ಟಾಟಾ ನ್ಯಾನೊ

ಟಾಟಾ ನ್ಯಾನೊ ೨೦೦೮ಜನವರಿಯಲ್ಲಿ ಜಗತ್ತಿಗೆ ಪರಿಚಯಿಸಲ್ಪಟ್ಟ ಅಗ್ಗದ ಬೆಲೆಯ ಕಾರು.

ನ್ಯಾನೊ ಕಾರುಸಂಪಾದಿಸಿ

ಭಾರತದ ಬೃಹತ್ ಉದ್ದಿಮೆದಾರ ಟಾಟಾ ಮೋಟಾರ್ಸ್ ಸಂಸ್ಥೆ ತಯಾರಿಸಿರುವ ಸಣ್ಣ ಬಜೆಟ್‌ನ ಹೊಸ ಕಾರು ನ್ಯಾನೊ.ಈ ಕಾರನ್ನು ಜನವರಿ ೧೦,೨೦೦೮ರಂದು ದೆಹಲಿಯ 'ಅಂತರ್ರಾಷ್ಟ್ರೀಯ ವಾಹನ ಮೇಳ' ಎಕ್ಸ್‌‍‍ಪೋ - ೨೦೦೮ರಲ್ಲಿ ಟಾಟಾ ಸಂಸ್ಥೆಯ ಅಧ್ಯಕ್ಷ ರತನ್ ಟಾಟಾ ಅನಾವರಣಗೊಳಿಸಿದರು.ಜಗತ್ತಿನ ಅತ್ಯಂತ ಕಡಿಮೆ ಬೆಲೆಯ ನ್ಯಾನೊ ಕಾರು ,ಕಾರು ಉದ್ದಿಮೆಯಲ್ಲಿ ಹೊಸ ಸಂಚಲನವನ್ನು ಉಂಟುಮಾಡಿದೆ.

ಸೃಷ್ಟಿಗೆ ಪ್ರೇರಣೆಸಂಪಾದಿಸಿ

ಸ್ಕೂಟರ್ ಅಥವಾ ಬೈಕ್‌ನಲ್ಲಿ ನಾಲ್ಕು ಜನರ ಪುಟ್ಟ ಸಂಸಾರವಿಡೀ ಓಡಾಡುವ ಅಪಾಯಕಾರಿ ದೃಶ್ಯವನ್ನು ಕಂಡ ದಿನವೇ ರತನ್ ಟಾಟಾ ಮನಸ್ಸಿನಲ್ಲಿ ನ್ಯಾನೊ ಕಾರಿನ ಕಲ್ಪನೆ ಮೂಡಿತು.ನಾಲ್ಕು ವರ್ಷಗಳ ಸತತ ಚಿಂತನೆ,ಶ್ರಮ,ಪರಿಕಲ್ಪನೆಗಳ ಸಾಕಾರವೇ ನ್ಯಾನೊ ಕಾರು.

ವೈಶಿಷ್ಟ್ಯಗಳುಸಂಪಾದಿಸಿ

  • ನ್ಯಾನೊ ಕಾರಿನ ಷೋರೂಂ ಬೆಲೆ ೧ ಲಕ್ಷ ರೂ.
  • ವಿಭಿನ್ನ ಶ್ರೇಣಿಗಳಲ್ಲಿ ಲಭ್ಯ.
  • ಕಾರಿನ ಗಾತ್ರ - ೩.೧ ಮೀ. ಉದ್ದ, ೧.೫ ಮೀ. ಅಗಲ, ೧.೮ ಮೀ.ಎತ್ತರ.
  • ಮಾರುಕಟ್ಟೆಯಲ್ಲಿರುವ ಇದೇ ಮಾದರಿಯ ಇತರ ಕಾರುಗಳಿಗಿಂತ ಒಳ ವಿಸ್ತಾರ ಶೇಕಡಾ ೨೧%ರಷ್ಟು ಹೆಚ್ಚಳ.
  • ಪ್ರತಿ ಲೀಟರ್‌ಗೆ ೨೦ ಕಿ.ಮೀ. ಮೈಲೇಜ್.
  • ಹಿಂಬದಿ ಎಂಜಿನ್, ಗೇರ್, ಟ್ಯೂಬ್‌ರಹಿತ ಟೈರುಗಳು.
  • ಜನರಿಗೆ ಆಸನಗಳು, ೩೦ ಲೀ.ಪೆಟ್ರೋಲ್ ತುಂಬಿಸುವ ಸಾಮರ್ಥ್ಯ.

ತಯಾರಿಕೆಸಂಪಾದಿಸಿ

ಟಾಟಾ ಮೋಟಾರ್ಸ್ ಸಂಸ್ಥೆ ತನ್ನ ಪಶ್ಚಿಮ ಬಂಗಾಳ ಹಾಗೂ ಉತ್ತರಾಖಂಡದ ಉತ್ಪಾದನಾ ಘಟಕಗಳಲ್ಲಿ ನ್ಯಾನೊ ಕಾರು ಉತ್ಪಾದಿಸಲಿದೆ.ಸೆಪ್ಟೆಂಬರ್ ೨೦೦೮ರ ವೇಳೆಗೆ ಮಾರುಕಟ್ಟೆಗೆ ಬಿಡುಗಡೆಗೊಳಿಸಲಿದೆ.