ಸಂಕ್ಷಿಪ್ತ ಸಂದೇಶ ಸೇವೆ

ಸಂಕ್ಷಿಪ್ತ ಸಂದೇಶ ಸೇವೆ ಅಥವಾ ನಿಶ್ಶಬ್ದ ಸಂದೇಶ ಸೇವೆ ಯು (SMS ), ಸಂಚಾರಿ ದೂರವಾಣಿ ಸಾಧನಗಳ ನಡುವೆ ಪ್ರಮಾಣೀಕರಿಸಿದ ಪ್ರೋಟೋಕಾಲ್‌ಗಳನ್ನು ಬಳಸಿಕೊಳ್ಳುವ GSM ಮೂಲಕ ಕಿರು ಪಠ್ಯ ಸಂದೇಶಗಳ ವಿನಿಮಯವನ್ನು ಸಾಧ್ಯಗೊಳಿಸುವ ದೂರವಾಣಿ ಸಂಪರ್ಕ ವ್ಯವಸ್ಥೆಯ ಪ್ರಮಾಣೀಕರಿಸಿದ ಸಂಪರ್ಕ ಸೇವೆಯಾಗಿದೆ. SMS ಪಠ್ಯ ಸಂದೇಶ ವ್ಯವಸ್ಥೆಯು ಭೂಮಿಯಲ್ಲಿ ವ್ಯಾಪಕ ಬಳಕೆಯಲ್ಲಿರುವ ದತ್ತ ಅನ್ವಯವಾಗಿದ್ದು 2.4 ಶತಕೋಟಿ ಸಕ್ರಿಯ ಬಳಕೆದಾರರು ಇದ್ದಾರೆ, ಅಥವಾ ಎಲ್ಲಾ ಸಂಚಾರಿ ದೂರವಾಣಿ ಗ್ರಾಹಕರಲ್ಲಿ 74% ಮಂದಿಯ ದೂರವಾಣಿ ಸಾಧನಗಳಲ್ಲಿ ಸಂದೇಶಗಳ ಕಳುಹಿಸುವಿಕೆ ಹಾಗೂ ಪಡೆಯುವಿಕೆ ನಡೆಯುತ್ತದೆ.

SMS ಸ್ವೀಕರಿಸುತ್ತಿರುವ ಸಂದರ್ಭ
E.161, ಬಹುತೇಕ ಸಾಮಾನ್ಯವಾದ ಸಂಚಾರಿ ದೂರವಾಣಿ ಕೀಲಿಮಣೆ ಅಕ್ಷರಮಾಲೆ ವಿನ್ಯಾಸ

ಇತಿವೃತ್ತ

ಬದಲಾಯಿಸಿ

SMS ತಂತ್ರಜ್ಞಾನವು ಪಠ್ಯ ಸಂದೇಶ ಸೇವೆಗಳ ವಿಕಾಸಾತ್ಮಕ ಅಭಿವೃದ್ಧಿಗೆ ಕಾರಣವಾಗಿದೆ. ಪಠ್ಯ ಸಂದೇಶ ಮತ್ತು ಅದಕ್ಕೆ ಸಂಬಂಧಪಟ್ಟ ತಂತ್ರಜ್ಞಾನದ ನಡುವಿನ ಸಂಪರ್ಕವು ಎಷ್ಟು ವ್ಯಾಪಕವಾಗಿದೆ ಎಂದರೆ ಪ್ರಪಂಚದ ಹಲವು ಭಾಗಗಳಲ್ಲಿ ಇದನ್ನು ಪಠ್ಯ ಸಂದೇಶ ಅಥವಾ ಪಠ್ಯ ಸಂದೇಶ ಕಳುಹಿಸುವ ಕ್ರಿಯೆಗೆ, ವಿಭಿನ್ನ ಪ್ರೊಟೋಕಾಲ್ ಬಳಕೆಯಲ್ಲಿದ್ದರೂ ಸಹ "SMS" ಎಂಬ ಪದವು ಸಮಾನಾರ್ಥಕ ಪದವಾಗಿ ಬಳಕೆಯಲ್ಲಿದೆ. ಆಧುನಿಕ ಸಂಚಾರಿ ದೂರವಾಣಿ ಸಾಧನಗಳಲ್ಲಿ ಬಳಸಲಾಗುವ SMSಅನ್ನು ಮೂಲತಃ GSM ಮಾನಕಗಳ ಸರಣಿಯ ಭಾಗವಾಗಿ GSM ಸಂಚಾರಿ ದೂರವಾಣಿ ಸಾಧನಗಳಿಂದ ಹಾಗೂ ಅವುಗಳಿಗೆ 160 ಅಕ್ಷರಗಳವರೆಗೆ (ಅಂತರಗಳೂ ಸೇರಿದಂತೆ), ಸಂದೇಶ ಕಳಿಸುವ ನಿಮಿತ್ತಸಾಧನವಾಗಿ 1985[]ರಲ್ಲಿ ರೂಪಿಸಲಾಗಿತ್ತು.[] ಆಗಿನಿಂದ, ಈ ಸೇವೆಯ ಬೆಂಬಲವನ್ನು ANSI CDMA ಜಾಲಗಳು ಮತ್ತು ಸಾಂಖ್ಯಿಕ AMPS, ಅಲ್ಲದೆ ಉಪಗ್ರಹ ಮತ್ತು ಸ್ಥಿರದೂರವಾಣಿ ಜಾಲಗಳೂ ಸೇರಿದಂತೆ ಇತರ ಮೊಬೈಲ್ ತಂತ್ರಜ್ಞಾನಗಳಲ್ಲಿಯೂ ಅಳವಡಿಸುವಂತೆ ವಿಸ್ತರಿಸಲಾಯಿತು.[ಸಾಕ್ಷ್ಯಾಧಾರ ಬೇಕಾಗಿದೆ]ಬಹುತೇಕ SMS ಸಂದೇಶಗಳು ಸಂಚಾರಿ ದೂರವಾಣಿಯಿಂದ-ಸಂಚಾರಿ ದೂರವಾಣಿಗೆ ಕಳಿಸುವ ಪಠ್ಯ ಸಂದೇಶಗಳಾಗಿದ್ದರೂ, ತತ್ಸಂಬಂಧಿ ಮಾನಕವು ಇತರೆ ಪ್ರಸಾರ ಸಂದೇಶವ್ಯವಸ್ಥೆಯನ್ನೂ ಸಹಾ ಬೆಂಬಲಿಸುತ್ತದೆ.

ಇತಿಹಾಸ

ಬದಲಾಯಿಸಿ

GSMನ ಭಾಗವಾಗಿ SMS

ಬದಲಾಯಿಸಿ

ಪ್ರಾರಂಭಿಕ ಪರಿಕಲ್ಪನೆ

ಬದಲಾಯಿಸಿ
 
USAನಲ್ಲಿ ಕಳಿಸುವ ಮಾಸಿಕ SMS ಸಂದೇಶಗಳ ಸಂಖ್ಯೆ (ಶತಕೋಟಿಗಳಲ್ಲಿ)

1980ರ ಪ್ರಾರಂಭದಲ್ಲಿ ಸಂಚಾರಿ ದೂರವಾಣಿ ಸಂಪರ್ಕ ಸೇವೆಗಳ ಹಲವಾರು ಸಮುದಾಯಗಳಲ್ಲಿ ಸಂಚಾರಿ ದೂರವಾಣಿ ಬಳಕೆದಾರರ ಸೇವೆಗಳಿಗೆ ಪಠ್ಯ ಸಂದೇಶವನ್ನು ಸೇರಿಸುವ ಆಲೋಚನೆಯನ್ನು ಗುಪ್ತವಾಗಿರಿಸಲಾಗಿತ್ತು. ಡಿಸೆಂಬರ್ 1982ರಲ್ಲಿ ಅಂಗೀಕಾರವಾದ GSM CEPT ಗುಂಪಿನ ಮೊದಲ ಕಾರ್ಯ ಯೋಜನೆಯು "ಸಾರ್ವಜನಿಕ ಸಂಜ್ಞಾವ್ಯವಸ್ಥಿತ ದೂರವಾಣಿ ಜಾಲಗಳಲ್ಲಿ ಮತ್ತು ಸಾರ್ವಜನಿಕ ದತ್ತ ಜಾಲ‌ಗಳಲ್ಲಿ ಒದಗಿಸಲಾಗುವ ಸೇವೆಗಳು ಮತ್ತು ಸೌಲಭ್ಯಗಳು... ಸಂಚಾರಿ ದೂರವಾಣಿ ವ್ಯವಸ್ಥೆಯಲ್ಲಿ ಲಭ್ಯವಾಗಬೇಕು" ಎಂಬ ವಿನಂತಿಯನ್ನು ಹೊಂದಿತ್ತು.[] 1980ರ ಪ್ರಾರಂಭದಲ್ಲಿ ವ್ಯಾಪಕವಾಗಿ ಬಳಕೆಯಲ್ಲಿದ್ದ ಸಂದೇಶ ನಿರ್ವಹಣೆ ವ್ಯವಸ್ಥೆಗಳ ಮೂಲಕ ಅಥವಾ ಸಂಚಾರಿ ದೂರವಾಣಿ ಕೇಂದ್ರಗಳ ನಡುವೆ ನೇರ ಪಠ್ಯ ಸಂದೇಶಗಳ ವಿನಿಮಯವನ್ನು ಇದರ ಗುರಿಯಾಗಿಸಲಾಗಿತ್ತು.[] SMSನಲ್ಲಿಯ ನಾವೀನ್ಯತೆ ಸಂಕ್ಷಿಪ್ತ ಸಂದೇಶ ಸೇವೆಯಲ್ಲಿನ ಸಂಕ್ಷಿಪ್ತ ಎಂಬ ಪದದಲ್ಲಿ ಇದೆ. GSM ವ್ಯವಸ್ಥೆಯನ್ನು ದೂರವಾಣಿ ವ್ಯವಸ್ಥೆಯ ಪ್ರಮುಖ ಅನ್ವಯವಾಗಿ ಗುರುತಿಸಿದ್ದುದರಿಂದ ಅದನ್ನು ದೂರವಾಣಿ ವ್ಯವಸ್ಥೆಗೆ ಉತ್ತಮ ಸಮನ್ವಯತೆ ಹೊಂದುವಂತೆ ರೂಪಿಸಲಾಗಿದೆ. SMSನ ಪ್ರಮುಖ ಗುರಿಯು ದೂರವಾಣಿ-ಸಮನ್ವಯಿಕ ವ್ಯವಸ್ಥೆಯನ್ನು ಬಳಸಿಕೊಂಡು ದೂರವಾಣಿ ಕರೆದಟ್ಟಣೆಯನ್ನು ನಿಯಂತ್ರಿಸಲೆಂದಿರುವ ಸಂಜ್ಞಾಪಥಗಳಲ್ಲಿ ಸಂಜ್ಞಾದಟ್ಟಣೆಯಿಲ್ಲದ ಸಮಯದಲ್ಲಿ ಸಂದೇಶಗಳ ರವಾನೆಮಾಡುವುದಾಗಿತ್ತು. ಹೀಗೆ ಮಾಡುವುದರಿಂದ ಯಾವುದೇ ಹೆಚ್ಚಿನ ವೆಚ್ಚವಿಲ್ಲದೆ ಸಂದೇಶ ರವಾನೆ ಮಾಡಲು ಬಳಕೆಯಲ್ಲಿಲ್ಲದ ಸಂಪನ್ಮೂಲಗಳನ್ನು ಉಪಯೋಗಿಸಬಹುದಾಗಿತ್ತು. ಆದಾಗ್ಯೂ, ಪ್ರಸ್ತುತ ಸಂಜ್ಞಾ ಶೈಲಿಗಳೊಂದಿಗೆ ಹೊಂದಿಕೊಳ್ಳಲು ಸೂಕ್ತವಾಗುವಂತೆ, ಸಂದೇಶಗಳ ಗಾತ್ರವನ್ನು 128 ಬೈಟ್‌ಗಳಿಗೆ ನಿಯಂತ್ರಿಸುವುದು ಅಗತ್ಯವಾಗಿತ್ತು (ನಂತರ 140 ಬೈಟ್‌ಗಳ ಅಥವಾ 160 7-ಬಿಟ್‌ ಅಕ್ಷರಗಳ ಸಾಮರ್ಥ್ಯಕ್ಕೆ ಸುಧಾರಿಸಲಾಯಿತು). ಆದ್ದರಿಂದ ಈ ಸೇವೆಯನ್ನು “ಸಂಕ್ಷಿಪ್ತ ಸಂದೇಶ ಸೇವೆ” ಎಂದು ಹೆಸರಿಸಲಾಯಿತು. ಈ ಕಲ್ಪನೆಯಿಂದಾಗಿ ಪ್ರತಿ ಸಂಚಾರಿ ದೂರವಾಣಿ ಕೇಂದ್ರದಲ್ಲಿ ಹೆಚ್ಚುವರಿ ತಂತ್ರಾಂಶ ಕ್ರಮವಿಧಿಯ ಮೂಲಕ SMSಅನ್ನು ಅಳವಡಿಸಲು ಸಾಧ್ಯವಾಯಿತು. ಇದಕ್ಕೆ ಅಗತ್ಯವಾಗಿದ್ದ ಹೊಸ ಜಾಲ ಘಟಕವೆಂದರೆ ವಿಶೇಷ ಸಂಕ್ಷಿಪ್ತ ಸಂದೇಶ ಸೇವಾ ಕೇಂದ್ರ ಮತ್ತು ಹೆಚ್ಚುವರಿ ಪ್ರಸರಣ ಸಾಮರ್ಥ್ಯ ಹಾಗೂ ರವಾನೆ ಜಾಲ ವ್ಯವಸ್ಥೆ. ಹೆಚ್ಚುವ SMS ದಟ್ಟಣೆಯೊಂದಿಗೆ ಸಾಮರ್ಥ್ಯ ವೃದ್ಧಿಯಾಗಬೇಕಾದಂತಹಾ ಅಗತ್ಯ ಇದ್ದೇ ಇತ್ತು. ಸ್ಥಾಪನೆಯಾದ ಪ್ರತಿ ಸಂಚಾರಿ ದೂರವಾಣಿ ಕೇಂದ್ರದಲ್ಲಿ ಮತ್ತು ಪ್ರತಿ ದೂರವಾಣಿ ಜಾಲಗಳಲ್ಲಿ SMSನ ಅಳವಡಿಕೆಯ ಈ ಕಲ್ಪನೆಯು ಮುಂಚಿನಿಂದಲೇ ಕಾರ್ಯಸಾಧುವಾಗಿತ್ತು. ಆದ್ದರಿಂದಲೇ ಬಳಕೆದಾರರು SMSನ ಪ್ರಯೋಜನ ಪಡೆದುಕೊಳ್ಳಲು ಆರಂಭಿಸುವ ಹೊತ್ತಿಗೆ ಸಾಕಷ್ಟು ದೊಡ್ಡ SMS ಸಮರ್ಥ ಕೇಂದ್ರಗಳು ಮತ್ತು ಜಾಲಗಳ ಅಡಿಪಾಯ ಸಿದ್ಧವಾಗಿತ್ತು.[]

