ ಅಧಿಕಾರಾವಧಿಯಲ್ಲಿ ದಿಘಾ-ಹೌರಾ ಎಕ್ಸ್ ಪ್ರೆಸ್‌ ಸೇವೆಯೂ ಪ್ರಮುಖವಾದದು.[೧೧]

ಡಾರ್ಜಿಲಿಂಗ್- ಹಿಮಾಲಯ ವಲಯದಲ್ಲಿ ಎರಡು ಹೆಚ್ಚುವರಿ ರೈಲುಗಳನ್ನು ಬಿಡುವುದರ ಮೂಲಕ ಪ್ರವಾಸೋದ್ಯಮದ ಬೆಳವಣಿಗೆಗೆ ಒತ್ತು ಕೊಟ್ಟರು. ಇದರ ಪ್ರಸ್ತಾವನೆಯನ್ನು ಭಾರತೀಯ ರೈಲ್ವೆ ಮತ್ತು ಪ್ರವಾಸೋದ್ಯಮ ಕಾರ್ಪೊರೇಶನ್ ನಿಗಮದ ಮುಂದಿಟ್ಟರು. ಬಾಂಗ್ಲಾದೇಶ ಮತ್ತುನೇಪಾಳ ಗಳ ನಡುವೆ ರೈಲು ಸಂಪರ್ಕವನ್ನು ಪುನರ್ ಜಾರಿಗೊಳಿಸುವುದರ ಮೂಲಕ ಟ್ರಾನ್ಸ್ -ಏಷ್ಯಿಯನ್ ರೈಲು ಮಾರ್ಗದಲ್ಲಿ ಭಾರತ ದೇಶವು ಪ್ರಮುಖ ಪಾತ್ರ ವಹಿಸಬೇಕೆಂದು ಅವರು ಅಭಿಪ್ರಾಯಪಟ್ಟರು. ೨೦೦೦-೨೦೦೧ನೇ ಆರ್ಥಿಕ ವರ್ಷದಲ್ಲಿ ಅವರು ೧೯ ನೂತನ ರೈಲುಗಳನ್ನು ಜಾರಿಗೆ ತಂದರು.[೧೧]

ಮಮತಾ ಅವರ ಧೈರ್ಯ ಮತ್ತು ತ್ಯಾಗಸಂಪಾದಿಸಿ

 • 2021ರ ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗೂ ಮುನ್ನ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷಕ್ಕೆ ಸೇರ್ಪಡೆಗೊಂಡಿರುವ ಬಿಜೆಪಿ ಮಾಜಿ ನಾಯಕ ಯಶವಂತ ಸಿನ್ಹಾ ಅವರು, 1999 ರಲ್ಲಿ ಭಯೋತ್ಪಾದಕರಿಂದ ಕಂದಹಾರ್ ವಿಮಾನ ಹೈಜಾಕ್ ಸಂದರ್ಭದಲ್ಲಿ ಮಮತಾ ಬ್ಯಾನರ್ಜಿ ತೋರಿದ ಧೈರ್ಯವನ್ನು ಸ್ಮರಿಸಿದರು. 1999ರಲ್ಲಿ ಡಿಸೆಂಬರ್ 24ರಂದು ಏರ್ ಇಂಡಿಯಾ ವಿಮಾನವನ್ನು ಭಯೋತ್ಪಾದಕರು ಅಪಹರಿಸಿದ್ದರು.
'ನಾನು ನಿಮಗೆಲ್ಲರಿಗೂ ಒಂದು ವಿಷಯ ಹೇಳಲು ಇಷ್ಟಪಡುತ್ತೇನೆ. ಏರ್ ಇಂಡಿಯಾ ವಿಮಾನವನ್ನು ಹೈಜಾಕ್ ಮಾಡಿ ಅಪಘಾನಿಸ್ತಾನದ ಕಂದಹಾರಕ್ಕೆ ಕೊಂಡೊಯ್ಯುವ ವೇಳೆಯಲ್ಲಿ ನಾವು ಕ್ಯಾಬಿನೆಟ್ ಸಭೆಯನ್ನು ನಡೆಸುತ್ತಿದ್ದೆವು. ಈ ಸಂದರ್ಭದಲ್ಲಿ ಮಮತಾ ಅವರು ಭಾರತೀಯ ಪ್ರಯಾಣಿಕರ ಬಿಡುಗಡೆಗಾಗಿ ಸ್ವತ: ತಾವೇ ಒತ್ತೆಯಾಳಾಗಿ ಹೋಗಲು ಬಯಸಿದ್ದರು' ಎಂದು ಯಶವಂತ ಸಿನ್ಹಾ ನೆನಪಿಸಿಕೊಂಡಿದ್ದಾರೆ.'
 • 'ಮಮತಾ ಮೊದಲಿನಿಂದಲೂ ಹೋರಾಟಗಾರ್ತಿ. ಪ್ರಾಣದ ಭಯ ಆಕೆಗಿಲ್ಲ,' ಎಂದು ಬಂಗಾಳ ಮುಖ್ಯಮಂತ್ರಿಯ ಧೈರ್ಯವನ್ನು ಯಶವಂತ ಸಿನ್ಹಾ ಅವರು ಮೆಚ್ಚಿದರು. ಕಂದಹಾರ ವಿಮಾನ ಹೈಜಾಕ್ ಪ್ರಕರಣದ ವೇಳೆ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಸಂಪುಟದಲ್ಲಿ ಯಶವಂತ ಸಿನ್ಹಾ ಕೇಂದ್ರ ಹಣಕಾಸು ಸಚಿವರಾಗಿದ್ದರು. ಹಾಗೆಯೇ ಮಮತಾ ಬ್ಯಾನರ್ಜಿ ರೈಲ್ವೆ ಸಚಿವೆಯಾಗಿ ಸೇವೆ ಸಲ್ಲಿಸಿದ್ದರು. ಏರ್ ಇಂಡಿಯಾದ ಐಸಿ 814 ವಿಮಾನವನ್ನು ಉಗ್ರರು ಅಪಹರಿಸಿದ್ದರು. ಬಳಿಕ ಮೂವರು ಉಗ್ರರನ್ನು ಜೈಲಿನಿಂದ ಬಿಡುಗಡೆಗೊಳಿಸಿದ ಬಳಿಕ ಭಾರತೀಯ ಪ್ರಯಾಣಿಕರನ್ನು ಬಿಡುಗಡೆ ಮಾಡಲಾಗಿತ್ತು.[೧೨]

