ನ್ಯಾಯ ವಿಜ್ಞಾನ (ಇಂಗ್ಲಿಷ್‌ನಲ್ಲಿ ಫರೆನ್ಸಿಕ್‌ ಸೈನ್ಸ್‌ ಎಂದು ಕರೆಯಲ್ಪಡುವ ಇದನ್ನು ಅನೇಕ ವೇಳೆ ಫರೆನ್ಸಿಕ್ಸ್‌‌ ಎಂಬುದಾಗಿ ಮೊಟಕುಗೊಳಿಸಲ್ಪಟ್ಟಿದೆ) ಎಂಬುದು ಒಂದು ಕಾನೂನು ವ್ಯವಸ್ಥೆಗೆ ಸಂಬಂಧಿಸಿದ ಹಿತಾಸಕ್ತಿಯ ಪ್ರಶ್ನೆಗಳನ್ನು ಉತ್ತರಿಸಲು ಅನ್ವಯಿಸಲಾಗುವ ವಿಜ್ಞಾನಗಳ ಒಂದು ವ್ಯಾಪಕ ಶ್ರೇಣಿಯಾಗಿದೆ. ಇದು ಒಂದು ಅಪರಾಧ ಅಥವಾ ಒಂದು ನಾಗರಿಕ ಕ್ರಮಕ್ಕೆ ಸಂಬಂಧಿಸಿರಬಹುದು. ಕಾನೂನು ವ್ಯವಸ್ಥೆಯೊಂದಕ್ಕೆ ಇದು ಹೊಂದಿರುವ ಪ್ರಸ್ತುತತೆಯ ಜೊತೆಜೊತೆಗೆ, ವಿದ್ವತ್‌ಪೂರ್ಣ ಅಥವಾ ವೈಜ್ಞಾನಿಕ ವಿಧಾನಶಾಸ್ತ್ರ ಹಾಗೂ ರೂಢಮಾದರಿಗಳನ್ನು ನ್ಯಾಯ ವಿಜ್ಞಾನ ವು ಒಳಗೊಳ್ಳುತ್ತದೆ; ಈ ವಿಧಾನಶಾಸ್ತ್ರ ಹಾಗೂ ರೂಢಮಾದರಿಗಳ ಅಡಿಯಲ್ಲಿ, ಮನುಷ್ಯನಿರ್ಮಿತವಿರಬಹುದಾದ, ಅಥವಾ ಬೇರಿನ್ನಾವುದೋ ಭೌತಿಕ ವಸ್ತುವಾಗಿರಬಹುದಾದ (ಒಂದು ಕಳೇಬರದಂಥ ವಸ್ತು) ಒಂದು ಘಟನೆಗೆ ಸಂಬಂಧಿಸಿದ ವಾಸ್ತವಾಂಶಗಳನ್ನು ನಿದರ್ಶನವಾಗಿರುವ ರೀತಿಯಲ್ಲಿ ಕಂಡುಹಿಡಿಯಲಾಗುತ್ತದೆ.

ಫರೆನ್ಸಿಕ್‌‌ ಎಂಬ ಪದವು ಫರೆನ್ಸಿಸ್‌ ಎಂಬ ಲ್ಯಾಟಿನ್‌ ಗುಣವಾಚಕದಿಂದ ಬಂದಿದ್ದು, ಇದು "ನ್ಯಾಯಸ್ಥಾನದ ಅಥವಾ ಅದರ ಮುಂಚೆಗಿನ".ಅತ್ಯುತ್ತಮವಾದ ವಾದ ಹಾಗೂ ಭಾಷಣದ ರೀತಿಯನ್ನು ಮಂಡಿಸಿದ ಆಸಾಮಿಯು ಸದರಿ ಪ್ರಕರಣದ ಫಲಿತಾಂಶವನ್ನು ನಿರ್ಣಯಿಸಬೇಕಾಗಿ ಬರುತ್ತಿತ್ತು. ಈ ಉಗಮವು ನ್ಯಾಯ ವಿಜ್ಞಾನದ (ಫರೆನ್ಸಿಕ್‌) ಎಂಬ ಪದದ ಎರಡು ಆಧುನಿಕ ಬಳಕೆಗಳ ಮೂಲವಾಗಿದ್ದೆಂದು, ಕಾನೂನು ಪುರಾವೆಯ ಒಂದು ಸ್ವರೂಪವಾಗಿ ಮತ್ತು ಸಾರ್ವಜನಿಕ ಪ್ರಸ್ತುತಿಯ ಒಂದು ವರ್ಗವಾಗಿ ಅದು ಹೊರಹೊಮ್ಮಿದೆ.

ಆಧುನಿಕ ಬಳಕೆಯಲ್ಲಿ, "ಫರೆನ್ಸಿಕ್‌ ಸೈನ್ಸ್‌" ಎಂಬುದರ ಜಾಗದಲ್ಲಿ "ಫರೆನ್ಸಿಕ್ಸ್‌" ಎಂಬ ಶಬ್ದದ ಬಳಕೆಯನ್ನು ತಪ್ಪಾಗಿ ಪರಿಗಣಿಸಲು ಸಾಧ್ಯವಿದೆ; ಏಕೆಂದರೆ "ಫರೆನ್ಸಿಕ್‌" ಎಂಬ ಶಬ್ದವು ಸಂಪೂರ್ಣವಾಗಿ "ಕಾನೂನು" ಅಥವಾ "ನ್ಯಾಯಾಲಯಗಳಿಗೆ ಸಂಬಂಧಿಸಿದ" ಎಂಬುವುದಕ್ಕಾಗಿರುವ ಒಂದು ಪರ್ಯಾಯಪದವಾಗಿದೆ. ಆದಾಗ್ಯೂ, ಈ ಶಬ್ದವು ವೈಜ್ಞಾನಿಕ ಕ್ಷೇತ್ರದೊಂದಿಗೆ ಎಷ್ಟೊಂದು ನಿಕಟವಾಗಿ ಸಂಬಂಧವನ್ನು ಹೊಂದಿದೆಯೆಂದರೆ, "ಫರೆನ್ಸಿಕ್‌ ಸೈನ್ಸ್‌"ನೊಂದಿಗೆ "ಫರೆನ್ಸಿಕ್ಸ್‌" ಪದವನ್ನು ಸಮೀಕರಿಸುವ ಅರ್ಥವನ್ನು ಅನೇಕ ನಿಘಂಟುಗಳು ಒಳಗೊಂಡಿವೆ.

ಇತಿಹಾಸ

ಬದಲಾಯಿಸಿ

ಪ್ರಾಚೀನತೆ ಮತ್ತು ಮಧ್ಯ ಯುಗಗಳು

ಬದಲಾಯಿಸಿ

ಶಿಕ್ಷೆಯಿಂದ ತಪ್ಪಿಸಿಕೊಳ್ಳುವಲ್ಲಿ ಅಪರಾಧಿಗಳಿಗೆ ಸಹಾಯಮಾಡಿದ, ನ್ಯಾಯ ವಿಜ್ಞಾನದ ಪ್ರಮಾಣಕವಾಗಿಸಲ್ಪಟ್ಟ ಪರಿಪಾಠಗಳನ್ನು ಪ್ರಾಚೀನ ವಿಶ್ವವು ಹೊಂದಿರಲಿಲ್ಲ. ಬಲವಂತದ ತಪ್ಪೊಪ್ಪಿಗೆಗಳು ಹಾಗೂ ಸಾಕ್ಷಿ ರುಜುವಾತುಗಳ ಮೇಲೆ ಅಪರಾಧದ ತನಿಖೆಗಳು ಹಾಗೂ ವಿಚಾರಣೆಗಳು ವಿಶ್ವಾಸವನ್ನಿರಿಸಿದ್ದವು. ಆದಾಗ್ಯೂ, ನಂತರದ ಶತಮಾನಗಳಲ್ಲಿ ಅಭಿವೃದ್ಧಿಪಡಿಸಲ್ಪಟ್ಟ, ನ್ಯಾಯ ವಿಜ್ಞಾನದ ಪರಿಕಲ್ಪನೆಗಳನ್ನು ಮುನ್ಸೂಚಿಸಿದ ಕೌಶಲಗಳ ಹಲವಾರು ದಾಖಲೆಗಳನ್ನು ಪ್ರಾಚೀನ ಮೂಲಗಳು ಒಳಗೊಂಡಿವೆ; ಆರ್ಕಿಮಿಡಿಸ್‌‌ (287–212 BC) ಕುರಿತಾಗಿ ಹೇಳಲ್ಪಟ್ಟಿರುವ "ಯುರೇಕಾ" ದಂತಕಥೆಯು ಇದಕ್ಕೊಂದು ನಿದರ್ಶನವಾಗಿದೆ.[] ಪ್ರತ್ಯೇಕ ಅಪರಾಧದ ಪ್ರಕರಣಗಳನ್ನು ಪರಿಹರಿಸುವುದಕ್ಕಾಗಿ ಔಷಧಿ ಹಾಗೂ ಕೀಟಶಾಸ್ತ್ರದ ಬಳಸುವುದರ ಮೊದಲ ಲಿಖಿತ ದಾಖಲೆಯೆಂದು ಕ್ಸಿ ಯುವಾನ್‌ ಲು ಪುಸ್ತಕವು (ಇದನ್ನು ಅನುವಾದಿಸಿದಾಗ "ತಪ್ಪುಗಳನ್ನು ತೊಳೆದುಹಾಕುವುದು"[][] ಎಂಬ ಅರ್ಥ ಸಿಗುತ್ತದೆ) ಕರೆಸಿಕೊಂಡಿದೆ; ಚೀನಾದ ಸಾಂಗ್‌ ರಾಜವಂಶದ ಅವಧಿಯಲ್ಲಿ ಸಾಂಗ್‌ ಸಿ (宋慈, 1186–1249) ಎಂಬಾತನಿಂದ 1248ರಲ್ಲಿ ಇದು ಬರೆಯಲ್ಪಟ್ಟಿತು. ಇದರ ದಾಖಲೆಗಳಲ್ಲೊಂದರಲ್ಲಿ, ಒಂದು ಕುಡುಗೋಲನ್ನು ಬಳಸಿ ಕೊಲೆಮಾಡಲ್ಪಟ್ಟ ವ್ಯಕ್ತಿಯೋರ್ವನ ಪ್ರಕರಣವನ್ನು ಪರಿಹರಿಸುವಾಗ, ಓರ್ವ ಸಾವಿನ ತನಿಖೆದಾರನು ಎಲ್ಲರೂ ತಂತಮ್ಮ ಕುಡುಗೋಲುಗಳನ್ನು ಒಂದು ತಾಣಕ್ಕೆ ತರುವಂತೆ ಸೂಚಿಸುತ್ತಾನೆ. (ಪ್ರಾಣಿಯ ಶವವೊಂದರ ಮೇಲೆ ಹಲವಾರು ಬ್ಲೇಡುಗಳನ್ನು ಬಳಸಿ ಪರೀಕ್ಷೆ ಮಾಡುವ ಮೂಲಕ ಮತ್ತು ಗಾಯವನ್ನು ಹೋಲಿಸುವ ಮೂಲಕ, ಇದು ಕುಡುಗೋಲಿನಿಂದಲೇ ಆಗಿರುವ ಕೊಲೆ ಎಂದು ಅವನು ಅರಿಕೊಳ್ಳುತ್ತಾನೆ) ರಕ್ತದ ವಾಸನೆಯಿಂದ ಆಕರ್ಷಿಸಲ್ಪಟ್ಟ ನೊಣಗಳು ಅಂತಿಮವಾಗಿ ಒಂದು ಏಕೈಕ ಕುಡುಗೋಲಿನ ಮೇಲೆ ಜಮಾವಣೆಗೊಳ್ಳುತ್ತವೆ. ಈ ಪರಿಗಣನೆಯ ಅನುಸಾರ, ಕೊಲೆಗಾರ ತಪ್ಪೊಪ್ಪಿಕೊಳ್ಳುತ್ತಾನೆ. ಒಂದು ಮುಳುಗಿಸಲ್ಪಟ್ಟಿರುವಿಕೆ (ಶ್ವಾಸಕೋಶಗಳಲ್ಲಿ ನೀರು ತುಂಬಿಕೊಂಡಿರುವುದು) ಹಾಗೂ ಕತ್ತು ಹಿಸುಕುವಿಕೆ (ಮುರಿದ ಕುತ್ತಿಗೆಯ ಮೃದ್ವಸ್ಥಿ) ಇವುಗಳ ನಡುವಿನ ವ್ಯತ್ಯಾಸವನ್ನು ಹೇಗೆ ಗುರುತಿಸಬೇಕು ಎಂಬುದರ ಕುರಿತೂ ಈ ಪುಸ್ತಕವು ಸಲಹೆ ನೀಡುತ್ತದೆ. ಅಷ್ಟೇ ಅಲ್ಲ, ಒಂದು ಸಾವು ಸಂಭವಿಸಿರುವುದು ಕೊಲೆಯಿಂದಲೋ, ಆತ್ಮಹತ್ಯೆಯಿಂದಲೋ ಅಥವಾ ಒಂದು ಅಪಘಾತದಿಂದಲೋ ಎಂಬುದನ್ನು ನಿರ್ಣಯಿಸುವುದಕ್ಕೆ ಸಂಬಂಧಿಸಿದಂತೆ ಕಳೇಬರಗಳನ್ನು ಪರೀಕ್ಷಿಸುವುದರಿಂದ ಸಿಗುವ ಪುರಾವೆಯ ಕುರಿತೂ ಈ ಪುಸ್ತಕವು ಸಲಹೆ ನೀಡುತ್ತದೆ. ಅರ್ಜೆಂಟೀನಾದಲ್ಲಿನ ಒಂದು ಕೊಲೆ ಪ್ರಕರಣದ ತನಿಖೆ ನಡೆಸುವಾಗ, ಜುವಾನ್‌ ವುಸೆಟಿಕ್‌‌ ಎಂಬಾತ ಬಾಗಿಲಿನ ಮೇಲೆ ಇರುವ ಒಂದು ರಕ್ತಸಿಕ್ತ ಬೆರಳಗುರುತನ್ನು ಕಂಡು, ಬಾಗಿಲಿನ ಆ ತುಣುಕನ್ನು ಕತ್ತರಿಸಿಕೊಂಡು ಹೋಗುವ ಮೂಲಕ ಸದರಿ ಕೊಲೆ ಪ್ರಕರಣವನ್ನು ಭೇದಿಸಿದಾಗ, ಪುರಾವೆಯೊಂದಕ್ಕೆ ಸಂಬಂಧಿಸಿದಂತೆ ಬೆರಳಗುರುತುಗಳನ್ನು ಬಳಸಿಕೊಳ್ಳುವ ಪರಿಪಾಠವನ್ನು ಆರಕ್ಷಕರು ಪ್ರಾರಂಭಿಸಿದರು.[]

