ಮಹಾಭಾರತ ಮಹಾಕಾವ್ಯದಲ್ಲಿ ಹಸ್ತಿನಾಪುರದ ರಾಜ ಯುಧಿಷ್ಠಿರನ ಉತ್ತರಾಧಿಕಾರಿ ಪರೀಕ್ಷಿತ. ಇವನನ್ನು ಕುರುವಂಶದ ರಾಜನೆಂದು ಕರೆಯಲಾಗುತ್ತಿತ್ತು.

ಪರೀಕ್ಷಿತ
ಹಸ್ತಿನಾಪುರದ ಅರಸ

ಶುಕ ಮುನಿಯೊಂದಿಗೆ ರಾಜ ಪರೀಕ್ಷಿತ
ಪೂರ್ವಾಧಿಕಾರಿ ಯುಧಿಷ್ಠಿರ
ಉತ್ತರಾಧಿಕಾರಿ ಜನಮೇಜಯ
ಪತ್ನಿ ರಾಣಿ ಮದ್ರಾವತಿ
ಸಂತಾನ
ಜನಮೇಜಯ
ಭೀಮಸೇನ
ಶೃತಸೇನ
ಉಗ್ರಸೇನ
Royal House ಕುರು
ತಂದೆ ಅಭಿಮನ್ಯು
ತಾಯಿ ಉತ್ತರಾ
ಧರ್ಮ ಹಿಂದೂ


ಪರೀಕ್ಷಿತನು ಅರ್ಜುನನ ಮಗನಾದ ಅಭಿಮನ್ಯು ಮತ್ತು ಮತ್ಸ್ಯ ರಾಜಕುಮಾರಿಉತ್ತರೆಯ ಮಗನು. ಕುರುಕ್ಷೇತ್ರ ಯುದ್ಧದ ನಂತರವಷ್ಟೇ ಇವನ ಜನನವಾಗುತ್ತದೆ. ಅಭಿಮನ್ಯುವನ್ನು ಕೌರವರು ಮೋಸದಿಂದ ನಿರ್ದಯವಾಗಿ ಕುರುಕ್ಷೇತ್ರ ಯುದ್ಧದಲ್ಲಿ ಕೊಂದಾಗ ಉತ್ತರೆ ಇನ್ನೂ ಗರ್ಭಿಣಿ. ಇದರ ನಂತರ ಅಶ್ವತ್ಥಾಮನು ಗರ್ಭದಲ್ಲಿರುವ ಮಗುವನ್ನು ಕೊಲ್ಲುವ ಸಲುವಾಗಿ ಬ್ರಹ್ಮಾಸ್ತ್ರವನ್ನು ಉಪಯೋಗಿಸಿದಾಗ ಅಭಿಮನ್ಯುವಿನ ಸೋದರಮಾವನಾದ ಕೃಷ್ಣನು ಮಗುವನ್ನು ಉಳಿಸುತ್ತಾನೆ.

ಹಸ್ತಿನಾಪುರದ ದೊರೆ

ಬದಲಾಯಿಸಿ

ಕಲಿ ಯುಗದ ಪ್ರಾರಂಭವಾಗಿ ಕೃಷ್ಣನ ಅವತಾರ ಮತ್ತು ಪಾಂಡವರ ಕಣ್ಮರೆಯಾದ ಬಳಿಕ ಯುವ ಪರೀಕ್ಷಿತನಿಗೆ ರಾಜ್ಯಭಾರದ ಹೊರೆ. ಕೃಪಾಚಾರ್ಯರ ನೇತೃತ್ವದಲ್ಲಿ ಮೂರು ಅಶ್ವಮೇಧ ಯಜ್ಞಗಳನ್ನು ಪೂರೈಸುತ್ತಾನೆ.

ಈತ ಉತ್ತರನ ಮಗಳಾದ ಭದ್ರವತಿ ಅಥವಾ ಇರಾವತಿ ಎಂಬ ತರುಣಿಯನ್ನು ಮದುವೆಯಾಗಿ ಜನಮೇಜಯ,ಶ್ರುತಸೇನ,ಉಗ್ರಸೇನ ಮತ್ತು ಭೀಮಸೇನ ಎಂಬ ನಾಲ್ವರು ಪುತ್ರರನ್ನು ಪಡೆದ.

ಅಂತಿಮ ಸಮಯ

ಬದಲಾಯಿಸಿ

ಒಮ್ಮೆ ಬೇಟೆಗ ಹೋಗಿದ್ದಾಗ ಶಮೀಕಮುನಿಯ ಆಶ್ರಮವನ್ನು ಹೊಕ್ಕ.ಸಮಾಧಿಸ್ಥನಾಗಿದ್ದ ಮುನಿ ಈತನನ್ನು ಸತ್ಕರಿಸಲಿಲ್ಲವಾದ ಕಾರಣ,ಕೋಪಗೊಂಡು ಸತ್ತು ಬಿದ್ದಿದ್ದ ಒಂದು ಹಾವನ್ನು ಮುನಿಯ ಕೊರಳಿಗೆ ಹಾಕಿ ಹೊರಟುಹೋದ.ನಂತರ ಅಲ್ಲಿಗೆ ಬಂದ ಮುನಿಪುತ್ರ ಶೃಂಗಿ ಕ್ರೋಧವಶನಾಗಿ "ನಮ್ಮ ತಂದೆಯ ಕೊರಳಿಗೆ ಸತ್ತ ಹಾವನ್ನು ಹಾಕಿ ಅಪಮಾನ ಮಾಡಿದವನು ಇಂದಿನಿಂದ ಏಳು ದಿನಗಳೊಳಗಾಗಿ ಸರ್ಪದಂಶದಿಂದ ಸಾಯಲಿ" ಎಂದು ಶಪಿಸಿದನು.ಮುನಿಶಾಪದಿಂದಾಗಿ ತನ್ನ ಸಾವನ್ನು ಎದುರಿಸಿದ ಪರೀಕ್ಷಿತನು ತನ್ನ ಪುತ್ರ ಜನಮೇಜಯನಿಗೆ ಸಿಂಹಾಸನವನ್ನು ಬಿಟ್ಟುಕೊಟ್ಟು .ಸರ್ಪಗಳಿಗೆ ಅಗಮ್ಯವಾದ ರೀತಿಯಲ್ಲಿ ಸಮುದ್ರದ ನಡುವೆ ಒಂದು ಎತ್ತರವಾದ ಸೌಧವನ್ನು ನಿರ್ಮಿಸಿ, ತನ್ನ ಕೊನೆ ದಿನಗಳನ್ನು ಭಾಗವತ ಪುರಾಣಗಳನ್ನು ಕೇಳುವುದರಲ್ಲಿ ಕಳೆದನು.ನಿರೀಕ್ಷೆಯಂತೆ ಸರ್ಪರಾಜ ತಕ್ಷಕನಿಂದ ಪರೀಕ್ಷಿತನ ಮರಣವಾಯಿತು.

ಇದನ್ನೂ ನೋಡಿ

ಬದಲಾಯಿಸಿ

Once Parikshita went for hunt in the forest. Kalyuga appeared before him and asked permission to enter his kingdom, to which king denied. Upon insisting Parikshit allowed him to reside in gold. Kalyuga was smart, he entered into Parikshita's crown and spoiled his thoughts. Parikshita entered into a sage hut and found him praying. He bowed him several times but as their was no response he took the dead snake and threw it around sage's neck. Sage cursed him to die of snake bite.

ಹೊರಗಿನ ಸಂಪರ್ಕ

ಬದಲಾಯಿಸಿ