ಫಲಿತಾಂಶದ ಆಧಾರಿತ ಶಿಕ್ಷಣ

(ಫಲಿತಾಂಶ ಆಧಾರಿತ ಶಿಕ್ಷಣ ಇಂದ ಪುನರ್ನಿರ್ದೇಶಿತ)

ಫಲಿತಾಂಶದ ಆಧಾರಿತ ಶಿಕ್ಷಣ(Outcome-based education)ವು ಒಂದು ಶೈಕ್ಷಣಿಕ ಸಿದ್ಧಾಂತವಾಗಿದ್ದು ಶಿಕ್ಷಣ ವ್ಯವಸ್ಥೆಯ ಪ್ರತಿಯೊಂದೂ ಭಾಗವು ಕೆಲವು ಗುರಿಗಳನ್ನು ಹೊಂದಿದೆ. ಶಿಕ್ಷಣದ ಅನುಭವದ ಕೊನೆಯಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿಯು ಈ ಗುರಿಯನ್ನು ಸಾಧಿಸುತ್ತಾನೆ. ಫಲಿತಾಂಶದ ಆಧಾರಿತ ಶಿಕ್ಷಣದಲ್ಲಿ ಯಾವುದೇ ವಿಶೇಷ ರೀತಿಯ ಬೋಧನೆ ಅಥವಾ ಮೌಲ್ಯಮಾಪನ ಇರುವುದಿಲ್ಲ. ಬದಲಾಗಿ ತರಗತಿಗಳು, ಅವಕಾಶಗಳು ಮತ್ತು ಮೌಲ್ಯಮಾಪನ ವಿದ್ಯಾರ್ಥಿಗಳಿಗೆ ನಿರ್ದಿಷ್ಟ ಫಲಿತಾಂಶಗಳನ್ನು ಸಾಧಿಸಲು ಸಹಾಯ ಮಾಡುತ್ತದೆ.[]

ದಕ್ಷಿಣ ಆಫ್ರಿಕಾದ ಕೇಪ್ ಟೌನ್ ನ ಪ್ರೌಡ ಶಾಲೆಯ ತರಗತಿ

ಫಲಿತಾಂಶದ ಆಧಾರಿತ ಶಿಕ್ಷಣವನ್ನು ವಿಶ್ವದ ಶಿಕ್ಷಣ ವ್ಯವಸ್ಥೆಯಲ್ಲಿ ವಿವಿಧ ಹಂತಗಳಲ್ಲಿ ಅಳವಡಿಸಿಕೊಳ್ಳಲಾಗಿದೆ. ಆಸ್ಟ್ರೇಲಿಯ ಮತ್ತು ದಕ್ಷಿಣ ಆಫ್ರಿಕಾ ದೇಶಗಳು ಫಲಿತಾಂಶ ಆಧಾರಿತ ಶಿಕ್ಷಣ ನೀತಿಯನ್ನು 1990ರ ಪ್ರಾರಂಭದಲ್ಲಿ ಅಳವಡಿಸಿಕೊಂಡಿದ್ದು ಈಗ ಅದನ್ನು ರದ್ದು ಮಾಡಿದೆ.[][] ಅಮೇರಿಕಾವು ಫಲಿತಾಂಶ ಆಧಾರಿತ ಶಿಕ್ಷಣವನ್ನು 1994ರಲ್ಲೇ ಹೊಂದಿದ್ದು ಅದನ್ನು ಹಲವಾರು ವರ್ಷಗಳಿಂದ ಅಳವಡಿಸಿಕೊಂಡಿದೆ.[][] 2005ರಲ್ಲಿ ಹಾಂಕಾಂಗ್ ದೇಶವು ತನ್ನ ವಿಶ್ವವಿದ್ಯಾನಿಲಯಗಳಲ್ಲಿ ಫಲಿತಾಂಶ ಆಧಾರಿತ ಮಾರ್ಗವನ್ನು ಅಳವಡಿಸಿಕೊಂಡಿತು.[] 2008ರಲ್ಲಿ ಮಲೇಷಿಯಾವು ತನ್ನ ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ಫಲಿತಾಂಶ ಆಧಾರಿತ ಶಿಕ್ಷಣ ಪದ್ಧತಿಯನ್ನು ಜಾರಿಗೆ ತಂದಿತು.[] ಯೂರೋಪ್ ಒಕ್ಕೂಟವು ಶಿಕ್ಷಣವನ್ನು ಫಲಿತಾಂಶ ಕೇಂದ್ರಿತಕ್ಕೆ ಪಲ್ಲಟಗೊಳಿಸುವ ವಿಚಾರವನ್ನು ಯೂರೋಪ್ ಸಂಸ್ಥಾನಗಳ ಮುಂದಿಟ್ಟಿತು.[] 1989ರಲ್ಲಿ ಫಲಿತಾಂಶ ಆಧಾರಿತ ಶಿಕ್ಷಣವನ್ನು ಒಪ್ಪಿಕೊಳ್ಳಲು ಅಂತರಾಷ್ಟ್ರೀಯ ಪ್ರಯತ್ನದ ಫಲವಾಗಿ ವಾಷಿಂಗ್ಟನ್ ಅಕಾರ್ಡನ್ನು ಸೃಷ್ಟಿಸಲಾಯಿತು. ಇದು ಫಲಿತಾಂಶದ ಆಧಾರಿತ ಶಿಕ್ಷಣದ ಮೂಲಕ ಪಡೆದ ಇಂಜಿನಿಯರ್ ಪದವಿಗಳನ್ನು ಸ್ವೀಕರಿಸಲು ಆದ ಒಪ್ಪಂದವಾಗಿದೆ. 2014 ರಂತೆ, ಆಸ್ಟ್ರೇಲಿಯ, ಕೆನಡ, ಥೈವಾನ್, ಹಾಂಕಾಂಗ್, ಭಾರತ, ಐರ್ರ್ಲೆಂಡ್, ಜಪಾನ್, ಕೊರಿಯಾ, ಮಲೇಶಿಯಾ, ನ್ಯೂಜಿಲೆಂಡ್, ರಶಿಯಾ, ಸಿಂಗಪೂರ್, ದಕ್ಷಿಣ ಆಫ್ರಿಕಾ, ಶ್ರೀಲಂಕಾ, ಟರ್ಕಿ, ಬ್ರಿಟನ್ ಮತ್ತು ಅಮೆರಿಕ ಸಂಯುಕ್ತ ಸಂಸ್ಥಾನ ಸಹಿ ಹಾಕಿದ ದೇಶ ಗಳಾಗಿವೆ.[]

