ಬೇರ್ ಗ್ರಿಲ್ಸ್
ಬೇರ್ ಗ್ರಿಲ್ಸ್
Born೭ ಜೂನ್ ೧೯೭೪
ಡೊನಘಾಡೀ, ನಾರ್ತರ್ನ್ ಐಲ್ಯಾಂಡ್
Occupation(s)ಚೀಫ್ ಸ್ಕೌಟ್ , ಅಡ್ವೆನ್ಚರರ್
Childrenಜಸ್ಸಿ, ಮರ್ಮದುಕ್ಕೆ, ಹಕ್ಕಲ್ಬೆರ್ರಿ

ಮುನ್ನಡಿ ಬದಲಾಯಿಸಿ

ಎಡ್ವರ್ಡ್ ಮೈಕಲ್ ಬೇರ್ ಗ್ರಿಲ್ಲ್ಸ್ ಅವರು ಜೂನ್ ೭, ೧೯೭೪ ರಲ್ಲಿ ಜನಿಸಿದರು. ಇವರು ಮ್ಯಾನ್ ವರ್ಸಸ್ ವೈಲ್ಡ್ ಎಂಬ ಟೀ.ವಿ ಕಾರ್ಯಕ್ರಮದಿಂದ ಪ್ರಸಿದ್ಧಿಯಾಗಿದ್ದಾರೆ. ಗ್ರಿಲ್ಲ್ಸ್ ಅವರು ಅನೇಕ ವೈಲ್ಡ್ನಸ್ ಸರ್ವೈವಲ್ ಎನ್ನುವ ಕಾರ್ಯಕ್ರಮವನ್ನು ಅಮೇರಿಕಾ ಮತ್ತು ಯು.ಕೆ ಅಲ್ಲಿ ನಡೆಸುತ್ತಿದ್ದಾರೆ.

ಪರಿಚಯ ಬದಲಾಯಿಸಿ

ಗ್ರಿಲ್ಲ್ಸ್ ಅವರನ್ನು ಯು.ಕೆ ಅಲ್ಲಿ ಯಂಗೆಸ್ಟ್ ಎವರ್ ಚೆಫ್ ಸ್ಕೊಟ್ ಎಂದು ಕರೆಯುತ್ತಾರೆ. ಗ್ರಿಲ್ಲ್ಸ್ ಡೊನಾಘಡೀ, ಕೌಂಟಿ ದೌನ್, ನಾರ್ಥರ್ನ್ ಅಯರ್ಲ್ಯಾನ್ಡ್ ನಲ್ಲಿ ಹುಟ್ಟಿದರು. ಇವರ ತಂದೆಯ ಹೆಸರು ಮೈಕಲ್ ಗ್ರಿಲ್ಲ್ಸ್. ಇವರು ಒಬ್ಬ ರಾಜಕಾರಣಿಯಾಗಿದ್ದಾರೆ. ಇವರ ತಾಯಿಯ ಹೆಸರು ಲೇಡಿ ಸಾರಾ ಗ್ರಿಲ್ಲ್ಸ್. ಇವರು ಯೂನಿಯನ್ ಪಾರ್ಟಿಯ ಎಂ.ಪಿ ಅವರ ಮಗಳು. ಇವರ ಅಕ್ಕನ ಹೆಸರು ಲಾರಾ. ಇವರು ಕಾರ್ಡಿಯೊ-ಲೆನ್ಸಿಸ್ ಕೋಚ್ ಆಗಿ ಕೆಲಸ ಮಾಡುತ್ತಿದ್ದಾರೆ. ಗ್ರಿಲ್ಲ್ಸ್ ಅವರು ಚಿಕ್ಕ ವಯಸ್ಸಿನಿಂದಲೆ ಬೆಟ್ಟ ಗುಡ್ಡಗಳನ್ನು ಹತ್ತುವುದನ್ನು ಅಭ್ಯಾಸ ಮಾಡಿಕೊಂಡಿದ್ದರು. ಇವರು ತಮ್ಮ ಯುವ ವಯಸ್ಸಿನಲ್ಲಿ ಎರಡನೀ ಡಾನ್ ಬ್ಲ್ಯಾಕ್ ಬೆಲ್ಟ್ ಅನ್ನು ಕರಾಟೆಯಲ್ಲಿ ಗೆದ್ದರು. ಇವರ ಹೆಂಡತಿಯ ಹೆಸರು ಸಾರಾ ಕೇನಿನ್ಗ್ ನೈಟ್ಸ್. ಇವರಿಗೆ ಮೂರು ಮಕ್ಕಳಿದ್ದಾರೆ.

