ಭಟೂರಾ
ಭಟೂರಾ ಭಾರತೀಯ ಉಪಖಂಡದ ಒಂದು ಹಗುರವಾದ ಕರಿದ ಹುದುಗು ಬರಿಸಿದ ಬ್ರೆಡ್. ಇದರ ಪರ್ಯಾಯ ರೂಪಗಳಲ್ಲಿ ಆಲೂ ಭಟೂರಾ (ಆಲೂಗಡ್ಡೆ ತುಂಬಿದ ಭಟೂರಾ) ಮತ್ತು ಪನೀರ್ ಭಟೂರಾ (ಪನೀರ್ ತುಂಬಿದ ಭಟೂರಾ) ಸೇರಿವೆ. ಇದನ್ನು ಹಲವುವೇಳೆ ಕಡಲೆಯ ಮೇಲೋಗರವಾದ ಛೋಲೆಯೊಂದಿಗೆ ತಿನ್ನಲಾಗುತ್ತದೆ. ಇವೆರಡರಿಂದಲೇ ಸಾಂಪ್ರದಾಯಿಕ ತಿಂಡಿಯಾದ ಛೋಲೆ ಭಟೂರೆಗೆ ಆ ಹೆಸರು ಬಂದಿದೆ.
ಮೂಲ | |
---|---|
ಮೂಲ ಸ್ಥಳ | ಭಾರತೀಯ ಉಪಖಂಡ |
ಪ್ರಾಂತ್ಯ ಅಥವಾ ರಾಜ್ಯ | ಭಾರತ, ಪಾಕಿಸ್ತಾನ |
ವಿವರಗಳು | |
ಮುಖ್ಯ ಘಟಕಾಂಶ(ಗಳು) | ಬಿಳಿ ಹಿಟ್ಟು (ಮೈದಾ), ಮೊಸರು, ತುಪ್ಪ ಅಥವಾ ಎಣ್ಣೆ, ಮಡ್ಡಿ |
ಬಳಸುವ ಪದಾರ್ಥಗಳು
ಬದಲಾಯಿಸಿಸಾಮಾನ್ಯ ಪಾಕವಿಧಾನದಲ್ಲಿ ಮೈದಾ, ಮೊಸರು, ತುಪ್ಪ ಅಥವಾ ಎಣ್ಣೆ, ಮತ್ತು ಮಡ್ಡಿ ಅಥವಾ ಹುದುಗು ಪುಡಿ ಸೇರಿವೆ. ಚೆನ್ನಾಗಿ ನಾದಿದ ನಂತರ, ಕಣಕವನ್ನು ಹುದುಗು ಬರಲು (ಉಬ್ಬಲು) ಬಿಡಲಾಗುತ್ತದೆ, ಮತ್ತು ನಂತರ ಅದರ ಸಣ್ಣ ಉಂಡೆಗಳನ್ನು ಮಾಡಿ ಕೈಯಿಂದ ತಟ್ಟಲಾಗುತ್ತದೆ ಅಥವಾ ಲಟ್ಟಣಿಗೆ ಬಳಸಿ ಲಟ್ಟಿಸಲಾಗುತ್ತದೆ. ಆ ಲಟ್ಟಿಸಿದ ಬ್ರೆಡ್ ಚೂರುಗಳನ್ನು ಸ್ವಲ್ಪ ಕಂದು ಬಣ್ಣ ಬಂದು, ಮೃದು, ಹಗುರವಾಗಿ ಉಬ್ಬುವವರೆಗೆ ಕರಿಯಲಾಗುತ್ತದೆ. ಇದು ಹಿಗ್ಗುವಂಥಿದ್ದು ಜಗಿಯಬೇಕಾಗುತ್ತದೆ.
ಇದರ ಕರಿಯದೇ ಇರುವ ರೂಪವೆಂದರೆ ಕುಲ್ಚಾ. ಇದನ್ನು ಹಂಚಿನ ಮೇಲೆ ಬೇಯಿಸಲಾಗುತ್ತದೆ ಮತ್ತು ಕೊತ್ತಂಬರಿ ಎಲೆಗಳಿಂದ ಅಲಂಕರಿಸಲಾಗುತ್ತದೆ. ಇದನ್ನು ಅದೇ ಕಣಕದಿಂದ ತಯಾರಿಸಲಾಗುತ್ತದೆ.
ಬಾಹ್ಯ ಕೊಂಡಿಗಳು
ಬದಲಾಯಿಸಿ- Bhatura recipe Archived 2017-07-05 ವೇಬ್ಯಾಕ್ ಮೆಷಿನ್ ನಲ್ಲಿ.
- Bhatura recipe Archived 2018-08-15 ವೇಬ್ಯಾಕ್ ಮೆಷಿನ್ ನಲ್ಲಿ.
- http://www.tarladalal.com/Chole-Bhature-2810r