ಬಾಬಾ ಯೋಗೇಂದ್ರ (೭ ಜನವರಿ ೧೯೨೪ - ೧೦ ಜೂನ್ ೨೦೨೨) ಒಬ್ಬ ಭಾರತೀಯ ಕಲಾವಿದ, ರಾಷ್ಟ್ರೀಯ ಸ್ವಯಂಸೇವಕ ಸಂಘ (RSS) ದ ಪ್ರಚಾರಕ್ (ಪ್ರಚಾರಕ) ಮತ್ತು ಸಂಸ್ಕಾರ ಭಾರತಿಯ ಸ್ಥಾಪಕ ಸದಸ್ಯರಲ್ಲಿ ಒಬ್ಬರು. ಇವರಿಗೆ ೨೦೧೮ ರಲ್ಲಿ ಕಲಾ ಕ್ಷೇತ್ರದ ವಿಭಾಗದಲ್ಲಿ ಭಾರತದ ನಾಲ್ಕನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮಶ್ರೀ ಪ್ರಶಸ್ತಿಯನ್ನು ನೀಡಲಾಯಿತು.

ಬಾಬಾ ಯೋಗೇಂದ್ರ
ಜುಲೈ 2018 ರಲ್ಲಿ ಬಾಬಾ ಯೋಗೇಂದ್ರ
ಜನನ(೧೯೨೪-೦೧-೦೭)೭ ಜನವರಿ ೧೯೨೪
ಮರಣ10 June 2022(2022-06-10) (aged 98)
ಗಮನಾರ್ಹ ಕೆಲಸಗಳುಸಂಸ್ಕಾರ ಭಾರತಿ
Honoursಪದ್ಮಶ್ರೀ (೨೦೧೮)

ಆರಂಭಿಕ ಜೀವನ

ಬದಲಾಯಿಸಿ

ಬಾಬಾ ಯೋಗೇಂದ್ರ ಅವರು ೭ ಜನವರಿ ೧೯೨೪ ರಂದು ಬ್ರಿಟಿಷ್ ಇಂಡಿಯಾದ ಯುನೈಟೆಡ್ ಪ್ರಾವಿನ್ಸ್‌ನ, ಬಸ್ತಿ ಜಿಲ್ಲೆಯ ಗಾಂಧಿನಗರದಲ್ಲಿ (ಈಗಿನ ಉತ್ತರ ಪ್ರದೇಶದಲ್ಲಿ ) ಜನಿಸಿದರು. ಅವರು ಗೋರಖ್‌ಪುರದಲ್ಲಿ ಶಿಕ್ಷಣ ಪಡೆದರು. []

ಸಂಸ್ಕಾರ ಭಾರತಿ ಜೊತೆಗಿನ ಒಡನಾಟ

ಬದಲಾಯಿಸಿ

ಯೋಗೇಂದ್ರ ಗೋರಖ್‌ಪುರ, ಅಲಹಾಬಾದ್, ಬರೇಲಿ, ಬುದೌನ್ ಮತ್ತು ಸೀತಾಪುರ್‌ನಲ್ಲಿ ಆರ್‌ಎಸ್‌ಎಸ್ ನಲ್ಲಿ ಪ್ರಚಾರಕರಾಗಿ ಕೆಲಸ ಮಾಡಿದರು. ೧೯೮೧ ರಲ್ಲಿ ಆರ್‌ಎಸ್‌ಎಸ್ ಕಲೆ ಮತ್ತು ಸಾಹಿತ್ಯವನ್ನು ಉತ್ತೇಜಿಸಲು ಸಂಸ್ಕಾರ ಭಾರತಿ ಎಂಬ ಘಟಕವನ್ನು ರಚಿಸಿತು. ಯೋಗೇಂದ್ರ ಸಂಸ್ಥಾಪಕ ಸದಸ್ಯರಲ್ಲಿ ಒಬ್ಬರು. ಅವರು ಆರ್‌ಎಸ್‌ಎಸ್‌ನ ಹಿರಿಯ ಪ್ರಚಾರಕರಲ್ಲಿ (ಪ್ರಚಾರಕರು) ಒಬ್ಬರಾಗಿ ತಮ್ಮನ್ನು ತಾವು ಗುರುತಿಸಿಕೂಂಡರು. [] [] []

ಪ್ರಶಸ್ತಿಗಳು

ಬದಲಾಯಿಸಿ

೨೦೧೮ ರಲ್ಲಿ, ಭಾರತ ಸರ್ಕಾರವು ಅವರಿಗೆ ಕಲೆಯಲ್ಲಿ ಪದ್ಮಶ್ರೀ ಪ್ರಶಸ್ತಿಯನ್ನು ನೀಡಿತು, ಇದು ದೇಶದ ನಾಲ್ಕನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾಗಿದೆ. [] []

೧೧ ಮೇ ೨೦೨೨ ರಂದು, ಯೋಗೇಂದ್ರ ಅವರು ಗೋರಖ್‌ಪುರದಲ್ಲಿದ್ದಾಗ ಅವರ ಹೃದಯ ಸ್ತಂಭನಕ್ಕೆ ಒಳಗಾಯಿತು. ಮರುದಿನ ಮೇದಾಂತ ಆಸ್ಪತ್ರೆಗೆ ದಾಖಲಿಸಲಾಯಿತು. ಮೇ ೨೭ ರಂದು ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಲಕ್ನೋದ ರಾಮ್ ಮನೋಹರ್ ಲೋಹಿಯಾ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಜೂನ್ ೧೦ ರಂದು ಅವರು ಆಸ್ಪತ್ರೆಯಲ್ಲಿ ನಿಧನರಾದರು. []

ಉಲ್ಲೇಖಗಳು

ಬದಲಾಯಿಸಿ
  1. ೧.೦ ೧.೧ Chauhan, Dhyanendra Singh (16 June 2022). "पद्मश्री बाबा योगेंद्र की याद में 18 जून को है श्रद्धांजलि सभा, मोहन भागवत और राजनाथ सिंह करेंगे श्रद्धासुमन अर्पित" [Tribute meeting in memory of Padmashree Baba Yogendra on June 18, Mohan Bhagwat and Rajnath Singh will pay homage]. Dainik Jagran (in ಹಿಂದಿ). Retrieved 17 November 2022.
  2. ೨.೦ ೨.೧ Pandey, Dharmendra (10 June 2022). "PadamShree Baba Yogendra : संस्कार भारती के संस्थापक पदमश्री बाबा योगेन्द्र का लखनऊ में निधन, 11 मई को हुई थी तबीयत खराब" [PadamShree Baba Yogendra: Padamshree Baba Yogendra, founder of Sanskar Bharti, died in Lucknow, health was bad on May 11]. Dainik Jagran (in ಹಿಂದಿ). Retrieved 17 November 2022.
  3. "'Sanskar Bharati' founder Baba Yogendra no more". The Hitavada (in ಇಂಗ್ಲಿಷ್). 11 June 2022. Retrieved 17 November 2022.
  4. "Republic Day 2018: Full list of Padma Vibhushan, Padma Bhushan and Padma Shri awardees". The Indian Express (in ಇಂಗ್ಲಿಷ್). 25 January 2018. Retrieved 17 November 2022.
  5. Khurana, Suanshu (28 April 2022). "Padma Shri awardee removed from govt accommodation as eviction starts". The Indian Express (in ಇಂಗ್ಲಿಷ್). Retrieved 25 November 2022.