ಬಿಗ್ ಬಾಸ್ ಕನ್ನಡ (ಸೀಸನ್ 11)

ಭಾರತೀಯ ಕನ್ನಡ ಭಾಷೆಯ ರಿಯಾಲಿಟಿ ಶೋ

ಬಿಗ್ ಬಾಸ್ ಕನ್ನಡ ಸೀಸನ್ 11 ಒಂದು ಭಾರತೀಯ ಕನ್ನಡ ಭಾಷೆಯ ರಿಯಾಲಿಟಿ ಟೆಲಿವಿಷನ್ ಗೇಮ್ ಶೋ ಆಗಿದೆ. ಬಿಗ್ ಬಾಸ್ ಕನ್ನಡದ ಹನ್ನೋಂದನೇ ಸೀಸನ್ 29 ಸೆಪ್ಟಂಬರ್ 2024 ರಂದು ಸಂಜೆ 6 ಗಂಟೆಗೆ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಥಮ ಪ್ರದರ್ಶನ ಕಂಡಿತು. ಬನಿಜಯ್ ಅವರ ನಿಯಂತ್ರಣದಲ್ಲಿ ಎಂಡೆಮೋಲ್ ಶೈನ್ ಇಂಡಿಯಾ ನಿರ್ಮಿಸುತ್ತಿರುವ ಈ ರಿಯಾಲಿಟಿ ಶೋ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರದ ಜೊತೆಗೆ ಜಿಯೋಸಿನಿಮಾದಲ್ಲಿ ಪ್ರಸಾರವಾಗುತ್ತಿದೆ. ಈ ಸೀಸನ್ ಬಿಗ್ ಬಾಸ್‌ನ 11 ನೇ ಸೀಸನ್ ಆಗಿದೆ[]. ಹಿಂದಿನ ಹತ್ತು ಸೀಸನ್‌ನಂತೆಯೇ ಈ ಬಾರಿಯೂ ನಟ ನಿರೂಪಕ ಕಿಚ್ಚ ಸುದೀಪ್ ಕಾರ್ಯಕ್ರಮವನ್ನು ನಡೆಸಿಕೊಡಲಿದ್ದಾರೆ .


ಬಿಗ್ ಬಾಸ್ ಕನ್ನಡ ಸೀಸನ್ 11
‍ ಸೀಸನ್ 11 ಲೋಗೂ
ಮೂಲದ ದೇಶಭಾರತ
ಪ್ರಸಾರ
ಮೂಲ ಛಾನೆಲ್ಕಲರ್ಸ್ ಕನ್ನಡ
ಮೂಲ ಪ್ರಸಾರ29 ಸೆಪ್ಟಂಬರ್ 2024 – ಪ್ರಸ್ತುತ
ಸೀಸನ್ ಕಾಲಗಣನೆ
Next →

ಪ್ರಸಾರ

ಬದಲಾಯಿಸಿ

ಈ ರಿಯಾಲಿಟಿ ಶೋ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರದ ಜೊತೆಗೆ ಜಿಯೋಸಿನಿಮಾದಲ್ಲಿ ಪ್ರಸಾರವಾಗುತ್ತಿದೆ. ಬಿಗ್‌ ಬಾಸ್‌ ಕನ್ನಡ ಸೀಸನ್‌ 11ರ ಗ್ರಾಂಡ್ ಪ್ರೀಮಿಯರ್ ಸೆಪ್ಟಂಬರ್ 29ರ ಸಂಜೆ 6 ಗಂಟೆಗೆ ಕಲರ್ಸ್‌ ಕನ್ನಡದಲ್ಲಿ ಪ್ರಸಾರವಾಯಿತು. ಸೆಪ್ಟೆಂಬರ್ 30ರಿಂದ 100 ದಿನಗಳ ಕಾಲ ರಾತ್ರಿ 9.30ಕ್ಕೆ ಬಿಗ್​ಬಾಸ್ ಕಾರ್ಯಕ್ರಮ ಒಂದೂವರೆ ಗಂಟೆಗಳ ಕಾಲ ಪ್ರಸಾರವಾಗುತ್ತಿದೆ[].

ಈ ಹಿಂದಿನ ಕೆಲವು ಸೀಸನ್‌ಗಳಲ್ಲಿ 24*7 ಲೈವ್‌ ಮತ್ತು ಅನ್‌ಸೀನ್ ಕ್ಲಿಪ್ಸ್ ನೋಡುವ ಅವಕಾಶವನ್ನ ವೀಕ್ಷಕರಿಗೆ ‘ಬಿಗ್ ಬಾಸ್‌’ ತಂಡ ಒದಗಿಸಿತ್ತು. ಆದರೆ ‘ಬಿಗ್ ಬಾಸ್ ಕನ್ನಡ 11’ ಕಾರ್ಯಕ್ರಮದಲ್ಲಿ ಲೈವ್ ಮತ್ತು ಅನ್‌ಸೀನ್ ಕ್ಲಿಪ್ಸ್ ಅನ್ನು ರದ್ದುಮಾಡಲಾಗಿದೆ. ಈ ಬಾರಿ ಒಂದುವರೆ ಗಂಟೆಯ ಸಂಚಿಕೆ ಮಾತ್ರ ಕಲರ್ಸ್ ಕನ್ನಡ ವಾಹಿನಿಯಲ್ಲಿ ಮತ್ತು ಜಿಯೋಸಿನಿಮಾದಲ್ಲಿ ಪ್ರಸಾರವಾಗಲಿದೆ[].