ಆಧುನಿಕ ಚರಿತ್ರೆ

ಬದಲಾಯಿಸಿ

ಹದಿನಾರನೇ ಶತಮಾನದ ಕಾಲದ ಯುರೋಪ್‌ನಲ್ಲಿ, ಭೂಸೇನೆ ಹಾಗೂ ವಿಶ್ವವಿದ್ಯಾಲಯದ ವ್ಯವಸ್ಥೆಗಳಲ್ಲಿನ ವೈದ್ಯಕೀಯ ವೃತ್ತಿಗಾರರು ಸಾವಿನ ಕಾರಣ ಹಾಗೂ ಅದರ ಬಗೆಯ ಕುರಿತಾದ ಮಾಹಿತಿಯನ್ನು ಒಟ್ಟುಗೂಡಿಸಲು ಶುರುಮಾಡಿದರು. ಫ್ರೆಂಚ್‌ ಭೂಸೇನೆಯ ಓರ್ವ ಶಸ್ತ್ರಚಿಕಿತ್ಸಾ ತಜ್ಞನಾಗಿದ್ದ ಆಂಬ್ರೋಯ್ಸ್‌ ಪಾರೇ ಎಂಬಾತ, ಆಂತರಿಕ ಅಂಗಗಳ ಮೇಲೆ ದುರ್ಮರಣವು ಬೀರುವ ಪರಿಣಾಮಗಳ ಕುರಿತು ಕ್ರಮಬದ್ಧವಾಗಿ ಅಧ್ಯಯನಮಾಡಿದ. ಇಟಲಿಯ ಫಾರ್ಚುನೇಟೊ ಫಿಡೆಲಿಸ್‌ ಹಾಗೂ ಪಾವೊಲೊ ಝಕಿಯಾ ಎಂಬ ಇಬ್ಬರು ಶಸ್ತ್ರಚಿಕಿತ್ಸಾ ತಜ್ಞರು, ಕಾಯಿಲೆಯ ಪರಿಣಾಮವಾಗಿ ದೇಹದ ರಚನೆಯಲ್ಲಿ ಸಂಭವಿಸಿದ ಬದಲಾವಣೆಗಳನ್ನು ಅಧ್ಯಯನ ಮಾಡುವ ಮೂಲಕ, ಆಧುನಿಕ ರೋಗನಿದಾನಶಾಸ್ತ್ರದ ಬುನಾದಿಯನ್ನು ಹಾಕಿದರು. 1700ರ ದಶಕದ ಅಂತ್ಯದಲ್ಲಿ ಈ ವಿಷಯಗಳ ಕುರಿತಾದ ಬರಹಗಳು ಕಾಣಿಸಿಕೊಳ್ಳಲು ಪ್ರಾರಂಭಿಸಿದವು. ಫೊಡೆರೆ ಎಂಬ ಫ್ರೆಂಚ್‌ ವೈದ್ಯನಿಂದ ಬರೆಯಲ್ಪಟ್ಟ ಎ ಟ್ರೀಟೈಸ್‌ ಆನ್‌ ಫರೆನ್ಸಿಕ್‌ ಮೆಡಿಸಿನ್‌ ಅಂಡ್‌ ಪಬ್ಲಿಕ್‌ ಹೆಲ್ತ್‌‌ , ಹಾಗೂ ಜೋಹಾನ್‌ ಪೀಟರ್‌ ಫ್ರಾಂಕ್‌‌ ಎಂಬ ಜರ್ಮನ್‌‌ ವೈದ್ಯಕೀಯ ಪರಿಣಿತನಿಂದ ಬರೆಯಲ್ಪಟ್ಟ ದಿ ಕಂಪ್ಲೀಟ್‌ ಸಿಸ್ಟಮ್‌ ಆಫ್‌ ಪೊಲೀಸ್‌ ಮೆಡಿಸಿನ್‌ ಈ ಬರಹಗಳಲ್ಲಿ ಸೇರಿದ್ದವು.

1776ರಲ್ಲಿ, ಕಾರ್ಲ್‌ ವಿಲ್‌ಹೆಲ್ಮ್‌ ಸ್ಕೀಲ್‌ ಎಂಬ ಸ್ವೀಡಿಷ್‌ ರಸಾಯನ ಶಾಸ್ತ್ರಜ್ಞನು ಕಳೇಬರಗಳಲ್ಲಿ ಕಂಡುಬರುವ ಒಂದು ಸರಳ ಆರ್ಸೆನಿಕ್‌‌ ಆದ ಆರ್ಸೆನಸ್‌ ಆಕ್ಸೈಡ್‌ನ್ನು ಪತ್ತೆಹಚ್ಚುವ ಒಂದು ವಿಧಾನವನ್ನು ರೂಪಿಸಿದ; ಆದರೂ ಇದು ಬೃಹತ್‌‌ ಪ್ರಮಾಣಗಳಲ್ಲಿತ್ತು. ವ್ಯಾಲೆಂಟಿನ್‌ ರಾಸ್‌ ಎಂಬ ಜರ್ಮನ್‌‌ ರಸಾಯನ ಶಾಸ್ತ್ರಜ್ಞನಿಂದ 1806ರಲ್ಲಿ ಈ ತನಿಖೆಯು ವಿಸ್ತರಿಸಲ್ಪಟ್ಟಿತು; ಓರ್ವ ತೊಂದರೆಗೀಡಾದವನ ಜಠರದ ಭಿತ್ತಿಗಳಲ್ಲಿನ ವಿಷವನ್ನು ಪತ್ತೆಹಚ್ಚುವುದನ್ನು ಅವನು ಕಲಿತ. ನಂತರ ಜೇಮ್ಸ್‌ ಮಾರ್ಷ್‌ ಎಂಬ ಇಂಗ್ಲಿಷ್‌ ರಸಾಯನ ಶಾಸ್ತ್ರಜ್ಞನು, 1836ರಲ್ಲಿ ನಡೆದ ಕೊಲೆ ವಿಚಾರಣೆಯೊಂದರಲ್ಲಿ ಸದರಿ ಸಾವಿಗೆ ಆರ್ಸೆನಿಕ್‌‌ ಕಾರಣ ಎಂದು ದೃಢೀಕರಿಸಲು ರಾಸಾಯನಿಕ ಪ್ರಕ್ರಿಯೆಗಳನ್ನು ಬಳಸಿಕೊಳ್ಳುವ ಮೂಲಕ ಇದಕ್ಕೆ ಒತ್ತಾಸೆಯಾಗಿ ನಿಂತ.