ಎನ್‌ಡಿಎ ಜೊತೆ ವಿಭಜನೆಸಂಪಾದಿಸಿ

೨೦೦೧ರ ಆರಂಭದಲ್ಲಿ , ಬಿ.ಜೆ.ಪಿ ವಿರುದ್ಧ ಆಪಾದನೆಗಳನ್ನು ಮಾಡಿ, ಎನ್‌ಡಿಎ ಸಚಿವ ಸಂಪುಟದಿಂದ ಹೊರನಡೆದರು.೨೦೦೧ರ ಪಶ್ಚಿಮ ಬಂಗಾಳ'ದ ಚುನಾವಣೆಗಳಲ್ಲಿ ಕಮ್ಯುನಿಸ್ಟ್ ಸರ್ಕಾರದಲ್ಲಿ ತಮ್ಮ ಸ್ಥಾನವನ್ನು ಕಳೆದು ಕೊಳ್ಳುತ್ತಾರೆ ಎಂಬ ಊಹಾಪೋಹಗಳ ನಡುವೆಯೂ ಕಾಂಗ್ರೆಸ್‌ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡರು. ಜನವರಿ ೨೦೦೪ರಂದುಕಲ್ಲಿದ್ದಲು ಹಾಗೂ ಗಣಿ ಖಾತೆಗಳನ್ನು ಪಡೆಯುವುದರ ಮೂಲಕ ಸಚಿವ ಸಂಪುಟಕ್ಕೆ ಹಿಂದಿರುಗಿ ೨೦೦೪ರ ಚುನಾವಣೆಗಳವರೆಗೂ ಅದೇ ಖಾತೆಯಲ್ಲಿ ಮುಂದುವರೆದರು. ನಂತರದ ಚುನಾವಣೆಯಲ್ಲಿ ಪಶ್ಚಿಮ ಬಂಗಾಳದಿಂದ ಗೆದ್ದ ಏಕೈಕ ತೃಣಮೂಲ ಕಾಂಗ್ರೆಸ್‌ ಸಂಸದರು ಎಂಬ ಗೌರವಕ್ಕೆ ಪಾತ್ರರಾದರು.

೨೦೦೫ ಅಕ್ಟೋಬರ್ ೨೦ರಂದು ಪಶ್ಚಿಮ ಬಂಗಾಳದ ಬುದ್ದದೇವ್ ಭಟ್ಟಾಚಾರ್ಯ ಸರ್ಕಾರದ ಕೈಗಾರೀಕರಣ ನೀತಿಯ ವಿರುದ್ಧ ಪ್ರತಿಭಟಿಸಿದರು. ಇಂಡೋನೇಷಿಯಾ ಮೂಲದ ಸಾಲಿಮ್ ಗ್ರೂಪ್‌ನ ಸಿಇಒ ಆದ ಬೆನ್ನಿ ಸಾಂಟೋಸೊ ಪಶ್ಚಿಮ ಬಂಗಾಳದಲ್ಲಿ ದೊಡ್ಡ ಪ್ರಮಾಣದಲ್ಲಿ ಬಂಡವಾಳವನ್ನು ಹೂಡಿದ್ದರು. ವ್ಯಾಪಕ ಪ್ರತಿಭಟನೆಯ ನಡುವೆಯೂ ಪಶ್ಚಿಮ ಬಂಗಾಳ ಸರ್ಕಾರವು ಹೌರಾದಲ್ಲಿ ಒಂದು ಸಾಗುವಳಿ ಜಮೀನನ್ನು ನೀಡಿತ್ತು. ಧಾರಾಕಾರವಾಗಿ ಸುರಿಯುತ್ತಿರುವ ಮಳೆಯ ನಡುವೆಯೂ ಮಮತಾ ಮತ್ತು ತೃಣಮೂಲ ಕಾಂಗ್ರೆಸ್‌‌ನ ಇತರ ಸದಸ್ಯರು ಸಾಂಟೋಸೊರವರ ಆಗಮನಕ್ಕಾಗಿ ತಾಜ್ ಹೋಟೆಲ್ ನ ಬಳಿ ಕಾಯುತ್ತಾ ಇದ್ದರು. ನಂತರ , ಅವರು ಮತ್ತು ಅವರ ಬೆಂಬಲಿಗರು ಸಾಂಟಾಸೋ ಪಡೆಯನ್ನು ಸೇರಿಕೊಂಡರು. ಸಾಂಟಾಸೊ ನಿಗಧಿತ ಅವಧಿಗಿಂತ ಮೂರು ಗಂಟೆ ಮುಂಚೆ ಆಗಮಿಸಿದ್ದರಿಂದ ಪೂರ್ವ ಯೋಜಿತ " ಕಪ್ಪು ಬಾವುಟ"ದ ಪ್ರತಿಭಟನೆಯನ್ನು ತಡೆಯುವಲ್ಲಿ ಸರ್ಕಾರ ಯಶಸ್ವಿಯಾಯಿತು.[೧೩][೧೪]

೨೦೦೫ರಲ್ಲಿ ಮಮತಾ ಬಾನರ್ಜಿಯವರು ತಮ್ಮ ಪಕ್ಷ ಮುನ್ಸಿಪಾಲ್ ಕಾರ್ಪೊರೇಶನ್ ಮೇಲಿನ ಹತೋಟಿಯನ್ನು ಕಳೆದುಕೊಂಡು ಮತ್ತು ತಮ್ಮ ಪಕ್ಷದ ಮೇಯರ್ ಸ್ಥಾನವನ್ನು ಕಳೆದುಕೊಂಡಿದ್ದರಿಂದ ಅಪಾರ ಹಿನ್ನಡೆಯನ್ನು ಅನುಭವಿಸಿದರು. ೨೦೦೬ರಲ್ಲಿ, ಪಶ್ಚಿಮ ಬಂಗಾಳದ ವಿಧಾನ ಸಭಾ ಚುನಾವಣೆಯಲ್ಲಿ, ತನ್ನ ಪ್ರಸ್ತುತ ಸದಸ್ಯರ ಅರ್ಧಕ್ಕಿಂತಲೂ ಹೆಚ್ಚು ಸ್ಥಾನಗಳನ್ನು ಕಳೆದುಕೊಳ್ಳುವುದರ ಮೂಲಕ ತೃಣಮೂಲ ಕಾಂಗ್ರೆಸ್‌ ಅಪಾರ ಸೋಲನ್ನು ಅನುಭವಿಸಿತು.

೪ ಆಗಸ್ಟ್ ೨೦೦೬ರಂದು ಲೋಕಸಭೆಯಲ್ಲಿ ತಮ್ಮ ರಾಜಿನಾಮೆ ಪತ್ರವನ್ನು ಉಪಸಭಾಪತಿ ಚರಣ್ ಜಿತ್ ಸಿಂಗ್ ಅಟ್ವಾಲ್ ಮೇಲೆ ಬಿಸಾಡಿದ್ದರು. ಪಶ್ಚಿಮ ಬಂಗಾಳದಲ್ಲಿ ಬಾಂಗ್ಲಾ ದೇಶದವರ ಅನೈತಿಕ ಶೋಷಣೆಯಿಂದಾಗಿ ಕಾರ್ಯಕಲಾಪಗಳನ್ನು ನಿಲ್ಲಿಸುವಂತೆ ಕೋರಿದ್ದನ್ನು ಸಭಾಪತಿಯವರಾದ ಸೋಮನಾಥ ಚಟರ್ಜಿಯವರು ನಿರಾಕರಿಸಿದ್ದರಿಂದ ಈ ಘಟನೆಗೆ ಕಾರಣವಾಯಿತು. ಆದರೆ ಸರಿಯಾದ ನಮೂನೆಯಲ್ಲಿ ಈ ಮನವಿಯು ಇಲ್ಲದೇ ಇದ್ದದರಿಂದ ಸಭಾಪತಿಯವರು ಇದನ್ನು ನಿರಾಕರಿಸಿದರು.[೧೫][೧೬]