ನಿರ್ಮಾಣ

ಬದಲಾಯಿಸಿ

ನಿರೂಪಣೆ

ಬದಲಾಯಿಸಿ
 
ಬಿಗ್ ಬಾಸ್ ಸೀಸನ್ 11ರಲ್ಲಿಯೂ ನಿರೂಪಕರಾಗಿ ಸುದೀಪ್ ನೇಮಕಗೊಂಡಿದ್ದಾರೆ

ಇದು ಕಿಚ್ಚ ಸುದೀಪ್ ನಿರೂಪಣೆ ಮಾಡಲಿರುವ ಬಿಗ್ ಬಾಸ್ ರಿಯಾಲಿಟಿ ಶೋ ನ ಅಂತಿಮ ಸೀಸನ್ ಆಗಿದೆ. ಈ ಬಗ್ಗೆ ಅವರು ಕಾರ್ಯಕ್ರಮದ ನಿರೂಪಕರಾಗಿ ಕೆಳಗಿಳಿಯುವ ಉದ್ದೇಶವನ್ನು ಎಕ್ಸ್ (ಹಿಂದೆ ಟ್ವಿಟರ್ ಎಂದು ಕರೆಯಲಾಗುತ್ತಿತ್ತು) ನಲ್ಲಿ ಅಕ್ಟೋಬರ್ 14, 2024 ರಂದು ಬಹಿರಂಗಪಡಿಸಿದರು[] .

ಬಿಗ್ ಬಾಸ್ ಕನ್ನಡದ ಹನ್ನೊಂದನೇ ಸೀಸನ್ ಸ್ವರ್ಗ ಮತ್ತು ನರಕ ಎಂಬ ಪರಿಕಲ್ಪನೆ ಅಡಿಯಲ್ಲಿ ಮೂಡಿಬರುತ್ತಿದೆ. ಸ್ವರ್ಗದಲ್ಲಿರುವ ಸ್ಪರ್ಧಿಗಳಿಗೆ ಎಲ್ಲ ಸೌಕರ್ಯ ಸಿಕ್ಕರೆ, ನರಕದಲ್ಲಿರುವವರೆಗೆ ಕಷ್ಟದ ಮೇಲೆ ಕಷ್ಟ ದೊರಕಲಿದೆ[]. ಈ ಸ್ಪರ್ಧಿಗಳಲ್ಲಿ ಯಾರು ನರಕಕ್ಕೆ ಹೋಗಬೇಕು ಮತ್ತು ಯಾರು ಸ್ವರ್ಗಕ್ಕೆ ಹೋಗಬೇಕು ಎಂಬುದನ್ನು ಪ್ರೇಕ್ಷಕರು ನಿರ್ಧಾರ ಮಾಡುತ್ತಾರೆ . ಇದಕ್ಕಾಗಿ ವೋಟಿಂಗ್‌ ವ್ಯವಸ್ಥೆ ಮಾಡಲಾಗಿತ್ತು.

ಕಣ್ಣಿನ ಲೋಗೋ

ಬದಲಾಯಿಸಿ

ಈ ಸೀಸನನಲ್ಲಿ ಕಿತ್ತಳೆ ಬಣ್ಣವು ಬೆಂಕಿ ಮತ್ತು ನೀಲಿ ಬಣ್ಣವು ನೀರಿನ ವಿಷಯದ ಕಣ್ಣಿನ ಲೋಗೋವನ್ನು ಒಳಗೊಂಡಿತ್ತು. ಕಿತ್ತಳೆ ಬಣ್ಣವು ಬೆಂಕಿ ಮತ್ತು ನೀಲಿ ಬಣ್ಣವು ನೀರು; ಇವುಗಳು ಮನೆಯ ಎರಡು ಭಾಗಗಳಾದ ಸ್ವರ್ಗ ಮತ್ತು ನರಕಗಳನ್ನು ಪ್ರತಿನಿಧಿಸುತ್ತದೆ. ಕಣ್ಣಿನ ಪಾಪೆಯು ಕಿತ್ತಳೆ ಬಣ್ಣದ ಬೆಂಕಿ ಮತ್ತು ನೀಲಿ ಬಣ್ಣದ ನೀರು ಎರಡರ ಮಿಶ್ರಣದಿಂದ ಮಿಶ್ರಣವಾಗಿದೆ.