ಸಾಂಪ್ರದಾಯಿಕ ಶಿಕ್ಷಣ ಮತ್ತು ಫಲಿತಾಂಶದ ಆಧಾರಿತ ಶಿಕ್ಷಣಕ್ಕಿರುವ ವ್ಯತ್ಯಾಸ

ಬದಲಾಯಿಸಿ

ಫಲಿತಾಂಶದ ಆಧಾರಿತ ಶಿಕ್ಷಣವನ್ನು ಪ್ರಾಥಮಿಕವಾಗಿ ಸಾಂಪ್ರದಾಯಿಕ ಶಿಕ್ಷಣ ವಿಧಾನದಿಂದ ಮೂರು ಅಂಶಗಳನ್ನು ಒಳಗೊಂಡಿರುವ ಮೂಲಕ ಪ್ರತ್ಯೇಕಿಸಬಹುದು: ಶಿಕ್ಷಣದ ಸಿದ್ಧಾಂತ, ಶಿಕ್ಷಣಕ್ಕೆ ವ್ಯವಸ್ಥಿತ ರಚನೆ ಮತ್ತು ಸೂಚನಾ ಅಭ್ಯಾಸಕ್ಕೆ ಒಂದು ನಿರ್ದಿಷ್ಟ ವಿಧಾನ.[] ಕಲಿಯುವವರು ತಮ್ಮ ಕಲಿಕೆಯ ಅನುಭವದ ಕೊನೆಯಲ್ಲಿ ಯಶಸ್ವಿಯಾಗಿ ಮಾಡಲು ಅಗತ್ಯವಾದ ವಿಷಯಗಳ ಕಡೆಗೆ ಇದು ಸಂಪೂರ್ಣ ಶೈಕ್ಷಣಿಕ ವ್ಯವಸ್ಥೆಯನ್ನು ಆಯೋಜಿಸುತ್ತದೆ.[೧೦] ಈ ಮಾದರಿಯಲ್ಲಿ, "ಫಲಿತಾಂಶ" ಎಂಬ ಪದವು ಮುಖ್ಯ ಪರಿಕಲ್ಪನೆಯಾಗಿದೆ ಮತ್ತು ಕೆಲವೊಮ್ಮೆ "ಸಾಮರ್ಥ್ಯ, "ಮಾನದಂಡಗಳು, "ಮಾಪನಗುರುತುಗಳು" ಮತ್ತು "ಸಾಧನೆಯ ಗುರಿಗಳು" ಎಂಬ ಪದಗಳೊಂದಿಗೆ ಪರ್ಯಾಯವಾಗಿ ಬಳಸಲಾಗುತ್ತದೆ.[೧೦] ಫಲಿತಾಂಶಗಳನ್ನು ಸಾಧಿಸಲು ನಿಜವಾದ ಕೆಲಸದ ಸ್ಥಳದಲ್ಲಿ ಔಪಚಾರಿಕವಾಗಿ ಮತ್ತು ಅನೌಪಚಾರಿಕವಾಗಿ ಅಳವಡಿಸಿಕೊಂಡ ಅದೇ ವಿಧಾನವನ್ನು ಫಲಿತಾಂಶದ ಆಧಾರಿತ ಶಿಕ್ಷಣವೂ ಸಹ ಬಳಸುತ್ತದೆ.[೧೧] ಪಠ್ಯಕ್ರಮ ಮತ್ತು ಫಲಿತಾಂಶಗಳನ್ನು ಅಭಿವೃದ್ಧಿಪಡಿಸುವಾಗ ಇದು ಕೆಳಗಿನ ಕೌಶಲ್ಯಗಳ ಮೇಲೆ ಕೇಂದ್ರೀಕರಿಸುತ್ತದೆ:

  • ಜೀವನದ ಕೌಶಲ್ಯಗಳು;
  • ಮೂಲ ಕೌಶಲ್ಯಗಳು;
  • ವೃತ್ತಿಪರ ಮತ್ತು ವೃತ್ತಿಪರ ಕೌಶಲ್ಯಗಳು;
  • ಬೌದ್ಧಿಕ ಕೌಶಲ್ಯಗಳು;
  • ಅಂತರವೈಯಕ್ತಿಕ ಮತ್ತು ವೈಯಕ್ತಿಕ ಕೌಶಲ್ಯಗಳು.[೧೧]

ಸಾಂಪ್ರದಾಯಿಕ ಶಿಕ್ಷಣ ಪದ್ಧತಿಯಲ್ಲಿ ವಿದ್ಯಾರ್ಥಿಗಳಿಗೆ ಗ್ರೇಡ್ ಮತ್ತು ಸ್ಥಾನ ಗಳನ್ನು ನೀಡುತ್ತಿದ್ದು ಅದನ್ನು ಒಬ್ಬರಿಂದ ಒಬ್ಬರಿಗೆ ಹೋಲಿಸಲಾಗುತ್ತಿತ್ತು. ವಿಷಯ ಮತ್ತು ನಿರೀಕ್ಷಿತ ಕಾರ್ಯ ನಿರ್ವಹಣೆ ಮೂಲಭೂತವಾಗಿ ವಿದ್ಯಾರ್ಥಿಗಳಿಗೆ ೧೨-೧೮ರ ಆ ವಯಸ್ಸಿನಲ್ಲಿ ಈ ಹಿಂದೆ ಏನನ್ನು ಕಲಿಸಿರುತ್ತಾರೋ ಅದರ ಮೇಲೆ ನಿರ್ಧಾರವಾಗುತ್ತಿತ್ತು. ಸಾಂಪ್ರದಾಯಿಕ ಶಿಕ್ಷಣ ಪದ್ಧತಿಯ ಗುರಿ ಬುದ್ಧಿ ಮತ್ತೆ ಮತ್ತು ಕೌಶಲ್ಯ ಗಳನ್ನು ಹಿಂದಿನ ತಲೆಮಾರಿನಿಂದ ಈಗಿನ ತಲೆಮಾರಿನ ವಿದ್ಯಾರ್ಥಿಗಳಿಗೆ ನೀಡುವುದು ಮತ್ತು ವಿದ್ಯಾರ್ಥಿಗಳಿಗೆ ಅವುಗಳನ್ನು ಕಲಿಯುವ ಪರಿಸರವನ್ನು ಸೃಷ್ಟಿಸುವುದು. ಈ ವಿಧಾನವು ವಿದ್ಯಾರ್ಥಿಗಳಿಗೆ ಯಾವುದೇ ವಿಷಯವನ್ನು ಕಲಿಯುವ ಬಗ್ಗೆ(ತರಗತಿಯಲ್ಲಿ ನಡೆಯುವ ಬೋಧನೆಯನ್ನು ಮೀರಿ) ಕಡಿಮೆ ಒತ್ತು ನೀಡುತ್ತಿತ್ತು.[೧೨]

