ಪದ್ಮನಾಭನ್ ಬಲರಾಮ್

ಪದ್ಮನಾಭನ್ ಬಲರಾಮ್ ರವರು ಭಾರತೀಯ ಜೈವಿಕ ತಜ್ಞ ಮತ್ತು ಭಾರತದ ಬೆಂಗಳೂರಿನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ನ ಮಾಜಿ ನಿರ್ದೇಶಕರಾಗಿದ್ದರು. ಅವರು ಪದ್ಮಭೂಷಣ (೨೦೧೪)ರ ಮೂರನೆಯ ಅತ್ಯುನ್ನತ ಭಾರತೀಯ ನಾಗರಿಕ ಗೌರವ ಮತ್ತು TWAS ಪ್ರಶಸ್ತಿಯನ್ನು ಸ್ವೀಕರಿಸಿದ್ದಾರೆ.

ಪದ್ಮನಾಭನ್ ಬಲರಾಮ್
ಕಾರ್ಯಕ್ಷೇತ್ರಬೈಯೊ ಕೆಮಿಸ್ಟ್ರಿ
ಸಂಸ್ಥೆಗಳುಭಾರತೀಯ ವಿಜ್ಞಾನ ಸಂಸ್ಥೆ, ಬೆಂಗಳೂರು
ಅಭ್ಯಸಿಸಿದ ವಿದ್ಯಾಪೀಠಪುಣೆ ವಿಶ್ವವಿದ್ಯಾಲಯ
ಇಂಡಿಯನ್ ಇನ್ಸ್ಟಿ ಟ್ಯೂಟ್ ಆಫ್ ಟೆಕ್ನೊಲೊಜಿ,ಕಾನ್ಪುರ್,
Carnegie Mellon University
ಡಾಕ್ಟರೇಟ್ ಸಲಹೆಗಾರರುAksel A. Bothner-By
ಗಮನಾರ್ಹ ಪ್ರಶಸ್ತಿಗಳುPadma Bhushan[]

ಪದ್ಮನಾಭನ್ ಬಲರಾಮ್ ರವರು ೧೯ ಫೆಬ್ರವರಿ ೧೯೪೯ ರಂದು ಜನಿಸಿದರು.[]

ಶಿಕ್ಷಣ

ಬದಲಾಯಿಸಿ

ಬಲರಾಮ್ ರವರು ಪುಣೆ ವಿಶ್ವವಿದ್ಯಾನಿಲಯದ ಫೆರ್ಗುಸನ್ ಕಾಲೇಜಿನಿಂದ ರಸಾಯನಶಾಸ್ತ್ರದಲ್ಲಿ ಪದವಿ ಪಡೆದ ನಂತರ ಕಾರ್ನೆಗೀ ಮೆಲಾನ್ ವಿಶ್ವವಿದ್ಯಾನಿಲಯದಿಂದ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ,ಕಾನ್ಪುರಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದರು. ಹಾಗೂ ಅವರು ತಮ್ಮ ಪಿ.ಎಚ್‌ಡಿ. ಪದವಿಯನ್ನು ಕಾರ್ನೆಗೀ ಮೆಲಾನ್ ವಿಶ್ವವಿದ್ಯಾನಿಲಯದಲ್ಲಿ ಪಡೆದರು. ಅವರು ಪಿ.ಎಚ್‌ಡಿ.ಸಮಯದಲ್ಲಿ ನಕಾರಾತ್ಮಕ ಪರಮಾಣು ಓವರ್ ಹೌಸರ್ ಪರಿಣಾಮ ಸಿಗ್ನಲ್ ಗಳನ್ನು ಬೃಹತ್ ಕಣಗಳ ರೂಪಾಂತರ ತನಿಖೆಗಳಂತೆ ಅಧ್ಯಯನ ಮಾಡಿದರು. ವುಡ್ವರ್ಡ್ ಪೋಸ್ಟ್ ಡಾಕ್ನಂತೆ ,ಬಲರಾಮ್ ರವರು ಪ್ರತಿಜೀವಕ ಎರಿಥ್ರೊಮೈಸಿನ್ ಸಂಶ್ಲೇಷಣೆಯಲ್ಲಿ ಕೆಲಸ ಮಾಡಿದರು.

