ಪಠ್ಯ ಸಂದೇಶ ರವಾನೆ ಅಥವಾ ಟೆಕ್ಸ್ಟಿಂಗ್ ಸ್ಥಿರ ದೂರವಾಣಿ ಅಥವಾ ಮೊಬೈಲ್ ಫೋನ್ ನಡುವೆ ಅಥವಾ ಜಾಲದಲ್ಲಿ ಸ್ಥಿರ ಅಥವಾ ಸಂಚಾರಿ ಉಪಕರಣಗಳ ನಡುವೆ ಸಂಕ್ಷಿಪ್ತ ಲಿಖಿತ ಸಂದೇಶಗಳನ್ನು ವಿನಿಮಯ ಮಾಡಿಕೊಳ್ಳುವುದಕ್ಕೆ ಸಂಬಂಧಿಸಿದೆ. ಮೂಲ ಪದವು(ಕೆಳಗೆ ನೋಡಿ) ರೇಡಿಯೊ ಟೆಲಿಗ್ರಫಿಯಿಂದ ಹುಟ್ಟಿದ ಶಾರ್ಟ್ ಮೆಸೇಜ್ ಸರ್ವೀಸ್(SMS ) ಬಳಸಿಕೊಂಡು ಕಳಿಸಿದ ಸಂದೇಶಗಳನ್ನು ಉಲ್ಲೇಖಿಸುವುದರ ಮೂಲಕ ಜನ್ಯವಾಗಿದೆ. ಇದು ನಂತರ ಚಿತ್ರ, ವಿಡಿಯೊ ಮತ್ತು ಶಬ್ದ ವಸ್ತುವನ್ನು (MMS ಸಂದೇಶಗಳು ಎಂದು ಹೆಸರಾಗಿದೆ)ಹೊಂದಿರುವ ಸಂದೇಶಗಳಿಗೆ ಆಗಿನಿಂದ ವಿಸ್ತರಿಸಿದೆ. ಪಠ್ಯ ಸಂದೇಶವನ್ನು ಕಳಿಸಿದವರನ್ನು ಟೆಕ್ಸ್ಟರ್ ಎಂದು ಕರೆಯಲಾಗುತ್ತದೆ. ಸೇವೆಯು ಸ್ವತಃ ಪ್ರದೇಶವನ್ನು ಅವಲಂಬಿಸಿ ಭಿನ್ನ ಆಡುಮಾತುಗಳನ್ನು ಹೊಂದಿದೆ: ಇದನ್ನು ಉತ್ತರ ಅಮೆರಿಕ, ಭಾರತ, ಆಸ್ಟ್ರೇಲಿಯ, ಫಿಲಿಪ್ಪೀನ್ಸ್ ಮತ್ತು ಯುನೈಟೆಡ್ ಕಿಂಗ್ಡಮ್‌ನಲ್ಲಿ ಸರಳವಾಗಿ ಟೆಕ್ಸ್ಟ್ ಎಂದು ಉಲ್ಲೇಖಿಸಲಾಗುತ್ತದೆ. ಯುರೋಪ್‌ನ ಬಹುತೇಕ ಭಾಗದಲ್ಲಿ SMS ಎಂದೂ, ಮತ್ತು TMS or SMS ಎಂದು ಮಧ್ಯ ಪ್ರಾಚ್ಯ ಮತ್ತು ಏಷ್ಯಾದಲ್ಲಿ ಉಲ್ಲೇಖಿಸಲಾಗುತ್ತದೆ.

LG enV (VX9900)ನಲ್ಲಿ ಪಠ್ಯ ಸಂದೇಶವನ್ನು ಬೆರಳಚ್ಚು ಮಾಡುತ್ತಿರುವ ಬಳಕೆದಾರ

ಮೊಬೈಲ್ ದೂರವಾಣಿಗಳಿಗೆ ಉತ್ಪನ್ನಗಳನ್ನು ಮತ್ತು ಸೇವೆಗಳ ಆದೇಶ ನೀಡುವುದು ಅಥವಾ ಸ್ಪರ್ಧೆಗಳಲ್ಲಿ ಭಾಗವಹಿಸುವುದು ಮುಂತಾದ ಸ್ವಯಂಚಾಲಿತ ಸೇವೆಗಳ ಜತೆ ಪರಸ್ಪರ ಕ್ರಿಯೆ ನಡೆಸಲು ಪಠ್ಯ ಸಂದೇಶಗಳನ್ನು ಬಳಸಬಹುದಾಗಿದೆ. ಸಾಮಾನ್ಯವಾಗಿ ಅಂಚೆ, ಈ ಮೇಲ್ ಅಥವಾ ವಾಯ್ಸ್‌ಮೇಲ್ ಮೂಲಕ ಕಳಿಸಬಹುದಾದ ಪ್ರಚಾರಗಳು, ಪಾವತಿ ಕಡೆ ದಿನಾಂಕಗಳು ಮತ್ತಿತರ ಪ್ರಕಟಣೆಗಳ ಬಗ್ಗೆ ಮೊಬೈಲ್ ಫೋನ್ ಬಳಕೆದಾರರಿಗೆ ಸೂಚಿಸಲು ಜಾಹೀರಾತುದಾರರು ಮತ್ತು ಸೇವೆ ನೀಡುವವರು ಪಠ್ಯಗಳನ್ನು ಬಳಸುತ್ತಾರೆ.

ನೇರ ಮತ್ತು ಸಂಕ್ಷಿಪ್ತ ವ್ಯಾಖ್ಯಾನದಲ್ಲಿ ದೂರವಾಣಿಗಳು ಅಥವಾ ಮೊಬೈಲ್ ದೂರವಾಣಿಗಳಲ್ಲಿ ಕಳಿಸುವ ಪಠ್ಯ ಸಂದೇಶಗಳು ವರ್ಣಮಾಲೆಯ ಎಲ್ಲ ೨೬ ಅಕ್ಷರಗಳನ್ನು ಮತ್ತು ೧೦ ಅಂಕಿಗಳನ್ನು ಹೊಂದಿರಬೇಕು, ಅಕ್ಷರಸಂಖ್ಯಾಯುಕ್ತ ಸಂದೇಶಗಳು ಅಥವಾ ಪಠ್ಯವನ್ನು ಟೆಕ್ಟ್ಸರ್‌ ಕಳಿಸ ಬೇಕು ಅಥವಾ ಟೆಕ್ಸ್ಟೀ ಸ್ವೀಕರಿಸಬೇಕು.[]

ಇತಿಹಾಸ

ಬದಲಾಯಿಸಿ

SMS ಸಂದೇಶ ರವಾನೆಯನ್ನು ಮೊದಲಿಗೆ ೧೯೯೨ರ ಡಿಸೆಂಬರ್‌ನಲ್ಲಿ ಬಳಸಲಾಯಿತು. ೨೨ ವರ್ಷ ವಯಸ್ಸಿನ ಸೆಮಾ ಗ್ರೂಪ್[](ಈಗ ಏರ್‌ವೈಡ್ ಸೊಲ್ಯೂಷನ್ಸ್)[] ನ ಟೆಸ್ಟ್ ಎಂಜಿನಿಯರ್ ನೇಲ್ ಪಾಪ್‌ವರ್ರ್ತ್ ವೊಡಾಫೋನ್ ಜಾಲದ ಮೂಲಕ ರಿಚರ್ಡ್ ಜಾರ್ವಿಸ್ ಅವರ ದೂರವಾಣಿಗೆ ಮೆರಿ ಕ್ರಿಸ್‌ಮಸ್ ಪಠ್ಯ ಸಂದೇಶವನ್ನು ಕಳಿಸಲು ವೈಯಕ್ತಿಕ ಕಂಪ್ಯೂಟರ್ ಬಳಸಿಕೊಂಡರು.[]

ಸ್ಟಾಂಡರ್ಡ್ SMSಸಂದೇಶ ರವಾನೆಯು ೧೪೦ ಬೈಟ್ಸ್‌ಗಳಿಗೆ ಸೀಮಿತವಾಗಿತ್ತು. ಇದು ಇಂಗ್ಲೀಷ್ ವರ್ಣಮಾಲೆಯ ೧೬೦ ಲಿಪಿಗಳಿಗೆ ಅನುವಾದವಾಗುತ್ತದೆ.[] ಪಠ್ಯ ಸಂದೇಶ ರವಾನೆಯ ಆರಂಭಿಕ ಬೆಳವಣಿಗೆ ನಿಧಾನವಾಗಿದ್ದು, ಗ್ರಾಹಕರು ೧೯೯೫ರಲ್ಲಿ ಪ್ರತಿ GSM ಗ್ರಾಹಕರಿಗೆ ಪ್ರತೀ ತಿಂಗಳಿಗೆ ಸರಾಸರಿ ೦ .೪ ಸಂದೇಶವನ್ನು ಕಳಿಸುತ್ತಿದ್ದರು.[] SMSನ ನಿಧಾನ ಬಳಕೆಗೆ ಸೇವಾಕರ್ತೃಗಳು ದರವಿಧಿಸುವಿಕೆಯ ವ್ಯವಸ್ಥೆಯನ್ನು ಅಳವಡಿಸುವುದರಲ್ಲಿ ತೋರಿದ ನಿಧಾನಗತಿ, ಅದರಲ್ಲೂ ಪೂರ್ವಪಾವತಿ ಗ್ರಾಹಕರಿಗೆ ಅಳವಡಿಸುವುದರಲ್ಲಿ ತೋರಿದ ನಿಧಾನಗತಿ ಹಾಗೂ ಹ್ಯಾಂಡ್‌ಸೆಟ್‌ಗಳಲ್ಲಿನ SMSC ಸಜ್ಜಿಕೆಗಳನ್ನು ಬದಲಿಸಿ ಇತರೆ ಸೇವಾಕರ್ತೃಗಳ SMSCಗಳಿಗೆ ಬದಲಿಸುವುದು ಸಾಧ್ಯವಿದ್ದುದರಿಂದ ಆಗುತ್ತಿದ್ದ ದರವಿಧಿಸುವಿಕೆ/ಬಿಲ್ಲಿಂಗ್‌ ವಂಚನೆಯನ್ನು ತಡೆಗಟ್ಟುವಲ್ಲಿ ಆದ ವಿಳಂಬ ಒಂದು ಕಾರಣ[30]. ಕಾಲಾವಧಿಯಲ್ಲಿ ಈ ವಿಷಯವನ್ನು SMSC ಯಲ್ಲಿ ಬಿಲ್ಲಿಂಗ್ ಬದಲಿಗೆ ಸ್ವಿಚ್ ಬಿಲ್ಲಿಂಗ್ ಮೂಲಕ ಮತ್ತು SMSC ಮೂಲಕ ವಿದೇಶಿ ಮೊಬೈಲ್ ಬಳಕೆದಾರರು ಸಂದೇಶ ಕಳಿಸುವುದನ್ನು ತಡೆಯಲು ಅವಕಾಶ ನೀಡುವ SMSC ಯ ಹೊಸ ಲಕ್ಷಣಗಳ ಮೂಲಕ ನಿವಾರಿಸಲಾಯಿತು.

SMS ವ್ಯಾಪಕ ವ್ಯಾಪ್ತಿಯ ಜಾಲಗಳ ಮೂಲಕ ೩Gಜಾಲಗಳು ಸೇರಿದಂತೆ ಲಭ್ಯವಿದೆ. ಆದಾಗ್ಯೂ ಎಲ್ಲಾ ಸಂದೇಶ ವ್ಯವಸ್ಥೆಗಳೂ SMSಅನ್ನು ಬಳಸುವುದಿಲ್ಲ, ಜಪಾನ್‌ನ ಎರಡು ವ್ಯವಸ್ಥೆಗಳಾದ J-ದೂರವಾಣಿಯ ಸ್ಕೈಮೇಲ್ ಮತ್ತು NTT ಡೊಕೊಮೊನ ಶಾರ್ಟ್ ಮೇಲ್‌ನಂತಹ ಪರಿಕಲ್ಪನೆಯ ಗಮನಾರ್ಹ ಬದಲಿ ಅನುಷ್ಠಾನಗಳೂ ಒಳಗೊಂಡಿವೆ. ದೂರವಾಣಿಗಳಿಂದ ಈ ಮೇಲ್ ಸಂದೇಶಗಳನ್ನು ಕಳುಹಿಸುವುದನ್ನು ಜನಪ್ರಿಯಗೊಳಿಸಿದ NTT ಡೊಕೊಮೊನ ಐ-ಮೋಡ್‌ ಮತ್ತು RIM ಬ್ಲಾಕ್‌ಬೆರಿಗಳೂ ಸಹಾ TCP/IPಯ ಮೇಲೆ SMTPನಂತಹ ಮಾನಕ ಅಂಚೆ ಪ್ರೋಟೋಕಾಲ್‌ಗಳನ್ನು ಸಾಮಾನ್ಯವಾಗಿ ಬಳಸುತ್ತವೆ.

ಇಂದು ಪಠ್ಯ ಸಂದೇಶ ರವಾನೆಯು ಅತ್ಯಂತ ವ್ಯಾಪಕವಾಗಿ ಬಳಕೆಯಾಗುವ ಮೊಬೈಲ್ ದತ್ತಾಂಶ ಸೇವೆಯಾಗಿದ್ದು, ವಿಶ್ವಾದ್ಯಂತ ಎಲ್ಲ ೭೪% ಮೊಬೈಲ್ ಫೋನ್ ಬಳಕೆದಾರರೊಂದಿಗೆ, ಅಥವಾ ೩.೩ ಶತಕೋಟಿ ಫೋನ್ ಗ್ರಾಹಕರ ಪೈಕಿ ೨.೪ ಶತಕೋಟಿ ಗ್ರಾಹಕರು ೨೦೦೭ರ ಕೊನೆಯಲ್ಲಿ ಶಾರ್ಟ್ ಮೆಸೇಜ್ ಸರ್ವೀಸ್‌ನ ಸಕ್ರಿಯ ಬಳಕೆದಾರರಾಗಿದ್ದಾರೆ. ಫಿನ್ಲೆಂಡ್, ಸ್ವೀಡನ್ ಮತ್ತು ನಾರ್ವೆ ರಾಷ್ಟ್ರಗಳಲ್ಲಿ ಶೇಕಡ ೮೫ರಷ್ಟು ಜನಸಂಖ್ಯೆಯು SMS ಬಳಸುತ್ತದೆ. ಯುರೋಪಿನ ಸರಾಸರಿ ಸುಮಾರು ಶೇಕಡ ೮೦, ಉತ್ತರ ಅಮೆರಿಕವು ೨೦೦೮ರ ಅಂತ್ಯದಲ್ಲಿ ಶೇಕಡ ೬೦ SMS ನ ಸಕ್ರಿಯ ಬಳಕೆದಾರರನ್ನು ಶೀಘ್ರವಾಗಿ ಹೊಂದಿದೆ. ಮೊಬೈಲ್ ಫೋನ್ ಬಳಕೆದಾರರಲ್ಲಿ ಸೇವೆಯನ್ನು ಬಳಸಿಕೊಳ್ಳುವ ಅತೀ ದೊಡ್ಡ ಸರಾಸರಿ ಬಳಕೆದಾರರು ಫಿಲಿಪ್ಪೀನ್ಸ್‌‌ನಲ್ಲಿದ್ದು, ಗ್ರಾಹಕರು ಪ್ರತಿ ದಿನ ಸರಾಸರಿ ೨೭ ಪಠ್ಯಗಳನ್ನು ಕಳಿಸುತ್ತಾರೆ.

ಬಳಕೆಗಳು

ಬದಲಾಯಿಸಿ
 
ಮೊಬೈಲ್ ಫೋನ್‌ನಲ್ಲಿ ಇಂಗ್ಲೀಷ್ ಪಠ್ಯ ಸಂದೇಶ ಇಂಟರ್‌ಫೇಸ್

ಖಾಸಗಿ ಮೊಬೈಲ್ ಫೋನ್ ಬಳಕೆದಾರರ ನಡುವೆ ಪಠ್ಯ ಸಂದೇಶ ರವಾನೆಯನ್ನು ಧ್ವನಿ ಕರೆಗಳಿಗೆ ಪರ್ಯಾಯವಾಗಿ ಸಾಮಾನ್ಯವಾಗಿ ಬಳಸಲಾಗುತ್ತದೆ. ಧ್ವನಿ ಸಂಪರ್ಕವು ಅಸಾಧ್ಯವಾದಾಗ ಅಥವಾ ಇಚ್ಛಿತವಲ್ಲದಿದ್ದ ಪರಿಸ್ಥಿತಿಗಳಲ್ಲಿ ಪಠ್ಯ ಸಂದೇಶಗಳನ್ನು ಪರ್ಯಾಯವಾಗಿ ಬಳಸಲಾಗುತ್ತದೆ. ಕೆಲವು ಪ್ರದೇಶಗಳಲ್ಲಿ ಪಠ್ಯ ಸಂದೇಶ ರವಾನೆಯು ಇನ್ನೊಂದು ಮೊಬೈಲ್ ದೂರವಾಣಿಗೆ ಫೋನ್ ಕರೆ ಮಾಡುವುದಕ್ಕಿಂತ ಗಮನಾರ್ಹವಾಗಿ ಅಗ್ಗವಾಗಿದೆ. ಎಲ್ಲ ಕಡೆಯು ಧ್ವನಿ ಕರೆಗಳ ಗಣನೆಗೆ ಬಾರದ ವೆಚ್ಚದ ನಡುವೆಯೂ ಪಠ್ಯ ಸಂದೇಶ ರವಾನೆ ಜನಪ್ರಿಯತೆ ಗಳಿಸಿವೆ. ಕಿರು ಸಂದೇಶ ಸೇವೆಗಳು ವಿಶ್ವಾದಾದ್ಯಂತ ಶೀಘ್ರಗತಿಯಲ್ಲಿ ಬೆಳೆಯುತ್ತಿದೆ.

SMS ವಿಶೇಷವಾಗಿ ಯುರೋಪ್, ಏಷ್ಯಾ(ಜಪಾನ್ ಹೊರತುಪಡಿಸಿ; ಕೆಳಗೆ ನೋಡಿ), ಅಮೆರಿಕ, ಆಸ್ಟ್ರೇಲಿಯ ಮತ್ತು ನ್ಯೂಜಿಲೆಂಡ್‌ನಲ್ಲಿ ಜನಪ್ರಿಯವಾಗಿದ್ದು, ಆಫ್ರಿಕಾದಲ್ಲಿ ಕೂಡ ಪ್ರಭಾವವನ್ನು ಗಳಿಸುತ್ತಿದೆ. ಜನಪ್ರಿಯತೆಯು ಸಾಕಷ್ಟು ಹರವಿನೊಳಗೆ ಬೆಳೆದಿದ್ದು, ಟೆಕ್ಸ್‌ಟಿಂಗ್ ಪದವು(ಕ್ರಿಯಾಪದವಾಗಿ ಬಳಸಲಾಗಿದ್ದು, ಮೊಬೈಲ್ ಫೋನ್ ಬಳಕೆದಾರರು ಕಿರು ಸಂದೇಶಗಳನ್ನು ಒಂದರಿಂದ ಇನ್ನೊಂದಕ್ಕೆ ಕಳಿಸುವ ಕ್ರಿಯೆಯೆಂದು ಅರ್ಥ) ಸಾಮಾನ್ಯ ಶಬ್ದಭಂಡಾರವನ್ನು ಪ್ರವೇಶಿಸಿದೆ. ಯುವ ಏಷ್ಯನ್ನರು SMS ನ್ನು ಅತ್ಯಂತ ಜನಪ್ರಿಯ ಮೊಬೈಲ್ ಫೋನ್ ಬಳಕೆಯೆಂದು ಪರಿಗಣಿಸಿದ್ದಾರೆ.[]

ಚೀನಾದಲ್ಲಿ SMS ಅತ್ಯಂತ ಜನಪ್ರಿಯವಾಗಿದ್ದು, ಸೇವಾ ಕರ್ತೃಗಳಿಗೆ ಗಮನಾರ್ಹ ಲಾಭವನ್ನು ತಂದುಕೊಟ್ಟಿದೆ(೨೦೦೧ರಲ್ಲಿ ೧೮ಶತಕೋಟಿ ಕಿರು ಸಂದೇಶಗಳನ್ನು ಕಳಿಸಲಾಗಿದೆ).[] ಇದು ಫಿಲಿಪ್ಪೀನ್ಸ್‌ನಲ್ಲಿ ಅತ್ಯಂತ ಪ್ರಭಾವಶಾಲಿ ಮತ್ತು ಶಕ್ತಿಶಾಲಿ ಸಾಧನವಾಗಿದ್ದು, ಸರಾಸರಿ ಬಳಕೆದಾರ ಪ್ರತಿ ದಿನ ೧೦-೧೨ಪಠ್ಯ ಸಂದೇಶಗಳನ್ನು ಕಳಿಸುತ್ತಾನೆ. ಫಿಲಿಪ್ಪೀನ್ಸ್ ಒಂದೇ ಸರಾಸರಿ ೪೦೦ದಶಲಕ್ಷ ಪಠ್ಯ ಸಂದೇಶಗಳನ್ನು ಪ್ರತಿ ದಿನ ಕಳಿಸುತ್ತದೆ. ಅಥವಾ ಅಂದಾಜು ವರ್ಷಕ್ಕೆ ೧೪೨ ಶತಕೋಟಿ ಪಠ್ಯ ಸಂದೇಶಗಳನ್ನು ಕಳಿಸುತ್ತದೆ.[] ಯುರೋಪ್ ಮತ್ತು ಚೀನಾ ಮತ್ತು ಭಾರತ ರಾಷ್ಟ್ರಗಳು ಸೇರಿದಂತೆ ಸರಾಸರಿ SMS ವಾರ್ಷಿಕ ಪ್ರಮಾಣಕ್ಕಿಂತ ಹೆಚ್ಚು ಸಂದೇಶಗಳನ್ನು ಅದು ಕಳಿಸುತ್ತದೆ. SMS ಭಾರತದಲ್ಲಿ ಅತ್ಯಂತ ಜನಪ್ರಿಯವಾಗಿದ್ದು, ಯುವಜನರು ಸಾಮಾನ್ಯವಾಗಿ ವಿಪುಲ ಪಠ್ಯ ಸಂದೇಶಗಳನ್ನು ವಿನಿಮಯ ಮಾಡಿಕೊಳ್ಳುತ್ತಾರೆ. ಕಂಪೆನಿಗಳು ಎಚ್ಚರಿಕೆ ಸಂದೇಶಗಳನ್ನು, ಚಲನಚಿತ್ರ ಅಥವಾ ಟಿವಿ ಬಗ್ಗೆ ಮಾಹಿತಿಗಳನ್ನು, ಸುದ್ದಿಗಳನ್ನು ಕ್ರಿಕೆಟ್ ಸ್ಕೋರ್ ಪರಿಷ್ಕರಣೆಗಳನ್ನು, ರೈಲ್ವೆ/ಏರ್‌ಲೈನ್ ಬುಕಿಂಗ್, ಮೊಬೈಲ್ ಬಿಲ್ಲಿಂಗ್ ಮತ್ತು ಬ್ಯಾಂಕಿಂಗ್ ಸೇವೆಗಳನ್ನು SMS ನಲ್ಲಿ ಕಳಿಸುತ್ತವೆ.

ಫಿಲಿಪ್ಪೀನ್ಸ್‌ನಲ್ಲಿ ಟೆಕ್ಸ್ಟಿಂಗ್ ೧೯೯೮ರಲ್ಲಿ ಜನಪ್ರಿಯವಾಯಿತು. ೨೦೦೧ರಲ್ಲಿ, ಪಠ್ಯ ಸಂದೇಶಗಳು ಮಾಜಿ ಫಿಲಿಪ್ಪೀನ್ ಅಧ್ಯಕ್ಷ ಜೋಸೆಫ್ ಎಸ್ಟ್ರಾಡಾ ಪದಚ್ಯುತಿಯಲ್ಲಿ ಮುಖ್ಯ ಪಾತ್ರ ವಹಿಸಿದವು. ಇದೇ ರೀತಿ, ೨೦೦೮ರಲ್ಲಿ ಪಠ್ಯ ಸಂದೇಶ ರವಾನೆಯು SMS ಲೈಂಗಿಕ ಹಗರಣದಲ್ಲಿ ಮಾಜಿ ಡೆಟ್ರಾಯಿಟ್ ಮೇಯರ್ ಕ್ವಾಮೆ ಕಿಲ್ಪಾಟ್ರಿಕ್ ಅವರ ಮೇಲೆ ಕಾನೂನು ಕ್ರಮ ಜರುಗಿಸಲು ಪ್ರಮುಖ ಪಾತ್ರ ವಹಿಸಿತು.[೧೦]

ಕಿರು ಸಂದೇಶಗಳು ನಗರವಾಸಿ ಯುವಜನರಲ್ಲಿ ವಿಶೇಷವಾಗಿ ಜನಪ್ರಿಯವಾಗಿದೆ. ಅನೇಕ ಮಾರುಕಟ್ಟೆಗಳಲ್ಲಿ ಈ ಸೇವೆಯು ತುಲನಾತ್ಮಕವಾಗಿ ಅಗ್ಗದಲ್ಲಿ ಲಭ್ಯವಿದೆ. ಉದಾಹರಣೆಗೆ,ಪ್ರತಿ ನಿಮಿಷಕ್ಕೆ ೦.೪೦ಡಾಲರ್ ಮತ್ತು $೨.೦೦ವೆಚ್ಚವಾಗುವ ಧ್ವನಿ ಕರೆಗಳಿಗೆ ಹೋಲಿಕೆ ಮಾಡಿದರೆ(ಅರ್ಧ ನಿಮಿಷದ ಬ್ಲಾಕ್‌ಗಳಲ್ಲಿ ಸಾಮಾನ್ಯವಾಗಿ ವಿಧಿಸಲಾಗುತ್ತದೆ) ಆಸ್ಟ್ರೇಲಿಯದಲ್ಲಿ ಸಂದೇಶವನ್ನು ಕಳಿಸುವುದಕ್ಕೆ ಸಾಮಾನ್ಯವಾಗಿ A$೦.೨೦ and $೦.೨೫ ವೆಚ್ಚವಾಗುತ್ತದೆ(ಕೆಲವು ಪೂರ್ವಪಾವತಿ ಸೇವೆಗಳು ಅವುಗಳ ಸ್ವಯಂ ದೂರವಾಣಿಗಳ ನಡುವೆ ೦.೦೧ಡಾಲರ್ ವಿಧಿಸುತ್ತದೆ) ಗ್ರಾಹಕರಿಗೆ ಕಡಿಮೆ ವೆಚ್ಚದ ನಡುವೆಯೂ, ಸೇವಾಕರ್ತೃರಿಗೆ ಸೇವೆಯು ಅಪಾರ ಲಾಭದಾಯಕವಾಗಿ ಪರಿಣಮಿಸಿದೆ. ಕೇವಲ ೧೯೦ ಬೈಟ್‌ಗಳ ಸಾಮಾನ್ಯ ಉದ್ದದಲ್ಲಿ(ಪ್ರೋಟೊಕಾಲ್ ಓವರ್‌‍ಹೆಡ್ ಸೇರಿದಂತೆ) ಪ್ರತಿ ನಿಮಿಷಕ್ಕೆ ೩೫೦ಕ್ಕೂ ಹೆಚ್ಚು ಸಂದೇಶಗಳನ್ನು ಸಾಮಾನ್ಯ ಧ್ವನಿ ಕರೆಗಳ ರೀತಿಯಲ್ಲಿ ( (೯ kbit/s)ಒಂದೇ ದತ್ತಾಂಶ ದರದಲ್ಲಿ ರವಾನಿಸಬಹುದು.

ನ್ಯೂಜಿಲೆಂಡ್‌ನಲ್ಲಿ ವೊಡಾಫೋನ್ ಮತ್ತು ಟೆಲಿಕಾಂ NZ ಮುಂತಾದ ಮೊಬೈಲ್ ಸೇವಾ ಕರ್ತೃರು ಪ್ರತಿ ತಿಂಗಳಿಗೆ NZ$೧೦ ವೆಚ್ಚದಲ್ಲಿ ೨೦೦೦ SMSಸಂದೇಶಗಳನ್ನು ಒದಗಿಸುತ್ತಾರೆ. ಈ ಯೋಜನೆಗಳ ಬಳಕೆದಾರರು ಪ್ರತಿ ತಿಂಗಳು ಸರಾಸರಿ ೧೫೦೦SMSಸಂದೇಶಗಳನ್ನು ಕಳಿಸುತ್ತಾರೆ.

ಪಠ್ಯ ಸಂದೇಶ ಕಳಿಸುವಿಕೆ ಅತ್ಯಂತ ಜನಪ್ರಿಯವಾಗಿದ್ದು, ಜಾಹೀರಾತು ಏಜನ್ಸಿಗಳು ಮತ್ತು ಜಾಹೀರಾತುದಾರರು ಪಠ್ಯ ಸಂದೇಶ ಕಳಿಸುವ ವ್ಯವಹಾರಕ್ಕೆ ಇಳಿದಿದ್ದಾರೆ. ದೊಡ್ಡ ಪ್ರಮಾಣದಲ್ಲಿ ಪಠ್ಯ ಸಂದೇಶ ಕಳಿಸುವುದನ್ನು ಒದಗಿಸುವ ಸೇವೆಗಳು ಕ್ಲಬ್‌‌ಗಳು, ಸಂಘಗಳು ಮತ್ತು ಜಾಹೀರಾತುದಾರರಿಗೆ ಜನಪ್ರಿಯ ಮಾರ್ಗವಾಗುತ್ತಿದೆ. ಇದು ಆಯ್ಕೆಮಾಡುವ ಗ್ರಾಹಕರ ಗುಂಪನ್ನು ತಕ್ಷಣವೇ ಮುಟ್ಟುತ್ತದೆ.

ತುರ್ತು ಸೇವೆಗಳು

ಬದಲಾಯಿಸಿ

ಕೆಲವು ರಾಷ್ಟ್ರಗಳಲ್ಲಿ ಪಠ್ಯ ಸಂದೇಶಗಳನ್ನು ತುರ್ತು ಸೇವೆಗಳನ್ನು ಸಂಪರ್ಕಿಸಲು ಬಳಸಬಹುದು. UKಯಲ್ಲಿ ಪಠ್ಯ ಸಂದೇಶಗಳು ತುರ್ತುSMS ಸೇವೆಯಲ್ಲಿ ನೋಂದಣಿ ಮಾಡಿದ ನಂತರ ತುರ್ತು ಸೇವೆಗಳಿಗೆ ಕರೆಕಳುಹಿಸಲು ಬಳಸಬಹುದು. ಈ ಸೇವೆಯನ್ನು ಮುಖ್ಯವಾಗಿ ಅಂಗವೈಕಲ್ಯದ ಕಾರಣದಿಂದ ಅಥವಾ ಧ್ವನಿ ಕರೆ ಮಾಡಲು ಅಸಮರ್ಥರಾದವರಿಗೆ ಗುರಿಇರಿಸಲಾಗಿದೆ. ಆದರೆ ಕಡಿಮೆ ಸಂಕೇತ ಬಲದಿಂದಾಗಿ ಧ್ವನಿ ಕರೆ ಸಾಧ್ಯವಾಗದ ಪ್ರದೇಶಗಳಿಂದ ತುರ್ತು ಸೇವೆಗಳಿಗೆ ಕರೆ ನೀಡಲು[೧೧][೧೨] ಕಾಲ್ನಡಿಗೆಯವರಿಗೆ ಮತ್ತು ಪರ್ವತಾರೋಹಿಗಳಿಗೆ ಸಾಧನವಾಗಿ ಇತ್ತೀಚೆಗೆ ಈ ಸೇವೆ ನೆರವಾಗಿದೆ.

ವಾಣಿಜ್ಯ ಬಳಕೆ

ಬದಲಾಯಿಸಿ

ಕಿರು ಸಂಕೇತಗಳು

ಬದಲಾಯಿಸಿ

ಕಿರು ಸಂಕೇತಗಳು ವಿಶೇಷ ಟೆಲಿಫೋನ್ ಸಂಖ್ಯೆಗಳಾಗಿದ್ದು, ಪೂರ್ಣ ಟೆಲಿಫೋನ್ ಸಂಖ್ಯೆಗಳಿಗಿಂತ ಕಿರಿದಾಗಿದ್ದು, SMS ಮತ್ತು MMS ಸಂದೇಶಗಳನ್ನು ಮೊಬೈಲ್ ಪೋನ್‌ಗಳು ಅಥವಾ ಸ್ಥಿರ ದೂರವಾಣಿಗಳಿಂದ ಕಳಿಸಲು ಬಳಸಬಹುದು. ಎರಡು ವಿಧದ ಕಿರುಸಂಕೇತಗಳಿವೆ: ಡಯಲಿಂಗ್ ಮತ್ತು ಮೆಸೇಜಿಂಗ್.