ಫಲಿತಾಂಶದ ಆಧಾರಿತ ಶಿಕ್ಷಣದ ಪ್ರಯೋಜನಗಳು

ಬದಲಾಯಿಸಿ

ಸ್ಪಷ್ಟತೆ

ಬದಲಾಯಿಸಿ

ಫಲಿತಾಂಶ ಕೇಂದ್ರಿತವು ಪಾಠಪ್ರವಚನಗಳ ಸರಣಿಯ ಕೊನೆಗೆ ಯಾವುದನ್ನು ಸಾಧಿಸಲು ಅಗತ್ಯವಿದೆಯೋ ಆ ಸ್ಪಷ್ಟವಾದ ನಿರೀಕ್ಷೆಯನ್ನು ಸೃಷ್ಠಿಸುತ್ತದೆ. ವಿದ್ಯಾರ್ಥಿಗಳು ಅವುಗಳಿಂದ ಏನು ನಿರೀಕ್ಷಿಸಿರುತ್ತಾರೋ ಅದನ್ನು ಅರ್ಥ ಮಾಡಿಕೊಳ್ಳುತ್ತಾರೆ ಮತ್ತು ಶಿಕ್ಷಕರಿಗೆ ತಾವು ಬೋಧನೆಯ ಸಮಯದಲ್ಲಿ ಏನು ಬೋಧಿಸಬೇಕು ಎಂಬುದು ತಿಳಿಯುತ್ತದೆ. ತಂಡ ಬೋಧನೆ ಒಳಗೊಂಡಾಗ ಶಾಲೆಗಳಲ್ಲಿ ವರ್ಷಗಳು ಕಳೆದಂತೆ ಸ್ಪಷ್ಟತೆ ತುಂಬಾ ಮುಖ್ಯವಾಗಿರುತ್ತದೆ. ಪ್ರತೀ ತಂಡದ ಸದಸ್ಯ ಅಥವಾ ಶಾಲೆಯ ವರ್ಷದಲ್ಲಿ ಪ್ರತಿ ತರಗತಿಯಲ್ಲಿ ಅಥವಾ ಪ್ರತಿ ಹಂತದಲ್ಲಿ ವಿದ್ಯಾರ್ಥಿಗಳ ಪ್ರಗತಿಗೆ ಏನನ್ನು ಸಾಧಿಸಬೇಕೋ ಅದನ್ನು ಸ್ಪಷ್ಟವಾಗಿ ಅರ್ಥ ಮಾಡಿಕೊಳ್ಳುತ್ತಾರೆ.[೧೩] ಯಾರು ಪಠ್ಯದ ರಚನೆ ಮತ್ತು ಯೋಜನೆಯನ್ನು ಮಾಡುತ್ತಾರೋ ಅವರು ಫಲಿತಾಂಶವನ್ನು ನಿರ್ಧರಿಸಿದ ನಂತರ ಹಿಂದಕ್ಕೆ ಹೋಗುವ ಕೆಲಸ ಮಾಡಬೇಕಾಗುತ್ತದೆ. ಅವರು ಜ್ಞಾನ ಮತ್ತು ಕೌಶಲ್ಯಗಳು ಯಾವುದು ಬೇಕೆಂದು ಫಲಿತಾಂಶವನ್ನು ಪಡೆಯಲು ನಿರ್ಧರಿಸುವರು.[೧೪]

ನಮ್ಯತೆ(ಹೊಂದಿಕೊಳ್ಳುವಿಕೆ)

ಬದಲಾಯಿಸಿ

ಏನನ್ನು ಸಾಧಿಸಬೇಕೆನ್ನುವ ಸ್ಪಷ್ಟತೆಯನ್ನಿಟ್ಟುಕೊಂಡು ವಿದ್ಯಾರ್ಥಿಗಳ ಅಗತ್ಯತೆಯ ಸುತ್ತ ತಿಳುವಳಿಕೆಗಳ ಪಾಠಗಳ ರಚನೆ ಮಾಡಲು ಸಾಧ್ಯವಾಗುವುದು. ಫಲಿತಾಂಶದ ಆಧಾರಿತ ಶಿಕ್ಷಣವು ನಿರ್ಧಿಷ್ಟ ತಿಳುವಳಿಕಾ ವಿಧಾನವನ್ನು ಸೂಚಿಸುವುದಿಲ್ಲ. ಅವರ ವಿದ್ಯಾರ್ಥಿಗಳಿಗೆ ಯಾವುದೇ ವಿಧಾನವನ್ನು ಉಪಯೋಗಿಸಿ ಬೋಧಿಸಲು ಸ್ವತಂತ್ರರು. ಬೋಧಕರು ಅವರ ತರಗತಿಯಲ್ಲಿ ಬೋಧನೆ ಮತ್ತು ಮೌಲ್ಯಮಾಪನಾ ತಂತ್ರಗಳನ್ನು ಉಪಯೋಗಿಸಿ ವಿದ್ಯಾರ್ಥಿಗಳಲ್ಲಿ ವಿವಿಧತೆಯನ್ನು ಗುರುತಿಸಲು ಸಮರ್ಥರು. ಫಲಿತಾಂಶ ಆಧಾರಿತ ಶಿಕ್ಷಣವು ವಿದ್ಯಾರ್ಥಿ ಕೇಂದ್ರೀಕೃತ ಕಲಿಕಾ ಮಾದರಿ ಎಂದು ತಿಳಿಯಲಾಗಿದೆ. ಶಿಕ್ಷಕರು ವಿದ್ಯಾರ್ಥಿಗಳಿಗೆ ಅವಶ್ಯವಿರುವ ವಿಷಯವನ್ನು ಅರ್ಥ ಮಾಡಿಸಲು ಯಾವುದೇ ರೀತಿಯಲ್ಲಿ ಮಾರ್ಗದರ್ಶನ ಮತ್ತು ಸಹಾಯ ಮಾಡುವರೆಂದು ತಿಳಿಯಲಾಗಿದೆ. ವಿದ್ಯಾರ್ಥಿಗಳ ಕಲಿಕೆ ಸುಗಮವಾಗಲು ಬೋಧಕರು ಉಪಯೋಗಿಸುವ ಕೆಲವು ವಿಧಾನಗಳೆಂದರೆ ಬೇಕಾದ ಬೋಧನಾ ಮಾರ್ಗದರ್ಶಕ(ಸ್ಟಡೀ ಗೈಡ್)ಗಳು ಮತ್ತು ಗುಂಪುಕಾರ್ಯ(ಗ್ರೂಪ್ ವರ್ಕ).[೧೫]

