ಪುಲಾವ್

ಅನ್ನದ ಖಾದ್ಯ

ಪುಲಾವ್ ಒಂದು ರೀತಿಯ ಅಕ್ಕಿಯಿಂದ ತಯಾರಿಸಿದ ಖಾದ್ಯ . ಅಥವಾ ಕೆಲವು ಪ್ರದೇಶಗಳಲ್ಲಿ, ಗೋಧಿಯಿಂದಲೂ ತಯಾರಿಸುತ್ತಾರೆ.[೧] ಇದರ ಪಾಕವಿಧಾನವು ಸಾಮಾನ್ಯವಾಗಿ ಸ್ಟಾಕ್ ನಲ್ಲಿ ಅಡುಗೆ ಮಾಡುವುದು , ಮಸಾಲೆಗಳು ಮತ್ತು ತರಕಾರಿಗಳು ಅಥವಾ ಮಾಂಸದಂತಹ ಇತರ ಪದಾರ್ಥಗಳನ್ನು ಸೇರಿಸುವುದು , ಕೆಲವು ಸಂದರ್ಭಗಳಲ್ಲಿ, ಅಕ್ಕಿಯು ಬೆಂದ ಈರುಳ್ಳಿಯ ಚೂರುಗಳು, ಜೊತೆಗೆ ಸಂಬಾರ ಪದಾರ್ಥಗಳ ಮಿಶ್ರಣದೊಂದಿಗೆ ಕಲಸಿದ ಕಾರಣದಿಂದ ಕಂದು ಬಣ್ಣವನ್ನೂ ಪಡೆಯಬಹುದು. ಸ್ಥಳೀಯ ಪಾಕಶೈಲಿಯನ್ನು ಆಧರಿಸಿ, ಪುಲಾವ್ ಮಾಂಸ, ಮೀನು, ತರಕಾರಿಗಳು, ಆರ್ಜ಼ೊ, ಮತ್ತು ಒಣಹಣ್ಣುಗಳನ್ನೂ ಒಳಗೊಳ್ಳಬಹುದು.‌

BengaliPulao.JPG

ಅಬ್ಬಾಸಿದ್ ಖಲೀಫೇಟ್ ನ ಸಮಯದಲ್ಲಿ, ಅಕ್ಕಿ ಬೇಯಿಸುವ ಇಂತಹ ವಿಧಾನಗಳು ಮೊದಲಿಗೆ ಭಾರತದಿಂದ ಸ್ಪೇನ್‌ಗೆ ಮತ್ತು ಅಂತಿಮವಾಗಿ ಇಡೀ ಜಗತ್ತಿಗೆ ಹರಡಿತ್ತು . ಸ್ಪ್ಯಾನಿಷ್ ಪೆಯೆಲ್ಲಾ ಮತ್ತು ದಕ್ಷಿಣ ಏಷ್ಯಾದ ಪಿಲಾವ್ ಅಥವಾ ಪುಲಾವ್ ಮತ್ತು ಬಿರಿಯಾನಿ ಇಂತಹ ಭಕ್ಷ್ಯಗಳಿಂದ ವಿಕಸನಗೊಂಡಿತು. ಇದು ಅಫ್ಘಾನಿಸ್ತಾನ, ಅರ್ಮೇನಿಯಾ, ಅಜೆರ್ಬೈಜಾನ್, ಬಾಂಗ್ಲಾದೇಶ, ಚೀನಾ (ಮುಖ್ಯವಾಗಿ ಕ್ಸಿನ್‌ಜಿಯಾಂಗ್‌ನಲ್ಲಿ), ಸೈಪ್ರಸ್, ಜಾರ್ಜಿಯಾ, ಗ್ರೀಸ್ (ಮುಖ್ಯವಾಗಿ ಕ್ರೀಟ್‌ನಲ್ಲಿ), ಭಾರತ, ಇರಾಕ್ (ಮುಖ್ಯವಾಗಿ ಕುರ್ದಿಸ್ತಾನದಲ್ಲಿ), ಇರಾನ್, ಇಸ್ರೇಲ್, ಕೀನ್ಯಾ, ಕಿರ್ಗಿಸ್ತಾನ್, ನೇಪಾಳ, ಪಾಕಿಸ್ತಾನ, ರೊಮೇನಿಯಾ, ರಷ್ಯಾ, ಟಾಂಜಾನಿಯಾ (ಮುಖ್ಯವಾಗಿ ಜಾಂಜಿಬಾರ್‌ನಲ್ಲಿ), ತಜಿಕಿಸ್ತಾನ್, ಟರ್ಕಿ, ತುರ್ಕಮೆನಿಸ್ತಾನ್, ಉಗಾಂಡ ಮತ್ತು ಉಜ್ಬೇಕಿಸ್ತಾನ್ ನಂತಹ ಪ್ರದೇಶಗಳಲ್ಲಿ ಜನಪ್ರಿಯ ಖಾದ್ಯವಾಗಿದೆ .