ಪಠ್ಯ ಸಂದೇಶ ಕಳಿಸುವ ಗೇಟ್‌ವೇ ಪೂರೈಕೆದಾರರು

ಬದಲಾಯಿಸಿ

SMS ಗೇಟ್‌ವೇ ಪೂರೈಕೆದಾರರು ಉದ್ಯಮಗಳು ಮತ್ತು ಮೊಬೈಲ್ ಗ್ರಾಹಕರ ನಡುವೆ SMS ಸಂಚಾರಕ್ಕೆ ಅನುಕೂಲ ಕಲ್ಪಿಸುತ್ತಾರೆ. ಮುಖ್ಯವಾಗಿ ಯೋಜನೆ ನಿರ್ಣಾಯಕ ಸಂದೇಶಗಳು, ಉದ್ಯಮಗಳಲ್ಲಿನ SMS, ವಿಷಯ ಬಟವಾಡೆ ಮತ್ತು ಉದಾಹರಣೆಗೆ TV ಮತದಾನದಂತಹ SMSಗಳನ್ನು ಒಳಗೊಂಡಿರುವ ಮನರಂಜನಾ ಸೇವೆಗಳ ರವಾನೆಗೆ ಕಾರಣಕರ್ತರಾಗಿದ್ದಾರೆ. SMS ಸಂದೇಶ ಕಳಿಸುವ ನಿರ್ವಹಣೆ ಮತ್ತು ವೆಚ್ಚ ಹಾಗು ಪಠ್ಯ ಸಂದೇಶ ಸೇವೆಗಳ ಮಟ್ಟವನ್ನು ಪರಿಗಣಿಸಿ, SMS ಗೇಟ್‌ವೇ ಪೂರೈಕೆದಾರರನ್ನು ಸೆಲ್ ಫೋನ್ ಅಗ್ರೆಗೇಟರ್ಸ್ ಅಥವಾ SS೭ ಪೂರೈಕೆದಾರರು ಎಂದು ವರ್ಗೀಕರಿಸಬಹುದು.

SMS ಸಂದೇಶ ಕಳಿಸುವ ಗೇಟ್‌ವೇ ಪೂರೈಕೆದಾರರು ಮೊಬೈಲ್ (ಮೊಬೈಲ್ ಟರ್ಮಿನೇಟೆಡ್–MT) ಸೇವೆಗಳಿಗೆ ಗೇಟ್‌ವೇ ಪೂರೈಸುತ್ತಾರೆ. ಕೆಲವು ಪೂರೈಕೆದಾರರು ಮೊಬೈಲ್‌-ಟು-ಗೇಟ್‌ವೇ ಪೂರೈಸುತ್ತಾರೆ(ಟೆಕ್ಸ್ಟ್-ಇನ್ ಅಥವಾ ಮೊಬೈಲ್‌‍ ಜನ್ಯ/MO ಸೇವೆಗಳು) ಅನೇಕ ಜನರು ಟೆಕ್ಸ್ಟ್-ಇನ್ ಸೇವೆಗಳನ್ನು ಕಿರುಸಂಕೇತಗಳು ಅಥವಾ ಮೊಬೈಲ್ ಸಂಖ್ಯೆ ವ್ಯಾಪ್ತಿಗಳಲ್ಲಿ ನಿರ್ವಹಿಸುತ್ತಾರೆ ಮತ್ತು ಇತರರು ಕಡಿಮೆ ವೆಚ್ಚದ ಬೌಗೋಳಿಕ ಟೆಕ್ಸ್ಟ್-ಇನ್ ಸಂಖ್ಯೆಗಳನ್ನು ಬಳಸುತ್ತಾರೆ.[೧೩]

ಪ್ರೀಮಿಯಂ ವಿಷಯ

ಬದಲಾಯಿಸಿ

SMS ನ್ನು ವ್ಯಾಪಕವಾಗಿ ಡಿಜಿಟಲ್ ವಿಷಯವನ್ನು ರವಾನಿಸಲು ಬಳಸಲಾಗುತ್ತದೆ. ಉದಾಹರಣೆಗೆ ಸುದ್ದಿಗಳ ಎಚ್ಚರಿಕೆಗಳು, ಹಣಕಾಸಿನ ಮಾಹಿತಿ ಮತ್ತು ಲೋಗೊಗಳು ಮತ್ತು ರಿಂಗ್‌ಟೋನ್‌‌ಗಳ ರವಾನೆಗೆ ಬಳಸಲಾಗುತ್ತದೆ. ಇಂತಹ ಸಂದೇಶಗಳು ಪ್ರೀಮಿಯಂ ದರದ ಕಿರು ಸಂದೇಶಗಳು(PSMS)ಎಂದು ಹೆಸರಾಗಿವೆ. ಗ್ರಾಹಕರು ಈ ಪ್ರೀಮಿಯಂ ವಸ್ತುವನ್ನು ಪಡೆಯಲು ಹೆಚ್ಚುವರಿ ದರವನ್ನು ವಿಧಿಸಲಾಗುತ್ತದೆ. ಈ ಮೊತ್ತವನ್ನು ಸಾಮಾನ್ಯವಾಗಿ ಮೊಬೈಲ್ ಜಾಲ ನಿರ್ವಾಹಕ ಮತ್ತು ಮೌಲ್ಯಾಧಾರಿತ ಸೇವೆ ಪೂರೈಕೆದಾರ (VASP)ರ ನಡುವೆ ಆದಾಯ ಹಂಚಿಕೆ ಅಥವಾ ಸ್ಥಿರ ಸಾರಿಗೆ ಶುಲ್ಕದ ಮೂಲಕ ವಿಭಜಿಸಲಾಗುತ್ತದೆ. ೮೨ASK ಮತ್ತುಎನಿ ಕ್ವಶ್ಚನ್ ಆನ್ಸರ್ಡ್ ಮುಂತಾದ ಸೇವೆಗಳು ತಜ್ಞರು ಮತ್ತು ಸಂಶೋಧಕರಿಂದ ಕೂಡಿದ ಕರೆಗೆ ಸ್ಪಂದಿಸುವ ತಂಡಗಳನ್ನು ಬಳಸಿ ಮೊಬೈಲ್ ಗ್ರಾಹಕರ ಪ್ರಶ್ನೆಗಳಿಗೆ ಶೀಘ್ರ ಪ್ರತಿಕ್ರಿಯೆಗೆ PSMS ಮಾದರಿಯನ್ನು ಬಳಸುತ್ತವೆ.

ಪ್ರೀಮಿಯಂ ಕಿರು ಸಂದೇಶಗಳನ್ನು "ರಿಯಲ್ ವರ್ಲ್ಡ್" ಸೇವೆಗಳಿಗೆ ಹೆಚ್ಚೆಚ್ಚು ಬಳಸಲಾಗುತ್ತದೆ. ಉದಾಹರಣೆಗೆ, ಕೆಲವು ಮಾರಾಟದ ಯಂತ್ರಗಳು ಪ್ರೀಮಿಯಂ ದರದ ಕಿರು ಸಂದೇಶ ಕಳಿಸಿ ಹಣ ಪಾವತಿಗೆ ಅವಕಾಶ ಕಲ್ಪಿಸುತ್ತದೆ. ಇದರಿಂದ ಖರೀದಿಸಿದ ವಸ್ತುವಿನ ಬೆಲೆಯನ್ನು ಬಳಕೆದಾರರ ಫೋನ್ ಬಿಲ್‌ಗೆ ಸೇರಿಸಲಾಗುತ್ತದೆ ಅಥವಾ ಬಳಕೆದಾರರ ಪೂರ್ವಪಾವತಿ ಸಾಲಗಳಿಂದ ಕಳೆಯಲಾಗುತ್ತದೆ. ಇತ್ತೀಚೆಗೆ ಪ್ರೀಮಿಯಂ ಸಂದೇಶ ಕಳಿಸುವ ಕಂಪೆನಿಗಳು ಗ್ರಾಹಕರ ಗುಂಪುಗಳಿಂದ ತೀವ್ರ ಟೀಕೆಗೆ ಗುರಿಯಾಗಿವೆ. ಏಕೆಂದರೆ ಗ್ರಾಹಕರ ದೊಡ್ಡ ಸಂಖ್ಯೆ ಬೃಹತ್ ಮೊತ್ತದ ಫೋನ್ ಬಿಲ್‌ಗಳಿಂದ ಕಂಗೆಟ್ಟಿದ್ದಾರೆ.

ಪಠ್ಯ ಸೇವೆ ಜಾಲತಾಣಗಳ ಆರಂಭದಿಂದ ಮುಕ್ತ ಪ್ರೀಮಿಯಂ ಅಥವಾ ಮಿಶ್ರಣ ಪ್ರೀಮಿಯಂ ವಿಷಯದ ಹೊಸ ವಿಧವು ಹೊಮ್ಮಿದೆ. ಈ ತಾಣಗಳು ನೋಂದಾಯಿತ ಬಳಕೆದಾರರಿಗೆ ಅವರು ಆಸಕ್ತಿ ಹೊಂದಿರುವ ವಸ್ತುಗಳು ಮಾರಾಟದಲ್ಲಿದ್ದಾಗ ಅಥವಾ ಹೊಸ ವಸ್ತುಗಳನ್ನು ಪರಿಚಯಿಸಿದಾಗ ಮುಕ್ತ ಪಠ್ಯ ಸಂದೇಶಗಳನ್ನು ಪಡೆಯಲು ಅವಕಾಶ ನೀಡುತ್ತದೆ.

ಒಳಬರುವ SMS ಗೆ ಪರ್ಯಾಯವು ಸುದೀರ್ಘ ಸಂಖ್ಯೆಗಳನ್ನು ಆಧರಿಸಿದೆ(ಅಂತಾರಾಷ್ಟ್ರೀಯ ಮೊಬೈಲ್ ಸಂಖ್ಯೆ ಸ್ವರೂಪ e.g., +೪೪ ೭೬೨೪ ೮೦೫೦೦೦, ಅಥವಾ ಧ್ವನಿ ಮತ್ತು SMS ನಿಭಾಯಿಸುವ ಬೌಗೋಳಿಕ ಸಂಖ್ಯೆಗಳು ಉದಾ.,೦೧೧೩೩೨೦೩೦೪೦)ಇವನ್ನು ಟಿವಿ ಮತದಾನ, ಉತ್ಪನ್ನ ಪ್ರಚಾರಗಳು ಮತ್ತು ಅಭಿಯಾನಗಳು ಮುಂತಾದ ಅನೇಕ ಬಳಕೆಗಳಲ್ಲಿ SMS ಸ್ವೀಕಾರಕ್ಕಾಗಿ ಕಿರು ಸಂಕೇತಗಳು ಅಥವಾ ಪ್ರೀಮಿಯಂ(ವಿಶೇಷ ಸೇವೆ) ದರದ ಕಿರು ಸಂದೇಶಗಳ ಬದಲಿಗೆ ಬಳಸಬಹುದು.[೧೩] ದೀರ್ಘ ಸಂಖ್ಯೆಗಳು ಅಂತಾರಾಷ್ಟ್ರೀಯವಾಗಿ ಲಭ್ಯವಿದ್ದು, ಅನೇಕ ಉದ್ಯಮ/ಬ್ರಾಂಡ್‌ಗಳಲ್ಲಿ ಹಂಚಿಕೆಯಾಗಿರುವ ಕಿರುಸಂಕೇತಗಳ ರೀತಿಯಲ್ಲಿಲ್ಲದೇ, ಉದ್ಯಮಗಳಿಗೆ ತಮ್ಮದೇ ಆದ ಸಂಖ್ಯೆಗಳನ್ನು ಹೊಂದಲು ಅನುವು ಮಾಡಿಕೊಡುತ್ತವೆ. ಇವುಗಳೊಂದಿಗೆ ದೀರ್ಘ ಸಂಖ್ಯೆಗಳು ವಿಶೇಷಸೇವೆ-ರಹಿತ ಸ್ಥಳೀಯ ಸಂಖ್ಯೆಗಳಾಗಿರುತ್ತವೆ.

ವ್ಯವಹಾರದಲ್ಲಿ

ಬದಲಾಯಿಸಿ

ಪಠ್ಯ ಸಂದೇಶ ರವಾನೆಯ ಬಳಕೆಯು ಉದ್ಯಮದ ಉದ್ದೇಶಗಳಲ್ಲಿ ೨೦೦೦ದಶಕದ ಮಧ್ಯಾವಧಿಯಲ್ಲಿ ಗಮನಾರ್ಹವಾಗಿ ಬೆಳೆದಿದೆ. ಕಂಪೆನಿಗಳು ಸ್ಪರ್ಧಾತ್ಮಕ ಅನುಕೂಲಗಳನ್ನು ಬಯಸಿದ್ದರಿಂದ ಅನೇಕ ನೌಕರರು ಹೊಸ ತಂತ್ರಜ್ಞಾನಕ್ಕೆ, ಸಹಯೋಗದ ಬಳಕೆಗಳು, SMSಮುಂತಾದ ಸಂದೇಶಗಳು, ದಿಢೀರ್ ಸಂದೇಶಗಳು ಮತ್ತು ಮೊಬೈಲ್ ಸಂಪರ್ಕಗಳತ್ತ ತಿರುಗಿದ್ದಾರೆ. ಪಠ್ಯ ಸಂದೇಶ ಕಳಿಸುವ ಕೆಲವು ಪ್ರಾಯೋಗಿಕ ಬಳಕೆಗಳು ವಸ್ತು ರವಾನೆ ಅಥವಾ ಇತರೆ ಕೆಲಸಗಳ ದೃಢೀಕರಣಕ್ಕೆ SMSಸಂಕ್ಷಿಪ್ತ ರೂಪವು ಸೇರಿದೆ. ಸೇವೆ ಪೂರೈಕೆದಾರ ಮತ್ತು ಗ್ರಾಹಕನ ನಡುವೆ ತಕ್ಷಣದ ಸಂವಹನಕ್ಕೆ(ಉದಾಹರಣೆಗೆ ಶೇರು ದಳ್ಳಾಳಿ ಮತ್ತು ಹೂಡಿಕೆದಾರ)ಮತ್ತು ಎಚ್ಚರಿಕೆ ಸಂದೇಶಗಳನ್ನು ಕಳಿಸುವುದು ಒಳಗೊಂಡಿದೆ. ಅನೇಕ ವಿಶ್ವವಿದ್ಯಾನಿಲಯಗಳು ವಿದ್ಯಾರ್ಥಿಗಳಿಗೆ ಪಠ್ಯ ಸಂದೇಶಗಳನ್ನು ಮತ್ತು ಬೋಧಕ ವರ್ಗಕ್ಕೆ ಕ್ಯಾಂಪಸ್ ಎಚ್ಚರಿಕೆಗಳನ್ನು ಕಳಿಸುವ ವ್ಯವಸ್ಥೆ ಅಳವಡಿಸಿವೆ. ಇದಕ್ಕೆ ಒಂದು ಉದಾಹರಣೆ ಪೆನ್ ಸ್ಟೇಟ್.[೧೪]

ಪಠ್ಯ ಸಂದೇಶ ಕಳಿಸುವುದು ವ್ಯವಹಾರದಲ್ಲಿ ಸಂಖ್ಯಾವೃದ್ಧಿಯಾದರೂ ,ಅದರ ಬಳಕೆಯನ್ನು ನಿರ್ವಹಿಸುವ ನಿಬಂಧನೆಗಳೂ ವೃದ್ಧಿಯಾಗಿವೆ. ಸ್ಟಾಕ್‌ಗಳು, ಈಕ್ವಿಟಿಗಳು ಮತ್ತು ಭದ್ರತಾಪತ್ರಗಳ ವ್ಯಾಪಾರದಲ್ಲಿ ತೊಡಗಿರುವ ಹಣಕಾಸು ಸೇವೆ ಸಂಸ್ಥೆಗಳಲ್ಲಿ ಪಠ್ಯ ಸಂದೇಶ ಕಳಿಸುವುದನ್ನು ನಿರ್ವಹಿಸುವ ಒಂದು ನಿಬಂಧನೆಯು ರೆಗ್ಯುಲೇಟರಿ ನೋಟಿಸ್ ೦೭-೫೯,ಸೂಪರ್‌ವಿಷನ್ ಆಫ್ ಎಲೆಕ್ಟ್ರಾನಿಕ್ ಕಮ್ಯುನಿಕೇಷನ್ಸ್, ಡಿಸೆಂಬರ್ ೨೦೦೭ . ಇದನ್ನು ಸದಸ್ಯ ಸಂಸ್ಥೆಗಳಿಗೆ ಫೈನಾನ್ಸಿಯಲ್ ಇಂಡಸ್ಟ್ರಿ ರೆಗ್ಯುಲೇಟರಿ ಅಥಾರಿಟಿಯು ವಿತರಿಸುತ್ತದೆ. ೦೭-೫೯ನಲ್ಲಿ ಎಲೆಕ್ಟ್ರಾನಿಕ್ ಕಮ್ಯುನಿಕೇಷನ್ಸ್, ಈಮೇಲ್ ಮತ್ತು ಎಲೆಕ್ಟ್ರಾನಿಕ್ ವ್ಯವಹಾರಗಳನ್ನು ಪರ್ಯಾಯ ಕ್ರಮದ ಮೂಲಕ ಬಳಸಬಹುದು ಮತ್ತು ತಕ್ಷಣದ ಸಂದೇಶ ಮತ್ತು ಪಠ್ಯ ಸಂದೇಶ ಮುಂತಾದ ರೂಪಗಳು ಒಳಗೊಂಡಿರಬಹುದು ಎಂದು FINRA ಸೂಚಿಸಿತು.[೧೫] ತಮ್ಮ ನೌಕರರ ಪಠ್ಯ ಸಂದೇಶಗಳನ್ನು ದಾಖಲಿಸಲು ಅವಕಾಶ ಕಲ್ಪಿಸುವುದಕ್ಕಾಗಿ ಕೈಗಾರಿಕೆಯು ಹೊಸ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಬೇಕಾಯಿತು.

ಹಣಕಾಸು ಸೇವೆಗಳು, ಇಂಧನ ಮತ್ತು ಸರಕು ವ್ಯಾಪಾರ ಆರೋಗ್ಯ ಸೇವೆ ಮತ್ತು ವ್ಯಾಪಾರಸಂಸ್ಥೆಗಳು ಮುಂತಾದ ಕೈಗಾರಿಕೆಗಳು ಅವುಗಳ ನಿರ್ವಹಣೆಗೆ ಮುಖ್ಯವಾದ ವಿಧಿವಿಧಾನಗಳಲ್ಲಿ ಭದ್ರತೆ, ಗೋಪ್ಯತೆ, ವಿಶ್ವಾಸಾರ್ಹತೆ ಮತ್ತು SMS ವೇಗದ ಖಾತರಿಗಳನ್ನು ಬಯಸುತ್ತವೆ. ಇಂತಹ ಗುಣಮಟ್ಟದ ಪಠ್ಯ ಸಂದೇಶ ಖಾತರಿ ಮಾಡುವ ಒಂದು ವಿಧಾನವು SLA ಗಳನ್ನು(ಸೇವೆ ಮಟ್ಟದ ಒಪ್ಪಂದ) ಪರಿಚಯಿಸುವುದಾಗಿದೆ. ಇದು ಐಟಿ ಒಪ್ಪಂದಗಳಲ್ಲಿ ಸಾಮಾನ್ಯವಾಗಿದೆ. ಅಳೆಯಬಹುದಾದ SLAಗಳನ್ನು ಒದಗಿಸುವ ಮೂಲಕ ಸಂಸ್ಥೆಗಳು ವಿಶ್ವಾಸಾರ್ಹತೆ ಮಾನದಂಡಗಳನ್ನು ವ್ಯಾಖ್ಯಾನಿಸಬಹುದು ಮತ್ತು ಉತ್ತಮ ಗುಣಮಟ್ಟದ ಸೇವೆಗಳನ್ನು ಸ್ಥಾಪಿಸಬಹುದು.[೧೬] ಹಣಕಾಸು ಸೇವೆ ಕೈಗಾರಿಕೆಯಲ್ಲಿ ಅತ್ಯಂತ ಜನಪ್ರಿಯ ಮತ್ತು ಯಶಸ್ವಿಯೆಂದು ಸಾಬೀತಾದ SMS ಸಾಧನಗಳಲ್ಲಿ ಮೊಬೈಲ್ ರಿಸೀಟ್‌ಗಳು ಸೇರಿದೆ. ೨೦೦೯ ಜನವರಿಯಲ್ಲಿ ಮೊಬೈಲ್ ಮಾರ್ಕೆಟಿಂಗ್ ಅಸೋಸಿಯೇಷನ್(MMA) ಹಣಕಾಸು ಸಂಸ್ಥೆಗಳಿಗೆ ಮೊಬೈಲ್ ಬ್ಯಾಂಕಿಂಗ್ ಓವರ್‌ವಿವ್ ಪ್ರಕಟಿಸಿತು. ಅದರಲ್ಲಿ ಅದು ಕಿರು ಸಂದೇಶದ ಸೇವೆಗಳು(SMS), ಮೊಬೈಲ್ ವೆಬ್, ಮೊಬೈಲ್ ಗ್ರಾಹಕ ಬಳಕೆಗಳಿಗೆ ಮತ್ತು ಮೊಬೈಲ್ ವೆಬ್ ಮತ್ತು ಸೆಕ್ಯೂರ್ SMSಮುಂತಾದ ಮೊಬೈಲ್ ಚಾನೆಲ್ ವೇದಿಕೆಗಳ ಅನುಕೂಲಗಳು ಮತ್ತು ಅನಾನುಕೂಲಗಳನ್ನು ಅದು ಚರ್ಚಿಸಿತು.[೧೭]

ಮೊಬೈಲ್ ಅಂತರ ಕ್ರಿಯೆ ಸೇವೆಗಳು ಉದ್ಯಮ ಸಂಪರ್ಕಗಳಲ್ಲಿ ಹೆಚ್ಚಿನ ಖಚಿತತೆಯಿಂದ SMSಬಳಸುವ ಪರ್ಯಾಯ ಮಾರ್ಗವಾಗಿದೆ.

ಸಾಮಾನ್ಯ ವ್ಯವಹಾರದಿಂದ ವ್ಯವಹಾರಕ್ಕೆ ಅನ್ವಿಯಕೆಗಳು ಟೆಲಿಮ್ಯಾಟಿಕ್ಸ್ ಮತ್ತು ಮೆಷಿನ್-ಟು-ಮೆಷಿನ್, ಅದರಲ್ಲಿ ಎರಡು ಅನ್ವಯಿಕೆಗಳು ಸ್ವಯಂಚಾಲಿತವಾಗಿ ಪರಸ್ಪರ ಸಂಪರ್ಕಿಸುತ್ತವೆ. ಘಟನೆ ಎಚ್ಚರಿಕೆಗಳು ಕೂಡ ಸಾಮಾನ್ಯವಾಗಿದ್ದು, B೨B ಸನ್ನಿವೇಶಗಳಿಗೆ ಸಿಬ್ಬಂದಿ ಸಂಪರ್ಕಗಳು ಕೂಡ ಇನ್ನೊಂದು ಬಳಕೆಯಾಗಿದೆ.

ವ್ಯಾಪಾರ ಸಂಸ್ಥೆಗಳು ಗಂಭೀರ ಕಾಲದ ಎಚ್ಚರಿಕೆಗಳಿಗೆ, ಪರಿಷ್ಕರಣೆಗಳಿಗೆ, ನೆನಪಿಸುವ ಸಂದೇಶಗಳು, ಮೊಬೈಲ್ ಅಭಿಯಾನಗಳು, ವಿಷಯ ಮತ್ತು ಮನರಂಜನೆ ಅನ್ವಯಿಕೆಗಳಿಗೆ SMS ಬಳಸಬಹುದು.

ಮೊಬೈಲ್ ಪರಸ್ಪರಕ್ರಿಯೆಯನ್ನು ಗ್ರಾಹಕರಿಂದ ವ್ಯಾಪಾರ ಪರಸ್ಪರಕ್ರಿಯೆಗಳಿಗೆ, ಉದಾಹರಣೆಗೆ ಮಾಧ್ಯಮ ಮತದಾನ ಮತ್ತು ಸ್ಪರ್ಧೆಗಳಿಗೆ, ಗ್ರಾಹಕರಿಂದ ಗ್ರಾಹಕರ ಪರಸ್ಪರಕ್ರಿಯೆಗೆ, ಉದಾಹರಣೆಗೆ ಮೊಬೈಲ್‌ನೊಂದಿಗೆ ಸಾಮಾಜಿಕ ನೆಟ್‌ವರ್ಕಿಂಗ್, ಚಾಟಿಂಗ್(ಮಾತುಕತೆ) ಮತ್ತು ಡೇಟಿಂಗ್(ವಿಹಾರ) ಮಾಡುವುದಕ್ಕೆ ಬಳಸಬಹುದು.

ವಿಶ್ವವ್ಯಾಪಿ ಬಳಕೆ

ಬದಲಾಯಿಸಿ

ಯುರೋಪ್‌

ಬದಲಾಯಿಸಿ
 
ರಾಷ್ಟ್ರಗಳ ನಡುವೆ ರೋಮಿಂಗ್ ಆಗುತ್ತಿರುವ ಮೊಬೈಲ್ ದೂರವಾಣಿಗಳಿಗೆ "ವೆಲ್ಕಂ" ಸಂದೇಶಗಳನ್ನು ಕಳಿಸಲು SMS ಬಳಸಲಾಗುತ್ತದೆ.Here, T-ಮೊಬೈಲ್ ಯುನೈಟೆಡ್ ಕಿಂಗ್ಡಮ್(UK‌)ಗೆ ಪ್ರಾಕ್ಸಿಮಸ್ ಗ್ರಾಹಕನನ್ನು ಸ್ವಾಗತಿಸುತ್ತದೆ, ಮತ್ತು BASE ಬೆಲ್ಜಿಯಂಗೆ ಆರೆಂಜ್ ಯುನೈಟಡ್ ಕಿಂಗ್ಡಂ ಗ್ರಾಹಕನನ್ನು ಸ್ವಾಗತಿಸುತ್ತದೆ.

ಯುರೋಪ್ SMSಬಳಕೆಯ ಜನಪ್ರಿಯತೆಗೆ ಸಂಬಂಧಿಸಿದಂತೆ ಏಷ್ಯಾದ ನಂತರ ಹಿಂಬಾಲಿಸುತ್ತದೆ. ೨೦೦೩ರಲ್ಲಿ ಪ್ರತೀ ತಿಂಗಳು ಸರಾಸರಿ ೧೬ ಶತಕೋಟಿ ಸಂದೇಶಗಳನ್ನು ಕಳಿಸಲಾಯಿತು. ಸ್ಪೇನ್ ಬಳಕೆದಾರರು ೨೦೦೩ರಲ್ಲಿ ಸರಾಸರಿ ೫೦ಕ್ಕಿಂತ ಸ್ವಲ್ಪ ಹೆಚ್ಚು ಸಂದೇಶಗಳನ್ನು ಕಳಿಸಿದ್ದಾರೆ. ಇಟಲಿ, ಜರ್ಮನಿ ಮತ್ತು ಯುನೈಟೆಡ್ ಕಿಂಗ್ಡಮ್‌ನಲ್ಲಿ ಈ ಅಂಕಿಅಂಶವು ಪ್ರತಿತಿಂಗಳಿಗೆ ಸರಿಸುಮಾರು ೩೫-೪೦ SMSಸಂದೇಶಗಳಾಗಿವೆ. ಪ್ರತಿಯೊಂದು ರಾಷ್ಟ್ರಗಳಲ್ಲಿ, SMSಸಂದೇಶ ಕಳಿಸುವ ವೆಚ್ಚ €೦.೦೪–೦.೨೩ರಿಂದ ವ್ಯತ್ಯಾಸ ಹೊಂದಿದೆ. ಇದು ಹಣ ಪಾವತಿ ಯೋಜನೆಯನ್ನು ಅವಲಂಬಿಸಿದೆ(ಅನೇಕ ಒಪ್ಪಂದ ಯೋಜನೆಗಳು ಎಲ್ಲ ಪಠ್ಯಗಳು ಅಥವಾ ಗೊತ್ತಾದ ಸಂಖ್ಯೆಯ ಪಠ್ಯಗಳಿಗೆ ಉಚಿತ ಸೇವೆ ನೀಡುವುದು ಸೇರಿದೆ). ಯುನೈಟೆಡ್ ಕಿಂಗ್ಡಮ್‌ನಲ್ಲಿ , ಪಠ್ಯ ಸಂದೇಶಗಳಿಗೆ £೦.೦೫–೦.೧೨ ದರ ವಿಧಿಸಲಾಗುತ್ತದೆ. ಆದರೆ, ಕುತೂಹಲಕರವಾಗಿ, ಫ್ರಾನ್ಸ್ ಇದೇ ರೀತಿ SMS ಸೇವೆಗಳನ್ನು ಕೈಗೊಂಡಿಲ್ಲ. ಪ್ರತಿ ಬಳಕೆದಾರ ಪ್ರತಿ ತಿಂಗಳು ಕೇವಲ ೨೦ಕ್ಕಿಂತ ಕಡಿಮೆ ಸಂದೇಶಗಳನ್ನು ಕಳಿಸುತ್ತಾರೆ. ಫ್ರಾನ್ಸ್ ಇತರೆ ಐರೋಪ್ಯ ರಾಷ್ಟ್ರಗಳ ರೀತಿಯಲ್ಲಿ GSMತಂತ್ರಜ್ಞಾನವನ್ನು ಹೊಂದಿದೆ. ಆದರೆ ಬಳಕೆಯು ತಾಂತ್ರಿಕ ನಿರ್ಬಂಧಗಳಿಂದ ಅಡ್ಡಿಯಾಗಿಲ್ಲ.

ರಿಪಬ್ಲಿಕ್ ಆಫ್ ಐರ್ಲೆಂಡ್‌ನಲ್ಲಿ ಪ್ರತಿ ತ್ರೈಮಾಸಿಕಕ್ಕೆ ಒಟ್ಟು ೧.೫ಶತಕೋಟಿ ಸಂದೇಶಗಳನ್ನು ಕಳಿಸಲಾಗುತ್ತದೆ. ಪ್ರತಿ ತಿಂಗಳು ಪ್ರತಿ ವ್ಯಕ್ತಿ ಸರಾಸರಿ ೧೧೪ ಸಂದೇಶಗಳನ್ನು ಕಳಿಸುತ್ತಾನೆ.[೧೮] ಯುನೈಟೆಡ್ ಕಿಂಗ್ಡಮ್‌ನಲ್ಲಿ ಒಂದು ಶತಕೋಟಿ ಪಠ್ಯ ಸಂದೇಶಗಳನ್ನು ಪ್ರತಿ ವಾರ ಕಳಿಸಲಾಗಿದೆ.[೧೯]

ಯೂರೋವಿಷನ್ ಸಾಂಗ್ ಕಂಟೆಸ್ಟ್ ೨೦೦೨ರಲ್ಲಿ ಮತದಾನ ವ್ಯವಸ್ಥೆಯ ಭಾಗವಾಗಿ(ಸಾಂಪ್ರದಾಯಿಕ ಫೋನ್ ಲೈನ್‌ಗಳಲ್ಲಿ ಕೂಡ ಮತದಾನ ನಡೆಯಿತು) ಪ್ರಥಮ ಪ್ಯಾನ್ ಯುರೋಪಿಯನ್ SMSಮತದಾನವನ್ನು ಆಯೋಜಿಸಿತು. ೨೦೦೫ರಲ್ಲಿ, ಯೂರೋವಿಷನ್ ಸಾಂಗ್ ಕಂಟೆಸ್ಟ್ ಅತೀ ದೊಡ್ಡ ಟೆಲಿವೋಟಿಂಗ್ ಆಯೋಜಿಸಿತು(SMS ಮತ್ತು ಫೋನ್ ವೋಟಿಂಗ್ ಮೂಲಕ)

ರೋಮಿಂಗ್ ಸಂದರ್ಭದಲ್ಲಿ, ಬಳಕೆದಾರ ತನ್ನ ರಾಷ್ಟ್ರದಿಂದ ಬೇರೆ ರಾಷ್ಟ್ರದ ಇನ್ನೊಂದು ಜಾಲಕ್ಕೆ ಸಂಪರ್ಕ ಸಾಧಿಸಿದಾಗ, ದರಗಳು ಹೆಚ್ಚಿಗಿರಬಹುದು, ಆದರೆ ೨೦೦೯ ಜುಲೈನಲ್ಲಿ EUಶಾಸನವು ಜಾರಿಗೆ ಬಂದು ಈ ದರವನ್ನು €೦.೧೧ಗೆ ಸೀಮಿತಗೊಳಿಸಿತು.[೨೦]

ಅಮೇರಿಕಾ ಸಂಯುಕ್ತ ಸಂಸ್ಥಾನ

ಬದಲಾಯಿಸಿ

ಅಮೆರಿಕ ಸಂಯುಕ್ತ ಸಂಸ್ಥಾನದಲ್ಲಿ, ಪಠ್ಯ ಸಂದೇಶ ಕಳಿಸುವುದು ಕೂಡ ಜನಪ್ರಿಯವಾಗಿದೆ.; ೨೦೦೯ ಡಿಸೆಂಬರ್‌ನಲ್ಲಿ CTIA ವರದಿಮಾಡಿರುವಂತೆ , ೨೮೬ ದಶಲಕ್ಷ US ಗ್ರಾಹಕರು ೧೫೨.೭ ಶತಕೋಟಿ ಪಠ್ಯ ಸಂದೇಶಗಳನ್ನು ಪ್ರತಿ ತಿಂಗಳು ಕಳಿಸಿದ್ದಾರೆ. ಸರಾಸರಿ ೫೩೪ ಸಂದೇಶಗಳನ್ನು ಪ್ರತಿ ಗ್ರಾಹಕ ಪ್ರತಿ ತಿಂಗಳು ಕಳಿಸಿದ್ದಾರೆ.[೨೧] ೨೦೧೦ ಮೇನಲ್ಲಿ ಪಿವ್ ಸಂಶೋಧನೆ ಕೇಂದ್ರವು ಅಮೆರಿಕದ ವಯಸ್ಕ ಸೆಲ್ ಫೋನ್ ಬಳಕೆದಾರರಲ್ಲಿ ಶೇಕಡ ೭೨ರಷ್ಟು ಮಂದಿ ಪಠ್ಯ ಸಂದೇಶಗಳನ್ನು ಕಳಿಸುತ್ತಾರೆ ಮತ್ತು ಸ್ವೀಕರಿಸುತ್ತಾರೆಂದು ಕಂಡುಕೊಂಡಿದೆ.[೨೨]

ಅಮೆರಿಕದಲ್ಲಿ SMSಗೆ ಆಗಾಗ್ಗೆ ಕಳಿಸಿದಾತ ಮತ್ತು ಕಳಿಸಿದ ಕಡೆ ಎರಡಕ್ಕೂ ದರ ವಿಧಿಸಲಾಗುತ್ತದೆ. ಆದರೆ ಫೋನ್ ಕರೆಗಳ ರೀತಿಯಲ್ಲಿ ಇದನ್ನು ತಿರಸ್ಕರಿಸುವ ಅಥವಾ ತಳ್ಳಿಹಾಕುವಂತಿಲ್ಲ. ಇತರೆ ರಾಷ್ಟ್ರಗಳಿಗೆ ಹೋಲಿಸಿದರೆ ಕಡಿಮೆ ಬಳಕೆಗಳಿಗೆ ಕಾರಣಗಳು ವ್ಯತ್ಯಾಸದಿಂದ ಕೂಡಿದೆ-ಅನೇಕ ಬಳಕೆದಾರರು ಮಿತಿಯಿಲ್ಲದ ಮೊಬೈಲ್‌ನಿಂದ ಮೊಬೈಲ್ ನಿಮಿಷಗಳನ್ನು, ಅತ್ಯಧಿಕ ಮಾಸಿಕ ನಿಮಿಷ ಮಂಜೂರಾತಿಗಳನ್ನು ಅಥವಾ ಮಿತಿಯಿಲ್ಲದ ಸೇವೆಗಳನ್ನು ಹೊಂದಿರುತ್ತಾರೆ. ಇದಲ್ಲದೇ, ಪುಶ್ ಟು ಟಾಕ್ ಸೇವೆಗಳು SMSನ ತಕ್ಷಣದ ಸಂಪರ್ಕವನ್ನು ನೀಡುತ್ತವೆ ಮತ್ತು ಸಾಮಾನ್ಯವಾಗಿ ಮಿತಿಯಿಲ್ಲದಂತಿರುತ್ತದೆ(ಅನ್‌ಲಿಮಿಟೆಡ್). ಇಷ್ಟೇ ಅಲ್ಲದೇ, ಅಂತರ ಜಾಲ ಪಠ್ಯ ಸಂದೇಶಕ್ಕೆ ಅಗತ್ಯವಾದ ಸ್ಪರ್ಧಾತ್ಮಕ ಸೇವೆದಾರರು ಮತ್ತು ತಂತ್ರಜ್ಞಾನಗಳ ನಡುವೆ ಸಹಯೋಗವು ಇತ್ತೀಚೆಗೆ ಲಭ್ಯವಾಗಿವೆ. ಕೆಲವು ಪೂರೈಕೆದಾರರು ಮೂಲತಃ ಪಠ್ಯದ ಬಳಕೆಗೆ ಹೆಚ್ಚುವರಿ ದರ ವಿಧಿಸುತ್ತಾರೆ, ಇದರಿಂದ ಅದರ ಉಪಯುಕ್ತತೆ ಮತ್ತು ಆಕರ್ಷಣೆಯನ್ನು ತಗ್ಗಿಸುತ್ತಾರೆ. ೨೦೦೬ರ ಮೂರನೇ ತ್ರೈಮಾಸಿಕದಲ್ಲಿ, ಕನಿಷ್ಟ ೧೨ ಶತಕೋಟಿ ಪಠ್ಯ ಸಂದೇಶಗಳು AT&Tಜಾಲವನ್ನು ದಾಟಿದೆ. ಹಿಂದಿನ ತ್ರೈಮಾಸಿಕದಿಂದ ಬಹುಮಟ್ಟಿಗೆ ಶೇಕಡ ೧೫ ಹೆಚ್ಚಾಗಿದೆ.