ಸಂಶೋಧನೆಗಳು

ಬದಲಾಯಿಸಿ

ಬಲರಾಮ್ ರವರ ಸಂಶೋಧನಾ ಕ್ಷೇತ್ರವು ವಿನ್ಯಾಸ ಮತ್ತು ನೈಸರ್ಗಿಕ ಪೆಪ್ಟೈಡ್ ಗಳ ರಚನೆ ,ರೂಪಾಂತರ ಮತ್ತು ಜೈವಿಕ ಚಟುವಟಿಕೆಗಳ ತನಿಖೆಯಾಗಿದೆ.ಇದನ್ನು ಮಾಡಲು ,ಎಕ್ಸ್ -ರೇ ಸ್ಫಟಿಕಶಾಸ್ತ್ರದ ಜೊತೆಗೆ ಅವರು ನ್ಯೂಕ್ಲಿಯರ್ ಮ್ಯಾಗ್ನೆಟಿಕ್ ರೆಸೋನೆನ್ಸ್ ಸ್ಪೆಕ್ಟ್ರೋಸ್ಕೋಪಿ ,ಇನ್‌ಫ್ರಾರೆಡ್ ಸ್ಪೆಕ್ಟ್ರೋಸ್ಕೋಪಿ ಮತ್ತು ವೃತ್ತಾಕಾರದ ಡಿಕ್ರೊಯಿಸಮ್ ನಂತಹ ತಂತ್ರಗಳನ್ನು ವ್ಯಾಪಕವಾಗಿ ಬಳಸಿದ್ದಾರೆ. ವಿನ್ಯಾಸಗೊಳಿಸಿದ ಪೆಪ್ಟೈಡ್ ಗಳ ಮಡಿಸುವ ಮತ್ತು ರೂಪಾಂತರಗಳನ್ನು ಪ್ರಭಾವಿಸುವ ಅಂಶಗಳ ಮೌಲ್ಯಮಾಪನಕ್ಕೆ ಅವರು ಪ್ರಮುಖ ಕೊಡುಗೆ ನೀಡಿದ್ದಾರೆ ಮತ್ತು ಹೆಲಿಕ್ಸ್ ,ಬೀಟಾ ತಿರುವುಗಳು ಮತ್ತು ಹಾಳೆಗಳು ಮುಂತಾದ ದ್ವಿತೀಯ ರಚನಾತ್ಮಕ ಲಕ್ಷಣಗಳ ರಚನೆಯಲ್ಲಿ ಪ್ರಮುಖ ಪಾತ್ರವಹಿಸುವ ರಚನಾತ್ಮಕ ಅಂಶಗಳನ್ನು ತನಿಖೆ ಮಾಡಿದ್ದಾರೆ. ಬಲರಾಮ್ ರವರ ಸಹಯೋಗಿಯಾಗಿದ್ದ ಇಸಾಬೆಲ್ಲಾ ಕರ್ಲೆ ಜೊತೆಯಲ್ಲಿ ಅವರು ಆಲ್ಫಾ-ಅಮೈನೋ ಐಸೋಬ್ಯೂಟ್ರಿಕ್ ಆಮ್ಲವನ್ನು ಹೆಲಿಸಿಟಿಯನ್ನು ಉಂಟುಮಾಡುವ ಮತ್ತು ಉಳಿಸುಕೊಳ್ಳುವಲ್ಲಿ ಬಳಸುತ್ತಾರೆ ಮತ್ತು ಪೆಪ್ಟೈಡ್ ಅನುರೂಪತೆಯನ್ನು ನಿರ್ಭಂದಿಸುತ್ತಾರೆ. ಅವರು ೪೦೦ ಕ್ಕಿಂತಲೂ ಹೆಚ್ಚು ಸಂಶೋಧನಾ ಲೇಖನಗಳನ್ನು ಬರೆದಿದ್ದಾರೆ ಮತ್ತು ಭಾರತೀಯ ರಾಷ್ಟ್ರೀಯ ವಿಜ್ಞಾನ ಅಕಾಡೆಮಿಯ ಸಹವರ್ತಿಯಾಗಿದ್ದಾರೆ. ಅವರು ಜೂನ್ ೨೦೧೩ ರವರೆಗೂ ಕರೆಂಟ್ ಸೈನ್ಸ್ ಎಂಬ ನಿಯತಕಾಲಿಕದ ಸಂಪಾದಕರಾಗಿದ್ದರು.[]