ಅಪರಾಧದ ತನಿಖೆಗಳಲ್ಲಿ ಹೆಚ್ಚುತ್ತಿರುವ ತರ್ಕಶಾಸ್ತ್ರ ಹಾಗೂ ನ್ಯಾಯವಿಧಾನದ ಬಳಕೆಯನ್ನು ಪ್ರತ್ಯೇಕ ಕಾಯಿದೆ ಕ್ರಮಗಳಲ್ಲಿರುವ ಇಂಗ್ಲಿಷ್‌ ನ್ಯಾಯ ವಿಜ್ಞಾನದ ಎರಡು ಆರಂಭಿಕ ಉದಾಹರಣೆಗಳು ನಿರೂಪಿಸುತ್ತವೆ. ಒಂದು ಪಿಸ್ತೂಲು ಬಳಸಿಕೊಂಡು ಎಡ್ವರ್ಡ್‌ ಕುಲ್ಷಾ ಎಂಬಾತತನ್ನು ಕೊಂದಿದ್ದಕ್ಕಾಗಿ 1784ರಲ್ಲಿ, ಲ್ಯಾಂಕಾಸ್ಟರ್‌‌‌‌‌ನಲ್ಲಿ ಜಾನ್‌ ಟಾಮ್ಸ್‌‌ ಎಂಬಾತನ ವಿಚಾರಣೆ ನಡೆಸಲಾಯಿತು ಮತ್ತು ತಪ್ಪಿತಸ್ಥನೆಂದು ನಿರ್ಣಯಿಸಲಾಯಿತು. ಕುಲ್ಷಾನ ಮೃತದೇಹವನ್ನು ಪರೀಕ್ಷೆ ಮಾಡಿದಾಗ, ಅವನ ತಲೆಯ ಗಾಯದಲ್ಲಿ ಕಂಡುಬಂದ ಪಿಸ್ತೂಲಿನ ಒಂದು ಮೆದುಬಿರಡೆಯು (ಬಂದೂಕಿನ ತೆರೆದ ತುದಿಯಲ್ಲಿನ ಪುಡಿ ಮತ್ತು ಗುಂಡುಗಳನ್ನು ಸಂಗ್ರಹಿಸಲು ಬಳಸಲಾದ ಮುದುರಿದ ಕಾಗದ) ಟಾಮ್ಸ್‌ನ ಜೇಬಿನಲ್ಲಿ ಕಂಡುಬಂದ ಒಂದು ಹರಿದ ವೃತ್ತಪತ್ರಿಕೆಯೊಂದಿಗೆ ನಿಖರವಾಗಿ ಹೊಂದಿಕೊಂಡಿತು. 1816ರಲ್ಲಿ ವಾರ್ವಿಕ್‌‌‌ನಲ್ಲಿ, ಕಿರಿಯ ವಯಸ್ಸಿನ ಓರ್ವ ಮನೆಗೆಲಸದವಳನ್ನು ಕೊಲೆಮಾಡಿದ್ದಕ್ಕಾಗಿ ಓರ್ವ ಹೊಲದ ಕೂಲಿಕಾರನ ವಿಚಾರಣೆಯನ್ನು ನಡೆಸಿ ತಪ್ಪಿತಸ್ಥನೆಂದು ನಿರ್ಣಯಿಸಲಾಯಿತು. ಅವಳನ್ನು ಒಂದು ಆಳವಿಲ್ಲದ ಕೊಳದಲ್ಲಿ ಮುಳುಗಿಸಲಾಗಿತ್ತು ಹಾಗೂ ಬಲವಂತದ ಅತ್ಯಾಚಾರದ ಗುರುತುಗಳನ್ನು ಅವಳು ಹೊಂದಿದ್ದಳು. ಕೊಳದ ಸಮೀಪವಿರುವ ಒದ್ದೆ ಮಣ್ಣಿನಲ್ಲಿ, ಪಾದದ ಗುರುತುಗಳು ಹಾಗೂ ಒಂದು ಹೊಲಿದ ತೇಪೆಯೊಂದಿಗಿನ ಒರಟು ಹುರಿಬಟ್ಟೆಯಿಂದ ಮೂಡಿದ ಒಂದು ಗುರುತನ್ನು ಆರಕ್ಷಕರು ಕಂಡರು. ಗೋಧಿಯ ಚೆದುರಿದ ಕಾಳುಗಳು ಹಾಗೂ ಕೊಯ್ದ ಹುಲ್ಲೂ ಸಹ ಅಲ್ಲಿ ಕಂಡುಬಂದವು. ಸನಿಹದಲ್ಲಿಯೇ ಗೋಧಿಯ ತೆನೆಬಡಿಯುತ್ತಿದ್ದ ಓರ್ವ ಹೊಲದ ಕೂಲಿಕಾರನ ತುಂಡು ಷರಾಯಿಗಳನ್ನು ಅವಲೋಕಿಸಲಾಯಿತು ಮತ್ತು ಕೊಳದ ಸಮೀಪದ ಮಣ್ಣಿನಲ್ಲಿದ್ದ ಗುರುತಿಗೆ ಅವು ನಿಖರವಾಗಿ ಸಂಬಂಧಿಸಿದ್ದವು.[] ನಂತರ 20ನೇ ಶತಮಾನದಲ್ಲಿ, ಫ್ರಾನ್ಸಿಸ್‌ ಕ್ಯಾಂಪ್ಸ್‌‌, ಸಿಡ್ನಿ ಸ್ಮಿತ್ಸ್‌ ಹಾಗೂ ಕೀತ್‌ ಸಿಂಪ್ಸನ್‌‌‌‌ರಂಥ ಹಲವಾರು ಬ್ರಿಟಿಷ್‌ ರೋಗಶಾಸ್ತ್ರಜ್ಞರು ಬ್ರಿಟನ್‌ನಲ್ಲಿ ಹೊಸ ನ್ಯಾಯ ವಿಜ್ಞಾನ ವಿಧಾನಗಳ ಪಥನಿರ್ಮಾಣ ಮಾಡಿದರು. 1909ರಲ್ಲಿ ರೊಡೊಲ್ಫೆ ಆರ್ಕಿಬಾಲ್ಡ್‌ ರೀಸ್‌ ಎಂಬಾತ ವಿಶ್ವದಲ್ಲಿನ ಮೊದಲ ನ್ಯಾಯ ವಿಜ್ಞಾನದ ಶಾಲೆಯನ್ನು ಸಂಸ್ಥಾಪಿಸಿದ: "ಇನ್‌ಸ್ಟಿಟ್ಯೂಟ್‌ ಡೆ ಪೊಲೀಸ್‌ ಸೈಂಟಿಫಿಕ್‌" ಎಂಬ ಈ ಶಾಲೆಯು ಲೌಸಾನ್ನೆ ವಿಶ್ವವಿದ್ಯಾಲಯದ (UNIL) ವ್ಯಾಪ್ತಿಯಲ್ಲಿ ನೆಲೆಗೊಂಡಿತು.

