ಭದ್ರಾಚಲಂ (ತೆಲುಗು:భద్రాచలము) ಎನ್ನುವುದು ಭಾರತಆಂಧ್ರಪ್ರದೇಶ ರಾಜ್ಯದ ಖಮ್ಮಮ್ ಜಿಲ್ಲೆಯಲ್ಲಿನ ಜನಗಣತಿ ಪಟ್ಟಣವಾಗಿದ್ದು ಅದು ಇತ್ತೀಚೆಗೆ ಮುನ್ಸಿಪಲ್ ಕಾರ್ಪೊರೇಶನ್ ಆಗಿ ಪರಿವರ್ತನೆಗೊಂಡಿದೆ. ಭಗವಾನ್ ರಾಮನನ್ನು ಪ್ರಧಾನ ದೇವರಾಗಿ ಪೂಜಿಸಲ್ಪಡುತ್ತಿರುವ ಭದ್ರಾಚಲಂ ದೇವಾಲಯವು ಹಿಂದೂಗಳಿಗೆ ಪ್ರಮುಖವಾದ ತೀರ್ಥಕ್ಷೇತ್ರವಾಗಿದೆ. ಇದು ಗೋದಾವರಿ ನದಿತೀರದಲ್ಲಿ ನೆಲೆಸಿದೆ.

ಭದ್ರಾಚಲಂ
భద్రాచలము
Bhadrachalam
city
Population
 (2008)
 • Total೫೫,೩೫೨

1959 ರಲ್ಲಿ ಗೋದಾವರಿ ನದಿಯ ಮತ್ತೊಂದು ಭಾಗದಲ್ಲಿರುವ ಪೂರ್ವ ಗೋದಾವರಿ ಜಿಲ್ಲೆಯ ಭದ್ರಾಚಲಂ ಮತ್ತು ನುಗುರು ವೆಂಕಟಾಪುರ ತಾಲ್ಲೂಕುಗಳನ್ನು ಒಳಗೊಂಡಿರುವ ಭದ್ರಾಚಲಂ ಕಂದಾಯ ವಿಭಾಗವನ್ನು ಭೌಗೋಳಿಕ ಸಾಮೀಪ್ಯತೆ ಮತ್ತು ಆಡಳಿತಾತ್ಮಕ ಕಾರ್ಯಸಾಧ್ಯತೆಯ ಕಾರಣದಿಂದ ಖಮ್ಮಮ್‌ನಲ್ಲಿ ವಿಲೀನಗೊಳಿಸಲಾಯಿತು.ಒಂದು ವೇಳೆ ತೆಲಂಗಾಣ ರಾಜ್ಯವು ರೂಪುಗೊಂಡರೆ, ಈ ತಾಲ್ಲೂಕುಗಳು ಮರಳಿ ಪೂರ್ವ ಗೋದಾವರಿ ಜಿಲ್ಲೆಗೆ ಸೇರ್ಪಡೆಗೊಳ್ಳುತ್ತವೆ.

ಭದ್ರಾಚಲಂ ದೇವಾಲಯದಿಂದ ಭದ್ರಾಚಲಂನ ನೋಟ

ಪಟ್ಟಣವು ಇತರ ಪ್ರಮುಖ ಪಟ್ಟಣಗಳಿಗೆ ರೈಲು ಮತ್ತು ರಸ್ತೆಯ ಮೂಲಕ ಸಂಪರ್ಕಿತವಾಗಿದೆ. ಭದ್ರಾಚಲಂ ಪಟ್ಟಣವು ಜಿಲ್ಲಾ ಕೇಂದ್ರವಾದ ಖಮ್ಮಮ್ ನಿಂದ ಸುಮಾರು 130 ಕಿಲೋಮೀಟರುಗಳು (ಅಂದಾಜು 82 ಮೈಲಿಗಳು) ಮತ್ತು ಹೈದರಾಬಾದ್ ನಿಂದ 320 ಕಿಲೋಮೀಟರುಗಳ ದೂರದಲ್ಲಿದೆ. ಭದ್ರಾಚಲಂಗೆ ಹತ್ತಿರದ ರೈಲ್ವೇ ನಿಲ್ದಾಣವು 40 ಕಿಲೋಮೀಟರುಗಳ ದೂರದಲ್ಲಿರುವ ಕೋಥಗುಡೆಮ್ ಪಟ್ಟಣದಲ್ಲಿದೆ. ಕೋಥಗುಡೆಮ್ ನಲ್ಲಿರುವ ರೈಲ್ವೇ ನಿಲ್ದಾಣವು ಪ್ರಮುಖವಾದ ಧಾರ್ಮಿಕ ಕೇಂದ್ರಕ್ಕೆ ನಿಕಟವಾಗಿರುವ ಕಾರಣದಿಂದ ಅದನ್ನು ಭದ್ರಾಚಲಂ ರೋಡ್ ಎಂದು ಹೆಸರಿಸಲಾಗಿದೆ. ಆದರೆ ಪ್ರಮುಖವಾದ ತಾಣಗಳಿಗೆ ಕೋಥಗುಡೆಮ್ ರೈಲ್ವೇ ನಿಲ್ದಾಣವು ಸಂಪರ್ಕವನ್ನು ಒದಗಿಸುವುದಿಲ್ಲ, ಆದ್ದರಿಂದ ಚೆನ್ನೈ, ನವದೆಹಲಿ, ಮುಂಬಯಿ ನಂತಹ ಇತರ ನಗರಗಳಿಗೆ ಪ್ರಯಾಣ ಬೆಳೆಸಲು ಜಿಲ್ಲಾ ಕೇಂದ್ರವಾದ ಖಮ್ಮಮ್ ಹತ್ತಿರದ ರೇಲ್ವೇ ನಿಲ್ದಾಣವಾಗಿದೆ. ದೇವಾಲಯ ಪಟ್ಟಣವೆಂದೇ ಹೆಸರಾಗಿರುವ ಭದ್ರಾಚಲಂ, ಅದರೊಂದಿಗೆ ಕೆಲವು ಇತರ ವಿಶೇಷತೆಗಳನ್ನೂ ಹೊಂದಿದೆ. ಐಟಿಸಿ ಲಿಮಿಟೆಡ್ - ಕಾಗದದ ಬೋರ್ಡ್‌ಗಳು ಮತ್ತು ವಿಶೇಷ ಕಾಗದಗಳ ವಿಭಾಗದ ಕಾರ್ಖಾನೆಯು ಭದ್ರಾಚಲಂ ಪಟ್ಟಣದ ಎದುರಿನ ತೀರ ಪ್ರದೇಶವಾದ ಸರಪಾಕಾ ಎಂಬ ಚಿಕ್ಕ ಗ್ರಾಮದಲ್ಲಿ ನೆಲೆಸಿದೆ. ಭದ್ರಾಚಲಂ ಪಟ್ಟಣವು ಕಾರ್ಯ ಪ್ರದೇಶ (ದಂಡಕಾರಣ್ಯ) ದ ಹೆಬ್ಬಾಗಿಲಾಗಿದೆ. ಭದ್ರಾಚಲಂನ ಹೆಸರು "ಭದ್ರಗಿರಿ" (ಭದ್ರನ ಪರ್ವತ - ಮೇರು ಮತ್ತು ಮೇನಕರ ದೈವದತ್ತ ಮಗು) ಯಿಂದ ಉದ್ಭವಿಸಿದೆ.

ಭದ್ರಾಚಲಂ ಎನ್ನುವುದು ಗೋದಾವರಿ ನದಿ ತೀರದಲ್ಲಿರುವ ದಕ್ಷಿಣ ಭಾರತದ ಚಿಕ್ಕ ಪಟ್ಟಣವಾಗಿದ್ದು, ಇದು ಭಗವಾನ್ ರಾಮನಿಗೆ ಸಮರ್ಪಿತವಾಗಿರುವ ಭಾರತದಲ್ಲಿನ ವಿಶಿಷ್ಟ ದೇವಾಲಯವಾದ "ಶ್ರೀ ಸೀತಾರಾಮಚಂದ್ರ ಸ್ವಾಮಿ ದೇವಾಲಯ" ಕ್ಕೆ ಹೆಸರುವಾಸಿಯಾಗಿದೆ. ಇದು ಪ್ರಸ್ತುತ ಅಯೋಧ್ಯೆಯ ನಂತರ ಶ್ರೀ ರಾಮನ ಅತೀ ದೊಡ್ಡ ಕ್ಷೇತ್ರವಾಗಿದೆ. ಇದು ಚಿಕ್ಕ ಪರ್ವತದ ಮೇಲಿರುವ 17 ಶತಮಾನದ ಶ್ರೀ ರಾಮನ ದೇವಾಲಯವಾಗಿದ್ದು, ದಕ್ಷಿಣಾಭಿಮುಖವಾಗಿ ಪ್ರವಹಿಸುತ್ತಿರುವ ಪವಿತ್ರ ಗೋದಾವರಿ ನದಿಯಿಂದ ಆವರಿಸಲ್ಪಟ್ಟಿದೆ.ವಿಶ್ವದಾದ್ಯಂತದ ಸಾವಿರಾರು ಭಕ್ತಾದಿಗಳನ್ನು ಭದ್ರಾಚಲಂ ಆಕರ್ಷಿಸುತ್ತದೆ.

