ಪುತ್ತೂರು ನರಸಿಂಹ ನಾಯಕ್

(ಪುತ್ತುರು ನರಸಿಂಹ ನಾಯಕ್ ಇಂದ ಪುನರ್ನಿರ್ದೇಶಿತ)

ಪುತ್ತೂರು ನರಸಿಂಹ ನಾಯಕ್ ಕನ್ನಡನಾಡಿನ ಪ್ರಖ್ಯಾತ ಗಾಯಕರಲ್ಲೊಬ್ಬರು. ಅವರು ಭಕ್ತಿಗೀತೆಗಳನ್ನು ಮುಖ್ಯವಾಗಿ ಹರಿದಾಸ ಸಂಯೋಜನೆಗಳನ್ನು ಮತ್ತು ಕರ್ನಾಟಕ ಶಾಸ್ತ್ರೀಯ ಸಂಗೀತವನ್ನು ಹಾಡುತ್ತಾರೆ. ಅವರು ಕನ್ನಡದಲ್ಲಿ ಮುಖ್ಯವಾಗಿ ಪುರಂದರ ದಾಸ, ಕನಕ ದಾಸರ ಭಕ್ತಿಗೀತೆಗಳು ಮತ್ತು ಕೀರ್ತನೆಗಳನ್ನು ಹಾಡಿದ್ದಾರೆ. ಅವರ 'ಪವಮಾನ ಜಗದ ಪ್ರಾಣ', 'ಮುನಿಸು ತರವೇ ಮುಗುದೆ’, ‘ಸಂಜೆಯ ರಾಗಕೆ ಬಾನು ಕೆಂಪಾಗಿದೆ’ ಇಂತಹ ಹಾಡುಗಳನ್ನು ಮೆಲುಕು ಹಾಕದವರಿಲ್ಲ. ಈ ಹಾಡುಗಳನ್ನು ತಮ್ಮದೇ ಧಾಟಿಯಲ್ಲಿ ಜನ ಮಾನಸದಲ್ಲಿ ನಲಿಯುವಂತೆ ಮಾಡಿರುವ ಗಾಯಕ ಪುತ್ತೂರು ನರಸಿಂಹನಾಯಕ್.

ಪುತ್ತೂರು ನರಸಿಂಹ ನಾಯಕ್
ಜನ್ಮನಾಮನರಸಿಂಹ ನಾಯಕ್
ಜನನ (1958-11-28) ೨೮ ನವೆಂಬರ್ ೧೯೫೮ (ವಯಸ್ಸು ೬೬)
ಪುತ್ತೂರು, ಕರ್ನಾಟಕ, ಭಾರತ
ಸಂಗೀತ ಶೈಲಿಹಿನ್ನೆಲೆ ಗಾಯನ, ಭಜನೆಗಳು, ಕೀರ್ತನೆಗಳು, ಭಾರತೀಯ ಶಾಸ್ತ್ರೀಯ
ವೃತ್ತಿಗಾಯಕ

ವೈಯಕ್ತಿಕ ಜೀವನ

ಬದಲಾಯಿಸಿ

ನರಸಿಂಹ ನಾಯಕ್ ಅವರು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ೨೮ನೇ ನವೆಂಬರ್ ೧೯೫೮ ರಂದು ಹರಿಹರ ನಾಯಕ್ ಮತ್ತು ವರಲಕ್ಷ್ಮಿ ದಂಪತಿಗಳ ಮಗನಾಗಿ ಜನಿಸಿದರು. ಗೌಡ ಸಾರಸ್ವತ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದ ನಾಯಕ್ ೧೪ ನೇ ವಯಸ್ಸಿನಲ್ಲಿ ಸಂಗೀತವನ್ನು ಕಲಿಯಲು ಪ್ರಾರಂಭಿಸಿದರು. ಅವರು ತಮ್ಮ ಆರಂಭಿಕ ಸಂಗೀತವನ್ನು ಪುತ್ತೂರು ದೇವದಾಸ್ ನಾಯಕ್ ಅವರಿಂದ ಪಡೆದರು.