ಉಪವಿಭಾಗಗಳು

ಬದಲಾಯಿಸಿ
 
ಅಮೆರಿಕಾ ಸಂಯುಕ್ತ ಸಂಸ್ಥಾನಗಳ ಭೂಸೇನಾ ಅಪರಾಧಿ ತನಿಖಾ ವಿಭಾಗದ ಅಧಿಕಾರಿಗಳು ಒಂದು ಅಪರಾಧ ಸನ್ನಿವೇಶದ ತನಿಖೆ ನಡೆಸುತ್ತಿರುವುದು.
  • ನ್ಯಾಯ ವಿಜ್ಞಾನದ ದಾಖಲಿಸುವಿಕೆ ಎಂಬುದು ಪುರಾವೆಯನ್ನು ದಾಖಲಿಸುವುದರ ಕುರಿತಾದ ಅಧ್ಯಯನ ಹಾಗೂ ಅರ್ಥಕಲ್ಪನೆಯಾಗಿದೆ.
  • ನ್ಯಾಯ ವಿಜ್ಞಾನದ ಮಾನವಶಾಸ್ತ್ರ ಎಂಬುದು ಕಾನೂನು ಸನ್ನಿವೇಶವೊಂದರಲ್ಲಿ ಮಾಡಲಾಗುವ ಭೌತಿಕ ಮಾನವಶಾಸ್ತ್ರದ ಅನ್ವಯಿಸುವಿಕೆಯಾಗಿದ್ದು, ಅಸ್ಥಿಪಂಜರವಾಗಿಸಲ್ಪಟ್ಟ ಮಾನವ ಅವಶೇಷಗಳ ಪುನರ್ವಶ ಹಾಗೂ ಗುರುತಿಸುವಿಕೆಗೆ ಸಂಬಂಧಿಸಿದಂತೆ ಸಾಮಾನ್ಯವಾಗಿ ಬಳಸಲ್ಪಡುತ್ತದೆ.
  • ನ್ಯಾಯ ವಿಜ್ಞಾನದ ಪ್ರಾಕ್ತನಶಾಸ್ತ್ರ ಎಂಬುದು ಪ್ರಾಕ್ತನ ಶಾಸ್ತ್ರದ ಕೌಶಲಗಳು ಹಾಗೂ ನ್ಯಾಯ ವಿಜ್ಞಾನದ ಒಂದು ಸಂಯೋಜನೆಯ ಅನ್ವಯಿಸುವಿಕೆಯಾಗಿದ್ದು, ಕಾನೂನಿನ ವಿಧಿಸುವಿಕೆಯಲ್ಲಿ ಇದು ವಿಶಿಷ್ಟವಾಗಿ ಬಳಸಲ್ಪಡುತ್ತದೆ.
  • ನ್ಯಾಯ ವಿಜ್ಞಾನದ ಖಗೋಳ ವಿಜ್ಞಾನವು ನ್ಯಾಯ ವಿಜ್ಞಾನದ ಉದ್ದೇಶಗಳಿಗೆ ಸಂಬಂಧಿಸಿದಂತೆ ಹಿಂದಿನ ಖಗೋಳ ನಕ್ಷತ್ರಪುಂಜಗಳನ್ನು ನಿರ್ಣಯಿಸಲು ಖಗೋಳ ವಿಜ್ಞಾನಕ್ಕೆ ಸೇರಿದ ವಿಧಾನಗಳನ್ನು ಬಳಕೆಮಾಡಿಕೊಳ್ಳುತ್ತದೆ.
  • ನ್ಯಾಯ ವಿಜ್ಞಾನದ ಸಸ್ಯವಿಜ್ಞಾನ ಎಂಬುದು ಸಂಭವನೀಯ ಅಪರಾಧಗಳಿಗೆ ಸಂಬಂಧಿಸಿದಂತೆ ಮಾಹಿತಿಯನ್ನು ಗಳಿಸುವ ದೃಷ್ಟಿಯಿಂದ ಮಾಡಲಾಗುವ ಸಸ್ಯ ಜೀವನದ ಅಧ್ಯಯನವಾಗಿದೆ.
  • ನ್ಯಾಯ ವಿಜ್ಞಾನದ ರಸಾಯನ ಶಾಸ್ತ್ರ ಎಂಬುದು ನ್ಯಾಯಬಾಹಿರ ಮಾದಕ ವಸ್ತುಗಳು, ಬೆಂಕಿ ಹಚ್ಚುವ ಪ್ರಕರಣಗಳಲ್ಲಿ ಬಳಸಲಾಗುವ ವೇಗವರ್ಧಕಗಳು, ಸ್ಫೋಟಕ ವಸ್ತು ಹಾಗೂ ಬಂದೂಕು ಹೊಡೆತದ ಅವಶೇಷದ ಪತ್ತೆಹಚ್ಚುವಿಕೆ ಹಾಗೂ ಗುರುತಿಸುವಿಕೆಗೆ ಸಂಬಂಧಿಸಿದ ಅಧ್ಯಯನವಾಗಿದೆ.
  • ಲೆಕ್ಕ ಹಾಕುವಿಕೆಯ ನ್ಯಾಯ ವಿಜ್ಞಾನವು ನ್ಯಾಯ ವಿಜ್ಞಾನದ ಪರೀಕ್ಷೆಯಲ್ಲಿ ನೆರವಾಗುವುದಕ್ಕೆ ಅಗತ್ಯವಿರುವ ಅಂಕಗಣಿತ ಪದ್ಧತಿಗಳು ಹಾಗೂ ತಂತ್ರಾಂಶದ ಅಭಿವೃದ್ಧಿಯ ಕಡೆಗೆ ಕಾಳಜಿ ವಹಿಸುತ್ತದೆ.
  • ಅಪರಾಧ ಶಾಸ್ತ್ರ ಎಂಬುದು ಅಪರಾಧದ ತನಿಖೆಗಳಲ್ಲಿ ಕಂಡುಬರುವ ಪ್ರಶ್ನೆಗಳಿಗೆ ಉತ್ತರಿಸಲು ಬಳಸಲಾಗುವ ಹಲವಾರು ವಿಜ್ಞಾನಗಳ ಅನ್ವಯಿಸುವಿಕೆಯಾಗಿದೆ. ಅಂದರೆ, ಜೀವವಿಜ್ಞಾನದ ಪುರಾವೆ, ಜಾಡಿನ ಪುರಾವೆ, ಗುರುತಿನ ಪುರಾವೆ (ಬೆರಳ ಗುರುತುಗಳು, ಪಾದರಕ್ಷೆಯ ಗುರುತುಗಳು, ಮತ್ತು ಟೈರಿನ ಜಾಡುಗಳ ರೀತಿಯವು), ನಿಯಂತ್ರಿತ ವಸ್ತುಗಳು, ಕ್ಷಿಪಣಿ ವಿಜ್ಞಾನ, ಬಂದೂಕು ಹಾಗೂ ಉಪಕರಣದ ಗುರುತು ಪರೀಕ್ಷೆ, ಮತ್ತು ಇತರ ಪುರಾವೆಯ ಪರೀಕ್ಷೆ ಹಾಗೂ ಹೋಲಿಕೆಗೆ ಸಂಬಂಧಿಸಿದ ಪ್ರಶ್ನೆಗಳಿಗೆ ಉತ್ತರಿಸಲು ಅಪರಾಧ ಶಾಸ್ತ್ರವು ಬಳಕೆಯಾಗುತ್ತದೆ. ವಿಶಿಷ್ಟ ಸಂದರ್ಭಗಳಲ್ಲಿ, ಪುರಾವೆಯು ಒಂದು ಅಪರಾಧ ಪ್ರಯೋಗಾಲಯದಲ್ಲಿ ಸಂಸ್ಕರಿಸಲ್ಪಡುತ್ತದೆ.
  • ನ್ಯಾಯ ವಿಜ್ಞಾನದ ಬೆರಳುಮುದ್ರೆಯ ಕೌಶಲ ಎಂಬುದು ಬೆರಳ ಗುರುತುಗಳ ಅಧ್ಯಯನವಾಗಿದೆ.
  • ಅಂಕೀಯ ನ್ಯಾಯ ವಿಜ್ಞಾನ ಎಂಬುದು ವಿದ್ಯುನ್ಮಾನ / ಅಂಕೀಯ ಮಾಧ್ಯಮದಿಂದ ದತ್ತಾಂಶವನ್ನು ಪುನರ್ವಶ ಮಾಡಿಕೊಳ್ಳುವ ದೃಷ್ಟಿಯಿಂದ ಮಾಡಲಾಗುವ ಸಾಬೀತಾದ ವೈಜ್ಞಾನಿಕ ವಿಧಾನಗಳು ಮತ್ತು ಕೌಶಲಗಳ ಬಳಕೆಯಾಗಿದೆ. ಅಂಕೀಯ ನ್ಯಾಯ ವಿಜ್ಞಾನದ ಪರಿಣಿತರು ಕ್ಷೇತ್ರಕಾರ್ಯದಲ್ಲಷ್ಟೇ ಅಲ್ಲದೇ ಪ್ರಯೋಗಾಲಯದಲ್ಲೂ ತಮ್ಮನ್ನು ತೊಡಗಿಸಿಕೊಳ್ಳುತ್ತಾರೆ.
  • ನ್ಯಾಯ ವಿಜ್ಞಾನದ ದಸ್ತಾವೇಜು ಪರೀಕ್ಷೆ ಅಥವಾ ಪ್ರಶ್ನಿಸಲ್ಪಟ್ಟ ದಸ್ತಾವೇಜು ಪರೀಕ್ಷೆಯು ಒಂದು ವೈವಿಧ್ಯಮಯ ವೈಜ್ಞಾನಿಕ ಪ್ರಕ್ರಿಯೆಗಳು ಹಾಗೂ ವಿಧಾನಗಳನ್ನು ಬಳಸಿಕೊಳ್ಳುವ ಮೂಲಕ ಒಂದು ವಿವಾದಿತ ದಸ್ತಾವೇಜಿನ ಕುರಿತಾದ ಪ್ರಶ್ನೆಗಳಿಗೆ ಉತ್ತರಿಸುತ್ತದೆ. ತಿಳಿದಿರುವ ಮಾನದಂಡಗಳ ಒಂದು ವರ್ಗಕ್ಕೆ, ಪ್ರಶ್ನಿಸಲ್ಪಟ್ಟ ದಸ್ತಾವೇಜಿನ, ಅಥವಾ ದಸ್ತಾವೇಜಿನ ಅಂಶಗಳ ಒಂದು ಹೋಲಿಕೆ ಮಾಡುವುದನ್ನು ಅನೇಕ ಪರೀಕ್ಷೆಗಳು ಒಳಗೊಳ್ಳುತ್ತವೆ. ಅತ್ಯಂತ ಸಾಮಾನ್ಯ ಬಗೆಯ ಪರೀಕ್ಷೆಯು ಕೈಬರಹವನ್ನು ಒಳಗೊಂಡಿದ್ದು, ಸಂಭಾವ್ಯ ಕರ್ತೃತ್ವದ ಕುರಿತಾದ ಕಾಳಜಿಗಳನ್ನು ಪರಿಹರಿಸಲು ಪರೀಕ್ಷಕನು ಪ್ರಯತ್ನಿಸುತ್ತಾನೆ.
  • ನ್ಯಾಯ ವಿಜ್ಞಾನದ DNA ವಿಶ್ಲೇಷಣೆಯು, ಪಿತೃತ್ವ/ಮಾತೃತ್ವ ಪರೀಕ್ಷಿಸುವಿಕೆಯಂಥ ಸನ್ನಿವೇಶದಲ್ಲಿ ಅಥವಾ ಒಂದು ಅಪರಾಧದ ಸನ್ನಿವೇಶದಲ್ಲಿ, ಉದಾಹರಣೆಗೆ ಒಂದು ಅತ್ಯಾಚಾರದ ತನಿಖೆಯಲ್ಲಿ ಸಂದೇಹವೊಂದನ್ನು ಇರಿಸುವಂಥ ನ್ಯಾಯ ವಿಜ್ಞಾನದ ಪ್ರಶ್ನೆಗಳಿಗೆ ಉತ್ತರಿಸಲು ಓರ್ವ ವ್ಯಕ್ತಿಯ DNAಯ ಅನನ್ಯತೆಯ ಪ್ರಯೋಜನವನ್ನು ತೆಗೆದುಕೊಳ್ಳುತ್ತದೆ.
  • ನ್ಯಾಯ ವಿಜ್ಞಾನದ ಎಂಜಿನಿಯರಿಂಗ್‌ ಎಂಬುದು ರಚನೆಗಳು ಮತ್ತು ಉತ್ಪನ್ನಗಳ ವೈಫಲ್ಯ ಅಥವಾ ಹಾನಿಯ ಕಾರಣಕ್ಕೆ ಸಂಬಂಧಿಸಿದಂತೆ ನಡೆಸಲಾಗುವ ಅವುಗಳ ವೈಜ್ಞಾನಿಕ ಪರೀಕ್ಷೆ ಹಾಗೂ ವಿಶ್ಲೇಷಣೆಯಾಗಿದೆ.
  • ನ್ಯಾಯ ವಿಜ್ಞಾನದ ಕೀಟಶಾಸ್ತ್ರವು, ಸಾವಿನ ಸಮಯ ಅಥವಾ ತಾಣವನ್ನು ನಿರ್ಣಯಿಸುವಲ್ಲಿ ನೆರವಾಗಲು ಮಾನವ ಅವಶೇಷಗಳ ಒಳಗೆ, ಮೇಲ್ಭಾಗದಲ್ಲಿ ಹಾಗೂ ಸುತ್ತುಮುತ್ತ ಇರುವ ಕೀಟಗಳ ಪರೀಕ್ಷೆ ಮಾಡುವುದನ್ನು ಒಳಗೊಳ್ಳುತ್ತದೆ. ಒಂದು ವೇಳೆ ಸಾವಿನ ನಂತರ ದೇಹದ ಸ್ಥಳ ಬದಲಾವಣೆಯನ್ನು ಮಾಡಿದ್ದರೆ, ಅದನ್ನೂ ನಿರ್ಣಯಿಸುವುದು ಇದರಿಂದ ಸಾಧ್ಯವಿದೆ.
  • ನ್ಯಾಯ ವಿಜ್ಞಾನದ ಭೂವಿಜ್ಞಾನವು ಮಣ್ಣುಗಳು, ಖನಿಜಗಳು ಹಾಗೂ ಪೆಟ್ರೋಲಿಯಂ ಮೊದಲಾದವುಗಳ ಸ್ವರೂಪದಲ್ಲಿ ಮಾಡುವ ಜಾಡಿನ ಪುರಾವೆಗೆ ಸಂಬಂಧಿಸಿದ ಅಧ್ಯಯನವಾಗಿದೆ.
  • ನ್ಯಾಯ ವಿಜ್ಞಾನದ ಸರೋವರ ವಿಜ್ಞಾನ ಎಂಬುದು ಸಿಹಿ ನೀರಿನ ಮೂಲಗಳಲ್ಲಿ ಅಥವಾ ಸುತ್ತಲೂ ಇರುವ ಅಪರಾಧದ ಘಟನಸ್ಥಾನದಿಂದ ಸಂಗ್ರಹಿಸಲಾದ ಪುರಾವೆಯ ವಿಶ್ಲೇಷಣೆಯಾಗಿದೆ. ಜೀವವಿಜ್ಞಾನದ ಜೀವಿಗಳ, ಅದರಲ್ಲೂ ನಿರ್ದಿಷ್ಟವಾಗಿ ಏಕಾಣು ಶೈವಲಗಳ ಪರೀಕ್ಷೆಯು, ತೊಂದರೆಗೀಡಾದವರೊಂದಿಗೆ ಸಂದೇಹಗಳನ್ನು ಸಂಬಂಧ ಕಲ್ಪಿಸುವಲ್ಲಿ ಪ್ರಯೋಜನಕಾರಿಯಾಗಬಲ್ಲದು.
  • ನ್ಯಾಯ ವಿಜ್ಞಾನದ ಭಾಷಾಶಾಸ್ತ್ರವು ಕಾನೂನು ವ್ಯವಸ್ಥೆಯಲ್ಲಿನ ಭಾಷಾಶಾಸ್ತ್ರದ ಪರಿಣತಿಯ ಅಗತ್ಯವನ್ನು ಹೊಂದಿರುವ ವಿವಾದಾಂಶಗಳೊಂದಿಗೆ ವ್ಯವಹರಿಸುತ್ತದೆ.
  • ನ್ಯಾಯ ವಿಜ್ಞಾನದ ಪವನಶಾಸ್ತ್ರ ಎಂಬುದು ಒಂದು ನಷ್ಟದ ಅಂಶಕ್ಕೆ ಸಂಬಂಧಿಸಿದಂತಿರುವ, ಹಿಂದಿನ ಹವಾಮಾನದ ಸ್ಥಿತಿಗತಿಗಳ ಒಂದು ತಾಣ ಉದ್ದೇಶಿತ ವಿಶ್ಲೇಷಣೆಯಾಗಿದೆ.
  • ನ್ಯಾಯ ವಿಜ್ಞಾನದ ದಂತಶಾಸ್ತ್ರ ಎಂಬುದು ಹಲ್ಲುಗಳ ಅಧ್ಯಯನ ಎಂದೇ ಹೆಸರಾಗಿರುವ ದಂತವಿನ್ಯಾಸದ ಅನನ್ಯತೆಯ ಅಧ್ಯಯನವಾಗಿದೆ.
  • ನ್ಯಾಯ ವಿಜ್ಞಾನದ ದೃಷ್ಟಿಮಾಪನ ಎಂಬುದು ಅಪರಾಧ ಘಟನಸ್ಥಾನಗಳು ಹಾಗೂ ಅಪರಾಧದ ತನಿಖೆಗಳಿಗೆ ಸಂಬಂಧಿಸಿರುವ ಕನ್ನಡಕಗಳು ಮತ್ತು ಕಣ್ಣಿನ ಇತರ ಧಾರಣೆಗಳ ಅಧ್ಯಯನವಾಗಿದೆ.
  • ನ್ಯಾಯ ವಿಜ್ಞಾನದ ರೋಗನಿದಾನಶಾಸ್ತ್ರ ಎಂಬುದು ಒಂದು ಕ್ಷೇತ್ರವಾಗಿದ್ದು, ಒಂದು ಕಾನೂನು ವಿಚಾರಣೆಯ ಸಂದರ್ಭದಲ್ಲಿ ಸಾವು ಅಥವಾ ಪೆಟ್ಟಿನ ಕಾರಣವೊಂದನ್ನು ನಿರ್ಣಯಿಸಲು ಔಷಧಿ ಹಾಗೂ ರೋಗನಿದಾನಶಾಸ್ತ್ರದ ತತ್ತ್ವಗಳನ್ನು ಬಳಸುವುದನ್ನು ಇದು ಒಳಗೊಳ್ಳುತ್ತದೆ.
  • ನ್ಯಾಯ ವಿಜ್ಞಾನದ ಮನಶ್ಯಾಸ್ತ್ರ ಎಂಬುದು ನ್ಯಾಯ ವಿಜ್ಞಾನದ ವಿಧಾನಗಳನ್ನು ಬಳಸಿಕೊಂಡು ಮಾಡುವ ಓರ್ವ ವ್ಯಕ್ತಿಯ ಮನಸ್ಸಿನ ಅಧ್ಯಯನವಾಗಿದೆ. ಓರ್ವ ಅಪರಾಧಿಯ ವರ್ತನೆಯ ಹಿಂದಿರುವ ಸಂದರ್ಭಗಳನ್ನು ಇದು ಸಾಮಾನ್ಯವಾಗಿ ನಿರ್ಣಯಿಸುತ್ತದೆ.
  • ನ್ಯಾಯ ವಿಜ್ಞಾನದ ಭೂಕಂಪಶಾಸ್ತ್ರ ಎಂಬುದು ನೆಲದಡಿಯ ಪರಮಾಣು ಸಿಡಿತಗಳಿಂದ ಸೃಷ್ಟಿಯಾದ ಭೂಕಂಪ ಸಂಬಂಧಿ ಸಂಕೇತಗಳು ಹಾಗೂ ಭೂಕಂಪಗಳಿಂದ ಸೃಷ್ಟಿಯಾದ ಭೂಕಂಪ ಸಂಬಂಧಿ ಸಂಕೇತಗಳ ನಡುವಿನ ವ್ಯತ್ಯಾಸವನ್ನು ಗುರುತಿಸಲು ಬಳಸಲಾಗುವ ಕೌಶಲಗಳ ಅಧ್ಯಯನವಾಗಿದೆ.
  • ನ್ಯಾಯ ವಿಜ್ಞಾನದ ಸೀರಮ್‌ ಶಾಸ್ತ್ರ ಎಂಬುದು ದೇಹ ಸ್ರಾವಗಳ ಕುರಿತಾದ ಅಧ್ಯಯನವಾಗಿದೆ.[]
  • ನ್ಯಾಯ ವಿಜ್ಞಾನದ ವಿಷಶಾಸ್ತ್ರ ಎಂಬುದು ಮಾನವ ದೇಹದ ಮೇಲಿನ ಅಥವಾ ಅದರಲ್ಲಿನ ಮಾದಕ ವಸ್ತುಗಳು ಹಾಗೂ ವಿಷಗಳ ಪರಿಣಾಮದ ಕುರಿತಾದ ಅಧ್ಯಯನವಾಗಿದೆ.
  • ನ್ಯಾಯ ವಿಜ್ಞಾನದ ವಿಡಿಯೊ ವಿಶ್ಲೇಷಣೆ ಎಂಬುದು ಕಾನೂನು ವಿಷಯಗಳಲ್ಲಿ ಕಂಡುಬರುವ ವಿಡಿಯೋದ ವೈಜ್ಞಾನಿಕ ಪರೀಕ್ಷೆ, ಹೋಲಿಕೆ, ಹಾಗೂ ಮೌಲ್ಯಮಾಪನವಾಗಿದೆ.
  • ಜಾಡಿನ ಪುರಾವೆಯ ವಿಶ್ಲೇಷಣೆ ಎಂಬುದು ಗಾಜು, ಬಣ್ಣ, ನಾರುಗಳು, ಕೂದಲು, ಇತ್ಯಾದಿಗಳನ್ನು ಒಳಗೊಂಡಂತೆ ಜಾಡಿನ ಪುರಾವೆಯ ವಿಶ್ಲೇಷಣೆ ಮತ್ತು ಹೋಲಿಕೆಯಾಗಿದೆ.
  • ನ್ಯಾಯ ವಿಜ್ಞಾನದ ಕಾಲಿನ ಔಷಧಶಾಸ್ತ್ರ ಎಂಬುದು ಅಪರಾಧದ ಘಟನಾ ಸ್ಥಳವನ್ನು ವಿಶ್ಲೇಷಿಸುವುದಕ್ಕೆ ಮತ್ತು ನ್ಯಾಯ ವಿಜ್ಞಾನದ ಪರೀಕ್ಷೆಗಳಲ್ಲಿ ವೈಯಕ್ತಿಕ ಗುರುತನ್ನು ಪ್ರಮಾಣಿಸುವುದಕ್ಕೆ ಸಂಬಂಧಿಸಿದಂತೆ, ಪಾದ, ಪಾದದ ಗುರುತು ಅಥವಾ ಪಾದರಕ್ಷೆಯ ಅಧ್ಯಯನ ಹಾಗೂ ಅವುಗಳ ಜಾಡುಗಳ ಒಂದು ಅನ್ವಯಿಸುವಿಕೆಯಾಗಿದೆ.