ಇತಿಹಾಸಸಂಪಾದಿಸಿ

ಭತ್ತದ ಕೃಷಿ ದಕ್ಷಿಣ ಏಷ್ಯಾದಿಂದ ಮಧ್ಯ ಮತ್ತು ಪಶ್ಚಿಮ ಏಷ್ಯಾಕ್ಕೆ ಬಹಳ ಹಿಂದೆಯೇ ಹರಡಿಕೊಂಡಿದ್ದರೂ , ಅಬ್ಬಾಸಿದ್ ಖಲೀಫೇಟ್ ನ ಸಮಯದಲ್ಲಿ, ಅಕ್ಕಿಯನ್ನು ಬೇಯಿಸುವ ವಿಧಾನಗಳು ಪುಲಾವ್ಅನ್ನು ಆಧುನಿಕ ಶೈಲಿಗಳನ್ನು ಬಳಸಿ ತಯಾರಿಸುವ ವಿಧಾನಗಳು ಮೊದಲಿಗೆ ಸ್ಪೇನ್‌ನಿಂದ ವಿಶಾಲವಾದ ಪ್ರದೇಶದ ಮೂಲಕ ಹರಡಿತು . ನಂತರ ಅಫ್ಘಾನಿಸ್ತಾನ ಮತ್ತು ಅಂತಿಮವಾಗಿ ವಿಶಾಲ ಜಗತ್ತಿಗೆ ಹರಡಿತು .[೨]

ಲೇಖಕ ಕೆ. ಟಿ. ಆಚಾಯ ಅವರ ಪ್ರಕಾರ , ಭಾರತೀಯ ಮಹಾಕಾವ್ಯ ಮಹಾಭಾರತವು ಅಕ್ಕಿ ಮತ್ತು ಮಾಂಸವನ್ನು ಒಟ್ಟಿಗೆ ಬೇಯಿಸಿದ ಉದಾಹರಣೆಯನ್ನು ಉಲ್ಲೇಖಿಸುತ್ತದೆ. ಅಲ್ಲದೆ, ಅಚಾಯಾ ಪ್ರಕಾರ, ಪ್ರಾಚೀನ ಸಂಸ್ಕೃತ ಕೃತಿಯಾದ ಯಾಜ್ಞವಲ್ಕ್ಯ ಸ್ಮೃತಿಯಲ್ಲಿ ಅಕ್ಕಿ ಖಾದ್ಯವನ್ನು ಉಲ್ಲೇಖಿಸಲು ಪುಲಾವ್ ಎಂಬ ಪದವನ್ನು ಬಳಸಲಾಗಿತ್ತು .[೩][೪]