ನವಂಬರ್ ೨೦೦೬ರಲ್ಲಿ, ಮಮತಾ ಬ್ಯಾನರ್ಜಿಯವರು ಟಾಟಾ ಮೋಟಾರ್ ಕಾರ್ ಯೋಜನೆಯ ವಿರುದ್ಧ ನಡೆಯುವ ರಾಲಿಯಲ್ಲಿ ಪಾಲ್ಗೊಳ್ಳಲು ಸಿಂಗೂರ್‌ಗೆ ಹೋಗುವಾಗ ಅವರನ್ನು ಬಲವಂತವಾಗಿ ತಡೆಯಲಾಯಿತು. ಮಮತಾರವರು ಪಶ್ಚಿಮ ಬಂಗಾಳದ ವಿಧಾನ ಸಭೆಯನ್ನು ತಲುಪಿ ಅಲ್ಲಿ ಪ್ರತಿಭಟನೆಯನ್ನು ನಡೆಸಿದರು. ವಿಧಾನ ಸಭೆಯಲ್ಲಿ ಒಂದು ಪತ್ರಿಕಾ ಗೋಷ್ಠಿಯೊಂದಿಗೆ ಮಾತನಾಡಿದ ಅವರು ಶುಕ್ರವಾರ ತಮ್ಮ ಪಕ್ಷದಿಂದ ೧೨ ಗಂಟೆಗಳ ಕಾಲ ಸ್ಥಗಿತಗೊಳಿಸುವುದಾಗಿ ಹೇಳಿದರು.[೧೭] ತೃಣ ಮೂಲ ಕಾಂಗ್ರೆಸ್‌‌ನ ಎಲ್ಲಾ ಶಾಸಕರು ಪಶ್ಚಿಮ ಬಂಗಾಳದ ವಿಧಾನ ಸಭೆಯಲ್ಲಿ ಪೀಟೋಪಕರಣಗಳನ್ನು ಹಾಗೂ ಮೈಕ್ರೋ ಪೋನ್ ಗಳನ್ನು ಹಾನಿಗೊಳಿಸುವುದರ ಮೂಲಕ ಪ್ರತಿಭಟನೆಯನ್ನು ನಡೆಸಿದರು.[೧೭][೧೮] ೧೪ ಡಿಸೆಂಬರ್ ೨೦೦೬ ರಂದು ಒಂದು ಪ್ರಮುಖ ಮುಷ್ಕರಕ್ಕೆ ಕರೆ ಕೊಡಲಾಯಿತು.

೨೦೦೯ರ ಲೋಕಸಭಾ ಚುನಾವಣೆಯಲ್ಲಿ ಟಿಎಮ್‌ಸಿ, ಯುಪಿಎನೊಂದಿಗೆ ಮೈತ್ರಿ ಮಾಡಿಕೊಂಡಿತು. ಪಶ್ಚಿಮ ಬಂಗಾಳದ ಜನತೆ ಎಡ ಪಕ್ಷಗಳಿಗೆ ಹೆಚ್ಚಿನ ಬಹುಮತವನ್ನು ತಂದು ಕೊಡುವುದರ ಮೂಲಕ ೨೬ ಸ್ಥಾನಗಳೊಂದಿಗೆಕಾಂಗ್ರೆಸ್‌-ಟಿಎಮ್‌ಸಿ ಆಯ್ಕೆ ಮಾಡಿತು. ಇದರಿಂದ ಮಮತಾ ಬ್ಯಾನರ್ಜಿಯವರು ಮುಂದಿನ 5 ವರ್ಷಗಳವರೆಗೂ ರೈಲ್ವೆ ಮಂತ್ರಿಯಾಗಿ ಮುಂದುವರೆಯಲು ಸಾಧ್ಯವಾಯಿತು.

ಪಶ್ಚಿಮ ಬಂಗಾಳದ 2010ರ ಮುನ್ಸಿಪಾಲ್ ಚುನಾವಣೆಯಲ್ಲಿ 62 ಸ್ಥಾನಗಳ ಅಂತರದಿಂದ ಟಿಎಮ್‌ಸಿಯು ಕೊಲ್ಕತ್ತಾ ಕಾರ್ಪೊರೇಶನ್ ಅನ್ನು ಗೆದ್ದು ಕೊಂಡಿತು. ಇಷ್ಟೇ ಅಲ್ಲದೆ 16-9 ಸ್ಥಾನಗಳ ಅಂತರದಲ್ಲಿ ಬಿದಾನ್ ನಗರ ಕಾರ್ಪೊರೆಶನ್ ನ್ನು ಗೆದ್ದು ಕೊಂಡಿತು. ಕೊಲ್ಕತ್ತ ಮುನ್ಸಿಪಾಲಿಟಿ ಚುನಾವಣೆಯೊಂದರಲ್ಲಿ ಅಧಿಕ ಸ್ಥಾನಗಳನ್ನು ಗೆದ್ದುಕೊಂಡ ಏಕೈಕ ಪಕ್ಷವಾಗಿ ಟಿಎಮ್‌ಸಿ ದಾಖಲೆಯನ್ನು ನಿರ್ಮಿಸಿತು.