ಮುಂಚಿನ ಬೆಳವಣಿಗೆ

ಬದಲಾಯಿಸಿ

ಯಾವುದೇ ವ್ಯಕ್ತಿ ಅಥವಾ ಕಂಪೆನಿಯು SMSನ ‘ಪಿತಾಮಹ’ ಅಥವಾ ‘ನಿರ್ಮಾಪಕ/ರಚನಾಕಾರ’ ಎಂದು ಹೇಳಿಕೊಳ್ಳಲು ಸಾಧ್ಯವಿಲ್ಲ. ಒಟ್ಟಾರೆಯಾಗಿ GSM ಯೋಜನೆಯು ಅಂತರರಾಷ್ಟ್ರೀಯ ಸಹಭಾಗಿತ್ವದ್ದಾಗಿತ್ತು. ಹಾಗಾಗಿ SMS ರೂಪಿಸುವಿಕೆಯ ಗೌರವವು/ಜವಾಬ್ದಾರಿಯು ಯಾವುದೇ ಏಕೈಕ ವ್ಯಕ್ತಿಗೆ ಸಲ್ಲದೇ, ಈ ವ್ಯವಸ್ಥೆಯನ್ನು ರೂಪಿಸಿದ ಉತ್ತಮವಾಗಿ ಸಂಘಟಿತರಾಗಿದ್ದ ವ್ಯಕ್ತಿಗಳ ಜಾಲಕ್ಕೆ ಸಲ್ಲುತ್ತದೆ. ಅವರು ಇದನ್ನು ಮಾನಕ ವ್ಯವಸ್ಥೆಗಳ ಚೌಕಟ್ಟಿನ ಬೆಂಬಲದೊಂದಿಗೆ ರೂಪಿಸಿ, ಇದೇ ಸಂಸ್ಥೆಗಳ ಮೂಲಕ ಈ ತಂತ್ರಜ್ಞಾನವನ್ನು ಉಚಿತವಾಗಿ ಇಡೀ ವಿಶ್ವಕ್ಕೆ ಲಭ್ಯವಾಗುವಂತೆ ಮಾಡಿದರು. ಇದನ್ನು ಮುಂದಿನ ವಿಭಾಗಗಳಲ್ಲಿ ಸಾಕ್ಷಾಧಾರಸಮೇತವಾಗಿ ವಿವರಿಸಲಾಗಿದೆ.[] GSM ತಂಡದಲ್ಲಿ SMSನ ವಿಕಾಸಕ್ಕೆ ಕಾರಣವಾದ SMS ಪ್ರಸ್ತಾಪವು ಫೆಬ್ರವರಿ 1985ರಲ್ಲಿ ಓಸ್ಲೋ[]ದಲ್ಲಿ ನಡೆದ GSM ಸಭೆಯಲ್ಲಿ ಜರ್ಮನಿ ಮತ್ತು ಫ್ರಾನ್ಸ್‌ಗಳ ಕೊಡುಗೆಯಿಂದಾಗಿ ಸಾಧ್ಯವಾಯಿತು. GSM ಉಪತಂಡ WP1 ಸೇವೆಗಳಲ್ಲಿ (ಫ್ರಾನ್ಸ್‌ ಟೆಲಿಕಾಂನ ಅಧ್ಯಕ್ಷ ಮಾರ್ಟಿನ್‌ ಅಲ್ವರ್ನೆ) ಜರ್ಮನಿಯ ಸಹಕಾರದ ಮೇಲೆ ಆಧಾರಿತವಾಗಿ ಈ ಪ್ರಸ್ತಾಪವನ್ನು ಮತ್ತಷ್ಟು ವಿಷದೀಕರಿಸಲಾಗಿದೆ. ಜ್ಯಾನ್‌ ಆಡೆಸ್ಟಡ್‌ (ಟೆಲಿನಾರ್‌/ಟೆಲಿನರ್‌)ನವರ ಅಧ್ಯಕ್ಷತೆಯ WP3 ಜಾಲ ದೃಷ್ಟಿಕೋನಗಳು ಎಂಬ ಉಪತಂಡದಲ್ಲಿ ಪ್ರಾರಂಭಿಕ ಚರ್ಚೆಗಳು ಸಹಾ ನಡೆದವು. ಪ್ರಧಾನ GSM ತಂಡವು ಜೂನ್‌ 85ರಲ್ಲಿ ಉದ್ಯಮಕ್ಕೆ ವಿತರಿಸಿದ ದಾಖಲೆಯಲ್ಲಿ ಇದರ ಫಲಿತಾಂಶವನ್ನು ಅನುಮೋದಿಸಿತ್ತು.[] SMSಗೆ ಸಂಬಂಧಿಸಿದ ಆದಾನ ದಾಖಲೆಗಳನ್ನು ಫ್ರೀಡ್‌ಹೆಲ್ಮ್‌ ಹಿಲ್ಲೆಬ್ರಾಂಡ್‌ರವರು (ಡಚ್‌/ ಡ್ಯೂಟ್ಸಚೆ ಟೆಲಿಕಾಂ) ಬರ್ನಾರ್ಡ್‌ ಘಿಲ್ಲೆಬರ್ಟ್‌ರ‌(ಫ್ರಾನ್ಸ್‌ ಟೆಲಿಕಾಂ) ಸಹಯೋಗದೊಂದಿಗೆ ರಚಿಸಿದರು. ಪ್ರಧಾನ GSM ತಂಡವು SMSಅನ್ನು ನವೀನ ಸಾಂಖ್ಯಿಕ ಸಂಚಾರಿ ದೂರವಾಣಿ ವ್ಯವಸ್ಥೆಯ ಸಂಭಾವ್ಯ ಸೇವೆಯನ್ನಾಗಿ ಪರಿಗಣಿಸಿತ್ತು. "GSM ವ್ಯವಸ್ಥೆಯಲ್ಲಿ ನೀಡಬೇಕಾದ ಸೇವೆಗಳು ಮತ್ತು ಸೌಲಭ್ಯಗಳು ",[] ಎಂಬ GSM ದಾಖಲೆಯಲ್ಲಿ ಸಂಚಾರಿ ದೂರವಾಣಿಯಿಂದ ಕಳಿಸಿದ ಹಾಗೂ ಅದರಿಂದಲೇ ಪಡೆದ ಸಂಕ್ಷಿಪ್ತ ಸಂದೇಶಗಳೆರಡೂ GSM ದೂರವಾಣಿಸೇವೆಗಳ ಪಟ್ಟಿಯಲ್ಲಿವೆ. GSM ಸೇವೆಗಳ ಬಗೆಗಿನ ಚರ್ಚೆಯನ್ನು GSM 02.03 "GSM PLMNನಿಂದ ಬೆಂಬಲಿತ ದೂರವಾಣಿ ಸೇವೆಗಳು "[] ಎಂಬ ಶಿಫಾರಸು ದಾಖಲೆಯಲ್ಲಿ ಅಂತಿಮಗೊಳಿಸಲಾಯಿತು. ಮೂರೂ ಸೇವೆಗಳ ಮೂಲ ವಿವರಣೆಯನ್ನು ಇಲ್ಲಿ ನೀಡಲಾಗಿದೆ:

  1. ಸಂಚಾರಿ ದೂರವಾಣಿಯಲ್ಲಿ ಅಂತ್ಯಗೊಳ್ಳುವ ಸಂಕ್ಷಿಪ್ತ ಸಂದೇಶ (SMS-MT)/ ಮೂಲದಿಂದ ಅಂತ್ಯದವರೆಗೆ: ಇದು ಸಂಕ್ಷಿಪ್ತ ಸಂದೇಶವನ್ನು ಸಂಚಾರಿ ದೂರವಾಣಿಗೆ ಕಳಿಸಬಲ್ಲ ಜಾಲದ ಸಾಮರ್ಥ್ಯ. ಸಂದೇಶವನ್ನು ದೂರವಾಣಿಯಿಂದಾಗಲೀ ಇಲ್ಲವೇ ತಂತ್ರಾಂಶ ಅನ್ವಯದಿಂದಾಗಲೀ ಕಳಿಸಬಹುದಾಗಿರುತ್ತದೆ.
  2. ಸಂಚಾರಿ ದೂರವಾಣಿ ಉಪಕ್ರಮಿತ ಸಂಕ್ಷಿಪ್ತ ಸಂದೇಶ (SMS-MO)/ ಮೂಲದಿಂದ ಅಂತ್ಯದವರೆಗೆ: ಇದು ಸಂಚಾರಿ ದೂರವಾಣಿಯಿಂದ ಕಳಿಸಲ್ಪಟ್ಟ ಸಂಕ್ಷಿಪ್ತ ಸಂದೇಶವನ್ನು ಜಾಲದ ಮೂಲಕ ಪ್ರಸರಿಸಬಲ್ಲ ಸಾಮರ್ಥ್ಯವಾಗಿರುತ್ತದೆ. ಸಂದೇಶವನ್ನು ದೂರವಾಣಿಗಾಗಲೀ ಇಲ್ಲವೇ ತಂತ್ರಾಂಶ ಅನ್ವಯಕ್ಕಾಗಲೀ ಕಳಿಸಬಹುದಾಗಿರುತ್ತದೆ.
  3. ಸಂಕ್ಷಿಪ್ತ ಸಂದೇಶ ಸಂಚಾರಿ ದೂರವಾಣಿ ಪ್ರಸರಣ.

GSM ಮತ್ತು ಅದರ ಉಪತಂಡ WP1ಗಳಲ್ಲಿ ವಿವರಿಸಲಾಗಿದ್ದ ಮಾಹಿತಿಗಳನ್ನು 1987ರ ವಸಂತಕಾಲದ ಮೇ 1987ರಲ್ಲಿ ಪ್ರಾರಂಭವಾದ ಫ್ರೀಡ್‌ಹೆಲ್ಮ್‌ ಹಿಲ್ಲೆಬ್ರಾಂಡ್‌ರ (ಜರ್ಮನ್‌ ಟೆಲಿಕಾಂ) ಅಧ್ಯಕ್ಷತೆಯ IDEG (ಇಂಪ್ಲಿಮೆಂಟೇಷನ್‌ ಆಫ್‌ ಡಾಟಾ ಅಂಡ್‌ ಟೆಲಿಮ್ಯಾಟಿಕ್‌ ಸರ್ವಿಸಸ್‌ ಎಕ್ಸ್‌ಪರ್ಟ್ಸ್‌ ಗ್ರೂಪ್‌) ಎಂಬ ಹೊಸ GSM ಮಂಡಳಿಗೆ ಹಸ್ತಾಂತರಿಸಲಾಯಿತು. ಇಂದಿನ ತಾಂತ್ರಿಕ ಮಾನಕಗಳು ಬಹಳಷ್ಟು ಮಟ್ಟಿಗೆ GSM 03.40 (ಮೂಲದಿಂದ ಅಂತ್ಯದವರೆಗಿನ ಎರಡೂ ಸೇವೆಗಳನ್ನು ಒಗ್ಗೂಡಿಸಿ ರಚಿಸಿದ) ಮತ್ತು GSM 03.41 (ಸಂಚಾರಿ ದೂರವಾಣಿ ಪ್ರಸರಣ) ಎಂಬ ಎರಡು ಶಿಫಾರಸುಗಳಾಗಿ IDEGಯಿಂದ (ನಂತರದ WP4) ಪ್ರಸ್ತಾಪವಾಗಿದ್ದವು. SMSನ ಶಿಷ್ಟತೆಗಳ ಜವಾಬ್ದಾರಿಯನ್ನು ಹೊತ್ತ ಡ್ರಾಫ್ಟಿಂಗ್‌ ಗ್ರೂಪ್‌ ಮೆಸೇಜ್‌ ಹ್ಯಾಂಡಲಿಂಗ್‌(DGMH) ಎಂಬ ಸಂಸ್ಥೆಯನ್ನು WP4 ರಚಿಸಿತು. ಫಿನ್‌ ಟ್ರಾಸ್ಬಿ (ಟೆಲಿನಾರ್‌/ಟೆಲಿನರ್‌) ಅದರ ಅಧ್ಯಕ್ಷರಾಗಿದ್ದರು. DGMH 5ರಿಂದ 8 ಮಂದಿ ಸಹಯೋಗಿಗಳನ್ನು ಹೊಂದಿತ್ತು (Vodafoneನ ಅಲನ್‌ ಕಾಕ್ಸ್‌‌ರನ್ನು ಕೊಡುಗೆದಾರರೆಂದು ಫಿನ್‌ ಟ್ರಾಸ್ಬಿ ತಿಳಿಸಿರುತ್ತಾರೆ). ಮೊದಲ ಕ್ರಿಯಾ ಯೋಜನೆ[೧೦]ಯಲ್ಲಿ ಪ್ರಥಮ ಬಾರಿಗೆ ತಾಂತ್ರಿಕ ಶಿಷ್ಟತೆ 03.40 “ಸಂಕ್ಷಿಪ್ತ ಸಂದೇಶ ಸೇವೆಗಳ ತಾಂತ್ರಿಕ ಸಫಲತೆ”ಯನ್ನು ಪ್ರಸ್ತಾಪಿಸಲಾಯಿತು. ಫಿನ್‌ ಟ್ರಾಸ್ಬಿ ಇದರ ಸಂಪಾದನೆಯ ಹೊಣೆ ಹೊತ್ತಿದ್ದರು. 1987ರ[೧೧] ನವೆಂಬರ್‌ನಲ್ಲಿ ತಾಂತ್ರಿಕ ಶಿಷ್ಟತೆಗಳ ಪ್ರಥಮ ಕರಡು ತಯಾರಾಯಿತು. ಇದರ ಬಗೆಗಿನ ವ್ಯಾಪಕ ವಿವರಣೆ ಇಲ್ಲಿದೆ.[೧೨] ಸೆಲ್‌ನೆಟ್‌ನ(ಈಗಿನ O2) ಕೆವಿನ್‌ ಹೊಲ್ಲೆಯವರ ನೇತೃತ್ವದಲ್ಲಿ ಮುಂದಿನ ಕೆಲ ವರ್ಷಗಳಲ್ಲೂ ಕರಡು ಶಿಷ್ಟತೆಗಳ ಮೇಲಿನ ಚಟುವಟಿಕೆ ಮುಂದುವರೆಯಿತು. GSM 03.40 ಪ್ರಧಾನ ಶಿಷ್ಟತೆಯ ಪೂರೈಸುವಿಕೆಯೊಂದಿಗೆ ವ್ಯವಸ್ಥಾ ಅಂತರ್ವರ್ತನಗಳ ಬಗೆಗಿನ ವಿವರಣಾತ್ಮಕ ಪ್ರೋಟೋಕಾಲ್‌ ಶಿಷ್ಟತೆಗಳ ರಚನೆಯೂ ಸಹಾ ಸಂಪನ್ನಗೊಳಿಸಬೇಕಾಗಿತ್ತು.