ನ್ಯಾಯ ವಿಜ್ಞಾನದ ಗಮನಾರ್ಹ ವಿಜ್ಞಾನಿಗಳು

ಬದಲಾಯಿಸಿ
  • ಮೈಕೇಲ್‌ ಬಡೆನ್‌ (1934 – )
  • ವಿಲಿಯಂ M. ಬಾಸ್‌
  • ‌ಜೋಸೆಫ್‌ ಬೆಲ್ (1837 – 1911)
  • ‌ಸಾರಾ C. ಬಿಸೆಲ್ (1932 – 1996)
  • ಎಲಿಸ್‌ R.ಕಿರ್ಲೆ (1924 – 1998)
  • ಪಾಲ್‌ L. ಕಿರ್ಕ್‌ (1902 – 1970)
  • ಕ್ಲಿಯಾ ಕೊಫ್‌ (1972 – )
  • K. ಕೃಷ್ಣನ್‌ (1973 - )
  • ವಿಲ್ಟನ್‌ M. ಕ್ರೊಗ್‌ಮನ್‌ (1903 – 1987)
  • ಹೆನ್ರಿ C. ಲೀ (1938 – )
  • ಎಡ್ಮಂಡ್‌ ಲೊಕಾರ್ಡ್‌ (1877 – 1966)
  • ವಿಲಿಯಂ R. ಮ್ಯಾಪಲ್ಸ್‌‌ (1937 – 1997)
  • ಕೀತ್‌ ಸಿಂಪ್ಸನ್‌ (1907 – 1985)
  • ಕ್ಲೈಡ್‌ ಸ್ನೊ (1928 – )
  • ಬೆರ್ನಾರ್ಡ್‌ ಸ್ಪಿಲ್ಸ್‌ಬರಿ (1877 – 1947)
  • ಅಗಸ್ಟೆ ಆಂ್ರೋಸ್‌ ಟಾರ್ಡಿಯು (1818 – 1879)
  • ಪಾಲ್‌ ಉಹ್ಲೆನಹತ್‌‌ (1870 – 1957)
  • ಸಿರಿಲ್‌ ವೆಕ್ಟ್‌‌ (1931 – )

ಪ್ರಶ್ನಾರ್ಹ ಕೌಶಲಗಳು

ಬದಲಾಯಿಸಿ

ತಾವು ಬಳಸಲ್ಪಟ್ಟ ಸಮಯದಲ್ಲಿ ವೈಜ್ಞಾನಿಕವಾಗಿ ದೃಢವಾದ ಕೌಶಲಗಳು ಎಂದು ನಂಬಲ್ಪಟ್ಟಿದ್ದ ಕೆಲವೊಂದು ನ್ಯಾಯ ವಿಜ್ಞಾನದ ಕೌಶಲಗಳು ಕಾಲಾನಂತರದಲ್ಲಿ ಕಡಿಮೆ ವೈಜ್ಞಾನಿಕ ಮೌಲ್ಯವನ್ನು ಹೊಂದಿರುವಂತೆ, ಅಥವಾ ಯಾವ ವೈಜ್ಞಾನಿಕ ಮೌಲ್ಯವನ್ನೂ ಹೊಂದಿರದ ಸ್ಥಿತಿಗೆ ಮಾರ್ಪಟ್ಟಿವೆ.[] ಅಂಥ ಕೆಲವೊಂದು ಕೌಶಲಗಳಲ್ಲಿ ಈ ಕೆಳಗಿನವು ಸೇರಿವೆ:

