ಪರಮಾತ್ಮ(ಚಲನಚಿತ್ರ)
ಪರಮಾತ್ಮ 2011ರಲ್ಲಿ ಬಿಡುಗಡೆಯಾದ ಕನ್ನಡ ಭಾಷೆಯ ಚಿತ್ರ. ಯೋಗರಾಜ್ ಭಟ್ ರವರು ಈ ಚಿತ್ರಕ್ಕೆ ನಿರ್ದೇಶನ ಮತ್ತು ಸಹ ನಿರ್ಮಾಣ ಮಾಡಿದ್ದಾರೆ.[೩]ಇದರಲ್ಲಿಪುನೀತ್ ರಾಜ್‌ಕುಮಾರ್ ಮತ್ತು ದೀಪಾ ಸನ್ನಿಧಿ ಮುಖ್ಯ ಪಾತ್ರಗಳಲ್ಲಿ[೪]ನಟಿಸಿದ್ದಾರೆ.ಈ ಚಿತ್ರವು 6 ಅಕ್ಟೋಬರ್ 2011 ವಿಜಯದಶಮಿ ಹಬ್ಬದ ಸಂದರ್ಭದಲ್ಲಿ ಬಿಡುಗಡೆಯಾಯಿತು.[೫][೬] ನಿರ್ಮಾಣ ಹಂತದಲ್ಲಿದ್ದಾಗಲೇ ಚಿತ್ರದ ಟಿವಿ ಹಕ್ಕುಗಳು ದಾಖಲೆಯ ₹ 3.5 ಕೋಟಿಗೆ ಮಾರಾಟವಾಯಿತು.[೭][೮]ಬಿಡುಗಡೆಗೆ ಮುಂಚೆಯೇ,ಚಿತ್ರವು ಪ್ರಸಾರ ಮತ್ತು ವಿತರಣಾ ಹಕ್ಕುಗಳನ್ನು ಒಳಗೊಂಡಂತೆ ₹ 25 ಕೋಟಿಗಿಂತ ಹೆಚ್ಚಿನ ಮೊತ್ತವನ್ನು ಗಳಿಸಿತು. [೨]
ಪರಮಾತ್ಮ | |
---|---|
ನಿರ್ದೇಶನ | ಯೋಗರಾಜ್ ಭಟ್ |
ನಿರ್ಮಾಪಕ |
|
ಲೇಖಕ |
|
ಪಾತ್ರವರ್ಗ | |
ಸಂಗೀತ | ವಿ. ಹರಿಕೃಷ್ಣ |
ಛಾಯಾಗ್ರಹಣ | ಸಂತೋಷ್ ರಾಜ್ ಪತಂಜೆ |
ಸಂಕಲನ | ದೀಪು ಎಸ್ ಕುಮಾರ್ |
ಬಿಡುಗಡೆಯಾಗಿದ್ದು | ಪದವಿನ್ಯಾಸ ದೋಷ: ಗುರುತಿಸಲಾಗದ ವಿರಾಮ ಚಿಹ್ನೆ"೧".
|
ದೇಶ | ಭಾರತ |
ಭಾಷೆ | ಕನ್ನಡ |
ಬಾಕ್ಸ್ ಆಫೀಸ್ | ₹೩೨ ಕೋಟಿ (ಯುಎಸ್$೭.೧ ದಶಲಕ್ಷ)[೨] |
ಪಾತ್ರವರ್ಗ
ಬದಲಾಯಿಸಿ- ಪರಮತ್ಮಾ/ಕರಡಿ ಪಾತ್ರದಲ್ಲಿ ಪುನೀತ್ ರಾಜ್‌ಕುಮಾರ್
- ದೀಪಾ/ತಿಥಿ ವಡೆ ಪಾತ್ರದಲ್ಲಿ ದೀಪಾ ಸನ್ನಿಧಿ
- ಸಾನ್ವಿ/ಪಸೀನಾ ಪಾತ್ರದಲ್ಲಿ ಐಂದ್ರಿತಾ ರೇ
- ಜಯಂತ್ ಪಾತ್ರದಲ್ಲಿ ಅನಂತ್ ನಾಗ್
- ರಮ್ಯಾ ಬಾರ್ನಾ
- ಶ್ರೀನಿವಾಸ್ ಪಾತ್ರದಲ್ಲಿ ಅವಿನಾಶ್
- ಅಣ್ಣಯ್ಯ ಪಾತ್ರದಲ್ಲಿ ರಂಗಾಯಣ ರಘು
- ಅಪ್ಪಣ್ಣ ಪಾತ್ರದಲ್ಲಿ ದತ್ತಣ್ಣ
- ರಾಜು ತಾಳಿಕೋಟೆ
- ಕೆರೋಸಿನ್ ಪಾತ್ರದಲ್ಲಿ ಶ್ವೇತಾ ಪಂಡಿತ್
ನಿರ್ಮಾಣ
ಬದಲಾಯಿಸಿಪುನೀತ್ ರಾಜ್‌ಕುಮಾರ್ ಅಭಿನಯದ ಲಗೋರಿ ಹೆಸರಿನ ಚಲನಚಿತ್ರವನ್ನು 2009 ರಲ್ಲಿ ಚಿತ್ರೀಕರಿಸಬೇಕಾಗಿತ್ತು, ಆದರೆ ನಿರ್ಮಾಣದ ವೆಚ್ಚವು ಹೆಚ್ಚಿಸಿರುವುದರಿಂದ ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ ಚಿತ್ರದಿಂದ ಹಿಂದೆ ಸರಿದರು, ನಂತರ ಅದು ಸ್ಥಗಿತಗೊಂಡಿತು. 2011 ರಲ್ಲಿ, ಭಟ್ ಅವರ 2010 ರ ನಿರ್ಮಿತ ಚಿತ್ರ ಪಂಚರಂಗಿಯ ಯಶಸ್ಸಿನ ನಂತರ, ಅವರು ಪುನೀತ್ ರಾಜ್‌ಕುಮಾರ್ ಅಭಿನಯದ ಪರಮಾತ್ಮ ಚಿತ್ರವನ್ನು ನಿರ್ಮಾಪಕ ಜಯಣ್ಣ ರವರೊಂದಿಗೆ ಸಹ ನಿರ್ಮಾಣ ಮಾಡುತ್ತಿದ್ದಾರೆ. [೯] ಚಿತ್ರದ ಕಥೆಯ ಪ್ರಕಾರ ಮೂವರು ನಟಿಯರು ನಟಿಸಬೇಕಿದೆ, ಅವರೇ: ದೀಪ ಸನ್ನಿಧಿ ಐಂದ್ರಿತಾ ರೈ ಮತ್ತು ರಮ್ಯಾ ಬಾರ್ನಾ . [೧೦] ಚಿತ್ರದ ಚಿತ್ರೀಕರಣ ಮಾರ್ಚ್ 3 ರಂದು ಸಕಲೇಶಪುರದಲ್ಲಿ ಪ್ರಾರಂಭವಾಯಿತು,ಚಿತ್ರವು ಅಕ್ಟೋಬರ್ 6, 2011 ರಂದು ಬಿಡುಗಡೆಯಾಗುತ್ತಿದೆ. [೧೧] [೧೨] ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ ಮತ್ತು ಉಡುಪಿಯ ಸುತ್ತ ಮುತ್ತ ಚಿತ್ರೀಕರಣ ನಡೆಯಿತು. [೧೩]