ನಂದಿಗ್ರಾಮ ಪ್ರತಿಭಟನೆಗಳುಸಂಪಾದಿಸಿ

ಪಶ್ಚಿಮ ಬಂಗಾಳ ಸರ್ಕಾರವು ಉದ್ಯೋಗಾವಕಾಶಗಳನ್ನು ನಿರ್ಮಿಸುವುದಕ್ಕೋಸ್ಕರ ನಂದಿಗ್ರಾಮ್ ನಲ್ಲಿ ಒಂದು ರಾಸಾಯನಿಕ ಘಟಕವನ್ನು ಆರಂಭಿಸಲು ಮುಂದಾಯಿತು. ತೃಣ ಮೂಲ ಕಾಂಗ್ರೆಸ್‌ ಹಾಗೂ ಮಾಧ್ಯಮಗಳು ಹಾಲ್ದಿಯಾ ಅಭಿವೃದ್ಧಿ ಪ್ರಾಧಿಕಾರ ದ ಮುಖಂಡರಾದ ಶ್ರೀ ಲಕ್ಷ್ಮಣ್ ಸೇತ್ ನಂದಿಗ್ರಾಮ್‌ನಲ್ಲಿ ನೋಟೀಸನ್ನು ಕೊಡುವುದರ ಮೂಲಕ ಭೂಕಬಳಿಕೆಯನ್ನು ಮಾಡುತ್ತಿದ್ದಾರೆ ಎಂಬ ವದಂತಿಯನ್ನು ಹಬ್ಬಿಸಿದವು. ಅಂತಹ ಯಾವುದೇ ಎಚ್ಚರಿಕೆಯನ್ನು ಕೊಟ್ಟಿರುವುದಕ್ಕೆ ಸ್ಪಷ್ಟವಾದ ಮಾಹಿತಿ ಇರಲಿಲ್ಲ.[೧೯][೨೦] ತೃಣ ಮೂಲ ಕಾಂಗ್ರೆಸ್‌ ಮುತ್ತಿಗೆ ಹಾಕುವುದಕ್ಕೆ ಪ್ರಾರಂಭಿಸಿತು. ಅಂತಹ ನೋಟೀಸ್‌ನ್ನು ಹರಿದು ಹಾಕುವಂತೆ ಮುಖ್ಯಮಂತ್ರಿಯವರಿಗೆ ಮನವಿ ಮಾಡಲಾಯಿತು.[೨೧] ಮಾರ್ಚ್ ೧೪ರಂದು ಗ್ರಾಮಸ್ಥರು ಪೋಲಿಸರ ಮೇಲೆ ಕಲ್ಲು ತೂರಾಟ ನಡೆಸಿದರು, ಇದಕ್ಕೆ ಪ್ರತಿಯಾಗಿ ಪೋಲಿಸ್ ಪಡೆಯವರು ಗುಂಡಿನ ದಾಳಿ ನಡೆಸಲು ಪ್ರಾರಂಬಿಸಿದರು. ಪೋಲಿಸಿರ ಗುಂಡಿನ ದಾಳಿಯಲ್ಲಿ ೧೪ ಗ್ರಾಮಸ್ಥರು ಕೊಲ್ಲಲ್ಪಟ್ಟರು. ಆದರೆ ಸರ್ಕಾರೇತರ ಮೂಲಗಳ ಪ್ರಕಾರ ಈ ಸಾವಿನ ಸಂಖ್ಯೆ ಇನ್ನೂ ಹೆಚ್ಚಿರಬಹುದು ಎಂದು ಅಂದಾಜು ಮಾಡಲಾಗಿದೆ.[೨೨] ಈ ರಾಜಕೀಯ ಕಗ್ಗೊಲೆಯಿಂದಾಗಿ ಅನೇಕ ಜನಸಾಮಾನ್ಯರು ನಿರಾಶ್ರಿತರಾದರು.[೨೩] ಬುದ್ಧಿ ಜೀವಿಗಳು ಅತಿ ದೊಡ್ಡ ಸಂಖ್ಯೆಯಲ್ಲಿ ಬೀದಿಗಿಳಿದು ಪ್ರತಿಭಟನೆಯನ್ನು ನಡೆಸಿದರು. ಇದು ಸಿಪಿಐ(ಎಮ್) ಅಧಿಕಾರದ ಸರ್ಕಾರದ ವಿರುದ್ಧದ ಚಳುವಳಿಗೆ ಒಂದು ಹೊಸ ನಿರೀಕ್ಷೆ ಜನ್ಮ ತಾಳುವುದಕ್ಕೆ ಕಾರಣವಾಯಿತು.[೨೪][೨೫][೨೬] ಮಮತಾ ಬ್ಯಾನರ್ಜಿಯವರು ಭಾರತದ ಪ್ರಧಾನ ಮಂತ್ರಿಯವರಾದ ಮನಮೋಹನ್ ಸಿಂಗ್ ಹಾಗೂ ಕೇಂದ್ರ ಗೃಹ ಸಚಿವರಾದ ಶಿವರಾಜ್ ಪಾಟೇಲ್ ರವರಿಗೆ ಪತ್ರ ಬರೆದು ಸಿಪಿಐ(ಎಮ್) ನಿಂದ ನಂದಿಗ್ರಾಮದಲ್ಲಿ ಉಂಟಾಗುತ್ತಿರುವ ಹಿಂಸಾ ಕೃತ್ಯಗಳನ್ನು ನಿಲ್ಲಿಸಬೇಕೆಂದು ಮನವಿ ಮಾಡಿಕೊಂಡರು. ಮಾವೋವಾದಿ ಮುಖಂಡರಾದ ಕಿಶನ್‌ಜಿ ತಮ್ಮ ಜನರು ತೃಣಮೂಲ ಕಾಂಗ್ರೆಸ್‌ ಕಾರ್ಯಕರ್ತರಿಗೆ ಸಹಾಯ ಮಾಡಿದ್ದಾಗಿ ಒಪ್ಪಿಕೊಂಡರು. ಆದರೆ, ಟಿಎಮ್‌ಸಿ ಮುಖಂಡರು ಕಿಶಾನ್‌ಜಿ ಯವರೊಂದಿಗಿನ ಒಪ್ಪಂದವನ್ನು ಎಂದೂ ವ್ಯಕ್ತ ಪಡಿಸಲಿಲ್ಲ.[೨೭][೨೮][೨೯] ರಾಜ್ಯ ಸರ್ಕಾರವು ಪ್ರಸ್ತಾವಿತ ರಾಸಾಯನಿಕ ಘಟಕದ ಯೋಜನೆಯನ್ನು ಮುಂದೂಡುವ ತೀರ್ಮಾನವನ್ನು ತೆಗೆದುಕೊಂಡಾಗ ನಂದೊಗ್ರಾಮ್ ನಲ್ಲಿ ಈ ಉದ್ವೇಗ ಸಹಜ ಸ್ಥಿತಿಗೆ ಮರಳಿತು. ಇವೆಲ್ಲದರಿಂದ ಮಮತಾ ಬ್ಯಾನರ್ಜಿಯವರು ದೊಡ್ಡ ರಾಜಕೀಯ ಲಾಭವನ್ನು ಪಡೆದರು.[೩೦]

೨೦೦೯ ಭಾರತೀಯ ಚುನಾವಣೆಸಂಪಾದಿಸಿ

೨೦೦೯ರ ಲೋಕಸಭಾ ಚುನಾವಣೆಯಲ್ಲಿ ,೧೯ ಸಂಸದ ಸ್ಥಾನಗಳನ್ನು ತನ್ನ ತಕ್ಕೆಗೆ ಹಾಕಿಕೊಳ್ಳುವುದರ ಮೂಲಕ ತೃಣಮೂಲ ಕಾಂಗ್ರೆಸ್‌ ಅತ್ಯುತ್ತಮ ಸಾಧನೆಯನ್ನು ಮಾಡಿತು. ಇದರಲ್ಲಿ ೫ ಮಹಿಳಾ ಸ್ಥಾನಗಳನ್ನು (ಅವರನ್ನೂ ಒಳಗೊಂಡಂತೆ) ಪಡೆದಿದ್ದು, ಮಹಿಳಾ ಮೀಸಲಾತಿ ಮಸೂದೆಯ ಬಗ್ಗೆ ತಮಗಿದ್ದ ನಂಬಿಕೆಯನ್ನು ಸಾಬೀತು ಪಡಿಸಿತು. ಇದರ ಮೈತ್ರಿ ಪಕ್ಷಗಳಾದ ಕಾಂಗ್ರೆಸ್‌ ಮತ್ತು ಎಸ್‌ಯುಸಿಐ ಕ್ರಮವಾಗಿ ೬ ಮತ್ತು ೧ ಸಂಸದ ಸ್ಥಾನಗಳನ್ನು ಪಡೆದುಕೊಂಡಿತು. ಪಶ್ಚಿಮ ಬಂಗಾಳದಲ್ಲಿ ಎಡ ಪಂಥ ಪ್ರಾರಂಭವಾದಾಗಿನಿಂದಲೂ, ಇದು ಯಾವುದೇ ವಿರೋಧ ಪಕ್ಷದ ಅತ್ಯುತ್ತಮ ಸಾಧನೆಯಾಗಿದೆ. ಈ ದಿನದವರೆಗೂ ೧೯೮೪ರಲ್ಲಿ ಶ್ರೀಮತಿ ಇಂದಿರಾ ಗಾಂಧಿಯವರ ನಿಧನದ ಅನುಕಂಪದ ಮತಗಳಿಂದ ದೊರೆತ ಕಾಂಗ್ರೆಸ್‌‌ನ ೧೬ ಸ್ಥಾನಗಳ ಜಯ ಒಂದು ವಿರೋಧ ಪಕ್ಷದ ಅತ್ಯುತ್ತಮ ಸಾಧನೆಯಾಗಿದೆ.