ಇತರೆ ವಾಸ್ತುಶೈಲಿಗಳಲ್ಲಿನ ಬೆಂಬಲ

ಬದಲಾಯಿಸಿ

SS7 ಪ್ರೋಟೋಕಾಲ್‌ನ ಮೊಬೈಲ್‌ ಅಪ್ಲಿಕೇಷನ್‌ ಪಾರ್ಟ್‌ (MAP) ತನ್ನ ಉಪಕ್ರಮದಿಂದಲೂ ಸಹಾ ಸಂಪೂರ್ಣ ಜಾಲಗಳ ಮೂಲಕ ಸಂಕ್ಷಿಪ್ತ ಸಂದೇಶಗಳ ರವಾನೆಯ ಸಾಮರ್ಥ್ಯವನ್ನು ಹೊಂದಿತ್ತು.[೧೩] ಸಂಚಾರಿ ದೂರವಾಣಿಯಲ್ಲಿ ಅಂತ್ಯಗೊಳ್ಳುವ ಸಂಕ್ಷಿಪ್ತ ಸಂದೇಶ ರವಾನೆಗೆ ಪ್ರತ್ಯೇಕ ಕ್ರಿಯಾ ಸಂಕೇತವನ್ನು ಪರಿಚಯಿಸುವ ಮೂಲಕ MAPನ 2ನೇ ಹಂತವು SMSಗೆ ವಿಸ್ತರಿತ ಬೆಂಬಲವನ್ನು ನೀಡಿತು.[೧೪] MAP 2ನೇ ಹಂತದ ನಂತರ, ಸಂಕ್ಷಿಪ್ತ ಸಂದೇಶ ಕ್ರಿಯಾ ಪ್ಯಾಕೇಜ್‌ಗಳಲ್ಲಿ ಯಾವುದೇ ಬದಲಾವಣೆ ಇಲ್ಲದೇ ಹೋದರೂ, CAMEL SMS ನಿಯಂತ್ರಣವನ್ನು ಬೆಂಬಲಿಸುವ ಮಟ್ಟಿಗೆ ಇತರೆ ಕ್ರಿಯಾ ಪ್ಯಾಕೇಜ್‌ಗಳನ್ನು ಉನ್ನತೀಕರಿಸಲಾಗಿದೆ. 3GPPಯ 99 ಮತ್ತು 4 ನಂತರದ ಆವೃತ್ತಿಗಳಲ್ಲಿ, CAMEL 3ನೇ ಹಂತವು ಇಂಟೆಲಿಜೆಂಟ್‌ ನೆಟ್‌‌ವರ್ಕ್‌ಗೆ‌ (IN) ಸಂಚಾರಿ ದೂರವಾಣಿ ಉಪಕ್ರಮಿತ ಸಂಕ್ಷಿಪ್ತ ಸಂದೇಶ ಸೇವೆಗಳ ಸ್ಥಿತಿಯನ್ನು ನಿಯಂತ್ರಿಸಬಲ್ಲ ಸಾಮರ್ಥ್ಯವನ್ನು ನೀಡಿದರೆ,[೧೫] CAMEL 4ನೇ ಹಂತವು, 3GPPಯ 5 ಮತ್ತು ನಂತರದ ಆವೃತ್ತಿಗಳ ಭಾಗವಾಗಿ ಸಂಚಾರಿ ದೂರವಾಣಿಯಲ್ಲಿ ಅಂತ್ಯಗೊಳ್ಳುವ ಸೇವೆಗಳನ್ನು ನಿಯಂತ್ರಿಸುವ ಸಾಮರ್ಥ್ಯವನ್ನು INಗೆ ನೀಡಿತು.[೧೬] CAMEL ಸಂಕ್ಷಿಪ್ತ ಸಂದೇಶಗಳ ಸಲ್ಲಿಕೆ (MO) ಅಥವಾ ಬಟವಾಡೆ (MT)ಗಳನ್ನು ತಡೆಹಿಡಿಯುವಿಕೆ, ಬಳಕೆದಾರರಿಂದ ಸೂಚಿತವಲ್ಲದ ಬೇರೆ ಗಮ್ಯಗಳಿಗೆ ಸಾಗಿಸುವಿಕೆ ಮತ್ತು ಸೇವೆಯ ಬಳಕೆಗೆ ರಿಯಲ್‌ ಟೈಂ ದರವಿಧಿಸುವಿಕೆ ಮುಂತಾದ ಕಾರ್ಯಗಳನ್ನು ಮಾಡಲು gsmSCPಗೆ ಸಾಧ್ಯವಾಗಿಸುತ್ತದೆ. ಸಂಕ್ಷಿಪ್ತ ಸಂದೇಶ ಸೇವೆಗಳ ಮಾನಕೀಕೃತ CAMEL ನಿಯಂತ್ರಣಕ್ಕೆ ಮುನ್ನಾ, IN ನಿಯಂತ್ರಣವು SS7ನ ಇಂಟೆಲಿಜೆಂಟ್‌ ನೆಟ್‌ವರ್ಕ್‌ ಅಪ್ಲಿಕೇಷನ್‌ ಪಾರ್ಟ್‌ (INAP)ಗಳಿಗೆ ನೀಡಲಾಗುವ ಸ್ವಿಚ್‌ ಮಾರಾಟಗಾರ ಸೂಚಿತ ವಿಸ್ತರಣಗಳ ಮೇಲೆ ಆಧಾರಿತವಾಗಿತ್ತು.

ಮುಂಚಿನ ಅಳವಡಿಕೆಗಳು

ಬದಲಾಯಿಸಿ

ಯುನೈಟೆಡ್‌ ಕಿಂಗ್‌ಡಂನಲ್ಲಿ 3 ಡಿಸೆಂಬರ್ Vodafone1992ಸೆಮಾ ಗ್ರೂಪ್‌ಏರ್‌ವೈಡ್‌ ಸೊಲ್ಯೂಷನ್ಸ್‌Vodafoneನ ರಿಚರ್ಡ್‌ ಜಾರ್ವಿಸ್‌ರ ಆರ್ಬಿಟೆಲ್‌ 901 ಸಂಚಾರಿ ದೂರವಾಣಿಗೆ Vodafone GSM ಜಾಲದ ಮೂಲಕ ಪ್ರಥಮ SMS ಸಂದೇಶವನ್ನು[೧೭] ಕಳುಹಿಸಿದರು. ಸಂದೇಶದ ಪಠ್ಯವು "ಮೆರ್ರಿ ಕ್ರಿಸ್‌ಮಸ್‌/ಕ್ರಿಸ್‌ಮಸ್‌ ಶುಭಾಶಯಗಳು" ಎಂದಿತ್ತು.[೧೮] 1993ರಲ್ಲಿ Nokia ಸಂಸ್ಥೆಯಲ್ಲಿ ಅಭಿಯಂತರ ವಿದ್ಯಾರ್ಥಿಯಾಗಿದ್ದ ರಿಕು ಪಿಹ್ಕೋನೆನ್‌ ಎಂಬಾತ ಮೊತ್ತ ಮೊದಲಿಗೆ GSM ದೂರವಾಣಿಯಲ್ಲಿ ಬೆರಳಚ್ಛಿಸಿದ ಪ್ರಥಮ ಸಂದೇಶವನ್ನು ಕಳುಹಿಸಿದ್ದರು ಎನ್ನಲಾಗಿದೆ.[೧೯]ಸಂಕ್ಷಿಪ್ತ ಸಂದೇಶ ಸೇವಾಕೇಂದ್ರದ (SMSC) ಪ್ರಥಮ ವಾಣಿಜ್ಯ ಕಾರ್ಯಾಚರಣೆಯನ್ನು ಸ್ವೀಡನ್‌ನ TeliaSoneraನೊಂದಿಗೆ ಆಲ್‌ಡಿಸ್ಕನ್‌ (ಈಗಿನ ಅಸಿಷನ್‌) 1993ರಲ್ಲಿ ಆರಂಭಿಸಿತು.[೨೦] ನಂತರ USನಲ್ಲಿ ಫ್ಲೀಟ್‌ ಕಾಲ್‌ (ಈಗಿನ ನೆಕ್ಸ್‌‌ಟೆಲ್‌)[ಸಾಕ್ಷ್ಯಾಧಾರ ಬೇಕಾಗಿದೆ], ನಾರ್ವೆಯಲ್ಲಿ ಟೆಲಿನಾರ್‌/ಟೆಲಿನರ್‌[ಸಾಕ್ಷ್ಯಾಧಾರ ಬೇಕಾಗಿದೆ] ಮತ್ತು BT ಸೆಲ್‌ನೆಟ್‌ಗಳು (ಈಗಿನ O2 UK)[ಸಾಕ್ಷ್ಯಾಧಾರ ಬೇಕಾಗಿದೆ] 1993ರ ನಂತರದ ಕಾಲಭಾಗದಲ್ಲಿ ಆರಂಭಿಸಿದವು. 1995ರಲ್ಲಿ ಪ್ರತಿ GSM ಗ್ರಾಹಕನಿಗೆ ಪ್ರತಿ ತಿಂಗಳಿಗೆ[೨೧] ಕೇವಲ 0.4 ಸಂದೇಶಗಳ ಸರಾಸರಿಯಲ್ಲಿ ವ್ಯವಹಾರದ ಪ್ರಾಥಮಿಕ ಬೆಳವಣಿಗೆಯು ನಿಧಾನವಾಗಿತ್ತು. SMSನ ನಿಧಾನ ಬಳಕೆಗೆ ಸೇವಾಕರ್ತೃಗಳು ದರವಿಧಿಸುವಿಕೆಯ ವ್ಯವಸ್ಥೆಯನ್ನು ಅಳವಡಿಸುವುದರಲ್ಲಿ ತೋರಿದ ನಿಧಾನಗತಿ, ಅದರಲ್ಲೂ ಪೂರ್ವಪಾವತಿ ಗ್ರಾಹಕರಿಗೆ ಅಳವಡಿಸುವುದರಲ್ಲಿ ತೋರಿದ ನಿಧಾನಗತಿ ಹಾಗೂ ಹ್ಯಾಂಡ್‌ಸೆಟ್‌ಗಳಲ್ಲಿನ SMSC ಸಜ್ಜಿಕೆಗಳನ್ನು ಬದಲಿಸಿ ಇತರೆ ಸೇವಾಕರ್ತೃಗಳ SMSCಗಳಿಗೆ ಬದಲಿಸುವುದು ಸಾಧ್ಯವಿದ್ದುದರಿಂದ ಆಗುತ್ತಿದ್ದ ದರವಿಧಿಸುವಿಕೆ/ಬಿಲ್ಲಿಂಗ್‌ ವಂಚನೆಯನ್ನು ತಡೆಗಟ್ಟುವಲ್ಲಿ ಆದ ವಿಳಂಬ ಒಂದು ಕಾರಣ. ಕಾಲಾಂತರದಲ್ಲಿ SMSCಯಲ್ಲಿ ದರವಿಧಿಸುವಿಕೆಗೆ ಬದಲು ಸ್ವಿಚ್‌-ಬಿಲ್ಲಿಂಗ್‌ ಮೂಲಕ ಹಾಗೂ SMSCಗಳಲ್ಲೇ ಇತರೆ ಸಂಚಾರಿ ದೂರವಾಣಿ ಗ್ರಾಹಕರಿಗೆ ತಮ್ಮ ಮೂಲಕ ಸಂದೇಶ ಕಳುಹಿಸದಿರುವಂತೆ ತಡೆಗಟ್ಟುವ ಹೊಸ ಸೌಲಭ್ಯಗಳನ್ನು ನೀಡಿ ಈ ಸಮಸ್ಯೆಯನ್ನು ನೀಗಿಸಲಾಯಿತು. 2000ನೇ ಇಸವಿಯ ಕೊನೆಯ ಹೊತ್ತಿಗೆ, ಪ್ರತಿ ತಿಂಗಳ ಪ್ರತಿ ಗ್ರಾಹಕರ ಸಂದೇಶಗಳ ಸರಾಸರಿ ಬಳಕೆಯು 35ಕ್ಕೆ ಮುಟ್ಟಿದರೆ,[೨೧] 2006ರ ಕ್ರಿಸ್‌ಮಸ್‌ ದಿನದಂದು ಕೇವಲ UKಯಲ್ಲಿಯೇ 205m ಸಂದೇಶಗಳನ್ನು ಕಳಿಸುವ ಮಟ್ಟಿಗೆ ಪರಿಸ್ಥಿತಿ ಬದಲಾಯಿತು.[೨೨] ರಜಾ ದಿನಗಳನ್ನು ಹೊರಗಡೆ ಕಳೆದ ಸಮಯದಲ್ಲಿ ಕರೆಗಳನ್ನು ಮಾಡುವ ಬದಲಿಗೆ ಸಂದೇಶಗಳನ್ನು ಕಳಿಸುವ ಮಟ್ಟಿಗೆ ಮುಂಚಿನ ದಿನಗಳಲ್ಲಿ ರೋಮಿಂಗ್‌ನಲ್ಲಿರುವ ಗ್ರಾಹಕರಿಗೆ ತಾವು ಕಳಿಸಿದ SMSಗಳಿಗೆ ಕೆಲವೊಮ್ಮೆ ಮಾತ್ರವೇ ದರ ವಿಧಿಸಲಾಗುತ್ತಿತ್ತು ಎಂದೂ ಸಹಾ ಹೇಳಲಾಗುತ್ತಿತ್ತು[ಸಾಕ್ಷ್ಯಾಧಾರ ಬೇಕಾಗಿದೆ].