ವಿವೇಕಾನಂದ ಕಾಲೇಜಿಗೆ ಬಂದ ಮೇಲೆ ಅಲ್ಲಿನ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಾ ಬಂದರು. ಸ್ಪರ್ಧೆಗಳಲ್ಲಿ ಮೊದಲ ಸ್ಥಾನ ಇವರಿಗೇ ಕಟ್ಟಿಟ್ಟ ಬುತ್ತಿ. ಪುತ್ತೂರಿನಲ್ಲಿ ನಡೆಯುತ್ತಿದ್ದ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಹಾಡುವ ಅವಕಾಶಗಳು ಅರಸುತ್ತಾ ಬಂದವು.

ಸಿಕ್ಕ ಅವಕಾಶಗಳನ್ನು ಉಪಯೋಗಿಸಿಕೊಂಡು ತಮ್ಮ ಗಾಯನದಲ್ಲಿ ಪ್ರಬುದ್ಧತೆಯನ್ನು ಬೆಳೆಸಿಕೊಳ್ಳುತ್ತಾ ಸಾಗಿದ ನಾಯಕ್ ಕೆಲವೇ ವರ್ಷಗಳಲ್ಲಿ ಬೇರೆ ಬೇರೆ ಊರುಗಳ ಕಾರ್ಯಕ್ರಮಗಳಿಗೆ ಆಹ್ವಾನಿತರಾಗಿ ಭಾವಗೀತೆ ಮತ್ತು ದಾಸರಪದಗಳನ್ನು ಹಾಡಿ ಹೆಸರಾದರು. ಈ ಮಧ್ಯೆ ಉತ್ತಮ ಅಂಕದೊಂದಿದೆ ಬಿ.ಎ. ಪದವಿಯನ್ನೂ ಪಡೆದರು. ತಂದೆ ತಾಯಿಗಳು ಮಗ ಯಾವುದಾರೂ ಕೆಲಸಕ್ಕೆ ಸೇರಲಿ ಎಂಬ ಬಯಕೆಯನ್ನು ತೋರಿದ್ದರೂ ತಮ್ಮ ಗಾಯನದಲ್ಲಿ ತಮಗಿದ್ದ ಆತ್ಮ ವಿಶ್ವಾಸದಿಂದ ನರಸಿಂಹನಾಯಕ್ ಗಾಯನ ಕ್ಷೇತ್ರವನ್ನೇ ವೃತ್ತಿಯಾಗಿ ಸ್ವೀಕರಿಸಿದರು.

ಇವರು ದಕ್ಷಿಣ ಕನ್ನಡ ಜಿಲ್ಲೆಯವರು. ಅವರು ಪತ್ನಿ ಮತ್ತು ಇಬ್ಬರು ಮಕ್ಕಳೊಂದಿಗೆ ಬೆಂಗಳೂರಿನಲ್ಲಿ ವಾಸಿಸುತ್ತಿದ್ದಾರೆ.

ವೃತ್ತಿಜೀವನ

ಬದಲಾಯಿಸಿ

ನರಸಿಂಹ ನಾಯಕ್ ಅವರು ೧೯೮೪ರಲ್ಲಿ ಮಂಗಳೂರಿನ ಆಕಾಶವಾಣಿ ಗಾಯನ ವಿಭಾಗದಲ್ಲಿ ತೇರ್ಗಡೆಯಾದರು. ಪ್ರಸಿದ್ಧ ವಯೋಲಿನ್ ವಾದಕ ಹಾಗೂ ಸಂಗೀತ ನಿರ್ದೇಶಕ ಪದ್ಮಚರಣ ಅವರು ತಮ್ಮ ನವೋದಯ ಧ್ವನಿ ಸುರುಳಿಯಲ್ಲಿ ನಾಯಕ್ ಅವರಿಗೆ ಅವಕಾಶವಿತ್ತರು.