  • ಗುಂಡಿನ-ಸೀಸದ ತುಲನಾತ್ಮಕ ವಿಶ್ಲೇಷಣೆ ಎಂಬ ಕೌಶಲವನ್ನು, 1963ರಲ್ಲಿ ಆದ ಜಾನ್‌ F. ಕೆನಡಿ ಹತ್ಯೆಯಿಂದ ಮೊದಲ್ಗೊಂಡು ನಾಲ್ಕು ದಶಕಗಳಿಂದಲೂ FBI ಬಳಸಿಕೊಂಡು ಬಂದಿತು. ಈ ಸಿದ್ಧಾಂತದ ಅನುಸಾರ, ಸ್ಫೋಟಕ ಸಾಮಗ್ರಿಯ ಪ್ರತಿಯೊಂದು ಗುಂಪೂ ಹೊಂದಿದ್ದ ರಾಸಾಯನಿಕ ರಚನೆಯು ಎಷ್ಟೊಂದು ಸ್ಪಷ್ಟವಾಗಿತ್ತೆಂದರೆ, ಒಂದು ಗುಂಡನ್ನು ಅದು ಯಾವೊಂದು ನಿರ್ದಿಷ್ಟ ಗುಂಪಿಗೆ, ಅಥವಾ ಅಷ್ಟೇ ಏಕೆ, ಯಾವೊಂದು ನಿರ್ದಿಷ್ಟ ಪೆಟ್ಟಿಗೆ ಸೇರಿದೆ ಎಂಬ ರೀತಿಯಲ್ಲಿ ಅದರ ಮೂಲವನ್ನು ಗುರುತಿಸಲು ಸಾಧ್ಯವಿತ್ತು. ಆಂತರಿಕ ಅಧ್ಯಯನಗಳು ಹಾಗೂ ನ್ಯಾಷನಲ್‌ ಅಕಾಡೆಮಿ ಆಫ್‌ ಸೈನ್ಸಸ್‌ ವತಿಯಿಂದ ನಡೆಸಲ್ಪಟ್ಟ ಒಂದು ಹೊರಗಿನ ಅಧ್ಯಯನವು ಕಂಡುಕೊಂಡ ಪ್ರಕಾರ, ಈ ಕೌಶಲವು ನೆಚ್ಚಲಾಗದ ಸ್ವರೂಪವನ್ನು ಹೊಂದಿತ್ತು, ಮತ್ತು 2005ರಲ್ಲಿ ಸದರಿ ಪರೀಕ್ಷೆಯನ್ನು FBI ಕೈಬಿಟ್ಟಿತು.[]
  • ನ್ಯಾಯ ವಿಜ್ಞಾನದ ದಂತಚಿಕಿತ್ಸಾಶಾಸ್ತ್ರವು ಟೀಕೆಗಳಿಗೆ ಗುರಿಯಾಗಿದೆ; ಕನಿಷ್ಟಪಕ್ಷ ಎರಡು ಪ್ರಕರಣಗಳಲ್ಲಿ, ಕೊಲೆ ಮಾಡಿದ ತಪ್ಪಿತಸ್ಥರೆಂದು ನಿರ್ಣಯಿಸಲು ಕಚ್ಚಿದ ಗುರುತಿನ ಪುರಾವೆಯು ಬಳಸಲ್ಪಟ್ಟಿತ್ತು, ಆದರೆ ನಂತರ ಪಡೆಯಲಾದ DNA ಪುರಾವೆಯಿಂದಾಗಿ ಅವರನ್ನು ವಿಮುಕ್ತಿಗೊಳಿಸಲಾಯಿತು. ಅಮೆರಿಕನ್‌ ಬೋರ್ಡ್‌ ಆಫ್‌ ಫರೆನ್ಸಿಕ್‌ ಓಡಾಂಟಾಲಜಿಯ ಓರ್ವ ಸದಸ್ಯನಿಂದ ಮಾಡಲ್ಪಟ್ಟ 1999ರ ಅಧ್ಯಯನವೊಂದು ಕಂಡುಕೊಂಡ ಪ್ರಕಾರ, ಸುಮಾರು 63 ಪ್ರತಿಶತ ಪ್ರಮಾಣದಷ್ಟು ತಪ್ಪಾದ ಗುರುತಿಸುವಿಕೆಗಳು ಕಂಡುಬಂದಿವೆ ಮತ್ತು ಅದು ಆನ್‌ಲೈನ್‌ ಸುದ್ದಿ ಕಥನಗಳು ಹಾಗೂ ಪಿತೂರಿಯ ವೆಬ್‌ಸೈಟ್‌ಗಳಲ್ಲಿ ಸಾಮಾನ್ಯವಾಗಿ ಉಲ್ಲೇಖಿಸಲ್ಪಟ್ಟಿದೆ.[][೧೦] ABFO ಸಭೆಯೊಂದರ ಅವಧಿಯಲ್ಲಿ ನಡೆದ ಔಪಚಾರಿಕ ಕಾರ್ಯಾಗಾರವನ್ನು ಈ ಅಧ್ಯಯನವು ಆಧರಿಸಿದ್ದು, ಅದನ್ನು ಅನೇಕ ಸದಸ್ಯರು ಒಂದು ನ್ಯಾಯಸಮ್ಮತವಾದ ವೈಜ್ಞಾನಿಕ ಸನ್ನಿವೇಶವೆಂದು ಪರಿಗಣಿಸಲಿಲ್ಲ.[೧೧]

ದಾವೆ ವಿಜ್ಞಾನ

ಬದಲಾಯಿಸಿ

ದಾವೆ ವಿಜ್ಞಾನ ವು ಒಂದು ವಿಚಾರಣೆಯಲ್ಲಿನ ಬಳಕೆಗೆ ಸಂಬಂಧಿಸಿದಂತೆ ಅಭಿವೃದ್ಧಿಪಡಿಸಿದ ಅಥವಾ ನಿಶ್ಚಿತವಾಗಿ ನಿರ್ಮಿಸಿದ ವಿಶ್ಲೇಷಣೆ ಅಥವಾ ದತ್ತಾಂಶವನ್ನು ವಿವರಿಸುತ್ತದೆ; ಇದು ಸ್ವತಂತ್ರ ಸಂಶೋಧನೆಯ ಸಂದರ್ಭದಲ್ಲಿ ನಿರ್ಮಿಸಲ್ಪಟ್ಟಿರುವುದಕ್ಕೆ ಪ್ರತಿಯಾಗಿರುತ್ತದೆ. ಪರಿಣಿತರ ಅಂಗೀಕಾರಾರ್ಹತೆಯ ಮೌಲ್ಯ ನಿರ್ಣಯ ಮಾಡುವಾಗ, ಈ ವೈಲಕ್ಷಣ್ಯ ಅಥವಾ ವ್ಯತ್ಯಾಸ ಗುರುತಿಸುವಿಕೆಯು U.S.ನ ಮೇಲ್ಮನವಿಗಳ 9ನೇ ಸಂಚಾರಿ ನ್ಯಾಯಾಲಯದಿಂದ ಮಾಡಲ್ಪಟ್ಟಿತು.[೧೨]

ವಿಚಾರಣೆಯ ಸಿದ್ಧತೆಯಲ್ಲಿ ವಕೀಲರು ಅಥವಾ ಪೂರಕ ಕಾನೂನು ತಜ್ಞರಿಂದ ಸೃಷ್ಟಿಸಲ್ಪಟ್ಟ ಪುರಾವೆಯಾಗಿರುವ ನಿದರ್ಶನಾತ್ಮಕ ಪುರಾವೆಯನ್ನು ಬಳಸಿಕೊಳ್ಳುತ್ತದೆ.

ಜನಪ್ರಿಯ ಸಂಸ್ಕೃತಿಯಲ್ಲಿನ ಉದಾಹರಣೆಗಳು

ಬದಲಾಯಿಸಿ

ಸರ್‌‌ ಅರ್ಥರ್‌ ಕಾನನ್‌ ಡಾಯ್ಲ್‌‌ ಎಂಬ ಲೇಖಕ 1887ರಿಂದ 1915ರವರೆಗೆ ರೂಪಿಸಿದ ತನ್ನ ಕೃತಿಗಳಲ್ಲಿ ಸೃಷ್ಟಿಸಿದ ಷರ್ಲಾಕ್‌ ಹೋಮ್ಸ್ ಎಂಬ ಕಾಲ್ಪನಿಕ ಪಾತ್ರಧಾರಿಯು ತನ್ನ ತನಿಖಾಗಾರಿಕೆಯ ವಿಧಾನಗಳಲ್ಲಿ ಒಂದಾಗಿ ನ್ಯಾಯ ವಿಜ್ಞಾನವನ್ನು ಬಳಸಿಕೊಳ್ಳುತ್ತಾನೆ. ಎಡಿನ್‌ಬರ್ಗ್‌ ವಿಶ್ವವಿದ್ಯಾಲಯದ ವೈದ್ಯಕೀಯ ಶಾಲೆಯಲ್ಲಿನ ತನ್ನ ಶಿಕ್ಷಕ, ಸಹಜ ಪ್ರತಿಭೆಯುಳ್ಳ ಶಸ್ತ್ರಚಿಕಿತ್ಸಾ ತಜ್ಞ ಹಾಗೂ ನ್ಯಾಯ ವಿಜ್ಞಾನದ ಪತ್ತೇದಾರನಾದ ಜೋಸೆಫ್‌ ಬೆಲ್‌ ಎಂಬಾತ ತನ್ನ ಕೃತಿಯಲ್ಲಿ ಕಂಡುಬರುವ ಹೋಮ್ಸ್‌ ಪಾತ್ರಕ್ಕೆ ಸಂಬಂಧಿಸಿದ ಪ್ರೇರಣೆಯಾಗಿದ್ದಾರೆ ಎಂದು ಕಾನನ್ ಡಾಯ್ಲ್‌‌‌ ಉಲ್ಲೇಖಿಸುತ್ತಾನೆ.

ದಶಕಗಳ ನಂತರ, ಡಿಕ್‌ ಟ್ರೇಸಿ ಎಂಬ ವ್ಯಂಗ್ಯಚಿತ್ರ ಮಾಲಿಕೆಯೂ ಸಹ, ಒಂದು ಪರಿಗಣನಾರ್ಹ ಸಂಖ್ಯೆಯ ನ್ಯಾಯ ವಿಜ್ಞಾನದ ವಿಧಾನಗಳನ್ನು ಬಳಸುವ ಓರ್ವ ಪತ್ತೇದಾರನನ್ನು ಒಳಗೊಂಡಿತ್ತು; ಆದರೂ ಸಹ ಕೆಲವೊಮ್ಮೆ ಇದರಲ್ಲಿನ ವಿಧಾನಗಳು ವಾಸ್ತವವಾಗಿ ಸಾಧ್ಯವಾಗಿರುವುದಕ್ಕಿಂತ ಹೆಚ್ಚು ಕಲ್ಪನಾಶೀಲವಾಗಿದ್ದವು.

