ಯುನೈಟೆಡ್ ಪ್ರಾವಿನ್ಸ್ ಆಫ್ ಆಗ್ರಾ ಅಂಡ್ ಔಧ್

ಯುನೈ‌‍ಟೆಡ್ ಪ್ರಾವಿನ್ಸ್ ಆಫ್ ಆಗ್ರಾ ಅಂಡ್ ಔಧ್ ಕ್ರಿ.ಶ ೧೯೦೨-೧೯೪೭ ರ ಕಾಲದಲ್ಲಿ ಭಾರತದಲ್ಲಿ ಬ್ರಿಟಿಶ್ ಆಡಳಿತದ ಒಂದು ಪ್ರಾಂತ್ಯವಾಗಿತ್ತು. ಈ ಪ್ರಾಂತ್ಯವನ್ನು ೧೯೩೫ ರ ಗವರ್ನಮೆಂಟ್ ಆಫ್ ಇಂಡಿಯಾ ಆಕ್ಟ್‌ನ ಅನ್ವಯವಾಗಿ ಯುನೈಟೆಡ್ ಪ್ರಾವಿನ್ಸ್ ಎಂದು ಕರೆಯಲಾಗುತಿತ್ತು ಹಾಗೂ ೧೯೫೦ರ ವರೆಗೂ ಸ್ವತಂತ್ರ್ಯ ಭಾರತದ ಒಂದು ಭಾಗವಾಗಿತ್ತು. ಈ ಪ್ರಾಂತ್ಯವನ್ನು ಈಗಿನ ಉತ್ತರ ಪ್ರದೇಶ ಮತ್ತು ಉತ್ತರಖಂಡ ರಾಜ್ಯಗಳಿಗೆ ಹೋಲಿಸಬಹುದಾಗಿದೆ. ೧೮೫೬ ರಿಂದ ೧೯೦೨ ರ ವರೆಗೆ ಈ ಪ್ರಾಂತ್ಯವು ಪಾಶ್ಚಿಮೋತ್ತರ ಮತ್ತು ಔಧ್ ಎಂಬ ವಿಭಿನ್ನ ಪ್ರಾಂತ್ಯಗಳಾಗಿತ್ತು. ೧೯೦೨ ರಿಂದ ೧೯೨೦ ರ ವರೆಗೆ ಅಲಹಾಬಾದ್ ಇದರ ರಾಜಧಾನಿ ಆಗಿತ್ತು. ೧೯೨೧ರ ನಂತರ ಲಖ್ನೌವನ್ನು ಇದರ ರಾಜಧಾನಿ ಆಗಿ ಮಾಡಲಾಯಿತು.