ಸ್ವರೂಪ

ಬದಲಾಯಿಸಿ

ಈ ಕಾರ್ಯಕ್ರಮವು ಆಯ್ದ ಸ್ಪರ್ಧಿಗಳನ್ನು ಹೊರಗಿನ ಪ್ರಪಂಚದಿಂದ ಪ್ರತ್ಯೇಕವಾಗಿ 98 ದಿನಗಳವರೆಗೆ (ಅಥವಾ 14 ವಾರಗಳು) ಕಾರ್ಯಕ್ರಮಕ್ಕೆಂದೇ ನಿರ್ಮಿತವಾಗಿರುವ ಮನೆಯಲ್ಲಿ ವಾಸಿಸುತ್ತಾರೆ. ಹೌಸ್‌ಮೇಟ್‌ಗಳು ಬಿಗ್ ಬಾಸ್ ಎಂಬ ಸರ್ವಾಧಿಕಾರಿಯಿಂದ ನಿರ್ದೇಶಿಸಲ್ಪಡುತ್ತಾರೆ. ಪ್ರತಿ ವಾರ, ಒಬ್ಬ ಅಥವಾ ಹೆಚ್ಚಿನ ಹೌಸ್‌ಮೇಟ್‌ಗಳನ್ನು ಸಾರ್ವಜನಿಕ ಮತದಿಂದ ಹೊರಹಾಕಲಾಗುತ್ತದೆ. ಕೊನೆಯ ವಾರದಲ್ಲಿ, ಹೆಚ್ಚು ಮತಗಳನ್ನು ಪಡೆದ ಮನೆಯವರು ಆಟದಲ್ಲಿ ಗೆಲ್ಲುತ್ತಾರೆ.

ಸ್ಪರ್ಧಿಗಳು

ಬದಲಾಯಿಸಿ

ಬಿಗ್‌ ಬಾಸ್‌ ಕನ್ನಡ ಸೀಸನ್‌ 11 ರ ಕೆಲವು ಸ್ಪರ್ಧಿಗಳ ಹೆಸರನ್ನು ಸೆಪ್ಟಂಬರ್ 28 ರಂದು ಪ್ರಸಾರವಾದ ರಾಜಾ ರಾಣಿ ಗ್ರ್ಯಾಂಡ್‌ ಫಿನಾಲೆಯಲ್ಲಿ ಬಹಿರಂಗಪಡಿಸಲಾಯಿತು[] [].

ಈ ಸೀಸನ್ನಲ್ಲಿ ಮನೆಯನ್ನು ಪ್ರವೇಶಿಸಿದ ಸ್ಪರ್ಧಿಗಳನ್ನು ಎರಡು ಗುಂಪುಗಳಾಗಿ ವಿಂಗಡಿಸಲಾಗಿದೆ. ಒಂದು ಗುಂಪು ಮನೆಯ ನರಕ ನಿವಾಸಿಗಳು ವಿಭಾಗಕ್ಕೆ ಪ್ರವೇಶಿಸುವ 7 ಸ್ಪರ್ಧಿಗಳ ಗುಂಪು ಮತ್ತು ಮನೆಯ ಸ್ವರ್ಗ ನಿವಾಸಿಗಳು ವಿಭಾಗಕ್ಕೆ ಪ್ರವೇಶಿಸುವ 10 ಸ್ಪರ್ಧಿಗಳ ಮತ್ತೊಂದು ಗುಂಪುಗಳಾಗಿವೆ.

ಮನೆಯವರ ಸ್ಥಿತಿ

ಬದಲಾಯಿಸಿ

ಸೀಸನ್ 11 ಸ್ಪರ್ಧಿಗಳನ್ನು ಮನೆಗೆ ಪ್ರವೇಶಿಸುವ ಕ್ರಮದಲ್ಲಿ ಪಟ್ಟಿ ಮಾಡಲಾಗಿದೆ.

ಕ್ರಮ ಸಂಖ್ಯೆ. ಮನೆಯವರು ಪ್ರವೇಶಿಸಿದ ದಿನ ನಿರ್ಗಮನದ ದಿನ ಸ್ಥಿತಿ
1 ಭವ್ಯ ದಿನ 1
2 ಯಮುನಾ ಶ್ರೀನಿಧಿ ದಿನ 1 ದಿನ 7 Evicted
3 ಧನರಾಜ್ ದಿನ 1
4 ಗೌತಮಿ ದಿನ 1
5 ಅನುಷಾ ದಿನ 1
6 ಧರ್ಮ ದಿನ 1
7 ಜಗದೀಶ್ ದಿನ 1
8 ಶಿಶಿರ್ ದಿನ 1
9 ತ್ರಿವಿಕ್ರಮ್ ದಿನ 1
10 ಹಂಸಾ ದಿನ 1
11 ಮಾನಸಾ ದಿನ 1
12 ಸುರೇಶ್ ದಿನ 1
13 ಐಶ್ವರ್ಯ ದಿನ 1
14 ಚೈತ್ರ ದಿನ 1
15 ಮಂಜು ದಿನ 1
16 ಮೋಕ್ಷಿತಾ ದಿನ 1
17 ರಂಜಿತ್ ದಿನ 1

ಜಾಹೀರಾತು ಪಾಲುದಾರರು

ಬದಲಾಯಿಸಿ

ಈ ಸೀಸನ್ ಗಾಗಿ ಒಟ್ಟು 22 ಪಾಲುದಾರರನ್ನು ಘೋಷಿಸಿದೆ[].