ಆರೋಪಿಯ ಪರವಾದ ವಕೀಲನಾದ ಪೆರ್ರಿ ಮ್ಯಾಸನ್‌ ಎಂಬಾತ ಕಾದಂಬರಿಗಳು ಹಾಗೂ ದೂರದರ್ಶನ ಸರಣಿಗಳೆರಡರಲ್ಲೂ ನ್ಯಾಯ ವಿಜ್ಞಾನದ ಕೌಶಲಗಳನ್ನು ಸಾಂದರ್ಭಿಕವಾಗಿ ಬಳಸಿದ.

ದಿ ಮೆಂಟಲಿಸ್ಟ್‌ , CSI , ಕೋಲ್ಡ್‌ ಕೇಸ್‌ , ಬೋನ್ಸ್‌ , ಲಾ & ಆರ್ಡರ್‌‌ , NCIS , ಕ್ರಿಮಿನಲ್‌ ಮೈಂಡ್ಸ್‌ , ಸೈಲೆಂಟ್‌ ವಿಟ್ನೆಸ್‌ , ಡೆಕ್ಸ್ಟರ್‌ , ಹಾಗೂ ವೇಕಿಂಗ್‌ ದಿ ಡೆಡ್‌ ಇವೇ ಮೊದಲಾದ ಜನಪ್ರಿಯ ದೂರದರ್ಶನ ಸರಣಿಗಳು ಅಪರಾಧದ ಪತ್ತೆಹಚ್ಚುವಿಕೆಯ ಮೇಲೆ ಗಮನವನ್ನು ಕೇಂದ್ರೀಕರಿಸಿದ್ದೇ ಅಲ್ಲದೇ, 21ನೇ ಶತಮಾನದ ನ್ಯಾಯ ವಿಜ್ಞಾನದ ವಿಜ್ಞಾನಿಗಳ ಚಟುವಟಿಕೆಗಳ ಚಿತ್ತಾಕರ್ಷಕಗೊಳಿಸಲ್ಪಟ್ಟ ಆವೃತ್ತಿಗಳನ್ನು ಚಿತ್ರಿಸಿವೆ. ಕೆಲವೊಬ್ಬರು ಸಮರ್ಥಿಸುವ ಪ್ರಕಾರ, ಈ TV ಕಾರ್ಯಕ್ರಮಗಳು ನ್ಯಾಯ ವಿಜ್ಞಾನದ ಕುರಿತಾಗಿ ವ್ಯಕ್ತಿಗಳು ಹೊಂದಿರುವ ನಿರೀಕ್ಷೆಗಳನ್ನು ಬದಲಿಸಿದ್ದು, ಈ ಪ್ರಭಾವಕ್ಕೆ "CSI ಪರಿಣಾಮ" ಎಂದು ಹೆಸರಿಸಲಾಗಿದೆ.[ಸಾಕ್ಷ್ಯಾಧಾರ ಬೇಕಾಗಿದೆ]

ಫರೆನ್ಸಿಕ್‌ ಫೈಲ್ಸ್‌, ದಿ ನ್ಯೂ ಡಿಟೆಕ್ಟಿವ್ಸ್‌‌, ಅಮೆರಿಕನ್‌ ಜಸ್ಟೀಸ್‌, ಹಾಗೂ ಡಾಯ್ಲ್‌ ಹಿನ್‌ಮನ್‌‌ನ ಬಾಡಿ ಆಫ್‌ ಎವಿಡೆನ್ಸ್‌‌‌ನಂಥ ಅಕಲ್ಪಿತ ಕೃತಿ TV ಕಾರ್ಯಕ್ರಮಗಳು ನ್ಯಾಯ ವಿಜ್ಞಾನದ ಕ್ಷೇತ್ರವನ್ನು ಕೂಡಾ ಜನಪ್ರಿಯಗೊಳಿಸಿವೆ.

ಏಸ್‌ ಅಟಾರ್ನಿ ಸರಣಿಗಳು ಮುಖ್ಯವಾಗಿ ...Apollo Justice: Ace Attorneyರಲ್ಲಿ ನ್ಯಾಯ ವಿಜ್ಞಾನವನ್ನು ಒಳಗೊಂಡಿವೆ.

ವಿವಾದಗಳು

ಬದಲಾಯಿಸಿ

ಈ ಶಿಕ್ಷಣ ವಿಷಯಗಳ ಹಿಂದಿರುವ ನ್ಯಾಯ ವಿಜ್ಞಾನ, ಬೆರಳಗುರುತು ಪುರಾವೆ ಹಾಗೂ ಊಹನದ ಕುರಿತಾದ ಪ್ರಶ್ನೆಗಳು ಕೆಲವೊಂದು ಪ್ರಕಟಣೆಗಳಲ್ಲಿ [೧೩][೧೪][೧೫] ಬೆಳಕಿಗೆ ತರಲ್ಪಟ್ಟಿದ್ದು, ನ್ಯೂಯಾರ್ಕ್‌ ಪೋಸ್ಟ್‌‌ ನಲ್ಲಿ ಪ್ರಕಟಗೊಂಡ ಒಂದು ಲೇಖನವು ಅವುಗಳ ಪೈಕಿ ಇತ್ತೀಚಿನದಾಗಿದೆ.[೧೬] "ಪ್ರತಿಯೊಬ್ಬರ ಬೆರಳಗುರುತು ಅನನ್ಯವಾಗಿರುತ್ತದೆ ಎಂಬ ಮೂಲಭೂತ ಊಹನವನ್ನೂ ಸಹ ಯಾರೂ ಸಾಬೀತುಮಾಡಿಲ್ಲ" ಎಂದು ಈ ಲೇಖನವು ಹೇಳುತ್ತದೆ.[೧೬] ಈ ಲೇಖನವು ತನ್ನ ಅಭಿಪ್ರಾಯವನ್ನು ಮುಂದುವರಿಸುತ್ತಾ, "ಈಗ ಇಂಥ ಊಹನಗಳು ಪ್ರಶ್ನಿಸಲ್ಪಡುತ್ತಿವೆ -- ಮತ್ತು ಆರಕ್ಷಕ ಇಲಾಖೆಗಳು ಹಾಗೂ ಅಭಿಯೋಜಕರಿಂದ ನ್ಯಾಯ ವಿಜ್ಞಾನವು ಹೇಗೆ ಬಳಸಲ್ಪಟ್ಟಿದೆ ಎಂಬುದರಲ್ಲಿ ಒಂದು ಆಮೂಲಾಗ್ರ ಬದಲಾವಣೆಯು ಇದರೊಂದಿಗೆ ಬರುವ ಸಾಧ್ಯತೆಯಿದೆ."[೧೬]

ಮೆಲೆಂಡೆಜ್‌-ಡಯಾಜ್‌ v. ಮ್ಯಾಸಚೂಸೆಟ್ಸ್‌‌ ಪ್ರಕರಣಕ್ಕೆ ಸಂಬಂಧಿಸಿದಂತೆ 2009ರ ಜೂನ್‌ 25ರಂದು ಸರ್ವೋಚ್ಚ ನ್ಯಾಯಾಲಯವು ಒಂದು 5-ರಿಂದ-4ರವರೆಗಿನ ತೀರ್ಮಾನವನ್ನು ನೀಡಿತು; ಅಪರಾಧ ಪ್ರಯೋಗಾಲಯದ ವರದಿಗಳನ್ನು ಸೃಷ್ಟಿಸುವುದಕ್ಕೆ ಸಂಬಂಧಿಸಿದಂತೆ ಹೊಣೆ ಹೊತ್ತಿರುವ ವಿಶ್ಲೇಷಕರು ರುಜುವಾತನ್ನು ಒದಗಿಸದ ಹೊರತು ಮತ್ತು ತಮ್ಮನ್ನು ಪಾಟಿಸವಾಲಿಗೆ ಒಡ್ಡಿಕೊಳ್ಳದ ಹೊರತು, ವಿಚಾರಣೆಯಲ್ಲಿ ಅಪರಾಧಿ ಪ್ರತಿವಾದಿಗಳ ವಿರುದ್ಧ ಅಪರಾಧ ಪ್ರಯೋಗಾಲಯದ ವರದಿಗಳನ್ನು ಬಳಸಬಾರದು ಎಂದು ಅದು ತನ್ನ ಹೇಳಿಕೆಯಲ್ಲಿ ತಿಳಿಸಿತು. ಇದಕ್ಕೆ ಸಂಬಂಧಿಸಿದಂತೆ ಸರ್ವೋಚ್ಚ ನ್ಯಾಯಾಲಯವು ತನ್ನ ತೀರ್ಮಾನದಲ್ಲಿ ನ್ಯಾಷನಲ್‌ ಅಕಾಡೆಮಿಯ ವರದಿಯಾದ ಸ್ಟ್ರೆಂಥನಿಂಗ್‌ ಫರೆನ್ಸಿಕ್‌ ಸೈನ್ಸ್‌ ಇನ್‌ ದಿ ಯುನೈಟೆಡ್ ಸ್ಟೇಟ್ಸ್‌ [೧೭] ಎಂಬುದನ್ನು ಉಲ್ಲೇಖಿಸಿತು. ಬಹುಪಾಲು ಜನರಿಗೆ ಸಂಬಂಧಿಸಿದಂತೆ ಬರೆಯುತ್ತಾ, ನ್ಯಾಯಮೂರ್ತಿ ಆಂಟೊನಿನ್‌ ಸ್ಕಾಲಿಯಾ ತನ್ನ ಪ್ರತಿಪಾದನೆಯಲ್ಲಿ ನ್ಯಾಷನಲ್‌ ರಿಸರ್ಚ್‌ ಕೌನ್ಸಿಲ್‌‌ ವರದಿಯನ್ನು ಉಲ್ಲೇಖಿಸುತ್ತಾ, "ದುರುಪಯೋಗಪಡಿಸಿಕೊಳ್ಳುವಿಕೆಯ ಅಪಾಯದಿಂದ ನ್ಯಾಯ ವಿಜ್ಞಾನದ ಪುರಾವೆಯು ಅನನ್ಯವಾಗಿ ವಿಮುಕ್ತವಾಗಿಲ್ಲ" ಎಂದು ತಿಳಿಸಿದರು.