ಭದ್ರಾಚಲಂ ಪ್ರದೇಶವು ಶ್ರೀರಾಮ, ಸೀತೆ ಮತ್ತು ಲಕ್ಷ್ಮಣರು ಗಡೀಪಾರಿನ (ವನವಾಸ) ಸಂದರ್ಭದಲ್ಲಿ ಭೇಟಿ ನೀಡಿದ ದಂಡಕಾರಣ್ಯದ ಭಾಗವಾಗಿ ಹಿಂದೆ ರೂಪಿತವಾಗಿದ್ದ ಪ್ರದೇಶದಲ್ಲಿ ಆಕರ್ಷಕವಾಗಿ ನೆಲೆಸಿದೆ. ದೇವಾಲಯದ ಸುತ್ತಮುತ್ತಲ ಅರಣ್ಯವು ಶ್ರೀ ರಾಮನ ಏಕಾಂತವಾಸದ ನೈಜ ಪ್ರದೇಶವಾಗಿದೆ ಮತ್ತು ಪರ್ಣಶಾಲೆ (ಇಲ್ಲಿಂದ 32 ಕಿಮೀ ದೂರ) ಯಲ್ಲಿ ಶ್ರೀ ರಾಮನು ತನಗೆ ಮತ್ತು ಸೀತೆಗಾಗಿ ಗುಡಿಸಲನ್ನು ನಿರ್ಮಿಸಿದನು ಮತ್ತು ಅಲ್ಲಿಂದಲೇ ರಾವಣನು ಸೀತೆಯನ್ನು ಅಪಹರಿಸಿದ್ದನು.ಈ ದೇವಸ್ಥಾನದ ಇತಿಹಾಸವು ರಾಮಾಯಾಣ ಅವಧಿಯ ಪ್ರಾಮುಖ್ಯತೆಯನ್ನು ಪ್ರತಿನಿಧಿಸುತ್ತದೆ ಮತ್ತು ದೇವಸ್ಥಾನದ ಸುತ್ತಮುತ್ತಲ ಪ್ರದೇಶಗಳು ಮತ್ತು ಅದರ ಸಂಗತಿಗಳು ಮತ್ತೊಂದು ಕಥೆಯೊಂದಿಗೆ ಬೆರೆತುಕೊಂಡಿದೆ. ಅದು, ರಾಮಾವತಾರದ ಬಹು ಸಮಯದ ನಂತರ ಶ್ರೀ ರಾಮನ ಕೃಪೆಯನ್ನು ಪಡೆಯಲು ಪ್ರಾಯಶ್ಚಿತ ಮಾಡಿಕೊಳ್ಳುತ್ತಿರುವ ಋಷಿಯಾದ ಭಕ್ತ ಭದ್ರ (ಪರ್ವತ ರಾಜ) ನಿಗೆ ತಾನು ನೀಡಿದ ವಾಗ್ದಾನವನ್ನು ಪೂರ್ಣಗೊಳಿಸಲು ತಾನೇ ರಾಮನೆಂದು ಕಾಣಿಸಿಕೊಳ್ಳಬೇಕಾದ "ಶ್ರೀ ಮಹಾವಿಷ್ಣು" ವಿನ ಅವಶ್ಯಕತೆಯನ್ನು ವರ್ಣಿಸುತ್ತದೆ.ಭದ್ರಾಚಲಂನ ಹೆಸರು "ಭದ್ರಗಿರಿ" (ಭದ್ರನ ಪರ್ವತ - ಮೇರು ಮತ್ತು ಮೇನಕರ ಮಗು) ಯಿಂದ ಉದ್ಭವಿಸಿದೆ. ಭದ್ರಾಚಂಲನ ದೇವಸ್ಥಾನವು ರಾಮ, ಸೀತೆ ಮತ್ತು ಲಕ್ಷ್ಮಣರ ಅರ್ಚನೆಯ ಮೂರ್ತಿಗಳನ್ನು ಹೊಂದಿದೆ ಮತ್ತು ಅವುಗಳನ್ನು ಸ್ವಯಂಭೂ ಮೂರ್ತಿಗಳು (ಸ್ವಯಂ-ಉದ್ಭವವಾದವುಗಳು) ಎಂದು ಪರಿಗಣಿಸಲಾಗಿದೆ.ಪೋಕಲ ದಮ್ಮಪ್ಪ ಎಂಬ ಮಹಿಳೆಯ ಕನಸಿನಲ್ಲಿ ಕಾಣಿಸಿಕೊಂಡ ಶ್ರೀರಾಮ, ಭದ್ರಗಿರಿ ಬೆಟ್ಟಗಳ ಮೇಲಿರುವ ವಿಗ್ರಹಗಳ ಬಗ್ಗೆ ಅವಳಿಗೆ ಮಾಹಿತಿ ನೀಡಿದನು. ಅವಳಿಗೆ ಆಶ್ಚರ್ಯವಾಗುವಂತೆ, "ವಿಗ್ರಹಗಳನ್ನು" ಅವಳು ಕಂಡುಹಿಡಿದಳು ಮತ್ತು ಸಾಧಾರಣವಾದ ಕಟ್ಟಡವನ್ನು ನಿರ್ಮಿಸಿದಳು.ಧಮ್ಮಕ್ಕ, ಕಾಡನ್ನು ಸ್ವಚ್ಛಗೊಳಿಸಿ, ದೇವರಿಗೆ ಪೂಜೆಯನ್ನು ಸಲ್ಲಿಸಿದಳು. ಇದು ಪ್ರಸ್ತುತ ದೇವಾಲಯದ ಮೂಲವಾಗಿದೆ. ಈ ದೇವಾಲಯವನ್ನು 17 ನೇ ಶತಮಾನದಲ್ಲಿ ಭಗವಾನ್ ಶ್ರೀ ರಾಮನ ಕಟ್ಟಾ ಭಕ್ತರಾಗಿದ್ದ, ಭಕ್ತ ರಾಮದಾಸ ಎಂದೇ ಜನಪ್ರಿಯರಾಗಿರುವ ಸ್ಥಳೀಯ ತಹಶೀಲ್ದಾರರಾಗಿದ್ದ ಕಾಂಚರ್ಲ ಗೋಪಣ್ಣ ನಿರ್ಮಿಸಿದರು.ಭದ್ರಾಚಲಂನಲ್ಲಿ ಪ್ರತಿಷ್ಠಾಪಿಸಲಾಗಿರುವ ವೈಕುಂಠ ರಾಮನ ಬಗ್ಗೆ ಇದ್ದ ಅವರ ಭಕ್ತಿಯಿಂದಾಗಿ ಗೋಪಣ್ಣ ಅವರನ್ನು ಜನರು ನಮಗೆ ಚಿರಪರಿಚಿತವಾಗಿರುವ ಭದ್ರಾಚಲ ರಾಮದಾಸ ಎಂದು ಕರೆದರು.

ಭದ್ರಾಚಲಂನಲ್ಲಿ ಎರಡು ಉತ್ಸವಗಳು ಅತೀ ಪ್ರಮುಖವಾಗಿದೆ - ಶ್ರೀ ರಾಮ ನವಮಿಯ ಹಿಂದಿನ ದಿನದ ವಾರ್ಷಿಕ ಕಲ್ಯಾಣೋತ್ಸವ, ಶ್ರೀ ರಾಮ ನವಮಿ (ಮಾರ್ಚ್ -ಏಪ್ರಿಲ್) ಸಂದರ್ಭದಲ್ಲಿ ಸೀತೆಯೊಂದಿಗೆ ಶ್ರೀ ರಾಮನ ವಿವಾಹ ಸಮಾರಂಭದಲ್ಲಿ ಪಾಲ್ಗೊಳ್ಳಲು ಕೇವಲ ಆಂಧ್ರಪ್ರದೇಶವಲ್ಲದೇ ಇತರ ದೂರದ ಪ್ರದೇಶಗಳಿಂದಲೂ ಭಾರಿ ಪ್ರಮಾಣದಲ್ಲಿ ಭಕ್ತಾದಿಗಳು ಇಲ್ಲಿಗೆ ಆಗಮಿಸುತ್ತಾರೆ. ವೈಕುಂಠ ಏಕಾದಶಿ (ಮುಕ್ಕೋಟಿ). ಮುಕ್ಕೋಟಿಯ (ಡಿಸೆಂಬರ್-ಜನವರಿ) ಹಿಂದಿನ ದಿನದಂದು ಶ್ರೀ ಸೀತಾರಾಮಚಂದ್ರ ಸ್ವಾಮಿಯು ವೈಕುಂಠ ದ್ವಾರದ ಮೂಲಕ ದರ್ಶನವನ್ನು ನೀಡುತ್ತಾರೆ. ಈ ದೇವಾಲಯವನ್ನು 17 ನೇ ಶತಮಾನದಲ್ಲಿ (1630 ಎ. ಡಿ.) ಭಕ್ತ ರಾಮದಾಸ ಎಂದು ಜನಪ್ರಿಯರಾಗಿರುವ ಭಗವಾನ್ ರಾಮ ನ ಭಕ್ತರಾದ ಕಾಂಚೇರ್ಲ ಗೋಪಣ್ಣ ನಿರ್ಮಿಸಿದರು. ಭದ್ರಾಚಲಂನ ತಹಶೀಲ್ದಾರರಾಗಿದ್ದ ಗೋಪಣ್ಣ (17 ನೇ ಶತಮಾನದ ಎರಡನೆಯ ಭಾಗದಲ್ಲಿ) ಅವರು ಈ ದೇವಾಲಯವನ್ನು ನಿರ್ಮಿಸಲು ಸರ್ಕಾರಿ ಖಜಾನೆಯಿಂದ ಹಣವನ್ನು ಉಪಯೋಗಿಸಿದರು, ಮತ್ತು ಅವರನ್ನು ಗೋಲ್ಕೊಂಡದಲ್ಲಿರುವ ಬಂದೀಖಾನೆಯಲ್ಲಿ ಸೆರೆಯಲ್ಲಿರಿಸಲಾಗಿತ್ತೆಂದು ಹೇಳಲಾಗಿದೆ. ಅವರನ್ನು ಬಿಡುಗಡೆ ಮಾಡಿದ ಬಳಿಕ ಭಗವಾನ್ ರಾಮನು ಪವಾಡ ಸದೃಶವಾಗಿ ಗೋಪಣ್ಣ ಅವರು ಖರ್ಚು ಮಾಡಿದ ಹಣ ಸುಲ್ತಾನ್ ರೂಪದಲ್ಲಿ ನೀಡಿದನು ಎಂದು ಹೇಳಲಾಗಿದೆ. ನಂತರ ಗೋಪಣ್ಣ ಅವರು ಭದ್ರಾಚಲ ರಾಮದಾಸರಾದರು, ಮತ್ತು ನಂತರ ಅವರು ರಾಮನ ಸ್ತುತಿಯಲ್ಲಿ ಅಸಂಖ್ಯಾತ ತೆಲುಗು ಗೀತೆಗಳನ್ನು ರಚಿಸಿದರು.

ಭದ್ರಾಚಲಂ ಬಗ್ಗೆ ಹೆಚ್ಚಿನ ಮಾಹಿತಿಗಾಗಿ, www.bhadrachalarama.org ಗೆ ಭೇಟಿ ನೀಡಿ

ಭೂಗೋಳ ಶಾಸ್ತ್ರ

ಬದಲಾಯಿಸಿ

ಭದ್ರಾಚಲಂ 17°40′N 80°53′E / 17.67°N 80.88°E / 17.67; 80.88[] ನಲ್ಲಿ ನೆಲೆಸಿದೆ. ಇದು ಸಮುದ್ರ ಮಟ್ಟಕ್ಕಿಂತ ಸರಾಸರಿ 50 ಮೀಟರ್ ಗಳಷ್ಟು (164 ಅಡಿ) ಎತ್ತರದಲ್ಲಿದೆ.