ಅಮೆರಿಕ ಸಂಯುಕ್ತ ಸಂಸ್ಥಾನದಲ್ಲಿ, ೧೩-೨೨ ವರ್ಷ ವಯೋಮಿತಿಯವರಲ್ಲಿ ಪಠ್ಯ ಸಂದೇಶ ಕಳಿಸುವಿಕೆ ವ್ಯಾಪಕ ಜನಪ್ರಿಯತೆ ಗಳಿಸಿದೆ. ಇದು ವಯಸ್ಕರು ಮತ್ತು ವ್ಯವಹಾರ ಬಳಕೆದಾರರ ನಡುವೆ ಹೆಚ್ಚಾಗುತ್ತಿದೆ. ಮಗುವು ಅವಳ/ಅವನ ಪ್ರಥಮ ಸೆಲ್ ಫೋನ್ ಸ್ವೀಕರಿಸುವ ವಯಸ್ಸು ಕೂಡ ಕಡಿಮೆಯಾಗಿದ್ದು, ಪಠ್ಯ ಸಂದೇಶ ಕಳಿಸುವುದು ಎಲ್ಲ ವಯಸ್ಸಿನವರಲ್ಲಿ ಸಂಪರ್ಕದ ಅತ್ಯಂತ ಜನಪ್ರಿಯ ವಿಧಾನವಾಗಿದೆ. ಪಠ್ಯ ಸಂದೇಶ ಕಳಿಸುವಿಕೆ ಅಮೆರಿಕನ್ನನ ಜೀವನಶೈಲಿಯಲ್ಲಿ ಅತ್ಯಂತ ಅಂತರ್ಗತವಾಗಿದ್ದು, ಪಠ್ಯ ಕವಿ ನಾರ್ಮನ್ ಸಿಲ್ವರ್ ಅವರ "೧೦ ಟೆಕ್ಸ್ಟ್ ಕಮಾಂಡ್‌ಮೆಂಟ್ಸ್" ಪ್ರಕಟಿಸಿದರು.[೨೩] ಅಮೆರಿಕದಲ್ಲಿ ವರ್ಷಗಳು ಕಳೆದಂತೆ ಪಠ್ಯ ಸಂದೇಶ ಕಳಿಸುವ ಸಂಖ್ಯೆ ಏರುಮುಖವಾಗಿದೆ. ಏಕೆಂದರೆ ಪ್ರತಿ ಕಳಿಸಿದ ಮತ್ತು ಸ್ವೀಕರಿಸಿದ ಪಠ್ಯಸಂದೇಶಕ್ಕೆ ದರವು ಸರಾಸರಿ $೦.೧೦ಇಳಿಮುಖವಾಗಿದೆ.

ಪಠ್ಯ ಸಂದೇಶ ಕಳಿಸುವ ಯೋಜನೆಗಳಲ್ಲಿ ಸೇರುವಂತೆ ಹೆಚ್ಚು ಗ್ರಾಹಕರಿಗೆ ಮನದಟ್ಟು ಮಾಡಲು, ಕೆಲವು ಪ್ರಮುಖ ಸೆಲ್ ಫೋನ್ ಪೂರೈಕೆದಾರರು ಇತ್ತೀಚೆಗೆ ಪಠ್ಯ ಸಂದೇಶಗಳನ್ನು ಕಳಿಸುವ ಮತ್ತು ಸ್ವೀಕರಿಸುವ ದರವನ್ನು ಪ್ರತಿ ಸಂದೇಶಕ್ಕೆ $.೧೫ನಿಂದ $.೨೦ ಗೆ ಹೆಚ್ಚಿಸಿದೆ.[೨೪][೨೫] ಇದು ಪ್ರತಿ ಮೆಗಾಬೈಟ್‌ಗೆ $೧,೩೦೦ ಡಾಲರ್‌ಗಳಿಗಿಂತ ಹೆಚ್ಚು[೨೬] ಅನೇಕ ಪೂರೈಕೆದಾರರು ಮಿತಿಯಿಲ್ಲದ ಯೋಜನೆಗಳ ಪ್ರಸ್ತಾಪ ಮಾಡಿದ್ದು, ಅದರಲ್ಲಿ ಪಠ್ಯ ಸಂದೇಶ ಕಳಿಸುವುದು ಬಹುತೇಕ ಉಚಿತವಾಗಿದೆ.

ಫಿನ್ಲೆಂಡ್

ಬದಲಾಯಿಸಿ

SMS ಮತದಾನದ ಜತೆ, ಗರಿಷ್ಠ ಪ್ರಮಾಣದಲ್ಲಿ ಮೊಬೈಲ್ ಫೋನ್ ಬಳಸುವ ರಾಷ್ಟ್ರಗಳಲ್ಲಿ ಭಿನ್ನ ವಿದ್ಯಮಾನವು ಉದ್ಭವಿಸಿದೆ. ಫಿನ್‌ಲ್ಯಾಂಡ್‌ನಲ್ಲಿ TV ಚಾನಲ್‌ಗಳು "SMS ಚ್ಯಾಟ್" ಆರಂಭಿಸಿದವು.ಇದು ಫೋನ್ ಸಂಖ್ಯೆಗೆ ಕಿರು ಸಂದೇಶಗಳನ್ನು ಕಳಿಸುವುದನ್ನು ಒಳಗೊಂಡಿದೆ. ಸ್ವಲ್ಪ ಸಮಯದ ನಂತರ ಈ ಸಂದೇಶಗಳನ್ನು ಟಿವಿಯಲ್ಲಿ ಪ್ರದರ್ಶಿಸಲಾಗುತ್ತದೆ. ಚಾಟ್‌ಗಳು ಸದಾ ಮಿತವಾಗಿರುತ್ತದೆ. ಇದು ಚಾನಲ್‌ಗೆ ಹಾನಿಕರ ವಸ್ತುವನ್ನು ಕಳಿಸುವುದನ್ನು ತಡೆಯುತ್ತದೆ. ಈ ಗೀಳು ಶೀಘ್ರದಲ್ಲೇ ಜನಪ್ರಿಯವಾಯಿತು ಮತ್ತು ಆಟಗಳಾಗಿ ಹುಟ್ಟಿಕೊಂಡಿತು. ಮೊದಲಿಗೆ ನಿಧಾನ ಗತಿಯ ಕ್ವಿಜ್(ಸಾಮಾನ್ಯ ಜ್ಞಾನದ ಪರೀಕ್ಷೆ) ಮತ್ತು ಕಾರ್ಯತಂತ್ರದ ಆಟಗಳು. ಸ್ವಲ್ಪ ಕಾಲದ ನಂತರ, ವೇಗದ ಗತಿಯ ಆಟಗಳು ಟೆಲಿವಿಷನ್ ಮತ್ತು SMSನಿಯಂತ್ರಣಕ್ಕೆ ರೂಪಿಸಲಾಯಿತು. ಆಟಗಳು ಒಬ್ಬರ ಉಪನಾಮವನ್ನು ನೋಂದಣಿ ಮಾಡುವುದು ಸೇರಿದ್ದು, ಅದಾದ ನಂತರ ತೆರೆಯ ಮೇಲೆ ಪಾತ್ರವನ್ನು ನಿಯಂತ್ರಿಸುವ ಕಿರು ಸಂದೇಶಗಳನ್ನು ಕಳಿಸುವುದಾಗಿದೆ. ಸಂದೇಶಗಳಿಗೆ ಸಾಮಾನ್ಯವಾಗಿ ಪ್ರತಿಯೊಂದಕ್ಕೆ ೦.೦೫ರಿಂದ ೦.೮೬ ಯೂರೊ ವೆಚ್ಚವಾಗುತ್ತದೆ. ಆಟಗಾರ ಹತ್ತಾರು ಸಂದೇಶಗಳನ್ನು ಆಟಗಳಿಗೆ ಕಳಿಸುವ ಅಗತ್ಯವಿರುತ್ತದೆ. ೨೦೦೩ರ ಡಿಸೆಂಬರ್‌ನಲ್ಲಿ, ಫಿನ್ನಿಷ್ ಟಿವಿ ಚಾನೆಲ್ MTV೩ ವೀಕ್ಷಕರು ಕಳಿಸಿದ ಸಂದೇಶಗಳನ್ನು ಗಟ್ಟಿಯಾಗಿ ಓದಲುಸಾಂಟಾ ಕ್ಲಾಸ್ ಪಾತ್ರವನ್ನು ಗೊತ್ತುಮಾಡಿತು. ೨೦೦೪ರ ಮಾರ್ಚ್ ೧೨ರಂದು, ಪ್ರಥಮ ಸಂಪೂರ್ಣ ಅಂತರಕ್ರಿಯಾ ಟಿವಿ ಚಾನಲ್ VIISI ಫಿನ್ಲೆಂಡ್‌ನಲ್ಲಿ ಕಾರ್ಯಾಚರಣೆ ಆರಂಭಿಸಿತು. ಅದು ಹೆಚ್ಚು ಕಾಲ ಉಳಿಯಲಿಲ್ಲ. SBS ಫಿನ್ಲೆಂಡ್ ಓಯ್ ಚಾನಲ್ ವಶಕ್ಕೆ ತೆಗೆದುಕೊಂಡು ಅದನ್ನು ಸಂಗೀತದ ಚಾನೆಲ್‌ಗೆ ಪರವರ್ತಿಸಿ ೨೦೦೪ ನವೆಂಬರ್‌ನಲ್ಲಿ ದಿ ವಾಯ್ಸ್ ಎಂದು ಹೆಸರು ನೀಡಿತು.

೨೦೦೬ರಲ್ಲಿ, ಫಿನ್ಲೆಂಡ್ ಪ್ರಧಾನಮಂತ್ರಿ ಮಟ್ಟಿ ವಾನ್‌ಹ್ಯಾನನ್ ಪಠ್ಯ ಸಂದೇಶ ನೀಡುವ ಮೂಲಕ ತನ್ನ ಗೆಳತಿಯ ಜತೆ ಸ್ನೇಹ ಕಡಿದುಕೊಂಡಾಗ ಮುಖ ಪುಟದ ಸುದ್ದಿಯಾಯಿತು.

೨೦೦೭ರಲ್ಲಿ ಪಠ್ಯ ಸಂದೇಶಗಳಲ್ಲಿ ಮಾತ್ರ ಬರೆದ ವಿಮ್ಮೆಸೆಟ್ ವೈಸ್ಟಿಟ್ (ಲಾಸ್ಟ್ ಮೆಸೇಜಸ್ ) ಪ್ರಥಮ ಪುಸ್ತಕವನ್ನು ಫಿನ್ನಿಷ್ ಲೇಖಕ ಹಾನ್ನು ಲುಂಟಿಯಾಲ ಬಿಡುಗಡೆ ಮಾಡಿದರು. ಯುರೋಪ್ ಮತ್ತು ಭಾರತದಾದ್ಯಂತ ಪ್ರಯಾಣ ಮಾಡುವ ಉದ್ಯಮ ಕಾರ್ಯನಿರ್ವಾಹಕ ಅಧಿಕಾರಿಯನ್ನು ಇದು ಕುರಿತದ್ದಾಗಿದೆ.

ಫಿನ್ಲೆಂಡ್‌ನಲ್ಲಿ ಮೊಬೈಲ್ ಸೇವೆ ಪೂರೈಕೆದಾರರು ಕರಾರುಗಳನ್ನು ಪ್ರಸ್ತಾಪಿಸುತ್ತಾರೆ. ಇದರಲ್ಲಿ ಒಬ್ಬರು €೧೦ದರಕ್ಕೆ ತಿಂಗಳಿಗೆ ೧೦೦೦ ಪಠ್ಯ ಸಂದೇಶಗಳನ್ನು ಕಳಿಸಬಹುದು.

ಜಪಾನ್‌‌

ಬದಲಾಯಿಸಿ

ಜಪಾನ್ ಕಿರು ಸಂದೇಶಗಳನ್ನು ವ್ಯಾಪಕವಾಗಿ ಕಳಿಸಿದ ಪ್ರಥಮ ರಾಷ್ಟ್ರಗಳಲ್ಲಿ ಸೇರಿದ್ದು, J-ಪೋನ್ನ ಸ್ಕೈಮೇಲ್ ಮತ್ತು NTT ಡೊಕೊಮೊನಶಾರ್ಟ್ ಮೇಲ್ಸೇರಿದಂತೆ GSM ರಹಿತ ಸೇವೆಗಳಿಗೆ ಪ್ರವರ್ತಕವಾಗಿದೆ. ಜಪಾನಿನ ಹದಿವಯಸ್ಕರು ಮೊದಲಿಗೆ ಪಠ್ಯ ಸಂದೇಶ ಕಳಿಸುವುದನ್ನು ಆರಂಭಿಸಿದರು. ಏಕೆಂದರೆ ಇತರೆ ಲಭ್ಯ ರೂಪಗಳಿಗಿಂತ ಅದು ಸಂವಹನದ ಅಗ್ಗದ ರೂಪವಾಗಿತ್ತು. ಹೀಗಾಗಿ ಜಪಾನಿನ ತಾತ್ತ್ವಿಕ ಸಿದ್ಧಾಂತಿಗಳು ಆಯ್ದ ಅಂತರ ವೈಯಕ್ತಿಕ ಸಂಬಂಧದ ಸಿದ್ಧಾಂತವನ್ನು ಸೃಷ್ಟಿಸಿದರು. ಯುವ ಜನರಲ್ಲಿ ಮೊಬೈಲ್ ದೂರವಾಣಿಗಳು ಸಾಮಾಜಿಕ ಜಾಲಗಳನ್ನು ಬದಲಿಸಬಹುದೆಂದು ಅವರು ಪ್ರತಿಪಾದಿಸಿದರು(೧೩ರಿಂದ ೩೦ ವರ್ಷ ವಯಸ್ಸಿನವರೆಂದು ವರ್ಗೀಕರಿಸಲಾಗಿದೆ) ಈ ವಯೋಮಾನದ ಗುಂಪಿನಲ್ಲಿ ಸ್ನೇಹಿತರ ಜತೆ ವ್ಯಾಪಕ ಆದರೆ ಕಡಿಮೆ ಗುಣಮಟ್ಟದ ಸಂಬಂಧಗಳನ್ನು ಇರಿಸಿಕೊಂಡಿದ್ದು, ಮೊಬೈಲ್ ಫೋನ್ ಬಳಕೆಯು ಅವರ ಸಂಬಂಧಗಳ ಗುಣಮಟ್ಟದಲ್ಲಿ ಸುಧಾರಣೆಯನ್ನು ಕಲ್ಪಿಸಬಹುದು ಎಂದು ಅವರು ಊಹಿಸಿದರು. ಈ ವಯೋಮಾನದ ಗುಂಪು ಆಯ್ದ ಅಂತರವೈಯಕ್ತಿಕ ಸಂಬಂಧಗಳಿಗೆ ಆದ್ಯತೆ ನೀಡುತ್ತದೆ. ಇದರಲ್ಲಿ ಅವರು ನಿರ್ದಿಷ್ಟ, ಆಂಶಿಕ ಆದರೆ ಪರಿಸ್ಥಿತಿಯನ್ನು ಅವಲಂಬಿಸಿ ಸಮೃದ್ಧ ಸಂಬಂಧಗಳನ್ನು ಕಾಯ್ದುಕೊಳ್ಳುತ್ತಾರೆಂದು ಅವರು ತೀರ್ಮಾನಿಸಿದರು.[೨೭][೨೮] ಭಾಗವಹಿಸಿದವರು ಮುಖಾಮುಖಿ ಸಂಪರ್ಕ ಮತ್ತು ಪಠ್ಯ ಸಂದೇಶ ಕಳಿಸುವ ಮೂಲಕ ಮಿತ್ರತ್ವವು ಕೇವಲ ಮುಖಾಮುಖಿ ಸಂಪರ್ಕಕ್ಕಿಂತ ಹೆಚ್ಚು ಸಾಮೀಪ್ಯದಿಂದ ಕೂಡಿರುತ್ತದೆಂದು ಪರಿಗಣಿಸಿದರೆಂದು ಇದೇ ರೀತಿಯ ಅಧ್ಯಯನಗಳು ತೋರಿಸಿವೆ. ಇದರಿಂದ ಭಾಗವಹಿಸುವವರು ಮುಖಾಮುಖಿ ಸಂವಹನದಿಂದ ಪೂರ್ವದ ಹಂತದಲ್ಲೇ ಹೊಸ ಸ್ನೇಹ ಸಂಬಂಧಗಳನ್ನು ಮಾಡಿಕೊಳ್ಳುತ್ತಾರೆ. ಆದರೆ ತಮ್ಮ ಸಂಪರ್ಕವನ್ನು ಹೆಚ್ಚಿಸಿಕೊಳ್ಳಲು ನಂತರ ಪಠ್ಯ ಸಂದೇಶವನ್ನು ಬಳಸುತ್ತಾರೆ. ಭಾಗವಹಿಸುವವರ ನಡುವೆ ಸಂಬಂಧಗಳು ಹೆಚ್ಚು ನಿಕಟವಾಗುತ್ತಿದ್ದಂತೆ, ಪಠ್ಯ ಸಂದೇಶ ಕಳಿಸುವ ಆವರ್ತನಗಳು ಹೆಚ್ಚಿತು ಎನ್ನುವುದು ಆಸಕ್ತಿದಾಯಕವಾಗಿದೆ.

ಆದಾಗ್ಯೂ, ಮೊಬೈಲ್ ಅಂತರಜಾಲದ ಈ-ಮೇಲ್‌ನ ಚಾಲ್ತಿಯಿಂದಾಗಿ ಕಿರು ಸಂದೇಶ ಕಳಿಸುವಿಕೆ ಬಳಕೆತಪ್ಪಿತು. ಇದನ್ನು ಯಾವುದೇ ಮೊಬೈಲ್ ಅಥವಾ ಬೇರೆ ರೀತಿಯಾದ ಈ ಮೇಲ್ ವಿಳಾಸದಿಂದ ಕಳಿಸಬಹುದು ಮತ್ತು ಸ್ವೀಕರಿಸಬಹುದು. ಬಳಕೆದಾರನಿಗೆ ಏಕರೂಪದ ಮೇಲ್ ಸೇವೆ ಎಂದು ಸಾಮಾನ್ಯವಾಗಿ ನೀಡಲಾದರೂ(ಬಹುತೇಕ ಬಳಕೆದಾರರಿಗೆ ಈ ವ್ಯತ್ಯಾಸದ ಬಗ್ಗೆ ಅರಿವಿರುವುದಿಲ್ಲ) ವಿಶೇಷವಾಗಿ ತಲುಪುವ ಗುರಿಯು ಒಂದೇ ಜಾಲದಲ್ಲಿದ್ದರೆ ನಿರ್ವಾಹಕರು ಕಿರು ಸಂದೇಶಗಳಾಗಿ ವಿಷಯವನ್ನು ಆಂತರಿಕವಾಗಿ ರವಾನಿಸಬಹುದು.

ಪಠ್ಯ ಸಂದೇಶ ಕಳಿಸುವುದು ಚೀನಾದಲ್ಲಿ ಜನಪ್ರಿಯ ಮತ್ತು ಅಗ್ಗವಾಗಿದೆ. ಸುಮಾರು ೭೦೦ ಶತಕೋಟಿ ಸಂದೇಶಗಳನ್ನು ೨೦೦೭ರಲ್ಲಿ ಕಳಿಸಲಾಯಿತು. ಪಠ್ಯ ಸಂದೇಶ ಸ್ಪಾಮ್(ಮಿನ್ನೊಲೆಕಸ) ಕೂಡ ಚೀನಾದಲ್ಲಿ ಸಮಸ್ಯೆಯಾಗಿದೆ. ೨೦೦೭ರಲ್ಲಿ ೩೫೩.೮ ಶತಕೋಟಿ ಮಿನ್ನೊಲೆಕಸ ಸಂದೇಶಗಳನ್ನು ಕಳಿಸಲಾಯಿತು. ಹಿಂದಿನ ವರ್ಷಕ್ಕಿಂತ೯೩% ಹೆಚ್ಚಾಗಿದೆ. ಇದು ಸುಮಾರು ಪ್ರತಿವಾರಕ್ಕೆ ಪ್ರತಿ ವ್ಯಕ್ತಿಗೆ ೧೨.೪೪ ಸಂದೇಶಗಳನ್ನು ಒಳಗೊಂಡಿದೆ.

ಪೀಪಲ್ಸ್ ರಿಪಬ್ಲಿಕ್ ಆಫ್ ಚೈನಾ ಸರ್ಕಾರವು ಅಕ್ರಮ ವಿಷಯಗಳ ಪತ್ತೆಗಾಗಿ ರಾಷ್ಟ್ರದಾದ್ಯಂತ ಪಠ್ಯ ಸಂದೇಶಗಳ ಬಗ್ಗೆ ನಿಗಾ ವಹಿಸುತ್ತಾರೆ.[೨೯]

ಕಡಿಮೆ ಔಪಚಾರಿಕ ಶಿಕ್ಷಣ ಹೊಂದಿರುವ ಚೀನಾದ ವಲಸೆ ಕಾರ್ಮಿಕರ ನಡುವೆ, ಪಠ್ಯ ಸಂದೇಶ ಕಳಿಸುವಾಗ SMS ಕೈಪಿಡಿಗಳನ್ನು ಅವಲಂಬಿಸುವುದು ಸಾಮಾನ್ಯವಾಗಿದೆ. ಈ ಕೈಪಿಡಿಗಳು ಅಗ್ಗದ, ಕೈಯಲ್ಲಿ ಹಿಡಿಯುವ, ಪಾಕೆಟ್ ಗಾತ್ರದ ಪುಸ್ತಕಗಳಿಗಿಂತ ಚಿಕ್ಕದಾಗಿ ಪ್ರಕಟಿಸಲಾಗುತ್ತದೆ. ಇವು ಸಂದೇಶಗಳಾಗಿ ಬಳಸಲು ವೈವಿಧ್ಯದ ಭಾಷಾ ಪದಗುಚ್ಛಗಳನ್ನು ಹೊಂದಿರುತ್ತದೆ.[೩೦]

ಫಿಲಿಪ್ಪೀನ್ಸ್

ಬದಲಾಯಿಸಿ

೧೯೯೫ರಲ್ಲಿ ಕಿರು ಸಂದೇಶ ಸೇವೆಯನ್ನು ಪ್ರಚಾರದ ತಂತ್ರವಾಗಿ ಪರಿಚಯಿಸಲಾಯಿತು. ಆದರೆ ಶೀಘ್ರದಲ್ಲೇ ಅದು ಅತ್ಯಂತ ಜನಪ್ರಿಯವಾಯಿತು. ೧೯೯೮ರಲ್ಲಿ ಫಿಲಿಪ್ಪೀನ್ ಮೊಬೈಲ್ ಸೇವೆ ಪೂರೈಕೆದಾರರು ಅವರ ಸೇವೆಗಳ ಭಾಗವಾಗಿ SMS ಆರಂಭಿಸಿದರು. ಆರಂಭಿಕ ಟೆಲಿವಿಷನ್ ಮಾರುಕಟ್ಟೆ ಪ್ರಚಾರಗಳು ಶ್ರವಣ ದೋಷದ ಬಳಕೆದಾರರನ್ನು ಗುರಿಯಿರಿಸಿತ್ತು. ಸೇವೆಯು ಆರಂಭದಲ್ಲಿ ಉಚಿತ ಚಂದಾದಿಂದ ಕೂಡಿತ್ತು. ಆದರೆ ಫಿಲಿಪ್ಪೀನ್ ಜನತೆ ಈ ವೈಶಿಷ್ಟ್ಯವನ್ನು ದರ ವಿಧಿಸುವ ಧ್ವನಿ ಕರೆಗಳನ್ನು ಬಳಸುವುದರ ಬದಲಿಗೆ ಉಚಿತವಾಗಿ ಸಂಪರ್ಕ ಸಾಧಿಸಲು ಬಳಸಿಕೊಂಡರು. ಟೆಲ್ಕೊಸ್ ಇದನ್ನು ಆರಂಭಿಸಿದ ನಂತರ, ಅವರು ಶೀಘ್ರದಲ್ಲೇ SMS ಗಳಿಗೆ ದರ ವಿಧಿಸುವುದನ್ನು ಆರಂಭಿಸಿದರು. ಜಾಲಗಳಲ್ಲಿ ಪ್ರಸಕ್ತ ದರವು ಪ್ರತಿ SMS ಗೆ ಒಂದು ಪೀಸೊ ಆಗಿತ್ತು.(ಸುಮಾರು US$೦.೦೨೩ ). ಬಳಕೆದಾರರಿಗೆ ಈಗ SMS ಗಳಿಗಾಗಿ ದರ ವಿಧಿಸಲಾಗುತ್ತಿದ್ದರೂ, ಅದು ಅತ್ಯಂತ ಅಗ್ಗವಾಗಿ ಉಳಿಯಿತು. ಅದು ಸುಮಾರು ಧ್ವನಿ ಕರೆಯ ಹತ್ತನೇ ಒಂದು ಭಾಗದಷ್ಟಿತ್ತು. ಈ ತಗ್ಗಿದ ದರದಿಂದಾಗಿ ಸುಮಾರು ಐದು ದಶಲಕ್ಷ ಫಿಲಿಪಿನೊಗಳಿಗೆ ೨೦೦೧ರಲ್ಲಿ ಸೆಲ್ ಫೋನ್ ಮಾಲೀಕತ್ವ ಹೊಂದಲು ದಾರಿಕಲ್ಪಿಸಿತು.[೩೧]

ಫಿಲಿಪ್ಪೀನ್ ಸಂಸ್ಕೃತಿಯಲ್ಲಿ ಸಮಾಜದೊಡನೆ ಬೆರೆಯುವ ಅತೀ ಸ್ವಭಾವದಿಂದಾಗಿ, ಧ್ವನಿ ಕರೆಗಳಿಗೆ ಹೋಲಿಸಿದರೆ SMS ಕೈಗೆಟಕುವ ದರದಿಂದಾಗಿ, SMS ಬಳಕೆಯು ಏರಿಕೆಯಾಯಿತು ಮತ್ತು ಪಠ್ಯ ಸಂದೇಶ ಕಳಿಸುವಿಕೆಯು ತಮ್ಮ ಸ್ನೇಹಿತರು ಮತ್ತು ಪ್ರೀತಿಪಾತ್ರರ ಜತೆ ಸಂಪರ್ಕ ಹೊಂದಿರಲು ಫಿಲಿಪಿನೊಗಳಿಗೆ ತಕ್ಷಣವೇ ಜನಪ್ರಿಯ ಸಾಧನವಾಗಿ ಪರಿಣಮಿಸಿತು. ಫಿಲಿಪಿನೊಗಳು ಪಠ್ಯ ಸಂದೇಶ ಕಳಿಸುವುದನ್ನು ಸಾಮಾಜಿಕ ಉದ್ದೇಶಗಳಲ್ಲದೇ ರಾಜಕೀಯ ಉದ್ದೇಶಗಳಿಗೆ ಬಳಸಿತು. ಇದು ಫಿಲಿಪ್ಪೀನ್ ಜನತೆಗೆ ಪ್ರಚಲಿತ ವಿದ್ಯಾಮಾನಗಳು ಮತ್ತು ರಾಜಕೀಯ ವಿಷಯಗಳ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ತಿಳಿಸಲು ಅವಕಾಶ ನೀಡಿತು.[೩೨] ಇದರ ಫಲವಾಗಿ, ಫಿಲಿಪಿನೊಗಳಿಗೆ ಕೆಲವು ವಿಷಯಗಳ ಬಗ್ಗೆ ಉತ್ತೇಜನ ಅಥವಾ ಖಂಡನೆಗೆ ಶಕ್ತಿಶಾಲಿ ಸಾಧನವಾಗಿ ಪರಿಣಮಿಸಿತು. ೨೦೦೧ EDSA II ಕ್ರಾಂತಿಯಲ್ಲಿ ಇದೊಂದು ಮುಖ್ಯ ಅಂಶವಾಯಿತು. ಇದರಿಂದ ಆಗಿನ ಅಧ್ಯಕ್ಷ ಜೋಸೆಫ್ ಎಸ್ಟ್ರಾಡಾ ಸುಲಿಗೆಯಲ್ಲಿ ತಪ್ಪಿತಸ್ಥರು ಎಂದು ಕಂಡುಬಂದಿದ್ದರಿಂದ ಅವರನ್ನು ಪದಚ್ಯುತಿಗೊಳಿಸಲಾಯಿತು.

೨೦೦೯ರ ಅಂಕಿಅಂಶಗಳ ಪ್ರಕಾರ, ಸುಮಾರು ೭೨ ದಶಲಕ್ಷ ಮೊಬೈಲ್ ಸೇವೆ ಚಂದಾದಾರರಿದ್ದಾರೆ(ಸರಿಸುಮಾರು ಫಿಲಿಪಿನೊ ಜನಸಂಖ್ಯೆಯಲ್ಲಿ ಶೇಕಡ ೮೦)ಸುಮಾರು ೧.೩೯ಶತಕೋಟಿ SMS ಸಂದೇಶಗಳನ್ನು ದಿನನಿತ್ಯ ಫಿಲಿಪ್ಪೀನ್ಸ್‌ನಲ್ಲಿ ಕಳಿಸಲಾಗುತ್ತದೆ.[೩೩][೩೪] ಫಿಲಿಪ್ಪೀನ್ಸ್ ಜನರು ದೊಡ್ಡ ಪ್ರಮಾಣದ ಪಠ್ಯ ಸಂದೇಶಗಳನ್ನು ಕಳಿಸುವ ಕಾರಣದಿಂದಾಗಿ, ಫಿಲಿಪ್ಪೀನ್ಸ್ ೧೯೯೦ರ ಕೊನೆಯಿಂದ ೨೦೦೦ರ ದಶಕದ ಪೂರ್ವದವರೆಗೆ ವಿಶ್ವದ ಪಠ್ಯ ರಾಜಧಾನಿ ಎಂದು ಹೆಸರಾಯಿತು.