ಗೌರವಗಳು ಮತ್ತು ಪಡೆದ ಸ್ಥಾನಗಳು

ಬದಲಾಯಿಸಿ
  • ಉಪನ್ಯಾಸಕ, ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್, ೧೯೭೩-೧೯೭೭.[]
  • ಸಹಾಯಕ ಪ್ರೊಫೆಸರ್ ,ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್, ೧೯೭೭-೧೯೮೨.
  • ಅಸೋಸಿಯೇಟ್ ಪ್ರೊಫೆಸರ್,ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್, ೧೯೮೨-೧೯೮೫.
  • ಪ್ರೊಫೆಸರ್ ,ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ,೧೯೮೬.
  • ಆಸ್ಟ್ರಾ ಪ್ರೊಫೆಸರ್ ಆಫ್ ಬಯೋಲಾಜಿಕಲ್ ಸೈನ್ಸಸ್, ೧೯೯೭-೨೦೦೦.
  • ಚೇರ್ಮನ್ ,ಮಾಲಿಕ್ಯುಲರ್ ಬಯೋ ಫಿಸಿಕ್ಸ್ ಯುನಿಟ್ ,೧೯೯೫-೨೦೦೦(ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್).
  • ಅಧ್ಯಕ್ಷರು, ಜೈವಿಕ ವಿಜ್ಞಾನ ವಿಭಾಗ ,೨೦೦೦-೨೦೦೫(ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್).
  • ನಿರ್ದೇಶಕ, ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ,೨೦೦೫.

ಪ್ರಸ್ತುತ ಸಂಪಾದಕರು/ಎಡಿಟೋರಿಯಲ್ ಬೋರ್ಡ್ ಸದಸ್ಯತ್ವ ಗಳು

ಬದಲಾಯಿಸಿ
  • ಪ್ರಸ್ತುತ ವಿಜ್ಞಾನ, ಸಂಪಾದಕ ೧೯೯೫- ಮುಂದುವರಿದ ರಸಾಯನಶಾಸ್ತ್ರ ,ಜೀವರಸಾಯನಶಾಸ್ತ್ರ: ಎ ಯುರೋಪಿಯನ್ ಜರ್ನಲ್ ಆಫ್ ಕೆಮಿಕಲ್ ಬಯಾಲಜಿ ೨೦೦೦-(ಸಂಪಾದಕೀಯ ಸಲಹಾ ಮಂಡಳಿ ).
  • ಬಯೋಪಾಲಿಮರ್‌ಗಳು (ಪೆಪ್ಟೈಡ್ ಸೈನ್ಸ್) ೨೦೦೪,ಪ್ರೋಟೀನ್ ಎಂಜಿನಿಯರಿಂಗ್ ,ವಿನ್ಯಾಸ ಮತ್ತು ಆಯ್ಕೆ ೨೦೦೪. []