ಜನಸಂಖ್ಯೆಯ ಅಂಕಿ-ಅಂಶದ ವಿವರ

ಬದಲಾಯಿಸಿ

As of 2008[[ವರ್ಗ:Articles containing potentially dated statements from ಪದವಿನ್ಯಾಸ ದೋಷ: ಗುರುತಿಸಲಾಗದ ವಿರಾಮ ಚಿಹ್ನೆ"೧".]] ಭಾರತ ಜನಣತಿ[] ಯ ಪ್ರಕಾರ, ಭದ್ರಾಚಲಂನ ಜನಸಂಖ್ಯೆಯು 55,352 ಆಗಿದೆ. 2001 ರಂತೆ ಪುರುಷರು ಜನಸಂಖ್ಯೆಯ 50% ಮತ್ತು ಮಹಿಳೆಯರು 50% ಭಾಗವನ್ನು ಒಳಗೊಂಡಿದ್ದಾರೆ. ಭದ್ರಾಚಲಂನ ಸರಾಸರಿ ಸಾಕ್ಷರತೆ ಪ್ರಮಾಣವು 73% ಆಗಿದ್ದು, ಇದು ರಾಷ್ಟ್ರೀಯ ಸರಾಸರಿಯಾದ 59.5% ಕ್ಕಿಂತ ಹೆಚ್ಚಾಗಿದೆ; 54% ರಷ್ಟು ಪುರುಷರು ಮತ್ತು 46% ರಷ್ಟು ಮಹಿಳೆಯರು ಸಾಕ್ಷರರಾಗಿದ್ದಾರೆ. ಜನಸಂಖ್ಯೆ 11% ರಷ್ಟು ಜನರು 6 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿದ್ದಾರೆ.

ಭದ್ರಾಚಲಂ ಆಂಧ್ರಪ್ರದೇಶ ದ ಖಮ್ಮಮ್ ಜಿಲ್ಲೆಯಲ್ಲಿದ್ದು, ಹೈದರಾಬಾದ್‌ನಿಂದ 309 ಕಿಮೀ ದೂರದಲ್ಲಿ ಸ್ವಲ್ಪಮಟ್ಟಿಗೆ ಈಶಾನ್ಯ ದಿಕ್ಕಿನಲ್ಲಿದೆ. ಗೋದಾವರಿ ನದಿ ತೀರದಲ್ಲಿ ನೆಲೆಸಿರುವ ಭದ್ರಾಚಲಂ, ರಾಜಮುಂಡ್ರಿಯಿಂದ 161 ಕಿಲೋಮೀಟರ್ ಮತ್ತು ವಿಜಯವಾಡದಿಂದ 201 ಕಿಮೀ ದೂರದಲ್ಲಿದೆ. ಇದು ಪ್ರಸಿದ್ಧ ತೀರ್ಥಕ್ಷೇತ್ರದ ತಾಣವಾಗಿದೆ ಮತ್ತು ಭಗವಾನ್ ರಾಮನ ನಿವಾಸ ಸ್ಥಾನವಾಗಿದೆ ಎಂದು ಪರಿಗಣಿಸಲಾಗಿದ್ದು, ಪವಿತ್ರ ನದಿಯಾದ ಗೋದಾವರಿ ತೀರದಲ್ಲಿ ನೆಲೆಸಿದೆ.

1959 ರಲ್ಲಿ ಗೋದಾವರಿ ನದಿಯ ಮತ್ತೊಂದು ಭಾಗದಲ್ಲಿರುವ ಪೂರ್ವ ಗೋದಾವರಿ ಜಿಲ್ಲೆಯ ಭದ್ರಾಚಲಂ ಮತ್ತು ನುಗುರು ವೆಂಕಟಾಪುರ ತಾಲ್ಲೂಕುಗಳನ್ನು ಒಳಗೊಂಡಿರುವ ಭದ್ರಾಚಲಂ ಕಂದಾಯ ವಿಭಾಗವನ್ನು ಭೌಗೋಳಿಕ ಸಾಮೀಪ್ಯತೆ ಮತ್ತು ಆಡಳಿತಾತ್ಮಕ ಕಾರ್ಯಸಾಧ್ಯತೆಯ ಕಾರಣದಿಂದ ಖಮ್ಮಮ್‌ನಲ್ಲಿ ವಿಲೀನಗೊಳಿಸಲಾಯಿತು.

ಭದ್ರಾಚಲಂ ದೇವಸ್ಥಾನ ವಿವರಗಳು

ಬದಲಾಯಿಸಿ

ಶ್ರೀ ಲಕ್ಷ್ಮಣ ಸಮೇತ ಸೀತಾ ರಾಮಚಂದ್ರ ಸ್ವಾಮಿ, ಭದ್ರಾಚಲಂ. ಗೋದಾವರಿ ನದಿ ತೀರದತ್ತ ಪಶ್ಚಿಮ ದಿಕ್ಕಿನತ್ತ ಮುಖ್ಯ ದೇವರು ಮುಖ ಮಾಡಿರುವುದು ಈ ದೇವಸ್ಥಾನದ ವಿಶೇಷತೆಯಾಗಿದೆ. ಭದ್ರಾಚಲಂನಲ್ಲಿರುವ ದೇವಸ್ಥಾನವು ಚಿಕ್ಕ ಪರ್ವತದ ಮೇಲೆ ನೆಲೆಸಿದೆ. ಶ್ರೀ ರಾಮನ ವಿಗ್ರಹವು (ಮೂಲವರ್) ವಿಶೇಷ ಲಕ್ಷಣಗಳನ್ನು ಹೊಂದಿದೆ. ದೇವರ ಮೂರ್ತಿ ನಾಲ್ಕು ಕೈಗಳೊಂದಿಗೆ ಪದ್ಮಾಸನ ಸ್ಥಿತಿಯಲ್ಲಿದ್ದು, (ಚತುರ್ಭುಜ ರಾಮ) ಬಿಲ್ಲು ಮತ್ತು ಬಾಣವನ್ನು ಮುಂದಿನ ಎರಡು ಕೈಗಳಿಂದ ಮತ್ತು ಶಂಖ ಮತ್ತು ಚಕ್ರವನ್ನು ಹಿಂಬದಿಯ ಕೈಗಳಿಂದ ಹಿಡಿದುಕೊಂಡಿದ್ದಾನೆ. ಶಂಖವನ್ನು ಬಲಗೈಯಲ್ಲಿ ಮತ್ತು ಚಕ್ರವನ್ನು ಎಡಕೈಯಲ್ಲಿ ಹಿಡಿದುಕೊಂಡಿದ್ದು, ಚಕ್ರದ ಮೂಲಕ "ರಾಕ್ಷಸರ" ಸಂಹಾರವನ್ನು ಪೂರ್ಣಗೊಳಿಸಿರುವಂತೆ ಸೂಚಿಸುತ್ತಿದ್ದರೆ, ಶಂಖದ ಮೂಲಕ ದೇವರು ವಿಶ್ವಕ್ಕೆ ಶಾಂತಿ ಮತ್ತು ರಕ್ಷಣೆಯ ಅಭಯವನ್ನು ಸೂಚಿಸುತ್ತಿದ್ದಾರೆ. ಶ್ರೀ ರಾಮನ ಎಡಭಾಗದಲ್ಲಿ ಸೀತೆಯು ನೆಲೆಸಿದ್ದರೆ ಲಕ್ಷ್ಮಣನು ಬಲಭಾಗಕ್ಕಿದ್ದಾನೆ. ಆದರೆ ಉತ್ಸವ ವಿಗ್ರಹದಲ್ಲಿ, ಸೀತೆ ಮತ್ತು ಲಕ್ಷ್ಮಣರು ರಾಮನ ಎರಡೂ ಪಕ್ಕದಲ್ಲಿದ್ದಾರೆ, ರಾಮನನ್ನು "ವೈಕುಂಠ ರಾಮ" ಎಂದೂ ಕರೆಯಲಾಗುತ್ತದೆ.

ಮಹಾಮಂಟಪದ ನಾಲ್ಕು ಸ್ತಂಭಗಳ ಮುಖಗಳು ಅಷ್ಟಲಕ್ಷ್ಮೀ, ಶಿವನ 18 ರೂಪಗಳು, ದಶಾವತಾರ, 12 ಅಶ್ವರಗಳು ಹಾಗೂ ಇತರ ಮನಮೋಹಕ ಕಲಾಕೃತಿಗಳನ್ನು ಒಳಗೊಂಡಿದೆ. ಮಂಟಪದ ಚಾವಣಿಯು ಗ್ರಾನೈಟ್ ಕಲ್ಲಿನ ಒಂದೇ ತುಂಡಿನಿಂದ ಕೆತ್ತಲಾದ ಕಮಲದ ಮೂರು ದಳಗಳ ಚಿತ್ರಗಳನ್ನು ಒಳಗೊಂಡಿದೆ. ಮಹಾಮಂಟಪ ಮತ್ತು ಗರ್ಭ ಗುಡಿಯ ಒಳಭಾಗಗಳು ಅಪ್ಸರೆಯರ ಚಿತ್ರದಿಂದ ಕಂಗೊಳಿಸುತ್ತಿವೆ.ಗರ್ಭ ಗುಡಿಯ ಮೇಲ್ಭಾಗದ ಅಷ್ಟಭುಜಾಕೃತಿಯ-ವಿಮಾನವು (ಗೋಪುರ) ಗ್ರಾನೈಟ್ ಕಲ್ಲಿನೊಂದಿಗೆ ಮೂರು-ಅಂತಸ್ತುಗಳ ನಿರ್ಮಾಣವಾಗಿದೆ. ವಿಮಾನದ ಮತ್ತೊಂದು ಮುಖಭಾಗವು ವಿಷ್ಣುವಿನ 18 ರೂಪಗಳು, ಗರುಡ, ಸಿಂಹ, ಸೋಮಸ್ಕಂದ ಮತ್ತು ದಕ್ಷಿಣಾಮೂರ್ತಿಯನ್ನು ಚಿತ್ರಿಸಿರುವ ಸುಂದರವಾದ ಕಲ್ಲಿನ ಆಕೃತಿಗಳನ್ನು ಒಳಗೊಂಡಿದೆ. ವಿಮಾನದ ಕಿರೀಟವಾಗಿರುವ ಶಿಖರ (ಗುಮ್ಮಟ) ವು ಗರ್ಭಗುಡಿಯಾಗಿದ್ದು ಅದನ್ನು ಗ್ರಾನೈಟ್‌ನ ಒಂದೇ ತುಂಡಿನಿಂದ ಕೆತ್ತಲಾಗಿದ್ದು, ಅದು ಸುಮಾರು 36 ಟನ್‌ ಭಾರವಿದೆ. ಇದು ಇತ್ತೀಚಿನ ಶತಮಾನಗಳಲ್ಲಿ ಅತೀ ದೊಡ್ಡದಾಗಿದೆ.