ನ್ಯೂಜಿಲೆಂಡ್‌‌

ಬದಲಾಯಿಸಿ

ನ್ಯೂಜಿಲೆಂಡ್‌ನಲ್ಲಿ ಮೂರು ಮುಖ್ಯ ದೂರಸಂಪರ್ಕ ಕಂಪೆನಿ ಜಾಲಗಳಿವೆ. ಟೆಲಿಕಾಂ NZ ನ್ಯೂಜಿಲೆಂಡ್‌ನಲ್ಲಿ ಪ್ರಥಮ ದೂರಸಂಪರ್ಕ ಕಂಪೆನಿಯಾಗಿದ್ದು, ಎಲ್ಲ ಸ್ಥಿರ ದೂರವಾಣಿ ಮಾರ್ಗಗಳ ಮಾಲೀಕತ್ವ ಹೊಂದಿದೆ. ಆದಾಗ್ಯೂ, ಇದು ಅವುಗಳನ್ನು ಇತರೆ ಕಂಪನಿಗಳ ಬಳಕೆಗೆ ಗುತ್ತಿಗೆ ಕೂಡ ನೀಡುತ್ತವೆ. ವೊಡಾಫೋನ್ ೧೯೯೮ರಲ್ಲಿ ಬೆಲ್‌ಸೌತ್ ನ್ಯೂಜಿಲೆಂಡ್ ಸ್ವಾಧೀನಕ್ಕೆ ತೆಗೆದುಕೊಂಡಿತು ಮತ್ತು ನ್ಯೂಜಿಲೆಂಡ್ ಮೊಬೈಲ್ ಮಾರುಕಟ್ಟೆಯಲ್ಲಿ ೨೦೦೭ ಡಿಸೆಂಬರ್‌ನಲ್ಲಿದ್ದಂತೆ ಶೇಕಡ ೫೩.೭ ರಷ್ಟು ಸ್ವಾಧೀನ ಹೊಂದಿರುವುದಾಗಿ ಪ್ರತಿಪಾದಿಸಿದೆ[೩೫] ಮತ್ತು೨ಡಿಗ್ರೀಸ್ ೨೦೦೯ರಲ್ಲಿ ಆಗಮಿಸಿತು. ೨೦೦೫ರಲ್ಲಿದ್ದಂತೆ ವಯಸ್ಕ ಜನಸಂಖ್ಯೆಯಲ್ಲಿ ಸುಮಾರು ಶೇಕಡ ೮೫ರಷ್ಟು ಜನರು ಮೊಬೈಲ್ ಫೋನ್ ಹೊಂದಿದ್ದರು.[೩೬] ಸಾಮಾನ್ಯವಾಗಿ ಪಠ್ಯ ಸಂದೇಶ ಕಳಿಸುವುದು ಫೋನ್ ಕರೆಗಳಿಗಿಂತ ಜನಪ್ರಿಯವಾಯಿತು. ಇದು ಏಕಾಂತಕ್ಕೆ ಕಡಿಮೆ ಭಂಗ ಉಂಟುಮಾಡುತ್ತಾದ್ದರಿಂದ ಹೆಚ್ಚು ಸೌಜನ್ಯದಿಂದ ಕೂಡಿದೆಯೆಂದು ದೃಷ್ಟಿಕೋನ ಹೊಂದಲಾಗಿದೆ.

ಆಫ್ರಿಕಾ

ಬದಲಾಯಿಸಿ

ಪಠ್ಯ ಸಂದೇಶ ಕಳಿಸುವುದು ಮುಂದಿನ ಕೆಲವು ವರ್ಷಗಳಲ್ಲಿ ಆಫ್ರಿಕಾದ ಮೊಬೈಲ್ ಜಾಲದ ನಿರ್ವಾಹಕರಿಗೆ ಮುಖ್ಯ ಆದಾಯ ಚಾಲಕಶಕ್ತಿಯಾಗಲಿದೆ.[೩೭] ಇಂದು, ಪಠ್ಯ ಸಂದೇಶ ಕಳಿಸುವುದು ಆಫ್ರಿಕದ ಮಾರುಕಟ್ಟೆಯಲ್ಲಿ ನಿಧಾನವಾಗಿ ಪ್ರಭಾವವನ್ನು ಗಳಿಸುತ್ತಿದೆ. ಇಂತಹ ಒಬ್ಬ ವ್ಯಕ್ತಿ ಪಠ್ಯ ಸಂದೇಶವನ್ನು ಕಳಿಸುವ ಮೂಲಕ HIV ಮತ್ತು AIDS ಕುರಿತು ಪ್ರಚಾರ ಮಾಡಿದ. ಇದು ಗಮನಾರ್ಹವಾಗಿ ಆಫ್ರಿಕನ್ನರ ಮೇಲೆ ಪರಿಣಾಮ ಬೀರಿತು.[೩೮] ೨೦೦೯ರ ಸೆಪ್ಟೆಂಬರ್‌ನಲ್ಲಿ, ಆಫ್ರಿಕಾದ ಬಹು ರಾಷ್ಟ್ರೀಯ ಪ್ರಚಾರದಲ್ಲಿ ಸಾರ್ವಜನಿಕ ಆರೋಗ್ಯ ಕೇಂದ್ರಗಳಲ್ಲಿ ಅವಶ್ಯಕ ವಸ್ತುಗಳ ದಾಸ್ತಾನು ಕೊರತೆಯನ್ನು ಬಹಿರಂಗ ಮಾಡಲು ಮತ್ತು ಈ ವಿಷಯವನ್ನು ನಿಭಾಯಿಸುವಂತೆ ಸರ್ಕಾರದ ಮೇಲೆ ಒತ್ತಡದ ಹೇರಲು ಪಠ್ಯ ಸಂದೇಶವನ್ನು ಬಳಸಿಕೊಂಡರು.[೩೯] ಪಠ್ಯ ಸಂದೇಶವು ಆಫ್ರಿಕಾದಲ್ಲಿ ಆರೋಗ್ಯ ವಿಷಯಗಳ ಬಗ್ಗೆ ಮಾಹಿತಿಯನ್ನು ಹರಡುವುದು ಪ್ರೋತ್ಸಾಹದಾಯಕವಾಗಿ ಕಂಡಿತು. ಇತರೆ ಖಂಡಗಳಿಗೆ ಹೋಲಿಸಿದರೆ ಇದು ಒಂದು ರೀತಿ ಭಿನ್ನವಾಗಿತ್ತು.

ಸಾಮಾಜಿಕ ಪರಿಣಾಮ

ಬದಲಾಯಿಸಿ

ಪಠ್ಯ ಸಂದೇಶದ ಪ್ರವೇಶವು ಮುಂಚೆ ಸಾಧ್ಯವಾಗದ ಹೊಸ ಸ್ವರೂಪಗಳ ಪರಸ್ಪರ ಸಂವಹನಕ್ಕೆ ಸಾಧ್ಯವಾಯಿತು. ವ್ಯಕ್ತಿಯೊಬ್ಬ ಇನ್ನೊಬ್ಬ ಬಳಕೆದಾರನ ಜತೆ ಅಲ್ಪ ಕಾಲದಲ್ಲೇ ಉತ್ತರಿಸಬೇಕೆಂಬ ನಿರೀಕ್ಷೆಯಿಲ್ಲದೇ ಸಂಭಾಷಣೆಯನ್ನು ನಡೆಸಬಹುದು ಮತ್ತು ಸಂಭಾಷಣೆಯಲ್ಲಿ ನಿರತವಾಗಲು ಕಾಲವನ್ನು ಗೊತ್ತುಮಾಡುವ ಅಗತ್ಯವೂ ಇರುವುದಿಲ್ಲ. ಧ್ವನಿ ಕರೆಯು ಅಪ್ರಾಯೋಗಿಕ, ಅಸಾಧ್ಯ ಅಥವಾ ಅಸ್ವೀಕಾರಾರ್ಹ ಎನಿಸಿದ ಪರಿಸ್ಥಿತಿಗಳಲ್ಲಿ ಮೊಬೈಲ್ ಫೋನ್ ಬಳಕೆದಾರರು ಸಂವಹನವನ್ನು ಕಾಯ್ದುಕೊಳ್ಳಬಹುದು. ಪಠ್ಯ ಸಂದೇಶವು ಭಾಗವಹಿಸುವ ಸಂಸ್ಕೃತಿಗೆ ಸ್ಥಳವನ್ನು ದೊರಕಿಸಿಕೊಟ್ಟಿತು.ಇದು ವೀಕ್ಷಕರಿಗೆ ಆನ್‌ಲೈನ್ ಮತದಾನಕ್ಕೆ ಮತ್ತು ಟಿವಿ ಮತದಾನಗಳಿಗೆ ಅವಕಾಶ ನೀಡಿತು ಮತ್ತು ಈ ಕ್ರಮದ ಬಗ್ಗೆ ಮಾಹಿತಿಯನ್ನು ಪಡೆಯಲು ಕೂಡ ಅವಕಾಶ ಕಲ್ಪಿಸಿತು.[೪೦] ಪಠ್ಯ ಸಂದೇಶದಿಂದ ಜನರನ್ನು ಒಟ್ಟುಗೂಡಿಸುವುದು ಸಾಧ್ಯವಾಗಬಹುದು. ಪೀಪಲ್ ಪವರ್ ಸೃಷ್ಟಿಸುವ "ಸ್ಮಾರ್ಟ್ ಮಾಬ್ಸ್" ಅಥವಾ "ನೆಟ್ ವಾರ್" ಮೂಲಕ ಸಮುದಾಯದ ಪ್ರಜ್ಞೆಯನ್ನು ಸೃಷ್ಟಿಸುತ್ತದೆ.[೪೧]

ಭಾಷೆಯ ಮೇಲೆ ಪರಿಣಾಮ

ಬದಲಾಯಿಸಿ
 
ಪ್ಯಾರಿಸ್‌ನಲ್ಲಿ ಕಾಣಿಸುವ ಈ ಸ್ಟಿಕರ್ SMSಶೀಘ್ರಲಿಪಿಯಲ್ಲಿ ಸಂವಹನದ ಜನಪ್ರಿಯತೆಯನ್ನು ವಿಡಂಬನೆ ಮಾಡುತ್ತದೆ.ಫ್ರೆಂಚ್‌ನಲ್ಲಿ: "ಇದು ನೀನಾ? / ನಾನೇ! / ನೀನು ನನ್ನನ್ನು ಪ್ರೀತಿಸುತ್ತೀಯಾ? / ಬಾಯಿ ಮುಚ್ಚು!"

ಸಣ್ಣ ಫೋನ್ ಕೀಪ್ಯಾಡ್ ಕಾಗುಣಿತದ ಹಲವಾರು ರೂಪಾಂತರಗಳಿಗೆ ಕಾರಣವಾಯಿತು. ಉದಾಹರಣೆಗೆ "txt msg",ಅಥವಾ CamelCaseಬಳಕೆ, ಉದಾಹರಣೆಗೆ "ThisIsVeryLame". ಸಿರಿಲಿಕ್ ಅಥವಾ ಗ್ರೀಕ್ ಅಕ್ಷರಗಳನ್ನು ಬಳಸುವಾಗ ಅವಕಾಶ ನೀಡುವ ಹೆಚ್ಚು ಸೀಮಿತ ಸಂದೇಶದ ಉದ್ದಗಳನ್ನು ತಪ್ಪಿಸಲು, ಆ ಅಕ್ಷರಮಾಲೆಗಳಲ್ಲಿ ಬರೆದ ಭಾಷೆಗಳ ಭಾಷಿಕರು ತಮ್ಮ ಸ್ವಂತ ಭಾಷೆಗಾಗಿ ಲ್ಯಾಟಿನ್ ಅಕ್ಷರಮಾಲೆಯನ್ನು ಸಾಮಾನ್ಯವಾಗಿ ಬಳಸುತ್ತಾರೆ. ಕೆಲವು ಭಾಷೆಗಳಲ್ಲಿ ವ್ಯತ್ಯಾಸಸೂಚಕ ಚಿಹ್ನೆಗಳನ್ನು ಬಳಸಿಕೊಂಡು, ಉದಾಹರಣೆಗೆಪೋಲಿಷ್, SMS ತಂತ್ರಜ್ಞಾನವು ಲಿಖಿತ ಭಾಷೆಯ ಸಂಪೂರ್ಣ ಹೊಸ ರೂಪಾಂತರವನ್ನು ಸೃಷ್ಟಿಸಿತು: ವ್ಯತ್ಯಾಸಸೂಚಕ ಚಿಹ್ನೆಗಳಿಂದ ಸಾಮಾನ್ಯವಾಗಿ ಬರೆಯುತ್ತಿದ್ದ ಅಕ್ಷರಗಳನ್ನು (ಉದಾ, ą , ę , ś , ż ಪೋಲಿಷ್‌ನಲ್ಲಿ)ಈಗ ಅವುಗಳಿಲ್ಲದೇ ಬರೆಯಲಾಯಿತು. (a , e , s , z ರೀತಿಯಲ್ಲಿ) ಪೋಲಿಷ್ ಲಿಪಿಯಿಲ್ಲದೇ ಸೆಲ್ ಫೋನ್ ಬಳಕೆಗೆ script ಅಥವಾ ಯೂನಿಕೋಡ್ ಸಂದೇಶಗಳಲ್ಲಿ ಜಾಗವನ್ನು ಉಳಿಸಲು ಅನುಕೂಲ ಕಲ್ಪಿಸುವುದಾಗಿತ್ತು.

ಐತಿಹಾಸಿಕವಾಗಿ ಶೀಘ್ರಲಿಪಿಯಿಂದ ಅಭಿವೃದ್ಧಿಪಡಿಸಿದ ಈ ಭಾಷೆಯನ್ನುಬುಲ್ಲೆಟಿನ್ ಬೋರ್ಡ್ ಸಿಸ್ಟಂಗಳಲ್ಲಿ ಮತ್ತು ನಂತರ ಅಂತರಜಾಲ ಚ್ಯಾಟ್ ರೂಂಗಳಲ್ಲಿ ಬಳಸಲಾಯಿತು. ಅಲ್ಲಿ ಬಳಕೆದಾರರು ಕೆಲವು ಪದಗಳನ್ನು ಸಂಕ್ಷೇಪಿಸಿ, ಪ್ರತಿಕ್ರಿಯೆಯನ್ನು ಹೆಚ್ಚು ಶೀಘ್ರವಾಗಿ ಬೆರಳಚ್ಚು ಮಾಡಲು ಅವಕಾಶ ನೀಡುತ್ತಾರೆ. ಆದರೂ ಉಳಿಸಿದ ಕಾಲದ ಮೊತ್ತವು ಸಾಮಾನ್ಯವಾಗಿ ಅಮುಖ್ಯವಾಗುತ್ತದೆ. ಆದಾಗ್ಯೂ, SMS ನಲ್ಲಿ ಇದನ್ನು ಹೆಚ್ಚು ಪ್ರಕಟಿಸಲಾಯಿತು. ಮೊಬೈಲ್ ಫೋನ್ ಬಳಕೆದಾರರಿಗೆ ಸಾಮಾನ್ಯವಾಗಿ ಕಂಪ್ಯೂಟರ್ ಬಳಕೆದಾರರ ರೀತಿಯಲ್ಲಿ QWERTYಕೀಲಿಮಣೆಗೆ ಅವಕಾಶವಿರುವುದಿಲ್ಲ. ಪ್ರತಿಯೊಂದು ಅಕ್ಷರವನ್ನು ಬೆರಳಚ್ಚಿಸಲು ಹೆಚ್ಚು ಪ್ರಯತ್ನದ ಅಗತ್ಯವಿರುತ್ತದೆ ಮತ್ತು ಕಳಿಸಬಹುದಾದ ಅಕ್ಷರಗಳ ಸಂಖ್ಯೆಯಲ್ಲಿ ಮಿತಿಯಿರುತ್ತದೆ.

ಮ್ಯಾಂಡರಿನ್ ಚೈನೀಸ್‌ನಲ್ಲಿ ಪದಗಳ ರೀತಿಯಲ್ಲಿ ಧ್ವನಿಸುವ ಸಂಖ್ಯೆಗಳನ್ನು ಪದಗಳ ಬದಲಿಗೆ ಬಳಸಲಾಗುತ್ತದೆ. ಉದಾಹರಣೆಗೆ, ೫೨೦ ಸಂಖ್ಯೆಯು ಚೈನೀಸ್ (ವು ಎರ್ ಲಿಂಗ್ ) "ಐ ಲವ್ ಯುವ್"(ವೊ ಐ ನಿ )ಪದಗಳ ರೀತಿಯಲ್ಲಿ ಧ್ವನಿಸುತ್ತದೆ. ಅನುಕ್ರಮ ೭೪೮ (ಕಿ ಸಿ ಬಾ )ಶಾಪವಾದ "ಗೋ ಟು ಹೆಲ್"(ಕ್ವು ಸಿ ಬಾ )ರೀತಿಯಲ್ಲಿ ಧ್ವನಿಸುತ್ತದೆ.

ಪ್ರೆಡೆಕ್ಟಿವ್ ಟೆಕ್ಸ್ಟ್ ತಂತ್ರಾಂಶ, ಪದಗಳನ್ನು (ಟೇಜಿಕ್ T೯ ಮತ್ತು iTAP) ಅಥವಾ ಅಕ್ಷರಗಳನ್ನು (ಈಟೋನಿಯ ಲೆಟರ್‌ವೈಸ್) ಊಹಿಸಲು ಪ್ರಯತ್ನಿಸುತ್ತದೆ ಮತ್ತು ಕಾಲವನ್ನು ವ್ಯಯಮಾಡುವ ಮಾಹಿತಿಯ ಶ್ರಮವನ್ನು ತಗ್ಗಿಸುತ್ತದೆ. ಇದು ಸಂಕ್ಷೇಪಗಳ ಅವಶ್ಯಕತೆಯನ್ನು ಕಡಿಮೆಗೊಳಿಸುತ್ತದಲ್ಲದೇ, ತಂತ್ರಾಂಶದ ನಿಘಂಟುನಲ್ಲಿರುವ ನಿಯತ ಪದಗಳಿಗಿಂತ ಬೆರಳಚ್ಚಿಸಲು ನಿಧಾನವಾಗುತ್ತದೆ. ಆದಾಗ್ಯೂ, ಇದು ಸಂದೇಶಗಳನ್ನು ಉದ್ದವಾಗಿಸುತ್ತದೆ, ಸಾಮಾನ್ಯವಾಗಿ ಪಠ್ಯ ಸಂದೇಶವನ್ನು ಬಹು ಭಾಗಗಳಲ್ಲಿ ಕಳಿಸುವ ಅಗತ್ಯವಿರುತ್ತದೆ. ಆದ್ದರಿಂದ ಅದನ್ನು ಕಳಿಸಲು ಹೆಚ್ಚು ವೆಚ್ಚವಾಗುತ್ತದೆ.

ವೆಬ್‌ಸೈಟ್ ಪೋರ್ಟಲ್‌ಗಳಾದ transl೮it ಮುಂತಾದವು ಈ ಪಠ್ಯ ಭಾಷೆಯ ಪ್ರಮಾಣೀಕರಣಕ್ಕೆ ಬಳಕೆದಾರರ ಸಮುದಾಯವನ್ನು ಬೆಂಬಲಿಸಿದೆ. ಅನುವಾದಗಳನ್ನು ಸಲ್ಲಿಸಲು ಮತ್ತು ಯೂಸರ್ ಹ್ಯಾಂಡಲ್‌ನೊಂದಿಗೆ ಹಕ್ಕು ಪ್ರತಿಪಾದಿಸಲು ಅಥವಾ ಮೇಲಿನ ಸಂದೇಶಗಳನ್ನು ಸಲ್ಲಿಸಲು ಮತ್ತು ಭಾಷೆಯ ನುಡಿಗಟ್ಟನ್ನು ಊಹಿಸಲು ಬಳಕೆದಾರರಿಗೆ ಇದು ಅವಕಾಶ ನೀಡುತ್ತದೆ. ಈ ಪೋರ್ಟಲ್ ಅಂತಾರಾಷ್ಟ್ರೀಯ ಜನಪ್ರಿಯತೆಯಿಂದಾಗಿ ೨೦೦೫ರ ಕೊನೆಯಲ್ಲಿ transl೮it! ಪ್ರಕಟಣೆಯಲ್ಲಿ ಫಲ ನೀಡಿತು.dxNRE & glosRE (ನಿಘಂಟು & ಲಘುಶಬ್ದಕೋಶ) ವಿಶ್ವದ ಪ್ರಥಮ ಮತ್ತು ಅತ್ಯಂತ ಪೂರ್ಣ,SMS ಮತ್ತು ಪಠ್ಯ ಭಾಷೆ ಪುಸ್ತಕ.

ಪಠ್ಯ ಸಂದೇಶದ ಬಳಕೆಯು ಜನರು ಮಾತನಾಡುವ ಮತ್ತು ಪ್ರಬಂಧಗಳನ್ನು ಬರೆಯುವ ವಿಧಾನವನ್ನು ಬದಲಿಸಿತು. ಕೆಲವರು ಇದನ್ನು ಹಾನಿಕರ ಎಂದು ನಂಬಿದರು.[೪೨] ೨೦೦೬ರ ನವೆಂಬರ್‌ನಲ್ಲಿ, ನ್ಯೂಜಿಲೆಂಡ್ ಕ್ವಾಲಿಫಿಕೇಶನ್ಸ್ ಅಥೋರಿಟಿ ಮಾಧ್ಯಮಿಕ ಶಾಲೆಯ ವಿದ್ಯಾರ್ಥಿಗಳಿಗೆ ವರ್ಷದ ಕೊನೆಯ ಪರೀಕ್ಷೆ ಪತ್ರಿಕೆಗಳಲ್ಲಿ ಮೊಬೈಲ್ ಫೋನ್ ಪಠ್ಯ ಭಾಷೆಯನ್ನು ಬಳಸಲು ಅವಕಾಶ ನೀಡಿದ ಕ್ರಮವನ್ನು ಅನುಮೋದಿಸಿತು.[೪೩] ಶಾಲೆಯ ಕಾರ್ಯಭಾರಗಳಲ್ಲಿ ಪಠ್ಯ ಭಾಷೆಗಳನ್ನು ಬಳಸುವ ಬಗ್ಗೆ ೨೦೦೨ರಲ್ಲಿ ಆರಂಭವಾದ ಅತ್ಯಂತ ಪ್ರಚಾರದ ವರದಿಗಳಲ್ಲಿ ಲಿಖಿತ ಸಂವಹನದ ಗುಣಮಟ್ಟವು ಕುಸಿಯುತ್ತಿದೆಯೆಂದು ಆತಂಕ ವ್ಯಕ್ತಪಡಿಸಲು ಕಾರಣವಾಯಿತು.[೧೩] ಈ ಸಮಸ್ಯೆಯನ್ನು ನಿಯಂತ್ರಿಸಲು ಶಿಕ್ಷಕರು ಮತ್ತು ಪ್ರಾಧ್ಯಾಪಕರು ಕಷ್ಟದ ಅವಧಿಯನ್ನು ಎದುರಿಸುತ್ತಿದ್ದಾರೆ ಎಂದು ಇತರೆ ವರದಿಗಳು ತಿಳಿಸಿದವು.[೧೩] ಆದಾಗ್ಯೂ, ಪಠ್ಯ ಭಾಷೆಯು ವ್ಯಾಪಕ ಅಥವಾ ಹಾನಿಕರ ಎನ್ನುವ ಕಲ್ಪನೆಯನ್ನು ಭಾಷಾ ತಜ್ಞರ ಸಂಶೋಧನೆಯು ನಿರಾಕರಿಸಿದೆ.[೪೪]

ದಿ ನ್ಯೂಯಾರ್ಕರ್ ‌ ಪತ್ರಿಕೆಯ ಲೇಖನವೊಂದು ಇಂಗ್ಲೀಷ್‌ನೊಂದಿಗೆ ವಿಶ್ವದ ಕೆಲವು ಭಾಷೆಗಳು ಹೇಗೆ ಪಠ್ಯ ಸಂದೇಶದೊಂದಿಗೆ ಅಮೆರಿಕೀಕರಣವಾಗಿದೆ ಎನ್ನುವುದನ್ನು ಶೋಧಿಸಿದೆ. ವ್ಯತ್ಯಾಸಸೂಚಕ ಚಿಹ್ನೆಗಳ ಬಳಕೆಯನ್ನು ಫ್ರೆಂಚ್ ಮುಂತಾದ ಭಾಷೆಗಳಲ್ಲಿ ಮತ್ತು ಇಥಿಯೋಪಿಯ ಭಾಷೆಗಳಲ್ಲಿ ಚಿಹ್ನೆಗಳನ್ನು ತೆಗೆಯಲಾಯಿತು. ಈ ಪುಸ್ತಕದಲ್ಲಿ Txtng: the Gr8 Db8 , ಡೇವಿಡ್ ಕ್ರಿಸ್ಟಲ್ ಎಲ್ಲ ಹನ್ನೊಂದು ಭಾಷೆಗಳ ಪಠ್ಯಸಂದೇಶ ಕಳಿಸುವವರು "lol", "u", "brb", ಮತ್ತು "gr೮", ಎಲ್ಲವೂ ಇಂಗ್ಲೀಷ್ ಮೂಲದ ಶೀಘ್ರಲಿಪಿಗಳನ್ನು ಬಳಸುತ್ತಾರೆ. ಪಠ್ಯ ಸಂದೇಶದಲ್ಲಿ ಚಿತ್ರಸಂಕೇತ ಮತ್ತು ಪದಸಂಕೇತದ ಬಳಕೆಯು ಪ್ರತಿಯೊಂದು ಭಾಷೆಯಲ್ಲಿ ಉಪಸ್ಥಿತವಿರುತ್ತದೆ. ಪದ ಅಥವಾ ಚಿಹ್ನೆಗಳನ್ನು ಬಿಂಬಿಸಲು ಅವರು ಪದಗಳನ್ನು ಸಂಕ್ಷೇಪಗೊಳಿಸುತ್ತಿದ್ದರು. ಇದು ಪದದ ಉಚ್ಚಾರಾಂಶದ ರೀತಿಯಲ್ಲಿ ಧ್ವನಿಸುತ್ತದೆ. ಉದಾಹರಣೆಗೆ ೨day or b೪ ರೀತಿ. ಇದನ್ನು ಸಾಮಾನ್ಯವಾಗಿ ಇತರ ಭಾಷೆಗಳಲ್ಲಿ ಕೂಡ ಬಳಸಲಾಗುತ್ತದೆ. ಹಲವಾರು ಹಲವಾರು ಭಾಷೆಗಳಲ್ಲಿ ಕೆಲವು ಉದಾಹರಣೆಗಳನ್ನು ಕ್ರಿಸ್ಟಲ್ ನೀಡುತ್ತಾರೆ. ಉದಾಹರಣೆಗೆ ಇಟಲಿಯ sei ‌. "ಸಿಕ್ಸ್"ನ್ನು sei ಗೆ ಬದಲಿಯಾಗಿ ಬಳಸಲಾಗುತ್ತದೆ, "ಯು ಆರ್". ಉದಾಹರಣೆಗೆ: dv ೬ = ಡೌವ್ ಸೇಯ್ ("ವೇರ್ ಆರ್ ಯು") ಮತ್ತು ಫ್ರೆಂಚ್ ಸೆಪ್ಟ್ "ಸೆವೆನ್" = ಕ್ಯಾಸೆಟ್ಟೆ ("ಕ್ಯಾಸೆಟ್"). ಅಂಕಿ ಅನುಕ್ರಮಗಳು ಕೂಡ ಬಳಕೆಯಲ್ಲಿವೆ. ಪದದ ಹಲವಾರು ಉಚ್ಚಾರಾಂಶಗಳಿಗೆ ಬದಲಿಯಾಗಿ ಅಂಕಿಗಳನ್ನು ಬಳಸಿಕೊಂಡು ಇಡೀ ನುಡಿಗಟ್ಟನ್ನು ಸೃಷ್ಟಿಸುವುದು. ಉದಾಹರಣೆಗೆ, ಫ್ರೆಂಚ್‌ನಲ್ಲಿ a೧೨c೪ ನ್ನು à un de ces quatres ಎಂದು ಹೇಳಬಹುದು. "ಸೀ ಯು ಎರೌಂಡ್"(ಅಕ್ಷರಶಃ: "ನಾಲ್ಕರಲ್ಲಿ ಒಂದು [ದಿನಗಳು]"). ಪಠ್ಯ ಸಂದೇಶದಲ್ಲಿ ಚಿಹ್ನೆಗಳ ಬಳಕೆ ಮತ್ತು ಇಂಗ್ಲೀಷ್‌ನಿಂದ ಎರವಲು ಪಡೆದುಕೊಂಡಿದ್ದಕ್ಕೆ ಉದಾಹರಣೆಯು @ ಬಳಕೆಯಾಗಿದೆ. ಪಠ್ಯ ಸಂದೇಶದಲ್ಲಿ ಇದನ್ನು ಬಳಸಿದಾಗಲೆಲ್ಲ, ಅದರ ಉದ್ದೇಶಿತ ಬಳಕೆಯು ಇಂಗ್ಲೀಷ್ ಉಚ್ಚಾರಣೆಯೊಂದಿಗಿರುತ್ತದೆ. ಕ್ರಿಸ್ಟಲ್ @F ನಲ್ಲಿ @ ನ ವೆಲ್ಷ್ ಬಳಕೆಯ ಬಗ್ಗೆ ಉದಾಹರಣೆ ನೀಡುತ್ತಾರೆ. ಇದನ್ನು atafಎಂದು ಉಚ್ಚರಿಸಲಾಗುತ್ತದೆ. ಅದರ ಅರ್ಥವು "ಟು ಮಿ" ಎಂದಾಗುತ್ತದೆ. ಚಿಹ್ನೆ ಆಧಾರಿತ ಭಾಷೆಗಳಾದ ಚೈನೀಸ್ ಮತ್ತು ಜಪಾನೀಸ್‌ನಲ್ಲಿ ಸಂಖ್ಯೆ ಉಚ್ಚಾರಣೆಯ ಸಂಕ್ಷಿಪ್ತ ರೂಪದ ಆಧಾರದ ಮೇಲೆ ಸಂಖ್ಯೆಗಳು ಗೊತ್ತುಪಡಿಸಿದ ಉಚ್ಚಾರಾಂಶಗಳಾಗಿವೆ. ಕೆಲವು ಬಾರಿ ಸಂಖ್ಯೆಯ ಇಂಗ್ಲೀಷ್ ಉಚ್ಚಾರಣೆಯಾಗಿದೆ. ಈ ರೀತಿ, ಇಡೀ ಸಾಲುಗಳನ್ನು ನಿವೇದಿಸಲು ಕೇವಲ ಸಂಖ್ಯೆಗಳನ್ನು ಬಳಸಬಹುದು. ಉದಾಹರಣೆಗೆ ಚೈನೀಸ್‌ನಲ್ಲಿ "೮೮೦೭೭೦೧೩೧೪೫೨೦"ನ್ನು ಅಕ್ಷರಶಃ "ಹಗ್ ಹಗ್ ಯು, ಕಿಸ್ ಕಿಸ್ ಯು, ಹೋಲ್ ಲೈಪ್, ಹೋಲ್ ಲೈಫ್ ಐ ಲವ್ ಯು." ಇಂಗ್ಲೀಷ್ ವಿಶ್ವವ್ಯಾಪಿ ಪಠ್ಯ ಸಂದೇಶಕ್ಕೆ ವ್ಯತ್ಯಾಸದಲ್ಲಿ ಪ್ರಭಾವ ಬೀರುತ್ತದೆ. ಆದರೆ ಭಾಷೆಗಳ ವೈಯಕ್ತಿಕ ಲಕ್ಷಣಗಳೊಂದಿಗೆ ಸಂಯೋಜನೆ ಹೊಂದಿರುತ್ತದೆ.[೪೫] ಶೀಘ್ರಲಿಪಿಯಲ್ಲಿ ಅಮೆರಿಕದ ಜನಪ್ರಿಯ ಸಂಸ್ಕೃತಿಗೆ ಕೂಡ ಮಾನ್ಯತೆ ನೀಡಲಾಗಿದೆ. ಉದಾಹರಣೆಗೆ, ಹೋಮರ್ ಸಿಂಪ್ಸನ್ ಈ ರೀತಿ ಅನುವಾದವಾಗುತ್ತದೆ: ~(_೮^(|)[೪೬]. ಪಠ್ಯ ಸಂದೇಶವು ಇಂಗ್ಲೀಷ್ ಭಾಷೆಯಲ್ಲಿ ಹೆಚ್ಚು ಸೃಜನಶೀಲತೆಗೆ ದಾರಿ ಕಲ್ಪಿಸಿದೆ. ಜನರಿಗೆ ಅವರದೇ ಆದ ಅಸಂಸ್ಕೃತ ಭಾಷೆ, ಭಾವನೆಗಳು, ಸಂಕ್ಷಿಪ್ತಗಳು, ಪ್ರಥಮಾಕ್ಷರಿ ಮುಂತಾದುವನ್ನು ಸೃಷ್ಟಿಸಲು ಅವಕಾಶಗಳನ್ನು ಒದಗಿಸುತ್ತದೆ. ಸ್ವತಂತ್ರಭಾವ ಮತ್ತು ಸ್ವಾತಂತ್ರ್ಯವು ಜನರನ್ನು ಪುಳಕಿತಗೊಳಿಸುತ್ತದೆ. ಇದರಿಂದ ಪಠ್ಯ ಸಂದೇಶವು ಹೆಚ್ಚೆಚ್ಚು ಜನಪ್ರಿಯವಾಗಿ ಸಂವಹನಕ್ಕೆ ಅತ್ಯಂತ ಸಮರ್ಥ ದಾರಿಯಾಗಿದೆ ಎಂದು ಕ್ರಿಸ್ಟಲ್ ಹೇಳುತ್ತಾರೆ.[೪೭]

ಇತ್ತೀಚೆಗೆ ರೋಸನ್ ಮತ್ತಿತರರು ನಡೆಸಿದ ಸಂಶೋಧನೆಯಲ್ಲಿ ದಿನನಿತ್ಯದ ಬರವಣಿಗೆಯಲ್ಲಿ ಹೆಚ್ಚು ಭಾಷೆ ಆಧಾರದ ಪಠ್ಯ ಸಂದೇಶಗಳನ್ನು(ಅಡ್ಡದಾರಿಗಳಾದ LOL, ೨nite,ಇತರೆ)ಬಳಸುವ ಯುವ ಜನರು ಕೆಲವೇ ಭಾಷಾ ಪಠ್ಯ ಸಂದೇಶಗಳನ್ನು ಬಳಸುವ ಯುವಜನರಿಗಿಂತ ಕೆಟ್ಟ ಔಪಚಾರಿಕ ಬರಹವನ್ನು ಉತ್ಪಾದಿಸಿದ್ದಾರೆಂದು ಕಂಡುಬಂದಿದೆ.[೪೮] ಆದಾಗ್ಯೂ ಅನೌಪಚಾರಿಕ ಬರವಣಿಗೆಗೆ ಅದರ ನಿಖರ ವಿರುದ್ಧವು ನಿಜವಾಗಿದೆ. ಆದ್ದರಿಂದ ನಿವೇದನೆಯನ್ನು ಸಂಕ್ಷಿಪ್ತಗೊಳಿಸಲು ಪಠ್ಯ ಸಂದೇಶ ಕಳಿಸುವ ಕ್ರಮವು ಬಹುಶಃ ಯುವ ವಯಸ್ಕರಿಗೆ ಹೆಚ್ಚು ಅನೌಪಚಾರಿಕ ಬರಹ ಸೃಷ್ಟಿಸಲು ದಾರಿ ಕಲ್ಪಿಸುತ್ತದೆ. ಇದು ಅವರಿಗೆ ಉತ್ತಮ ಅನೌಪಚಾರಿಕ ಬರಹಗಾರರಾಗಲು ನೆರವಾಗುತ್ತದೆ.