  • ಪ್ರಸ್ತುತಪಡಿಸಿದವರು(Presented by) - ಹಾರ್ಲಿಕ್ಸ್
  • ಸಹ ನಡೆಸಲ್ಪಡುತ್ತಿರುವವರು(Co Powered by) - ಫ್ರೀಡಂ ಆಯಿಲ್ ಮತ್ತು ಡೊಮೆಕ್ಸ್
  • ವಿಶೇಷ ಪಾಲುದಾರರು (Special Partners) - ಸುದರ್ಶನ್ ಸಿಲ್ಕ್ಸ್, ಹೈಯರ್, ನಿರಂತರ, ಇಂಡಿಯಾ ಗೇಟ್, ಎ 23, ಸ್ವಸ್ತಿಕ್ಸ್, ಫಿಲಿಪ್ಸ್ ಮತ್ತು ಹಲ್ದಿರಾಮ್ಸ್.
  • ಅಸೋಸಿಯೇಟ್ ಪಾಲುದಾರರು (Associate Partners)- ಹ್ಯಾಂಗ್ಯೊ, ಇಕೋ ಪ್ಲಾನೆಟ್
  • ಡಿಜಿಟಲ್ ಪಾಲುದಾರರು(Digital partner) - ಸೋನಿ


ಕಾರ್ಯಕ್ರಮದಲ್ಲಿ ಮಹಿಳಾ ಸ್ಪರ್ಧಿಗಳ ಗೌಪ್ಯತೆಯ ಉಲ್ಲಂಘನೆಯ ಬಗ್ಗೆ ದೂರಿನ ನಂತರ ಬಿಗ್ ಬಾಸ್ ಸೀಸನ್ 11 ರ ಆಯೋಜಕರಿಗೆ ಮತ್ತು ನಿರೂಪಕರಿಗೆ ಪೊಲೀಸ್ ನೋಟಿಸ್ ಕಳುಹಿಸಲಾಗಿತ್ತು[]. ಕರ್ನಾಟಕ ರಾಜ್ಯ ಮಹಿಳಾ ಆಯೋಗವು ಮನೆಯಲ್ಲಿ ವಿವಾದಾತ್ಮಕ ಟಾಸ್ಕ್ ಬಗ್ಗೆ ಕಳವಳ ವ್ಯಕ್ತಪಡಿಸಿದ ನಂತರ ಕುಂಬಳಗೋಡು ಪೊಲೀಸರು ನೋಟಿಸ್ ಜಾರಿ ಮಾಡಿದ್ದಾರೆ. ಈ ಆರೋಪದ ನಂತರ, ಬಿಗ್ ಬಾಸ್ ತಂಡವು ನರಕ ಮತ್ತು ಸ್ವರ್ಗ ಪರಿಕಲ್ಪನೆಯನ್ನು ತೆಗೆದುಹಾಕಲು ನಿರ್ಧರಿಸಿದೆ. ನರಕ ಸ್ಪರ್ಧಿಗಳನ್ನು ಸ್ವರ್ಗ ಎಂದೂ ಕರೆಯಲ್ಪಡುವ ಬಿಗ್ ಬಾಸ್‌ನ ಪ್ರಮಾಣಿತ ಮನೆಗೆ ಸ್ಥಳಾಂತರಿಸಲಾಗಿದೆ[೧೦].

ಮನೆಯವರ ಸ್ಥಿತಿಯ ಮಟ್ಟ

ಬದಲಾಯಿಸಿ

ಸ್ವರ್ಗಕ್ಕೆ ಸೇರಿದವರಿಗೆ ಮನೆಯಲ್ಲಿ ಎಲ್ಲ ಸೌಕರ್ಯ ಸಿಕ್ಕರೆ, ಆದರೆ ನರಕಕ್ಕೆ ಸೇರಿದವರಿಗೆ ಕಷ್ಟ ಜಾಸ್ತಿ ಇದೆ[೧೧]. ಮನೆಯನ್ನು ಪ್ರವೇಶಿಸುವಾಗ ಸ್ವರ್ಗ ಅಥವಾ ನರಕ ವಿಭಾಗಗಳಿಗೆ ಕಳುಹಿಸಲಾದ ಸ್ಪರ್ಧಿಗಳ ಪಟ್ಟಿ ಈ ಕೆಳಗಿನಂತಿದೆ.

ನರಕವು ಸಂಪೂರ್ಣವಾಗಿ ನಾಶಮಾಡಲಾಯಿತು. ಇದರಿಂದಾಗಿ ಎಲ್ಲಾ ನರಕ ನಿವಾಸಿಗಳನ್ನು ಸ್ವರ್ಗದ ಕಡೆಗೆ ಸ್ಥಳಾಂತರಿಸಲಾಯಿತು[೧೨] [೧೩] [೧೪] .


