ಬಲಮುರಿ ಸಸ್ಯ
ಬಲಮುರಿಯನ್ನು ಭಾರತೀಯ ತಿರುಪು ಮರವೆಂದು ಕರೆಯುತ್ತಾರೆ. ಇದು ಭಾರತೀಯ ಉಪಖಂಡ, ದಕ್ಷಿಣ ಚೀನಾ, ಮಲಯ ಪೆನಿನ್ಸುಲಾ, ಜಾವಾ ಮತ್ತು ಸೌದಿ ಅರೇಬಿಯಾ ಸೇರಿದಂತೆ ಏಷ್ಯಾದಲ್ಲಿ ಕಂಡುಬರುವ ಸಣ್ಣ ಮರ ಅಥವಾ ದೊಡ್ಡ ಪೊದೆಸಸ್ಯದ ಜಾತಿಯಾಗಿದೆ. ಹೆಲಿಕ್ಟೈರೆಸ್ ಐಸೊರಾ ಇದರ ವೈಜ್ಞಾನಿಕ ಹೆಸರು.ಇದು ಪೌಷ್ಟಿಕಾಂಶ ಮತ್ತು ಔಷಧೀಯ ಗುಣಗಳ ಪ್ರಭಾವಶಾಲಿ ವ್ಯಾಪ್ತಿಯನ್ನು ಹೊಂದಿದೆ. ತೊಗಟೆಯ ನಾರುಗಳನ್ನು ಹಗ್ಗ ಮಾಡಲು ಬಳಸಲಾಗುತ್ತದೆ. [೧][೨]
ಇತರೆ ಹೆಸರುಗಳು
ಬದಲಾಯಿಸಿ- ಸಂಸ್ಕೃತ - ಅವರ್ತನಿ; ಅವರ್ಟ್ಫಾಲಾ
- ಹಿಂದಿ- ಮಾರ್ರೋಫಾಲಿ ,ಭುಂಡು, ಜೊನ್ಫಾಲ್,
- ಇಂಗ್ಲಿಷ್ - ಇಂಡಿಯನ್ ಸ್ಕ್ರೂಟ್ರೀ, ಈಸ್ಟ್‍ಇಂಡಿಯನ್ಸ್ಕ್ರೂಟ್ರೀ, ಡೀರ್ಹಾರ್ನ್
- ಮರಾಠಿ - ಕೆವಾಡ್, ಮುರಾದ್ದೆಂಗ್ (ಮುರುದ್ಶೆಂಗ್)
- ಬಂಗಾಳಿ - ಅಂಟಮೊರಾ
- ಗುಜರಾತಿ - ಮರದಶಿಂಗ್
- ಕನ್ನಡ - ಯದ್ಮುರಿ
- ತೆಲುಗು - ವಡಾಂಪಿರಿ
- ಮಲಯಾಳಂ - ಇಡಾಂಪಿರಿ ವ್ಯಾಲಂಪಿರಿ( ಎಡಂಪಿರಿವಲಂಪಿರಿ )
- ಸಿಂಹಳ - ಲಿನಿಯಾ
- ಐಸೊರಾದ ಇತರ ಸ್ಥಳೀಯ ಹೆಸರುಗಳು - ಮೋಚ್ರ, ಮಡ್ಮುಡಿಕಾ, ಕುರ್ಕುರ್ಬಿಕಾ, ಸಿಂಕ್ರಿ, ಯೆದಾಮುರಿ, ಪಿಟಾಬರಾಂಡಾ, ವ್ಯಾಲಂಬುರಿ, ಬಾಲಂಪರಿ, ಗುವಾಡರಾ, ಪೆಡಮರಿ, ಇಶ್ವರ್ಮುರಿ, ಮುರ್ಮುರಿಯಾಮತ್ತು ವೂರ್ಕಟೆ.