ವಾಹನ ಚಾಲನೆಯಲ್ಲಿ ಪಠ್ಯ ಸಂದೇಶ

ಬದಲಾಯಿಸಿ
 
ಮೊಬೈಲ್ ಫೋನ್ ಮತ್ತು ಮುಂದಿರುವ ರಸ್ತೆ ನಡುವೆ ಗಮನವನ್ನು ವಿಭಜಿಸಿರುವ ಒಬ್ಬ ಚಾಲಕ

ವಾಹನ ಚಾಲನೆಯಲ್ಲಿ ಪಠ್ಯ ಸಂದೇಶದಿಂದ ಏಕಾಗ್ರತೆಭಂಗವಾಗುತ್ತದೆ. ೨೦೦೬ರಲ್ಲಿ ಲಿಬರ್ಟಿ ಮ್ಯೂಚುಯಲ್ ಇನ್‌ಶ್ಯೂರೆನ್ಸ್ ಗ್ರೂಪ್ ರಾಷ್ಟ್ರವ್ಯಾಪಿ ೨೬ ಪ್ರೌಢಶಾಲೆಗಳಿಂದ ೯೦೦ ಹದಿವಯಸ್ಕರ ಸಮೀಕ್ಷೆಯನ್ನು ನಡೆಸಿತು. ಪಠ್ಯ ಸಂದೇಶ ಕಳಿಸುವುದು ಅತ್ಯಂತ ಅಥವಾ ತೀವ್ರ ಏಕಾಗ್ರತೆಭಂಗವೆಂದು ಶೇಕಡ ೮೭ ವಿದ್ಯಾರ್ಥಿಗಳು ಕಂಡುಕೊಂಡಿದ್ದಾಗಿ ಫಲಿತಾಂಶಗಳು ತೋರಿಸಿವೆ.[೪೯] ನಂತರ, AAAಅಧ್ಯಯನವು ಶೇಕಡ ೪೬ಹದಿಹರೆಯದವರು ವಾಹನ ಚಲಾಯಿಸುವಾಗ ಪಠ್ಯ ಸಂದೇಶ ಕಳಿಸಿದ್ದರಿಂದ ಏಕಾಗ್ರತೆಭಂಗವಾಗಿದೆ ಎಂದು ಒಪ್ಪಿಕೊಂಡಿದ್ದಾರೆ. ವಾಹನ ಚಲಾಯಿಸುವಾಗ ಚಿತ್ತಚಾಂಚಲ್ಯಕ್ಕೆ ಒಳಗಾದ ಒಂದು ಉದಾಹರಣೆಯು ೨೦೦೮ಚಾಟ್ಸ್‌ವರ್ತ್ ರೈಲು ಡಿಕ್ಕಿಯಾಗಿದ್ದು, ೨೫ ಪ್ರಯಾಣಿಕರನ್ನು ಬಲಿತೆಗೆದುಕೊಂಡಿದೆ. ಸೂಕ್ಷ್ಮ ತನಿಖೆಯಿಂದ, ಆ ರೈಲಿನ ಎಂಜಿನಿಯರ್ ರೈಲನ್ನು ನಿರ್ವಹಿಸುವಾಗ ೪೫ ಪಠ್ಯ ಸಂದೇಶಗಳನ್ನು ಕಳಿಸಿದ್ದು ತಿಳಿದುಬಂತು.

ನಿರ್ಜನ ವಾಯು ನೆಲೆಯಲ್ಲಿ ಕಾರ್ ಎಂಡ್ ಡ್ರೈವರ್ ಸಂಪಾದಕ ಎಡ್ಡಿ ಆಲ್ಟರ್‌ಮನ್ ಜತೆ ನಡೆಸಿದ ಪ್ರಯೋಗದಲ್ಲಿ, ವಾಹನ ಚಾಲನೆ ಮಾಡುವಾಗ ಪಠ್ಯ ಸಂದೇಶ ಕಳಿಸುವುದು ಚಾಲಕನ ಸುರಕ್ಷತೆಯ ಮೇಲೆ ಕುಡಿದು ಚಾಲನೆ ಮಾಡುವುದಕ್ಕಿಂತ ಹೆಚ್ಚಿನ ನಕಾರಾತ್ಮಕ ಪರಿಣಾಮ ಬೀರುತ್ತದೆಂದು ತೋರಿಸಿತು. ಕಾನೂನುಬದ್ಧವಾಗಿ ಪಾನಮತ್ತರಾಗಿದ್ದಾಗ ಆಲ್ಟರ್‌ಮನ್ ಅವರು ಗಂಟೆಗೆ ೭೦ ಮೈಲು ವೇಗದಲ್ಲಿ ಅವರ ವಾಹನವನ್ನು ನಿಲ್ಲಿಸುವ ದೂರಕ್ಕೆ ನಾಲ್ಕು ಅಡಿ ಹೆಚ್ಚು ದೂರದಲ್ಲಿ ನಿಲ್ಲಿಸಿದರು. ಈ ಮೇಲೆ ಸಂದೇಶವನ್ನು ಓದಿದಾಗ ೩೬ ಅಡಿ ಹೆಚ್ಚು ದೂರದಲ್ಲಿ ನಿಲ್ಲಿಸಿದರು ಮತ್ತು ಪಠ್ಯವನ್ನು ಕಳಿಸಿದಾಗ ೭೦ ಅಡಿಗಳ ದೂರವು ಸೇರ್ಪಡೆಯಾಯಿತು.[೫೦]

೨೦೦೯ರಲ್ಲಿ ವಿರ್ಜಿನಿಯ ಟೆಕ್ ಸಾರಿಗೆ ಸಂಸ್ಥೆಯು ೧೮ ತಿಂಗಳ ಅಧ್ಯಯನದ ಫಲಿತಾಂಶಗಳನ್ನು ಬಿಡುಗಡೆ ಮಾಡಿತು. ೧೦೦ಕ್ಕಿಂತ ಹೆಚ್ಚು ದೂರ ಸಾಗಣೆಯ ಟ್ರಕ್‌ಗಳ ಒಳಗೆ ಕ್ಯಾಮೆರಾಗಳನ್ನು ಇರಿಸುವುದು ಈ ಅಧ್ಯಯನವು ಒಳಗೊಂಡಿತ್ತು. ಚಾಲಕರ ಒಟ್ಟು ಚಾಲನೆ ದೂರವಾದ ಮೂರು ದಶಲಕ್ಷ ಮೈಲುಗಳ ದೂರದವರೆಗೆ ಚಾಲಕರ ಚಲನವಲನವನ್ನು ಅವು ದಾಖಲಿಸಿದವು. ಚಾಲಕರು ಪಠ್ಯ ಸಂದೇಶ ಕಳಿಸುತ್ತಿದ್ದಾಗ, ಅಪಘಾತವಾಗುವ ಅಪಾಯವು ಪಠ್ಯ ಸಂದೇಶ ಕಳಿಸದಿರುವುದಕ್ಕಿಂತ ೨೩ ಬಾರಿ ಹೆಚ್ಚಾಗಿದೆ ಎಂದು ಅಧ್ಯಯನವು ತೀರ್ಮಾನಿಸಿತು.[೫೧]

ಸೆಕ್ಸ್‌ಟಿಂಗ್

ಬದಲಾಯಿಸಿ

ಸೆಕ್ಸ್‌ಟಿಂಗ್ ಮೊಬೈಲ್ ಉಪಕರಣಗಳ ನಡುವೆ SMS ಬಳಸಿಕೊಂಡು ಲೈಂಗಿಕವಾಗಿ ಬಿಚ್ಚುನುಡಿಯ ಅಥವಾ ಸಲಹಾತ್ಮಕವಾದ ವಿಷಯವಾಗಿದೆ.[೫೨] ಪಠ್ಯ ಸಂದೇಶದ ಒಂದು ಪ್ರಕಾರವಾದ ಇದು ಲೈಂಗಿಕವಾಗಿ ಉದ್ದೀಪನಗೊಳಿಸುವ ಉದ್ದೇಶದ ಪಠ್ಯ, ಚಿತ್ರಗಳು ಅಥವಾ ವಿಡಿಯೊಗಳನ್ನು ಒಳಗೊಂಡಿರುತ್ತದೆ.

ಲೈಂಗಿಕತೆ ಮತ್ತು ಪಠ್ಯ ಸಂದೇಶ ದ ಮಿಶ್ರಪದವಾದ ಸೆಕ್ಸ್‌ಟಿಂಗ್ ೨೦೦೫ರಲ್ಲಿ ಸಂಡೇ ಟೆಲಿಗ್ರಾಫ್ ಮ್ಯಾಗಜೀನ್ ‌ನಲ್ಲಿ ವರದಿಯಾಯಿತು.[೫೩] ದಿನವಿಡೀ ಮರುಳುಗೊಳಿಸುವ ಸಂದೇಶಗಳಿಂದ ಇನ್ನೊಬ್ಬ ವ್ಯಕ್ತಿಯನ್ನು ಪ್ರಚೋದಿಸಲು SMS ನ ಸೃಜನಾತ್ಮಕ ಬಳಕೆಯ ಪ್ರವೃತ್ತಿಯನ್ನು ಇದು ಹೊಂದಿದೆ.[೫೪]

ಸಾಮಾನ್ಯವಾಗಿ ಸೆಕ್ಸ್‌ಟಿಂಗ್ ಇಬ್ಬರು ವ್ಯಕ್ತಿಗಳ ನಡುವೆ ಪರಸ್ಪರ ಒಪ್ಪಿಗೆಯಿಂದ ನಡೆಯುತ್ತದಾದರೂ, ವಿಷಯದ ವಸ್ತುವಾದ ವ್ಯಕ್ತಿಯ ಇಚ್ಛೆಗೆ ವಿರುದ್ಧವಾಗಿ ನಡೆಯುತ್ತದೆ.[೫೨] ಈ ಕುರಿತು ಅನೇಕ ನಿದರ್ಶನಗಳು ವರದಿಯಾಗಿದ್ದು, ಸೆಕ್ಸ್‌ಟಿಂಗ್ ಸಂದೇಶ ಸ್ವೀಕರಿಸಿದವರು ಸಂದೇಶದ ವಿಷಯವನ್ನು ಇತರರ ಜತೆ ಹಂಚಿಕೊಂಡಿದ್ದಾರೆ. ಅವರ ಸ್ನೇಹಿತರನ್ನು ಮೆಚ್ಚಿಸಲು ಅಥವಾ ಅದನ್ನು ಕಳಿಸಿದಾತನನ್ನು ಮುಜುಗರಕ್ಕೆ ಈಡುಮಾಡುವ ಕಡಿಮೆ ನಿಕಟ ಉದ್ದೇಶಗಳನ್ನು ಹೊಂದಿರುತ್ತಾರೆ. ಮಿಲೆ ಸೈರಸ್, ವನೀಸ್ಸಾ ಹಡ್ಜೆನ್ಸ್ ಮತ್ತು ಆಡ್ರೀನ್ ಬೈರಾಲ್ ಇಂತಹ ಸೆಕ್ಸ್‌ಟಿಂಗ್ ದುರ್ಬಳಕೆಗಳಿಗೆ ಬಲಿಪಶುವಾಗಿದ್ದಾರೆ.[೫೫]

ನ್ಯಾಷನಲ್ ಕ್ಯಾಂಪೇನ್ ಟು ಪ್ರಿವೆಂಟ್ ಟೀನ್ ಎಂಡ್ ಅನ್‌ಪ್ಲಾನಡ್ ಪ್ರೆಗ್ನೆನ್ಸಿ ಮತ್ತು CosmoGirl.com [೫೬] ನಡೆಸಿದ ೨೦೦೮ರ ಸಮೀಕ್ಷೆಯಲ್ಲಿ ಹದಿವಯಸ್ಕರ ನಡುವೆ ಸೆಕ್ಸ್‌ಟಿಂಗ್ ಮತ್ತು ಇತರೆ ಕಾಮಪ್ರಚೋದಕ ಆನ್‌ಲೈನ್ ವಿಷಯಗಳು ಹಂಚಿಕೆಯಾಗುವ ಪ್ರವೃತ್ತಿಯನ್ನು ಸೂಚಿಸಿತು. ಸಮೀಕ್ಷೆ ನಡೆಸಲಾದ ಹದಿಹರೆಯದ ಐವರು ಬಾಲಕಿಯಲ್ಲಿ ಒಬ್ಬಳು(ಶೇಕಡ ೨೨)ಮತ್ತು ಹದಿಹರೆಯದ ೧೩-೧೬ ವರ್ಷ ವಯಸ್ಸಿನ ಶೇಕಡ ೧೧ ಬಾಲಕಿಯರು ತಾವು ವಿದ್ಯುನ್ಮಾನ ಮಾರ್ಗದಲ್ಲಿ ಅಥವಾ ಆನ್‌ಲೈನ್ ಮೂಲಕ ತಮ್ಮ ನಗ್ನ ಅಥವಾ ಅರೆನಗ್ನ ಚಿತ್ರಗಳನ್ನು ಕಳಿಸಿರುವುದಾಗಿ ಹೇಳಿದ್ದಾರೆ. ಹದಿಹರೆಯದ ಬಾಲಕರಲ್ಲಿ ಮೂರನೇ ಒಂದು(ಶೇಕಡ ೩೩) ಮತ್ತು ಹದಿಹರೆಯದ ಬಾಲಕಿಯರಲ್ಲಿ ನಾಲ್ಕನೇ ಒಂದು(ಶೇಕಡ ೨೫)ಭಾಗವು ತಮಗೆ ಖಾಸಗಿ ನಗ್ನ ಅಥವಾ ಅರೆನಗ್ನ ಚಿತ್ರಗಳನ್ನು ತೋರಿಸಲಾಗಿದೆ ಎಂದು ಹೇಳಿದ್ದಾರೆ. ಸಮೀಕ್ಷೆಯ ಪ್ರಕಾರ, ಲೈಂಗಿಕ ಸಲಹಾತ್ಮಕ ಸಂದೇಶಗಳು(ಪಠ್ಯ, ಈ-ಮೇಲ್, ದಿಢೀರ್ ಸಂದೇಶಗಳು)ಚಿತ್ರಗಳಿಂದ ಹೆಚ್ಚು ಸಾಮಾನ್ಯವಾಗಿದ್ದು, ಶೇಕಡಾ ೩೯ ಹದಿವಯಸ್ಸಿನವರು ಇಂತಹ ಸಂದೇಶಗಳನ್ನು ಕಳಿಸಿದ್ದಾರೆ ಮತ್ತು ಅರ್ಧದಷ್ಟು ಹದಿವಯಸ್ಸಿನವರು(ಶೇಕಡ ೫೦) ಇವುಗಳನ್ನು ಸ್ವೀಕರಿಸಿದ್ದಾರೆ.

೧೮ವರ್ಷ ವಯಸ್ಸಿಗಿಂತ ಕೆಳವಯಸ್ಸಿನ ಹದಿವಯಸ್ಕರು ಇದರಲ್ಲಿ ಒಳಗೊಂಡಾದ ಸೆಕ್ಸ್‌ಟಿಂಗ್ ಕಾನೂನಿನ ವಿಷಯವಾಗುತ್ತದೆ. ಏಕೆಂದರೆ ಅವರು ಕಳಿಸುವ ಸ್ವಯಂ ನಗ್ನ ಚಿತ್ರಗಳಿಂದ ಅದನ್ನು ಸ್ವೀಕರಿಸುವವರು ಮಕ್ಕಳ ಕಾಮಪ್ರಚೋದಕ ಚಿತ್ರಗಳನ್ನು ಹೊಂದಿರುವ ಆರೋಪಕ್ಕೆ ಗುರಿಯಾಗುತ್ತಾರೆ.[೫೭]

ಶಾಲೆಗಳಲ್ಲಿ

ಬದಲಾಯಿಸಿ
 
ಶಾಲೆಯ ತರಗತಿಯ ಸಮಯದಲ್ಲಿ ಇಬ್ಬರು ಬಾಲಕಿಯರು ಪಠ್ಯ ಸಂದೇಶ ಕಳಿಸುತ್ತಿರುವುದು

ಪಠ್ಯ ಸಂದೇಶ ಕಳಿಸುವುದು ಶೈಕ್ಷಣಿಕವಾಗಿ ವಿದ್ಯಾರ್ಥಿಗಳ ಮೇಲೆ ಪರಿಣಾಮ ಬೀರಿದೆ. ಪರೀಕ್ಷೆಗಳಲ್ಲಿ ವಂಚನೆ ಮಾಡಲು ಸುಲಭವಾದ ಮಾರ್ಗವನ್ನು ಸೃಷ್ಟಿಸಿದೆ. ೨೦೦೨ಡಿಸೆಂಬರ್‌ನಲ್ಲಿ ತಮ್ಮ ಮೊಬೈಲ್ ದೂರವಾಣಿಗಳಲ್ಲಿ ಪಠ್ಯ ಸಂದೇಶಗಳ ಮೂಲಕ ಅಕೌಂಟಿಂಗ್ ಪರೀಕ್ಷೆಯಲ್ಲಿ ವಂಚನೆ ಮಾಡಿದ ೧೨ ವಿದ್ಯಾರ್ಥಿಗಳು ಸಿಕ್ಕಿಬಿದ್ದರು.[೫೮] ೨೦೦೨ರ ಡಿಸೆಂಬರ್‌ನಲ್ಲಿ ಜಪಾನ್ ಹಿಟೊಟ್‌ಸುಬಾಶಿ ವಿಶ್ವವಿದ್ಯಾನಿಲಯವು ಮೊಬೈಲ್ ದೂರವಾಣಿಗಳಲ್ಲಿ ಈ-ಮೇಲ್ ಮಾಡಿದ ಪರೀಕ್ಷೆಯ ಉತ್ತರಗಳನ್ನು ಸ್ವೀಕರಿಸಿದ್ದಕ್ಕಾಗಿ ೨೬ ವಿದ್ಯಾರ್ಥಿಗಳನ್ನು ನಪಾಸುಗೊಳಿಸಿತು.[೫೯]

ಮೊಬೈಲ್ ದೂರವಾಣಿಗಳನ್ನು ಪರೀಕ್ಷೆಗಳಲ್ಲಿ ವಂಚನೆಗೆ ಬಳಸಿ ಸಿಕ್ಕಿಬಿದ್ದ ವಿದ್ಯಾರ್ಥಿಗಳ ಸಂಖ್ಯೆಯು ಇತ್ತೀಚಿನ ವರ್ಷಗಳಲ್ಲಿ ಗಮನಾರ್ಹವಾಗಿ ಹೆಚ್ಚಿದೆ. ಒಕಾಡಾ ಪ್ರಕಾರ (೨೦೦೫), ಬಹುತೇಕ ಜಪಾನಿನ ಮೊಬೈಲ್ ದೂರವಾಣಿಗಳಲ್ಲಿ ರೇಖಾಚಿತ್ರಗಳು, ವಿಡಿಯೊಗಳು, ಆಡಿಯೊ ಮತ್ತು ವೆಬ್ ಕೊಂಡಿಗಳಿಂದ ಕೂಡಿದ ೨೫೦ ಮತ್ತು ೩೦೦೦ ಅಕ್ಷರಗಳಿಂದ ಕೂಡಿದ ದೀರ್ಘಪಠ್ಯ ಸಂದೇಶಗಳನ್ನು ಕಳಿಸಬಹುದು ಮತ್ತು ಸ್ವೀಕರಿಸಬಹುದು.[೬೦] ಇಂಗ್ಲೆಂಡ್‌ನಲ್ಲಿ ೨೮೭ ಶಾಲೆ ಮತ್ತು ಕಾಲೇಜು ವಿದ್ಯಾರ್ಥಿಗಳು ೨೦೦೪ರಲ್ಲಿ ಪರೀಕ್ಷೆಗಳ ಸಮಯದಲ್ಲಿ ಮೊಬೈಲ್ ದೂರವಾಣಿಗಳನ್ನು ಬಳಸಿದ ಆರೋಪದ ಮೇಲೆ ಪರೀಕ್ಷೆಗಳಿಂದ ಅವರನ್ನು ಹೊರಗಿಡಲಾಯಿತು.[೬೧] ಸುಧಾರಿಸಿದ ಪಠ್ಯ ಸಂದೇಶದ ಲಕ್ಷಣಗಳು ಪರೀಕ್ಷೆಗಳಲ್ಲಿ ವಂಚನೆ ಮಾಡಲು ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸುತ್ತದೆಂದು ಕೆಲವು ಶಿಕ್ಷಕರು ಮತ್ತು ಪ್ರಾಧ್ಯಾಪಕರು ಹೇಳಿದ್ದಾರೆ.[೬೨]

ಬೆದರಿಸುವುದು

ಬದಲಾಯಿಸಿ

ಪಠ್ಯ ಸಂದೇಶದ ಮೂಲಕ ವದಂತಿಗಳನ್ನು ಮತ್ತು ಗಾಳಿಸುದ್ದಿಗಳನ್ನು ಹರಡುವುದು ಅತೀ ಆತಂಕಕಾರಿ ವಿಷಯವಾಗಿದೆ. ಈ ರೀತಿಯ ಪಠ್ಯ "ಬೆದರಿಕೆ"ಯು ತೀವ್ರ ಯಾತನೆ ಉಂಟುಮಾಡುತ್ತದೆ ಮತ್ತು ಖ್ಯಾತಿಗಳಿಗೆ ಭಂಗವುಂಟು ಮಾಡುತ್ತದೆ. ಪಠ್ಯ ಸಂದೇಶಗಳನ್ನು ಬೇರೆಯವರಿಗೆ ಕಳಿಸಬೇಕೆಂಬ ಪ್ರಚೋದನೆಯನ್ನು ತಡೆಯುವುದು ಕಷ್ಟವಾಗುತ್ತದೆಂದು ಹಾರ್ಡಿಂಗ್ ಮತ್ತು ರೋಸನ್‌ಬರ್ಗ್(೨೦೦೫)ವಾದಿಸುತ್ತಾರೆ ಮತ್ತು ಪಠ್ಯ ಸಂದೇಶಗಳನ್ನು ಗುಂಡು ತುಂಬಿದ ಶಸ್ತ್ರಾಸ್ತ್ರಗಳು ಎಂದು ಬಣ್ಣಿಸುತ್ತಾರೆ.[೬೩]

ಯುರೋಪ್ ಮತ್ತು ಉತ್ತರ ಅಮೆರಿಕದಲ್ಲಿ ಮೊಬೈಲ್ ವೃತ್ತಿಪರರ ನಡುವೆ ನಡೆದ ಸಮೀಕ್ಷೆಯಲ್ಲಿ SMSಮೂಲಕ ಬೆದರಿಕೆಯು ವಾಸ್ತವ ಎಂದು ಶೇಕಡ ೯೪ ಜನರು ನಂಬಿದ್ದಾರೆಂದು ತೋರಿಸಿದೆ. SMSಮೂಲಕ ಪ್ಯಾನ್-ಯುರೋಪಿಯನ್ ಮತ್ತು ಉತ್ತರ ಅಮೆರಿಕ ಮೊಬೈಲ್ ವೃತ್ತಿಪರ ಪ್ರೇಕ್ಷಕವರ್ಗದ ನಡುವೆ ಸಮೀಕ್ಷೆಯನ್ನು ನಡೆಸಲಾಯಿತು ಮತ್ತು ಸಮೀಕ್ಷೆ ಪ್ರಶ್ನೆಗಳಿಗೆ ೪೧೨ ಜನರು ಪ್ರತಿಕ್ರಿಯಿಸಿದ್ದಾರೆ. ಸಮೀಕ್ಷೆಯು SMSಮೂಲಕ ಬೆದರಿಕೆ ಕುರಿತು ಮೊಬೈಲ್ ವೃತ್ತಿಪರರ ಅಭಿಪ್ರಾಯಗಳನ್ನು ಅಳತೆ ಮಾಡಿತು ಮತ್ತು ಈ ಬೆದರಿಕೆ ವಿರುದ್ಧ ಯಾರು ರಕ್ಷಣೆ ನೀಡಬೇಕು ಎಂಬ ಬಗ್ಗೆ ಅವರ ಅಭಿಪ್ರಾಯವನ್ನು ಪಡೆಯಿತು.[೬೪]

ವಿದ್ಯಾರ್ಥಿಯ ಗ್ರಹಿಕೆಗಳ ಮೇಲೆ ಪ್ರಭಾವ

ಬದಲಾಯಿಸಿ

ಪಠ್ಯ ಸಂದೇಶಗಳಲ್ಲಿ ಸಾಮಾನ್ಯವಾಗಿರುವ ಧ್ವನಿ ಸಂಕ್ಷೇಪಗಳನ್ನು ಮತ್ತು ಪ್ರಥಮಾಕ್ಷರಿಯನ್ನು ಹೊಂದಿರುವ ಈ-ಮೇಲ್ ವಿದ್ಯಾರ್ಥಿ ಕಳಿಸಿದರೆ(ಉದಾ-"great" ಬದಲಿಗೆ "gr೮" )ಆ ವಿದ್ಯಾರ್ಥಿಯನ್ನು ತರುವಾಯ ಹೇಗೆ ಬೆಲೆಕಟ್ಟಬಹುದು ಎನ್ನುವುದರ ಮೇಲೆ ಪ್ರಭಾವ ಬೀರುತ್ತದೆ. ಲೆವಾಂಡೊವಿಸ್ಕಿ ಮತ್ತು ಹ್ಯಾರಿಂಗ್‌ಟನ್(೨೦೦೬)ರ ಅಧ್ಯಯನದಲ್ಲಿ ವಿದ್ಯಾರ್ಥಿಯೊಬ್ಬ ಪ್ರಾಧ್ಯಾಪಕರೊಬ್ಬರಿಗೆ ಕಳಿಸಿದ, ಪಠ್ಯ ಸಂದೇಶ ಸಂಕ್ಷೇಪಗಳನ್ನು ಹೊಂದಿದ (gr೮, How R U?) ಅಥವಾ ಪ್ರಮಾಣಕ ಇಂಗ್ಲೀಷ್‌ನ ಪರ್ಯಾಯ ಪಠ್ಯ(ಗ್ರೇಟ್, ಹೌ ಆರ್ ಯು?)ವನ್ನು ಹೊಂದಿದ ಈ ಮೇಲ್‌ ಅನ್ನು ಭಾಗವಹಿಸಿದವರು ಓದಿದರು ಮತ್ತು ಕಳಿಸಿದಾತನ ಬಗ್ಗೆ ಭಾವನೆಗಳನ್ನು ಒದಗಿಸಿದರು.[೬೫] ಅವರ ಈಮೇಲ್‌ನಲ್ಲಿ ಸಂಕ್ಷೇಪಣಗಳನ್ನು ಬಳಸಿದ ವಿದ್ಯಾರ್ಥಿಗಳನ್ನು ಕಡಿಮೆ ಅನುಕೂಲಕರ ವ್ಯಕ್ತಿತ್ವ ಮತ್ತು ಈ-ಮೇಲ್ ಜತೆಗೆ ಅವರು ಸಲ್ಲಿಸಿದ ಪ್ರಬಂಧಕ್ಕೆ ಕಡಿಮೆ ಪ್ರಯತ್ನವನ್ನು ಮಾಡಿದ್ದಾರೆಂದು ಗ್ರಹಿಸಲಾಯಿತು. ನಿಷ್ಕೃಷ್ಟವಾಗಿ, ಸಂಕ್ಷೇಪಣ ಬಳಕೆದಾರರನ್ನು ಕಡಿಮೆ ಬುದ್ಧಿವಂತಿಕೆಯ, ಜವಾಬ್ದಾರಿಯ, ಪ್ರೇರಣೆಯ, ವ್ಯಾಸಂಗನಿಷ್ಠ, ಅವಲಂಬನೆಯ ಮತ್ತು ಕಷ್ಟಪಟ್ಟು ಕೆಲಸ ಮಾಡುವವರೆಂದು ಕಾಣಲಾಯಿತು. ಈ ಶೋಧನೆಗಳು ವಿದ್ಯಾರ್ಥಿಯ ಈ ಮೇಲ್ ಸಂವಹನದ ಸ್ವರೂಪವು ಇತರರು ವಿದ್ಯಾರ್ಥಿ ಮತ್ತು ಅವನ ಕೆಲಸವನ್ನು ಹೇಗೆ ಗ್ರಹಿಸುತ್ತಾರೆನ್ನುವುದರ ಮೇಲೆ ಪ್ರಭಾವ ಬೀರಬಹುದೆಂದು ಸೂಚಿಸುತ್ತದೆ.