ರಾಮದಾಸ್ ಅವರು ಗೋದಾವರಿಯಿಂದ ಪಡೆದ ಸುದರ್ಶನ ಚಕ್ರದಿಂದ ಶಿಖರವನ್ನು ಮುಕುಟಪ್ರಾಯಗೊಳಿಸಲಾಗಿದೆ. ಸಾವಿರ ಮೂಲೆಗಳೊಂದಿಗೆ ಅಷ್ಟ-ಮುಖದ ಚಕ್ರವು ಸುದರ್ಶನ ಮೂರ್ತಿಯನ್ನು ಒಳಗೊಂಡಿದ್ದು, ಅದನ್ನು ಮಧ್ಯದಲ್ಲಿ ಕೆತ್ತನೆ ಮಾಡಲಾಗಿದೆ.ದೇವಸ್ಥಾನ ಪ್ರಾಂಗಣದ ಸಮೀಪದಲ್ಲೇ ಮೂರು ಸ್ತಂಭಗಳಿವೆ - "ರಾಮಕೋಟಿ ಕ್ರತು ಸ್ತಂಭ"ವು ಶ್ರೀ ರಾಮಾನುಜರ್ ಅವರು ದೇಶದ ಎಂಟು ವಿವಿಧ ತೀರ್ಥಕ್ಷೇತ್ರಗಳಲ್ಲಿ ಸ್ಥಾಪಿಸಿರುವ 108 ಸ್ತಂಭಗಳಲ್ಲಿ ಒಂದಾಗಿದೆ.ಸ್ತಂಭದ ಬದಿಗಳಲ್ಲಿ ದೇವನಾಗರಿ ಲಿಪಿಯಲ್ಲಿ ಸಂಸ್ಕೃತದಲ್ಲಿ " ಸಂಕ್ಷಿಪ್ತ ರಾಮಾಯಣ" ಬರಹವನ್ನು ಕೆತ್ತಲಾಗಿದೆ. ಒಂದು ಸ್ತಂಭವು ರಾಮದಾಸ್ ಅವರು ಬರೆದ "ದಾಶರಥಿ ಶತಕ" ದ ಪದ್ಯಗಳನ್ನು ಒಳಗೊಂಡಿದ್ದು, ಮುಂಭಾಗದಲ್ಲಿ ಬಿಳಿ ಅಮೃತಶಿಲೆಯಲ್ಲಿ ಅವರ ಚಿತ್ರವಿದೆ.

ಈ ದೇವಾಲಯ ಪಟ್ಟಣದ ಮತ್ತೊಂದು ಅನನ್ಯ ವೈಶಿಷ್ಟ್ಯವೆಂದರೆ, ಮುಖ್ಯ ದೇವಾಲಯಕ್ಕೆ ಎರಡು ಕ್ಷೇತ್ರ ಪಾಲಕರಿದ್ದಾರೆ. ಅವರುಗಳು:

  1. ಶ್ರೀ ಯೋಗಾನಂದ ಜ್ವಾಲಾ ಲಕ್ಷ್ಮೀ ನರಸಿಂಹ ಸ್ವಾಮಿ (ಭಗವಾನ್ ನರಸಿಂಹ)
  2. ಶ್ರೀ ಅನ್ನಪೂರ್ಣ ಕಾಶಿ ವಿಶ್ವೇಶ್ವರ ಸ್ವಾಮಿ (ಭಗವಾನ್ ಶಿವ)

ಈ ಮೇಲಿನ ಎರಡು ದೇವಾಲಯಗಳಲ್ಲೂ ಸಹ ಮುಖ್ಯ ದೇವರುಗಳು ಗೋದಾವರಿ ನದಿಯತ್ತ ಪಶ್ಚಿಮ ದಿಕ್ಕಿನತ್ತ ದೇವರು ಮುಖ ಮಾಡಿದ್ದಾರೆ. ಈ ಎರಡು ದೇವಾಲಯಗಳು ಸೀತಾ ರಾಮಚಂದ್ರ ಸ್ವಾಮಿ ದೇವಾಲಯಕ್ಕೆ ಉಪ ದೇವಾಲಯಗಳಾಗಿವೆ ಮತ್ತು ಮುಖ್ಯ ದೇವಾಲಯದಷ್ಟೇ ಪ್ರಮುಖವಾಗಿವೆ. ಈ ಎರಡೂ ಉಪ ದೇವಾಲಯಗಳು ಶ್ರೀ ರಾಮ ದೇವಸ್ಥಾನದಂತೆ ಸಣ್ಣ ಬೆಟ್ಟದ ಮೇಲೆ ಸ್ಥಿತಗೊಂಡಿವೆ. ಈ ದೇವಾಲಯಗಳು ಭಗವಾನ್ ಶ್ರೀ ರಾಮನ ಮುಖ್ಯ ದೇವಾಲಯದಷ್ಟೇ ಪ್ರಮುಖವಾಗಿವೆ.

ಭದ್ರಾಚಲಂ ದೇವಾಲಯದ ಇತಿಹಾಸ

ಬದಲಾಯಿಸಿ

ವಿಶ್ವದಾದ್ಯಂತದ ಲಕ್ಷಾಂತರ ಜನ ಭಕ್ತಾದಿಗಳನ್ನು ಆಕರ್ಷಿಸುವ ಪವಿತ್ರವಾದ ಸ್ಥಳವಾಗಿರುವ ಇದು ಭಗವಾನ್ ರಾಮನ (ಶ್ರೀ ಮಹಾವಿಷ್ಣುವಿನ ಏಳನೇ ಅವತಾರ) ನಿವಾಸ ಸ್ಥಾನವಾಗಿದೆ. ದಕ್ಷಿಣಾಭಿಮುಖವಾಗಿ ಹರಿಯುತ್ತಿರುವ ಪವಿತ್ರ ನದಿ ಗೋದಾವರಿಯಿಂದ ಸುತ್ತುವರಿಯಲ್ಪಟ್ಟಿರುವ ಈ ಪರ್ವತ ಸ್ಥಳವೇ ಪ್ರಸಿದ್ಧ ದೇಗುಲ ಸ್ಥಳವಾದ ಭದ್ರಾಚಲಂ ಆಗಿದ್ದು - ಈ ಹೆಸರು ಭದ್ರಗಿರಿ (ಭದ್ರನ ಪರ್ವತ - ಮೇರು ಮತ್ತು ಮೇನಕರ ದೈವದತ್ತ ಮಗು) ಯಿಂದ ಉದ್ಭವವಾಗಿದೆ. ಇತಿಹಾಸಗಳ ಪ್ರಕಾರ, ಈ ದೇಗುಲದ ಪ್ರಾಮುಖ್ಯತೆಯು ರಾಮಾಯಣ ಕಾಲದಿಂದಲೂ ಜಾರಿಯಲ್ಲಿದೆ. ಈ ಸುಸಂಬದ್ಧ ಪರ್ವತ ಸ್ಥಳವು ರಾಮ ಮತ್ತು ಅವನ ಪತ್ನಿ ಸೀತೆ ಮತ್ತು ತಮ್ಮ ಲಕ್ಷ್ಮಣನೊಂದಿಗೆ ವನವಾಸವನ್ನು ಕಳೆದ ರಾಮಾಯಣ ಕಾಲದಲ್ಲಿನ "ದಂಡಕಾರಣ್ಯ" ವು ಅಸ್ತಿತ್ವದಲ್ಲಿದ್ದ ಸ್ಥಳವಾಗಿದೆ ಮತ್ತು ಪರ್ಣಶಾಲೆ (ಪ್ರಸಿದ್ಧ ಚಿನ್ನದ ಜಿಂಕೆಗೆ ಸಂಬಂಧಿಸಿದ ಮತ್ತು ರಾವಣನು ಸೀತೆಯನ್ನು ಅಪಹರಿಸಿದ ಸ್ಥಳ) ಸಹ ಈ ದೇವಾಲಯ ಸ್ಥಳದ ಸನಿಹದಲ್ಲೇ ಇದೆ. ಹಾಗೆಯೇ, ರಾಮಾವತಾರದ ಬಹು ಕಾಲದ ನಂತರ, ಭಗವಾನ್ ಶ್ರೀ ರಾಮಚಂದ್ರನ ಕೃಪಾಕಟಾಕ್ಷಕ್ಕಾಗಿ ಪ್ರಾರ್ಥಿಸಿ ಯುಗಗಳ ಮೂಲಕ ತಪಸ್ಸನ್ನು ಮುಂದುವರಿಸಿದ ತನ್ನ ಭಕ್ತ ಭದ್ರನಿಗೆ ತನ್ನ ವಾಗ್ಧಾನವನ್ನು ಪೂರ್ಣಗೊಳಿಸಲು ಭಗವಾನ್ ಮಹಾವಿಷ್ಣುವು ತಾನೇ ರಾಮನೆಂದು ಈ ಮಂದಿರದ ಸ್ಥಳದಲ್ಲಿಯೇ ಕಾಣಿಸಿಕೊಂಡನು.

ಅವತಾರ ತಾಳುವಿಕೆಯ ಅವಶ್ಯಕತೆ : ತನ್ನ ಉತ್ಕಟ ಭಕ್ತ ಭದ್ರನ ಬಹುದಿನಗಳ ಇಚ್ಛೆಯನ್ನು ಪೂರೈಸಲು ವೈಕುಂಠ ರಾಮನ ಅವತಾರವನ್ನು ತಾಳುವ ಅಗತ್ಯ ಉಂಟಾಯಿತು ಎಂಬುದನ್ನು ಇತಿಹಾಸ ವರ್ಣಿಸುತ್ತದೆ.