ರೈಲ್ವೆ ಮಂತ್ರಿ, ಎರಡನೆಯ ಅವಧಿಸಂಪಾದಿಸಿ

೨೦೦೯ರಲ್ಲಿ ಮಮತಾ ಬ್ಯಾನರ್ಜಿಯವರು ಎರಡನೆ ಸಾರಿ ರೈಲ್ವೆ ಮಂತ್ರಿಯಾದರು. ಎರಡನೇ ಸಾರಿ ರೈಲ್ವೆಮಂತ್ರಿಯಾದ ನಂತರ ಮಮತಾ ಬ್ಯಾನರ್ಜಿಯವರು ೨೦೦೯ರ ರೈಲ್ವೆ ಬಜೆಟ್‌ನಲ್ಲಿ ಹಲವಾರು ವಿನೂತನ ಯೋಜನೆಗಳನ್ನು ಘೋಷಿಸಿದರು. ಇದು ಇಡೀ ರಾಷ್ಟ್ರಕ್ಕಾಗಿ ಅವರು ಅನೆಕ ಕ್ರಮಗಳನ್ನು ಕೈಗೊಂಡರೂ ಸಹ ತಮ್ಮ ತವರು ರಾಜ್ಯವಾದ ಪಶ್ಚಿಮ ಬಂಗಾಳದ ಕಡೆಗೆ ಅವರಿಗಿರುವ ಒಲವನ್ನು ಪ್ರತಿಬಿಂಬಿಸುವಂತಿತ್ತು. ಸುಮಾರು ೫೦ ನಿಲ್ದಾಣಗಳನ್ನುಅಂತರಾಷ್ಟ್ರೀಯ ಮಟ್ಟದ ಸೌಲಭ್ಯಗಳನ್ನು ಹೊಂದಿರುವ ವಿಶ್ವ ದರ್ಜೆಯ ನಿಲ್ದಾಣಗಳನ್ನಾಗಿ ಅಭಿವೃದ್ಧಿ ಪಡಿಸಲು ನಿರ್ಧರಿಸಿದರು. ಈ ನಿಲ್ದಾಣಗಳನ್ನು ವಿನೂತನ ಆರ್ಥಿಕ ವ್ಯವಸ್ಥೆ ಹಾಗೂ ಸಾರ್ವಜನಿಕ ಖಾಸಗಿ ಸಹಭಾಗಿತ್ವದ ವಿಧಾನದ ಮೂಲಕ ಅಭಿವೃದ್ಧಿ ಪಡಿಸುವುದಾಗಿ ತಿಳಿಸಿದರು. ಇದರೊಂದಿಗೆ ೩೭೫ ಕ್ಕಿಂತಲೂ ಹೆಚ್ಚು ರೈಲ್ವೆ ನಿಲ್ದಾಣಗಳನ್ನು ಆದರ್ಶ ನಿಲ್ದಾಣಗಳನ್ನಾಗಿ ಮಾಡುವುದಾಗಿ ಘೋಷಿಸಿದರು. ರೈಲ್ವೆ ನಿಲ್ದಾಣದ ಆವರಣದಲ್ಲಿ ಗ್ರಾಹಕರಿಗೆ ಅನುಕೂಲವಾಗುವಂತೆ ಶಾಪಿಂಗ್, ಉಪಹಾರ ಅಂಗಡಿಗಳು ಮತ್ತು ರೆಸ್ಟೋರೆಂಟ್ ಗಳು , ಪುಸ್ತಕ ಮಳಿಗೆಗಳು ಪಿಸಿಒ/ಎಸ್‍ಟಿಡಿ/ಐಎಸ್‌ಡಿ/ಫ್ಯಾಕ್ಸ್ ಬೂತ್‌ಗಳು, ಔಷಧಿಗಳು ಮತ್ತು ವಿಭಿನ್ನ ಸ್ಟೋರ್‌‍ಗಳು, ಹೋಟೆಲ್‌ಗಳು, ನೆಲಮಾಳಿಗೆ ನಿಲ್ದಾಣಗಳು ಇತ್ಯಾದಿಗಳ ನಿರ್ಮಾಣವನ್ನು ಮಾಡುವುದಾಗಿ ಘೋಷಿಸಿದರು. ಈ ಸಂಕೀರ್ಣಗಳನ್ನು ಸಾರ್ವಜನಿಕ -ಖಾಸಗಿ ಸಹಭಾಗಿತ್ವದಲ್ಲಿ ನಿರ್ಮಿಸುವುದಾಗಿ ತಿಳಿಸಿದರು. ಇದರೊಂದಿಗೆ, ಡಿ ದರ್ಜೆ ನೌಕರರ ಆರ್ಥಿಕ ಸ್ವಾತಂತ್ರವನ್ನು ಉತ್ತಮ ಪಡಿಸುವ ನಿಟ್ಟಿನಲ್ಲಿ ಅವರ ಹೆಣ್ಣು ಮಕ್ಕಳ ಉನ್ನತ ವ್ಯಾಸಂಗಕ್ಕಾಗಿ ವಿದ್ಯಾರ್ಥಿ ವೇತನವನ್ನು ನೀಡಲು ನಿರ್ಧರಿಸಿದರು. ಅವರು ರೈಲ್ವೆ ಜಮೀನಿನಲ್ಲಿ ಏಳು ನರ್ಸಿಂಗ್ ಕಾಲೇಜುಗಳನ್ನು ಆರಂಭಿಸುವ ಪ್ರಸ್ತಾವನೆಯನ್ನು ಮುಂದಿಟ್ಟರು.[೩೧] ಅಷ್ಟೇ ಅಲ್ಲದೆ ತಮ್ಮ ಬಜೆಟ್‌‍ನಲ್ಲಿ "ದುರೊಂತೊ"," ಯುವ" ಎಂಬ ನೂತನ ಪರಿಕಲ್ಪನೆಯನ್ನು ಜಾರಿಗೆ ತಂದರು. ಇಂದು ಭಾರತದ ರೈಲ್ವೆ ಸೇವೆಗಳಲ್ಲಿ "ದುರೊಂತೊ" ಅತ್ಯಂತ ವೇಗವಾದ ಸೇವೆಯಾಗಿದೆ.[೩೨]