ಇದನ್ನೂ ನೋಡಿ

ಬದಲಾಯಿಸಿ
2

ಆಕರಗಳು

ಬದಲಾಯಿಸಿ
  1. Schafer, Elizabeth D. (2008). "Ancient science and forensics". In Ayn Embar-seddon, Allan D. Pass (eds.) (ed.). Forensic Science. Salem Press. p. 40. ISBN 978-1587654237. {{cite book}}: |editor= has generic name (help)
  2. ಫರೆನ್ಸಿಕ್‌ ಟೈಂಲೈನ್
  3. "ನ್ಯಾಯ ವಿಜ್ಞಾನದ ಒಂದು ಸಂಕ್ಷಿಪ್ತ ಹಿನ್ನೆಲೆ". Archived from the original on 2009-12-16. Retrieved 2010-07-26.
  4. "Juan Vucetich". Easybuenosairescity.com. 1925-01-25. Archived from the original on 2010-09-24. Retrieved 2010-06-08.
  5. Kind S, Overman M (1972). Science Against Crime. New York: Doubleday. pp. 12–13. ISBN 0-385-09249-0.
  6. "Forensic serology". Forensic-medecine.info. Archived from the original on 2010-05-06. Retrieved 2010-06-08.
  7. Saks, Michael J.; Faigman, David L. (2008). "Failed forensics: how forensic science lost its way and how it might yet find it". Annual Review of Law and Social Science. 4: 149–171. doi:10.1146/annurev.lawsocsci.4.110707.172303.
  8. Solomon, John (2007-11-18). "FBI's Forensic Test Full of Holes". The Washington Post. p. A1. Retrieved 2008-03-05.
  9. Santos, Fernanda (2007-01-28). "Evidence From Bite Marks, It Turns Out, Is Not So Elementary". ದ ನ್ಯೂ ಯಾರ್ಕ್ ಟೈಮ್ಸ್. Retrieved 2008-03-05.
  10. McRoberts, Flynn (2004-11-29). "Bite-mark verdict faces new scrutiny". Chicago Tribune. Retrieved 2008-03-05.
  11. McRoberts, Flynn (2004-10-19). "From the start, a faulty science". Chicago Tribune. Retrieved 2008-07-13.[permanent dead link]
  12. Raloff, Janet (2008-01-19). "Judging Science". Science News. pp. 42 (Vol. 173, No. 3). Archived from the original on 2008-02-28. Retrieved 2008-03-05.
  13. "'Badly Fragmented' Forensic Science System Needs Overhaul". The National Academies. February 18, 2009. Retrieved 2009-03-09.
  14. YiZhen Huang and YangJing Long (2008). "Demosaicking recognition with applications in digital photo authentication based on a quadratic pixel correlation model" (PDF). Proc. IEEE Conference on Computer Vision and Pattern Recognition: 1–8. Archived from the original (PDF) on 2010-06-17. Retrieved 2010-07-26.
  15. "National Academy of Sciences Finds 'Serious Deficiencies' in Nation's Crime Labs". National Association of Criminal Defense Lawyers. February 18, 2009. Archived from the original on 2010-03-05. Retrieved 2009-03-07.
  16. ೧೬.೦ ೧೬.೧ ೧೬.೨ Katherine Ramsland (Sunday, March 6, 2009). "CSI: Without a clue; A new report forces Police and Judges to rethink forensic science". The New York Post, PostScript. Archived from the original on 2009-03-10. Retrieved 2009-03-07. {{cite web}}: Check date values in: |date= (help)
  17. "Strengthening Forensic Science in the United States: A Path Forward". Nap.edu. Retrieved 2010-06-08.

ಹೆಚ್ಚಿನ ಓದಿಗಾಗಿ

ಬದಲಾಯಿಸಿ

ಅಸೆನ್ಷನ್‌ ಡು ಕ್ರಿಮಿನಲಿಸ್ಟೆ ರೊಡೊಲ್ಫೆ ಆರ್ಕಿಬಾಲ್ಡ್‌ ರೀಸ್‌ », ಇನ್‌ ಲೆ ಥಿಯೇಟ್ರೆ ಡು ಕ್ರೈಮ್‌ : ರೊಡೊಲ್ಫೆ A. ರೀಸ್‌ (1875-1929) . ಲೌಸಾನ್ನೆ : ಪ್ರೆಸಸ್‌ ಪಾಲಿಟೆಕ್ನಿಕ್ಸ್‌ ಎಟ್‌ ಯೂನಿವರ್ಸಿಟೈರ್ಸ್‌ ರೊಮಾಂಡೆಸ್‌, 2009, ಪುಟಗಳು 231-250.

  • ಕ್ವಿಂಚೆ, ನಿಕೋಲಾಸ್‌, « ಸುರ್‌ ಲೆಸ್‌ ಟ್ರೇಸಸ್‌ ಡು ಕ್ರೈಮ್‌: ಲಾ ನೈಸಾನ್ಸ್‌ ಡೆ ಲಾ ಪೊಲೀಸ್‌ ಸೈಂಟಿಫಿಕ್‌ ಎಟ್‌ ಟೆಕ್ನಿಕ್‌ ಎನ್‌ ಯುರೋಪ್‌ », ಇನ್‌ ರೆವ್ಯೂ ಇಂಟರ್‌ನ್ಯಾಷನೇಲ್‌ ಡಿ ಕ್ರಿಮಿನಾಲಜೀ ಎಟ್‌ ಡಿ ಪೊಲೀಸ್‌ ಟೆಕ್ನಿಕ್‌ ಎಟ್‌ ಸೈಂಟಿಫಿಕ್‌ , ಸಂಪುಟ LXII, ಸಂಖ್ಯೆ 2, ಜೂಯಿನ್‌ 2009, ಪುಟಗಳು 8-10.
  • ಕ್ವಿಂಚೆ, ನಿಕೋಲಾಸ್‌, ಮತ್ತು ಮಾರ್ಗಾಟ್‌, ಪಿಯರೆ, « ಕೌಲಿಯರ್‌, ಪಾಲ್‌-ಜೀನ್‌ (1824-1890) : ಎ ಪ್ರಿಕರ್ಸರ್‌ ಇನ್‌ ದಿ ಹಿಸ್ಟರಿ ಆಫ್‌ ಫಿಂಗರ್‌ಮಾರ್ಕ್‌ ಡಿಟೆಕ್ಷನ್‌ ಅಂಡ್‌ ದೆರ್‌ ಪೊಟೆನ್ಷಿಯಲ್‌ ಯೂಸ್‌ ಫಾರ್‌ ಐಡೆಂಟಿಫೈಯಿಂಗ್‌ ದೆರ್‌ ಸೋರ್ಸ್‌ (1863) », ಇನ್‌ ಜರ್ನಲ್‌ ಆಫ್‌ ಫರೆನ್ಸಿಕ್‌ ಐಡೆಂಟಿಫಿಕೇಷನ್‌ (ಕ್ಯಾಲಿಫೋರ್ನಿಯಾ), 60 (2), ಮಾರ್ಚ್‌-ಏಪ್ರಿಲ್‌ 2010, ಪುಟಗಳು 129-134.
  • ಸೈನ್ಸ್‌ ಎಗೇನ್ಸ್ಟ್‌ ಕ್ರೈಮ್ -ಸ್ಟುವರ್ಟ್‌ ಕಿಂಡ್‌ ಮತ್ತು ಮೈಕೇಲ್‌ ಓವರ್‌‌ಮನ್‌. ಡಬಲ್‌ಡೇ, 1972. ISBN 0-385-09249-0.
  • Stanton G (2003). "Underwater Crime Scene Investigations (UCSI), a New Paradigm". In: SF Norton (ed). Diving for Science... 2003. Proceedings of the American Academy of Underwater Sciences (22nd annual Scientific Diving Symposium). Archived from the original on 2011-07-27. Retrieved 2008-06-18.
  • ಸ್ಟ್ರಕ್ಚರ್‌ ಮ್ಯಾಗಜೀನ್‌ ಸಂಖ್ಯೆ 40, "ರೆಪ್ಲಿಸೆಟ್‌: ಹೈ ರೆಸಲ್ಯೂಷನ್‌ ಇಂಪ್ರೆಷನ್ಸ್‌ ಆಫ್‌ ದಿ ಟೀತ್‌ ಆಫ್‌ ಹ್ಯೂಮನ್‌ ಆನ್ಸೆಸ್ಟರ್ಸ್‌" - ಡೆಬ್ಬೀ ಗುವಾಟೆಲ್‌-ಸ್ಟೀನ್‌ಬರ್ಗ್‌, ಸಹಾಯಕ ಪ್ರಾಧ್ಯಾಪಕ, ಜೀವವಿಜ್ಞಾನದ ಮಾನವಶಾಸ್ತ್ರ ವಿಭಾಗ, ದಿ ಓಹಿಯೋ ಸ್ಟೇಟ್‌ ಯೂನಿವರ್ಸಿಟಿ ಮತ್ತು ಜಾನ್‌ C. ಮಿಚೆಲ್‌, ಸಹಾಯಕ ಪ್ರಾಧ್ಯಾಪಕ, ಬಯೋಮೆಟೀರಿಯಲ್ಸ್‌ ಅಂಡ್‌ ಬಯೋಮೆಕ್ಯಾನಿಕ್ಸ್‌ ಸ್ಕೂಲ್‌ ಆಫ್‌ ಡೆಂಟಿಸ್ಟ್ರಿ, ಓರೆಗಾಂವ್‌ ಹೆಲ್ತ್‌ ಅಂಡ್‌ ಸೈನ್ಸ್‌ ಯೂನಿವರ್ಸಿಟಿ.
  • ದಿ ಇಂಟರ್‌ನೆಟ್‌ ಜರ್ನಲ್‌ ಆಫ್‌ ಬಯಲಾಜಿಕಲ್‌ ಆಂತ್ರಪಾಲಜಿ Archived 2011-09-17 ವೇಬ್ಯಾಕ್ ಮೆಷಿನ್ ನಲ್ಲಿ..
  • ವೈಲೆ ಎನ್‌ಸೈಕ್ಲೋಪೀಡಿಯಾ ಆಫ್‌ ಫರೆನ್ಸಿಕ್‌ ಸೈನ್ಸ್‌ -ಅಲನ್‌ ಜೇಮೀಸನ್‌‌ ಮತ್ತು ಆಂಡ್ರಿಯಾಸ್‌ ಮೊನೆಸ್ಸೆನ್ಸ್‌ (ಸಂಪಾದಕರು). ಜಾನ್‌ ವೈಲೆ & ಸನ್ಸ್‌ ಲಿಮಿಟೆಡ್‌, 2009. ISBN 978-0-470-01826-2.
  • ವೈಲೆ ಎನ್‌ಸೈಕ್ಲೋಪೀಡಿಯಾ ಆಫ್‌ ಫರೆನ್ಸಿಕ್‌ ಸೈನ್ಸ್‌ [permanent dead link] ದಿ ಆನ್‌ಲೈನ್‌ ವರ್ಷನ್‌ ಆಫ್‌ ದಿ ವೈಲೆ ಎನ್‌ಸೈಕ್ಲೋಪೀಡಿಯಾ ಆಫ್‌ ಫರೆನ್ಸಿಕ್‌ ಸೈನ್ಸ್‌ -ಅಲನ್‌ ಜೇಮೀಸನ್‌‌ ಮತ್ತು ಆಂಡ್ರೆ ಮೊನೆಸ್ಸೆನ್ಸ್‌ (ಸಂಪಾದಕರು)

ಬಾಹ್ಯ ಕೊಂಡಿಗಳು

ಬದಲಾಯಿಸಿ