ಮಹರ್ಷಿ ಭದ್ರ : ಭಗವಾನ್ ರಾಮನ ಕೃಪೆಯನ್ನು ಪಡೆಯಲು ಭದ್ರನು ಗೋದಾವರಿ ನದಿ ತೀರದ ಈ "ದಂಡಕಾರಣ್ಯ" ದಲ್ಲಿ ಪ್ರಾಯಶ್ಚಿತ್ತವನ್ನು ಮಾಡಿದನು ಮತ್ತು ಆನಂತರ ಅವನ ಕಡುಪ್ರೇಮದ ದೇವರು ಸಮ್ಮತಿಸಿದನು- ಆನಂದಭರಿತವಾದ "ಋಷಿ" ಯು ರಾಮನಿಗೆ ತನ್ನ ತಲೆಯ ಮೇಲೆ ವಿರಾಜಮಾನರಾಗಲು ಪ್ರಾರ್ಥಿಸಿಕೊಂಡನು. ಆದರೆ ತನ್ನ ಪತ್ನಿ ಸೀತೆಯನ್ನು ಹುಡುಕುತ್ತಲಿದ್ದ ರಾಮನು, ಸೀತೆಯನ್ನು ಹುಡುಕಿದ ಬಳಿಕ ಮತ್ತು ರಾವಣನ್ನು ಸಂಹರಿಸಿ 'ಧರ್ಮ'ವನ್ನು ಸ್ಥಾಪಿಸುವ ಪ್ರಕ್ರಿಯೆಯನ್ನು ಪೂರೈಸಿ ಮರಳಿ ಬರುವಾಗ ಬೇಡಿಕೆಯನ್ನು ಪೂರೈಸುವೆನೆಂದು ತನ್ನ ಭಕ್ತನಿಗೆ ಭರವಸೆಯನ್ನು ನೀಡಿದನು. ಆದರೆ ರಾಮನು ರಾಮಾವತಾರದಲ್ಲಿ ಭರವಸೆಯನ್ನು ಪೂರೈಸದ ಕಾರಣದಿಂದ ಋಷಿಯು ತನ್ನ ಘೋರ ಪ್ರಾಯಶ್ಚಿತ್ತವನ್ನು ಮುಂದುವರಿಸುತ್ತಿದ್ದನು. ಆಗ, ಶ್ರೀ ಮಹಾವಿಷ್ಣುವು ತಾನೇ ವೈಕುಂಠ ರಾಮನ ರೂಪದಲ್ಲಿ "ಶಂಖು" (ಶಂಖ) ವನ್ನು ಊದುತ್ತಾ ತನ್ನ ಆಗಮನವನ್ನು ಸೂಚಿಸಿ, ತನ್ನ ಪತ್ನಿ ಸೀತೆ ಮತ್ತು ತಮ್ಮ ಲಕ್ಷ್ಮಣನ ಜೊತೆಗೂಡಿ, 'ಗಜೇಂದ್ರ ಮೋಕ್ಷಮ್' ಅನ್ನು ಹೋಲುವಂತೆ ಭಕ್ತನಾದ ಭದ್ರನ ಬಳಿ ಧಾವಿಸಿದನು - ಆದ್ದರಿಂದ, ರಾಮನ ಮೂರ್ತಿಯು (ನಾಲ್ಕು ಕೈಗಳನ್ನು ಹೊಂದಿದ್ದು)- ಬಲ ಕೈನಲ್ಲಿ ಶಂಖ (ಪಾಂಚಜನ್ಯ-ಶಂಖ), ಅವನ ಎಡದಲ್ಲಿ ಸುದರ್ಶನ ಚಕ್ರ ಮತ್ತು ಧನುರ್ಬಾಣ (ಉಳಿದ ಎರಡು ಕೈಗಳಲ್ಲಿ ಬಿಲ್ಲು ಮತ್ತು ಬಾಣ), ರಾಮನ ಎಡ ತೊಡೆಯಲ್ಲಿ ಸೀತೆಯು ಅನುಗ್ರಹಿಸುತ್ತಾ ಇದ್ದರೆ, ತಮ್ಮ (ರಾಮನ ಎಡದಲ್ಲಿ) ಇರುತ್ತಾರೆ. ದೇವರನ್ನು ಪ್ರತಿಷ್ಠಾಪಿಸಿರುವ ಬೆಟ್ಟದ ಸ್ಥಳವು, ಭದ್ರನ ತಲೆಯ ಭಾಗವಾಗಿತ್ತು ಹಾಗೂ ಅಚಲಮ್ (ಬೆಟ್ಟ), ಆದ್ದರಿಂದ ಈ ದೇಗುಲವು ಭದ್ರಾಚಲಂ ಆಗಿ ಪರಿವರ್ತನೆಯಾಯಿತು.

ವೈಕುಂಠ ರಾಮ, ಲಕ್ಷ್ಮಣ ಮತ್ತು ಸೀತೆಯ ವಿಗ್ರಹಗಳನ್ನು ಪೋಕಲ ಧಮ್ಮಕ್ಕ ಅವರು ಕಂಡುಹಿಡಿದರು. ರಾಮನ ಉತ್ಕಟ ಭಕ್ತೆಯಾದ ಪೋಕಲ ಧಮ್ಮಕ್ಕ ಅವರು 17 ನೇ ಶತಮಾನದಲ್ಲಿ ಜೀವಿಸಿದ್ದರು ಮತ್ತು ಅವರು ಈ ಪವಿತ್ರ ಸ್ಥಳದಿಂದ ಮೈಲು ದೂರದಲ್ಲಿರುವ ಭದ್ರಿರೆಡ್ಡಿಪಾಳೆಮ್‌ನ ನಿವಾಸಿಯಾಗಿದ್ದರು. ಒಂದು ದಿನ ರಾತ್ರಿ, ಅವಳ ಕನಸಿನಲ್ಲಿ ಬಂದ ರಾಮನು " ಮುನಿಗಳು ಮತ್ತು ಋಷಿಗಳು ಭದ್ರಗಿರಿಯಲ್ಲಿ ನೆಲೆಸಿರುವ ನನ್ನ ಸಶರೀರವಾದ ಮೂರ್ತಿಯನ್ನು ಪೂಜಿಸುತ್ತಿದ್ದಾರೆ" ಎಂದು ಹೇಳಿ ಅವುಗಳನ್ನು ಪತ್ತೆ ಹಚ್ಚಿ, ಪೂಜೆ ಮಾಡುವಂತೆ ಮತ್ತು ಮೋಕ್ಷವನ್ನು ಪಡೆಯುವಂತೆ ಅವಳಿಗೆ ಹೇಳುತ್ತಾನೆ. ಮಾರನೇ ದಿನ ಮುಂಜಾನೆಯಿಂದಲೇ ವಿಗ್ರಹಗಳನ್ನು ಪತ್ತೆ ಹಚ್ಚಲು ಅವಳು ಪ್ರಾರಂಭಿದ ಅವಳು ಇರುವೆಯ ಹುತ್ತವೊಂದರಲ್ಲಿ ಇಣುಕಿದಾಗ ವಿಗ್ರಹಗಳು ಅದರಲ್ಲಿ ಮರೆಯಾಗಿ ಇರುವುದನ್ನು ನೋಡುತ್ತಾಳೆ. ಅವಳು ನೂರಾರು ಕೊಡ ಗೋದಾವರಿ ನೀರನ್ನು ಇರುವೆ-ಹುತ್ತದ ಮೇಲೆ ಸುರಿಯುತ್ತಾಳೆ, ಅದು ನಿಧಾನವಾಗಿ ಕರಗುತ್ತದೆ ಮತ್ತು ಮರೆಯಾಗಿರುವ ವಿಗ್ರಹಗಳು ಕಂಡು ಬರುತ್ತವೆ. ಅಂದಿನಿಂದ, ಅವಳು ಪ್ರತಿನಿತ್ಯ ಪೂಜೆ ಮಾಡಲು ಪ್ರಾರಂಭಿಸುತ್ತಾಳೆ ಮತ್ತು ಹತ್ತಿರದ ತಾಳೆಯ ಮರದಿಂದ ಉದುರಿದ ಹಣ್ಣುಗಳಿಂದ 'ನೈವೇದ್ಯ' ವನ್ನು ಅರ್ಪಿಸುತ್ತಾಳೆ. ನಂತರ ಅವಳು ಸ್ಥಳೀಯ ಗ್ರಾಮಸ್ಥರ ಸಹಕಾರದೊಂದಿಗೆ ಹುಲ್ಲಿನ ಗುಡಿಸಲಿನ ಮಂಟಪವನ್ನು ನಿರ್ಮಿಸುತ್ತಾಳೆ. ನಂತರದ ದಿನಗಳಲ್ಲಿ ತನ್ನ ಭಕ್ತನೊಬ್ಬನು ಈ ಸ್ಥಳದಲ್ಲಿ ಮಂದಿರವನ್ನು ನಿರ್ಮಸುವನೆಂದು ಭಗವಾನ್ ರಾಮನು ಧಮ್ಮಕ್ಕನಿಗೆ ತಿಳಿಸುತ್ತಾನೆ. ಧಮ್ಮಕ್ಕನು ತಾಳ್ಮೆಯಿಂದ ಭಕ್ತಾದಿಗೆ ನಿರೀಕ್ಷಿಸುತ್ತಾಳೆ. ಆದರೆ ಆ ಭಕ್ತನು ಭಕ್ತ ರಾಮದಾಸನಾಗಿರುತ್ತಾನೆ.

ಭಕ್ತ ರಾಮದಾಸ ಮತ್ತು ದೇವಾಲಯದ ನಿರ್ಮಾಣ : ಭದ್ರಾಚಲಂ ದೇವಾಲಯವನ್ನು ಭಕ್ತ ರಾಮದಾಸನೆಂದು ಜನಪ್ರಿಯನಾಗಿದ್ದ ಕಾಂಚರ್ಲ ಗೋಪಣ್ಣ ಅವರು 1647 ಎ.ಡಿ. ಯಲ್ಲಿ ನಿರ್ಮಾಣ ಮಾಡಿದರು. "ಭಕ್ತ ರಾಮದಾಸ" ಎಂದು ಜನಪ್ರಿಯರಾಗಿರುವ ಕಾಂಚರ್ಲ ಗೋಪಣ್ಣ ಅವರು ರಾಮನ ಉತ್ಕಟ ಭಕ್ತರಾಗಿದ್ದು, ಲಿಂಗಣ್ಣ ಮೂರ್ತಿ ಮತ್ತು ಕಾಮಾಂಬ ದಂಪತಿಗಳ ಪುತ್ರರಾಗಿ ಖಮ್ಮಮೇಟ್ ತಾಲ್ಲೂಕಿನ ನೆಲಕೊಂಡಪಲ್ಲಿ ಗ್ರಾಮದಲ್ಲಿ 17 ನೇ ಶತಮಾನ (1620 ಎಡಿ) ದಲ್ಲಿ ಜನಿಸಿದರು. ಇವರು ಗೋಲ್ಕೊಂಡಾದ "ತಾನೇಶಾಹ್" (ಔರಂಗಜೇಬ್ 1687 ಎ.ಡಿ. ಯಲ್ಲಿ ಗೋಲ್ಕೊಂಡವನ್ನು ವಶಪಡಿಸಿಕೊಳ್ಳುವ ಮುನ್ನ ಇವನೇ ಕೊನೆಯ ದೊರೆಯಾಗಿದ್ದನು) ಎಂದೇ ಖ್ಯಾತರಾದ ಕುತುಬ್ ಶಾಹಿ ರಾಜನಾದ ಅಬ್ದುಲ್ ಹುಸನ್‌ನ ನ್ಯಾಯಾಲಯದಲ್ಲಿ ನಿರ್ವಹಣೆಯ ಮುಖ್ಯಸ್ಥರಾಗಿದ್ದ ಅಕ್ಕಣ್ಣನವರ ಸೋದರ ಸಂಬಂಧಿಯಾಗಿದ್ದರು ನಂತರ ಅವರೇ ಗೋಪಣ್ಣ ಅವರನ್ನು "ಪಲ್ವೋಂಚಾ ಪರಗಣ" ದ ತಹಶೀಲ್ದಾರರಾಗಿ ನೇಮಿಸಿದರು. ಆದ್ದರಿಂದ ಅವರು ತಮ್ಮ ದೈನಂದಿನ ಧರ್ಮೋಪದೇಶ -'ರಾಮನಾಮ' ದ ಪಠಣ ಮತ್ತು ತಮ್ಮ ಮನೆಯಲ್ಲಿ ಬಡವರಿಗೆ ಭೋಜನ ನೀಡುವುದರ ಜೊತೆಗೆ ಕುತುಬ್ ಶಾಹಿ ರಾಜರ ಕಾರಣದಿಂದ ತಮ್ಮ ಅಧಿಕೃತ ಕರ್ತವ್ಯವನ್ನು ಶ್ರದ್ಧೆಯಿಂದ ನಿರ್ವಹಿಸುತ್ತಿದ್ದು ಕಂದಾಯವನ್ನು ಸಂಗ್ರಹಿಸುತ್ತಿದ್ದರು. 'ಪಲ್ವೋಂಚಾ ಪರಗಣ' ದ ಗ್ರಾಮಸ್ಥರು ಭದ್ರಾಚಲಂನಲ್ಲಿ ಜಾತ್ರೆಯನ್ನು ವೀಕ್ಷಿಸಲು ತೆರಳುತ್ತಿದ್ದಾರೆ ಎಂಬ ವಿಷಯವನ್ನು ತಿಳಿದ ರಾಮದಾಸರು, ಆಸಕ್ತಿಯಿಂದ ತಾವೂ ಭದ್ರಾಚಲಂಗೆ ಭೇಟಿ ನೀಡಿದರು. ಅವರಿಗೆ ದೇವರ ಮೂರ್ತಿಗಳು ವಿಸ್ಮಯಕಾರಿಯಾಗಿ ಕಂಡಿತು. ತದನಂತರ ದೇವಸ್ಥಾನವನ್ನು ನಿರ್ಮಿಸಲು ಉದಾರವಾಗಿ ದಾನ ನೀಡಬೇಕೆಂದು ರಾಮದಾಸರು ಗ್ರಾಮಸ್ಥರಿಗೆ ವಿನಂತಿಸಿದರು. ಆದರೆ ದೇಣಿಗೆಯು ಸಾಕಷ್ಟು ಸಂಗ್ರಹವಾಗದಿರುವುದನ್ನು ಕಂಡ ಗ್ರಾಮಸ್ಥರು, ಕಂದಾಯದ ಸಂಗ್ರಹವನ್ನು ದೇವಾಲಯದ ನಿರ್ಮಾಣಕ್ಕೆ ಬಳಸಿಕೊಳ್ಳುವಂತೆ ರಾಮದಾಸರಿಗೆ ವಿನಂತಿಸಿ ಫಸಲು ಸಂಗ್ರಹವಾದ ನಂತರ ಅದನ್ನು ಮರಳಿ ಪಾವತಿಸುವ ಭರವಸೆಯನ್ನು ನೀಡಿದರು. ಆ ಪ್ರಕಾರವಾಗಿ, ಕುತುಬ್ ಶಾಹಿ ಕಿಂಗ್ ತಾನೇಶಾಹ್ ಅವರ ಅನುಮತಿಯಿಲ್ಲದೇ ಭೂ ಕಂದಾಯದಿಂದ ಸಂಗ್ರಹವಾಗಿದ್ದ 6 ಲಕ್ಷ ರೂಪಾಯಿಗಳನ್ನು ಬಳಸಿ ರಾಮದಾಸರು ದೇವಾಲಯವನ್ನು ನಿರ್ಮಾಣ ಮಾಡಿದರು.