ನೂಕು ನುಗ್ಗಲಿನಿಂದ ಉಂಟಾಗುವ ಸಮಸ್ಯೆಗಳಿಂದ ಮಹಿಳಾ ಪ್ರಯಾಣಿಕರಿಗಾಗುವ ತೊಂದರೆಗಳನ್ನು ನಿವಾರಿಸಲು ೧೯ ಜುಲೈನಲ್ಲಿ ಬಾಂದೇಲ್ ಹಾಗೂ ಹೌರಾಗಳ ನಡುವೆ ಮಹಿಳೆಯರಿಗಾಗಿ ವಿಶೇಷ ರೈಲನ್ನು ಪ್ರಾರಂಭಿಸಿದರು.[೩೩] ನಂತರ ಅವರು, ಮಹಿಳೆಯರಿಗಾಗಿ ಇನ್ನೂ ಹೆಚ್ಚಿನ ವಿಶೇಷ ರೈಲುಗಳನ್ನು ಆರಂಭಿಸಿದರು. ಉದಾ: ಕಲ್ಯಾಣಿ-ಸೀಲ್ದಾಃ ,ಪಾನ್ವೆಲ್-ಮುಂಬಯಿ ಸಿಎಸ್‌ಟಿ.[೩೪]

ಮಮತಾ ಬ್ಯಾನರ್ಜಿಯವರು ಸೆಪ್ಟಂಬರ್ ೧೮ರಂದು ಭಾರತದ ಅತ್ಯಂತ ವೇಗವಾದ ಹಾಗೂ ತಡೆರಹಿತ ರೈಲು, ದುರಾಂತೋ ಎಕ್ಸ್‌ಪ್ರೆಸ್‍ ಅನ್ನು ಸೀಲ್ದಾಃ ಮತ್ತು ನವದೆಹಲಿಯ ನಡುವೆ ಆರಂಭಿಸಿದರು.[೩೫] ಚೆನ್ನೈ ಮತ್ತು ನವದೆಹಲಿ ಮಧ್ಯೆ ಅತಿವೇಗದ ರೈಲಾದ ದುರಂತೋ ಎಕ್ಸ್‌ಪ್ರೆಸ್‌ನ್ನು ಸೆಪ್ಟಂಬರ್ ೨೧ರಲ್ಲಿ ಬಿಡಲಾಯಿತು. ಇಷ್ಟೇ ಅಲ್ಲದೆ ಅವರು ಕಾಶ್ಮೀರದ ಭಯೋತ್ಪಾದನಾ ಪ್ರದೇಶಗಳಲ್ಲೂ ರೈಲು ಮಾರ್ಗಗಳನ್ನು ವಿಸ್ತರಿಸಲು ಕ್ರಮಗಳನ್ನು ಕೈಗೊಂಡರು. ಅಕ್ಟೋಬರ್‌ನಲ್ಲಿ ಅನಂತ್ ನಾಗ್-ಖಾದಿಗುಂದ್ ರೈಲು ಮಾರ್ಗವನ್ನು ಆರಂಭಿಸಲಾಯಿತು.[೩೬]

೭ ಫೆಬ್ರವರಿ ೨೦೧೦ರಲ್ಲಿ, ಬ್ಯಾನರ್ಜಿಯವರು ಸುಮಾರು ಹತ್ತೊಂಬತ್ತು ನೂತನ ರೈಲು ಮಾರ್ಗಗಳನ್ನು ಆರಂಭಿಸಿದರು.[೩೭]ಭಾರತದ ಮಹಿಳೆಯರ ಮೇಲೆ ಪದೇ ಪದೇ ಉಂಟಾಗುವ ಲೈಂಗಿಕ ಶೋಷಣೆ ಹಾಗೂ ಲೈಂಗಿಕ ಹಲ್ಲೆಯನ್ನು ತಪ್ಪಿಸಲು ಮಹಿಳೆಯರಿಗಾಗಿಯೇ ಎಂಟು ಪ್ರತ್ಯೇಕ ರೈಲುಗಳನ್ನು ಆರಂಭಿಸಿದರು.[೩೮]