ಹೋಲಿಕೆ

ಬದಲಾಯಿಸಿ

ಫಲಿತಾಂಶ ಆಧಾರಿತ ಶಿಕ್ಷಣವು ಸಂಸ್ಥೆಗಳ ನಡುವೆ ಹೋಲಿಕೆ ಮಾಡಲು ಅವಕಾಶ ಮಾಡಿ ಕೊಡುತ್ತದೆ. ಒಬ್ಬ ವ್ಯಕ್ತಿಯ ಹಂತದಲ್ಲಿ, ಸಂಸ್ಥೆಗಳು ಹೊಸ ಸಂಸ್ಥೆಯಲ್ಲಿ ಯಾವ ಮಟ್ಟದಲ್ಲಿ ಇರಬೇಕೆಂದು ನಿರ್ಧಾರ ಮಾಡಲು, ಫಲಿತಾಂಶದಿಂದ ವಿದ್ಯಾರ್ಥಿಯು ಯಾವ ಹಂತದಲ್ಲಿ ಏನನ್ನು ಸಾಧಿಸಿರುತ್ತಾನೆ ಎಂಬುದನ್ನು ನೋಡಬಹುದು. ಸಂಸ್ಥೆಯ ಹಂತದಲ್ಲಿ, ತಮ್ಮ ತಮ್ಮಲ್ಲಿ ಯಾವ ಫಲಿತಾಂಶವು ತಮ್ಮಲ್ಲಿ ಸಾಮಾನ್ಯವಾಗಿದೆ ಎಂಬುದನ್ನು ಹೋಲಿಕೆ ಮಾಡಿಕೊಳ್ಳಬಹುದು ಮತ್ತು ಇತರ ಸಂಸ್ಥೆಗಳ ಫಲಿತಾಂಶದ ಸಾಧನೆಯನ್ನು ನೋಡಿ ಸುಧಾರಣೆಯ ಅಗತ್ಯವಿರುವ ಜಾಗವನ್ನು ಪತ್ತೆ ಮಾಡಬಹುದು. ಸಂಸ್ಥೆಗಳ ನಡುವೆ ವ್ಯತ್ಯಾಸವನ್ನು ತಿಳಿಯುವ ಶಕ್ತಿಯು ಹೋಲಿಕೆ ಮಾಡಿಕೊಂಡಾಗ ವಿದ್ಯಾರ್ಥಿಗಳಿಗೆ ಸಂಸ್ಥೆಗಳ ನಡುವೆ ಹೋಗುವುದು ಸಾಪೇಕ್ಷವಾಗಿ ಸುಲಭವಾಗುತ್ತದೆ. ಸಂಸ್ಥೆಗಳು ಫಲಿತಾಂಶಗಳ ಹೋಲಿಕೆ ಮಾಡಿಕೊಳ್ಳುವುದರಿಂದ ವಿದ್ಯಾರ್ಥಿಗಳಿಗೆ ಕೊಡಬಲ್ಲ ಕ್ರೆಡಿಟ್ ನ್ನು ನಿರ್ಧರಿಸಬಹುದು. ಸ್ಪಷ್ಟವಾದ ಫಲಿತಾಂಶವು ವಿದ್ಯಾರ್ಥಿಗಳ ಸಾಧನೆಯನ್ನು ಸಂಸ್ಥೆಗಳು ವೇಗವಾಗಿ ಅಳೆಯುವಂತಿರಬೇಕು. ಇದರಿಂದ ವಿದ್ಯಾರ್ಥಿಗಳ ಚಲನೆಗೆ ಅನುವು ಮಾಡಿಕೊಡುವುದು. ಈ ಫಲಿತಾಂಶಗಳು ಶಾಲೆಗಳಲ್ಲಿ ಬದಲಾವಣೆಯ ಕೆಲಸವನ್ನು ಮಾಡುತ್ತದೆ. ಶಕ್ತ ಉದ್ಯೋಗದಾತನು ಶಕ್ತ ಉದ್ಯೋಗಿಯ ದಾಖಲೆಗಳನ್ನು ಪರಿಶೀಲಿಸಿ ಯಾವ ಫಲಿತಾಂಶವನ್ನು ಅವನು ಸಾಧಿಸಿರುತ್ತಾನೆ ಎಂದು ನೋಡಬಹುದು. ಆ ನಂತರ ಶಕ್ತ ಉದ್ಯೋಗಿಯ ಉದ್ಯೋಗಕ್ಕೆ ಅಗತ್ಯವಿರುವ ಕೌಶಲ್ಯಗಳು ಇವೆಯೋ ಎಂದು ತಿಳಿಯಬಹುದು.[೧೩]

ತೊಡಗಿಸುಕೊಳ್ಳುವಿಕೆ

ಬದಲಾಯಿಸಿ

ತರಗತಿಯಲ್ಲಿ ವಿದ್ಯಾರ್ಥಿಗಳ ತೊಡಗಿಸಿಕೊಳ್ಳುವಿಕೆಯು ಫಲಿತಾಂಶದ ಆಧಾರಿತ ಶಿಕ್ಷಣದ ಒಂದು ಮುಖ್ಯವಾದ ಭಾಗವಾಗಿದೆ. ವಿದ್ಯಾರ್ಥಿಗಳು ಕಲಿಕೆಯನ್ನು ತಾವೇ ಸ್ವತಃ ಮಾಡಿಕೊಳ್ಳಬೇಕಾಗುವುದು ಆಪೇಕ್ಷಣೀಯ. ಇದರಿಂದ ವಸ್ತುಗಳ ಪೂರ್ಣವಾಗಿ ತಿಳುವಳಿಕೆಯ. ಲಾಭವಾಗುವುದು. ವಿದ್ಯಾರ್ಥಿಗಳ ಹೆಚ್ಚಿಗೆ ತೊಡಗಿಸಿಕೊಳ್ಳುವಿಕೆಯು, ಅವರುಗಳಿಗೆ ಅವರ ಕಲಿಕೆಯು ತಾವೇ ಜವಾಬ್ದಾರಿಯೆಂದು ಅನ್ನಿಸುವುದು ಮತ್ತು ಅವರು ಹೆಚ್ಚಾಗಿ ಸ್ವಕಲಿಕೆಯಲ್ಲಿ ಕಲಿಯುವರು.[೧೫] ಪಠ್ಯದ ರಚನೆಯ ಅಥವಾ ಬದಲಾವಣೆಯಲ್ಲಿ, ಪೋಷಕರ ಮತ್ತು ಸಮುದಾಯದ ತೊಡಗಿಸಿಕೊಳ್ಳುವಿಕೆಯು, ತೊಡಗಿಸಿಕೊಳ್ಳುವಿಕೆಯ ಇನ್ನೊಂದು ಆಯಾಮವಾಗಿದೆ. ಪೋಷಕರು ಮತ್ತು ಸಮುದಾಯದ ಸದಸ್ಯರುಗಳು ಸಮುದಾಯದ ಒಳಗೆ ಶಿಕ್ಷಣದ ಮಟ್ಟವನ್ನು ಎತ್ತಿಹಿಡಿಯಲು ಮತ್ತು ಶಿಕ್ಷಣದ ನಂತರ ಜೀವನ ನಡೆಸಲು ತಯಾರಿಯನ್ನು ಖಚಿತಪಡಿಸಿಕೊಳ್ಳಲು ಅಭಿಪ್ರಾಯವನ್ನು ಕೇಳಲಾಗುವುದು.[೧೫]