ದೇವಾಲಯವು ಇನ್ನೇನು ಪೂರ್ಣಗೊಳ್ಳಲಿರುವಾಗ, ಮುಖ್ಯ ದೇವಾಲಯದ ಶಿಖರದಲ್ಲಿ 'ಸುದರ್ಶನ ಚಕ್ರ' ವನ್ನು ಕೂರಿಸುವಲ್ಲಿ ಅವರಿಗೆ ಸಮಸ್ಯೆ ಉಂಟಾಯಿತು. ಅದರಿಂದ ತೀರಾ ವ್ಯಥೆ ಪಟ್ಟ ಅವರು ಅಲ್ಲೇ ನಿದ್ರೆಗೆ ಜಾರಿದರು. ಅದೇ ರಾತ್ರಿ ಅವರ ಕನಸಿನಲ್ಲಿ ಕಾಣಿಸಿಕೊಂಡ ರಾಮನು ಗೋದಾವರಿ ನದಿಯಲ್ಲಿ ಸ್ನಾನ ಮಾಡುವಂತೆ ಹಾಗೂ ಅಲ್ಲಿಯೇ ಅವರಿಗೆ ಅದು ದೊರಕುವುದೆಂದು ತಿಳಿಸುತ್ತಾನೆ. ಮರು ದಿನ ಬೆಳಿಗ್ಗೆ ಅದೇ ರೀತಿ ಗೋಪಣ್ಣನವರು ಮಾಡುತ್ತಾರೆ ಹಾಗೂ ಹೆಚ್ಚು ಕಷ್ಟವಿಲ್ಲದೇ ಪವಿತ್ರ ಸುದರ್ಶನ ಚಕ್ರವನ್ನು ನದಿಯಲ್ಲಿ ಕಾಣುತ್ತಾರೆ. ಅವರ ಪೂಜ್ಯ ರಾಮನ ದೈವಿಕ ಶಕ್ತಿಯಿಂದಲೇ ತನ್ನಷ್ಟಕ್ಕೇ ಸುದರ್ಶನ ಚಕ್ರವು ರೂಪುಗೊಂಡಿದೆ ಎಂದು ಅವರು ಭಾವಿಸುತ್ತಾರೆ. ನಿರ್ಮಾಣದ ತತ್‌ಕ್ಷಣವೇ, ಅವರ ಕಷ್ಟಗಳು ಪ್ರಾರಂಭವಾಗುತ್ತವೆ. ದೇವಾಲಯದ ನಿರ್ಮಾಣಕ್ಕಾಗಿ ಕಂದಾಯದ ಹಣವನ್ನು ದುರುಪಯೋಗಪಡಿಸಿಕೊಂಡ ಕಾರಣಕ್ಕಾಗಿ ಅವರನ್ನು ಸೇವೆಯಿಂದ ವಜಾ ಮಾಡಲಾಗುತ್ತದೆ ಹಾಗೂ ಅವರನ್ನು ಗೋಲ್ಕೊಂಡ ಕೋಟೆಯಲ್ಲಿ ಸುದೀರ್ಘ 12 ವರ್ಷಗಳವರೆಗೆ ಜೈಲಿನಲ್ಲಿರಿಸಿ ಹಿಂಸೆ ನೀಡಲಾಗುತ್ತದೆ. ಕಷ್ಟಗಳನ್ನು ಸಹಿಸಲಾರದ ರಾಮದಾಸರು ರಾಮನನ್ನು ಶ್ಲಾಘಿಸುವ ಮತ್ತು ಭಾವನಾತ್ಮಕ ಗೀತೆಗಳನ್ನು ಹಾಡಿ ತನ್ನನ್ನು ಮುಕ್ತಗೊಳಿಸುವಂತೆ ರಾಮನಲ್ಲಿ ಮೊರೆಯಿಡುತ್ತಾರೆ, ಅವುಗಳು ಭಕ್ತ ರಾಮದಾಸರ 'ದಾಶರಥಿ ಶತಕಮ್' ಮತ್ತು 'ಕೀರ್ತನೆಗಳು' ಪದ್ಯಗಳಿಂದ ಜನಪ್ರಿಯವಾಯಿತು.

ಗೋಲ್ಕೊಂಡಾದ ಆಗಿನ ದೊರೆಯಾಗಿದ್ದ ಕುತುಬ್ ಶಾಹಿ ರಾಜ ತಾನೇಶಾಹ್ ಅವರು ರಾಮನ ಭಕ್ತರಾಗುತ್ತಾರೆ ಮತ್ತು ರಾಮದಾಸರ ಜೈಲುಶಿಕ್ಷೆಯ ಬಳಿಕ ಅವರ ದೈವಿಕ ಪ್ರವೃತ್ತಿಯನ್ನು ಮನಗಾಣುತ್ತಾರೆ, ಅಲ್ಲದೇ ದೇವಾಲಯದ ಆಡಳಿತವನ್ನು ತಮ್ಮ ಸುಪರ್ದಿಗೆ ಪಡೆದುಕೊಳ್ಳುತ್ತಾರೆ. ಇದು ಹಿಂದೂಗಳು ಮತ್ತು ಮುಸಲ್ಮಾನರ ನಡುವಿನ ಧಾರ್ಮಿಕ ಸಾಮರಸ್ಯತೆಯನ್ನು ತೋರಿಸುತ್ತದೆ. ರಾಮ ಮತ್ತು ಲಕ್ಷ್ಮಣರು ಭಕ್ತ ರಾಮದಾಸರ ಸೇವಕರಾದ ರಾಮೋಜಿ ಮತ್ತು ಲಕ್ಷ್ಮೋಜಿ ಎಂದು ಗುರುತಿಸಿಕೊಂಡು 6 ಲಕ್ಷ ಮೊಹರುಗಳನ್ನು ಮರುಪಾವತಿ ಮಾಡಿ ತಮ್ಮ ಭಕ್ತನನ್ನು ಜೈಲಿನಿಂದ ಬಿಡುಗಡೆಗೊಳಿಸಿದಾಗ, ಕುತುಬ್ ಶಾಹಿ ರಾಜನು ರಾಮದಾಸರ ದೈವಿಕ ಪ್ರವೃತ್ತಿ ಮತ್ತು ರಾಮನ ಬಗೆಗಿರುವ ಅವರ ಸಮರ್ಪಣೆಯನ್ನು ಮನಗಾಣುತ್ತಾರೆ. ಮಧ್ಯರಾತ್ರಿಯಂದು ತಮ್ಮ ಮನೆಯಲ್ಲಿ ಸಂಪರ್ಕಿಸಿದ ಈ ದೈವಿಕ ನೋಟದ ವ್ಯಕ್ತಿಗಳಿಗೆ ತಾನೀಶಾಹ್ ಅವರು ಹಣ ಸಂದಾಯದ ರಶೀತಿಯನ್ನು ನೀಡುತ್ತಾರೆ. ನಂತರ ಆ ವ್ಯಕ್ತಿಗಳು ರಶೀತಿಯನ್ನು ಜೈಲಿನಲ್ಲಿರುವ ಗೋಪಣ್ಣರ ದಿಂಬಿನ ಕೆಳಗೆ ಇಡುತ್ತಾರೆ. ಬೆಳಿಗ್ಗೆ ತನೀಶಾಹ್ ಎಚ್ಚರವಾದಾಗ ಈ ದೈವಿಕ ನೋಟದ ವ್ಯಕ್ತಿಗಳು ಬೇರೆ ಯಾರೂ ಆಗಿಲ್ಲದೇ ರಾಮ ಮತ್ತು ಲಕ್ಷ್ಮಣರಾಗಿದ್ದರು ಎಂಬುದನ್ನು ಮನಗಾಣುತ್ತಾರೆ ಮತ್ತು ಗೋಪಣ್ಣ ಅವರ ಬಿಡುಗಡೆಗೆ ವ್ಯವಸ್ಥೆಯನ್ನು ಮಾಡುವುದಲ್ಲದೇ ರಾತ್ರಿ ಸ್ವೀಕರಿಸಿದ ಎಲ್ಲಾ ಚಿನ್ನದ ಮೊಹರುಗಳನ್ನು ಗೋಪಣ್ಣ ಅವರ ಕಾಲಿನ ಬಳಿ ಇಟ್ಟು ಕ್ಷಮಿಸುವಂತೆ ಪ್ರಾರ್ಥಿಸುತ್ತಾರೆ. ಆದರೆ, ಗೋಪಣ್ಣ ಅವರು ಆ ಮೊಹರುಗಳನ್ನು ತೆಗೆದುಕೊಳ್ಳಲು ನಿರಾಕರಿಸಿ ದೈವಿಕ ಪ್ರಾಮುಖ್ಯತೆಯ ಕಾರಣದಿಂದ ಎರಡು ಮೊಹರುಗಳನ್ನು ಮಾತ್ರ ಸ್ವೀಕರಿಸುತ್ತಾರೆ. (ಆ ಎರಡು ಚಿನ್ನದ ನಾಣ್ಯಗಳನ್ನು ಇಂದಿಗೂ ಸಹ ಭದ್ರಾಚಲ ಶ್ರೀ ಸೀತಾ ರಾಮಚಂದ್ರ ಸ್ವಾಮಿ ದೇವಾಲಯದಲ್ಲಿ ಕಾಣಬಹುದು).