೧೯೭೭ ರಲ್ಲಿ ಅವರು ಕೆಂಡದ ಮಳೆ, ಉಜ್ವಲು ಸೇರಿದಂತೆ ಕೊಂಕಣಿ, ಕನ್ನಡ ಮತ್ತು ತುಳು ಚಲನಚಿತ್ರಗಳಿಗೆ ಹಾಡಲು ಪ್ರಾರಂಭಿಸಿದರು. ೧೯೯೨ ರಲ್ಲಿ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಗಳಲ್ಲಿ ಪುತ್ತೂರು ನಾಯಕ್ ಅತ್ಯುತ್ತಮ ಪುರುಷ ಹಿನ್ನೆಲೆ ಗಾಯಕ ಪ್ರಶಸ್ತಿಯನ್ನು ಗೆದ್ದರು. ಅವರಿಗೆ ೨೦೦೫ ರಲ್ಲಿ ಶ್ರೀ ರಾಘವೇಂದ್ರ ಪ್ರಶಸ್ತಿ ನೀಡಲಾಯಿತು.[] ಅವರು ೧೪ ಭಾರತೀಯ ಭಾಷೆಗಳಲ್ಲಿ ಹತ್ತು ಸಾವಿರಕ್ಕೂ ಹೆಚ್ಚು ಭಕ್ತಿಗೀತೆ, ಚಲನಚಿತ್ರ ಮತ್ತು ಜಾನಪದ ಗೀತೆಗಳನ್ನು ಹಾಡಿದ್ದಾರೆ.[][][] ಅವರು ಪ್ರಪಂಚದಾದ್ಯಂತ ಮೂರು ಸಾವಿರಕ್ಕೂ ಹೆಚ್ಚು ಸಂಗೀತ ಕಾರ್ಯಕ್ರಮಗಳಲ್ಲಿ ಪ್ರದರ್ಶನ ನೀಡಿದ್ದಾರೆ.[] ಅಮೆರಿಕ ಮತ್ತು ಬಹ್ರೇನ್ ನಲ್ಲಿ ಹಲವು ಬಾರಿ ಪ್ರವಾಸ ಕೈಗೊಂಡಿರುವ ಅವರು ವಿದೇಶಗಳಲ್ಲಿ ನಡೆದ ಕನ್ನಡ ಸಮ್ಮೇಳನಗಳಲ್ಲಿ ಪ್ರತಿನಿಧಿಯಾಗಿ ಸೇವೆ ಸಲ್ಲಿಸಿದ್ದಾರೆ.[][] [] [][೧೦][೧೧][೧೨][೧೩][೧೪][೧೫][೧೬][೧೭]

ಭಾವಗೀತೆ, ಭಕ್ತಿಗೀತೆ, ದಾಸರಪದ, ಜನಪದ, ವಚನ ಹೀಗೆ ಬಹಳಷ್ಟು ಪ್ರಕಾರಗಳಲ್ಲಿ ಹಾಡುತ್ತಿದ್ದ ನರಸಿಂಹನಾಯಕ್ ಶ್ರೋತೃಗಳ ಮೆಚ್ಚಿನ ಗಾಯಕರಾದರು. ೧೯೮೯ರಲ್ಲಿ ಇವರು ಹಾಡಿದ ‘ದಾಸನಾಗು ವಿಶೇಷನಾಗು’ ಗೀತೆಯಂತೂ ಅತ್ಯದ್ಭುತ ಯಶಸ್ಸು ಪಡೆಯಿತು. ಹೀಗೆ ಅವರ ಧ್ವನಿಸುರುಳಿಯ ಸಂಖ್ಯೆ ನೂರನ್ನೂ ಮೀರಿವೆ.

೧೦,೦೦೦ಕ್ಕೂ ಹೆಚ್ಚು ಗೀತೆಗಳನ್ನು ಹಾಡಿರುವ ಗಾಯಕ ಎಂಬ ಖ್ಯಾತಿಗೆ ಇವರು ಪಾತ್ರರಾಗಿದ್ದಾರೆ. ಕನ್ನಡ ಭಾಷೆಯ ಗೀತೆಗಳಷ್ಟೇ ಅಲ್ಲದೇ ತೆಲುಗು, ತಮಿಳು, ಮರಾಠಿ, ಹಿಂದಿ, ಕೊಂಕಣಿ, ತುಳು ಗೀತೆಗಳನ್ನು ಹಾಡಿದ್ದಾರೆ.

ನರಸಿಂಹ ನಾಯಕ್ ಬಿಡುವಿಲ್ಲದ ಗಾಯನ ಕ್ಷೇತ್ರದಲ್ಲಿನ ಅಪಾರ ಸಾಧನೆಯ ಜೊತೆಗೆ ಆಗಾಗ ಬಿಡುವು ಮಾಡಿಕೊಂಡು ಆಸಕ್ತರಿಗೆ ಸಾಧನಾ ಮ್ಯೂಸಿಕ್ ಸ್ಕೂಲ್‌ನಲ್ಲಿ ಭಾವಗೀತೆಗಳ ತರಬೇತಿ ಸಹಾ ನೀಡುತ್ತಿದ್ದಾರೆ.