ಕಾನೂನು ಮತ್ತು ಅಪರಾಧ

ಬದಲಾಯಿಸಿ

ಪಠ್ಯ ಸಂದೇಶವು ಶಾಲೆಗಳಲ್ಲಿ ಮಾತ್ರ ಪರಿಣಾಮ ಬೀರಿದ್ದಲ್ಲದೇ ವಿಶ್ವಾದ್ಯಂತ ಪೊಲೀಸ್ ಪಡೆಗಳ ಮೇಲೆ ಕೂಡ ಪರಿಣಾಮ ಬೀರಿದೆ. ಬ್ರಿಟಿಷ್ ಕಂಪೆನಿಯು ಸಿಂಬಿಯನ್ ಫೋನ್‌ಗಳಿಗೆ ೨೦೦೩ ಜೂನ್‌ನಲ್ಲಿ ಫೋರ್ಟ್ರೆಸ್ SMSಎಂಬ ಕ್ರಮವಿಧಿಯನ್ನು ಅಭಿವೃದ್ಧಿಪಡಿಸಿತು. ಈ ಕ್ರಮವಿಧಿಯು SMSಸಂದೇಶಗಳನ್ನು ರಕ್ಷಿಸಲು ೧೨೮ ಬಿಟ್ AESಗೂಢ ಲಿಪಿಕರಣವನ್ನು ಬಳಸಿಕೊಂಡಿತು.[೬೬] ಪಂಥದ ಸದಸ್ಯೆ ಸಾರಾ ಸ್ವೆನ್‌ಸನ್ ಸ್ವೀಡನ್ನಿನ ನಟ್‌ಬೈನಲ್ಲಿ ಚರ್ಚಿನ ಪಾದ್ರಿ ಹೆಲ್ಗೆ ಫೊಸ್‌ಮೊ ಪತ್ನಿಯನ್ನು ಹತ್ಯೆ ಮಾಡಿದ ಮತ್ತು ಅವರ ಪ್ರೇಯಸಿಯ ಪತಿ ಡೇನಿಯಲ್ ಲಿಂಡೆಗೆ ಗುಂಡಿಕ್ಕಿದ್ದಾಗಿ ಒಪ್ಪಿಕೊಂಡ ನಂತರ ಅವಳನ್ನು ದೋಷಾರೋಪಣೆಗೆ ಒಳಪಡಿಸಲು ಅಳಿಸಿಹಾಕಿದ ಸಂದೇಶಗಳನ್ನು ಪೊಲೀಸರು ಪುನಃ ಪತ್ತೆಮಾಡಿದರು. ಪೊಲೀಸರು ಸಂದೇಶಗಳನ್ನು ಪತ್ತೆಹಚ್ಚಿದ್ದೇಕೆಂದರೆ ತಾನು ಪೋನ್‌ನಲ್ಲಿ ಸ್ವೀಕರಿಸಿದ ಪಠ್ಯ ಸಂದೇಶಗಳ ಪ್ರಕಾರ ಅಜ್ಞಾತವಾಗಿ ಕಾರ್ಯನಿರ್ವಹಿಸಿದ್ದಾಗಿ ಅವಳು ಹೇಳಿದ್ದಳು.[೬೭]

ನೆದರ್‌ಲ್ಯಾಂಡ್ಸ್, ಟಿಲ್‌ಬರ್ಗ್‌ನಲ್ಲಿರುವ ಪೊಲೀಸರು SMSಎಚ್ಚರಿಕೆ ಕಾರ್ಯಕ್ರಮವನ್ನು ಆರಂಭಿಸಿದರು. ಕನ್ನಗಳ್ಳ ತಪ್ಪಿಸಿಕೊಂಡಾಗ ಅಥವಾ ನೆರೆಯಲ್ಲಿ ಮಗುವೊಂದು ನಾಪತ್ತೆಯಾದಾಗ ನಾಗರಿಕರಿಗೆ ಎಚ್ಚರಿಕೆಯಿಂದ ಇರುವಂತೆ ಅವರು ಸಂದೇಶವನ್ನು ಕಳಿಸುತ್ತಾರೆ. SMS ಎಚ್ಚರಿಕೆಗಳ ಮೂಲಕ ಅನೇಕ ಮಂದಿ ಕಳ್ಳರನ್ನು ಹಿಡಿಯಲಾಯಿತು ಮತ್ತು ತಪ್ಪಿಸಿಕೊಂಡ ಮಕ್ಕಳನ್ನು ಪತ್ತೆಹಚ್ಚಲಾಯಿತು. ಸೇವೆಯು ಇತರ ನಗರಗಳಿಗೆ ಶೀಘ್ರಗತಿಯಲ್ಲಿ ವಿಸ್ತರಿಸುತ್ತಿದೆ.[೬೮]

ಮಲೇಶಿಯ-ಆಸ್ಟ್ರೇಲಿಯ ಕಂಪೆನಿಯು ಕ್ರಿಮಿನಲ್‌ಗಳ ಬಹುಪದರ SMS ಭದ್ರತಾ ಕಾರ್ಯಕ್ರಮದ ತನ್ನ ಗುಪ್ತಾಕ್ಷರವನ್ನು ಬಿಡುಗಡೆ ಮಾಡಿತು.[೬೯]

ಅಪರಾಧವನ್ನು ತಡೆಯುವುದಕ್ಕೆ ನೆರವಾಗಲು ಬೋಸ್ಟನ್ ಪೊಲೀಸರು ಈಗ ಪಠ್ಯ ಸಂದೇಶದತ್ತ ತಿರುಗಿದ್ದಾರೆ. ಬೋಸ್ಟನ್ ಪೊಲೀಸ್ ಇಲಾಖೆಯು ಕಾರ್ಯಕ್ರಮವೊಂದನ್ನು ರೂಪಿಸಿದ್ದು, ಇದರಲ್ಲಿ ಅಪರಾಧಗಳನ್ನು ತಡೆಯುವುದಕ್ಕೆ ನೆರವಾಗಲು ಒಬ್ಬ ವ್ಯಕ್ತಿಯು ಪಠ್ಯ ಸಂದೇಶ ಕಳಿಸುವ ಮೂಲಕ ಅಪರಾಧದ ಬಗ್ಗೆ ಸುಳಿವನ್ನು ನೀಡಬಹುದು.[೭೦]

ಮಲೇಶಿಯದ ನ್ಯಾಯಾಲಯವೊಂದು ಪಠ್ಯ ಸಂದೇಶ ಕಳಿಸುವ ಮೂಲಕ ವಿಚ್ಛೇದನ ನೀಡುವ ಪ್ರಕ್ರಿಯೆಯು ಸ್ಪಷ್ಟವಾಗಿದ್ದು, ತಪ್ಪು ತಿಳಿವಳಿಕೆ ಇಲ್ಲದಿದ್ದರೆ ಕಾನೂನುಬದ್ಧವೆಂದು ತೀರ್ಪು ನೀಡಿತು.[೭೧]

ಸಾಮಾಜಿಕ ಅಶಾಂತಿ

ಬದಲಾಯಿಸಿ

ಆಕ್ರಮಣಶೀಲ ದೊಡ್ಡ ಗುಂಪುಗಳನ್ನು ಒಟ್ಟುಸೇರಿಸಿದ ಪರಿಣಾಮದೊಂದಿಗೆ ಪಠ್ಯ ಸಂದೇಶ ಕಳಿಸುವುದನ್ನು ಅನೇಕ ಸಂದರ್ಭಗಳಲ್ಲಿ ಬಳಸಲಾಗಿದೆ. SMS ಸಂದೇಶವು ಸಿಡ್ನಿಯ ಕ್ರೊನುಲ್ಲಾ ತೀರಕ್ಕೆ ಗುಂಪನ್ನು ಸೆಳೆದಿದ್ದರಿಂದ ೨೦೦೫ ಕ್ರೊನುಲ್ಲಾ ಗಲಭೆಗಳಿಗೆಕಾರಣವಾಯಿತು. ಪಠ್ಯ ಸಂದೇಶಗಳು ಸಿಡ್ನಿ ಪ್ರದೇಶದಲ್ಲಿ ಮಾತ್ರ ಪ್ರಸರಣವಾಗುತ್ತದಲ್ಲದೇ, ಇತರ ರಾಜ್ಯಗಳಲ್ಲೂ ಕೂಡ ಪ್ರಸರಣವಾಗುತ್ತಿದೆ(ಡೇಲಿ ಟೆಲಿಗ್ರಾಫ್) ಇಂತಹ ಪಠ್ಯ ಸಂದೇಶಗಳ ಗಾತ್ರ ಮತ್ತು ಈ ಮೇಲ್‌ಗಳು ಗಲಭೆಯ ಹಿನ್ನೆಲೆಯಲ್ಲಿ ಹೆಚ್ಚಿದವು.[೭೨] ಸುಮಾರು ೫೦೦೦ದಷ್ಟಿದ್ದ ಗುಂಪು ಹಿಂಸಾಚಾರಕ್ಕಿಳಿದು, ಕೆಲವು ಜನಾಂಗೀಯ ಗುಂಪುಗಳ ಮೇಲೆ ದಾಳಿ ಮಾಡಿತು. ಈ ಅಶಾಂತಿಗೆ ಸದರ್‌ಲ್ಯಾಂಡ್ ಶೈರ್ ಮೇಯರ್ ತೀವ್ರವಾಗಿ ಪ್ರಸಾರವಾದ SMS ಸಂದೇಶಗಳು ಕಾರಣವೆಂದು ನೇರವಾಗಿ ಆರೋಪಿಸಿದರು.[೭೩] ಪಠ್ಯ ಸಂದೇಶ ಕಳಿಸುವ ಕುರಿತು ಜನರ ಮೇಲೆ ಕ್ರಮ ಜರುಗಿಸಬಹುದೇ ಎಂದು NSWಪೊಲೀಸರು ಪರಿಶೀಲನೆ ನಡೆಸಿದರು.[೭೪] ಪ್ರತೀಕಾರದ ದಾಳಿಗಳಿಗೆ ಕೂಡ SMSಸಂದೇಶಗಳನ್ನು ಬಳಸಿಕೊಳ್ಳಲಾಯಿತು.[೭೫]

ನ್ಯಾರೆ ವಾರನ್ ಪ್ರಕರಣದಲ್ಲಿ ೫೦೦ ಮಂದಿಯ ಗುಂಪೊಂದು ಆಸ್ಟ್ರೇಲಿಯದ ಮೆಲ್ಬೋರ್ನ್‌ನ ನ್ಯಾರೆ ವಾರೆನ್‌ನಲ್ಲಿ ಸಂತೋಷಕೂಟವೊಂದರಲ್ಲಿ ಪಾಲ್ಗೊಂಡಿತು ಮತ್ತು ೨೦೦೮ರ ಜನವರಿಯಲ್ಲಿ ಗಲಭೆ ಉಂಟುಮಾಡಿತು. ಇದು SMS ಮತ್ತು ಮೈಸ್ಪೇಸ್ ಮೂಲಕ ಸಂದೇಶವನ್ನು ಕಳಿಸಿದ್ದರ ಪ್ರತಿಕ್ರಿಯೆಯಾಗಿದೆ.[೭೬] ಈ ಘಟನೆಯ ಹಿನ್ನೆಲೆಯಲ್ಲಿ, ಪೊಲೀಸ್ ಆಯುಕ್ತ ಯುವಜನರಿಗೆ ಮುಕ್ತ ಪತ್ರವೊಂದನ್ನು ಬರೆದು SMSಮತ್ತು ಅಂತರಜಾಲದ ಶಕ್ತಿಯ ಬಗ್ಗೆ ಜಾಗೃತರಾಗಿರುವಂತೆ ಎಚ್ಚರಿಸಿದರು.[೭೭] ಹಾಂಕಾಂಗ್‌ನಲ್ಲಿ, ಪಠ್ಯ ಸಂದೇಶ ಕಳಿಸುವಿಕೆ ಸಾಮಾಜಿಕವಾಗಿ ನೆರವಾಗುತ್ತದೆ. ಏಕೆಂದರೆ ಅವರು ಸಮುದಾಯಕ್ಕೆ ಬಹು ಪಠ್ಯ ಸಂದೇಶವನ್ನು ಕಳಿಸಬಹುದು ಎಂದು ಸರ್ಕಾರಿ ಅಧಿಕಾರಿಗಳು ಕಂಡುಕೊಂಡರು. ಇದು ಸಮುದಾಯವನ್ನು ಅಥವಾ ವ್ಯಕ್ತಿಗಳನ್ನು ಸಭೆಗಳು ಅಥವಾ ಸಮಾರಂಭಗಳಿಗೆ ಸಂಪರ್ಕಿಸಲು ಸುಲಭವಾದ ದಾರಿ ಎಂದು ಅಧಿಕಾರಿಗಳು ಹೇಳಿದ್ದಾರೆ.[೭೮]

ಪಠ್ಯ ಸಂದೇಶವನ್ನು ೨೦೦೯ನೇ ಇರಾನಿನ ಚುನಾವಣೆ ಪ್ರತಿಭಟನೆಗಳ ಸಂದರ್ಭದಲ್ಲಿ ಸಭೆಗಳನ್ನು ಸಂಘಟಿಸಲು ಬಳಸಲಾಯಿತು.

ರಾಜಕೀಯದಲ್ಲಿ ಪಠ್ಯ ಸಂದೇಶ

ಬದಲಾಯಿಸಿ

ಪಠ್ಯ ಸಂದೇಶವು ರಾಜಕೀಯ ಜಗತ್ತಿನಲ್ಲಿ ಪ್ರಮುಖ ಪರಿಣಾಮವನ್ನು ಬೀರಿದೆ. ಅಮೆರಿಕದ ಪ್ರಚಾರಗಳು ಪಠ್ಯ ಸಂದೇಶ ಕಳಿಸುವುದು ಮನೆಯಿಂದ ಮನೆಗೆ ತೆರಳುವುದಕ್ಕಿಂತ ಮತದಾರರನ್ನು ತಲುಪಲು ಅಗ್ಗದ ಮತ್ತು ಸುಲಭದ ಮಾರ್ಗವೆಂದು ಕಂಡುಕೊಂಡಿದ್ದಾರೆ.[೭೯] ಮೆಕ್ಸಿಕೊ ಅಧ್ಯಕ್ಷರಾಗಿ ಆಯ್ಕೆಯಾದ ಫೆಲಿಪ್ ಕಾಲ್ಡೆರಾನ್ ಅವರು ಆಂಡ್ರೆಸ್ ಲೋಪೆಜ್ ಒಬ್ರಾಡಾರ್ ವಿರುದ್ಧ ಸ್ವಲ್ಪ ಅಂತರದ ಗೆಲುವಿಗೆ ಮುಂಚಿನ ದಿನಗಳಲ್ಲಿ ಮಿಲಿಯಾಂತರ ಪಠ್ಯ ಸಂದೇಶಗಳನ್ನು ಕಳಿಸುವುದನ್ನು ಆರಂಭಿಸಿದ್ದರು.[೮೦] ೨೦೦೧ರ ಜನವರಿಯಲ್ಲಿ ಜೋಸೆಫ್ ಎಸ್ಟ್ರಾಡಾ ಅವರು ಫಿಲಿಪ್ಪೀನ್ಸ್ ಅಧ್ಯಕ್ಷ ಹುದ್ದೆಗೆ ಬಲವಂತವಾಗಿ ರಾಜೀನಾಮೆ ನೀಡಬೇಕಾಯಿತು. ಅವರ ವಿರುದ್ಧ ಜನಪ್ರಿಯ ಪ್ರಚಾರವು SMS ಸರಣಿ ಅಕ್ಷರಗಳಿಂದ ಸಂಯೋಜಿತವಾಗಿದ್ದವು ಎಂದು ವ್ಯಾಪಕವಾಗಿ ವರದಿಯಾಯಿತು.[೮೦] ಸ್ಪೇನ್‌ನ ೨೦೦೪ರ ಸಂಸತ್ತಿನ ಚುನಾವಣೆಗಳಲ್ಲಿ ಯುವಕರು ಮತಚಲಾಯಿಸಲು ಉತ್ತೇಜನಕ್ಕೆ ಭಾರೀ ಪಠ್ಯ ಸಂದೇಶವು ಕಾರಣವಾಗಿದೆ.[೮೦] ೨೦೦೮ರಲ್ಲಿ ಡೆಟ್ರಾಯಿಟ್ ಮೇಯರ್ ಕ್ವಾಮೆ ಕಿಲ್‌ಪ್ಯಾಟ್ರಿಕ್ ಮತ್ತು ಅವರ ಸಿಬ್ಬಂದಿ ಮುಖ್ಯಸ್ಥರು ಆ ಸಮಯದಲ್ಲಿ ಲೈಂಗಿಕ ಹಗರಣದಲ್ಲಿ ಸಿಲುಕಿಕೊಂಡಿದ್ದರು. ಇದು ೧೪,೦೦೦ಕ್ಕೂ ಹೆಚ್ಚು ಪಠ್ಯ ಸಂದೇಶಗಳನ್ನು ಕಳಿಸಿದ್ದರಿಂದ ತರುವಾಯ ಅವರ ಬಲವಂತದ ರಾಜೀನಾಮೆಗೆ, ವಚನಭ್ರಷ್ಟತೆಗೆ ಶಿಕ್ಷೆ ಮತ್ತು ಇತರ ಆರೋಪಗಳಿಗೆ ದಾರಿಕಲ್ಪಿಸಿತು.[೧೦]

ಪಠ್ಯ ಸಂದೇಶ ಕಳಿಸುವುದನ್ನು ಇತರ ರಾಜಕೀಯ ನಾಯಕರನ್ನು ತಿರಸ್ಕರಿಸಲು ಬಳಸಲಾಯಿತು. ೨೦೦೪ನೇ ಅಮೆರಿಕ ಡೆಮಾಕ್ರಟಿಕ್ ಮತ್ತು ರಿಪಬ್ಲಿಕನ್ ರಾಷ್ಟ್ರೀಯ ಸಮಾವೇಶಗಳಲ್ಲಿ, ಪ್ರತಿಭಟನೆಕಾರರು ವಿರೋಧಿಗಳ ವಿರುದ್ಧ TXTmobಎಂದು ಕರೆಯುವ SMSಆಧಾರದ ಸುವ್ಯವಸ್ಥಿತ ಸಾಧನವನ್ನು ಬಳಸಿದರು.[೮೧] ರೊಮಾನಿಯದಲ್ಲಿ ೨೦೦೪ರ ಅಧ್ಯಕ್ಷೀಯ ಚುನಾವಣೆಗಳಿಗೆ ಮುಂಚಿನ ಕೊನೆಯ ದಿನ, ಆಡ್ರಿಯನ್ ನಸ್ಟಾಸೆ ವಿರುದ್ಧ ಸಂದೇಶವನ್ನು ವ್ಯಾಪಕವಾಗಿ ಪ್ರಸಾರ ಮಾಡಲಾಯಿತು. ಇದರಿಂದ ಆ ದಿನ ಪ್ರಚಾರವನ್ನು ನಿಷೇಧಿಸಿದ ಕಾನೂನುಗಳನ್ನು ಮುರಿದರು.

ಪಠ್ಯ ಸಂದೇಶ ಕಳಿಸುವುದು ಪ್ರಚಾರಗಳಿಗೆ ಉತ್ತೇಜನ ನೀಡುವ ಮೂಲಕ ರಾಜಕೀಯಕ್ಕೆ ನೆರವಾಯಿತು.

ಇದಿಷ್ಟೇ ಅಲ್ಲದೇ, ೨೦೦೧ರ ಜನವರಿ ೨೦ರಂದು ಫಿಲಿಪ್ಪೀನ್ಸ್ ಅಧ್ಯಕ್ಷ ಜೋಸೆಫ್ ಎಸ್ಟ್ರಾಡಾ ಬುದ್ಧಿವಂತ ಗುಂಪಿಗೆ ಅಧಿಕಾರ ಕಳೆದುಕೊಂಡ ಇತಿಹಾಸದಲ್ಲೇ ರಾಷ್ಟ್ರದ ಪ್ರಥಮ ಮುಖ್ಯಸ್ಥರೆನಿಸಿದರು.[೮೨] ಹತ್ತು ಲಕ್ಷಕ್ಕಿಂತಲೂ ಹೆಚ್ಚು ಮನಿಲಾ ನಿವಾಸಿಗಳು ೧೯೮೬ರ ಪೀಪಲ್ ಪವರ್ ಶಾಂತಿಯುತ ಪ್ರತಿಭಟನೆಗಳ ಸ್ಥಳದಲ್ಲಿ ಸೇರಿದ್ದರಿಂದ ಮಾರ್ಕೋಸ್ ಆಳ್ವಿಕೆಯನ್ನು ಉರುಳಿಸಿತು. ಈ ಜನರು ಸ್ವಯಂ ಸಂಘಟಿತರಾದರು ಪಠ್ಯ ಸಂದೇಶ ಕಳಿಸುವ ಮೂಲಕ ತಮ್ಮ ಕ್ರಿಯೆಗಳನ್ನು ಸಮನ್ವಯಗೊಳಿಸಿದರು. ಶಸ್ತ್ರಾಸ್ತ್ರಗಳು ಅಥವಾ ಹಿಂಸಾಚಾರವನ್ನು ಬಳಸದೇ ಪಠ್ಯ ಸಂದೇಶದ ಮೂಲಕ ಸರ್ಕಾರವನ್ನು ಪದಚ್ಯುತಗೊಳಿಸಲು ಅವರು ಸಮರ್ಥರಾದರು. ಪಠ್ಯ ಸಂದೇಶ ಕಳಿಸುವ ಮೂಲಕ, ಅವರ ಯೋಜನೆಗಳನ್ನು ಮತ್ತು ಕಲ್ಪನೆಗಳನ್ನು ಇತರರಿಗೆ ಮುಟ್ಟಿಸಲಾಯಿತು ಮತ್ತು ಯಶಸ್ವಿಯಾಗಿ ಜಾರಿಗೆ ತರಲಾಯಿತು. ಅಲ್ಲದೇ ಈ ಕ್ರಮವು ಆಳ್ವಿಕೆಗೆ ಬೆಂಬಲವನ್ನು ಹಿಂತೆಗೆದುಕೊಳ್ಳಲು ಮಿಲಿಟರಿಗೆ ಪ್ರೋತ್ಸಾಹ ನೀಡಿತು. ಇದರ ಫಲವಾಗಿ, ಎಸ್ಟ್ರಾಡಾ ಸರ್ಕಾರ ಪತನಗೊಂಡಿತು.[೮೨] ಸೆಲ್ ಫೋನ್‌ಗಳ ಬಳಕೆಯಿಂದ ಜನರು ಒಂದೆಡೆ ಸೇರಲು ಮತ್ತು ಏಕೀಕರಣವಾಗಲು ಸಾಧ್ಯವಾಯಿತು. ಎಸ್ಟ್ರಾಡಾ ವಿರೋಧಿ ಗುಂಪಿನ ಶೀಘ್ರ ಕೂಟವು ಮುಂಚಿನ ಬುದ್ಧಿವಂತರ ಗುಂಪಿನ(ಸ್ಮಾರ್ಟ್ ಗ್ರೂಪ್) ತಂತ್ರಜ್ಞಾನದ ಹೆಜ್ಜೆಗುರುತಾಗಿದ್ದು, ೨೦೦೧ರಲ್ಲಿ ಪ್ರತಿಭಟನೆಕಾರರು ವಿನಿಮಯ ಮಾಡಿಕೊಂಡ ಲಕ್ಷಾಂತರ ಪಠ್ಯ ಸಂದೇಶಗಳು ಗುಂಪುಗಳ ನೈತಿಕ ಸ್ಥೈರ್ಯಕ್ಕೆ ಮುಖ್ಯವಾಗಿದೆ.[೮೨]

ವೈದ್ಯಕೀಯ ಕಳವಳಗಳು

ಬದಲಾಯಿಸಿ

ಮೊಬೈಲ್ ಉಪಕರಣಗಳಲ್ಲಿ ಕೀಗಳನ್ನು ಒತ್ತಲು ಬೆರಳಿನ ಹೆಚ್ಚಿನ ಬಳಕೆಯಿಂದ ಪುನರಾವರ್ತಿತ ಪ್ರಯಾಸದ ಗಾಯದ ರೂಪದ ಹೆಚ್ಚಿನ ಪ್ರಮಾಣಕ್ಕೆ ದಾರಿಯಾಯಿತು. ಇದನ್ನು ಬ್ಲಾಕ್‌ಬೆರಿ ಥಂಬ್ ಎಂದು ಕರೆಯಲಾಯಿತು. (ಆದರೂ ಇದು ಹಳೆಯ ಬ್ಲಾಕ್‌ಬೆರಿ ಉಪಕರಣಗಳಲ್ಲಿ ಉಂಟಾಗುವ ನೋವನ್ನು ಉಲ್ಲೇಖಿಸುತ್ತದೆ. ಇದು ಫೋನ್ ಬದಿಯಲ್ಲಿ ಸ್ಕ್ರಾಲ್ ವೀಲ್(ತಿರುಗಿಸುವ ಚಕ್ರ) ಒಳಗೊಂಡಿರುತ್ತದೆ.)

ಅಸಂಖ್ಯಾತ ವಾಹನ ಡಿಕ್ಕಿಗಳಲ್ಲಿ ಪಠ್ಯ ಸಂದೇಶವನ್ನು ಎರಡನೇ ಮೂಲವಾಗಿ ಸಂಬಂಧ ಕಲ್ಪಿಸಲಾಗಿದೆ. ಮೊಬೈಲ್ ಫೋನ್ ದಾಖಲೆಗಳ ಪೊಲೀಸ್ ತನಿಖೆಗಳಲ್ಲಿ ಪಠ್ಯ ಸಂದೇಶಗಳನ್ನು ಕಳಿಸುವ ಅಥವಾ ಸ್ವೀಕರಿಸುವ ಪ್ರಯತ್ನದಲ್ಲಿ ಅನೇಕ ಚಾಲಕರು ತಮ್ಮ ಕಾರುಗಳ ಮೇಲೆ ಹತೋಟಿಯನ್ನು ಕಳೆದುಕೊಂಡಿದ್ದಾರೆಂದು ಪತ್ತೆಮಾಡಿದೆ. ಅಂತರಜಾಲದ ಗೀಳಿನ ಹೆಚ್ಚಿದ ಪ್ರಕರಣಗಳು ಕೂಡ ಪಠ್ಯ ಸಂದೇಶಕ್ಕೆ ಸಂಬಂಧಿಸಿದೆ. ಏಕೆಂದರೆ ಮೊಬೈಲ್ ದೂರವಾಣಿಗಳು ಪಠ್ಯ ಸಂದೇಶ ಕಳಿಸುವುದಕ್ಕೆ ಪೂರಕವಾಗಿ ಈ ಮೇಲ್ ಅಥವಾ ವೆಬ್ ಸಾಮರ್ಥ್ಯವನ್ನು ಹೊಂದಿರುವ ಸಂಭವನೀಯತೆ ಹೆಚ್ಚಾಗಿದೆ.

ಪಠ್ಯಸಂದೇಶದ ಶಿಷ್ಟಾಚಾರ

ಬದಲಾಯಿಸಿ

ಅಮೆರಿಕದ ೨೦ನೇ ಶತಮಾನದ ಶಿಷ್ಟಾಚಾರದ ಗುರು ಎಮಿಲಿ ಪೋಸ್ಟ್ ೨೦ನೇ ಶತಮಾನದಲ್ಲಿ ವಾಸಿಸುವ ಜನರಿಗೆ ಸಂಬಂಧಿಸಿದಂತೆ ಇನ್ನೂ ಪಾಠಗಳನ್ನು ಹೊಂದಿದ್ದಾರೆ. ದಿ ಎಮಿಲಿ ಪೋಸ್ಟ್ ಇನ್‌ಸ್ಟಿಟ್ಯೂಟ್ ಜಾಲತಾಣದಲ್ಲಿ ಪಠ್ಯ ಸಂದೇಶ ಕಳಿಸುವ ವಿಷಯವು ಸಂಪರ್ಕ ವ್ಯವಸ್ಥೆಯ ಹೊಸ ರೂಪಕ್ಕೆ ಸಂಬಂಧಿಸಿದಂತೆ "do's and dont's"(ಮಾಡಬೇಕಾದ್ದು ಮತ್ತು ಮಾಡಬಾರದ)ನ ಅನೇಕ ಲೇಖನಗಳನ್ನು ಪ್ರಚೋದಿಸಿದೆ. ಜಾಲತಾಣದಿಂದ ಒಂದು ಉದಾಹರಣೆಯು "ನಿಮ್ಮ ಸಂದೇಶವನ್ನು ಸಂಕ್ಷಿಪ್ತವಾಗಿರಿಸಿ. ಅವನನ್ನು ಅಥವಾ ಅವಳನ್ನು ಬದಲಿಗೆ ನೀವು ಕರೆಯಲು ಸಾಧ್ಯವಾಗಿರುವಾಗ, ನಿಮ್ಮ ಜತೆ ಇಡೀ ಸಂಭಾಷಣೆ ನಡೆಸಲು ಯಾರೂ ಇಷ್ಟಪಡುವುದಿಲ್ಲ.[೮೩] ಇನ್ನೊಂದು ಉದಾಹರಣೆ: "ಎಲ್ಲ ದೊಡ್ಡಕ್ಷರಗಳನ್ನು ಬಳಸಬೇಡಿ, ಪಠ್ಯ ಸಂದೇಶವನ್ನು ಎಲ್ಲವೂ ದೊಡ್ಡಕ್ಷರಗಳಲ್ಲಿ ಬೆರಳಚ್ಚಿಸುವುದು ನೀವು ಅದನ್ನು ಸ್ವೀಕರಿಸಿದವರತ್ತ ಕೂಗುತ್ತಿರುವಂತೆ ಕಾಣಿಸುತ್ತದೆ ಮತ್ತು ಅದನ್ನು ನೀವು ತಪ್ಪಿಸಬೇಕು"

ಲಿನ್ ಲಂಕಾಸ್ಟರ್ ಮತ್ತು ಡೇವಿಡ್ ಸ್ಟಿಲ್‌ಮ್ಯಾನ್ ಅವರ ದಿ M-ಫ್ಯಾಕ್ಟರ್: ಹೌವ್ ದಿ ಮಿಲ್ಲೇನಿಯಲ್ ಜನರೇಷನ್ ಈಸ್ ರಾಕಿಂಗ್ ದಿ ವರ್ಕ್‌ಪ್ಲೇಸ್‌ ನಲ್ಲಿ ಸೂಚಿಸಿರುವಂತೆ ಶಿಷ್ಟಾಚಾರದಲ್ಲಿ ತಲೆಮಾರಿನ ಭಿನ್ನತೆಗಳು ಇರುತ್ತವೆ. ಯುವ ಅಮೆರಿಕನ್ನರು ಬೇರೊಬ್ಬರ ಜತೆ ಮುಖಾಮುಖಿ ಸಂಭಾಷಣೆಯಲ್ಲಿ ನಿರತವಾಗಿರುವ ಮಧ್ಯದಲ್ಲಿ ಅವರ ಸೆಲ್‌ ಕರೆಗೆ ಉತ್ತರಿಸುವುದು ಅಥವಾ ಪಠ್ಯ ಸಂದೇಶ ಆರಂಭಿಸುವುದು ಅಸೌಜನ್ಯದ ನಡವಳಿಕೆ ಎಂದು ಪರಿಗಣಿಸುವುದಿಲ್ಲ. ಆದರೆ ವಯಸ್ಕ ಜನರಲ್ಲಿ ಈ ನಡವಳಿಕೆ ರೂಢಿಗತವಾಗಿಲ್ಲ. ಕಣ್ಣಿನ ಸಂಪರ್ಕ ಅಥವಾ ಗಮನದ ಕೊರತೆಯು ಕೆಟ್ಟ ನಡವಳಿಕೆ ಮತ್ತು ವಿಚ್ಚಿದ್ರಕಾರಕ ಎಂದು ಪರಿಗಣಿಸುತ್ತಾರೆ.

ದುಡಿಯುವ ಸ್ಥಳದಲ್ಲಿ ಪಠ್ಯ ಸಂದೇಶ ಕುರಿತಂತೆ, ಹೌ ವಿ ಕಮ್ಯುನಿಕೇಟ್ ಎಟ್ ವರ್ಕ್ Archived 2010-12-23 ವೇಬ್ಯಾಕ್ ಮೆಷಿನ್ ನಲ್ಲಿ. ಎಂಬ ಬಗ್ಗೆ ಪ್ಲಾಂಟ್ರೋನಿಕ್ಸ್ ಅಧ್ಯಯನ ಮಾಡಿತು. ಇದರಿಂದ ಅಮೆರಿಕ ಜ್ಞಾನಾಧಾರಿತ ನೌಕರರು ಕಳೆದ ಐದು ವರ್ಷಗಳಿಂದ ದುಡಿಮೆಗಾಗಿ ಪಠ್ಯ ಸಂದೇಶಗಳನ್ನು ಹೆಚ್ಚಿಸಿಕೊಂಡಿದ್ದಾರೆಂದು ಕಂಡುಕೊಂಡಿತು. ಇದೇ ಅಧ್ಯಯನವು ಜ್ಞಾನಾಧಾರಿಕ ನೌಕರರಲ್ಲಿ ಕೇವಲ ಶೇಕಡ ೩೩ಮಂದಿ ಪಠ್ಯ ಸಂದೇಶವು ಕೆಲಸದ ಸ್ಥಳದಲ್ಲಿ ಯಶಸ್ಸು ಮತ್ತು ಉತ್ಪಾದಕತೆಗೆ ನಿರ್ಣಾಯಕ ಅಥವಾ ಅತೀ ಮುಖ್ಯ ಎಂದು ಭಾವಿಸಿದ್ದಾರೆಂದು ಕಂಡುಕೊಂಡಿದೆ.[೮೪]

ಸವಾಲುಗಳು

ಬದಲಾಯಿಸಿ

ಪಠ್ಯ ಸಂದೇಶ ಮಿನ್ನೊಲೆಕಸ

ಬದಲಾಯಿಸಿ

೨೦೦೨ರಲ್ಲಿ SMSಮೂಲಕ ಮೊಬೈಲ್ ಫೋನ್ ಬಳಕೆದಾರರಿಗೆ ಸ್ಪಾಮಿಂಗ್ ಕಳಿಸುವ ಹೆಚ್ಚಿದ ಪ್ರವೃತ್ತಿಯಿಂದ ಆ ಅಭ್ಯಾಸದ ವಿರುದ್ಧ, ಅದು ವ್ಯಾಪಕ ಸಮಸ್ಯೆಯಾಗುವ ಮುಂಚೆ ಸೆಲ್ಯುಲಾರ್ ಸೇವೆ ವಾಹಕರಿಗೆ ಕ್ರಮಗಳನ್ನು ಕೈಗೊಳ್ಳಲು ಪ್ರೇರೇಪಿಸಿತು. SMSಒಳಗೊಂಡ ಯಾವುದೇ ಪ್ರಮುಖ ಸ್ಪಾಮಿಂಗ್ ಘಟನೆಗಳು ವರದಿಯಾಗಿಲ್ಲ.as of March 2007[[ವರ್ಗ:Articles containing potentially dated statements from ಪದವಿನ್ಯಾಸ ದೋಷ: ಗುರುತಿಸಲಾಗದ ವಿರಾಮ ಚಿಹ್ನೆ"೧".]] ಆದರೆ ಮೊಬೈಲ್ ದೂರವಾಣಿ ಮಿನ್ನೊಲೆಕಸ(ಸ್ಪಾಮ್)ಅಸ್ತಿತ್ವವನ್ನು [೮೫]ಕನ್ಸೂಮರ್ ರಿಪೋರ್ಟ್ಸ್ ನಿಯತಕಾಲಿಕೆ ಮತ್ತು ಯುಟಿಲಿಟಿ ಕನ್ಸೂಮರ್ಸ್ ಆಕ್ಷನ್ ನೆಟ್‌ವರ್ಕ್ (UCAN) ಸೇರಿದಂತೆ ಕೈಗಾರಿಕೆ ಕಾವಲುಸಮಿತಿಗಳು ಗುರುತಿಸಿದವು. ೨೦೦೫ರಲ್ಲಿ UCAN ಸ್ಪ್ರಿಂಟ್ ವಿರುದ್ದ ಗ್ರಾಹಕರಿಗೆ ಸ್ಪಾಮಿಂಗ್ ಮಾಡುವ ಬಗ್ಗೆ ಮತ್ತು ಪ್ರತಿ ಪಠ್ಯ ಸಂದೇಶಕ್ಕೆ $೦.೧೦ವಿಧಿಸುವ ಬಗ್ಗೆ ದಾವೆಯನ್ನು ಹೂಡಿತು.[೮೬] ೨೦೦೬ರಲ್ಲಿ ಈ ಪ್ರಕರಣವು ಇತ್ಯರ್ಥವಾಯಿತು ಮತ್ತು ಗ್ರಾಹಕರಿಗೆ SMSಮೂಲಕ ಸ್ಪ್ರಿಂಟ್ ಜಾಹೀರಾತುಗಳನ್ನು ಕಳಿಸದಿರಲು ಸ್ಪ್ರಿಂಟ್ ಒಪ್ಪಿಕೊಂಡಿತು.[೮೭]

SMSತಜ್ಞ ಅಸಿಷನ್(ಮುಂಚೆ LogicaCMG ಟೆಲಿಕಾಮ್ಸ್)೨೦೦೬ರ ಕೊನೆಯಲ್ಲಿ SMiShingನ(ಈ ಮೇಲ್ ಫಿಶಿಂಗ್ ಹಗರಣಗಳ ಸೋದರಸಂಬಂಧಿ) ಪ್ರಥಮ ನಿದರ್ಶನಗಳನ್ನು ಗುರುತಿಸಿ, ಹೊಸ ರೀತಿಯ SMSಕೆಡುಕನ್ನು ವರದಿ ಮಾಡಿತು. SMiShingನಲ್ಲಿ ಬಳಕೆದಾರರು ಕಂಪೆನಿಗಳ ಸೋಗಿನಲ್ಲಿ ಬಂದ SMSಸಂದೇಶಗಳನ್ನು ಸ್ವೀಕರಿಸುತ್ತಾರೆ. ಇದು ಬಳಕೆದಾರರಿಗೆ ಪ್ರೀಮಿಯಂ ದರದ ಸಂಖ್ಯೆಗಳನ್ನು ಫೋನ್ ಮಾಡಲು ಅಥವಾ ವೈಯಕ್ತಿಕ ಮಾಹಿತಿಯೊಂದಿಗೆ ಉತ್ತರಿಸಲು ಪ್ರೇರೇಪಿಸುತ್ತದೆ.