ಭಗವಾನ್ ರಾಮನ ಮಹಿಮೆಯಿಂದ ಪ್ರಭಾವಿತರಾಗಿ, ಗೋಲ್ಕೊಂಡ ರಾಜರಾದ ತಾನೇಶಾಹ್, ಪಲ್ವೊಂಚಾ ಪರಗಣದಿಂದ ಉತ್ಪತ್ತಿಯಾದ ಆದಾಯವಾದ ಸುಮಾರು 20,000 ರೂಪಾಯಿಗಳನ್ನು ದೇವಾಲಯದ ನಿರ್ವಹಣೆಗೆ ಮೀಸಲಾಗಿಟ್ಟರು ಮತ್ತು ಇದು ನಂತರದ ಅಸಫ್ ಜಾಹಿಯವರ (ನಿಜಾಮರ) ಕಾಲಾವಧಿಯಲ್ಲೂ ಮುಂದುವರಿಯಿತು.ವಿಶೇಷ ದೂತನ ಮೂಲಕ ಆನೆಯ ಮೇಲೆಕಲ್ಯಾಣ ಮಹೋತ್ಸವದ (ಭಗವಾನ್ ರಾಮ ಮತ್ತು ಸೀತೆಯ ವಿವಾಹ ಸಮಾರಂಭ -ಮಂಗಳಕರವಾದ ರಾಮ ನವಮಿಯಂದು ನಡೆಸಲಾಗುವ ದೇವಾಲಯದ ಆಚರಣೆ) ಸಂದರ್ಭದಲ್ಲಿ ದೇವರಿಗೆ ಮುತ್ತುಗಳನ್ನು (ಮುತ್ಯಾಲ ತಾಲಂಬ್ರಾಳು) ಅರ್ಪಿಸುವ ಆಚರಣೆಯು ಕುತುಬ್ ಶಾಹಿ ರಾಜ ತಾನೇಶಾನ್ ಅವರಿಂದ ಪ್ರಾರಂಭಗೊಂಡು ನಂತರ ಅದನ್ನು ಅಸಫ್ ಜಾಹಿಯವರೂ ಸಹ ಅನುಸರಿಸಿದರು. ದೇವರಿಗೆ ಮುತ್ತುಗಳನ್ನು ಕಳುಹಿಸಲು ಪದ್ಧತಿಯನ್ನು ಇಂದಿಗೂ ಸಹ ಪ್ರಸ್ತುತ ರಾಜ್ಯ ಸರ್ಕಾರವು ಅನುಸರಿಸುತ್ತಿದೆ ಮತ್ತು ರಾಜ್ಯ ಸರ್ಕಾರವು ಶ್ರೀ ರಾಮ ನವಮಿ ಉತ್ಸವದ (ಕಲ್ಯಾಣ ಮಹೋತ್ಸವ) ಸಂದರ್ಭದಲ್ಲಿ ಮುತ್ತುಗಳನ್ನು ಅರ್ಪಣೆ ಮಾಡುವುದನ್ನು ಮುಂದುವರಿಸಿದೆ. ರಾಮದಾಸ ಅವರು ಮುಂಜಾನೆ "ಸುಪ್ರಭಾತ ಸೇವೆ" ಯಿಂದ ಹಿಡಿದು ರಾತ್ರಿ ದೇವಸ್ಥಾನವು ಮುಚ್ಚುವ ಮುನ್ನ ಮಾಡುವ "ಪಾವಲಿಂಪು ಸೇವಾ", ಹೀಗೆ ಎಲ್ಲಾ ನಿತ್ಯ ಪೂಜೆಗಳ ನಿರ್ವಹಣೆಯನ್ನು "ಶಿಲಾಶಾಸನಗಳು" ಎಂಬುದಾಗಿ ಕೆತ್ತಿಸಿದ ಬಳಿಕ ಪಲ್ವೊಂಚಾ ಪರಗಣದ ತಹಶೀಲ್ದಾರರಾದ ತುಮು ನರಸಿಂಹ ದಾಸ ಅವರು ತಮ್ಮ ಸಹಯೋಗಿಯಾದ ವರದ ರಾಮದಾಸರೊಂದಿಗೆ ಗುಂಟೂರಿನಿಂದ ಇಲ್ಲಿಗೆ ಬಂದು ಭದ್ರಾಚಲರಾಮ ದೇವಸ್ಥಾನದ ಅಧಿಕಾರವನ್ನು ವಹಿಸಿಕೊಂಡರು. ಕೆತ್ತಿದ ಬರಹಗಳು ದೈನಂದಿನ ಸೂಕ್ತಿಗಳು ಮತ್ತು ಧಾರ್ಮಿಕ ಅನುಷ್ಠಾನಗಳ ವಿವರಗಳನ್ನೂ ನೀಡುತ್ತದೆ.

ಭದ್ರಾಚಲಂನ ಇತರ ಪ್ರಮುಖ ದೇವಾಲಯಗಳು

ಬದಲಾಯಿಸಿ

ಶ್ರೀ ಸೀತಾ ರಾಮಚಂದ್ರ ಸ್ವಾಮಿ ದೇವಾಲಯದೊಂದಿಗೆ ಪಟ್ಟಣದಲ್ಲಿರುವ ಇತರ ಪ್ರಮುಖ ದೇವಾಲಯಗಳು ಹೀಗಿವೆ:

  1. ಶ್ರೀ ಅನ್ನಪೂರ್ಣ ಕಾಶಿ ವಿಶ್ವೇಶ್ವರ ಸ್ವಾಮಿ ದೇವಾಲಯ
  2. ಶ್ರೀ ಯೋಗಾನಂದ ಜ್ವಾಲಾ ಲಕ್ಷ್ಮೀ ನರಸಿಂಹ ಸ್ವಾಮಿ ದೇವಾಲಯ
  3. ಶ್ರೀ ಗೋವಿಂದ ರಾಜಾ ಸ್ವಾಮಿ ದೇವಾಲಯ (ತಾತಗುಡಿ)
  4. ಶ್ರೀ ಸಾಯಿಬಾಬ ದೇವಾಲಯ
  5. ಶ್ರೀ ಅಭಯಾಂಜನೇಯ ಸ್ವಾಮಿ ದೇವಾಲಯ
  6. ಶ್ರೀ ರಾಜಾ ರಾಜೇಶ್ವರಿ ದೇವಾಲಯ
  7. ಶ್ರೀ ಅಯ್ಯಪ್ಪ ಸ್ವಾಮಿ ದೇವಾಲಯ
  8. ಶ್ರೀ ಹರನಾಥ್ ಬಾಬಾ ಮಂದಿರ
  9. ಶ್ರೀ ಅಂಬಾ ಸತ್ರಮ್ ದೇವಾಲಯ

ಅಲ್ಲಿ ಇನ್ನೂ ಹಲವಾರು ದೇವಾಲಯಗಳಿವೆ. ಭದ್ರಾಚಲಂನ ಸುತ್ತಲೂ ಭೇಟಿ ನೀಡಲು ಹಲವಾರು ಸ್ಥಳಗಳಿವೆ. ಭದ್ರಾಂಚಲನಲ್ಲಿರುವ ಇತರ ಪ್ರಮುಖ ದೇವಾಲಯಗಳು ಹೀಗಿವೆ:

  1. ಶ್ರೀ ವೆಂಕಟೇಶ್ವರ ಸ್ವಾಮಿ ದೇವಾಲಯ (ಅಂಬೇಡ್ಕರ್ ಸೆಂಟರ್ ಹತ್ತಿರ, ಬಸ್‌ಸ್ಟ್ಯಾಂಡ್, ಬಿಸಿಎಮ್)
  2. ಶ್ರೀಕೃಷ್ಣ ದೇವಾಲಯ (ರಾಮಾಲಯಮ್‌ಗೆ ಹೋಗುವ ಮಾರ್ಗದಲ್ಲಿ)
  3. ಶ್ರೀ ದುರ್ಗಾ ದೇವಿ ದೇವಾಲಯ (ಐಟಿಡಿಎ ಹತ್ತಿರ)
  4. ಶ್ರೀ ಕೋದಂಡ ರಾಮ ದೇವಾಲಯ (ಪೊಲೀಸ್ ಸ್ಟೇಶನ್ ಬಳಿ, ಬಿಸಿಎಮ್)

ಈ ಮೇಲಿನ ದೇವಾಲಯಗಳ ಜೊತೆಗೆ ಭದ್ರಾಚಲಂನಲ್ಲಿನ ಇತರ ಪ್ರಮುಖವಾದ ದೇವಾಲಯವೆಂದರೆ ಮುಖ್ಯ ದೇವಸ್ಥಾನದ ಬಳಿ ಇರುವ ಭಗವಾನ್ ಶಿವನ ದೇವಾಲಯ ಮತ್ತು ಕಲ್ಯಾಣ ಮಂಟಪವೆಂದರೆ "ಸಾಧುವಲ ಮಥಮ್". ಈ ದೇವಾಲಯದಿಂದ ನೆಲದಡಿಯ ಮಾರ್ಗವಿದೆ ಎಂಬ ಪ್ರತೀತಿ ಇದೆ. ಈ ದೇವಾಲಯವನ್ನು ಇತ್ತೀಚೆಗೆ ಜೀರ್ಣೋದ್ಧಾರ ಮಾಡಲಾಗಿದೆ.

ಭದ್ರಾಚಲಂ ಸುತ್ತಮುತ್ತಲಿನ ಭೇಟಿ ನೀಡುವ ಸ್ಥಳಗಳು

ಬದಲಾಯಿಸಿ

ಪರ್ಣಶಾಲಾ

ರಾಮನು ದಂಡಕಾರಣ್ಯದಲ್ಲಿ ವನವಾಸದ ಸಂದರ್ಭದಲ್ಲಿ ಕುಟೀರವನ್ನು ಸ್ಥಾಪಿಸಿ ಅವನ ಗಡೀಪಾರಿನ ಸಮಯವನ್ನು ಪತ್ನಿ ಸೀತೆ ಮತ್ತು ತಮ್ಮ ಲಕ್ಷ್ಮಣನೊಂದಿಗೆ ಕಳೆದ ನಿಖರವಾದ ಸ್ಥಳವು ಇದೇ ಆಗಿದೆ. ಅಗಸ್ತ್ಯರು ರಾಮನಿಗೆ ಈ ಸ್ಥಳವನ್ನು ಹುಡುಕಿಕೊಟ್ಟರು ಮತ್ತು ಇದು ಭದ್ರಾಚಲಂನಿಂದ 35 ಕಿಮೀ ದೂರದಲ್ಲಿದೆ.