GSMನ ಹೊರಗೆ ಪಠ್ಯ ಸಂದೇಶ ಕಳುಹಿಸುವಿಕೆ

ಬದಲಾಯಿಸಿ

SMSಅನ್ನು ಮೂಲದಲ್ಲಿ GSMನ ಭಾಗವಾಗಿ ವಿನ್ಯಾಸಗೊಳಿಸಲಾಗಿತ್ತಾದರೂ, ಅದು ಈಗ 3G ಜಾಲಗಳೂ ಸೇರಿದಂತೆ ಬಹುತೇಕ ಜಾಲಗಳಿಗೆ ತನ್ನ ವ್ಯಾಪ್ತಿ ವಿಸ್ತರಿಸಿಕೊಂಡಿದೆ. ಆದಾಗ್ಯೂ ಎಲ್ಲಾ ಸಂದೇಶ ವ್ಯವಸ್ಥೆಗಳೂ SMSಅನ್ನೇ ಬಳಸುತ್ತವೆ ಎಂದೇನಿಲ್ಲ, ಜಪಾನ್‌ನ ಎರಡು ವ್ಯವಸ್ಥೆಗಳಾದ J-Phone‌SkyMail ಮತ್ತು NTT ಡೊಕೊಮೊShort Mail ನಂತೆ ಗಮನಾರ್ಹ ಬದಲಿ ವ್ಯವಸ್ಥೆಗಳೂ ಇವೆ. ದೂರವಾಣಿಗಳಿಂದ ವಿ-ಅಂಚೆ/ಮಿಂಚಂಚೆಗಳನ್ನು ಕಳುಹಿಸುವುದನ್ನು ಜನಪ್ರಿಯಗೊಳಿಸಿದ NTT ಡೊಕೊಮೊನ ಐ-ಮೋಡ್‌ ಮತ್ತು RIM BlackBerryಗಳೂ ಸಹಾ TCP/IPಯ ಮೇಲೆ SMTPನಂತಹಾ ಮಾನಕ ಅಂಚೆ ಪ್ರೋಟೋಕಾಲ್‌ಗಳನ್ನು ಸಾಮಾನ್ಯವಾಗಿ ಬಳಸುತ್ತವೆ.

ವಾಣಿಜ್ಯಿಕವಾಗಿ SMS 2006ರಲ್ಲಿ ವಿಶ್ವಾದ್ಯಂತ 81 ಶತಕೋಟಿ ಡಾಲರ್‌ಗಳಿಗೂ ಮೀರಿದ ಮೌಲ್ಯವುಳ್ಳ ಉದ್ಯಮವಾಗಿದೆ.[೨೩] ಪೂರೈಕೆದಾರರಿಗೆ ಬಹುತೇಕ ವೆಚ್ಚರಹಿತವೆನಿಸಿದ್ದರೂ 0.11 USDಗಳಷ್ಟು ಸರಾಸರಿ ಜಾಗತಿಕ ಬೆಲೆಯನ್ನು SMS ಹೊಂದಿದೆ. ಸಂಚಾರಿ ದೂರವಾಣಿ ಜಾಲಗಳು ಅಂತರ್‌ಸಂಪರ್ಕ ಶುಲ್ಕವೆನಿಸಿಕೊಳ್ಳುವ ಕನಿಷ್ಟ £0.03ರಷ್ಟು ಮೊತ್ತವನ್ನು ವಿವಿಧ ದೂರವಾಣಿ ಜಾಲಗಳನ್ನು ಸಂಪರ್ಕಿಸುವಾಗ ಪರಸ್ಪರರಿಗೆ ವಿಧಿಸುತ್ತವೆ[೨೪]

ತಾಂತ್ರಿಕ ವಿವರಗಳು

ಬದಲಾಯಿಸಿ

GSM (ಸಂಚಾರಿ-ದೂರವಾಣಿ ಸಂಪರ್ಕಕ್ಕಾಗಿ ಜಾಗತಿಕ ವ್ಯವಸ್ಥೆ)

ಬದಲಾಯಿಸಿ

ಸಂಕ್ಷಿಪ್ತ ಸಂದೇಶ ಸೇವೆ- ಮೂಲದಿಂದ ಅಂತ್ಯದವರೆಗೆ (SMS-PP) ಯನ್ನು GSM 03.40 ಶಿಫಾರಸಿನಲ್ಲಿ ವಿಷದೀಕರಿಸಲಾಗಿದೆ.[] ಸಂದೇಶಗಳನ್ನು (ಜಾಹಿರಾತುಗಳು, ಸಾರ್ವಜನಿಕ ಮಾಹಿತಿ ಇತ್ಯಾದಿ.) ನಿಗದಿತ ಭೂಪ್ರದೇಶದ ಎಲ್ಲಾ ಸಂಚಾರಿ ದೂರವಾಣಿ ಬಳಕೆದಾರರಿಗೆ ಕಳುಹಿಸುವುದನ್ನು ಸಾಧ್ಯವಾಗಿಸುವ ಸಂಕ್ಷಿಪ್ತ ಸಂದೇಶ ಸೇವೆ- ಸಂಚಾರಿ ದೂರವಾಣಿ ಪ್ರಸರಣ (SMS-CB) ವನ್ನು GSM 03.41 ವಿಷದೀಕರಿಸುತ್ತದೆ.[೨೫] ಸಂದೇಶಗಳನ್ನು ಸಂಗ್ರಹಣೆ ಮತ್ತು ರವಾನೆ ಸೌಲಭ್ಯ ಒದಗಿಸಬಲ್ಲ ಸಂಕ್ಷಿಪ್ತ ಸಂದೇಶ ಸೇವಾಕೇಂದ್ರ(SMSC)ಕ್ಕೆ ಕಳಿಸಲಾಗುತ್ತದೆ. ಅದು ವಿಳಾಸದಾರರಿಗೆ ಸಂದೇಶವನ್ನು ಕಳಿಸಲು ಪ್ರಯತ್ನಿಸುತ್ತದೆ. ಗ್ರಾಹಕರು ಅಲಭ್ಯರಿದ್ದರೆ, SMSC ನಂತರದ ಮರುಯತ್ನಕ್ಕೆ ಸರದಿಯಲ್ಲಿಡುತ್ತದೆ.[೨೬] ಕೆಲ SMSCಗಳು ರವಾನೆಯನ್ನು ಒಮ್ಮೆ ಮಾತ್ರ ಪ್ರಯತ್ನಿಸುವ “ರವಾನಿಸಿ ಉಪೇಕ್ಷಿಸು” ಸೌಲಭ್ಯವನ್ನು ಸಹಾ ನೀಡುತ್ತವೆ. ಸಂಚಾರಿ ದೂರವಾಣಿಯಲ್ಲಿ ಅಂತ್ಯಗೊಳ್ಳುವ (MT), ಸಂಚಾರಿ ದೂರವಾಣಿಗೆ ಕಳುಹಿಸುವ ಸಂದೇಶಗಳು ಮತ್ತು ಸಂಚಾರಿ ದೂರವಾಣಿ ಉಪಕ್ರಮಿತ (MO) ಸಂಚಾರಿ ದೂರವಾಣಿಗಳಿಂದ ಕಳುಹಿಸಲ್ಪಡುವ ಎರಡೂ ರೀತಿಯ ಸಂದೇಶಗಳಲ್ಲಿ ಈ ಕಾರ್ಯಗಳಿಗೆ ಬೆಂಬಲವಿರುತ್ತದೆ. ಸಂದೇಶ ರವಾನೆಯು ಉತ್ತಮ ಪ್ರಯತ್ನವಾಗಿರುತ್ತದೆಯೇ ಹೊರತು, ಸಂದೇಶವು ವಿಳಾಸದಾರರಿಗೆ ತಲುಪುವುದರ ಬಗ್ಗೆ ಖಚಿತತೆ ಇರುವುದಿಲ್ಲ ಜೊತೆಗೆ ವಿಶೇಷವಾಗಿ ಪ್ರತ್ಯೇಕ ಜಾಲಗಳ ನಡುವೆ ತಲುಪಿಸುವುದರಲ್ಲಿ ವಿಳಂಬ ಅಥವಾ ಸಂದೇಶಗಳ ನಾಪತ್ತೆ ಮೊದಲಾದವು ಅಪರೂಪವೇನಲ್ಲ. ವಿಳಾಸದಾರರಿಗೆ ಸಂದೇಶ ತಲುಪಿದೆಯೇ ಎಂಬುದರ ಬಗ್ಗೆ ರವಾನೆಯ ವರದಿಯನ್ನು, ಬಹುತೇಕ ಆಧುನಿಕ ಸಂಚಾರಿ ದೂರವಾಣಿಗಳಲ್ಲಿ SMS ಸಜ್ಜಿಕೆಗಳ ಮೂಲಕ ಇಲ್ಲವೇ ಪ್ರತಿ ಸಂದೇಶಕ್ಕೂ ಮುನ್ನ *0# ಅಥವಾ *N# ಸೇರಿಸುವುದರ ಮೂಲಕ ಗ್ರಾಹಕರು ಕೋರಬಹುದು.

ಸಂದೇಶ ಗಾತ್ರ

ಬದಲಾಯಿಸಿ

SMSC ಮತ್ತು ಸಂಚಾರಿ ದೂರವಾಣಿಗಳ ನಡುವೆ SS7 ಪ್ರೋಟೋಕಾಲ್‌ನ ಮೊಬೈಲ್‌ ಅಪ್ಲಿಕೇಷನ್‌ ಪಾರ್ಟ್‌(MAP) ಬಳಕೆಯಾದಾಗಲೆಲ್ಲ ಸಂಕ್ಷಿಪ್ತ ಸಂದೇಶಗಳ ಸಂವಹನ ನಡೆಯುತ್ತದೆ. ಸಂಜ್ಞಾಕಾರಕ ಪ್ರೋಟೋಕಾಲ್‌ಗಳ ಇತಿಮಿತಿಗಳ ಮೇಲೆ ಅವಲಂಬಿತವಾಗಿ ಖಚಿತವಾಗಿ 140 ಆಕ್ಟೆಟ್‌ಗಳಷ್ಟು (140 ಆಕ್ಟೆಟ್‌ಗಳು = 140 * 8 ಬಿಟ್‌ಗಳು = 1120 ಬಿಟ್‌ಗಳು) ಮಾತ್ರವೇ ಪೇಲೋಡ್‌ ವ್ಯಾಪ್ತಿಯ MAP mo- ಮತ್ತು mt-ForwardSM ಕಾರ್ಯಾಚರಣೆಗಳ ಮೂಲಕ ಸಂದೇಶಗಳನ್ನು ಕಳಿಸಲಾಗುತ್ತದೆ. ಸಂಕ್ಷಿಪ್ತ ಸಂದೇಶಗಳನ್ನು ಸಹಜ ಆಯ್ಕೆಯಾದ GSM 7-ಬಿಟ್‌ ಲಿಪಿ (ವಿವರಗಳಿಗಾಗಿ GSM 03.38ಅನ್ನು ನೋಡಿ), 8-ಬಿಟ್‌ ದತ್ತ ಲಿಪಿ, ಮತ್ತು 16-ಬಿಟ್‌ UTF-16 ಲಿಪಿಗಳಂತಹಾ ವಿವಿಧ ಲಿಪಿಗಳ ಮೂಲಕ ಸಂಕೇತೀಕರಿಸಬಹುದು.[೨೭] ಸಾಧನವನ್ನು ಗ್ರಾಹಕರು ಯಾವ ಲಿಪಿಗೆ ಹೊಂದಿಸಿದ್ದರೆಂಬುದರ ಮೇಲೆ ಆಧಾರಿತವಾಗಿ ಗರಿಷ್ಟ ಪ್ರತ್ಯೇಕ ಸಂಕ್ಷಿಪ್ತ ಸಂದೇಶ ಗಾತ್ರಗಳಾದ 160 7-ಬಿಟ್‌ ಅಕ್ಷರಗಳು, 140 8-ಬಿಟ್‌ ಅಕ್ಷರಗಳು, ಅಥವಾ 70 16-ಬಿಟ್‌ ಅಕ್ಷರಗಳು (ಖಾಲಿಸ್ಥಳಗಳೂ ಸೇರಿದಂತೆ) ಸಾಧ್ಯವಾಗುತ್ತವೆ. GSM 7-ಬಿಟ್‌ ಲಿಪಿಗೆ ಬೆಂಬಲ ನೀಡುವುದು GSM ಸಾಧನಗಳು ಮತ್ತು ಜಾಲ ಘಟಕಗಳಿಗೆ ಕಡ್ಡಾಯವಾದರೂ,[೨೭] ಅರೇಬಿಕ್‌, ಚೀನೀ, ಕೊರಿಯನ್‌, ಜಪಾನೀ ಅಥವಾ ಸಿರಿಲಿಕ್‌ ಲಿಪಿಗಳ ಭಾಷೆಗಳ (e.g. ರಷ್ಯನ್‌,ಸರ್ಬಿಯನ್‌, ಬಲ್ಗೇರಿಯನ್‌, ಇತ್ಯಾದಿ) ಅಕ್ಷರಗಳನ್ನು 16-ಬಿಟ್‌ UTF-16 ಅಕ್ಷರ ಸಂಕೇತಗಳಿಂದಲೇ ಸಂಕೇತಿಸಬೇಕಾಗುತ್ತದೆ (ಯೂನಿಕೋಡ್‌ ನೋಡಿ). ಮಾರ್ಗನಿರ್ದೇಶನ ದತ್ತ ಮತ್ತಿತರ ಉಪದತ್ತಗಳು ಪೇಲೋಡ್‌ ಗಾತ್ರಕ್ಕೆ ಹೆಚ್ಚುವರಿಯಾಗಿರುತ್ತವೆ. ಹೆಚ್ಚಿನ ಪ್ರಮಾಣದ ವಿಷಯಗಳನ್ನು (ಪೋಣಿಸಿದ/ಜೋಡಿಸಿದ SMS, ಬಹುಭಾಗೀಯ ಅಥವಾ ವಿಭಜಿತ SMS ಅಥವಾ "ದೀರ್ಘ sms") ಅನೇಕ ಸಂದೇಶಗಳಲ್ಲಿ ಕಳುಹಿಸಬಹುದಾಗಿರುತ್ತದೆ, ಹಾಗಿದ್ದಾಗ ಪ್ರತಿ ಸಂದೇಶವು ವಿಭಜನಾ ಮಾಹಿತಿ ಹೊಂದಿರುವ ಯೂಸರ್‌ ಡಾಟಾ ಹೆಡರ್‌ (UDH)ಗಳಿಂದ ಆರಂಭವಾಗುತ್ತವೆ. UDH ಕೂಡಾ ಪೇಲೋಡ್‌ನ ಭಾಗವಾಗುವುದರಿಂದ, ಪ್ರತಿ ಸಂದೇಶಭಾಗದ ಅಕ್ಷರಗಳ ಸಂಖ್ಯೆಯು ಕಡಿಮೆಯೇ ಇರುತ್ತದೆ : 7-ಬಿಟ್‌ ಸಂಕೇತಗಳಿಗೆ 153, 8-ಬಿಟ್‌ ಸಂಕೇತಗಳಿಗೆ 133 ಮತ್ತು 16-ಬಿಟ್‌ ಸಂಕೇತಗಳಿಗೆ 67 ಅಕ್ಷರಗಳ ಹಾಗೆ. ಗ್ರಾಹಕ ದೂರವಾಣಿ ಸಾಧನವು ಸಂದೇಶವನ್ನು ಮರುಹೊಂದಿಸಿ ಒಂದೇ ದೀರ್ಘ ಸಂದೇಶವಾಗಿ ಬಳಕೆದಾರರಿಗೆ ನೀಡುವ ಜವಾಬ್ದಾರಿಯನ್ನು ಹೊಂದಿರುತ್ತದೆ. ಮಾನಕವು ಸೈದ್ಧಾಂತಿಕವಾಗಿ 255 ಭಾಗಗಳನ್ನು ಅನುಮತಿಸಿದರೂ,[೨೮] 6ರಿಂದ 8 ಭಾಗಗಳ ಸಂದೇಶಗಳು ಪ್ರಾಯೋಗಿಕ ಗರಿಷ್ಟ ಮಿತಿ ಎನಿಸಿಕೊಳ್ಳುತ್ತವೆ ಹಾಗೂ ದೀರ್ಘ ಸಂದೇಶಗಳಿಗೆ ಅಗತ್ಯವಾದಷ್ಟು ಸಂಖ್ಯೆಯ SMS ಸಂದೇಶಗಳ ದರವನ್ನು ವಿಧಿಸಲಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಪೋಣಿಸಿದ SMS ನೋಡಿ. ಕೆಲ ಪೂರೈಕೆದಾರರು SMSಗಳಿಗೆ ಗಾತ್ರಾಧರಿತ ದರವಿಧಿಸುವಿಕೆಯ ಯೋಜನೆಗಳನ್ನು ಪ್ರಸ್ತಾಪಿಸಿದ್ದರೂ, ಅದು ಈಗ ಮರೆಯಾಗುತ್ತಿದೆ.