ಪುಲಾವ್‌ಗಾಗಿ ಮೊಟ್ಟಮೊದಲ ದಾಖಲಿತ ಪಾಕವಿಧಾನ ಹತ್ತನೇ ಶತಮಾನದ ಪರ್ಷಿಯನ್ ವಿದ್ವಾಂಸ ಅವಿಸೆನ್ನ ಅವರಿಂದ ಬಂದಿದೆ . ಅವರು ವೈದ್ಯಕೀಯ ವಿಜ್ಞಾನಗಳ ಕುರಿತಾದ ತಮ್ಮ ಪುಸ್ತಕಗಳಲ್ಲಿ ಹಲವಾರು ವಿಧದ ಪುಲಾವ್ ಸೇರಿದಂತೆ ವಿವಿಧ ಭಕ್ಷ್ಯಗಳನ್ನು ತಯಾರಿಸಲು ಇಡೀ ವಿಭಾಗವನ್ನು ಮೀಸಲಿಟ್ಟಿದ್ದಾರೆ. ಹಾಗೇ ಭಕ್ಷ್ಯವನ್ನು ತಯಾರಿಸಲು ಬಳಸುವ ಪ್ರತಿಯೊಂದು ವಸ್ತುವಿನ ಅನುಕೂಲಗಳು ಮತ್ತು ಅನಾನುಕೂಲಗಳನ್ನು ಅವರು ತಮ್ಮ ಪುಸ್ತಕದಲ್ಲಿ ವಿವರಿಸಿದ್ದಾರೆ .[೫]

ತಯಾರಿಸುವ ವಿಧಾನಸಂಪಾದಿಸಿ

ಕೆಲವು ಅಡುಗೆಯವರು ಬಾಸ್ಮತಿ ಅಕ್ಕಿಯನ್ನು ಬಳಸಲು ಬಯಸುತ್ತಾರೆ ಏಕೆಂದರೆ ಈ ರೀತಿಯ ಅಕ್ಕಿಯಿಂದ ಪುಲಾವ್ ಅನ್ನು ತಯಾರಿಸುವುದು ಸುಲಭ . ಆದಾಗ್ಯೂ, ಇತರ ರೀತಿಯ ಅಕ್ಕಿಯನ್ನು ಸಹ ಬಳಸಲಾಗುತ್ತದೆ. ಮೊದಲಿಗೆ ಅಕ್ಕಿಯನ್ನು ನೀರಿನಲ್ಲಿ ಚೆನ್ನಾಗಿ ತೊಳೆಯಲಾಗುತ್ತದೆ. ನಂತರ ಅಕ್ಕಿಯನ್ನು ಬೇಯಿಸಿ ಅದಕ್ಕೆ ಹುರಿದ ಈರುಳ್ಳಿ, ಏಲಕ್ಕಿ, ದಾಲ್ಚಿನ್ನಿ, ಕತ್ತರಿಸಿದ ತರಕಾರಿಗಳು ಮುಂತಾದ ಪರಿಮಳಯುಕ್ತ ಮಸಾಲೆಗಳನ್ನು ಸೇರಿಸಿ ತಯಾರಿಸಲಾಗುತ್ತದೆ .[೬] ಪುಲಾವ್ ಅನ್ನು ಸಾಮಾನ್ಯವಾಗಿ ಮಾಂಸ ಅಥವಾ ತರಕಾರಿಗಳಿಂದ ತಯಾರಿಸಲಾಗುತ್ತದೆ‌ . ವಿಶೇಷ ಸಂದರ್ಭಗಳಲ್ಲಿ ಅಕ್ಕಿಗೆ ಹಳದಿ ಬಣ್ಣವನ್ನು ನೀಡಲು ಕೇಸರಿಯನ್ನು ಬಳಸುತ್ತಾರೆ .[೭][೮]

ಸ್ಥಳೀಯ ಪ್ರಭೇದಗಳುಸಂಪಾದಿಸಿ

ಅಕ್ಕಿ ಅಥವಾ ಬುಲ್ಗರ್ ನಂತಹ ಇತರ ಧಾನ್ಯಗಳಿಂದ ಮಾಡಿದ ಪುಲಾವ್‌ ನಲ್ಲಿ ಸಾವಿರಾರು ವ್ಯತ್ಯಾಸಗಳಿವೆ. ಕೆಲವು ಪ್ರದೇಶಗಳಲ್ಲಿ ಮಾಂಸ, ಹಣ್ಣು ಅಥವಾ ತರಕಾರಿಗಳನ್ನು ಉಪಯೋಗಿಸಿ ಪುಲಾವ್‌ ಅನ್ನು ತಯಾರಿಸುತ್ತಾರೆ. ಇನ್ನು ಕೆಲವು ಕಡೆಗಳಲ್ಲಿ ಸರಳವಾಗಿ ಬಡಿಸಲಾಗುತ್ತದೆ.

ಭಾರತಸಂಪಾದಿಸಿ

ಭಾರತದಲ್ಲಿ ಪುಲಾವ್ ಸಾಮಾನ್ಯವಾಗಿ ಮಸೂರ ಅಥವಾ ತರಕಾರಿಗಳ ಮಿಶ್ರಣವಾಗಿದ್ದು, ಮುಖ್ಯವಾಗಿ ಬಟಾಣಿ, ಆಲೂಗಡ್ಡೆ, ಫ್ರೆಂಚ್ ಬೀನ್ಸ್, ಕ್ಯಾರೆಟ್ ಅಥವಾ ಮಾಂಸಗಳಲ್ಲಿ, ಮುಖ್ಯವಾಗಿ ಕೋಳಿ ಮಾಂಸ, ಮೀನು ಅಥವಾ ಸಿಗಡಿಯನ್ನು ಉಪಯೋಗಿಸುತ್ತಾರೆ.[೯]

ಪಾಕಿಸ್ತಾನಸಂಪಾದಿಸಿ

ಪಾಕಿಸ್ತಾನದಲ್ಲಿ, ಬಾಸ್ಮತಿ ಅಕ್ಕಿಯನ್ನು ಸಾಮಾನ್ಯವಾಗಿ ಮಾಂಸದೊಂದಿಗೆ ಬೇಯಿಸಿ ತಯಾರಿಸುತ್ತಾರೆ. ಈ ಖಾದ್ಯವು ಪಾಕಿಸ್ತಾನದಲ್ಲಿ ಎಲ್ಲಾ ಭಾಗಗಳಲ್ಲಿ ಪ್ರಸಿದ್ಧವಾಗಿದೆ. ಆದರೆ, ಅಡುಗೆ ಶೈಲಿಯು ದೇಶದ ಇತರ ಭಾಗಗಳಲ್ಲಿ ಸ್ವಲ್ಪ ಬದಲಾಗಬಹುದು. ಇದನ್ನು ಪಾಕಿಸ್ತಾನದ ಸಿಂಧಿ ಜನರು ತಮ್ಮ ವಿವಾಹ ಸಮಾರಂಭಗಳು, ಸಂತಾಪ ಸಭೆಗಳು ಮತ್ತು ಇತರ ಸಂದರ್ಭಗಳಲ್ಲಿ ತಯಾರಿಸುತ್ತಾರೆ.[೧೦]

ಉಲ್ಲೇಖಗಳುಸಂಪಾದಿಸಿ

  1. https://www.indianveggiedelight.com/instant-pot-broken-wheat-pulao/
  2. https://www.quora.com/Where-did-pulao-biriyani-and-naans-originate-from
  3. "ಆರ್ಕೈವ್ ನಕಲು". Archived from the original on 2018-05-14. Retrieved 2020-01-05.
  4. https://www.livehistoryindia.com/history-in-a-dish/2017/06/07/the-making-of-biryani
  5. https://indiacurrents.com/the-courtly-pulao/
  6. "10 popular vegetarian biryani and pulao dishes - Times of India". The Times of India (in ಇಂಗ್ಲಿಷ್). Retrieved 5 January 2020.
  7. "Vegetable Pulao Recipe: Easy Vegetable Pulao | How to Make Pulao at Home". recipes.timesofindia.com (in ಇಂಗ್ಲಿಷ್). Retrieved 5 January 2020.
  8. http://www.spicechronicles.com/birayani-pulao-masala-south-asian-rice-seasoning-dishes/
  9. "Vegetable Pulao Recipe: Easy Vegetable Pulao | How to Make Pulao at Home". recipes.timesofindia.com (in ಇಂಗ್ಲಿಷ್). Retrieved 5 January 2020.
  10. "How to Make Chicken Pulao Pakistan" (in ಇಂಗ್ಲಿಷ್). Retrieved 5 January 2020.
"https://kn.wikipedia.org/w/index.php?title=ಪುಲಾವ್&oldid=1056434" ಇಂದ ಪಡೆಯಲ್ಪಟ್ಟಿದೆ