ವನವಾಸದ ಕೆಲವು ದೃಶ್ಯಗಳ ಆಕರ್ಷಣೀಯ ಪ್ರದರ್ಶನವನ್ನು ಪರ್ಣಶಾಲಾದಲ್ಲಿ ನೋಡಬಹುದು. ಸೀತೆಯ ಪಾದದ ಗುರುತುಗಳು, ಚಿನ್ನದ ಜಿಂಕೆಯ ರೂಪದಲ್ಲಿದ್ದ ಮಾರೀಚ ಮತ್ತು ಭಿಕ್ಷಾಟನೆಗಾಗಿ ಸನ್ಯಾಸಿಯ ವೇಷದಲ್ಲಿದ್ದ ರಾವಣನ ಕಲಾಕೃತಿಯನ್ನು ನೋಡಬಹುದು. ಹತ್ತಿರದಲ್ಲೇ ಕಂಡುಬರುವಂತಹುದು ಸೀತಾ ವಾಗು- ಇಲ್ಲಿಯೇ ಸೀತೆಯು ಸ್ನಾನ ಮಾಡಿದ್ದಳು ಮತ್ತು ಹತ್ತಿರದ ಕಲ್ಲುಗಳಿಂದ ಅರಿಶಿಣ ಮತ್ತು ಕುಂಕುಮವನ್ನು ಸಂಗ್ರಹಿಸಿದ್ದಳು, ಮತ್ತು ಸೀತಾ ವಾಗು ಹತ್ತಿರದಲ್ಲೇ ಅವಳ ಸೀರೆಯ ಗುರುತುಗಳನ್ನು ಕಲ್ಲಿನಲ್ಲಿ ಕಾಣಬಹುದು. ಇವೆಲ್ಲವೂ ಭಕ್ತಾದಿಗಳಿಗೆ ಭೇಟಿ ನೀಡುವ ಸ್ಥಳಗಳಾಗಿವೆ. ರಾವಣನು ಸೀತೆಯನ್ನು ಅಪಹರಿಸಿದ ಕಾರಣದಿಂದ, ಪರ್ಣಶಾಲಾದ ದೇವರನ್ನು ಸೋಕರಮಾ ಎಂದು ಕರೆಯಲಾಗುತ್ತದೆ. ಸೀತೆಯನ್ನು ಅಪಹರಿಸುವಾಗ ರಾವಣನ ರಥವು ಸಾಗಿದ ಹಾದಿಯನ್ನು ಪರ್ಣಶಾಲಾ ದೇವಾಲಯದ ನದಿ ತೀರದ ಮತ್ತೊಂದು ಬದಿಯಲ್ಲಿನ ಪರ್ವತದಲ್ಲಿ ಕಾಣಬಹುದು.

ಜಟಾಯು ಪಾಕ (ಯೆತಪಾಕ)

ಈ ಸ್ಥಳವು ಭದ್ರಾಚಲಂನಿಂದ 2 ಕಿಮೀ ದೂರದಲ್ಲಿದೆ. ಇತಿಹಾಸಗಳ ಪ್ರಕಾರ, ಸೀತೆಯನ್ನು ಅಪಹರಿಸಿದ ಬಳಿಕ ರಾವಣನು ರಥದಲ್ಲಿ ತೆರಳುತ್ತಿರುವಾಗ ರಾಮನ ಭಕ್ತನಾಗಿದ್ದ ಪಕ್ಷಿ ಜಟಾಯುವು ಅವನನ್ನು ಅಡ್ಡಿಪಡಿಸಿತು. ರಾವಣ ಮತ್ತು ಜಟಾಯುವು ನಡುವಿನ ಭೀಕರ ಕಾಳಗದ ಬಳಿಕ, ತೀವ್ರವಾಗಿ ಗಾಯಗೊಂಡ ಪಕ್ಷಿಯು ಇದೇ ಸ್ಥಳದಲ್ಲಿ ರಾಮನಿಗಾಗಿ ಕಾದು ಕುಳಿತಿತ್ತು. ಈ ಪಕ್ಷಿಯ ರೆಕ್ಕೆಯೊಂದು ಇಲ್ಲಿಂದ 55 ಕಿಮೀ ದೂರದಲ್ಲಿರುವ, ವಿ.ಆರ್.ಪುರಂ ಮಂಡಲದಲ್ಲಿರುವ ರೆಕ್ಕಪಲ್ಲಿಯಲ್ಲಿ ಕೆಳಗೆ ಬಿದ್ದಿತು.

ದುಮ್ಮುಗುಡೆಮ್

ಇಲ್ಲಿ ರಾಮನನ್ನು ಆತ್ಮರಾಮ ಎಂದು ಕರೆಯಲಾಗುತ್ತದೆ. ಖರ ಮತ್ತು ದುಶಾನ ಎಂಬ ಸೋದರರ ನಾಯಕತ್ವದ 14000 ರಾಕ್ಷಸರನ್ನು ರಾಮನು ಸಂಹರಿಸಿದನು ಎಂದು ಕಥೆ ಹೇಳುತ್ತದೆ. ಈ ರಾಕ್ಷಸರ ಭಸ್ಮಗಳ ಮೇಲೆ ಈ ಗ್ರಾಮವನ್ನು ನಿರ್ಮಾಣ ಮಾಡಿದೆ ಎಂದು ಹೇಳಲಾಗಿರುವುದರಿಂದ, ಸ್ಥಳವನ್ನು ದುಮ್ಮಗುಡೆಮ್ ಎಂದು ಹೆಸರಿಸಲಾಗಿದೆ.

ಗುಂಡಾಲಾ

ಈ ಸ್ಥಳವು ಪವಿತ್ರ ಪಟ್ಟಣವಾದ ಭದ್ರಾಚಲಂನಿಂದ 5 ಕಿಮೀ ದೂರದಲ್ಲಿದ್ದು, ಇಲ್ಲಿನ ನದೀ ತಿರದ ಯಾವುದೇ ಪ್ರದೇಶದಲ್ಲಿ ನಾವು ಹೊಂಡ ತೋಡಿದರೂ ಬಿಸಿ ನೀರಿನ ಬುಗ್ಗೆಯನ್ನು ಕಾಣಬಹುದು. ಬ್ರಹ್ಮ ಪುರಾಣದ ಪ್ರಕಾರ ದೈವಿಕ ತ್ರಿಮೂರ್ತಿಗಳು (ಬ್ರಹ್ಮ ವಿಷ್ಣು ಮಹೇಶ್ವರ) ಚಳಿಗಾಲದಲ್ಲಿ ಇಲ್ಲಿ ಸ್ನಾನ ಮಾಡಿದರು ಎಂದು ನಂಬಲಾಗಿದೆ.

ಶ್ರೀ ರಾಮಗಿರಿ

ಈ ಸ್ಥಳವು ಇಲ್ಲಿಂದ ಸುಮಾರು 55 ಕಿಮೀ ದೂರದಲ್ಲಿ ಗೋದಾವರಿಯ ನದಿಯ ಹರಿವಿನ ದಿಕ್ಕಿನ ದಡದಲ್ಲಿದೆ. ಯೋಗ ರಾಮ ದೇವಾಲಯದ ದೇವರು ಪರ್ವತದಲ್ಲಿದ್ದು, ಅದನ್ನು ರಾಮಗಿರಿ ಎಂದು ಹೆಸರಿಸಲಾಗಿದೆ.

ಶೈಕ್ಷಣಿಕ ಸಂಸ್ಥೆಗಳು

ಬದಲಾಯಿಸಿ
  1. ಭಾರತಿ ವಿದ್ಯಾ ನಿಕೇತನ
  2. ಗೌತಮ್ ಮಾಡೆಲ್ ಸ್ಕೂಲ್
  3. ಜ್ಯೋತಿ ಎಜುಕೇಶನ್ ಸೊಸೈಟಿ ಮತ್ತು ಜ್ಯೋತಿ ಕಾನ್ವೆಂಟ್
  4. ಭದ್ರಾಚಲಂ ಪಬ್ಲಿಕ್ ಸ್ಕೂಲ್ ಮತ್ತು ಜೂನಿಯರ್ ಕಾಲೇಜ್
  5. ಸರ್ಕಾರಿ ಪದವಿ ಕಾಲೇಜು
  6. ಪಿ.ಎಸ್.ಯು.ಪಿ ಸ್ಕೂಲ್
  7. ಸರ್ಕಾರಿ ಬಾಲಕಿಯರ ಪ್ರೌಢಶಾಲೆ
  8. ಸೈಂಟ್ ಪಾಲ್ಸ್ ಹೈಸ್ಕೂಲ್
  9. ಸೈಂಟ್ ಆನ್ಸ್ ಪ್ರೌಢಶಾಲೆ
  10. ಲಿಟ್ಲ್ ಫ್ಲವರ್ಸ್ ಪ್ರೌಢಶಾಲೆ ಮತ್ತು ಜೂನಿಯರ್ ಕಾಲೇಜ್
  11. ಮೈದಿಲಿ ಬಾಲಕಿಯರ ಕಾಲೇಜು
  12. ಡಾ. ಪಾಲ್ ರಾಜ್ ಇಂಜಿನಿಯರಿಂಗ್ ಕಾಲೇಜ್
  13. ನನ್ನಪಾಣೇನಿ ಮೋಹನ್ ಫೌಂಡೇಶನ್ ಸರ್ಕಾರಿ ಶಾಲೆ.
  14. ಮಯೂರ ಸೀತಾರಾಮಯ್ಯ ಸಾರ್ವಜನಿಕ ಶಾಲೆ.
  15. ರೂಪ ಶಾಲೆ ಐಟಿಡಿಎ ರಸ್ತೆ
  16. ಫೋಬ್ ಚೈಲ್ಡ್ ಡೆವಲೆಪ್‌ಮೆಂಟ್ ಸೆಂಟರ್ (ಲ್ಯಾಂಬ್ಸ್)

|17 ಡಾ. ಪಾಲ್ ರಾಜ್ ಇಂಜಿನಿಯರಿಂಗ್ ಕಾಲೇಜ್

ಉಲ್ಲೇಖಗಳು

ಬದಲಾಯಿಸಿ


  • ಶ್ರೀ ಕೋಮಲ ವಿದ್ಯಾ ವಿಹಾರ್, ಸೂಪರ್ ಬಜಾರ್ ಸೆಂಟರ್

ಬಾಹ್ಯ ಕೊಂಡಿಗಳು

ಬದಲಾಯಿಸಿ