ಹಿಂದಿನ ಸಂಪಾದಕರು/ಎಡಿಟೋರಿಯಲ್ ಬೋರ್ಡ್ ಸದಸ್ಯತ್ವ ಗಳು

ಬದಲಾಯಿಸಿ
  • ಜರ್ನಲ್ ಆಫ್ ಪೆಪ್ಟೈಡ್ ರಿಸರ್ಚ್ ,೧೯೯೭.
  • ಜರ್ನಲ್ ಆಫ್ ಪೆಪ್ಟೈಡ್ ರಿಸರ್ಚ್ ,೧೯೯೭.
  • ಇಂಡಿಯನ್ ಜರ್ನಲ್ ಆಫ್ ಕೆಮಿಸ್ಟ್ರಿ ವಿಭಾಗ ಬಿ.,೧೯೮೫-೧೯೯೧.
  • ಇಂಡಿಯನ್ ಜರ್ನಲ್ ಆಫ್ ಬಯೋ ಕೆಮಿಸ್ಟ್ರಿ ಮತ್ತು ಬಯೋ ಫಿಸಿಕ್ಸ್ ,೧೯೮೯-೧೯೯೧.
  • ಕರೆಂಟ್ ಸೈನ್ಸ್ ,ಸಂಪಾದಕೀಯ ಸಮಿತಿ, ೧೯೯೧-೧೯೯೪.
  • ಪ್ರೊಸೀಡಿಂಗ್ಸ್,ಇಂಡಿಯನ್ ನ್ಯಾಷನಲ್ ಸೈನ್ಸ್ ಅಕಾಡೆಮಿ ,ವಿಭಾಗ ಬಿ.,೧೯೮೫-೧೯೯೦.
  • ಪ್ರೊಸೀಡಿಂಗ್ಸ್ ಆಫ್ ಇಂಡಿಯನ್ ಅಕಾಡೆಮಿ ಆಫ್ ಸೈನ್ಸಸ್, ಕೆಮಿಕಲ್ ಸೈನ್ಸ್,೧೯೮೦-೧೯೮೨.
  • ಅಸೋಸಿಯೇಟ್ ಎಡಿಟರ್ ,ಇಂಡಿಯನ್ ಜರ್ನಲ್ ಆಫ್ ಕೆಮಿಕಲ್ ಎಜುಕೇಶನ್, ೧೯೭೭-೧೯೮೨.[]

ಪ್ರಕಟಣೆಗಳು

ಬದಲಾಯಿಸಿ
  • ಪ್ರಕಟಣೆಯ ಸಂಖ್ಯೆ: ೪೦೨,ಈ ಪ್ರಕಟಣೆಯು ೪ ಪುಸ್ತಕ ಅಧ್ಯಾಯಗಳನ್ನು ಒಳಗೊಂಡಿವೆ.[]

ಪ್ರಶಸ್ತಿಗಳು

ಬದಲಾಯಿಸಿ
  • ೨೦೧೪ ರಲ್ಲಿ ಪದ್ಮಭೂಷಣ ಪ್ರಶಸ್ತಿ.[]
  • ೧೯೯೪ ರಲ್ಲಿ ಟಿ.ಡಬ್ಲ್ಯೂ.ಎ.ಎಸ್ ಪ್ರಶಸ್ತಿ.[]

ಉಲ್ಲೇಖಗಳು

ಬದಲಾಯಿಸಿ
  1. Receives Padma Bhushan
  2. ಜನನ[ಶಾಶ್ವತವಾಗಿ ಮಡಿದ ಕೊಂಡಿ]
  3. ಸಂಶೋಧನೆ[ಶಾಶ್ವತವಾಗಿ ಮಡಿದ ಕೊಂಡಿ]
  4. ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್[ಶಾಶ್ವತವಾಗಿ ಮಡಿದ ಕೊಂಡಿ]
  5. revolvy
  6. http://mbu.iisc.ernet.in/~pbgrp/pbcv.html
  7. [೧][ಶಾಶ್ವತವಾಗಿ ಮಡಿದ ಕೊಂಡಿ]
  8. ಪದ್ಮಭೂಷಣ ಪ್ರಶಸ್ತಿ
  9. TWAS prize