ದರದ ಕಳವಳಗಳು

ಬದಲಾಯಿಸಿ

ಅಮೆರಿಕದಲ್ಲಿ ಪಠ್ಯ ಸಂದೇಶದ ಯೋಜನೆ ಹೊರತಾದ ದುಬಾರಿ ವೆಚ್ಚದ ಬಗ್ಗೆ ಕಳವಳಗಳು ಧ್ವನಿಸಿತು.[೮೮] AT&Tಬಹುತೇಕ ಇತರೆ ಸೇವೆ ಪೂರೈಕೆದಾರರ ಜತೆ ಪಠ್ಯ ಸಂದೇಶ ಕಳಿಸುವವರಿಗೆ ಸಂದೇಶ ಕಳಿಸುವ ಬಗ್ಗೆ ಯೋಜನೆ ಇಲ್ಲದಿದ್ದರೆ ಅಥವಾ ಅವರು ಗೊತ್ತಾದ ಪಠ್ಯ ಸಂದೇಶಗಳನ್ನು ಮೀರಿದ್ದರೆ ಪ್ರತಿ ಸಂದೇಶಕ್ಕೆ ೨೦ ಸೆಂಟ್ಸ್‌ಗಳನ್ನು ವಿಧಿಸುತ್ತದೆ. SMS ಸಂದೇಶವು ಬಹುಮಟ್ಟಿಗೆ ಗಾತ್ರದಲ್ಲಿ ೧೬೦ ಬೈಟ್‌ಗಳಿಂದ ಕೂಡಿದ್ದರೆ, ಈ ದರವು ಪಠ್ಯ ಸಂದೇಶದ ಮೂಲಕ ಕಳಿಸಿದ ಪ್ರತಿ ಮೆಗಾಬೈಟ್‌ಗೆ ೧೩೧೦ ಡಾಲರ್ ದರವನ್ನು ಮುಟ್ಟುತ್ತದೆ.[೮೮] ಅದೇ ವಾಹಕರಿಂದ ಮಿತಿಯಿಲ್ಲದ ದತ್ತಾಂಶ ಯೋಜನೆಗಳ ದರಕ್ಕೆ ಇದು ತೀರಾ ವ್ಯತ್ಯಾಸದಿಂದ ಕೂಡಿದ್ದು, ಅವು ಧ್ವನಿ ಯೋಜನೆ ಜತೆಗೆ $೧೫ to $೪೫ ತಿಂಗಳ ದರಗಳಲ್ಲಿ ನೂರಾರು ದತ್ತಾಂಶ ಮೆಗಾಬೈಟ್‌ಗಳ ರವಾನೆಗೆ ಅವಕಾಶ ನೀಡುತ್ತದೆ. ತುಲನಾತ್ಮಕವಾಗಿ, ಒಂದು ನಿಮಿಷದ ಫೋನ್ ಕರೆಯು ೬೦೦ ಪಠ್ಯ ಸಂದೇಶಗಳ ಜಾಲ ಸಾಮರ್ಥ್ಯವನ್ನು ಬಳಸುತ್ತದೆ.[೮೯] ಇದರ ಅರ್ಥವೇನೆಂದರೆ ಫೋನ್ ಕರೆಗಳಿಗೆ ಪ್ರತಿ ಸಂಚಾರಿ ಸೂತ್ರದ ದರವನ್ನು ಅನ್ವಯಿಸಿದರೆ, ಸೆಲ್ ಫೋನ್ ಕರೆಗಳ ದರಗಳು ಪ್ರತಿನಿಮಿಷಕ್ಕೆ ೧೨೦ ಡಾಲರ್ ವೆಚ್ಚ ತಗುಲುತ್ತದೆ. ಸೇವಾ ಪೂರೈಕೆದಾರರು ಹೆಚ್ಚು ಗ್ರಾಹಕರನ್ನು ಗಳಿಸಿ, ಅವರ ಸಾಮರ್ಥ್ಯವನ್ನು ವಿಸ್ತರಿಸುವುದರೊಂದಿಗೆ, ಅವರ ಪ್ರತೀ ಮೇಲಾಡಳಿತ ದರಗಳು ಕಡಿಮೆಯಾಗಬೇಕೇ ಹೊರತು ಹೆಚ್ಚಾಗುವುದಿಲ್ಲ.

ಆದರೂ ಪ್ರಮುಖ ಸೆಲ್ ಫೋನ್ ಪೂರೈಕೆದಾರರು ಯಾವುದೇ ವಂಚನೆಯನ್ನು ನಿರಾಕರಿಸಿದರೂ, ಪ್ಯಾಕೇಜ್ ಆಚೆಗಿನ ಪಠ್ಯ ಸಂದೇಶಗಳ ಶುಲ್ಕಗಳು ಹೆಚ್ಚಿದ್ದು, ಅಮೆರಿಕದಲ್ಲಿ ೨೦೦೭ರಿಂದ ೨೦೦೮ರ ನಡುವೆ ೧೦ರಿಂದ ೨೦ ಸೆಂಟ್ಸ್‌ಗಳಿಗೆ ಏರಿಕೆಯಾಗಿವೆ.[೯೦] ೨೦೦೯ರ ಜುಲೈ ೧೬ರಂದು ಶೆರ್ಮನ್ ಆಂಟಿಟ್ರಸ್ಟ್ ಆಕ್ಟ್ ಉಲ್ಲಂಘನೆ ಕುರಿತು ಪರಿಶೀಲನೆ ನಡೆಸಲು ಸೆನೆಟ್ ವಿಚಾರಣೆಗಳು ನಡೆದವು.[೯೧]

ಸುರಕ್ಷತಾ ಕಾಳಜಿಗಳು

ಬದಲಾಯಿಸಿ

ಗ್ರಾಹಕ SMS ನ್ನು ರಹಸ್ಯ ಸಂವಹನಕ್ಕೆ ಬಳಸಬಾರದು. SMS ಸಂದೇಶಗಳ ಅಡಕಗಳು ಜಾಲ ನಿರ್ವಾಹಕರ ವ್ಯವಸ್ಥೆಗಳಿಗೆ ಮತ್ತು ಸಿಬ್ಬಂದಿಗೆ ತಿಳಿದಿರುತ್ತದೆ. ಆದ್ದರಿಂದ, ಭದ್ರ ಸಂದೇಶಗಳನ್ನು ಕಳಿಸಲು ಗ್ರಾಹಕ SMSಸೂಕ್ತ ತಂತ್ರಜ್ಞಾನವಲ್ಲ.[೯೨]

ಈ ವಿಷಯವನ್ನು ನಿಭಾಯಿಸಲು ಅನೇಕ ಕಂಪೆನಿಗಳು SMS ಗೇಟ್‌ವೇ ಪ್ರೊವೈಡರ್ ಬಳಸುತ್ತವೆ. ಸಂದೇಶಗಳಿಗೆ ಮಾರ್ಗ ಕಲ್ಪಿಸಲು ಇದು SS೭ಸಂಪರ್ಕವನ್ನು ಆಧರಿಸಿದೆ. ಅಂತಾರಾಷ್ಟ್ರೀಯ ಟರ್ಮಿನೇಷನ್ ಮಾದರಿಯ ಅನುಕೂಲವು SS೭ಮೂಲಕ ದತ್ತಾಂಶವನ್ನು ನೇರವಾಗಿ ಮುನ್ನಡೆಸುವುದಾಗಿದೆ. ಇದು ಪೂರೈಕೆದಾರನಿಗೆ SMSನ ಸಂಪೂರ್ಣ ಮಾರ್ಗವು ಗೋಚರಿಸುತ್ತದೆ. ಇದರ ಅರ್ಥವೇನೆಂದರೆ SMS ಸಂದೇಶಗಳನ್ನು ನೇರವಾಗಿ ಸ್ವೀಕರಿಸುವವರಿಗೆ ಕಳಿಸಬಹುದು ಮತ್ತು ಅವರಿಂದ ಪಡೆಯಬಹುದು. ಇದನ್ನು ಇತರ ಮೊಬೈಲ್ ನಿರ್ವಾಹಕರ SMS-C ಯನ್ನು ಹಾದುಹೋಗುವ ಅವಶ್ಯಕತೆ ಇರುವುದಿಲ್ಲ. ಈ ನಡೆಯು ಈ ಸಂದೇಶವನ್ನು ನಿರ್ವಹಿಸುವ ಮೊಬೈಲ್ ನಿರ್ವಾಹಕರ ಸಂಖ್ಯೆಯನ್ನು ತಗ್ಗಿಸುತ್ತದೆ. ಆದಾಗ್ಯೂ ಇದನ್ನು ಉದ್ದಕ್ಕೂ ಭದ್ರ ಸಂವಹನವೆಂದು ಪರಿಗಣಿಸಬಾರದು. ಏಕೆಂದರೆ ಸಂದೇಶದ ವಿಷಯವು SMS ಗೇಟ್‌ವೇ ಪೂರೈಕೆದಾರನಿಗೆ ಬಹಿರಂಗವಾಗುತ್ತದೆ.

ಹಿಮ್ಮೊಗದ ಪ್ರಕಟಣೆಯಿಲ್ಲದೇ ವೈಫಲ್ಯದ ಪ್ರಮಾಣಗಳು ವಾಹಕಗಳ ನಡುವೆ ಹೆಚ್ಚಿಗೆಯಿರುತ್ತದೆ.(T-ಮೊಬೈಲ್‌ನಿಂದ ವೆರಿಜೋನ್‌ವರೆಗೆ ಅಮೆರಿಕದಲ್ಲಿ ಕುಖ್ಯಾತವಾಗಿದೆ). ಅಂತಾರಾಷ್ಟ್ರೀಯ ಪಠ್ಯ ಸಂದೇಶವು ಮೂಲ ರಾಷ್ಟ್ರ, ಗುರಿ ಮತ್ತು ಆಯಾ ವಾಹಕಗಳನ್ನು ಅವಲಂಬಿಸಿ, ತೀವ್ರವಾಗಿ ನಂಬಿಕೆಗೆ ಅರ್ಹವಲ್ಲದ್ದಾಗಿರಬಹುದು.

ಗ್ರಾಹಕ SMS ಉದ್ಯಮ SMS
ನೆಚ್ಚಲಾಗದ್ದು ಸಕಾಲದಲ್ಲಿ ರವಾನೆ
ಅಪರಿಮಿತ ರವಾನೆ ಪ್ರಕಟಣೆಗಳ ಮೂಲಕ ಅಳೆಯಬಹುದು
ಹೆಚ್ಚಿನ ಮಟ್ಟಗಳ ಸಂದೇಶ ನಷ್ಟ ಮತ್ತು ವಿಳಂಬ ಯಾವುದೇ ಸಂದೇಶ ನಷ್ಟವಿಲ್ಲ, ಉದ್ದಕ್ಕೂ ರವಾನೆ ಮೂಲಕ ಪೂರ್ಣ ಪಾರದರ್ಶಕತೆ ಮತ್ತು ಭದ್ರತೆ
ಅಭದ್ರ ಸಾಗಣೆ ಮಾರ್ಗಗಳು ಎಲ್ಲ ರೀತಿಯ ಮೊಬೈಲ್ ಪರಸ್ಪರಕ್ರಿಯೆಗೆ ಕಾರ್ಯಸಾಧ್ಯ: B2B, B2C, C2B, C2C
ವ್ಯಕ್ತಿಯಿಂದ ವ್ಯಕ್ತಿಗೆ ಸಂವಹನಗಳಿಗೆ ಕಾರ್ಯಸಾಧ್ಯ

ಜನಪ್ರಿಯ ಸಂಸ್ಕೃತಿಯಲ್ಲಿ ಪಠ್ಯ ಸಂದೇಶ

ಬದಲಾಯಿಸಿ

ದಾಖಲೆಗಳು ಮತ್ತು ಸ್ಪರ್ಧೆ

ಬದಲಾಯಿಸಿ

ವಿಶ್ವ ದಾಖಲೆಗಳ ಗಿನ್ನಿಸ್ ಪುಸ್ತಕ ವು ಪಠ್ಯ ಸಂದೇಶ ಕಳಿಸುವುದರಲ್ಲಿ ವಿಶ್ವ ದಾಖಲೆಯನ್ನು ಒಳಗೊಂಡಿದೆ. ಪ್ರಸಕ್ತ ಇದನ್ನು ನಾರ್ವೆಯ ಸೊಂಜಾ ಕ್ರಿಸ್ಟಿಯಾನ್‌ಸೆನ್ ಹೊಂದಿದ್ದಾರೆ. ಮಿಸ್ ಕ್ರಿಸ್ಟಿಯಾನ್‌ಸೆನ್ ಅಧಿಕೃತ ಪಠ್ಯ ಸಂದೇಶವನ್ನು ೩೭.೨೮ಸೆಕೆಂಡುಗಳಲ್ಲಿ ಕಳಿಸಿದ್ದಾರೆಂದು ಗಿನ್ನಿಸ್ ದಾಖಲಿಸಿದೆ.[೯೩] ಈ ಸಂದೇಶವು ಹೀಗಿದೆ "ಸೆರಾಸಾಲ್ಮಸ್ ಮತ್ತು ಪೈಗೊಸೆಂಟ್ರಸ್ ಕುಲದ ರೇಜರ್ ಹಲ್ಲಿನ ಪಿರಾನಾಗಳು ವಿಶ್ವದ ಅತ್ಯಂತ ಉಗ್ರ ತಿಳಿನೀರಿನ ಮೀನಾಗಿದೆ. ವಾಸ್ತವವಾಗಿ,ಅವು ಮಾನವನ ಮೇಲೆ ವಿರಳವಾಗಿ ದಾಳಿ ಮಾಡುತ್ತದೆ."[೯೩] ೨೦೦೫ರಲ್ಲಿ ೨೪ ವರ್ಷ ವಯಸ್ಸಿನ ಸ್ಕಾಟಿಷ್ ವ್ಯಕ್ತಿ ಕ್ರೇಗ್ ಕ್ರಾಸ್ಬಿ ಈ ದಾಖಲೆಯನ್ನು ಹೊಂದಿದ್ದರು. ಅವರು ಇದೇ ಸಂದೇಶವನ್ನು ೪೮ ಸೆಕೆಂಡುಗಳಲ್ಲಿ ಮುಗಿಸಿ ಹಿಂದಿನ ದಾಖಲೆಯನ್ನು ೧೯ ಸೆಕೆಂಡುಗಳಿಂದ ಸೋಲಿಸಿದರು.[೯೪]

ಪರ್ಯಾಯ ದಾಖಲೆಗಳ ಪುಸ್ತಕ ವು ಒರೆಗಾನ್, ಸಲೇಂನ ಕ್ರಿಸ್ ಯಂಗ್ ಅವರನ್ನು ಅತೀವೇಗದ ೧೬೦ ಅಕ್ಷರಗಳ ಪಠ್ಯ ಸಂದೇಶ ಕಳಿಸಿದ ವಿಶ್ವದಾಖಲೆ ಹೊಂದಿರುವವರು ಎಂದು ಪಟ್ಟಿ ಮಾಡಿದೆ. ಸಂದೇಶದ ವಿಷಯವನ್ನು ಸಮಯಕ್ಕೆ ಮುಂಚಿತವಾಗಿ ಒದಗಿಸಿರಲಿಲ್ಲ. ಅವರ ೬೨.೩ಸೆಕೆಂಡುಗಳ ದಾಖಲೆಯನ್ನು ೨೦೦೭ರ ಮೇ ೨೩ರಂದು ಸ್ಥಾಪಿಸಿದರು.[೯೫]

ನ್ಯೂಜಿಲೆಂಡ್ ಡನೆಡಿನ್‌ನ ಎಲ್ಲಿಯಟ್ ನಿಕೋಲ್ಸ್ ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಅತೀ ವೇಗದ ಪಠ್ಯ ಸಂದೇಶ ಕಳಿಸಿದ ವಿಶ್ವ ದಾಖಲೆಯನ್ನು ಹೊಂದಿದ್ದಾರೆ. ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ೪೫ ಸೆಕೆಂಡುಗಳಲ್ಲಿ ೧೬೦ ಅಕ್ಷರಗಳ ಪಠ್ಯ ಸಂದೇಶದ ದಾಖಲೆಯನ್ನು ೨೦೦೭ರ ನವೆಂಬರ್ ೧೭ರಲ್ಲಿ ಸ್ಥಾಪಿಸಲಾಯಿತು. ೨೦೦೬ರ ಸೆಪ್ಟೆಂಬರ್‌ನಲ್ಲಿ ಇಟಾಲಿಯನ್ ಸ್ಥಾಪಿಸಿದ್ದ ೧ ನಿಮಿಷ ೨೬ ಸೆಕೆಂಡುಗಳ ಹಳೆಯ ದಾಖಲೆಯನ್ನು ಮುರಿಯಲಾಯಿತು.[೯೬]

ಓಹಿಯೊ ನಿವಾಸಿ ಆಂಡ್ರಿವ್ ಆಕ್ಲಿನ್ ಕೇವಲ ಒಂದು ತಿಂಗಳಿನಲ್ಲಿ ಕಳಿಸಿದ ಅಥವಾ ಸ್ವೀಕರಿಸಿದ ೨೦೦,೦೫೨ಪಠ್ಯ ಸಂದೇಶಗಳೊಂದಿಗೆ ಅತೀ ಹೆಚ್ಚು ಪಠ್ಯ ಸಂದೇಶಗಳನ್ನು ಕಳಿಸಿದ ವಿಶ್ವ ದಾಖಲೆಯ ಮನ್ನಣೆಗೆ ಪಾತ್ರರಾಗಿದ್ದಾರೆ. ಅವರ ಸಾಧನೆಗಳು ವರ್ಲ್ಡ್ ರೆಕಾರ್ಡ್ಸ್ ಅಕಾಡೆಮಿಯಲ್ಲಿ ಮೊದಲನೆಯದಾಗಿದ್ದು, ನಂತರ ರಿಪ್ಲೆಯ ಬಿಲೀವ್ ಇಟ್ ಆರ್ ನಾಟ್ ೨೦೧೦: ಸೀಯಿಂಗ್ ಈಸ್ ಬಿಲೀವಿಂಗ್ ಅನುಸರಿಸಿತು. ಯೂನಿವರ್ಸಲ್ ರೆಕಾರ್ಡ್ಸ್ ಡಾಟಾಬೇಸ್ ಅವರನ್ನು ಒಂದು ತಿಂಗಳಿನಲ್ಲಿ ಅತೀ ಹೆಚ್ಚು ಪಠ್ಯ ಸಂದೇಶಗಳನ್ನು ಕಳಿಸಿದ್ದಕ್ಕಾಗಿ ಮಾನ್ಯ ಮಾಡಿತು.[೯೭]

೨೦೧೦ರ ಜನವರಿಯಲ್ಲಿ LG ಎಲೆಕ್ಟ್ರಾನಿಕ್ಸ್ ಅಂತಾರಾಷ್ಟ್ರೀಯ ಸ್ಪರ್ಧೆ LG ಮೊಬೈಲ್ ವಿಶ್ವ ಕಪ್ ಪ್ರಾಯೋಜಕತ್ವ ವಹಿಸಿತು. ಪಠ್ಯ ಸಂದೇಶವನ್ನು ವೇಗವಾಗಿ ಕಳಿಸುವ ಜೋಡಿಯನ್ನು ನಿರ್ಧರಿಸುವುದು ಈ ಸ್ಪರ್ಧೆಯ ಉದ್ದೇಶವಾಗಿತ್ತು. ವಿಜೇತರು ದಕ್ಷಿಣ ಕೊರಿಯಕ್ಕೆ ಸೇರಿದ ಹಾ ಮೊಕ್-ಮಿನ್ ಮತ್ತು ಬೇ ಯಿಯಾಂಗ್-ಹೊ ತಂಡಕ್ಕೆ ಸೇರಿದ್ದಾರೆ.[೯೮]

೨೦೦೧ರ ಏಪ್ರಿಲ್ ೬ರಲ್ಲಿ, SKH ಆಪ್ಸ್ ಒಂದು ಐಫೋನ್ ಆಪ್, ಐಟೆಕ್ಸ್ಟ್‌ಫಾಸ್ಟ್ ಬಿಡುಗಡೆ ಮಾಡಿತು. ಪಠ್ಯ ಸಂದೇಶ ಕಳಿಸುವ ವೇಗವನ್ನು ಪರೀಕ್ಷೆ ಮಾಡುವುದಕ್ಕೆ ಗ್ರಾಹಕರಿಗೆ ಅವಕಾಶ ನೀಡಲು ಮತ್ತು ಗಿನ್ನಿಸ್ ವಿಶ್ವದಾಖಲೆಗಳ ಪುಸ್ತಕ ಬಳಸಿದ ಪ್ಯಾರವನ್ನು ಅಬ್ಯಾಸ ಮಾಡಲು ಅದು ಅವಕಾಶ ನೀಡುತ್ತದೆ. ಈ ಪ್ಯಾರಕ್ಕೆ ಗೇಮ್ ಸೆಂಟರ್‌ನಲ್ಲಿ ಪಟ್ಟಿಯಾದ ಪ್ರಸಕ್ತ ಅತ್ಯುತ್ತಮ ಕಾಲವು ೩೪.೬೫ ಸೆಕೆಂಡುಗಳಾಗಿದೆ.[೯೯]

ಮೋರ್ಸ್ ಸಂಕೇತ

ಬದಲಾಯಿಸಿ

ತಜ್ಞತೆಯ ಮೋರ್ಸ್ ಸಂಕೇತ ನಿರ್ವಾಹಕರು ಮತ್ತು ತಜ್ಞ SMSಬಳಕೆದಾರರ ನಡುವೆ ಕೆಲವು ಸ್ಪರ್ಧೆಗಳು ನಡೆದಿವೆ.[೧೦೦] ಅನೇಕ ಮೊಬೈಲ್ ಫೋನ್‌ಗಳು ಮೋರ್ಸ್ ಸಂಕೇತ ರಿಂಗ್ ಟೋನ್‌ಗಳನ್ನು ಮತ್ತು ಎಚ್ಚರಿಕೆಯ ಸಂದೇಶಗಳನ್ನು ಹೊಂದಿರುತ್ತವೆ. ಉದಾಹರಣೆಗೆ, ಅನೇಕ ನೋಕಿಯ ಮೊಬೈಲ್ ಫೋನ್‌ಗಳು ಕಿರು ಸಂದೇಶವನ್ನು ಸ್ವೀಕರಿಸಿದಾಗ ಮೋರ್ಸ್ ಸಂಕೇತದಲ್ಲಿ "S M S" ಬೀಪ್ ಶಬ್ದ ಮಾಡುವ ಆಯ್ಕೆಯನ್ನು ಹೊಂದಿರುತ್ತದೆ. ಈ ಕೆಲವು ಫೋನ್‌ಗಳು ನೋಕಿಯ ಘೋಷಣೆ "ಕನೆಕ್ಟಿಂಗ್ ಪೀಪಲ್"ನ್ನು ಸಂದೇಶ ಧ್ವನಿಯಾಗಿ ಮೋರ್ಸ್ ಸಂಕೇತದಲ್ಲಿ ನುಡಿಸುತ್ತವೆ.[೧೦೧] ಕೆಲವು ಮೊಬೈಲ್ ಫೋನ್‌ಗಳಿಗೆ ಮೂರನೇ ಪಕ್ಷದ ಅನ್ವಯಿಕೆಗಳು ಲಭ್ಯವಿವೆ. ಇವು ಕಿರು ಸಂದೇಶಗಳಿಗೆ ಮೋರ್ಸ್ ಮಾಹಿತಿಗೆ ಅವಕಾಶ ನೀಡುತ್ತದೆ.[೧೦೨][೧೦೩][೧೦೪]

ಇವನ್ನೂ ಗಮನಿಸಿ‌

ಬದಲಾಯಿಸಿ
  • ಚ್ಯಾಟ್ ಭಾಷೆ
  • ವಿಸ್ತರಿತ ಸಂದೇಶ ಸೇವೆ
  • ತತ್‌ಕ್ಷಣದ ಸಂದೇಶ ಕಳಿಸುವಿಕೆ
  • ಮೊಬೈಲ್ ಪಠ್ಯ ಪ್ರವೇಶ ತಂತ್ರಜ್ಞಾನಗಳ ಪಟ್ಟಿ
  • LOL
  • MMS
  • ಮೊಬೈಲ್ ಡಯಲ್ ಸಂಕೇತ
  • ನಿರ್ವಾಹಕ ಸಂದೇಶ
  • SMS(ಕಿರು ಸಂದೇಶ ಸೇವೆ)
  • SMS ಭಾಷೆ
  • ಟೆಲಿಗ್ರಾಮ್
  • ಟೈರೋನಿಯನ್ ನೋಟ್ಸ್, ಸ್ಕ್ರೈಬಲ್ ಸಂಕ್ಷೇಪಣಗಳು ಮತ್ತು ಸಂಯುಕ್ತಾಕ್ಷರಗಳು:

ಹಸ್ತಪ್ರತಿಗಳು ಮತ್ತು ಶಾಸನಗಳಲ್ಲಿ ಜಾಗವನ್ನು ಉಳಿಸಲು ರೋಮನ್ ಮತ್ತು ಮಧ್ಯಯುಗೀನ ಸಂಕ್ಷೇಪಣಗಳ ಬಳಕೆ.