ವಾರ 1 ವಾರ2
ದಿನ 1 ದಿನ 8 ದಿನ 12
ಐಶ್ಚರ್ಯ ಸ್ವರ್ಗ ನರಕದ ವಾಸವನ್ನು ನಿಲ್ಲಸಲಾಗಿದೆ
ಅನುಷಾ ನರಕ
ಭವ್ಯ ಸ್ವರ್ಗ
ಚೈತ್ರ ನರಕ
ಧನರಾಜ್ ಸ್ವರ್ಗ
ಧರ್ಮ ಸ್ವರ್ಗ
ಗೌತಮಿ ಸ್ವರ್ಗ
ಹಂಸ ಸ್ವರ್ಗ
ಜಗದೀಶ್ ಸ್ವರ್ಗ ನರಕ
ಮಾನಸ ನರಕ
ಮಂಜು ಸ್ವರ್ಗ
ಮೋಕ್ಷಿತಾ ನರಕ
ರಂಜಿತ್ ನರಕ ಸ್ವರ್ಗ
ಶಿಶಿರ್ ನರಕ
ಸುರೇಶ್ ನರಕ
ತಿವಿಕ್ರಮ ಸ್ವರ್ಗ
ಯಮುನಾ ಸ್ವರ್ಗ

ನಾಮನಿರ್ದೇಶನ ಪಟ್ಟಿ

ಬದಲಾಯಿಸಿ
ವಾರ 1 ವಾರ 2 ವಾರ 3 ವಾರ 4 ವಾರ 5 ವಾರ 6 ವಾರ 7 ವಾರ 8 ವಾರ 9 ವಾರ 10 ವಾರ 11 ವಾರ 12 ವಾರ 13 ವಾರ 14 ವಾರ 15
ಕಾಪ್ಟನ್ಸಿಗೆ

ನಾಮನಿರ್ದೇಶನಗಳು
ಯಾರು
ಇಲ್ಲ
ಐಶ್ಚರ್ಯ
ಭವ್ಯ
ಹಂಸ
ಮಂಜು
ತ್ರಿವಿಕ್ರಮ
ಯಮುನಾ
ಚೈತ್ರ
ಗೌತಮಿ
ಮಂಜು
ಮೋಕ್ಷಿತಾ
ಶಿಶಿರ್
ಮನೆಯ
ಕ್ಯಾಪ್ಟನ್
ಹಂಸ ಶಿಶಿರ್
ಕ್ಯಾಪ್ಟನ್‌ನ
ನಾಮನಿರ್ದೇಶನ
ಅರ್ಹತೆ
ಇಲ್ಲ
ಮತ ಚಲಾವಣೆ ಮಾಡಿದವರು : ನಾಮನಿರ್ದೇಶನಗೊಂಡವರು
ಐಶ್ಚರ್ಯ ಚೈತ್ರಕುಂದಾಪುರ ನಾಮನಿರ್ದೇಶನ
ಅನುಷಾ ಅರ್ಹತೆ
ಇಲ್ಲ
ನಾಮನಿರ್ದೇಶನ
ಭವ್ಯ ಮೋಕ್ಷಿತಾ ನಾಮನಿರ್ದೇಶನ
ಚೈತ್ರ ಅರ್ಹತೆ
ಇಲ್ಲ
ನಾಮನಿರ್ದೇಶನ
ಧನರಾಜ್ ಚೈತ್ರ ನಾಮನಿರ್ದೇಶನ
ಧರ್ಮ ಚೈತ್ರ
ಭವ್ಯ
ಹಂಸ
ನಾಮನಿರ್ದೇಶನ
ಗೌತಮಿ ಅನುಷಾ
ಯಮುನಾ
ಜಗದೀಶ್
ನಾಮನಿರ್ದೇಶನ
ಹಂಸ ಚೈತ್ರ ಮನೆಯ
ಕ್ಯಾಪ್ಟನ್
ಜಗದೀಶ್ ಚೈತ್ರ ನಾಮನಿರ್ದೇಶನ
ಮಾನಸ ಅರ್ಹತೆ