ಫಲಿತಾಂಶದ ಆಧಾರಿತ ಶಿಕ್ಷಣದ ನ್ಯೂನತೆಗಳು

ಬದಲಾಯಿಸಿ

ವ್ಯಾಖ್ಯಾನ

ಬದಲಾಯಿಸಿ

ಫಲಿತಾಂಶದ ವ್ಯಾಖ್ಯಾನಗಳ ತೀರ್ಮಾನಗಳು ಅನುಷ್ಟಾನ ಮಾಡುವವರ ಅರ್ಥವಿವರಣೆಗಳಿಗೆ ಒಳಪಟ್ಟಿರುತ್ತವೆ. ಒಂದೇ ತರಹದ ಫಲಿತಾಂಶಗಳು ಸಾಧಿಸಲ್ಪಟ್ಟಿವೆ ಎಂದು ಹೇಳಲಾಗಿದ್ದರೂ ಸಹ, ವಿವಿಧ ಕಾರ್ಯಕ್ರಮಗಳಲ್ಲಿ ಅಥವಾ ವಿವಿಧ ಬೋಧಕರುಗಳು ಕೂಡ ಫಲಿತಾಂಶಗಳನ್ನು ವಿವಿಧ ರೀತಿಯಲ್ಲಿ ವಿವರಿಸಿ ಶಿಕ್ಷಣದಲ್ಲಿ ವ್ಯತ್ಯಾಸಕ್ಕೆ ಕಾರಣವಾಗುತ್ತದೆ[೧೩]. ನಿರ್ದಿಷ್ಟ ಫಲಿತಾಂಶಗಳನ್ನು ರೂಪಿಸುವುದರಿಂದ ಕಲಿಕೆಯ ಸಮಗ್ರ ದೃಷ್ಟಿಯು ಕಾಣೆಯಾಗುವುದು. ಕಲಿಕೆಯು ನಿರ್ದಿಷ್ಟ, ಅಳೆಯಬಲ್ಲ ಮತ್ತು ಗ್ರಹಿಸಬಲ್ಲ ಕೆಲವೊಂದಕ್ಕೆ ಸೀಮಿತಗೊಳ್ಳಲು ದಾರಿಯಾಗಬಲ್ಲದು. ಇದರಿಂದಾಗಿ ಫಲಿತಾಂಶಗಳನ್ನು ಯಾವುದನ್ನು ಕಲಿಕೆ ಎನ್ನಲಾಗುವುದೋ ಅದನ್ನು ಪರಿಕಲ್ಪಿಸಲು ವ್ಯಾಪಕವಾದ ಮಾನ್ಯ ಮಾಡುವ ಮಾರ್ಗವಾಗುತ್ತಿಲ್ಲ[೧೩].

ಮೌಲ್ಯಮಾಪನಾ ಸಮಸ್ಯೆಗಳು

ಬದಲಾಯಿಸಿ

ಫಲಿತಾಂಶ ಸಾಧಿಸಲ್ಪಟ್ಟಿದೆಯೋ ಎಂದು ತಿಳಿಯುವಾಗ ವಿದ್ಯಾರ್ಥಿಯು ಜ್ಞಾನವನ್ನು ಪಡೆದು ಕೊಂಡಿದ್ದಾನೆಯೆ ಎಂದು ನೋಡುವುದರಿಂದ, ಇಂತಹ ಸಂದರ್ಭದಲ್ಲಿ ಮೌಲ್ಯಮಾಪನವು ಯಾಂತ್ರಿಕವಾಗಿರುವುದು. ವಿವಿಧ ಜ್ಞಾನದ ಉಪಯೋಗ ಮತ್ತು ಅನ್ವಯವಾಗುವ ಸಾಮರ್ಥ್ಯವು ಮೌಲ್ಯಮಾಪನದಲ್ಲಿ ಗಮನಿಸದೇ ಹೋಗಬಹುದು. ಫಲಿತಾಂಶ ಸಾಧಿಸಲ್ಪಟ್ಟಿದೆಯೋ ಎಂದು ತಿಳಿಯವ ಮೇಲಿನ ಗಮನವು ವಿದ್ಯಾರ್ಥಿಗಳ ತಿಳುವಳಿಕೆ ಮತ್ತು ಕಲಿಕೆಯು ನಷ್ಟವಾಗುವುದಲ್ಲದೆ, ತಾವು ಗಳಿಸಿದ ಜ್ಞಾನವು ಉಪಯೋಗಿಸುವುದು ಹೇಗೆಂದು ತೋರದೆ ಹೋಗುವುದು.ತಾವು ಒಗ್ಗಿಕೊಂಡಿರುವುದನ್ನು ಬಿಟ್ಟು, ಮೂಲಭೂತವಾಗಿರುವ ಬೇರೆಯೇ ಪರಿಸರವನ್ನು ನಿರ್ವಹಿಸಲು ಕಲಿಯಬೇಕಾಗುವುದು ಬೋಧಕರು ಎದುರಿಸುವ ಸವಾಲು. ಮೌಲ್ಯಮಾಪನಾ ಮಾಡುವ ಸಮಯದಲ್ಲಿ, ವಸ್ತುನಿಷ್ಟವಾಗಿ ಇರುವಾಗ, ಆ ವಿದ್ಯಾರ್ಥಿಗಳಿಗೆ ಅವರಿಗೆ ತಿಳಿದಿರುವ ಮಾಹಿತಿಯನ್ನು ಪ್ರದರ್ಶಿಸಲು ಆದರ್ಶಕರವಾಗಿ ಆಗಗೊಡಲು, ವಿಶ್ವಾಸನೀಯ ಮತ್ತು ಸಿಂದುವಾದ ಮೌಲ್ಯಮಾಪನವನ್ನು ಸೃಷ್ಟಿಸಲು ಬೇಕಾದ ಸಮಯವನ್ನು ಕಳೆಯಲು ಸಂಕಲ್ಪಿಸ ಬೇಕಾಗುತ್ತದೆ.[೧೫]