ಬಿಡುಗಡೆಯಾದ ಹಾಡುಗಳ ಪಟ್ಟಿ

ಬದಲಾಯಿಸಿ
  • ೧೦೮ ಶಿವ ಮಂತ್ರಗಳು - ಪುತ್ತೂರು ನರಸಿಂಹ ನಾಯಕ್ (ಸಂಸ್ಕೃತ)
  • ಬಸವ ಬಸವ (ಬಸವೇಶ್ವರ ವಚನ) - ಪುತ್ತೂರು ನರಸಿಂಹ ನಾಯಕ್, ಬಿ.ಆರ್.ಛಾಯಾ, ಕಸ್ತೂರಿ ಶಂಕರ್
  • ಭಾಗ್ಯ ಪ್ರದಾಯಿನಿ ಗೊರವನಹಳ್ಳಿ ಶ್ರೀ ಲಕ್ಷ್ಮಿ ಅವರಿಂದ ಪುತ್ತೂರು ನರಸಿಂಹ ನಾಯಕ್, ಕೆ.ಎಸ್.ಸುರೇಖಾ, ಬಿ.ಆರ್.ಛಾಯಾ
  • ಪುತ್ತೂರು ನರಸಿಂಹ ನಾಯಕ್ ಅವರಿಂದ ಭಾಗ್ಯದ ಗಣಪ ಬಾರಯ್ಯ
  • ಪುತ್ತೂರು ನರಸಿಂಹ ನಾಯಕ್ ಅವರಿಂದ ಬಿಲ್ವಸ್ತೋತರ ಶತನಾಮಾವಳಿ (ಸಂಸ್ಕೃತ)
  • ಪುತ್ತೂರು ನರಸಿಂಹ ನಾಯಕ್ ಹಾಡಿದ ದಾಸನಗು
  • ದಾಸರ ಪದಗಳು ಸಂಪುಟ ೧ – ಪುತ್ತೂರು ನರಸಿಂಹ ನಾಯಕ್
  • ದಶಕೀರ್ತನೆ (ದಸರಾ ಪದಗಳು) - ಪುತ್ತೂರು ನರಸಿಂಹ ನಾಯಕ್
  • ಗುರುರಾಜ ಗುರುಸಾರ್ವಭೌಮ (ದಸರಾ ಪದಗಳು) - ಪುತ್ತೂರು ನರಸಿಂಹ ನಾಯಕ್
  • ಪುತ್ತೂರು ನರಸಿಂಹ ನಾಯಕ್ ಅವರಿಂದ ಹರಿ ದಸರಾ ಶ್ರೀ ರಾಘವೇಂದ್ರ ನಾಮ ವಾಲಿ
  • ಪುತ್ತೂರು ನರಸಿಂಹ ನಾಯಕ್ ಅವರಿಂದ ಜಗನ್ಮೋಹನ ಕೃಷ್ಣ (ದಸರಾ ಪದಗಳು)
  • ಜೈ ಜೈ ಕೃಷ್ಣ ಮುಕುಂದ ಮುರಾರಿ (ಭಜನೆ) - ಪುತ್ತೂರು ನರಸಿಂಹ ನಾಯಕ್
  • ಜಯತು ಜಯತು ರಾಘವೇಂದ್ರ ಪುತ್ತೂರು ನರಸಿಂಹ ನಾಯಕ್
  • ಶ್ರೀ ಲಕ್ಷ್ಮೀ ಹೃದಯ ಸ್ತೋತ್ರ - ಪುತ್ತೂರು ನರಸಿಂಹ ನಾಯಕ್
  • ಮಧ್ವನಾಮ - ಪುತ್ತೂರು ನರಸಿಂಹ ನಾಯಕ್
  • ಮುಂಡಗೋಡ ಮಾದೇಶ್ವರ - ಪುತ್ತೂರು ನರಸಿಂಹ ನಾಯಕ್, ಸೌಮ್ಯ
  • ಪುತ್ತೂರು ನರಸಿಂಹ ನಾಯಕ್ ಅವರಿಂದ ಒಲಿಡು ಬಾರಯ್ಯ ರಾಘವೇಂದ್ರ
  • ಓಂ ಗಂ ಗಣಪತಿಯೇ ನಮಃ - ಪುತ್ತೂರು ನರಸಿಂಹ ನಾಯಕ್ ಅವರಿಂದ ಪಠಣ
  • ಪಾಲಿಸೊ ವೆಂಕಟರಮಣ (ದಸರಾ ಪದಗಳು) - ಪುತ್ತೂರು ನರಸಿಂಹ ನಾಯಕ್
  • ಪುತ್ತೂರು ನರಸಿಂಹ ನಾಯಕ್ ಅವರಿಂದ ರಾಯ ಬಾರೋ ರಾಘವೇಂದ್ರ ಬಾರೋ (ದಸರಾ ಪದ)
  • ರಾಮ ಹರೇ ಕೃಷ್ಣ ಹರೇ (ದಸರಾ ಪದಗಳು) - ಪುತ್ತೂರು ನರಸಿಂಹ ನಾಯಕ್
  • ಪುತ್ತೂರು ನರಸಿಂಹ ನಾಯಕ್ ಅವರಿಂದ ಶ್ರೀ ರಾಘವೇಂದ್ರಂ (ಸಂಸ್ಕೃತ)
  • ವಾಣಿ ಜಯರಾಮ್, ಚಂದ್ರಿಕಾ ಗುರುರಾಜ್, ಪುತ್ತೂರು ನರಸಿಂಹ ನಾಯಕ್ ಅವರಿಂದ ಸಿಂಧೂರ ಗಣಪ
  • ಪುತ್ತೂರು ನರಸಿಂಹ ನಾಯಕ್, ಬಿ.ಆರ್.ಛಾಯಾ, ಸೌಮ್ಯ ಅವರಿಂದ ಶ್ರೀ ಗಣೇಶ ದಿವ್ಯದರ್ಶನ
  • ಪುತ್ತೂರು ನರಸಿಂಹ ನಾಯಕ್, ಬಿ.ಆರ್.ಛಾಯಾ, ಕೆ.ಎಸ್.ಸುರೇಖಾ ಅವರಿಂದ ಶ್ರೀ ಗಣೇಶ ಸುಪ್ರಭಾತ
  • ದಾಸ ಸಂಗಮ ಪುತ್ತೂರು ನರಸಿಂಹ ನಾಯಕ್,
  • ಪಾವಮನ ಪುತ್ತೂರು ನರಸಿಂಹ ನಾಯಕ್.