ಜೀವನ ಬದಲಾಯಿಸಿ

ಇವರು ತಮ್ಮ ಓದಿನ ನಂತರ ಇವರಿಗೆ ಭಾರತದ ಸೇನೆಗೆ ಸೇರಲು ಆಸೆಯನ್ನು ಇಟ್ಟುಕೊಂಡಿದ್ದರು. ಆದರೆ ಇವರು ಟೆರಿಟೋರಿಯಲ್ ಆರ್ಮಿಗೆ ಸೇರಿ ಅಲ್ಲಿ ಸೇವೆ ಸಲ್ಲಿಸಿದರು. ೧೯೯೬ರಲ್ಲಿ ಜ಼ಾಂಬಿಯಾದಲ್ಲಿ ನಡೆದ ದುಮುಕಿಕೊಂಡು ಜಿಗಿಯುವ ಪೈಪೋಟಿಯಲ್ಲಿ ಅವರಿಗೆ ಅಪಘಾತವಾಯಿತು. ನಂತರ ಇವರು ಹನ್ನೆರಡು ತಿಂಗಳ ವಿಶ್ರಾಂತಿಯನ್ನು ಪಡೆದರು. ಆಗ ಅವರಿಗೆ ವೈಧ್ಯರು ಅವರ ಚಿಕ್ಕ ವಯಸಿನ ಆಸೆಯಾಗಿದ್ದ ಮೌಂಟ್ ಎವರೆಸ್ಟ್ ಅನ್ನು ಹತ್ತುವುದಕ್ಕೆ ಸಾಧ್ಯವೆಂದರು. ೧೯೯೮ರಲ್ಲಿ ಮೇ ೧೬ ರಂದು ಗ್ರಿಲ್ಲ್ಸ್ ಅವರು ಚಿಕ್ಕ ವಯಸ್ಸಿನ ಕನಸಾಗಿದ್ದ ಮೌನ್ಟ್ ಎವರಸ್ತ್ ಅನ್ನು ಹತ್ತಿದರು. ಇದು ಆದದ್ದು ಅಪಘಾತವಾದ ೧೮ ದಿನಗಳಲ್ಲಿ. ೨೦೦೦ ಇಸವಿಯಲ್ಲಿ ಗ್ರಿಲ್ಲ್ಸ್ ಅವರು ಮೂವತ್ತು ದಿನದ ಕಾರ್ಯಾಚರಣೆಯನ್ನು ಕೈಗೆತ್ತಿಕೊಂಡರು. ಹಣವನ್ನು ಸಂಗ್ರಹಿಸಿ ಅದನ್ನು ಬೆಟ್ಟ ಗುಡ್ಡಗಳನ್ನು ಹತ್ತುವಾಗ ಅಪಘಾತವಾದವರಿಗೆ ವೈದ್ಯಕೀಯ ಕರ್ಚಿಗಾಗಿ ಬಳಸಿಕೊಂಡರು. ಮೂರು ವರ್ಷಗಳ ನಂತರ ಇವರು ಇನ್ನೊಂದು ಮಹಾಸಾಹಸಕ್ಕೆ ಮುಂದಾದರು. ಅದು ಏನೆಂದರೆ ನಾರ್ತ್ ಅಟ್ಲಾಂಟಿಕ್ ಮಹಾಸಾಗರವನ್ನು ಸಾಗುವುದು. ಈ ಸಾಧನೆಯಲ್ಲಿ ತಮ್ಮ ಬಾಲ್ಯ ಜೀವನದ ಸ್ನೇಹಿತರನ್ನು ಕೂಡ ಸೇರಿಸಿಕೊಂಡರು. ಈ ಸಾಹಸವನ್ನು ಅವರು ತೆರೆದ ಹಡಗಿನಲ್ಲಿ ಮಾಡಿದರು. ಮತ್ತು ೨೦೦೫ರಲ್ಲಿ ಗ್ರಿಲ್ಲ್ಸ್ ಮತ್ತು ಬಲೂನಿಸ್ಟ್ ಅಂಡ್ ಡೇವಿಡ್ ಅವರ ಜೊತೆಯಲ್ಲಿ ಸೇರಿಕೊಂಡು ಅವರು ಒಂದು ವಿಶ್ವ ದಾಖಲೆಯನ್ನು ಸೃಷ್ಟಿಸಿದರು. ೨೦೦೮ ರಲ್ಲಿ ಗ್ರಿಲ್ಲ್ಸ್ ಅವರು ತಮ್ಮ ನಾಲ್ಕು ಸಹ ಉದ್ಯೋಗಿಗಳೊಂದಿಗೆ ಸೇರಿಕೊಂಡು ಇದುವರೆಗೆ ಯಾರೂ ಹತ್ತದ ಅಟ್ಲ್ಯಾಂಟಿಕ ಬೆಟ್ಟವನ್ನು ಹತ್ತುತ್ತಾರೆ. ಇವರ ಮುಖ್ಯ ಉದ್ದೇಶ ಗ್ಲೋಬಲ್ ಏಂಜಲ್ಸ್ ಎಂಬ ಮಕ್ಕಳ ಸಂಸ್ಥೆಗಾಗಿ ಹಣವನ್ನು ಸಂಗ್ರಹಿಸಿದರು. ಮತ್ತು ಜಾಗೃತಿ ಮೂಡಿಸಿದರು. ಇದನ್ನು ಇವರು ಪೂರ್ತಿಯಾಗಿ ಮುಗಿಸಲು ಸಾಧ್ಯವಾಗಲಿಲ್ಲ. ಏಕೆಂದರೆ ಗ್ರಿಲ್ಲ್ಸ್ ಅವರು ಕೈ ಮೂಳೆ ಮುರಿದಿತ್ತು. ಇವರಿಗೆ ತಕ್ಷಣ ಚಿಕಿತ್ಸೆ ಕೊಡಬೇಕಾಗಿತು. ಆದ್ದರಿಂದ ಅದನ್ನು ಅವರು ಪೂರ್ಣಗೊಳಿಸದೆ ಬಂದರು. ಇವರು ಮಾಧ್ಯಮ ಲೋಕಕ್ಕೆ ಕಾಲಿಟ್ಟರು. ಮತ್ತು ಇವರು ಲಂಡನ್ ಆರ್ಮಿಯನ್ನು ಬಳಸಿಕೊಂಡು ವಿರೋಧಿ ಔಷಧಿಗಳ ಬಗ್ಗೆ ಜಾಗೃತಿಯನ್ನು ಮಾಡಿದರು.