ಸಾರ್ವತ್ರಿಕತೆ

ಬದಲಾಯಿಸಿ

ಶೈಕ್ಷಣಿಕ ಫಲಿತಾಂಶಗಳು ನಿರ್ಬಂಧಿತ ಗುಣವುಳ್ಳ ಬೋಧನೆ ಮತ್ತು ಮೌಲ್ಯಮಾಪನದತ್ತ ಕೊಂಡೊಯ್ಯಬಹುದು. ಸೃಜನಶೀಲತೆ, ಆತ್ಮ ಗೌರವ, ಬೇರೆಯವರನ್ನು ಗೌರವದಿಂದ ಕಾಣುವುದು, ಜವಾಬ್ದಾರಿ ಮತ್ತು ಸ್ವಯಂಪೂರ್ಣತೆ ಮುಂತಾದ ಉದಾರ ಫಲಿತಾಂಶಗಳ ಮೌಲ್ಯಮಾಪನಮಾಡುವುದು ಸಮಸ್ಯಾತ್ಮಕವಾಗಬಹುದು. ವಿದ್ಯಾರ್ಥಿಯು ಫಲಿತಾಂಶಗಳನ್ನು ಸಾಧಿಸಿದ್ದರೆ, ಅವುಗಳನ್ನು ಕಂಡುಹಿಡಿಯಲು, ಅಳೆಯಬಹುದಾದ, ಗ್ರಹಿಸಬಹುದಾದ ಮತ್ತು ನಿರ್ದಿಷ್ಟ ಮಾರ್ಗಗಳಿಲ್ಲ. ನಿರ್ದಿಷ್ಟ ಫಲಿತಾಂಶಗಳ ಗುಣದಿಂದ, ಫಲಿತಾಂಶದ ಆಧಾರಿತ ಶಿಕ್ಷಣ(OBE)ವು ಬಹಳ ಫಲಿತಾಂಶಗಳನ್ನು ಸಾಧಿಸಿದ ಓರ್ವನ ಸೇವೆ ಮಾಡುವ ಮತ್ತು ಸೃಷ್ಟಿಸುವ ಅದರ ಆದರ್ಶಗಳ ವಿರುದ್ಧ ಕೆಲಸ ಮಾಡಬಹುದು.[೧೩]

ತೊಡಗಿಸಿಕೊಳ್ಳುವಿಕೆ

ಬದಲಾಯಿಸಿ

ಪೋಷಕರ ತೊಡಗಿಸಿಕೊಳ್ಳುವಿಕೆಯು ತೊಡಗಿಸಿಕೊಳ್ಳುವಿಕೆ ವಿಭಾಗದಲ್ಲಿ ಚರ್ಚೆಯಾದಂತೆ, ಕೂಡ ಒಂದು ನ್ಯೂನತೆಯಾಗಿರುವುದು. ಪೋಷಕರು ಮತ್ತು ಸಮುದಾಯದ ಸದಸ್ಯರುಗಳು ಶೈಕ್ಷಣಿಕ ವ್ಯವಸ್ಥೆಯ ಗುಣಮಟ್ಟದ ಮೇಲೆ ಅಭಿಪ್ರಾಯವನ್ನು ಕೊಡಲು ಇಚ್ಚಿಸದೆ ಇರುವಾಗ ವ್ಯವಸ್ಥೆಯು ಸುಧಾರಣೆಯ ಅವಶ್ಯಕತೆಯನ್ನು ಕಾಣದೆ ಹೋಗಬಹುದು ಮತ್ತು ವಿದ್ಯಾರ್ಥಿಗಳ ಅಗತ್ಯಗಳಿಗೆ ಬದಲಾಯಿಸಲ್ಪಡದಿರಬಹುದು. ಪೋಷಕರು ಬಹಳವಾಗಿ ತೊಡಗಿಸಿಕೊಳ್ಳುತ್ತಾ ಹೆಚ್ಚಿನ ಬದಲಾವಣೆಗಳನ್ನು ಬೇಡುತ್ತಾ, ಬೇರೆಯೇ ಬದಲಾವಣೆಗಳಿಗೆ ಸಲಹೆ ಮಾಡುವುದರಿಂದ, ಮುಖ್ಯವಾದ ಸುಧಾರಣೆಗಳು ಕಾಣೆ ಯಾಗಬಹುದು. ಬೋಧಕರು ತಮ್ಮ ಕೆಲಸವು ಹೆಚ್ಚಾಗುವುದನ್ನು ಮನಗಾಣುವರು: ಅವರು ಮೊದಲು ಫಲಿತಾಂಶವನ್ನು ಅರ್ಥಮಾಡಿಕೊಳ್ಳಲು ಕೆಲಸ ಮಾಡಬೇಕಾಗುವುದು, ನಂತರ, ಬೇಕಾದ್ದನ್ನು ಪಡೆಯಲು ಪ್ರತಿಯೊಂದು ಫಲಿತಾಂಶದ ಸುತ್ತ ಪಠ್ಯದ ರಚನೆ ಮಾಡಬೇಕಾಗುವುದು. ಬೋಧಕರು ವಿಶೇಷವಾಗಿ ಪ್ರಾಥಮಿಕ ಶಾಲೆಗಳಲ್ಲಿ ಗುಣನೀಯ ಫಲಿತಾಂಶಗಳನ್ನು ಅಳವಡಿಸಿಕೊಳ್ಳವಿಕೆಯು ಸಮಾನವಾಗಿ ಮಾಡಲು ಕಷ್ಟಕರ ಎಂದು ಕಂಡುಕೊಂಡಿದ್ದಾರೆ. ಅಲ್ಲದೆ, ಬೋಧಕರು ವಿದ್ಯಾರ್ಥಿಗಳ ಸಂಪೂರ್ಣವಾಗಿ ಮೌಲ್ಯಮಾಪನ ಮಾಡುವ ಪದ್ದತಿಯನ್ನು ಆಯ್ಕೆ ಮಾಡಿಕೊಂದರೆ, ತಮ್ಮ ಕೆಲಸದ ಹೊರೆ ಹೆಚ್ಚಾಗುವುದನ್ನು ಮನಗಾಣುವರು.