ಇಲ್ಲ
ನಾಮನಿರ್ದೇಶನ
ಮಂಜು ಅನುಷಾ ನಾಮನಿರ್ದೇಶನ
ಮೋಕ್ಷಿತಾ ಅರ್ಹತೆ
ಇಲ್ಲ
ಉಳಿಸಲಾಗಿದೆ
ರಂಜಿತ್ ಅರ್ಹತೆ
ಇಲ್ಲ
ನಾಮನಿರ್ದೇಶನ
ಶಿಶಿರ್ ಅರ್ಹತೆ
ಇಲ್ಲ
ನಾಮನಿರ್ದೇಶನ
ಸುರೇಶ್ ಅರ್ಹತೆ
ಇಲ್ಲ
ನಾಮನಿರ್ದೇಶನ
ತ್ರಿವಿಕ್ರಮ ಚೈತ್ರ ನಾಮನಿರ್ದೇಶನ
ಯಮುನಾ ಚೈತ್ರ
ಮಂಜು
ಗೌತಮಿ
ಹೊರಹಾಕಲಾಗಿದೆ
(ದಿನ 7)
Notes 1
ಪ್ರೇಕ್ಷಕರ
ಮತದ
ವಿರುದ್ಧ
ಭವ್ಯ
ಚೈತ್ರ
ಗೌತಮಿ
ಹಂಸ
ಜಗದೀಶ್
ಮಾನಸ
ಮಂಜು
ಮೋಕ್ಷಿತಾ
ಶಿಶಿರ್
ಯಮುನಾ
ಐಶ್ಚರ್ಯ
ಅನುಷಾ
ಭವ್ಯ
ಚೈತ್ರ
ಧರ್ಮ
ಧನರಾಜ್
ಗೌತಮಿ
ಹಂಸ
ಜಗದೀಶ್
ಮಾನಸ
ಮಂಜು ಮೋಕ್ಷಿತಾ
ರಂಜಿತ್
ಶಿಶಿರ್
ಸುರೇಶ್
ತಿವಿಕ್ರಮ
ಮರು ಪ್ರವೇಶ ಯಾರು ಇಲ್ಲ
ಸ್ವತಃ ಹೊರನಡೆಯುವಿಕೆ
ಹೊರಗೆ ಕಳಿಹಿಸಿದ್ದು
ಹೊರಹಾಕಲಾಗಿದೆ ಯಮುನ No
Eviction
  ಮನೆಯ ಸ್ಪರ್ಧಿಯನ್ನು ನೇರವಾಗಿ ಹೊರಹಾಕಲು ನಾಮನಿರ್ದೇಶನ ಮಾಡಲಾಗಿದೆ ಎಂದು ಸೂಚಿಸುತ್ತದೆ.
  ನಾಮನಿರ್ದೇಶನಗಳಿಗೆ ಮುಂಚಿತವಾಗಿ ಮನೆಯ ಸ್ಪರ್ಧಿಯು ವಿನಾಯಿತಿ ಪಡೆದಿದ್ದಾನೆ/ಳೆ ಎಂದು ಸೂಚಿಸುತ್ತದೆ.
  ಸ್ಪರ್ಧಿಯನ್ನು ಹೊರಹಾಕಲಾಗಿದೆ ಎಂದು ಸೂಚಿಸುತ್ತದೆ.
  ತುರ್ತು ಪರಿಸ್ಥಿತಿಯಿಂದಾಗಿ ಸ್ಪರ್ಧಿಯು ಹೊರನಡೆದಿದ್ದಾನೆ ಎಂದು ಸೂಚಿಸುತ್ತದೆ.
  ಸ್ಪರ್ಧಿಯನ್ನು ಹೊರಗೆಕಳುಹಿಸಲಾಗಿದೆ ಎಂದು ಸೂಚಿಸುತ್ತದೆ.
  ಮನೆಯ ಕ್ಯಾಪ್ಟನ್ ಎಂದು ಸೂಚಿಸುತ್ತದೆ.

