ಬಿ. ಪ್ರಭಾ
ಬಿ. ಪ್ರಭಾ ಭಾರತೀಯ ಕಲಾವಿದರಾಗಿದ್ದರು.[೧] ಇವರು ತಕ್ಷಣ ಗುರುತಿಸಬಹುದಾದ ಶೈಲಿಯಲ್ಲಿ, ಪ್ರಾಥಮಿಕವಾಗಿ ಎಣ್ಣೆಯಲ್ಲಿ ಕೆಲಸ ಮಾಡುತ್ತಿದ್ದರು. ಪ್ರತಿ ಕ್ಯಾನ್ವಾಸನ್ನು ಒಂದೇ ಒಂದು ಪ್ರಬಲ ಬಣ್ಣದಲ್ಲಿ ಹೊಂದಿರುವ, ಅತ್ಯಂತ ಸೊಗಸಾದ ಗ್ರಾಮೀಣ ಮಹಿಳೆಯರ ಚಿತ್ರಗಳಿಂದ ಆಕೆ ಉತ್ತಮ ಪ್ರಸಿದ್ಧಿ ಹೊಂದಿದ್ದಾರೆ. ಆಕೆಯ ಮರಣದ ವೇಳೆಗೆ, ಆಕೆಯ ಕೆಲಸವು ಸುಮಾರು 50 ಕ್ಕೂ ಹೆಚ್ಚು ಪ್ರದರ್ಶನದಲ್ಲಿ ತೋರಿಸಲಾಗಿತ್ತು, ಮತ್ತು ಭಾರತದ ನ್ಯಾಷನಲ್ ಗ್ಯಾಲರಿ ಆಫ್ ಮಾಡರ್ನ್ ಆರ್ಟ್ ಸೇರಿದಂತೆ ಕೆಲವು ಪ್ರಮುಖ ಸಂಗ್ರಹಗಳಲ್ಲಿ ಪ್ರದರ್ಶಿಸಲಾಗಿದೆ.[೨]
ಭಾರತವು ಕೆಲವೇ ಕೆಲವು ಮಹಿಳಾ ಕಲಾವಿದರನ್ನು ಹೊಂದಿದ್ದ ಸಮಯದಲ್ಲಿ ಪ್ರಭಾರವರು ಕೆಲಸ ಮಾಡಲು ಪ್ರಾರಂಭಿಸಿದರು. ಸೆಮಿನ ಆಧುನಿಕತಾವಾದಿ ಅಮೃತ ಶೆರ್ಗಿಲ್ ರ ಕೆಲಸದಿಂದ ಆಕೆಗೆ ತೀವ್ರ ಸ್ಫೂರ್ತಿಯಾಯಿತು. ಪ್ರಭಾ ಗ್ರಾಮೀಣ ಮಹಿಳೆಯರ ಜೀವನದ ಮೂಲಕ ಚಲಿಸಿದಳು, ಕಾಲಕ್ರಮೇಣ ಇವರು ಇವರ ಕೆಲಸದ ಮುಖ್ಯ ಇತಿಮಿತಿಯಾದರು. ಯಂಗ್ಬಜ಼್ ಇಂಡಿಯ ಜೊತೆಗಿನ ಸಂದರ್ಶನದಲ್ಲಿ, ಇವರು "ನಾನು ಇನ್ನೂ ಒಬ್ಬ ಸಂತೋಷದ ಮಹಿಳೆಯನ್ನು ಕಾಣಬೇಕೆಂದು ಹೇಳಿದರು".[೩]
ಮುಂಬಯಿಗೆ ತೆರಳುವ ಮುನ್ನ ನಾಗ್ಪುರ ಸ್ಕೂಲ್ ಆಫ್ ಆರ್ಟ್ ನಲ್ಲಿ ಅಧ್ಯಯನ ಮಾಡಿದರು. ಆಕೆಯು ಸರ್ ಜೆ. ಜೆ. ಸ್ಕೂಲ್ ಆಫ್ ಆರ್ಟ್ ನಿಂದ ಡಿಪ್ಲೊಮಾ ಪಡೆದರು, ಭಾರತದ ಅನೇಕ ಶ್ರೇಷ್ಠ ಸಮಕಾಲೀನ ಕಲಾವಿದರಿಗೆ ಅಲ್ಮಾ ಮೇಟರಾಗಿದ್ದರು]. ೧೯೫೬ ರಲ್ಲಿ ಆಕೆ ಕಲಾವಿದ ಹಾಗು ಶಿಲ್ಪಿಯಾದಂತ ಬಿ. ವಿಠಲ್ ಅವರನ್ನು ಮದುವೆಯಾದರು ಹಾಗು ಬಿ.ವಿಠಲ್ ರವರು ೧೯೯೨ ರಲ್ಲಿ ನಿಧನರಾದರು.[೪]