ಅಳವಡಿಕೆ ಮತ್ತು ತ್ಯಜಿಸುವಿಕೆ

ಬದಲಾಯಿಸಿ

೧೯೯೦ ರ ಪ್ರಾರಂಭದಲ್ಲಿ ಆಸ್ಟ್ರೇಲಿಯದ ಎಲ್ಲಾ ರಾಜ್ಯಗಳು ಮತ್ತು ಪ್ರಧೇಶಗಳು ಅವುಗಳ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಿಗೆ ಬಹಳವಾಗಿ ಫಲಿತಾಂಶದ ಆಧಾರಿತ ಶಿಕ್ಷಣವನ್ನು ಆಧರಿಸಿದ ಉದ್ದೇಶಿಸಿದ ಪಠ್ಯಕ್ರಮ ದಾಖಲೆಗಳನ್ನು ಅಭಿವೃದ್ದಿಪಡಿಸಿದವು.[೧೬] ಜಾರಿಗೆ ತಂದ ಅಲ್ಪಕಾಲದಲ್ಲಿಯೇ ವಿಮರ್ಶೆಗಳು ಪ್ರಾರಂಭವಾದವು. ಆಸ್ಟ್ರೇಲಿಯ ಮತ್ತು ಅಮೇರಿಕ ದೇಶಗಳಲ್ಲಿಯೂ, ಫಲಿತಾಂಶ ಆಧಾರಿತ ಶಿಕ್ಷಣವನ್ನು ದೊಡ್ಡ ಪ್ರಮಾಣದಲ್ಲಿ ಯಶಸ್ವಿಯಾಗಿ ಅಳವಡಿಸಿಕೊಳ್ಳಲು ಯಾವುದೇ ಪುರಾವೆಗಳು ಇಲ್ಲವೆಂದು ವಿಮರ್ಶಕರು ವಾದಿಸುತ್ತಾರೆ. ಆಸ್ಟ್ರೇಲಿಯದ ಶಾಲೆಗಳ ಒಂದು ಮೌಲ್ಯಮಾಪನವು ಫಲಿತಾಂಶದ ಆಧಾರಿತ ಶಿಕ್ಷಣವನ್ನು ಅಳವಡಿಕೆಯು ಕ‍ಷ್ಟ ಎಂದು ಕಂಡುಬಂದಿದೆ. ಶಿಕ್ಷಕರು ನಿರೀಕ್ಷಿತ ಸಾಧನೆಗಳ ಫಲಿತಾಂಶಗಳ ಒಟ್ಟು ಮೊತ್ತದ ಬಗ್ಗೆ ಭಾವಪರವಶವಾಗುವರು. ಶಿಕ್ಷಣ ಕೊಡುವವರು ವಿದ್ಯಾರ್ಥಿಗಳ ಮತ್ತು ಶಿಕ್ಷಕರ ಅಗತ್ಯಗಳನ್ನು ಪಠ್ಯಕ್ರಮ ಫಲಿತಾಂಶಗಳು ಪೂರೈಸಲಾರದೆಂದು ನಂಬುವರು. ಬಹಳವಾಗಿರುವ ನಿರೀಕ್ಷಿತ ಫಲಿತಾಂಶಗಳು, ವಿಷಯಗಳ ಕಡಿಮೆ ತಿಳುವಳಿಕೆಯ ವಿದ್ಯಾರ್ಥಿಗಳನ್ನಾಗಿಸುತ್ತವೆ ಎಂದು ವಿಮರ್ಶಕರು ಭಾವಿಸುವರು. ಆಸ್ಟ್ರೇಲಿಯದ ಈಗಿನ ಬಹಳ ಶೈಕ್ಷಣಿಕ ತತ್ವಗಳು ಫಲಿತಾಂಶದ ಆಧಾರಿತ ಶಿಕ್ಷಣದಿಂದ ದೂರ ಸರಿಯತೊಡಗಿ, ಕಡಿಮೆ ತಿಳುವಳಿಕೆಯ ಹೆಚ್ಚಿನ ಅಡಕಗಳಿಗಿಂತಲೂ, ಅಗತ್ಯ ಅಡಕಗಳನ್ನು ಸಂಪೂರ್ಣವಾಗಿ ತಿಳಿದುಕೊಳ್ಳುವ ಒಂದು ಕೇಂದ್ರೀಕರಿಸುವತ್ತ ಸಾಗುತ್ತಿವೆ.[೧೬]

ಐರೋಪ್ಯ ಒಕ್ಕೂಟದ ಉದ್ದಗಲಕ್ಕು ೨೩% ಸಮೀಪ ಇರುವ ಯುವ ನಿರುದ್ಯೋಗ ದರವನ್ನು ಕಡಿಮೆ ಮಾಡಲು ಯುರೋಪಿಯನ್ ಕಮೀಷನ್(European Commission) ಒಂದು ಹೊಸ ತಂತ್ರವನ್ನು ಮುಂದಿಟ್ಟಿತು. ಎಲ್ಲಾ ಐರೋಪ್ಯ ಒಕ್ಕೂಟದಲ್ಲಿ ಯುರೋಪಿಯನ್ ಕ್ವಾಲಿಫಿಕೇಶನ್ ಫ್ರೇಮ್ ವರ್ಕ್(European Qualifications Framework) ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿ ಕಲಿಕೆಯ ಫಲಿತಾಂಶಗಳತ್ತ ಬದಲಾವಣೆ ತರುವಂತೆ ಕರೆಯಿತ್ತಿತು. ವಿದ್ಯಾರ್ಥಿಗಳು ತಮ್ಮ ಶಿಕ್ಷಣವನ್ನು ಮುಗಿಸಿದಾಗ ಅಗತ್ಯವಿರುವ ಕೌಶಲ್ಯಗಳನ್ನು ಕಲಿಯುವುದು ನಿರೀಕ್ಷಿಸಲ್ಪಟ್ಟಿತು. ಅದು ಕೃತಿ-ಆಧಾರಿತ ಕಲಿಕೆಯ ಮೂಲಕ ಉದ್ಯೋಗಕ್ಕೆ ಬಲವಾಗಿ ಸಂಬಂಧವಿರುವ ಪಾಠಗಳನ್ನು ಹೊಂದುವಂತೆಯೂ ಕರೆ ಇತ್ತಿತು. ವಿದ್ಯಾರ್ಥಿಗಳ ಕೃತಿ-ಆಧಾರಿತ ಕಲಿಕೆಯ ಈ ವಿದ್ಯಾರ್ಥಿಗಳಿಗೆ ವೃತ್ತಿಪರ ತರಬೇತಿಯ ಅಂಗೀಕಾರಕ್ಕೂ ಕೂಡ ಕಾರಣವಾಗಬೇಕು. ಕಾರ್ಯಕ್ರಮವು ವಿದೇಶಿ ಭಾಷೆ ಕಲಿಕೆಗೆ ಗುರಿಗಳನ್ನು ಸಹಾ ಇರಿಸುವದಲ್ಲದೆ, ಶಿಕ್ಷಕರಿಗೆ ಮುಂದುವರೆದ ಶಿಕ್ಷಣವಾಗಿರುವುದು. ಅದು ಕಲಿಕೆಯಲ್ಲಿ ತಂತ್ರಜ್ಞಾನ ಬಳಕೆಯ ಪ್ರಾಮುಖ್ಯತೆಯನ್ನು, ವಿಶೇಷವಾಗಿ ಅಂತರಜಾಲ, ವಿದ್ಯಾರ್ಥಿಗಳಿಗೆ ಸಂಗತವಾಗಿಸಲು ಎತ್ತಿ ತೋರಿಸುವುದು.[೧೭]

ಪಾಕಿಸ್ತಾನವು ೨೦೧೦ ರಲ್ಲಿ ವಾಷಿಂಗ್ಟನ್ ಅಕಾರ್ಡಗೆ ಸಹಿಹಾಕುವ ಮೂಲಕ ತಾತ್ಕಾಲಿಕ ಸದಸ್ಯನಾಗಿದ್ದು, ವಿಶ್ವವಿದ್ಯಾನಿಲಯಗಳು ಫಲಿತಾಂಶದ ಆಧಾರಿತ ಶಿಕ್ಷಣವನ್ನು ಅಳವಡಿಸಿಕೊಳ್ಳುವತ್ತ ಕೆಲಸ ಮಾಡುತ್ತಿವೆ.