SMS ಗೇಟ್‌ವೇ ಪೂರೈಕೆದಾರರು

ಬದಲಾಯಿಸಿ

SMS ಗೇಟ್‌ವೇ ಪೂರೈಕೆದಾರರು ಉದ್ದಿಮೆಗಳು ಮತ್ತು ಸಂಚಾರಿ ದೂರವಾಣಿ ಗ್ರಾಹಕರ ನಡುವಣ ನಿರ್ಣಾಯಕ ಸಂದೇಶಗಳು, ಉದ್ಯಮಗಳಲ್ಲಿನ SMS, ವಿಷಯ ಬಟವಾಡೆ ಮತ್ತು e.g. TV ಮತದಾನದಂತಹಾ SMSಗಳನ್ನು ಒಳಗೊಂಡಿರುವ ಮನರಂಜನಾ ಸೇವೆಗಳ ಮೇಲೆ ಕೇಂದ್ರೀಕೃತವಾದಂತಹಾ SMS ವ್ಯವಹಾರಗಳನ್ನು ಏರ್ಪಡಿಸುತ್ತಾರೆ. SMS ಸಂದೇಶವಾಹನೆಯ ಸಾಧನೆ ಮತ್ತು ವೆಚ್ಚವನ್ನು ಪರಿಗಣಿಸಿ ಹಾಗೂ ಸಂದೇಶಸೇವೆಗಳ ಮಟ್ಟವನ್ನು ಪರಿಗಣಿಸಿ, SMS ಗೇಟ್‌ವೇ ಪೂರೈಕೆದಾರರನ್ನು ಸಮುದಾಯಪರರು ಅಥವಾ SS7 ಪೂರೈಕೆದಾರರು ಎಂಬುದಾಗಿ ವಿಂಗಡಿಸಬಹುದಾಗಿದೆ. ಸಮುದಾಯ ಮಾದರಿಯು ಸಂಚಾರಿ ದೂರವಾಣಿ ವಾಹಕರೊಡನೆ ಅನೇಕ ಒಡಂಬಡಿಕೆಗಳ ಮೂಲಕ ಸೇವಾಕರ್ತರ SMS ವೇದಿಕೆಯ ಒಳಗೆ ಮತ್ತು ಹೊರಗೆ (ಸಂಕ್ಷಿಪ್ತ ಸಂದೇಶ ಸೇವಾಕೇಂದ್ರ – SMS-C) 2-ದಾರಿ SMS ಸಂವಹನದ ವಿನಿಮಯ ಮಾಡುವಿಕೆಯ ಮೇಲೆ ಆಧಾರಿತವಾಗಿ ಸ್ಥಳೀಯ ಮುಕ್ತಾಯ ಮಾದರಿ ಎಂದೂ ಕರೆಯಲ್ಪಡುತ್ತದೆ. ಸಮುದಾಯಪರರಿಗೆ SMS ಸಂದೇಶಗಳು ವಿನಿಮಯಗೊಳ್ಳುವ ಪ್ರೋಟೋಕಾಲ್‌ ಆದ SS7 ಪ್ರೋಟೋಕಾಲ್‌ಗೆ ನೇರ ಪ್ರವೇಶವಿರುವುದಿಲ್ಲ. SMS ಸಂದೇಶಗಳನ್ನು ಸೇವಾಕರ್ತರ SMS-Cನಲ್ಲಿ ವಿತರಿಸಲಾಗುತ್ತದಲ್ಲದೇ, ಗ್ರಾಹಕರ ಸಾಧನಕ್ಕಲ್ಲ, SMS-C ಕೇಂದ್ರವು SS7 ಜಾಲದ ಮೂಲಕ ಸಂದೇಶದ ಮುಂದಿನ ನಿರ್ವಹಣೆಯನ್ನು ನೋಡಿಕೊಳ್ಳುತ್ತದೆ. ಮತ್ತೊಂದು ವಿಧದ SMS ಗೇಟ್‌ವೇ ಪೂರೈಕೆದಾರರು SMS ಸಂದೇಶಗಳ ಮಾರ್ಗಸೂಚನೆಗೆ ಅಂತರರಾಷ್ಟ್ರೀಯ ಮುಕ್ತಾಯ ಮಾದರಿ ಎಂದೂ ಕರೆಯಲ್ಪಡುವ SS7 ಸಂಪರ್ಕವನ್ನು ಬಳಸುವವರಾಗಿರುತ್ತಾರೆ. ಈ ಮಾದರಿಯ ಅನುಕೂಲವೆಂದರೆ SS7 ಮೂಲಕವೇ ನೇರವಾಗಿ ದತ್ತದ ಮಾರ್ಗ ನಿರ್ದೇಶಿಸಬಹುದಾಗಿದ್ದು, ಇದರಿಂದ ಪೂರೈಕೆದಾರರಿಗೆ SMS ಮಾರ್ಗ ನಿರ್ದೇಶನದಲ್ಲಿ ಸಂಪೂರ್ಣ ಪಥದ ನೋಟವಿದ್ದು ಪೂರ್ಣ ನಿಯಂತ್ರಣ ಹೊಂದಲು ಸಾಧ್ಯವಿರುತ್ತದೆ. SMS ಸಂದೇಶಗಳನ್ನು ಇತರೆ ಸಂಚಾರಿ ದೂರವಾಣಿ ಸೇವಾಕರ್ತರ SMS-ಕೇಂದ್ರಗಳ ಮೂಲಕ ಹೋಗದೇ ಗ್ರಾಹಕರಿಂದ ಹಾಗೂ ಗ್ರಾಹಕರಿಗೆ ನೇರವಾಗಿ ತಲುಪಿಸುವುದು ಸಾಧ್ಯವಿರುತ್ತದೆ. ಆದ್ದರಿಂದ ವಿಳಂಬ ಹಾಗೂ ಸಂದೇಶ ನಾಪತ್ತೆಯಂತಹಾ ಸಂದರ್ಭಗಳನ್ನು ತಪ್ಪಿಸಲು ಸಾಧ್ಯವಾಗುವುದಲ್ಲದೇ ಸಂದೇಶಗಳ ಸಂಪೂರ್ಣ ಬಟವಾಡೆಯನ್ನು ಖಾತ್ರಿಪಡಿಸಲು ಹಾಗೂ ಸಮನ್ವಯಿಕ ಮಾರ್ಗನಿರ್ದೇಶನ ಸಾಧ್ಯವಿರುತ್ತದೆ. ಈ ಮಾದರಿಯು ನಿರ್ಣಾಯಕ ಸಂದೇಶ ವ್ಯವಸ್ಥೆ ಮತ್ತು ಕಾರ್ಪೋರೇಟ್‌/ಔದ್ಯಮಿಕ ಸಂವಹನಗಳಲ್ಲಿ ಬಳಸುವ SMSಗಳಲ್ಲಿ ಸಮರ್ಥತೆ ತೋರುತ್ತದೆ.

ಇತರ ಜಾಲ‌ಗಳೊಂದಿಗೆ ಅಂತರ್‌ಸಂಪರ್ಕ

ಬದಲಾಯಿಸಿ

ಸಂದೇಶ ಸೇವಾಕೇಂದ್ರಗಳು ಸಾರ್ವಜನಿಕ ಸ್ಥಿರ ಸಂಚಾರಿ ಜಾಲ/ಪಬ್ಲಿಕ್‌ ಲ್ಯಾಂಡ್‌ ಮೊಬೈಲ್‌ ನೆಟ್‌ವರ್ಕ್‌(PLMN)ಗಳೊಂದಿಗೆ ಅಥವಾ PSTN ಮತ್ತು ಗೇಟ್‌ವೇ MSCಗಳ ನಡುವಿನ ಅಂತರ್‌ಕಾರ್ಯಾಚರಣೆಯ ಮೂಲಕ ಸಂವಹನ ನಡೆಸುತ್ತವೆ.ಗ್ರಾಹಕ-ಉಪಕ್ರಮಿತ ಸಂದೇಶಗಳನ್ನು ಸಾಧನದಿಂದ ಸೇವಾಕೇಂದ್ರಕ್ಕೆ ರವಾನೆ ಮಾಡಿ ನಂತರ, ಸಂಚಾರಿ ದೂರವಾಣಿ ಬಳಕೆ ದಾರರಿಗೆ, ಸ್ಥಿರ ಜಾಲದ ಗ್ರಾಹಕರಿಗೆ, ಅಥವಾ ಅನ್ವಯ ಮುಕ್ತಾಯ ವ್ಯವಸ್ಥೆ ಎನಿಸಿಕೊಳ್ಳುವ ಮೌಲ್ಯವರ್ಧಿತ ಸೇವಾಪೂರೈಕೆದಾರರು (VASPಗಳು)ಗಳಿಗೆ ಕಳಿಸಬಹುದಾಗಿರುತ್ತದೆ. ಗ್ರಾಹಕರಲ್ಲಿ-ಅಂತ್ಯಗೊಳ್ಳುವ ಸಂದೇಶಗಳನ್ನು ಸೇವಾಕೇಂದ್ರಗಳಿಂದ ಗಮ್ಯ ಸಾಧನಕ್ಕೆ ಕಳಿಸಲಾಗುತ್ತದೆ. ಈ ಸಂದೇಶಗಳು ಸಂಚಾರಿ ದೂರವಾಣಿ ಗ್ರಾಹಕರು, ಸ್ಥಿರಜಾಲದ ಗ್ರಾಹಕರು ಅಥವಾ VASPಗಳಂತಹಾ ಇನ್ನಿತರ ಮೂಲಗಳ ಮೂಲಕ ಬಂದಿರ ಬಹುದಾಗಿರುತ್ತದೆ. ಕೆಲವೊಂದು ವಾಹಕಗಳಲ್ಲಿ ಗ್ರಾಹಕರಲ್ಲದವರೂ ಕೂಡ ಮಿಂಚಂಚೆ/ವಿ-ಅಂಚೆಯಿಂದ SMS ಗೇಟ್‌ವೇಗೆ ಕಳಿಸುವ ಮೂಲಕ ಗ್ರಾಹಕರಿಗೆ ಸಂದೇಶ ಕಳಿಸುವುದೂ ಸಹಾ ಸಾಧ್ಯ. AT&T, ಟಿ-ಮೊಬೈಲ್‌,[೨೯] ಸ್ಪ್ರಿಂಟ್‌,[೩೦] ಮತ್ತು ವೆರಿಜೋನ್‌ ವೈರ್‌ಲೆಸ್‌{{/5}6/}ಗಳೂ ಸೇರಿದಂತೆ ಅನೇಕ ವಾಹಕಗಳು ಈ ಸೌಲಭ್ಯವನ್ನು ತಮ್ಮ ಜಾಲತಾಣಗಳ ಮೂಲಕ ನೀಡುತ್ತಿವೆ. ಉದಾಹರಣೆಗೆ 555-555-5555 ಸಂಖ್ಯೆಯನ್ನು ಹೊಂದಿರುವ AT&T ಗ್ರಾಹಕ, 5555555555@txt.att.net ವಿಳಾಸಕ್ಕೆ ಬಂದಂತಹಾ ವಿ-ಅಂಚೆಗಳನ್ನು ಸಂದೇಶಗಳನ್ನಾಗಿ ಸ್ವೀಕರಿಸಬಹುದು. ಈ ತರಹದಲ್ಲಿ ಸಂದೇಶಗಳನ್ನು ಕಳುಹಿಸುವುದು ಉಚಿತವಾಗಿದ್ದರೂ ಸಂದೇಶದ ಗಾತ್ರ ಸಾಮಾನ್ಯ ಮಿತಿಯಲ್ಲಿರಬೇಕಾಗುತ್ತದೆ. ಸಂದೇಶಗಳನ್ನು ಪಠ್ಯದ ರೂಪದಲ್ಲಿ ಸ್ವೀಕರಿಸಲು ಸಂದೇಶ ಸಮರ್ಥ ಸ್ಥಿರ-ದೂರವಾಣಿ ಸಾಧನಗಳ ಅಗತ್ಯವಿದೆ. ಆದಾಗ್ಯೂ ಆ ಸಾಮರ್ಥ್ಯವಿಲ್ಲದ ಸಾಧನಗಳಿಗೆ ಪಠ್ಯದಿಂದ-ಉಚ್ಚಾರಣೆ ಪರಿವರ್ತಕಗಳ ಮೂಲಕ ಕಳುಹಿಸಬಹುದಾಗಿರುತ್ತದೆ.[೩೧] ಸಂಕ್ಷಿಪ್ತ ಸಂದೇಶಗಳನ್ನು ರಿಂಗ್‌ಟೋನ್‌ಗಳು ಅಥವಾ ಲೋಗೋಗಳಂತಹಾ ದ್ವಿಮಾನ ದತ್ತ ಹಾಗೂ ಓವರ್‌-ದ-ಏರ್‌ ಪ್ರೋಗ್ರಾಮಿಂಗ್‌ (OTA) ಅಥವಾ ವಿನ್ಯಾಸಿಕ ದತ್ತಗಳನ್ನು ಕಳುಹಿಸಲೂ ಸಹಾ ಬಳಸಬಹುದು. ಆ ರೀತಿಯ ಬಳಕೆಗಳು GSM ಶಿಷ್ಟತೆಗಳ ವಿಕ್ರಯಿ-ಅವಲಂಬಿತ ಸುಧಾರಣೆಗಳಾಗಿದ್ದು, ಅವುಗಳಲ್ಲೇ ಅನೇಕ ಪೈಪೋಟಿಯಲ್ಲಿ ಮಾನಕಗಳಿದ್ದು ಅವುಗಳಲ್ಲಿ Nokiaಸ್ಮಾರ್ಟ್‌ ಮೆಸೇಜಿಂಗ್‌ ಬಹಳವೇ ಸಾಮಾನ್ಯವಾದುದಾಗಿದೆ. ಆ ತರಹದ ದ್ವಿಮಾನ ದತ್ತವನ್ನು ಕಳುಹಿಸುವ ಮತ್ತೊಂದು ಮಾರ್ಗವೆಂದರೆ ಮಾನಕೀಕರಿ/ಪ್ರಮಾಣೀಕರಿಸಿದ ಹಾಗೂ ವಿಕ್ರಯಿ-ಅವಲಂಬಿತವಲ್ಲದ EMS ಸಂದೇಶ ರವಾನೆ. ಪ್ರಸ್ತುತ, SMSಅನ್ನು M2M (ಮೆಷಿನ್‌ ಟು ಮೆಷಿನ್‌/ಗಣಕದಿಂದ ಗಣಕಕ್ಕೆ) ಸಂವಹನಕ್ಕೂ ಬಳಸಲಾಗುತ್ತಿದೆ. ಉದಾಹರಣೆಗೆ SMS ನಿಯಂತ್ರಿತ LED ದರ್ಶಕ ಯಂತ್ರ ಮತ್ತು ಕೆಲ ವಾಹನ ಜಾಡು ಅನ್ವೇಷಕ ಕಂಪೆನಿಗಳು ತಮ್ಮ ದತ್ತ ಸಾಗಣೆ ಅಥವಾ ದೂರಸ್ಥಮಾಪಕ ಅಗತ್ಯಗಳಿಗೆ SMSಅನ್ನು ಬಳಸುತ್ತವೆ. ಈ ಉದ್ದೇಶಗಳಿಗೆ SMSನ ಬಳಕೆಯ ಸ್ಥಾನಕ್ಕೆ ನಿಧಾನವಾಗಿ ಒಟ್ಟಾರೆ ಕಡಿಮೆ ವೆಚ್ಚದ ಕಾರಣದಿಂದಾಗಿ GPRS ಸೇವೆಗಳು ಚ್ಯುತಿ ತಂದಿವೆ[ಸಾಕ್ಷ್ಯಾಧಾರ ಬೇಕಾಗಿದೆ]. ಅಂತರರಾಷ್ಟ್ರೀಯವಾಗಿ ಸಂದೇಶ ಕಳುಹಿಸುವಿಕೆಯ ವೆಚ್ಚವನ್ನು ಕಡಿಮೆ ಮಾಡಲನುಕೂಲಿಸುವಂತೆ ಕೆಲ ಸಣ್ಣ ಟೆಲಿಕಾಂ/ಟೆಲ್ಕೋ ಸಂಸ್ಥೆಗಳು SMS ಸಂದೇಶ ಕಳುಹಿಸಲು GPRSಅನ್ನು ಒಂದು ವಿಧಾನವನ್ನಾಗಿ ನೀಡುತ್ತಿವೆ.[೩೨]