ಸಸ್ಯದ ವಿವರಣೆ
ಬದಲಾಯಿಸಿಬೂದು ತೊಗಟೆ ಹೊಂದಿದ ದೊಡ್ಡ ಪೊದೆ ಸಸ್ಯ ಅಥವಾ ಸಣ್ಣ ಮರ. ಇದು ೫-೮ಮೀ ಎತ್ತರವಿರುತ್ತದೆ. ಅಂಡಾಕಾರದ ಎಲೆಗಳನ್ನು ಹೊಂದಿದೆ. ಹೂವು ಇಟ್ಟಿಗೆ ಕೆಂಪು ಅಥವಾ ಕಿತ್ತಳೆ ಕೆಂಪು ಬಣ್ಣದಲ್ಲಿರುತ್ತದೆ. ಕಚ್ಚಾ ಹಣ್ಣುಗಳು ಹಸಿರು, ಕಂದು ಬಣ್ಣದಲ್ಲಿರುತ್ತದೆ. ಕೆಂಪು ಹೂವುಗಳು ಸೂರ್ಯ ಕುಟುಂಬದ ಪಕ್ಷಿಗಳ ಪರಾಗಸ್ಪರ್ಶಕ್ಕೊಳಪಡುತ್ತದೆ. ಹಣ್ಣುಗಳ ತುದಿಯು ಸ್ಕ್ರೂನಂತೆ ತಿರುಚಿದ್ದಾವೆ. ಇದರ ಬೀಜಗಳು ಕಪ್ಪು-ಕಂದು ಬಣ್ಣದಲ್ಲಿದ್ದು ಹೆಚ್ಚು ಹೊಳಪನ್ನು ನೀಡುತ್ತದೆ. ಇದು ಆಯಾತ ಅಥವಾ ತ್ರಿಕೋನ ಆಕಾರದಲ್ಲಿದೆ. ಜುಲೈ ನಿಂದ ಡಿಸೆಂಬರ್ ವರೆಗೆ ಈ ಸಸ್ಯವು ಹೂವನ್ನು ಬಿಡುತ್ತದೆ. [೩][೪]
ಬೆಳೆಯುವ ಪ್ರದೇಶ
ಬದಲಾಯಿಸಿಇದು ಉಷ್ಣವಲಯ ಪ್ರದೇಶಗಳಾದ ಭಾರತದ ಪಂಜಾಬ್, ಬಂಗಾಳ, ದಕ್ಷಿಣ ಭಾರತ ಮತ್ತು ಪಾಕಿಸ್ತಾನ, ನೇಪಾಳ, ಮಯನ್ಮಾರ್, ಥೈಲ್ಯಾಂಡ್ ಮತ್ತು ಶ್ರೀಲಂಕಾಗಳಲ್ಲಿ ಹೆಚ್ಚು ಕಂಡುಬರುತ್ತದೆ. ಬೆಟ್ಟದ ಇಳಿಜಾರುಗಳಲ್ಲಿ ೧,೫೦೦ ಮೀಟರ್‍ಗಳಷ್ಟು ಮಧ್ಯ ಮತ್ತು ಪಶ್ಚಿಮ ಭಾರತದ ಶುಷ್ಕ ಇಳಿಜಾರು ಕಾಡುಗಳಲ್ಲಿ ಇದು ಅತಿಯಾಗಿ ಬೆಳೆಯುತ್ತದೆ. ಇದು ಮಲಯ ಪೆನಿನ್ಸುಲಾ, ಜಾವಾ ಮತ್ತು ಆಸ್ಟ್ರೇಲಿಯಾದಲ್ಲೂ ಸಹ ಕಂಡುಬರುತ್ತದೆ [೫]
ಉಪಯೋಗ
ಬದಲಾಯಿಸಿಇದರ ಉಪಯೋಗ ಅಂಗ: ಫಲ, ಮೂಲ, ತೊಗಟೆ
- ಸಸ್ಯವು ವ್ಯಾಧಿ ನಿರೋಧಕ, ಮಧುಮೇಹ ವಿರೋಧಿ ಅಂಶಗಳನ್ನು ಹೊಂದಿದೆ.
- ಬಲಮುರಿಯ ತೊಗಟೆಯನ್ನು ಅತಿಸಾರ, ಭೇದಿ ನಿಯಂತ್ರಣಕ್ಕೆ ಬಳಸಲಾಗುತ್ತದೆ.
- ಕರುಳಿನ ಹುಳುಗಳನ್ನು ಕೊಲ್ಲಲು ಮಕ್ಕಳಿಗೆ ಇದರಿಂದ ತಯಾರಿಸಿದ ಔಷಧಿಯನ್ನು ನೀಡಲಾಗುತ್ತದೆ.
- ದೀರ್ಘಕಾಲದ ಗಾಯಗಳ ನಿವಾರಣೆಗೆ ಇದನ್ನು ಬಳಸಲಾಗುತ್ತದೆ.
- ಈ ಸಸ್ಯದ ಹಣ್ಣುಗಳನ್ನು ಔಷಧೀಯವಾಗಿ ಬಳಸಲಾಗುತ್ತದೆ.
- ವಾಯುವಿಗೆ ಇದು ಉಪಯುಕ್ತವಾಗಿದೆ.
- ಇದನ್ನು ಕ್ರಿಮಿರೋಗ ನಿವಾರಕವಾಗಿ ಬಳಸಲಾಗುತ್ತದೆ [೬][೭]
ಇತರೆ ಬಳಕೆಗಳು
ಬದಲಾಯಿಸಿ- ತೊಗಟೆ ಬಲವಾದ ನಾರಿನ ಮೂಲವಾಗಿದೆ.
- ನೇಗಿಲುಗಳನ್ನು ತಯಾರಿಸಲು ತೊಗಟೆಯ ನಾರು ಒಳ್ಳೆಯದು.
ಉಲ್ಲೇಖ
ಬದಲಾಯಿಸಿ- ↑ http://www.theplantlist.org/tpl/record/kew-2843218[ಶಾಶ್ವತವಾಗಿ ಮಡಿದ ಕೊಂಡಿ]
- ↑ https://books.google.co.in/books?id=mBB_aRjQIo0C&redir_esc=y
- ↑ http://www.currentscience.ac.in/Downloads/article_id_078_06_0713_0718_0.pdf
- ↑ http://www.instituteofayurveda.org/plants/plants_detail.php?i=1276&s=Family_name
- ↑ http://www.flowersofindia.net/catalog/slides/East-Indian%20Screw%20Tree.html
- ↑ https://indiabiodiversity.org/species/show/32642
- ↑ https://www.ncbi.nlm.nih.gov/pmc/articles/PMC2846480/