ಹಾಂಗ್‍ಕಾಂಗ್ ಯುನಿವರ್ಸಿಟಿ ಗ್ರಾಂಟ್ ಕಮಿಟಿ(Hong Kong’s University Grants Committee)ಯು ೨೦೦೫ರಲ್ಲಿ ಫಲಿತಾಂಶದ ಆಧಾರಿತ ಶಿಕ್ಷಣ ವಿಧಾನದ ಬೋಧನೆ ಮತ್ತು ಕಲಿಕೆಯನ್ನು ಅಳವಡಿಸಿಕೊಂಡಿತು.

ಭಾರತವು ೧೩ ಜೂನ್ ೨೦೧೪ ರಂದು ವಾಷಿಂಗ್ಟನ್ ಅಕಾರ್ಡಗೆ ಸಹಿ ಹಾಕಿದ ಶಾಶ್ವತ ಸದಸ್ಯನಾಗಿದೆ.[೧೮] ಭಾರತವು ತನ್ನ ಡಿಪ್ಲಮೋ ಮತ್ತು ಸ್ನಾತಕ ಪದವಿ ತಾಂತ್ರಿಕ ಶಿಕ್ಷಣದಲ್ಲಿ ಫಲಿತಾಂಶದ ಆಧಾರಿತ ಶಿಕ್ಷಣವನ್ನು ಅಳವಡಿಸಿಕೊಳ್ಳುತ್ತಲಿದೆ. ಭಾರತದಲ್ಲಿ ತಾಂತ್ರಿಕ ಶಿಕ್ಷಣದಲ್ಲಿ ಅಂತರಾಷ್ರ್ಡೀಯ ಗುಣಮಟ್ಟಕ್ಕೆ ಮೇಲೇರಿಸಲು ಇರುವ ಸಂಸ್ಥೆಯಾದ ನ್ಯಾಶನಲ್ ಬೋರ್ಡ ಆಫ್ ಅಕ್ರಿಡಿಶನ್(The National Board of Accreditation) ೨೦೧೭ರಿಂದ ತಾಂತ್ರಿಕ ಶಿಕ್ಷಣದಲ್ಲಿ ಫಲಿತಾಂಶದ ಆಧಾರಿತ ಶಿಕ್ಷಣವನ್ನು ಅಳವಡಿಸಿಕೊಂಡಿರುವ ಡಿಪ್ಲಮೋ ಮತ್ತು ಸ್ನಾತಕ ಪದವಿಗಳನ್ನು ಮಾತ್ರ ಮಾನ್ಯಮಾಡುತ್ತಲಿದೆ.[೧೯]

ಇನ್ನೂ ಓದಿ

ಬದಲಾಯಿಸಿ

ಉಲ್ಲೇಖಗಳು

ಬದಲಾಯಿಸಿ
  1. Spady, William (1994). Outcome-Based Education: Critical Isues and Answers (PDF). Arlington Virginia: American Association of Schol Administrators. ISBN 0876521839. Retrieved 31 October 2014.
  2. Donnelly, Kevin (2007). "Australia’s adoption of outcomes based education – a critique" (PDF). Issues in Educational Research.
  3. ೩.೦ ೩.೧ Allais, Stephanie (2007). "Education service delivery: the disastrous case of outcomes-based qualifications frameworks.". Progress in Development Studies 7 (1): 65–78.
  4. "NCLB ESEA Flexibility". U.S. Department of Education. U.S. Department of Education.
  5. Kennedy, Kerry (2011). "Conceptualising quality improvement in higher education: policy, theory and practice for outcomes based learning in Hong Kong.". Journal Of Higher Education Policy & Management 33 (3): 205–218. doi:10.1080/1360080X.2011.564995.
  6. Mohayidin, Mohd Ghazali (2008). "Implementation of Outcome-Based Education in Universiti Putra Malaysia: A Focus on Students’ Learning Outcomes". International Education Studies 1 (4). Retrieved 23 October 2014.
  7. "Commission presents new Rethinking Education strategy". European Commission. 2012-11-20. Archived from the original on 2013-02-12. Retrieved 2013-02-12.
  8. "Washington Accord". International Engineering Alliance. International Engineering Alliance. Retrieved 2 February 2012.
  9. Killen, Roy (2007). Teaching Strategies for Outcomes-based Education, Second Edition. Cape Town: Juta and Company Ltd. p. 48. ISBN 978-0-7021-7680-7.
  10. ೧೦.೦ ೧೦.೧ Uys, Leana; Gwele, Nomthandazo (2005). Curriculum Development in Nursing: Process and Innovation. Oxon: Routledge. p. 194. ISBN 0415346290.
  11. ೧೧.೦ ೧೧.೧ Meyer, Salomé M.; Niekerk, Susan E. Van (2008). Nurse Educator in Practice. Cape Town: Juta and Company Ltd. p. 25. ISBN 978-0-7021-7299-1.
  12. "The Harmful Effects of Algorithms in Grades 1--4", by Constance Kamii & Ann Dominick in The Teaching and Learning of Algorithms in School Mathematics (NCTM Yearbook, 1998):"The teaching of algorithms is based on the erroneous assumption that mathematics is a cultural heritage that must be transmitted to the next generation." (p.132)
  13. ೧೩.೦ ೧೩.೧ ೧೩.೨ ೧೩.೩ ೧೩.೪ Tam, Maureen (2014). "Outcomes-based approach to quality assessment and curriculum improvement in higher education". Quality Assurance In Education. 22 (2): p. 158–168. doi:10.1108/QAE-09-2011-0059. {{cite journal}}: |access-date= requires |url= (help); |pages= has extra text (help)
  14. Butler, Mollie (2004). OUTCOMES BASED/ OUTCOMES FOCUSED EDUCATION OVERVIEW. {{cite book}}: |access-date= requires |url= (help)
  15. ೧೫.೦ ೧೫.೧ ೧೫.೨ ೧೫.೩ Malan, SPT (2000). "The 'new paradigm' of outcomes-based education in perspective" (PDF). Tydskrif vir Gesinsekologie en Verbruikerswetenskappe. 28. Archived from the original (PDF) on 2016-03-03. Retrieved 2015-12-19.
  16. ೧೬.೦ ೧೬.೧ Donnelly, Kevin (2007). "Australia's adoption of outcomes based education – a critique" (PDF). Issues in Educational Research.
  17. ಉಲ್ಲೇಖ ದೋಷ: Invalid <ref> tag; no text was provided for refs named EUComm_pressrelease_dec2012
  18. "ಆರ್ಕೈವ್ ನಕಲು". Archived from the original on 2015-02-06. Retrieved 2016-03-07.
  19. "ಆರ್ಕೈವ್ ನಕಲು". Archived from the original on 2016-03-07. Retrieved 2016-03-07.