ಸಾಧನೆಗಳು ಬದಲಾಯಿಸಿ

ಗ್ರಿಲ್ಲ್ಸ್ ಅವರು ಮೊದಲನೇ ಪುಸ್ತಕ ಫೇಸಿಂಗ್ ಅಪ್. ಈ ಪುಸ್ತಕದಲ್ಲಿ ಅವರು ತಮ್ಮ ಅನುಭವಗಳನ್ನು ಬರೆದಿದ್ದಾರೆ. ಮತ್ತು ಇವರ ಎರಡನೇ ಪುಸ್ತಕ ಫೇಸಿಂಗ್ ದಿ ಫ್ರೋಜ಼ನ್ ಓಷನ್. ಈ ಪುಸ್ತಕವೂ ೨೦೦೪ರಲ್ಲಿ ವಿಲಿಯಮ್ ಹಿಲ್ ಸ್ಪೋರ್ಟ್ಸ್ ಬುಕ್ ಆಫ್ ದಿ ಎಯರ್ ಎಂಬ ಅವಾರ್ಡನ್ನು ಗಳಿಸಿತು. ಇವರು ಎಸ್ಕೇಪ್ ಟು ದಿ ಲೆಜಿಯನ್ ಎಂಬ ಟಿ.ವಿ ಕಾರ್ಯಕ್ರಮವನ್ನು ೨೦೦೫ರಲ್ಲಿ ಮಾಡುತ್ತಾರೆ. ಈ ಕಾರ್ಯಕ್ರಮವನ್ನು ಯು.ಕೆ ಚಾನಲ್ ಮತ್ತು ಯು.ಎಸ್.ಎ ಮಿಲಿಟರಿ ಚಾನಲ್ನಲ್ಲಿ ಪ್ರಸಾರ ಮಾಡಿದರು. ಮತ್ತು ಗ್ರಿಲ್ಲ್ಸ್ ಅವರು ತಮ್ಮ ಪ್ರಸಿದ್ಧವಾದ ಕಾರ್ಯಕ್ರಮ ಮ್ಯಾನ್ ವರ್ಸರ್ ವೈಲ್ಡ್ ಕಾರ್ಯಕ್ರಮವನ್ನು ಯು.ಕೆ, ಆಸ್ಟ್ರೇಲಿಯಾ, ನ್ಯು ಜ಼ೀಲ್ಯಾಂಡ್, ಕೆನಡ, ಭಾರತ, ಯು.ಎಸ್.ಎ ದೇಶಗಳಲ್ಲಿ ಡಿಸ್ಕವರಿ ಎಂಬ ಟಿ.ವಿ ಚಾನಲ್ ಮೂಲಕ ಪ್ರಸಾರ ಮಾಡುತ್ತಾರೆ. ಈ ಕಾರ್ಯಕ್ರಮದಲ್ಲಿ ಗ್ರಿಲ್ಲ್ಸ್ ರವರು ಅನೇಕ ನಿರ್ಜನ ಪ್ರದೇಶದಲ್ಲಿ ಹೇಗೆ ಬದುಕಬಹುದು ಮತ್ತು ಅಲ್ಲಿನ ಕಷ್ಟಗಳನ್ನು ಈ ಕಾರ್ಯಕ್ರಮದಲ್ಲಿ ತೋರಿಸಿಕೊಡುತ್ತಾರೆ. ೨೦೧೧ ರಲ್ಲಿ ಗ್ರಿಲ್ಲ್ಸ್ ಅವರು ಇನ್ನೂ ಎರಡು ಮುಖ್ಯ ಕಾರ್ಯಕ್ರಮಗಳಾದ ಬಿಯರ್ಸ್ ವೈಲ್ಡ್ ವೀಕೆಂಡ್ ಎಂಬ ಕಾರ್ಯಕ್ರಮವನ್ನು ಫೋರ್ ಎಂಬ ಚಾನಲ್ ಗೆ ನಡೆಸಿಕೊಟ್ಟರು. ಇದನ್ನು ಕ್ರಿಮಸ್ ಅಂದು