AT ಆದೇಶಗಳು

ಬದಲಾಯಿಸಿ

ಅನೇಕ ಸಂಚಾರಿ ದೂರವಾಣಿ ಮತ್ತು ಉಪಗ್ರಹ ಗ್ರಾಹಕ-ಪ್ರೇಷಕ ಸಾಧನಗಳು ಹೇಯಸ್‌ ಆದೇಶ ಮಾಲೆಯ ವಿಸ್ತೃತ ಆವೃತ್ತಿಯನ್ನು ಬಳಸಿಕೊಂಡು SMSನ ಕಳುಹಿಸುವಿಕೆ ಹಾಗೂ ಪಡೆಯುವಿಕೆಯನ್ನು ಬೆಂಬಲಿಸುತ್ತವೆ. ಪ್ರೇಷಕ-ಗ್ರಾಹಕ ಸಾಧನ ಮತ್ತು ಟರ್ಮಿನಲ್‌ ಉಪಕರಣಗಳ ನಡುವಣ ಸಂಪರ್ಕವನ್ನು ಸರಣಿ ಕೇಬಲ್‌ (i.e. USB), Bluetooth ಕೊಂಡಿ, ಅವಕೆಂಪು ಕೊಂಡಿ ಮತ್ತಿತರ ಸಾಧನಗಳ ಮೂಲಕ ಕಲ್ಪಿಸಬಹುದು. ಸಾಮಾನ್ಯ AT ಆದೇಶಗಳೆಂದರೆ AT+CMGS (ಸಂದೇಶ ಕಳುಹಿಸು), AT+CMSS (ಶೇಖರಣೆಯಿಂದ ಸಂದೇಶ ಕಳುಹಿಸು), AT+CMGL (ಸಂದೇಶಗಳನ್ನು ಪಟ್ಟಿ ಮಾಡು) ಮತ್ತು AT+CMGR (ಸಂದೇಶ ಪಡೆ).[೩೩] ಆದಾಗ್ಯೂ ಸಂದೇಶಗಳ ಶೇಖರಣಾ ಸ್ಥಳವನ್ನು, ಉದಾಹರಣೆಗೆ ಸಾಧನದ ಆಂತರಿಕ ಸ್ಮರಣೆಯನ್ನು AT ಆದೇಶಗಳ ಮೂಲಕ ಪ್ರವೇಶಿಸಲು ಸಾಧ್ಯವಾಗದಿದ್ದರೆ ಎಲ್ಲಾ ಆಧುನಿಕ ಸಾಧನಗಳು ಸಂದೇಶ ಪಡೆಯುವಿಕೆಯನ್ನು ಬೆಂಬಲಿಸುತ್ತವೆ ಎಂದೇನಿಲ್ಲ.

ಉತ್ತಮ ಗುಣಮಟ್ಟದ ಕಿರು ಸಂದೇಶಗಳು

ಬದಲಾಯಿಸಿ

ದೂರವಾಣಿ ಜಾಲದ ಗ್ರಾಹಕರಿಗೆ ವಿಶೇಷ ಶುಲ್ಕ ಸೇವೆಗಳನ್ನು ನೀಡಲು ಸಂಕ್ಷಿಪ್ತ ಸಂದೇಶಗಳನ್ನು ಬಳಸಿಕೊಳ್ಳಬಹುದಾಗಿರುತ್ತದೆ. ಸಂಚಾರಿ ದೂರವಾಣಿಯಲ್ಲಿ ಅಂತ್ಯಗೊಳ್ಳುವ ಸಂಕ್ಷಿಪ್ತ ಸಂದೇಶಗಳನ್ನು ಸುದ್ದಿ ಸೂಚಕಗಳು, ಆರ್ಥಿಕ ಮಾಹಿತಿ, ಲೋಗೋಗಳು ಮತ್ತು ರಿಂಗ್‌ಟೋನ್‌ ಗಳಂತಹಾ ಸಾಂಖ್ಯಿಕ ಮಾಹಿತಿಗಳನ್ನು ಬಟವಾಡೆ ಮಾಡಲು ಸಹಾ ಬಳಸಬಹುದಾಗಿರುತ್ತದೆ. ಮಾಹಿತಿ ಪೂರೈಸುವ ಮೌಲ್ಯವರ್ಧಿತ ಸೇವಾಪೂರೈಕೆದಾರರು (VASP) ಸಂಚಾರಿ ದೂರವಾಣಿ ಸೇವಾಕರ್ತರ SMSC(ಗಳಿ)ಗೆ ಸಂಕ್ಷಿಪ್ತ ಸಂದೇಶ ಪೀರ್‌-ಟು-ಪೀರ್‌ ಪ್ರೋಟೋಕಾಲ್‌ (SMPP) ಅಥವಾ ಎಕ್ಸ್‌ಟರ್ನಲ್‌ ಮೆಷಿನ್‌ ಇಂಟರ್‌ಫೇಸ್‌ (EMI)ಗಳಂತಹಾ TCP/IP ಪ್ರೋಟೋಕಾಲ್‌ಗಳ ಮೂಲಕ ಸಂದೇಶಗಳನ್ನು ಕಳುಹಿಸುತ್ತಾರೆ. SMSC ಪಠ್ಯವನ್ನು ಸಾಧಾರಣ ಸಂಚಾರಿ ದೂರವಾಣಿಯಲ್ಲಿ ಅಂತ್ಯಗೊಳ್ಳುವ ಬಟವಾಡೆ ರೀತಿಯಲ್ಲಿಯೇ ಬಟವಾಡೆ ಮಾಡಿರುತ್ತದೆ. ಗ್ರಾಹಕರು ಈ ವಿಶೇಷ ಮಾಹಿತಿಗಳ ಪಡೆಯುವಿಕೆಗೆ ಹೆಚ್ಚುವರಿ ಶುಲ್ಕವನ್ನು ಪಾವತಿಸಿರುತ್ತಾರಲ್ಲದೇ, ಈ ಮೊತ್ತವನ್ನು ಸಂಚಾರಿ ದೂರವಾಣಿ ಜಾಲ ಸೇವಾಕರ್ತರು ಮತ್ತು VASPಗಳು ಆದಾಯ ಹಂಚಿಕೆ ಅಥವಾ ಸ್ಥಿರ ಸಾಗಣೆ ಶುಲ್ಕ ವ್ಯವಸ್ಥೆಯ ಮೂಲಕ ಹಂಚಿಕೊಳ್ಳುತ್ತಾರೆ. ಸಂಚಾರಿ ದೂರವಾಣಿ ಮೂಲದ ಸಂಕ್ಷಿಪ್ತ ಸಂದೇಶಗಳನ್ನು ದೂರವಾಣಿ-ಮತದಾನದಂತಹಾ ಸೇವೆಗಳಿಗೂ ವಿಶೇಷ ಶುಲ್ಕ ಮಾದರಿಯಲ್ಲಿ ಬಳಸಿಕೊಳ್ಳಬಹುದು. ಇಂತಹಾ ಸಂದರ್ಭದಲ್ಲಿ ಸೇವೆ ಪೂರೈಸುವ VASP ಸಂಸ್ಥೆಯು ದೂರವಾಣಿ ಜಾಲ ಸೇವಾಕರ್ತರಿಂದ ಕಿರುಸಂಕೇತಸಂಖ್ಯೆಯೊಂದನ್ನು ಪಡೆದು, ಗ್ರಾಹಕರು ಆ ಸಂಖ್ಯೆಗೆ ಸಂದೇಶಗಳನ್ನು ಕಳುಹಿಸುತ್ತಾರೆ. ವಾಹಕಗಳಿಗೆ ನೀಡಬೇಕಾದ ಮೊತ್ತವು ವಾಹಕಗಳ ಮೇಲೆಯೇ ಆಧಾರಿತವಾಗಿದ್ದು, ಅಲ್ಪ ಬೆಲೆಯ ವಿಶೇಷ SMS ಸೇವೆಗಳಿಗೆ ಅತಿಹೆಚ್ಚು ಶೇಕಡಾ ದಲ್ಲಾಳಿ ಹಣವನ್ನು ವಿಧಿಸಲಾಗುತ್ತದೆ. ಬಹುತೇಕ ಮಾಹಿತಿ ಪೂರೈಕೆದಾರರು ವಿಶೇಷ ಶುಲ್ಕ SMSಗಳ ದರದ 45%ರಷ್ಟು ಮೊತ್ತವನ್ನು ನೇರವಾಗಿ ವಾಹಕ ಸಂಸ್ಥೆಗೆ ನೀಡಲು ತಯಾರಿರಬೇಕಾಗುತ್ತದೆ. ಪಠ್ಯದ SMSCಗೆ ಸಲ್ಲಿಕೆಯು ಮಾನಕ MO ಸಂಕ್ಷಿಪ್ತ ಸಂದೇಶ ಸಲ್ಲಿಕೆಯ ಹಾಗೆಯೇ ಇರುತ್ತದೆ, ಆದರೆ ಪಠ್ಯವು ಒಮ್ಮೆ SMSCಗೆ ತಲುಪಿತೆಂದರೆ, ನಂತರ ಸೇವಾಕೇಂದ್ರವು ಕಿರುಸಂಕೇತವನ್ನು ವಿಶೇಷಶುಲ್ಕ ಸೇವೆಯನ್ನಾಗಿ ಗುರುತಿಸಿಕೊಂಡಿರುತ್ತದೆ. SMPP ಅಥವಾ EMIನಂತಹಾ IP ಪ್ರೋಟೋಕಾಲ್‌ಗಳನ್ನು ಬಳಸಿಕೊಂಡು ನಂತರ SC ಪಠ್ಯ ಸಂದೇಶದ ಮಾಹಿತಿಯನ್ನು VASPಗೆ ತಲುಪಿಸುತ್ತದೆ. ಅಂತಹಾ ಸಂದೇಶಗಳ ಗ್ರಾಹಕರಿಂದ ವಿಶೇಷ ಶುಲ್ಕ ಪಡೆದು ಅದರಿಂದ ಬಂದ ಆದಾಯವನ್ನು ಜಾಲದ ಸೇವಾಕರ್ತ ಮತ್ತು VASP ಸಂಸ್ಥೆಗಳು ಹಂಚಿಕೊಳ್ಳುತ್ತವೆ. ಈ ಕಿರುಸಂಕೇತಗಳ ಮಿತಿಗಳು ರಾಷ್ಟ್ರಗಳ ಗಡಿಯೊಳಗಿನ ಮಿತಿಯನ್ನು ಒಳಗೊಂಡಿರುವುದಲ್ಲದೇ, (ಆಯಾ ಅಭಿಯಾನ ನಡೆಯುವ ಪ್ರತಿ ರಾಷ್ಟ್ರದಲ್ಲಿ ಪ್ರತ್ಯೇಕವಾಗಿ ಕಿರುಸಂಕೇತಗಳನ್ನು ಸಕ್ರಿಯಗೊಳಿಸಬೇಕಾಗಿರುತ್ತದೆ), ಸಂಚಾರಿ ದೂರವಾಣಿ ಸೇವಾಕರ್ತರೊಡನೆ ಒಡಂಬಡಿಕೆ ಮಾಡಿಕೊಳ್ಳುವುದು ದುಬಾರಿಯ ಬಾಬತ್ತೇ ಆಗಿರುತ್ತದೆ. TV ಮತದಾನ, ಉತ್ಪಾದನಾ ಉತ್ತೇಜನಗಳು ಹಾಗೂ ಅಭಿಯಾನಗಳಂತಹಾ ಅನೇಕ ಅನ್ವಯಗಳಲ್ಲಿ SMS ಸ್ವೀಕೃತಿಯ ಸಮಯದಲ್ಲಿ ಕಿರುಸಂಕೇತಗಳ ಬದಲಿಗೆ ದೀರ್ಘ/ಉದ್ದನೆಯ ಸಂಖ್ಯೆಗಳ(ಅಂತರರಾಷ್ಟ್ರೀಯ ಸಂಖ್ಯಾ ಮಾದರಿ, e.g. +44 7624 805000)ನ್ನು ಸ್ಥಳೀಯ SMSಗಳಿಗೆ ಪರ್ಯಾಯವಾಗಿ ಬಳಸಬಹುದಾಗಿದೆ. ದೀರ್ಘ ಸಂಖ್ಯೆಗಳು ಅಂತರರಾಷ್ಟ್ರೀಯವಾಗಿ ಲಭ್ಯವಿದ್ದು, ಅನೇಕ ಉದ್ಯಮ/ಬ್ರಾಂಡ್‌ಗಳಲ್ಲಿ ಹಂಚಿಕೊಂಡಿರಲೇಬೇಕಿರುವ ಕಿರುಸಂಕೇತಗಳ ಹಾಗಲ್ಲದೇ, ಉದ್ಯಮಗಳಿಗೆ ತಮ್ಮದೇ ಆದ ಸಂಖ್ಯೆಗಳನ್ನು ಹೊಂದಲು ಅನುವು ಮಾಡಿಕೊಡುತ್ತವೆ. ಇವುಗಳೊಂದಿಗೆ ದೀರ್ಘ ಸಂಖ್ಯೆಗಳು ವಿಶೇಷಸೇವೆ-ರಹಿತ ಸ್ಥಳೀಯ ಸಂಖ್ಯೆಗಳಾಗಿರುತ್ತವೆ.