ನಾಮನಿರ್ದೇಶನ ಟಿಪ್ಪಣಿಗಳು

ಬದಲಾಯಿಸಿ
  • ^1 : ಸ್ವರ್ಗದ ನಿವಾಸಿಗಳಿಗೆ ಮಾತ್ರ ನಾಮನಿರ್ದೇಶನ ಮಾಡುವ ಹಕ್ಕು ಇತ್ತು.
  • ^2 : ನಿಯಮಗಳನ್ನು ಉಲ್ಲಂಘಿಸಿದ ಕಾರಣ ಎಲ್ಲಾ ಸ್ಪರ್ಧಿಗಳನ್ನು ನಾಮನಿರ್ದೇಶನ ಮಾಡಲಾಗಿದೆ

ಸ್ಪರ್ಧಿಗಳು

ಬದಲಾಯಿಸಿ
ಪ್ರವೇಶ ಕ್ರ.ಸ ಮನೆಯವರು ಉದ್ಯೋಗ ಇಂದ ಜನಪ್ರಿಯ ಇತರೆ ಟಿಪ್ಪಣಿಗಳು
1 ಭವ್ಯ ಗೌಡ ನಟಿ, ರೂಪದರ್ಶಿ ಗೀತಾ ಧಾರಾವಾಹಿಯಿಂದ
2 ಯಮುನಾ ಶ್ರೀನಿಧಿ ನಟಿ, ಭರತನಾಟ್ಯ ಕಲಾವಿದೆ ಅಶ್ವಿನಿ ನಕ್ಷತ್ರ ಧಾರಾವಾಹಿಯಿಂದ [೧೫]
3 ಧನರಾಜ್ ಆಚಾರ್ ಕಾಮಿಡಿಯನ್, ನಟ ಕಿರು ವಿಡೀಯೋ, ಹಾಸ್ಯಕ್ಕಾಗಿ
4 ಗೌತಮಿ ಜಾಧವ್ ಕಿರುತೆರೆ ನಟಿ ಸತ್ಯ ಧಾರಾವಾಹಿಯಿಂದ
5 ಅನುಷಾ ರೈ ಕಿರುತೆರೆ ನಟಿ ಅಣ್ಣಯ್ಯ ಧಾರಾವಾಹಿಯಿಂದ
6 ಧರ್ಮ ಕೀರ್ತಿರಾಜ್ ಸಿನಿಮಾ ನಟ ನವಗ್ರಹ ಸಿನಿಮಾದಿಂದ
7 ಲಾಯರ್ ಜಗದೀಶ್ ವಕೀಲರು ಹಾಗೂ ಸಾಮಾಜಿಕಾ ಕಾರ್ಯಕರ್ತ
8 ಶಿಶಿರ್ ಶಾಸ್ತ್ರಿ ಕಿರುತೆರೆ & ಸಿನಿಮಾ ನಟ, ವ್ಯಾಪರಿ ಸೊಸೆ ತಂದ ಸೌಭಾಗ್ಯ, ಕುಲವಧು, ಸೇವಂತಿ ಧಾರಾವಾಹಿಯಿಂದ
9 ತ್ರಿವಿಕ್ರಮ್ ಕಿರುತೆರೆ ಹಾಗೂ ಸಿನಿಮಾ ನಟ ಪದ್ಮಾವತಿ ಧಾರಾವಾಹಿಯಿಂದ
10 ಹಂಸಾ ಪ್ರತಾಪ್ ಕಿರುತೆರೆ ನಟಿ ಚಿಕ್ಕಮ್ಮ, ಪುಟ್ಟಕ್ಕನ ಮಕ್ಕಳು ಧಾರಾವಾಹಿಯಿಂದ
11 ಮಾನಸಾ ತುಕಾಲಿ ಕಾಮಿಡಿಯನ್ ಗಿಚ್ಚಿಗಿಲಿ ಗಿಲಿ ರಿಯಾಲಿಟಿ ಶೋನಿಂದ
12 ಗೋಲ್ಡ್ ಸುರೇಶ್ ವ್ಯಾಪರಿ, ಸಿವಿಲ್ ಕಾಟ್ರ್ಯಾಕ್ಟರ್ ಗೋಲ್ಡ್ ಮ್ಯಾನ್ ಎಂದು [೧೬]
13 ಐಶ್ವರ್ಯ ಸಿಂಧೋಗಿ ಕಿರುತೆರೆ ನಟಿ ಶಾಂಭವಿ & ನಮ್ಮ ಲಚ್ಚಿ ಧಾರಾವಾಹಿಯಿಂದ
14 ಚೈತ್ರ ಕುಂದಾಪುರ ಸಾಮಾಜಿಕಾ ಕಾರ್ಯಕರ್ತೆ ಹಿಂದೂ ಪರ ಹೋರಾಟದಿಂದ [೧೭]
15 ಉಗ್ರಂ ಮಂಜು ಸಿನಿಮಾ ನಟ ಉಗ್ರಂ ಸಿನಿಮಾದಿಂದ
16 ಮೋಕ್ಷಿತಾ ಪೈ ಕಿರುತೆರೆ ನಟಿ ಪಾರು ಧಾರಾವಾಹಿಯಿಂದ
17 ರಂಜಿತ್ ಕಿರುತೆರೆ ನಟಿ ಅವನು ಮತ್ತು ಶ್ರಾವಣಿ & ಶನಿ ಧಾರಾವಾಹಿಯಿಂದ