ಪ್ರಭಾ ಅಲ್ಪಸ್ವಲ್ಪ ಹಣದಿಂದ, ಕಷ್ಟಪಡುವ ಕಲಾವಿದೆಯಾಗಿ ಮುಂಬಯಿಗೆ ಬಂದರು. ಇವಲು ಹಣವನ್ನು ಎತ್ತಲು ಕೆಲವು ಆಭರಣಗಳ ತುಂಡುಗಳನ್ನು ಮಾರಾಟ ಮಾಡಿದರು. ಇವರು ಮತ್ತು ಇವರ ಕಲಾವಿದ ಪತಿಗೆ, ಇವರ ಸ್ನೇಹಿತರು ಇವರಿಗೆ ಉಳಿದುಕೊಳ್ಳಲು ಜಾಗ ನೀಡಿದ ಮತ್ತು ತಮ್ಮ ಕಲಾ-ಕೆಲಸವನ್ನು ಶೇಖರಿಸಿಟ್ಟರು. ಆಕೆಯ ಮೊದಲ ಪ್ರದರ್ಶನ, ಆಕೆಯು ಇನ್ನೂ ವಿದ್ಯಾರ್ಥಿಯಾಗಿರುವಾಗಲೇ, ಆಕೆಯ ಮೂರು ವರ್ಣಚಿತ್ರಗಳನ್ನು ಪ್ರಮುಖ ಭಾರತೀಯ ವಿಜ್ಞಾನಿ ಹೋಮಿ ಜೆ ಭಾಭಾ ಅವರು ಪಡೆದುಕೊಂಡಾಗ, ಇವರನ್ನು ಯಶಸ್ಸಿನ ಹಾದಿಯಲ್ಲಿ ಹೊಂದಿಸಿದರು.
ವೃತ್ತಿಜೀವನ
ಬದಲಾಯಿಸಿಬಿ. ಪ್ರಭಾ ಇನ್ನೂ ಮುಂಬರುವ ಕಲಾವಿದರಾಗಿದ್ದ ಸಂದರ್ಭದಲ್ಲಿ ಆಕೆಯ ಕೆಲಸವನ್ನು ಏರ್ ಇಂಡಿಯಾ ಪಡೆದುಕೊಂಡಿತು. ಆಕೆಯ ವರ್ಣಚಿತ್ರಗಳನ್ನು ಮೆನು ಕಾರ್ಡ್ ಗಳಲ್ಲಿ ಬಳಸಲಾಯಿತು ಮತ್ತು ಲಂಡನ್ ನಲ್ಲಿರುವ ಏರ್ ಇಂಡಿಯಾ ಬುಕಿಂಗ್ ಕಚೇರಿಯಲ್ಲಿ ಪ್ರದರ್ಶಿಸಲಾಯಿತು. ಆಕೆಯ ಕೆಲಸವು ಭಾರತದ ಕೆಲವು ಸುಪ್ರಸಿದ್ಧ ಕಲಾವಿದರಲ್ಲಿ ಏರ್ ಇಂಡಿಯಾದ ದೊಡ್ಡ ಸಂಗ್ರಹಕ್ಕೆ ಆಧಾರವಾಗಿತ್ತು, ಇದರಲ್ಲಿ ಎಂ. ಎಫ್. ಹುಸೇನ್ ಮತ್ತು ವಾಸುದೇವ್ ಎಸ್. ಗೈಟೊಂಡೆ Archived 2020-02-23 ವೇಬ್ಯಾಕ್ ಮೆಷಿನ್ ನಲ್ಲಿ. ಸೇರಿದ್ದಾರೆ.[೫]
ತನ್ನ ರೂಪಕ ವರ್ಷಗಳಲ್ಲಿ, ಪ್ರಭಾ ಸಂಗೀತ ಮತ್ತು ಕಲೆ ಎರಡರಲ್ಲೂ ಆಸಕ್ತರಾಗಿದ್ದರು. ಇವರ ಸಹೋದರನ ಸಲಹೆಯ ಮೇರೆಗೆ, ಮೆಟ್ರಿಕ್ಯುಲೇಷನ್ ಮುಗಿಸಿಕೊಂಡು, ತನ್ನ ವೃತ್ತಿ ಜೀವನದ ಆಯ್ಕೆಯಂತೆ ಕಲೆಯನ್ನು ಆಯ್ದುಕೊಳ್ಳಲು ನಿರ್ಧರಿಸಿದರು. ಇವರ ಪ್ರಾರಂಭಿಕ ಕೃತಿ ಆಧುನಿಕ ಫ್ರೀಸ್ಟೈಲ್ ಚಿತ್ರಕಲೆ. ಕಾಲಕ್ರಮೇಣ ತನ್ನದೇ ಆದ ಸಿಗ್ನೇಚರ್ ಶೈಲಿಯನ್ನು ಕಂಡುಕೊಂಡರು.ತನ್ನ ಪ್ರಥಮ ಪ್ರದರ್ಶನವನ್ನು ತನ್ನ ಪತಿ ಬಿ. ವಿಠಲ್ ಜೊತೆಗೆ ೧೯೫೬ ರಲ್ಲಿ ನಡೆಸಿದರು. ಸುಮಾರು ವರ್ಷಗಳಿಂದ ಆಕೆ ಭಾರತ ಮತ್ತು ವಿದೇಶಗಳಲ್ಲಿ ೫೦ಕ್ಕೂ ಹೆಚ್ಚು ಪ್ರದರ್ಶನವನ್ನು ನಡೆಸಿದರು.