ಉಲ್ಲೇಖಗಳು

ಬದಲಾಯಿಸಿ
  1. "Music and dance review". 14 August 2011.
  2. "WebHost4Life | Web Hosting, Unix Hosting, E-Mail, Web Design".
  3. "Shivarajkumar". The Times of India. Retrieved 8 January 2012.
  4. "A memorable evening at Kadri Park". The Hindu. Chennai, India. 9 January 2011. Archived from the original on 15 January 2011. Retrieved 8 January 2012.
  5. "ourkarnataka.com". OurKarnataka.Com, Inc. Retrieved 8 January 2012.
  6. "Devotional Music Event by Puttur Narasimha Nayak Held in Metro".
  7. "A memorable evening at Kadri Park". The Hindu. Chennai, India. 9 January 2011. Archived from the original on 15 January 2011.
  8. "ಆರ್ಕೈವ್ ನಕಲು". Archived from the original on 4 ಮಾರ್ಚ್ 2016. Retrieved 1 ಆಗಸ್ಟ್ 2024.{{cite web}}: CS1 maint: bot: original URL status unknown (link)
  9. "Daijiworld - A News portal linking West coast of India and the World".
  10. "Bangalore Today". The Hindu. Chennai, India. 2 January 2011. Archived from the original on 6 January 2011.
  11. "Hindustani music, dance programmes". The Hindu. Chennai, India. 29 August 2010. Archived from the original on 16 November 2013.
  12. "In Bangalore Today". The Hindu. Chennai, India. 2 June 2010. Archived from the original on 5 June 2010.
  13. "In Bangalore Today". The Hindu. Chennai, India. 10 August 2010. Archived from the original on 17 August 2010.
  14. "Hampi festival promises to be a cultural extravaganza". The Hindu. Chennai, India. 25 January 2010. Archived from the original on 30 January 2010.
  15. "Songbirds back in Cubbon Park". The Hindu. Chennai, India. 6 October 2008. Archived from the original on 9 October 2008.
  16. "In Mangalore Today". The Hindu. Chennai, India. 8 January 2005. Archived from the original on 22 January 2005.
  17. "Dharmasthala set for cultural carnival". The Hindu. Chennai, India. 27 January 2007. Archived from the original on 16 November 2013.