ಪ್ರಸಾರ ಮಾಡಿದರು. ಈ ಕಾರ್ಯಕ್ರಮವನ್ನು ಅವರು ಅನೇಕ ಸ್ಥಳಗಳಲ್ಲಿ ಚಿತ್ರಿಸಿದರು. ಆ ಸ್ಥಳಗಳು ರೋಜ್ ಟು ರೇನ್ಫಾರಸ್ಟ್ ಕೆನಡಾ ದಲ್ಲಿ ಚಿತ್ರೀಕರಿಸಿದರು. ಈ ಸ್ಥಳ ಒಂದು ಪ್ರಸಿದ್ಧವಾದ ಸ್ಥಳ ಮತ್ತು ಭಯಾನಕ ಸ್ಥಳವಾಗಿದೆ. ೨೦೧೪ರಲ್ಲಿ ಮುಂದುವರೆದ ಬಿಯರ್ ವೈಲ್ಡ್ ವೀಕೆಂಡ್ ನ ಎರಡು ಭಾಗಗಳನ್ನು ಯು.ಕೆ ಅಲ್ಲಿ ಚಿತ್ರೀಕರಿಸಿದರು. ಈ ಎರಡು ಭಾಗಗಳ ಹೆಸರು- ಮ್ಯಾನ್ ವರ್ಸಸ್ ವೈಲ್ಡ್ ಮತ್ತು ರನ್ನಿಂಗ್ ವೈಲ್ಡ್. ಈ ಕಾರ್ಯಕ್ರಮವು ಟಿ.ವಿ ಯಲ್ಲಿ ಪ್ರಸಾರವಾಯಿತು ಮತ್ತು ಗ್ರಿಲ್ಲ್ಸ್ ಅವರಿಗೆ ಒಳ್ಳೆಯ ಹೆಸರು ತಂದು ಕೊಟ್ಟಿತು. ೨೦೧೩ ಜುಲೈ ಎಂಟರಂದು ಗೆಟ್ ಔಟ್ ಅಲೈ ವಿತ್ ಬೇರ್ ಗ್ರಿಲ್ಲ್ಸ್ ಎಂಬ ಕಾರ್ಯಕ್ರಮವನ್ನು ನ್ಯು ಜ಼ೀಲ್ಯಾಂಡ್ ನಲ್ಲಿ ಚಿತ್ರೀಕರಿಸಿ ಅದನ್ನು ಅಡ್ವೆಂಚರ್ ಫೊರ್ ದೂರದರ್ಶನ ಚಾನಲ್ ನಲ್ಲಿ ಪ್ರಸಾರ ಮಾಡಲಾಗಿತ್ತು. ಈ ಕಾರ್ಯಕ್ರಮದಲ್ಲಿ ಗ್ರಿಲ್ಸ್ ಅವರು ಅನೇಕ ತಾರಾಗಣವನ್ನು ಕೇವಲ ಎರಡು ದಿನಗಳ ಅರಣ್ಯ ಪ್ರವಾಸಕ್ಕೆ ಕರೆದೊಯ್ಯುತ್ತಾರೆ. ಅವರಿಗೆ ಆ ಅರಣ್ಯದ ಅನುಭವವನ್ನು ಅನುಭವಿಸಲು ಮತ್ತು ಅವುಗಳ ಸೌಂದರ್ಯವನ್ನು ಕಷ್ಟಗಳನ್ನು ಅವರಿಗೆ ತಿಳಿಸಿ ಕೊಡುತ್ತಾನೆ. ೨೦೧೫ರಲ್ಲಿ ಮುಂದುವರೆದ ಭಾಗವಾದ ಬೇರ್ ಗ್ರಿಲ್ಸ್ ಮಿಷನ್ ಸರ್ವೈವ್ ನಲ್ಲಿ ಹನ್ನೆರಡು ದಿನಗಳ ಅರಣ್ಯ ಪ್ರವಾಸಕ್ಕೆ ತಾರಾಗಣವನ್ನು ಕರೆದುಕೊಂಡು ಹೋಗುತ್ತಾನೆ. ಈ ಕಾರ್ಯಕ್ರಮವು ಎಲ್ಲದರಕ್ಕಿಂತ ತುಂಬ ವಿಭಿನ್ನವಾಗಿತ್ತು ಮತ್ತು ಈ ಕಾರ್ಯಕ್ರಮವು ೨೦೧೫ ಫೆಬ್ರವರಿ ೨೦ರಂದು ಪ್ರಾರಂಭವಾಯಿತು ಮತ್ತು ಇದರ ಮುಂದಿನ ಭಾಗವನ್ನು ೨೦೧೬ರಲ್ಲಿ ಮಾಡುವುದಾಗಿ ಗ್ರಿಲ್ಸ್ ಅವರು ಹೇಳಿದ್ದಾರೆ ಮತ್ತು ಸಿ.ಐ. ಟಿವಿ ಅಲ್ಲಿ ಬೇರ್ ಗ್ರಿಲ್ಸ್ ಸರ್ವೈವಲ್ ಸ್ಕೂಲ್ ಎಂಬ ಕಾರ್ಯಕ್ರಮವನ್ನು೨೦೧೬, ಜನವರಿ ೧೬ ರಂದು ಪ್ರಸಾರ ಮಾಡುತ್ತಾರೆ. ಈ ಕಾರ್ಯಕ್ರಮವನ್ನು ೨೦೧೫ರಲ್ಲಿ ಚಿತ್ರೀಕರಣ ಮಾಡಲಾಯಿತು. ಇವರ ಪ್ರಮುಖ ಕಾರ್ಯಕ್ರಮವಾದ ಮ್ಯಾನ್ ವರ್ಸಸ್ ವೈಲ್ಡ್ ನಲ್ಲಿ ಹೇಗೆ ಬದುಕುವುದು ಎಂಬುದನ್ನು ಅವರು ತಿಳಿಸಿ ಕೊಡುತ್ತಾರೆ. ಈ ಕಾರ್ಯಕ್ರಮದಲ್ಲಿ ಅವರು ಎಲ್ಲ ತರಹದ ಪ್ರಾಣಿ ಪಕ್ಷಿಗಳನ್ನು ಮತ್ತು ಕ್ರಿಮಿ ಕೀಟಗಳನ್ನು ತಿಂದು ಬದುಕಬಹುದೆಂದು ತೋರಿಸಿ ಕೊಟ್ಟಿದ್ದಾರೆ.

ಉಲ್ಲೇಖಗಳು ಬದಲಾಯಿಸಿ

Bear Grylls, from Wikipedia, the free encyclopedia https://en.wikipedia.org/wiki/Bear_Grylls

http://www.bournemouthecho.co.uk/archive/2004/4/17/68138.html/

http://www.housetohome.co.uk/house-tours-featured-in-homes_gardens#homesandgardens Archived 2016-08-25 ವೇಬ್ಯಾಕ್ ಮೆಷಿನ್ ನಲ್ಲಿ.