೨೦೨೧ ರ ವಿಧಾನಸಭೆ ಚುನಾವಣೆಯಲ್ಲಿಸಂಪಾದಿಸಿ

 • ಪಶ್ಚಿಮ ಬಂಗಾಳದ ವಿಧಾನಸಭೆಯ 294 ಸ್ಥಾನಗಳಿಗೆ ಚುನಾವಣೆ ಮಾರ್ಚ್ 27 ರಿಂದ 2021 ರ ಏಪ್ರಿಲ್ 20 ರವರೆಗೆ 8 ಹಂತಗಳಲ್ಲಿ ನಡೆಯಲಿದೆ. ಮಮತಾ ನಂದಿಗ್ರಾಮದ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿರುವದ್ದಾರೆ. ನಂದಿಗ್ರಾಮಕ್ಕೆ ಮಾರ್ಚ್ 10ರಂದು ಎರಡು ದಿನಗಳ ಭೇಟಿಯಲ್ಲಿದ್ದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು, ಚುನಾವಣಾ ಪ್ರಚಾರದ ಸಮಯದಲ್ಲಿ ಕೆಲವು ಅಪರಿಚಿತ ಜನರು ಅವರನ್ನು ಎಳೆದು ಕೆಡವಿ ಕಾರಿನ ಒಳಗೆ ತಳ್ಳಿ ತಳ್ಳಿಬಾಗಿಲು ಒತ್ತಿದ್ದರು. ಇದರಿಂದಾಗಿ ನಂದಿಗ್ರಾಮದ ರಸ್ತೆ ಮೂಲಕ ಕೋಲ್ಕತ್ತಾದ ಎಸ್ಎಸ್‌ಕೆಎಂ ಆಸ್ಪತ್ರೆಗೆ ಕರೆತರಲಾಗಿತ್ತು. ಆರಂಭಿಕ ವೈದ್ಯಕೀಯ ಪರೀಕ್ಷೆಯ ವರದಿಯ ಪ್ರಕಾರ, ಬ್ಯಾನರ್ಜಿ ಅವರ ಎಡ ಕಾಲು ಮತ್ತು ಪಾದದ ಮೇಲಿನ ಮೂಳೆಗಳಿಗೆ ತೀವ್ರವಾಗಿ ಗಾಯವಾಗಿತ್ತು ಮತ್ತು ಆಕೆಯ ಭುಜ, ಮುಂದೋಳು ಮತ್ತು ಕತ್ತಿನ ಮೇಲೆ ಮೂಗೇಟುಗಳು ಮತ್ತು ಗಾಯಗಳಾಗಿದ್ದವು ಎಂದು ವೈದ್ಯಕೀಯ ವರದಿ ತಿಳಿಸುತ್ತದೆ.. ಚಿಕಿತ್ಸೆಯ ಬಳಿಕ ಮಾರ್ಚ್ 12 ರಂದು ಮುಖ್ಯಮಂತ್ರಿಯನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಯಿತು. ಮುಖ್ಯ ಮಂತ್ರಿಯಾದ ಅವರ ರಾಜ್ಯ ಪೋಲಿಸರ ಝಡ್ ರಕ್ಷಣಾ ವ್ಯವಸ್ತೆಯನ್ನು ಚುನಾವಣಾ ಆಯೋಗ ನಿರಾಕರಿಸಿ ಅವರ ರಕ್ಷಣಾ ವ್ಯವಸ್ತೆಯನ್ನು ಚುನಾವಣಾ ಆಯೋಗ ವೇ ವಹಿಸಿಕೊಂಡಿತ್ತು.
ರಾಜ್ಯದ ಮುಖ್ಯಯಮಂತ್ರಿಗೆ ಧಾಳಿಯಿಂದ ತೀವ್ರ ಪೆಟ್ಟಾಗಿದ್ದರೂ - ಅದನ್ನು ಇಲ್ಲವೆಂದು ತಳ್ಳಿಹಾಕಿದ ಚುನಾವಣಾ ಆಯೋಗ
 • ಆದರೆ ಹಲ್ಲೆ ಆರೋಪದ ಬಳಿಕ ತೀವ್ರ ಗಅಯಗೊಂಡಿದ್ದು, 'ಆಸ್ಪತ್ರೆಗೆ ದಾಖಲಾಗಿದ್ದ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮೇಲೆ ದಾಳಿ ನಡೆದಿದೆ ಎಂಬ ವರದಿಯನ್ನು ಭಾರತದ ಚುನಾವಣಾ ಆಯೋಗ(ಇಸಿಐ)ವು ತಳ್ಳಿಹಾಕಿದೆ.' ಆಯೋಗ ನೇಮಕ ಮಾಡಿದ್ದ ಪಶ್ಚಿಮ ಬಂಗಾಳದ ಚುನಾವಣಾ ವೀಕ್ಷಕರು ಮತ್ತು ಮುಖ್ಯ ಕಾರ್ಯದರ್ಶಿಯ ವರದಿಯನ್ನು ಆಧರಿಸಿ ಚುನಾವಣಾ ಆಯೋಗ ಈ ನಿರ್ಧಾರ ಕೈಗೊಂಡಿದೆ ಎಂದು ಸುದ್ದಿ ಸಂಸ್ಥೆ ಎಎನ್‌ಐ ವರದಿ ಮಾಡಿದೆ.• [೩೯]
 • ಇದೇ ಸಂದರ್ಬದಲ್ಲಿ ಕೇಂದ್ರದ ಮಾಜಿ ಅರ್ಥ ಸಚಿವ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ ಪ್ರಮುಖ ಟೀಕಾಕಾರರಲ್ಲಿ ಒಬ್ಬರಾಗಿರುವ ಯಶವಂತ್ ಸಿನ್ಹಾ ಅವರು, ೧೩-೩-೨೦೨೧ ರ ಶನಿವಾರ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಗೆ ಸೇರ್ಪಡೆಯಾದರು. 2024ರಲ್ಲಿ ಮೋದಿ ನೇತೃತ್ವದ ಸರ್ಕಾರವನ್ನು ಸೋಲಿಸಲು ಹಾಗೂ ದೇಶವನ್ನು ರಕ್ಷಿಸಬೇಕಾದರೆ, ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ಟಿಎಂಸಿ ಅಭೂತಪೂರ್ವ ಗೆಲುವು ಕಾಣಬೇಕಾದ ಅನಿವಾರ್ಯತೆ ಇದೆ’ ಎಂದು ಪಕ್ಷಕ್ಕೆ ಸೇರ್ಪಡೆಯಾದ ಬಳಿಕ ಸಿನ್ಹಾ ಹೇಳಿದರು. ‘ಮೋದಿ ಹಾಗೂ ಗೃಹಸಚಿವ ಅಮಿತ್ ಶಾ ಅವರಿಂದ ದೇಶದ ಪ್ರಜಾಪ್ರಭುತ್ವಕ್ಕೆ ಅಪಾಯವಿದೆ. ಪ್ರಜಾಪ್ರಭುತ್ವ ಬಲಗೊಳ್ಳಬೇಕಾದರೆ ಸಂಸ್ಥೆಗಳು ದೃಢವಾಗಿರಬೇಕು. ಆದರೆ ಎಲ್ಲಾ ಸಂಸ್ಥೆಗಳನ್ನು ವ್ಯವಸ್ಥಿತವಾಗಿ ದುರ್ಬಲಗೊಳಿಸಲಾಗಿದೆ ಎಂದು ಸಿನ್ಹಾ ಆರೋಪಿಸಿದ್ದಾರೆ. ‘ರೈತರು ದೆಹಲಿಯ ಗಡಿಯಲ್ಲಿ ತಿಂಗಳುಗಳಿಂದ ಧರಣಿ ಕುಳಿತಿದ್ದರೂ ಸರ್ಕಾರ ಅವರನ್ನು ಗಣನೆಗೆ ತೆಗೆದುಕೊಂಡಿಲ್ಲ. ಚುನಾವಣೆಗಳನ್ನು ಗೆಲ್ಲುವುದೊಂದೇ ಆಡಳಿತ ಪಕ್ಷದ ಮಂತ್ರವಾಗಿದೆ ಎಂದರು.[೪೦]