ವಸ್ತುಪ್ರದರ್ಶನ
ಬದಲಾಯಿಸಿ೧೯೫೯ ಮತ್ತು ೧೯೬೧ ರಲ್ಲಿ ದಿಲ್ಲಿಯ ಕುಮಾರ್ ಗ್ಯಾಲರಿಯಲ್ಲಿ ಎರಡು ಮಾತ್ರ ಪ್ರದರ್ಶನ ನಡೆಸಿದರು. ಆಕೆಯ ದಿವಂಗತ ಪತಿ ಬಿ. ವಿಠಲ್ ರವರಿಗೆ "ಶ್ರದ್ದಾನಂದಜೈ" ಎಂಬ ಆಕೆಯ ಪ್ರದರ್ಶನವು ಮೀಸಲಾಗಿತ್ತು. ಅದು ಮುಂಬೈನಲ್ಲಿ ೧೯೯೩ ರಲ್ಲಿ ನಡೆಯಿತು. ೧೯೯೬ ರಲ್ಲಿ ಮುಂಬೈನ ಜೆಹಾಂಗೀರ್ ಆರ್ಟ್ ಗ್ಯಾಲರಿಯಲ್ಲಿ ' ಸಮಕಾಲೀನ ಭಾರತೀಯ ವರ್ಣಚಿತ್ರಕಾರರು ' ಎಂಬ ಸಮೂಹ ಪ್ರದರ್ಶನದಲ್ಲಿ ಪ್ರಭಾರವರ ಕೃತಿಯನ್ನೂ ಸೇರಿಸಲಾಗಿದೆ. ಆಕೆ ೧೯೫೮ ಮುಂಬಾಯಿಯಲ್ಲಿ ನಡೆದ ಕಲಾ ಪ್ರದರ್ಶನದಲ್ಲಿ ಕೂಡ ಭಾಗಿಯಾಗಿ ಪ್ರಥಮ ಬಹುಮಾನ ಪಡೆದರು.
ಆಕೆಯ ಕೆಲಸವು ನ್ಯೂಯಾರ್ಕ್ ನ ಆಐಕಾನ್ ಗ್ಯಾಲರಿಯಲ್ಲಿ ' ವಿಂಟರ್ ಮೊಡರ್ನ್ ' ನಂತಹ ವಸ್ತುಪ್ರದರ್ಶನಾಲಯಗಳಲ್ಲಿ ಸೇರಿಸಲಾಗಿದೆ;. ಮತ್ತು' ಪಾಟ್ ಪುರ್ರ್ ' ಗ್ಯಾಲರಿಯ ಆಚೆಗೆ, ಮುಂಬಯಿಯಲ್ಲಿ ಸೇರ್ಪಡೆಯಗಿದೆ, ಇದೆರೆಡು ೨೦೦೮ರಲ್ಲಿ ನಡೆದಿದೆ.
ಪ್ರಶಸ್ತಿಗಳು ಮತ್ತು ಸನ್ಮಾನಗಳು
ಬದಲಾಯಿಸಿ- ೧೯೫೮ರಲ್ಲಿ ಮುಂಬಯಿ ರಾಜ್ಯ ಕಲಾ ಪ್ರದರ್ಶನದಲ್ಲಿ ಪ್ರಥಮ ಬಹುಮಾನವನ್ನು ನೀಡಲಾಯಿತು.
- ನವದೆಹಲಿಯಲ್ಲಿ, ಆಲ್ ಇಂಡಿಯಾ ಫೈನ್ ಆರ್ಟ್ಸ್ ಅಂಡ್ ಕ್ರಾಫ್ಟ್ಸ್ ಸೊಸೈಟಿ (ಎ. ಐ. ಎಫ್. ಎ. ಸಿ. ಎಸ್.) ಪ್ರಶಸ್ತಿ ಲಭಿಸಿತು.
ಉಲ್ಲೇಖಗಳು
ಬದಲಾಯಿಸಿ- ↑ "ಆರ್ಕೈವ್ ನಕಲು". Archived from the original on 2017-10-22. Retrieved 2020-02-23.
- ↑ https://en.wikipedia.org/wiki/National_Gallery_of_Modern_Art
- ↑ https://web.archive.org/web/20060913004645/http://www.youngbuzz.com/interview/B%20Prabha.htm
- ↑ https://www.saffronart.com/artists/b-prabha
- ↑ https://qz.com/india/1325611/the-fascinating-story-behind-air-indias-priceless-collection-of-art/