ಉಲ್ಲೇಖಗಳು‌‌

ಬದಲಾಯಿಸಿ
  1. "the person you send a test to". Retrieved 2010-06-27.
  2. Ahmed, Rashmee Z (4 December 2002). [http:// timesofindia.indiatimes.com/articleshow/30216466.cms "UK hails 10th birthday of SMS"]. ದಿ ಟೈಮ್ಸ್ ಆಫ್‌ ಇಂಡಿಯಾ. Retrieved 2010-02-02. {{cite news}}: Check |url= value (help)
  3. "Airwide Solutions Says Happy 15th Birthday to SMS". Press release. Airwide Solutions. December 5, 2007. Archived from the original on 2008-11-19. Retrieved 2010-02-02.
  4. Shannon, Victoria (December 5, 2007). [http:// www. nytimes.com/2007/12/05/technology/05iht-sms.4.8603150.html?pagewanted=all "15 years of text messages, a 'cultural phenomenon'"]. ದ ನ್ಯೂ ಯಾರ್ಕ್ ಟೈಮ್ಸ್. Retrieved 2010-02-02. {{cite news}}: Check |url= value (help)
  5. "ಕ್ಯಾಸ್ಟಿಂಗ್ ಎ ಫವರ್‌ಫುಲ್ ಸ್ಪೆಲ್: ದಿ ಎವಾಲ್ಯುಷನ್ ಆಫ್ SMS." ದಿ ಸೆಲ್‌ ಫೋನ್ ರೀಡರ್‌: ಎಸ್ಸೇಸ್‌ ಇನ್‌ ಸೋಷಿಯಲ್‌ ಟ್ರ್ಯಾನ್ಸ್‌ಫರ್ಮೇಷನ್‌. Ed. ಆನಂದಮ್ P.ಕಾವೂರಿ ಎಂಡ್ ನೋಹಾ ಆರ್ಸೆನಾಕ್ಸ್. ಕೊಲ್ಲೇಟ್ ಸ್ನೊಡೆನ್ ಅವರಿಂದ ನ್ಯೂಯಾರ್ಕ್: ಪೀಟರ್ ಲ್ಯಾಂಗ್, ೨೦೦೬. ೧೦೭-೦೮.
  6. "GSM ವರ್ಲ್ಡ್ ಪ್ರೆಸ್ ರಿಲೀಸ್". Archived from the original on 2002-02-15. Retrieved 2011-05-23.
  7. ಲಿವಿಂಗ್ ದಿ ಫಾಸ್ಟ್, ಯಂಗ್ ಲೈಫ್ ಇನ್ ಏಷ್ಯಾ Archived 2012-03-06 ವೇಬ್ಯಾಕ್ ಮೆಷಿನ್ ನಲ್ಲಿ. synovate.comನಿಂದ
  8. ನಿವ್ಸ್ ರಿಪೋರ್ಟ್ ಆನ್ ಪಠ್ಯ ರೇಟ್ಸ್ ಫಾರ್ 2001 Archived 2004-04-05 ವೇಬ್ಯಾಕ್ ಮೆಷಿನ್ ನಲ್ಲಿ. tymcc.com.cnನಿಂದ
  9. ಫಿಲಿಪ್ಪಿನೋಸ್ ಸೆಂಟ್ 1 ಬಿಲಿಯನ್ ಟೆಕ್ಸ್ಟ್ ಮೆಸೇಜಸ್ Archived 2008-03-08 ವೇಬ್ಯಾಕ್ ಮೆಷಿನ್ ನಲ್ಲಿ., ಫಿಲಿಪ್ಪೀನ್ ಡೇಲಿ ಇನ್‌ಕ್ವೈರರ್ ನಿಂದ ೦೩/೦೪/೨೦೦೮ ಲೇಖನ.
  10. ೧೦.೦ ೧೦.೧ "ಡೆಟ್ರಾಯಿಟ್ ಮೇಯರ್ ಕ್ವಾಮೆ ಕಿಲ್‌ಪ್ಯಾಟ್ರಿಕ್, ಕ್ರಿಸ್ಟೈನ್ ಬೀಟ್ಟಿ ಇನ್ ಸೆಕ್ಸ್SMS ಸ್ಕಾಂಡಲ್". Archived from the original on 2012-03-25. Retrieved 2011-05-23.
  11. id=MCS-N10616&nc= ಮೌಂಟನೀಯರಿಂಗ್ ಕೌನ್ಸಿಲ್ ಆಫ್ ಸ್ಕಾಟ್‌ಲ್ಯಾಂಡ್ ನ್ಯೂಸ್ 24/11/10
  12. goforawalk.com ನ್ಯೂಸ್ ಡಿಸೆಂಬರ್ 2010
  13. ೧೩.೦ ೧೩.೧ ೧೩.೨ ೧೩.೩ http://www.theregister.co.uk/2008/04/18/aql_ಪಠ್ಯable_landlines/[permanent dead link]
  14. "ಪೆನ್ ಸ್ಟೇಟ್ ಲೈವ್ - PSUTXTಟೆಸ್ಟ್ ಎ ಸಕ್ಸಸ್". Archived from the original on 2012-03-20. Retrieved 2011-05-23.
  15. "FINRA, ರೆಗ್ಯುಲೇಟರಿ ನೋಟಿಸ್ 07-59, ಸೂಪರ್‌ವೈಷನ್ ಆಫ್ ಎಲೆಕ್ಟ್ರಾನಿಕ್ ಕಮ್ಯುನಿಕೇಷನ್ಸ್, ಡಿಸೆಂಬರ್ 2007". Archived from the original on 2008-05-18. Retrieved 2011-05-23.
  16. "TynTec ಕಾಲ್ಸ್ ಫಾರ್ ಇಂಡಸ್ಟ್ರಿ ಬೆಂಚ್‌ಮಾರ್ಕಡ್ SMS ಸರ್ವೀಸ್ ಲೆವೆಲ್ ಅಗ್ರೀಮೆಂಟ್ಸ್" ಮೊಬೈಲ್ ಇಂಡಸ್ಟ್ರಿ ರಿವ್ಯೂ (೨೯ ಏಪ್ರಿಲ್ ೨೦೦೮)
  17. "ಆರ್ಕೈವ್ ನಕಲು" (PDF). Archived from the original (PDF) on 2010-11-27. Retrieved 2011-05-23.
  18. RTE ಆರ್ಟಿಕಲ್ ಆನ್ ಐರ್ಲೆಂಡ್ SMS ಯೂಸೇಜ್
  19. Text.it | ದಿ UK's ಡೆಫಿನಿಟಿವ್ ಪಠ್ಯ ರಿಲೇಟೆಡ್ ಇನ್‌ಫರ್ಮೇಶನ್ ಸೋರ್ಸ್
  20. "The new proposal for reducing roaming prices". Retrieved 2010-06-23.
  21. ವೈರ್‌ಲೆಸ್ ಕ್ವಿಕ್ ಫ್ಯಾಕ್ಟ್ಸ್ CTIAನಿಂದ – ದಿ ವೈರ್‌ಲೆಸ್ ಅಸೋಸಿಯೇಷನ್
  22. "ಆರ್ಕೈವ್ ನಕಲು" (PDF). Archived from the original (PDF) on 2011-06-20. Retrieved 2011-05-23.
  23. ಕ್ರಿಸ್ಟಲ್, ಡೇವಿಡ್. Txting:the gr೮ db೮. ನ್ಯೂ ಯಾರ್ಕ್: ಆಕ್ಸ್‌ಫರ್ಡ್ ಯೂನಿವರ್ಸಿಟಿ ಪ್ರೆಸ್, ೨೦೦೮. ಪ್ರಿಂಟ್. (ಪುಟ ೮೩).
  24. ಸ್ಪ್ರಿಂಟ್ ನೆಕ್ಸ್‌ಟೆಲ್ ಟೆಕ್ಸ್ಟ್ ಮೆಸೇಜಿಂಗ್ Archived 2010-03-25 ವೇಬ್ಯಾಕ್ ಮೆಷಿನ್ ನಲ್ಲಿ. ಕಂಪೆನಿಯ ವೆಬ್‌ಸೈಟ್‌ನಿಂದ
  25. ಲೀಗಲ್ ನೋಟಿಸ್ -ನೋಟಿಸ್ ಆಫ್ ಟೆಕ್ಸ್ಟ್ ಮೆಸೇಜಿಂಗ್ ಇನ್ಕ್ರೀಸ್ Archived 2010-05-19 ವೇಬ್ಯಾಕ್ ಮೆಷಿನ್ ನಲ್ಲಿ. ವೆರಿಜೋನ್ ವೈರ್‌ಲೆಸ್ನಿಂದ
  26. ಸೇನ್.ಟು ಕ್ಯಾರಿಯರ್ಸ್: ವೈ ಡು ಟೆಕ್ಸ್ಟ್ ಮೆಸೇಜಸ್ ಕಾಸ್ಟ್ $1,300 ಪರ್ ಮೆಗ್? Archived 2008-09-11 ವೇಬ್ಯಾಕ್ ಮೆಷಿನ್ ನಲ್ಲಿ., ZDNet ಸರ್ಕಾರದಿಂದ ೨೦೦೮ರ ಸೆಪ್ಟೆಂಬರ್ ೧೦ರ ಲೇಖನ.
  27. ಇಗರ್ಷಿ, T., ಟಕಾಯ್, J., & ಯೋಷಿದಾ, T. (೨೦೦೫). ಮೊಬೈಲ್ ಫೋನ್ ಪಠ್ಯ ಸಂದೇಶಗಳ ಮೂಲಕ ಸಾಮಾಜಿಕ ಜಾಲ ಅಭಿವೃದ್ಧಿಯಲ್ಲಿ ಲಿಂಗ ವ್ಯತ್ಯಾಸಗಳು: ರೇಖಾಂಶ ಅಧ್ಯಯನ. ಜರ್ನಲ್ ಆಫ್ ಸೋಷಿಯಲ್ ಎಂಡ್ ಪರ್ಸನಲ್ ರಿಲೇಷನ್‌ಶಿಪ್ಸ್, ೨೨(೫), ೬೯೧–೭೧೩.
  28. ಇಷಿ, ಕೆನಿಚಿ. "ಇಂಪ್ಲಿಕೇಷನ್ಸ್ ಆಫ್ ಮೊಬಿಲಿಟಿ: ದಿ ಯುಸಸ್ ಆಫ್ ಪರ್ಸನಲ್ ಕಮ್ಯುನಿಕೇಷನ್ ಮೀಡಿಯ ಇನ್ ಎವರಿಡೇ ಲೈಫ್." ಜರ್ನಲ್ ಆಫ್ ಕಮ್ಯುನಿಕೇಷನ್ ೫೬ (೨೦೦೬): ೩೪೬–೬೫.
  29. Lafraniere, Sharon (January 20, 2010). "China to Scan Text Messages to Spot 'Unhealthy Content'". The New York Times.
  30. ಲಿನ್, ಏಂಜಲ್ ಮತ್ತು ಆವಿನ್ ಟಾಂಗ್ "ಮೊಬೈಲ್ ಕಲ್ಚರ್ಸ್ ಆಫ್ ಮೈಗ್ರೆಂಟ್ ವರ್ಕರ್ಸ್ ಇನ್ ಸದರನ್ ಚೈನಾ: ಇನ್ಫಾರ್ಮಲ್ ಲಿಟರಸೀಸ್ ಇನ್ ದಿ (ನ್ಯೂ) ಸೋಷಿಯಲ್ ರಿಲೇಷನ್ಸ್ ಆಫ್ ದಿ ನ್ಯೂ ವರ್ಕಿಂಗ್ ವುಮೆನ್." ನಾಲೆಜ್, ಟೆಕ್ನಾಲಜಿ, ಎಂಡ್ ಪಾಲಿಸಿ ೨೧ (ಜೂನ್ ೨೦೦೮): ೭೩–೮೧.
  31. ಹೋವಾರ್ಡ್ ರೇನ್‌ಗೋಲ್ಡ್, ಸ್ಮಾರ್ಟ್ ಮಾಬ್ಸ್: ದಿ ನೆಕ್ಸ್ಟ್ ಸೋಷಿಯಲ್ ರಿವಾಲ್ಯುಷನ್
  32. <http://partners.nytimes.com/library/tech/00/07/biztech/articles/05talk.html>
  33. <http://www.businesswire.com/news/home/20100823005660/en/Research-Markets-Philippines---Telecoms-ಮೊಬೈಲ್-Broadband>
  34. <http://www.wayodd.com/the-philippines-reaffirms-status-as-ಪಠ್ಯ-messaging-capital-of-the-world/v/8783/[permanent dead link]>
  35. ಕಂಪೆನಿ ಫ್ಯಾಕ್ಟ್ಸ್ & ಫಿಗರ್ಸ್ ವೊಡಾಫನ್ ನ್ಯೂಜಿಲೆಂಡ್ ವೆಬ್‌ಸೈಟ್‌ನಿಂದ
  36. "Smoking cessation using mobile phone text messaging is as effective in Māori as non-Māori". The New Zealand Medical Journal. 118 (1216). 3 June 2005. Archived from the original on 24 ನವೆಂಬರ್ 2009. Retrieved 23 ಮೇ 2011. More than 85% of young New Zealand adults now have a mobile phone (statistics by ethnicity are not available), and text messaging among this age group has rapidly developed into a new communications medium.
  37. http://thepinehillsnews.com/wp/2009/03/17/ಪಠ್ಯ-messaging-will-be-key-revenue-driver-for-ಮೊಬೈಲ್-operators-in-africa/[permanent dead link]
  38. "ಆರ್ಕೈವ್ ನಕಲು". Archived from the original on 2011-08-12. Retrieved 2011-05-23.
  39. http://www.plusnews.org/Report.aspx?ReportId=೮೬೧೯೨[permanent dead link]
  40. ಲೆವಿನ್‌ಸನ್, ಪಾಲ್. ೨೦೦೪.
  41. ರೇನ್‌ಗೋಲ್ಡ್, H. ೨೦೦೨
  42. ಇನ್‌ಸ್ಟಾಂಟ್ ಮೆಸೇಜಿಂಗ್: ಫ್ರೆಂಡ್ ಆರ್ ಫೋಯಿ ಆಫ್ ಸ್ಟುಡೆಂಟ್ ರೈಟಿಂಗ್?
  43. "Officials: Students can use 'text speak' on tests". USA Today. November 13, 2006. Retrieved May 25, 2010.
  44. ದಿ ಗಾರ್ಡಿಯನ್ - Gr8 db8rಟೇಕ್ಸ್ ಆನ್ ಲಿಂಗ್ವಿಸ್ಟಿಕ್ ಲುಡ್ಡೈಟ್ಸ್:ಲಾಂಗ್ವೇಜ್ ಗುರು ಡೇವಿಡ್ ಕ್ರಿಸ್ಟಲ್ ಟೆಲ್ಸ್ ಜಾನ್ ಕ್ರೇಸ್ ದೆಟ್ txt spk ಈಸ್ ರೆಸ್ಪಾನ್ಸಿಬಲ್ ಫಾರ್ ನೀದರ್ ಬ್ಯಾಡ್ ಸ್ಪೆಲ್ಲಿಂಗ್ ನಾರ್ ಮೋರಲ್ ಡೀಕೆ
  45. ಕ್ರಿಸ್ಟಲ್, ಡೇವಿಡ್. Txtng: the gr೮ db೮. ನ್ಯೂಯಾರ್ಕ್: ಆಕ್ಸ್‌ಫರ್ಡ್ ಯೂನಿವರ್ಸಿಟಿ ಪ್ರೆಸ್, ೨೦೦೮. ಪ್ರಿಂಟ್. (ಪುಟಗಳು ೧೩೧–೧೩೭)
  46. ದಿ ನ್ಯೂಯಾರ್ಕರ್ "ಥಂಬ್‌ಸ್ಪೀಕ್" ಮೆನಾಂಡ್, ಲೂಯಿಸ್. ಅಕ್ಟೋ. ೨೦, ೨೦೦೮.
  47. ಕ್ರಿಸ್ಟಲ್, ಡೇವಿಡ್: the gr೮ db೮. ನ್ಯೂಯಾರ್ಕ್: ಆಕ್ಸ್‌ಫರ್ಡ್ ಯೂನಿವರ್ಸಿಟಿ ಪ್ರೆಸ್, ೨೦೦೮. ಮುದ್ರಣ.
  48. ರೋಸನ್, L.D., ಚಾಂಗ್, J., ಎರ್ವಿನ್, L., ಕ್ಯಾರಿಯರ್, L.M., & ಚೀವರ್, N.A. (ಮುದ್ರಣದಲ್ಲಿ ೨೦೦೯). ಯುವ ವಯಸ್ಕರ ನಡುವೆ ಪಠ್ಯ ಸಂದೇಶಗಳು ಮತ್ತು ಔಪಚಾರಿಕ ಮತ್ತು ಅನೌಪಚಾರಿಕ ಬರವಣಿಗೆ ಕಮ್ಯುನಿಕೇಷನ್ ರಿಸರ್ಚ್
  49. "Teens Admit Text Messaging Most Distracting While Driving". Liberty Mutual Group. July 19, 2007. Retrieved 2010-02-05.
  50. ಟೆಕ್ಸ್ಟಿಂಗ್ ಎಂಡ್ ಡ್ರೈವಿಂಗ್ ವರ್ಸ್ ದ್ಯಾನ್ ಡ್ರಿಂಕಿಂಗ್ ಎಂಡ್ ಡ್ರೈವಿಂಗ್, CNBC, ಜೂನ್ ೨೫, ೨೦೦೯
  51. ಇನ್ ಸ್ಟಡಿ,ಟೆಕ್ಸ್ಟಿಂಗ್ ಲಿಫ್ಟ್ಸ್ ಕ್ರಾಶ್ ರಿಸ್ಕ್ ಬೈ ಲಾರ್ಜ್ ಮಾರ್ಜಿನ್, ದಿ ನ್ಯೂಯಾರ್ಕ್ ಟೈಮ್ಸ್ , ಜುಲೈ ೨೭, ೨೦೦೯
  52. ೫೨.೦ ೫೨.೧ ಎನ್‌ಸೈಕ್ಲೋಪೀಡಿಯ ಆಫ್ ರಿಸ್ಕ್ಸ್ ಎಂಡ್ ಥ್ರೀಟ್ಸ್ MySecureCyberspace. ೨೦೦೯-೦೧-೧೩ರಂದು ಮರುಸಂಪಾದಿಸಲಾಯಿತು.
  53. Yvonne Roberts (2005-07-31). "The One and Only". p. 22. Following a string of extramarital affairs and several lurid "sexting" episodes, Warne has found himself home alone, with Simone Warne taking their three children and flying the conjugal coop. {{cite news}}: |access-date= requires |url= (help)
  54. ಟೆಕ್ಸ್ಟಿಂಗ್:ಫ್ರಂ ಫಾಕ್ಸ್ ಪಾಸ್ ಟು ಫಾಕ್ಸ್ ಸೆಕ್ಸ್ ಫ್ರಂ ದಿ ಮೈಂಟ್ ಆಫ್ ಗ್ರಾಂಡ್‌ಡಿವಾ ೨೦೦೯-೦೧-೧೩ರಂದು ಮರುಸಂಪಾದಿಸಲಾಯಿತು.
  55. ಸೆಕ್ಸ್ಟಿಂಗ್ ವಿತ್ ಫ್ರೆಂಡ್ಸ್ ಈಸ್ ದಿ ನ್ಯೂ ಹೈಸ್ಕೂಲ್ ನೋಟ್ Archived 2009-07-06 ವೇಬ್ಯಾಕ್ ಮೆಷಿನ್ ನಲ್ಲಿ. XYHD.TV. ೨೦೦೯-೦೧-೧೩ರಂದು ಮರುಸಂಪಾದಿಸಲಾಯಿತು.
  56. "ಸೆಕ್ಸ್ ಎಂಡ್ ಟೆಕ್ ಸರ್ವೇ". Archived from the original on 2012-03-26. Retrieved 2011-05-23.
  57. ಕೋನಿ ಸ್ಕಲ್ಟ್ಜ್: ಮೇಕಿಂಗ್ ಕಿಡ್ಸ್ ಟು ಟೆಲ್ ಲಾಸ್ ನೇಕೆಡ್ ಟ್ರೂಥ್ ಈಸ್ ದಿ ಪರ್ಫೆಕ್ಟ್ ಸೆಂಟೆನ್ಸ್ Archived 2009-02-01 at Archive.is ದಿ ಪ್ಲೈನ್ ಡೀಲರ್ ೨೦೦೮-೧೨-೧೩.
  58. "ಮೇರಿಲ್ಯಾಂಡ್ ನ್ಯೂಸ್‌ಲೈನ್ - ಬಿಸಿನೆಸ್ & ಟೆಕ್ ಸ್ಪೆಷಲ್ ರಿಪೋರ್ಟ್: ಟೀನ್ಸ್ ಎಂಡ್ ಟೆಕ್ನಾಲಜಿ". Archived from the original on 2012-03-23. Retrieved 2011-05-23.
  59. "ಟಾಪ್ ನ್ಯೂಸ್ - ಸ್ಟೂಡೆಂಟ್ಸ್ ಡಯಲ್ ಅಪ್ ಟ್ರಬಲ್ ಇನ್ ನ್ಯೂ ಟ್ವಿಸ್ಟ್ ಟು ಚೀಟಿಂಗ್". Archived from the original on 2009-07-05. Retrieved 2021-08-10.
  60. ಒಕಾಡಾ, T. (೨೦೦೫). ಯುತ್ ಕಲ್ಚರ್ ಎಂಡ್ ಶೇಪಿಂಗ್ ಆಫ್ ಜಪಾನೀಸ್ ಮೊಬೈಲ್ ಮೀಡಿಯ:ಪರ್ಸೊನಲೈಜೇಷನ್ ಎಂಡ್ ದಿ ಕೈಟೈನ್ ಇಂಟರ್‌ನೆಟ್ ಆಸ್ ಮಲ್ಟಿಮೀಡಿಯ , ಇನ್ M. Ito, D. ಒಕಾಬೆ ಎಂಡ್ M. ಮಾಟ್‌ಸುಡಾ (eds), ಪರ್ಸನಲ್, ಪೋರ್ಟೆಬಲ್, ಪೆಡೆಸ್ಟ್ರಿಯನ್: ಮೊಬೈಲ್ ಫೋನ್ಸ್ ಇನ್ ಜಪಾನೀಸ್ ಲೈಫ್ , ಕೇಂಬ್ರಿಜ್,ಮಸ್ಸಾಚುಸೆಟ್ಸ್: MIT ಪ್ರೆಸ್
  61. "Exams ban for mobile phone users". BBC News. April 15, 2005. Retrieved May 25, 2010.
  62. ಗಾಗ್ಗಿನ್, G (೨೦೦೬).ಸೆಲ್ ಪೋನ್ ಕಲ್ಚರ್: ಮೊಬೈಲ್ ಟೆಕ್ನಾಲಜಿ ಇನ್ ಎವರಿಡೆ ಲೈಫ್ . ನ್ಯೂಯಾರ್ಕ್: ರೌಟ್ಲೆಡ್ಜ್.
  63. ಹಾರ್ಡಿಂಗ್, S. & ರೋಸೆನ್‌ಬರ್ಗ್, D. (ಆವೃತ್ತಿ). (೨೦೦೫). ಹಿಸ್ಟರೀಸ್ ಆಫ್ ದಿ ಫ್ಯೂಚರ್ . ಲಂಡನ್: ಡ್ಯೂಕ್ ಯೂನಿವರ್ಸಿಟಿ ಪ್ರೆಸ್, p. ೮೪
  64. ಓಪನ್‌ಮೈಂಡ್ ನೆಟ್‌ವರ್ಕ್ಸ್ ... Archived 2009-01-31 ವೇಬ್ಯಾಕ್ ಮೆಷಿನ್ ನಲ್ಲಿ.ಮೆಸೇಜಿಂಗ್ ಎಕ್ಸ್‌ಪರ್ಟ್ಸ್ Archived 2009-01-31 ವೇಬ್ಯಾಕ್ ಮೆಷಿನ್ ನಲ್ಲಿ.
  65. Lewandowski, Gary; Harrington, Samantha (2006). "The influence of phonetic abbreviations on evaluation of student performance" (PDF). Current Research in Social Psychology. 11 (15): 215–226. Archived from the original (PDF) on 2014-01-05. Retrieved 2011-05-23.
  66. ^ ಫೋರ್ಟ್ರೆಸ್ SMS ಟೆಕ್ನಿಕಲ್ ರಿಪೋರ್ಟ್
  67. ^ ರಾಬರ್ಟ್ ಬರ್ನೆಟ್; Ylva Hård af Segerstad (೨೦೦೫-೦೯-೦೮). "ದಿ SMS ಮರ್ಡರ್ ಮಿಸ್ಟರಿ" ಇನ್ ಸೇಫ್ಟಿ ಎಂಡ್ ಸೆಕ್ಯುರಿಟಿ ಇನ್ ಎ ನೆಟ್‌ವರ್ಕ್ಡ್ ವರ್ಲ್ಡ್ ಬ್ಯಾಲೆನ್ಸಿಂಗ್-ರೈಟ್ಸ್ & ರೆಪ್ಸಾನ್ಸಿಬಿಲಿಟೀಸ್,ಆಕ್ಸ್‌ಫರ್ಡ್ ಇಂಟರ್‌ನೆಟ್ ಇನ್ಸ್ಟಿಟ್ಯೂಟ್
  68. http://www..textually.org/textually/archives/೨೦೦೫/೧೨/೦೧೦೮೫೬.htm[permanent dead link]
  69. ^ CryptoSMS - ಕ್ರಿಪ್ಟೊ ಫಾರ್ ಕ್ರಿಮಿನಲ್ಸ್
  70. "ಬೋಸ್ಟನ್ ಪೊಲೀಸ್ ಟರ್ನ್ ಟು ಟೆಕ್ಸ್ಟ್ ಮೆಸೇಜಸ್ ಟು ಫೈಟ್ ಕ್ರೈಮ್". Archived from the original on 2009-07-06. Retrieved 2021-08-28.
  71. ^ BBC ನ್ಯೂಸ್ ಆರ್ಟಿಕಲ್ ಎಬೌಟ್ ಮಲೇಶಿಯನ್ ಲಾ ಆಲೋಯಿಂಗ್ ಡೈವರ್ಸ್ ವಿಯಾ ಟೆಕ್ಸ್ಟ್ ಮೆಸೇಜಿಂಗ್
  72. ^ http://journal.media-culture.org.au/0603/02-goggin.php Archived 2011-04-10 ವೇಬ್ಯಾಕ್ ಮೆಷಿನ್ ನಲ್ಲಿ. SMS Riot: ಟ್ರಾನ್ಸ್‌ಮಿಟಿಂಗ್ ರೇಸ್ ಆನ್ ಎ ಸಿಡ್ನಿ ಬೀಚ್, ಡಿಸೆಂಬರ್ 2005 M/C ಜರ್ನಲ್, ಸಂಪುಟ 9, Iss 1, ಮಾರ್ಚ್ 2006
  73. ಟೆಕ್ಸ್ಟ್ ಮೆಸೇಜಸ್ 'ಫ್ಯೂಲ್ ಟ್ರಬಲ್' - ನ್ಯಾಷನಲ್ - smh.com.au
  74. ^ ಪೊಲೀಸ್ ಕನ್ಸಿಡರ್ SMS ಕ್ರೋನುಲ್ಲಾ ಮೆಸೇಜಸ್ 'ಎ ಕ್ರೈಮ್' - ABC ನ್ಯೂಸ್(ಆಸ್ಟ್ರೇಲಿಯನ್ ಬ್ರಾಡ್‌ಕಾಸ್ಟಿಂಗ್ ಕಾರ್ಪೊರೇಷನ್)
  75. ^ ಕೆನಡಿ, ಲೆಸ್. "ಮ್ಯಾನ್ ಇನ್ ಕೋರ್ಟ್ ಓವರ್ ಕ್ರೊನುಲ್ಲಾ ರಿವೆಂಜ್ SMS", ದಿ ಸಿಡ್ನಿ ಮಾರ್ನಿಂಗ್ ಹೆರಾಲ್ಡ್ , ೨೦೦೬-೧೨-೦೬. ೨೦೦೬-೦೮-೩೧ರಂದು ಮರುಸಂಪಾದಿಸಲಾಯಿತು.
  76. ^ http://www.theage.com.au/news/national/just-me-and-500-close-mates/2008/01/13/1200159277507.html "ಪೊಲೀಸ್ ಪ್ರೋಬ್ ಹೌ 500 ಟೀನ್ಸ್ ಗಾಟ್ ಇನ್ವೈಟ್"
  77. ^ https://archive.is/20120910104144/www.news.com.au/story/0,23599,23054773-5007146,00.html "ವಿ ವರ್ ಆಲ್ ಯಂಗ್ ಒನ್ಸ್, ಬಟ್ ಟೀನ್ಸ್ ನೀಡ್ ಲಿಮಿಟ್ಸ್."
  78. "ಎರೆಯುರ್". Archived from the original on 2008-02-17. Retrieved 2011-05-23.
  79. ಇನ್ ಪೊಲಿಟಿಕ್ಸ್, ಬ್ಲಾಗ್ಸ್ ಎಂಡ್ ಟೆಕ್ಸ್ಟ್ ಮೆಸೇಜಸ್ ಆರ್ ದಿ ನ್ಯೂ ಅಮೆರಿಕನ್ ವೇ- ಇಂಟರ್‌ನ್ಯಾಷನಲ್ ಹೆರಾಲ್ಡ್ ಟ್ರಿಬ್ಯೂನ್
  80. ೮೦.೦ ೮೦.೧ ೮೦.೨ ಟೆಕ್ಸ್ಟ್ ಮೆಸೇಜಿಂಗ್ ಇನ್ U.S. ಪಾಲಿಟಿಕ್ಸ್ | ನ್ಯೂಸ್‌ವೀಕ್ ಟೆಕ್ನಾಲಜಿ | Newsweek.com
  81. TxtMob
  82. ೮೨.೦ ೮೨.೧ ೮೨.೨ ರೇನ್‌ಗೋಲ್ಡ್, ಹೋವಾರ್ಡ್ (೨೦೦೨) ಸ್ಮಾರ್ಟ್ ಮಾಬ್ಸ್: ದಿ ನೆಕ್ಟ್ಸ್ ಸೋಷಿಯಲ್ ರಿವಾಲ್ಯೂಷನ್, ಪರ್ಸ್ಯೂಸ್, ಕೇಂಬ್ರಿಜ್, ಮಸಾಚ್ಯುಸೆಟ್ಸ್, pp. xi–xxii, ೧೫೭–೮೨.
  83. "ಟೆಕ್ಸ್ಟ್ ಮೆಸೇಜಿಂಗ್". Archived from the original on 2008-01-26. Retrieved 2011-05-23.
  84. By ಆಲಿಸನ್ ಡಯಾನ, ಇನ್ಫರ್ಮೇಷನ್‌ವೀಕ್ “ಎಕ್ಸಿಕ್ಯುಟೀವ್ಸ್ ಡಿಮ್ಯಾಂಡ್ ಕಮ್ಯುನಿಕೇಷನ್ಸ್ ಆರ್ಸೆನಲ್ Archived 2010-11-20 ವೇಬ್ಯಾಕ್ ಮೆಷಿನ್ ನಲ್ಲಿ..” ಸೆಪ್ಟೆಂಬರ್‌ ೩೦, ೨೦೧೦ ೨೦೧೦ರ ಅಕ್ಟೋಬರ್ ೧೧ರಂದು ಮರುಸಂಪಾದಿಸಲಾಯಿತು.
  85. "ಆಕ್ಸಿಡೆಂಟ್ ಕ್ಲೇಮ್ ಟೆಕ್ಸ್ಟ್ ಸ್ಕಾಮ್". Archived from the original on 2011-05-05. Retrieved 2011-05-23.
  86. NY ಟೈಮ್ಸ್ ಆರ್ಟಿಕಲ್ ಆನ್ UCAN ಕೇಸ್ ಎಗೇನ್ಸ್ಟ್ ಸ್ಪ್ರಿಂಟ್
  87. "UCAN ರಿಪೋರ್ಟ್ ಆನ್ SPAM SMS ಸೆಟಲ್‌ಮೆಂಟ್". Archived from the original on 2007-07-18. Retrieved 2011-05-23.
  88. ೮೮.೦ ೮೮.೧ AT&T’s ಟೆಕ್ಸ್ಟ್ ಮೆಸೇಜಸ್ ಕಾಸ್ಟ್ $1,310 ಪರ್ ಮೆಗಾಬೈಟ್
  89. "ಟೆಕ್ಸ್ಟಿಂಗ್ ಪ್ರೈಸಸ್ ರೈಸ್ ಆಸ್ ಕ್ಯಾರಿಯರ್ಸ್ ಮೇಕ್ ಪ್ರಾಫಿಟ್ಸ್ | ನ್ಯೂಸ್ & ಒಪೀನಿಯನ್ | ದಿ ಡೇಲಿ ಯೂನಿವರ್ಸ್". Archived from the original on 2010-03-28. Retrieved 2011-05-23.
  90. AT&T, ವೆರಿಜಾನ್ ಡೆನಿ ಟೆಕ್ಸ್ಟ್-ಮೆಸೇಟ್ ಪ್ರೈಸ್ ಫಿಕ್ಸಿಂಗ್ | ನ್ಯೂಸ್ & ಓಪೀನಿಯನ್ | PCMag.com
  91. "AT&T ಎಂಡ್ ವೆರಿಜಾನ್ ಡೆನಿ ಪ್ರೈಸ್-ಫಿಕ್ಸಿಂಗ್ ಅಕ್ಯುಸೇಷನ್ಸ್ | ವೈರ್‌ಲೆಸ್ - CNET ನ್ಯೂಸ್". Archived from the original on 2012-02-03. Retrieved 2011-05-23.
  92. ಡೋನ್ಟ್ ಯೂಸ್ SMS ಫಾರ್ ಕಾನ್ಫಿಡೆನ್ಷಿಯಲ್ ಕಮ್ಯುನಿಕೇಷನ್
  93. ೯೩.೦ ೯೩.೧ Sonja satte sms-verdensrekord | TV 2 Nyhetene
  94. "Fastest fingers top text record". BBC News. March 22, 2005. Retrieved March 27, 2010.
  95. ^ ಬುಕ್ ಆಫ್ ಆಲ್ಟರ್ನೇಟಿವ್ ರೆಕಾರ್ಡ್ಸ್|url=http://www.alternativerecords.co.uk/recorddetails.asp?recid=೨೮೩[permanent dead link]
  96. ^ ವರ್ಲ್ಡ್ಸ್ ಫಾಸ್ಟೆಸ್ಟ್ ಟೆಕ್ಸ್‌ಟರ್ ಫೌಂಡ್ ಇನ್ ಡುನೆಡಿನ್ | TECHNOLOGY | NEWS | tvnz.co.nz
  97. "Most ಟೆಕ್ಸ್ಟ್ ಮೆಸೇಜಸ್ ಸೆಂಟ್ ಆರ್ ರಿಸೀವ್ಡ್ ಇನ್ ಎ ಸಿಂಗಲ್ ಮಂಥ್" Archived 2010-12-28 ವೇಬ್ಯಾಕ್ ಮೆಷಿನ್ ನಲ್ಲಿ., ದಿ ಯೂನಿವರ್ಸಲ್ ರೆಕಾರ್ಡ್ಸ್ ಡಾಟಾಬೇಸ್ , ಸೆಪ್ಟೆಂಬರ್ ೧೪, ೨೦೧೦. ನವೆಂಬರ್‌ ೧೫, ೨೦೧೦ ಮರುಸಂಪಾದಿಸಲಾಗಿದೆ.
  98. Sang-hun, Choe (27 January 2010). "Rule of Thumbs: Koreans Reign in Texting World". New York Times. Seoul. Retrieved 10 February 2010.
  99. "World Record Texting Speed App - iTextFast". PR Mac. United States. 06 April 2011. Retrieved 06 April 2011. {{cite news}}: Check date values in: |accessdate= and |date= (help)
  100. ಎ ರೇಸ್ ಟು ದಿ ವೈರ್ ಆಸ್ ಓಲ್ಡ್ ಹ್ಯಾಂಡ್ ಎಟ್ ಮಾರ್ಸ್ ಕೋಡ್ ಬೀಟ್ಸ್ txt msgrs Archived 2008-09-07 ವೇಬ್ಯಾಕ್ ಮೆಷಿನ್ ನಲ್ಲಿ., ಏಪ್ರಿಲ್ ೧೬, ೨೦೦೫, ದಿ ಟೈಮ್ಸ್ ಆನ್‌ಲೈನ್.
  101. ನೋಕಿಯ ಮೊಬೈಲ್ ಫೋನ್ಸ್ ಈಸ್ಟರ್ ಎಗ್ಸ್ - Eeggs.com
  102. ನೋಕಿಯ ಆಪ್ ಲೆಟ್ಸ್ ಯು ಕೀ SMSಸ್ ಇನ್ ಮಾರ್ಸ್ ಕೋಡ್ Archived 2005-07-30 ವೇಬ್ಯಾಕ್ ಮೆಷಿನ್ ನಲ್ಲಿ., ಜೂನ್ ೧, ೨೦೦೫, ಬೋಯಿಂಗ್ ಬೋಯಿಂಗ್.
  103. ಬ್ಯಾಕ್ ಟು ದಿ ಫ್ಯೂಚರ್ - ಮೋರ್ಸ್ ಕೋಡ್ ಎಂಡ್ ಸೆಲ್ಲ್ಯುಲರ್ ಪೋನ್ಸ್, ಜೂನ್ ೨೮, ೨೦೦೫, O'ರೈಲಿ ಜಾಲ.
  104. ನೋಕಿಯ ಫೈಲ್ಸ್ ಪೇಟೆಂಟ್ ಫಾರ್ ಮೋರ್ಸ್ ಕೋಡ್ Code-ಜೆನೆರೇಟಿಂಗ್ ಸೆಲ್ ಪೋನ್ Archived 2016-01-01 ವೇಬ್ಯಾಕ್ ಮೆಷಿನ್ ನಲ್ಲಿ.,ಮಾರ್ಚ್ ೧೨, ೨೦೦೫, ಎನ್ಗಾಡ್‌ಜೆಟ್.

ಬಾಹ್ಯ ಕೊಂಡಿಗಳು‌‌

ಬದಲಾಯಿಸಿ