ಉಲ್ಲೇಖಗಳು

ಬದಲಾಯಿಸಿ
  1. "ಬಿಗ್‌ ಬಾಸ್‌ ಕನ್ನಡ ಸೀಸನ್‌ 11ರ ಗ್ರ್ಯಾಂಡ್‌ ಓಪನಿಂಗ್‌ಗೂ ಮೊದಲೇ ಸ್ಪರ್ಧಿಗಳ ರಿವೀಲ್‌! ಆಡಿಯೆನ್ಸ್‌ ಕೈಗೆ ಸಿಗಲಿದೆ ಅಧಿಕಾರ". ಹಿಂದೂಸ್ತಾನ್ ಟೈಮ್ಸ್ ಕನ್ನಡ. Retrieved 23 ಸೆಪ್ಟಂಬರ್ 2024.
  2. "BBK11:ಈ ಬಾರಿ RRR ಕಾನ್ಸೆಪ್ಟ್ ಅಲ್ಲ; ಬಿಗ್‌ಬಾಸ್ 11ರಲ್ಲಿ ಸ್ವರ್ಗ ಮತ್ತು ನರಕ ಪರಿಕಲ್ಪನೆ?". ಫಿಲ್ಮಿಬೀಟ್ ಕನ್ನಡ. Retrieved 21 ಸೆಪ್ಟಂಬರ್ 2024.
  3. "Bigg Boss Kannada 11: ವೀಕ್ಷಕರಿಗೆ ನಿರಾಸೆ ತರುವ ಸುದ್ದಿ ಇಲ್ಲಿದೆ!". ವಿಜಯ ಕರ್ನಾಟಕ. Retrieved 19 Sep 2024.
  4. "Kichcha Sudeep announces his last season as host of Bigg Boss Kannada". India Today (in ಇಂಗ್ಲಿಷ್).
  5. "ಬಿಗ್ ಬಾಸ್ ಕನ್ನಡ ಸೀಸನ್ 11ರಲ್ಲಿ ಸ್ವರ್ಗ ನರಕ ಎನ್ನುವ ಪರಿಕಲ್ಪನೆ?". ವಿಜಯ ಕರ್ನಾಟಕ.
  6. "ಬಿಗ್‌ ಬಾಸ್‌ ಕನ್ನಡ ಸೀಸನ್‌ 11 ಶುರುವಾಗುವ ಮೊದಲೇ 5 ಸ್ಪರ್ಧಿಗಳ ಹೆಸರು ರಿವೀಲ್‌ !". ಝೀ ನ್ಯೂಸ್ ಇಂಡಿಯಾ. Retrieved Sep 23, 2024.
  7. "BBK11: 'ಬಿಗ್ ಬಾಸ್ ಕನ್ನಡ ಸೀಸನ್ 11'ರ 17 ಸ್ಪರ್ಧಿಗಳ ಹೆಸರು, ವಿವರ ಇಲ್ಲಿದೆ". ಟಿವಿ 9 ಕನ್ನಡ. Retrieved Sep 30, 2024.
  8. "Bigg Boss Kannada - Watch Season 11 Episode 1 - Grand Opening Extravaganza on JioCinema". Jio Cinema (in ಇಂಗ್ಲಿಷ್).
  9. "ಸ್ವರ್ಗ ನರಕ ಕ್ಲೋಸ್ ಆಗಲು ಕಾರಣವೇ ಮಹಿಳಾ ಆಯೋಗದ ʻಆʼ ನೋಟಿಸ್‌!". ಝೀ ನ್ಯೂಸ್ ಇಂಡಿಯಾ. Retrieved 12 ಅಕ್ಟೋಬರ್ 2024.
  10. "Bigg Boss Kannada 11 served police notice over privacy breach". The Times of India (in ಇಂಗ್ಲಿಷ್).
  11. "ಬಿಬಿಕೆ: ಸ್ವರ್ಗ- ನರಕ ವಾಸಿಗಳು ಇವರೇ ನೋಡಿ; ಬಿಗ್‌ ಮನೆ ಸೇರಿದ 17 ಸ್ಪರ್ಧಿಗಳು". ಹಿಂದೂಸ್ತಾನ್ ಟೈಮ್ಸ್ ಕನ್ನಡ. Retrieved Sep 30, 2024.
  12. "Bigg Boss Kannada 11". The Times of India (in ಇಂಗ್ಲಿಷ್).
  13. "ಸ್ವರ್ಗ-ನರಕ ಎಲ್ಲಾ ಇನ್ಮುಂದೆ ಇಲ್ಲ! ಎರಡಾಗಿದ್ದ ಮನೆ ಒಂದಾಯ್ತು, ಹೊಸ ಆಟ ಶುರು!". News18 Kannada. Retrieved 11 ಅಕ್ಟೋಬರ್ 2024.
  14. "ಬಿಗ್‌ಬಾಸ್‌ ಕನ್ನಡ 11: ಕ್ರೇನ್‌ನಲ್ಲಿ ಇಳಿದು ನರಕದಲ್ಲಿರುವ ವಸ್ತುಗಳನ್ನು ಚೆಲ್ಲಾಪಿಲ್ಲಿ ಮಾಡಿದ ಮುಸುಕುಧಾರಿಗಳು; ಆತಂಕದಲ್ಲಿ ಸ್ಪರ್ಧಿಗಳು". ಹಿಂದೂಸ್ತಾನ್ ಟೈಮ್ಸ್ ಕನ್ನಡ. Retrieved 11 ಅಕ್ಟೋಬರ್ 2024.
  15. "ಬಿಗ್‌ಬಾಸ್‌ ಮನೆಯಿಂದ ಮೊದಲು ಔಟ್‌ ಆದ ಯಮುನಾ ಶ್ರೀನಿಧಿ ಅವರ ಪತಿ ಹಾಗೂ ಮಕ್ಕಳು ಯಾರು ಗೊತ್ತಾ". ಝೀ ನ್ಯೂಸ್ ಇಂಡಿಯಾ. Retrieved 6 ಅಕ್ಟೋಬರ್ 2024.
  16. "ನಾನು ಉತ್ತರ ಕರ್ನಾಟಕದ ಮಣ್ಣಿನ ಮಗ; ಕೆಜಿಗಟ್ಟಲೆ ಚಿನ್ನ ಧರಿಸಿ ನರಕಕ್ಕೆ ಕಾಲಿಟ್ಟ ಗೋಲ್ಡ್‌ ಸುರೇಶ್". ಹಿಂದೂಸ್ತಾನ್ ಟೈಮ್ಸ್ ಕನ್ನಡ. Retrieved Sep 29, 2024.
  17. "ಬಿಬಿಕೆ ಸ್ಪರ್ಧಿ ಚೈತ್ರ ಕುಂದಾಪುರ ಪರಿಚಯ". ಪ್ರಜಾವಾಣಿ. Retrieved 29 ಸೆಪ್ಟಂಬರ್ 2024.

ಬಾಹ್ಯಕೊಂಡಿಗಳು

ಬದಲಾಯಿಸಿ