ಉಲ್ಲೇಖಗಳು
ಬದಲಾಯಿಸಿ- ↑ "ಚಿತ್ರಕಥೆ ರಚಿಸುವಲ್ಲಿ ನಿರ್ದೇಶಕರಿಗೆ ಸೂರಿ ಸಾಥ್ ನೀಡಿದ್ದಾರೆ". Archived from the original on 29 ಸೆಪ್ಟೆಂಬರ್ 2011. Retrieved 22 ಜುಲೈ 2011.
- ↑ ೨.೦ ೨.೧ "Puneet Rajkumar's Paramathma creates history". Archived from the original on 2021-07-10. Retrieved 2019-10-20.
- ↑ "The Hindu – In the name of God". Archived from the original on 2010-12-07. Retrieved 2019-10-20.
- ↑ "The Hindu – Deepa Sannidhi in "Paramatma" of Puneet Rajkumar". Archived from the original on 2015-02-14. Retrieved 2019-10-20.
- ↑ "Rock and Muni – Relatives at the Helm". Archived from the original on 2011-09-27. Retrieved 2019-10-20.
- ↑ "Chitraloka – Paramathma Gets U certificate – Release On Oct 6"
- ↑ "'Paramathma will be Puneet's best film' – The Times of India". Archived from the original on 2012-04-19. Retrieved 2019-10-20.
- ↑ Paramathma strikes gold – Bangalore Mirror
- ↑ "Yogaraj-Puneet first combo movie titled Paramathma". Archived from the original on 2012-07-10. Retrieved 2019-10-20.
- ↑ "Three heroines for Parmathma". Archived from the original on 2011-10-08. Retrieved 2019-10-20.
- ↑ ""Paramathma From March 3rd"". Archived from the original on 2018-02-08. Retrieved 2019-10-20.
- ↑ "Puneeth and Yogaraj Bhat in 'Paramathma'". Archived from the original on 2011-01-10. Retrieved 2019-10-20.
- ↑ "Paramathma has a low key start". Archived from the original on 2011-03-08. Retrieved 2019-10-20.