ಉಪಗ್ರಹ ದೂರವಾಣಿ ಜಾಲಗಳಲ್ಲಿ SMS

ಬದಲಾಯಿಸಿ

ACeS ಮತ್ತು OptusSatಗಳನ್ನು ಹೊರತುಪಡಿಸಿ ಅನೇಕ ವಾಣಿಜ್ಯ ಉಪಗ್ರಹ ದೂರವಾಣಿ ಜಾಲಗಳು ಸಂಪೂರ್ಣವಾಗಿ SMS[ಸಾಕ್ಷ್ಯಾಧಾರ ಬೇಕಾಗಿದೆ] ಬೆಂಬಲ ನೀಡುತ್ತವೆ. ಮುಂಚಿನ ಇರಿಡಿಯಮ್‌ ದೂರವಾಣಿ ಸಾಧನಗಳು ಕೇವಲ ಒಳಬರುವ SMSಗಳನ್ನು ಮಾತ್ರ ಬೆಂಬಲಿಸುತ್ತಿದ್ದರೆ, ನಂತರದ ಮಾದರಿಗಳಲ್ಲಿ ಸಂದೇಶ ಕಳುಹಿಸಲೂಬಹುದು. ಪ್ರತಿ ಸಂದೇಶಕ್ಕೆ ನೀಡಬೇಕಾದ ದರವು ವಿವಿಧ ಜಾಲಗಳ ಮಧ್ಯೆ ವ್ಯತ್ಯಾಸವಾಗುತ್ತಿದ್ದು ಸಾಮಾನ್ಯವಾಗಿ ಪ್ರತಿ ಸಂದೇಶಕ್ಕೆ 25ರಿಂದ 50 ಸೆಂಟ್‌ಗಳಷ್ಟಿರುತ್ತದೆ. ಕೆಲ ಸಂಚಾರಿ ದೂರವಾಣಿ ಜಾಲಗಳ ಹಾಗೆ ಅಂತರರಾಷ್ಟ್ರೀಯ SMS ಅಥವಾ ಇತರೆ ಉಪಗ್ರಹ ದೂರವಾಣಿ ಜಾಲಕ್ಕೆ ಸಂದೇಶ ಕಳುಹಿಸಲು ಯಾವುದೇ ಪ್ರತ್ಯೇಕ ಶುಲ್ಕವಿರುವುದಿಲ್ಲ. ಕೆಲವೊಮ್ಮೆ ಕರೆ ಮಾಡಲು ಆಗದೇ ಇರುವಷ್ಟು ಅಲ್ಪಸಂಕೇತ ಸಾಮರ್ಥ್ಯದ ಪ್ರದೇಶಗಳಿಂದಲೂ SMSಗಳನ್ನು ಕಳುಹಿಸಬಹುದಾಗಿದೆ. ಉಪಗ್ರಹ ದೂರವಾಣಿ ಜಾಲಗಳು ಸಾಮಾನ್ಯವಾಗಿ ಜಾಲಾಧಾರಿತ ಅಥವಾ ವಿ-ಅಂಚೆ ಆಧಾರಿತ SMS ಜಾಲತಾಣಗಳನ್ನು ಹೊಂದಿದ್ದು ಆಯಾ ನಿಶ್ಚಿತ ಜಾಲದ ದೂರವಾಣಿಗಳಿಗೆ ಉಚಿತವಾಗಿ SMSಅನ್ನು ಅದರಿಂದ ಕಳಿಸುವ ಸೌಲಭ್ಯ ನೀಡುತ್ತವೆ.

ಸುರಕ್ಷಾಲೋಪಗಳು/ಅಸುರಕ್ಷತೆಯ ಸಾಧ್ಯತೆಗಳು/ಭೇದ್ಯಗಳು

ಬದಲಾಯಿಸಿ

ಸಂಚಾರಿ-ದೂರವಾಣಿ ಸಂಪರ್ಕಕ್ಕಾಗಿ ಜಾಗತಿಕ ವ್ಯವಸ್ಥೆಯು (GSM), ಅತಿಹೆಚ್ಚಿನ ವಿಶ್ವವ್ಯಾಪಿ ಬಳಕೆದಾರರನ್ನು ಹೊಂದಿರುವುದರೊಂದಿಗೆ, ಅನೇಕ ವಿಧವಾದ ರಕ್ಷಣಾ ಅಸುರಕ್ಷತೆಗಳಿಗೆ ತುತ್ತಾಗುತ್ತಲಿದೆ. GSMನಲ್ಲಿ, ಸಂಚಾರಿ ದೂರವಾಣಿ ಕೇಂದ್ರ (MS) ಮತ್ತು ಮೂಲ ಪ್ರೇಷಕ-ಗ್ರಾಹಕ ಕೇಂದ್ರ (BTS)ಗಳ ನಡುವಿನ ಕೇವಲ ವಾಯುಮಾರ್ಗದ ಸಂವಹನ ಮಾತ್ರವೇ ದುರ್ಬಲ ಹಾಗೂ ಪ್ರತ್ಯೇಕಿತ ವಾಹಿನಿ ಗುಪ್ತಸಂಕೇತ(A5/1 ಅಥವಾ A5/2)ದೊಂದಿಗೆ ಐಚ್ಛಿಕವಾಗಿ ಗೂಢಲಿಪೀಕರಣಗೊಂಡಿರುತ್ತದೆ. ದೃಢೀಕರಣ/ಪ್ರಮಾಣೀಕರಣವು ಕೇವಲ ಏಕಪಕ್ಷೀಯವಾಗಿದ್ದು ಅಸುರಕ್ಷಿತವಾಗಿದೆ ಕೂಡ. ಇನ್ನೂ ಅನೇಕ ರಕ್ಷಣಾ ಅಸುರಕ್ಷತೆಗಳು ಹಾಗೂ ಲೋಪಗಳಿವೆ.[೩೪] ಅಂತಹಾ ಸುರಕ್ಷಾಲೋಪಗಳು GSM ಜಾಲಗಳಲ್ಲಿ ವಿಶ್ವಾದ್ಯಂತ ಲಭ್ಯವಿರುವ ಅತ್ಯುತ್ತಮ ಮಟ್ಟದ ಹಾಗೂ ಉತ್ತಮ-ಬಳಕೆಯ ಸೇವೆಯಾದ ಸಂಕ್ಷಿಪ್ತ ಸಂದೇಶ ಸೇವೆ(SMS)ಗೂ ಸಹಾ ಸಹಜವೇ. SMS ಸಂದೇಶ ಕಳುಹಿಸುವಿಕೆ ಇನ್ನಷ್ಟು ಹೆಚ್ಚುವರಿ ಸುರಕ್ಷಾಲೋಪಗಳನ್ನು ತನ್ನ ಸಂಗ್ರಹಣಾ ಮತ್ತು ರವಾನೆ ಸೌಲಭ್ಯದಿಂದಾಗಿ, ಹಾಗೂ ಅಂತರಜಾಲದ ಮೂಲಕ ಕಳಿಸಬಹುದಾದ ನಕಲಿ SMSನ ಹಾವಳಿಗಳನ್ನು ಹೊಂದಿದೆ. ಬಳಕೆದಾರರು ರೋಮಿಂಗ್‌ನಲ್ಲಿದ್ದಾಗ SMS ಮಾಹಿತಿಯು ವಿವಿಧ ಜಾಲಗಳ ಮೂಲಕ ಸಾಗುತ್ತಲ್ಲದೇ, ಅನೇಕ ಸುರಕ್ಷತಾ ಲೋಪಗಳಿಗೆ ಹಾಗೂ ಆಕ್ರಮಣಗಳಿಗೆ ತುತ್ತಾಗಬಹುದಾದ ಅಂತರ್ಜಾಲದ ಮೂಲಕವೂ ಈ ತೊಂದರೆ ಒದಗಬಹುದಾಗಿರುತ್ತದೆ. ಎದುರಾಗಬಹುದಾದ ಮತ್ತೊಂದು ಅಪಾಯವೆಂದರೆ ಪ್ರತಿಸ್ಪರ್ಧಿಗೆ ದೂರವಾಣಿಯು ಲಭ್ಯವಾಗಿ, ಹಿಂದಿನ ಸಂರಕ್ಷಣೆ ನೀಡದ ಸಂದೇಶಗಳನ್ನು ಓದಲು ಸಾಧ್ಯವಾಗುವುದು[೩೫].ಅಕ್ಟೋಬರ್‌ 2005ರಲ್ಲಿ, ಪೆನ್ಸಿಲ್‌ವೇನಿಯಾ ರಾಜ್ಯ ವಿಶ್ವವಿದ್ಯಾಲಯದ ಸಂಶೋಧಕರು SMS-ಶಕ್ತ ಸಂಚಾರಿ ದೂರವಾಣಿ ಜಾಲಗಳ ಸುರಕ್ಷಾಲೋಪಗಳ ಬಗ್ಗೆ ಒಂದು ವಿಶ್ಲೇಷಣೆಯನ್ನು ಪ್ರಕಟಿಸಿದರು.[೩೬] ಸಂಶೋಧಕರು ಊಹಿಸಿದ ಪ್ರಕಾರ ದಾಳಿಕೋರರು ಈ ಜಾಲಗಳ ಮುಕ್ತ ಕಾರ್ಯಾಚರಣೆಯನ್ನು ದುರುಪಯೋಗಪಡಿಸಿಕೊಂಡು ರಾಷ್ಟ್ರೀಯ ಮಟ್ಟದಲ್ಲಿ ಅದಕ್ಕೆ ತಡೆಒಡ್ಡುವಿಕೆ ಇಲ್ಲವೇ ಅವುಗಳ ಕಾರ್ಯವನ್ನು ವಿಫಲಗೊಳ್ಳುವಂತೆ ಮಾಡುವ ಸಾಧ್ಯತೆಗಳಿರುತ್ತವೆ.