ಉಲ್ಲೇಖಗಳುಸಂಪಾದಿಸಿ

 1. Kolkata Dakshin (Lok Sabha constituency)
 2. "Article in ExpressBuzz.com". Expressbuzz. Retrieved 12 June 2010.[permanent dead link]
 3. "Blog article in IBNLive.in.com". CNN-IBN. Archived from the original on 6 ಜೂನ್ 2010. Retrieved June 03, 2010. Check date values in: |accessdate= and |archive-date= (help)
 4. "ಕಾಲೇಜಿನ ಇತಿಹಾಸ". Archived from the original on 26 ಜುಲೈ 2011. Retrieved 16 ಜನವರಿ 2011. Check date values in: |access-date= and |archive-date= (help)
 5. "Parliament of India-Biodata". Member of Parliament. Archived from the original on 15 ಜೂನ್ 2011. Check date values in: |archive-date= (help)
 6. "Mamta Banerjee Profile". incredible-people.com.
 7. "Mamata mum on relations with BJP". 6 January 2003. Retrieved 2 December 2006.
 8. Ashis Chakrabarti (8 November 1998). "Theatrics of a Bengal tigress". The Indian Express. Archived from the original on 21 ಅಕ್ಟೋಬರ್ 2010. Retrieved 12 November 2007. Italic or bold markup not allowed in: |publisher= (help); Check date values in: |archive-date= (help)
 9. "National Events in December 1998". ದಿ ಹಿಂದೂ. Archived from the original on 24 ಏಪ್ರಿಲ್ 2011. Retrieved 12 November 2007. Italic or bold markup not allowed in: |publisher= (help); Check date values in: |archive-date= (help)
 10. ೧೦.೦ ೧೦.೧ "New trains for West Bengal". The Tribune. 26 February 2000. Retrieved 12 November 2007. Italic or bold markup not allowed in: |publisher= (help)
 11. ೧೧.೦ ೧೧.೧ "Railways to focus on tourism, trans-Asian role, hardselling freight services". Rediff.com. 25 February 2000. Retrieved 12 November 2007. Italic or bold markup not allowed in: |publisher= (help)
 12. ಕಂದಹಾರ್ ವಿಮಾನ ಹೈಜಾಕ್ ವೇಳೆ ದೀದಿ ಧೈರ್ಯ ಸ್ಮರಿಸಿದ ಯಶವಂತ ಸಿನ್ಹಾ;;ಪಿಟಿಐ Updated: 13 ಮಾರ್ಚ್ 2021
 13. "Weather plays spoilsport for TMC". 21 October 2005. Archived from the original on 18 February 2007. Retrieved 2 December 2006.
 14. "Missing on bandh day: its champions -- Mamata stays indoors, Cong scarce". 10 October 2006. Archived from the original on 30 ಸೆಪ್ಟೆಂಬರ್ 2007. Retrieved 2 December 2006. Check date values in: |archive-date= (help)
 15. "Mamata Banerjee's unending tantrums". The Hindu. Chennai, India. 8 August 2005. Archived from the original on 20 ಮಾರ್ಚ್ 2007. Retrieved 2 December 2006. Check date values in: |archive-date= (help)
 16. "Mamata casts shame at House Paper throw at Speaker". 4 August 2005. Archived from the original on 22 ಆಗಸ್ಟ್ 2007. Retrieved 2 December 2006. Check date values in: |archive-date= (help)
 17. ೧೭.೦ ೧೭.೧ "Trinamool unleashes violence in W Bengal". 30 November 2006. Archived from the original on 30 ಸೆಪ್ಟೆಂಬರ್ 2007. Retrieved 2 December 2006. Check date values in: |archivedate= (help)
 18. "Heritage vandalised in Bengal House". The Times Of India. 2 December 2006. Retrieved 2 December 2006.
 19. "False alarm sparks clash". The Telegraph. 4 January 2007. Archived from the original on 15 ಆಗಸ್ಟ್ 2010. Retrieved 16 ಜನವರಿ 2011. Check date values in: |access-date= and |archive-date= (help)
 20. "Haldia authority's notification created confusion: Buddhadeb". The Hindu. Chennai, India. 10 January 2007. Archived from the original on 15 ಸೆಪ್ಟೆಂಬರ್ 2008. Retrieved 16 ಜನವರಿ 2011. Check date values in: |access-date= and |archive-date= (help)
 21. "Sub-Inspector killed in Nandigram". The Hindu. Chennai, India. 8 February 2007. Archived from the original on 27 ಮಾರ್ಚ್ 2008. Retrieved 16 ಜನವರಿ 2011. Check date values in: |access-date= and |archive-date= (help)
 22. "Stockpile squad trail heads towards party - Phone records spill Nandigram secret". The Telegraph. 19 March 2007. Archived from the original on 30 ಸೆಪ್ಟೆಂಬರ್ 2007. Retrieved 16 ಜನವರಿ 2011. Check date values in: |access-date= and |archive-date= (help)
 23. "Red-hand Buddha: 14 killed in Nandigram re-entry bid". The Telegraph. 15 March 2007. Archived from the original on 17 ಮಾರ್ಚ್ 2007. Retrieved 15 March 2007. Italic or bold markup not allowed in: |work= (help); Check date values in: |archive-date= (help)
 24. "Nandigram people's struggle "heroic": Clark". One India. Archived from the original on 17 ಫೆಬ್ರವರಿ 2012. Retrieved 16 ಜನವರಿ 2011. Check date values in: |access-date= and |archive-date= (help)
 25. Kirschbaum, Stevan. "Nandigram says 'No!' to Dow's chemical hub". International Action Center. Archived from the original on 6 ಜುಲೈ 2009. Retrieved 16 ಜನವರಿ 2011. Check date values in: |access-date= and |archive-date= (help)
 26. "The Great Left Debate: Chomsky to Saddam, Iraq to Nandigram". Indian Express. 5 December 2007.
 27. Mitra, Ashok (15 November 2007). "You are not what you were - Ashok Mitra after 14 November 2007". Sanhati.
 28. "ಡೈಲಿ ಇಂಡಿಯಾ". Archived from the original on 13 ಜನವರಿ 2008. Retrieved 16 ಜನವರಿ 2011. Check date values in: |access-date= and |archive-date= (help)
 29. "'Go back Medha' posters in Kolkata". India eNews.com. 7 December 2006. Archived from the original on 11 ಜನವರಿ 2007. Retrieved 16 ಜನವರಿ 2011. Check date values in: |access-date= and |archive-date= (help)
 30. "ಆರ್ಕೈವ್ ನಕಲು". Amnesty International. 15 January 2008. Archived from title=India: Urgent need to address large scale human rights abuses during Nandigram "recapture" the original Check |url= value (help) on 28 ಮೇ 2008. Retrieved 16 ಜನವರಿ 2011. Missing pipe in: |url= (help); Check date values in: |access-date= and |archive-date= (help)
 31. "Railway Budget 2009-2010" (PDF). Indian Railways. Retrieved 16 October 2009.
 32. "train travel just got better for women youth". Breaking News 24/7. Archived from the original on 7 ಜುಲೈ 2009. Retrieved 16 October 2009. Check date values in: |archive-date= (help)
 33. "Ladies Special Rolls Out". Express India. Archived from the original on 10 ಅಕ್ಟೋಬರ್ 2012. Retrieved 16 October 2009. Check date values in: |archive-date= (help)
 34. "New CST Panvel Ladies Special". Bombay-Local. Retrieved 16 October 2009.
 35. "mamata-flags-off-sealdah-new-delhi-duronto-express". Armoks News. Archived from the original on 14 ಅಕ್ಟೋಬರ್ 2009. Retrieved 16 October 2009. Check date values in: |archive-date= (help)
 36. "PM to inaugurate new Railway line in Kashmir today". Sindh Today. Retrieved 13 November 2009.[dead link]
 37. "Mamata Banerjee to start 19 new trains on 7 February". Business Standard. Retrieved 4 February 2010.
 38. "A New Way to Commute: Women-Only Trains in India". Marie Claire. Retrieved 27 January 2010.
 39. ಮಮತಾ ಬ್ಯಾನರ್ಜಿ ಮೇಲೆ ಅಪರಿಚಿತರಿಂದ ದಾಳಿ: ತಳ್ಳಿ ಹಾಕಿದ ಚುನಾವಣಾ ಆಯೋಗ;;ಪ್ರಜಾವಾಣಿ ವಾರ್ತೆ Updated: 14 ಮಾರ್ಚ್ 2021
 40. [.https://www.prajavani.net/india-news/yashwant-sinha-ex-bjp-leader-joins-trinamool-congress-ahead-of-bengal-polls-812899.htmlಬಿಜೆಪಿ ಮಾಜಿ ನಾಯಕ ಯಶವಂತ ಸಿನ್ಹಾ ಟಿಎಂಸಿ ಸೇರ್ಪಡೆ;ಪ್ರಜಾವಾಣಿ ವಾರ್ತೆ Updated: 14 ಮಾರ್ಚ್ 2021]

ಬಾಹ್ಯ ಕೊಂಡಿಗಳುಸಂಪಾದಿಸಿ

ವಿಕಿಕೋಟ್ ತಾಣದಲ್ಲಿ ಈ ವಿಷಯಕ್ಕೆ ಸಂಭಂಧಪಟ್ಟ ನುಡಿಗಳು ಇವೆ:
Political offices
ಪೂರ್ವಾಧಿಕಾರಿ
Lalu Prasad Yadav
Minister of Railways
unknown
Incumbent