SMS ವಂಚನೆ

ಬದಲಾಯಿಸಿ

SMS ಸಂದೇಶ ಸೇವೆಗಳ ದುರ್ಬಳಕೆಯನ್ನು ಮಾಡಿ ಸಂಚಾರಿ ದೂರವಾಣಿ ಸೇವಾಕರ್ತ ಸಂಸ್ಥೆಗಳ ಮೇಲೆ ಮಾಡಬಹುದಾದ GSM ಉದ್ಯಮವು ಅನೇಕ ಸಂಭಾವ್ಯ ವಂಚನಾ ದಾಳಿಗಳನ್ನು ಪತ್ತೆಹಚ್ಚಿದೆ. ಈ ಬೆದರಿಕೆಗಳಲ್ಲಿ ಅತ್ಯಂತ ಗಂಭೀರವಾದುದೆಂದರೆ SMS ಅಣಕುಕಾರ್ಯಾಚರಣೆಗಳು. ಸ್ಥಳೀಯ ಜಾಲದ ಬಳಕೆದಾರನೆಂದು ದಾರಿತಪ್ಪಿಸಲು ಪರಕೀಯ ಜಾಲದೊಳಕ್ಕೆ ನುಸುಳಿದ ವಂಚಕನು ವಿಳಾಸ ಮಾಹಿತಿಯನ್ನು ತಿರುಚಿ, ಸ್ಥಳೀಯ ಜಾಲಕ್ಕೆ ಸಂದೇಶಗಳನ್ನು ಸಲ್ಲಿಸುವುದರಿಂದ SMS ಅಣಕುಕಾರ್ಯಾಚರಣೆಗಳು ಸಾಧ್ಯವಾಗುತ್ತವೆ. ಆಗ್ಗಾಗ್ಗೆ, ಈ ಸಂದೇಶಗಳು ಪರಕೀಯ ಜಾಲಗಳ ಗಮ್ಯಗಳಿಗೆ ಕಳಿಸಲ್ಪಟ್ಟು, ಕಾರ್ಯತಃ ಇತರೆ ಜಾಲಗಳಿಗೆ ಸಂದೇಶಗಳನ್ನು ಕಳಿಸಲು ಸ್ಥಳೀಯ SMSCಯನ್ನು “ಅಪಹರಿಸಿ”ದಂತಹಾ ಸಾಧ್ಯತೆಗಳಿಗೆ ಕಾರಣವಾಗುತ್ತವೆ. ಅಣಕು ಸಂದೇಶಗಳನ್ನು ಪತ್ತೆಹಚ್ಚುವ ಹಾಗೂ ತಡೆಗಟ್ಟುವ ಏಕೈಕ 100%-ನಿಸ್ಸಂಶಯವಾದ ಮಾರ್ಗವೆಂದರೆ ಒಳಬರುವ ಸಂಚಾರಿ ದೂರವಾಣಿ ಮೂಲದ ಸಂದೇಶಗಳನ್ನು ಕಳುಹಿಸಿದ ಬಳಕೆದಾರರು ನ್ಯಾಯಸಮ್ಮತ ಗ್ರಾಹಕರೇ ಮತ್ತು ಸಂದೇಶವು ನ್ಯಾಯಸಮ್ಮತ ಮತ್ತು ಸರಿಯಾದ ವಿಳಾಸದಿಂದ ಬಂದಿದೆಯೇ ಎಂದು ಪರೀಕ್ಷಿಸುವುದು. ಮೂಲದ ಗ್ರಾಹಕರ ವಿವರವನ್ನು HLRನಿಂದ ಸಂದೇಶವು ಬಟವಾಡೆಗಾಗಿ ಸಲ್ಲಿಕೆಯಾಗುವುದರೊಳಗೆ ಕೋರಿ ಪಡೆಯಬಲ್ಲ ಬುದ್ಧಿವಂತ ಮಾರ್ಗಸೂಚಿ ವಿಧಾನವನ್ನು ಅಳವಡಿಸಿಕೊಳ್ಳುವುದರ ಮೂಲಕ ಇದನ್ನು ಕಾರ್ಯಗತಗೊಳಿಸಬಹುದು. ಈ ಮಾದರಿಯ ಬುದ್ಧಿವಂತ ಮಾರ್ಗಸೂಚಿ ವಿಧಾನವು ಸಾಂಪ್ರದಾಯಿಕ ಸಂದೇಶವ್ಯವಸ್ಥೆಯ ಆಧಾರರಚನೆಗಳ ಸಾಮರ್ಥ್ಯಕ್ಕೆ ಹೊರತಾದುದಾಗಿದೆ.[೩೭]

ಪ್ರಮಾಣೀಕರಣ

ಬದಲಾಯಿಸಿ

ವಿವರಗಳಿಗಾಗಿ ನೋಡಿ

ಬದಲಾಯಿಸಿ

ವಿವರಗಳು

ಬದಲಾಯಿಸಿ

ಸಂಬಂಧಿಸಿದ ಪ್ರೊಟೋಕಾಲ್‌ಗಳು

ಬದಲಾಯಿಸಿ

ಸಂಬಂಧಿಸಿದ ತಂತ್ರಜ್ಞಾನ

ಬದಲಾಯಿಸಿ

ಆಕರಗಳು

ಬದಲಾಯಿಸಿ
  1. ೧.೦ ೧.೧ GSM ದಾಖಲೆ 28/85 "ಸರ್ವಿಸಸ್‌ ಅಂಡ್‌ ಫೆಸಿಲಿಟೀಸ್‌ ಟು ಬಿ ಪ್ರಾವೈಡೆಡ್‌ ಇನ್‌ ದ GSM ಸಿಸ್ಟಂ" rev2, ಜೂನ್‌ 1985
  2. ೨.೦ ೨.೧ GSM 03.40, ಸಂಕ್ಷಿಪ್ತ ಸಂದೇಶ ಸೇವೆ(SMS)ಗಳ ತಾಂತ್ರಿಕ ಸಫಲತೆಗಳು/ಸಾಧ್ಯತೆಗಳು.
  3. ETSI ಸಂಗ್ರಹದಲ್ಲಿ ಲಭ್ಯವಿರುವ 02/82 ದಿನಾಂಕದ GSM ದಾಖಲೆಯನ್ನು ನೋಡಿ
  4. ಈ ಸಂದೇಶ ನಿರ್ವಹಣಾ ವ್ಯವಸ್ಥೆಗಳನ್ನು ITUನಲ್ಲಿ ಮಾನಕೀ/ಪ್ರಮಾಣೀಕರಿಸಲಾಗಿದೆ, ಶಿಷ್ಟತೆಗಳು X.400 ಸರಣಿಯನ್ನು ನೋಡಿ
  5. ETSI ಸಂಗ್ರಹದಲ್ಲಿ ಲಭ್ಯವಿರುವ GSM ದಾಖಲೆ 28/85 rev.2 ಜೂನ್‌ 85 ಮತ್ತು GSM WP1 ದಾಖಲೆ 66/86 ಗಳನ್ನು ನೋಡಿ
  6. ಇವುಗಳನ್ನೂ ನೋಡಿ ಫ್ರೀಡ್‌ಹೆಲ್ಮ್‌ ಹಿಲ್ಲೆಬ್ರಾಂಡ್‌ "GSM ಅಂಡ್‌ UMTS, ದ ಕ್ರಿಯೇಷನ್‌ ಆಫ್‌ ಗ್ಲೋಬಲ್‌ ಮೊಬೈಲ್‌ ಕಮ್ಯುನಿಕೇಷನ್‌ ", ವಿಲೇ 2002, 10 ಮತ್ತು 16ನೇ ಅಧ್ಯಾಯಗಳು, ISBN 0470 84322 5
  7. ETSI ಸಂಗ್ರಹದಲ್ಲಿ ಲಭ್ಯವಿರುವ GSM ದಾಖಲೆ 19/85,
  8. ETSI ಸಂಗ್ರಹದಲ್ಲಿ ಲಭ್ಯವಿರುವ GSM ದಾಖಲೆ 28/85r2
  9. GSM TS 02.03, GSM ಸಾರ್ವಜನಿಕ ಸ್ಥಿರ ಸಂಚಾರಿ ಜಾಲ/ಪಬ್ಲಿಕ್‌ ಲ್ಯಾಂಡ್‌ ಮೊಬೈಲ್‌ ನೆಟ್‌ವರ್ಕ್ (PLMN)‌ನಲ್ಲಿ ಬೆಂಬಲಿತವಾದ ದೂರವಾಣಿ ಸೇವೆಗಳು.
  10. ETSI ಸಂಗ್ರಹದಲ್ಲಿ ಲಭ್ಯವಿರುವ ದಾಖಲೆ GSM IDEG 79/87r3
  11. ETSI ಸಂಗ್ರಹದಲ್ಲಿ ಲಭ್ಯವಿರುವ GSM 03.40, WP4 ದಾಖಲೆ 152/87
  12. ನೋಡಿ ಫಿನ್‌ ಟ್ರಾಸ್ಬಿ "SMS, ದ ಸ್ಟ್ರೇಂಜ್‌ ಡಕ್ಲಿಂಗ್‌ ಆಫ್‌ GSM", ಟೆಲೆಕ್ಟ್ರಾನಿಕ್‌ನಿಂದ ಪ್ರಕಟಿತ vol. 3 2004; ಪುಟ 6. ಕೊಂಡಿ http://www.telenor.com/telektronikk/volumes/pdf/3.2004/Page_187-194.pdf Archived 2007-08-08 ವೇಬ್ಯಾಕ್ ಮೆಷಿನ್ ನಲ್ಲಿ.
  13. 3GPP ಜಾಲತಾಣದಲ್ಲಿ ಲಭ್ಯವಿರುವ MAP 1ನೇ ಹಂತದ ಶಿಷ್ಟತೆಗಳು.
  14. 3GPP ಜಾಲತಾಣದಲ್ಲಿ ಲಭ್ಯವಿರುವ MAP 2ನೇ ಹಂತದ ಶಿಷ್ಟತೆಗಳು.
  15. 3GPP ಜಾಲತಾಣದಲ್ಲಿ ಲಭ್ಯವಿರುವ CAMEL 3ನೇ ಹಂತದ ಶಿಷ್ಟತೆಗಳು.
  16. 3GPP ಶಿಷ್ಟತೆಗಳ ಪುಟದಿಂದಲೂ ಲಭ್ಯವಿರುವ CAMEL 4ನೇ ಹಂತದ ಶಿಷ್ಟತೆಗಳು.
  17. ಐ ಪುಟ್‌ ದ Gr8 ಇನ್‌ ಬ್ರಿಟನ್‌ ಮೇ 2007, ಲಂಡನ್‌ ಮ್ಯಾಗಜೀನ್‌/ಲಂಡನ್‌ ಪತ್ರಿಕೆ.
  18. SMSನ 10ನೇ ಹುಟ್ಟಿದ ಹಬ್ಬ ಆಚರಿಸಿದ/ಹಬ್ಬಕ್ಕೆ ಅಭಿನಂದಿಸಿದ UK, ಡಿಸೆಂಬರ್‌ 2002, ದ ಟೈಮ್ಸ್‌ ಆಫ್‌ ಇಂಡಿಯಾ.
  19. ಛಾಯಾಚಿತ್ರ ಸೌಲಭ್ಯದ ದೂರವಾಣಿಗಳ ಹುಸಿ ಉದಯ, ಜನವರಿ 2003, ದ ಸ್ಕಾಟ್ಸ್‌ಮನ್‌.
  20. "ಪಠ್ಯ ಸಂದೇಶ(SMS) ವ್ಯವಸ್ಥೆಯ ಪ್ರಥಮ ವಾಣಿಜ್ಯ ಅಳವಡಿಕೆ". Archived from the original on 2008-10-06. Retrieved 2009-11-18.
  21. ೨೧.೦ ೨೧.೧ GSM World ಪತ್ರಿಕಾ ಹೇಳಿಕೆ
  22. Crystal, David (2008-07-05). "2b or not 2b?". Guardian Unlimited. Retrieved 2008-07-08. {{cite web}}: Text "By genre" ignored (help); Text "guardian.co.uk Books" ignored (help)
  23. ITU Internet Report 2006: digital.life, Chapter 3 PDF (451 KiB)
  24. http://www.dslreports.com/shownews/91379
  25. GSM 03.41, ಸಂಕ್ಷಿಪ್ತ ಸಂದೇಶ ಸೇವೆಗಳ ತಾಂತ್ರಿಕ ಸಫಲತೆ ಸೆಲ್‌ ಬ್ರಾಡ್‌ಕಾಸ್ಟ್‌ (SMSCB).
  26. ಗಿಲ್‌ ಹೆಲ್ಡ್‌: "ಡಾಟಾ ಓವರ್ ವೈರ್‌ಲೆಸ್‌ ನೆಟ್‌ವರ್ಕ್ಸ್‌ ". ಪುಟ 105-111, 137-138.ವಿಲೇ, 2001.
  27. ೨೭.೦ ೨೭.೧ 3GPP TS 23.038, ಅಕ್ಷರಮಾಲೆ ಮತ್ತು ಭಾಷಾ-ಸಂಬಂಧಿ ಮಾಹಿತಿ.
  28. ಐಯಾನ್‌ ಗ್ರೋವ್ಸ್‌: "ಮೊಬೈಲ್‌ ಸಿಸ್ಟಂಸ್‌ ", ಪುಟ 70, 79, 163-166. ಚಾಪ್‌ಮನ್‌ & ಹಾಲ್‌, 1998.
  29. "t-zones text messaging: send and receive messages with mobile text messaging". T-mobile.com. Archived from the original on 2008-09-17. Retrieved 2008-09-18.
  30. "Support - How do I compose and send a text message to a Sprint or Nextel customer from email?". Support.sprintpcs.com. Archived from the original on 2008-10-20. Retrieved 2008-09-18.
  31. BT ಟ್ರಯಲ್ಸ್‌ ಮೊಬೈಲ್‌ SMS ಟು ವಾಯ್ಸ್‌ ಲ್ಯಾಂಡ್‌ಲೈನ್‌, ಜನವರಿ 2004, ದ ರೆಜಿಸ್ಟರ್‌.
  32. http://www.smstextnews.com/2006/09/10ptextcouk_hel.html, ಸೆಪ್ಟೆಂಬರ್ 2006, SMStextnews
  33. SMS ಬೋಧಕಾಂಶ: AT ಆದೇಶಗಳು, ಮೂಲ ಆದೇಶಗಳು ಮತ್ತು ವಿಸ್ತೃತ ಆದೇಶಗಳಿಗೆ ಪೀಠಿಕೆ
  34. Mohsen Toorani, and Ali Asghar Beheshti Shirazi, (2008). Solutions to the GSM Security Weaknesses,Proceedings of the Second IEEE International Conference on Next Generation Mobile Applications, Services, and Technologies (NGMAST2008), pages=576-581, University of Glamorgan, Cardiff, UK. {{cite book}}: External link in |title= (help); Missing pipe in: |title= (help); Unknown parameter |month= ignored (help)CS1 maint: extra punctuation (link) CS1 maint: multiple names: authors list (link)
  35. Mohsen Toorani, and Ali Asghar Beheshti Shirazi, (2008). SSMS - A Secure SMS Messaging Protocol for the M-Payment Systems, Proceedings of the 13th IEEE Symposium on Computers and Communications (ISCC'08), pages=700-705, IEEE ComSoc, Marrakesh, Morocco. {{cite book}}: External link in |title= (help); Missing pipe in: |title= (help); Unknown parameter |month= ignored (help)CS1 maint: extra punctuation (link) CS1 maint: multiple names: authors list (link)
  36. "SMS-ಸಮರ್ಥ ಸಂಚಾರಿ ದೂರವಾಣಿ ಜಾಲಗಳಲ್ಲಿನ ಸುರಕ್ಷತಾ ಲೋಪಗಳ ವಿಶ್ಲೇಷಣೆ: SMS- ಸಮರ್ಥ ಸಂಚಾರಿ ದೂರವಾಣಿ ಜಾಲಗಳಲ್ಲಿನ ಮುಕ್ತ ಸೌಲಭ್ಯಗಳ ದುರ್ಬಳಕೆ (ಸೆಪ್ಟೆಂಬರ್‌ 2, 2005)". Archived from the original on 2005-12-10. Retrieved 2009-11-18.
  37. "ಸಂಚಾರಿ ದೂರವಾಣಿ ಸೇವಾಕರ್ತ ಜಾಲಗಳಲ್ಲಿ ನಕಲಿ SMS ತಡೆಗೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಒಂದು ಸ್ಥೂಲ ಸಮೀಕ್ಷೆ (ಸೆಪ್ಟೆಂಬರ್‌ 9, 2008)". Archived from the original on 2008-09-26. Retrieved 2009-11-18.


ಹೊರಗಿನ ಕೊಂಡಿಗಳು

ಬದಲಾಯಿಸಿ