ನೆಲಬೇವು
ನೆಲಬೇವು | |
---|---|
Scientific classification | |
ಸಾಮ್ರಾಜ್ಯ: | |
(ಶ್ರೇಣಿಯಿಲ್ಲದ್ದು): | |
(ಶ್ರೇಣಿಯಿಲ್ಲದ್ದು): | Eudicots
|
(ಶ್ರೇಣಿಯಿಲ್ಲದ್ದು): | |
ಗಣ: | |
ಕುಟುಂಬ: | |
ಕುಲ: | |
ಪ್ರಜಾತಿ: | A. paniculata
|
Binomial name | |
Andrographis paniculata | |
Synonyms[೨] | |
|
ಪ್ರಾಚೀನ ಕಾಲದಿಂದ ಭಾರತೀಯ ಔಷಧಿ ಪದ್ಧತಿಗಳಲ್ಲಿ ಉಪಯೋಗಿಸಲಾಗುತ್ತದೆ. ಇದೊಂದು ಚಿಕ್ಕಗಿಡವಾಗಿದ್ದು ಭಾರದೆಲ್ಲೆಡೆ ಬೆಳೆಯುತ್ತದೆ. ಹಿಮಾಲಯದ ಸಸ್ಯವಾದ ನೆಲಬೇವು ಚರಕ ಸಂಹತೆಯಲ್ಲಿ ಪದಾರ್ಪಣೆ ಮಾಡುವುದಕ್ಕಿಂತ ಮುಂಚೆ ಕಿರಾತರು ಎಂಬ ಬುಡಕಟ್ಟು ಜನಾಂಗದವರಿಗೆ ಜ್ವರಕ್ಕೆ ಔಷಧಿಯಾಗಿ ಬಳಸಲಾಗುತ್ತಿತ್ತು. ಆದ್ದರಿಂದ ಇದನ್ನು ಸಂಸ್ಕೃತದಲ್ಲಿ ಕಿರಾತ ಎಂಬ ಹೆಸರಿನಿಂದ ಕರೆಯಲಾಗುತ್ತದೆ. ಅಲ್ಲದೇ ಇದು ಅತ್ಯಂತ ಕಹಿಯಾಗಿರುದರಿಂದ ಮಹಾತಿಕ್ತ ಎಂಬ ಹೆಸರೂ ಇದೆ.
ಸಸ್ಯವರ್ಣನೆ
ಬದಲಾಯಿಸಿನೆಲಬೇವು ಅಕೇಂಥೇಸಿಯೆ ಕುಟುಂಬಕ್ಕೆ ಸೇರಿದ ಮುಖ್ಯ ಔಷಧಿ ಬೆಳೆ.ಇದು ನೇರವಾಗಿ ಬೆಳೆಯುವ ಗಿಡ. ಪೂರ್ಣ ಬೆಳೆದ ಗಿಡಗಳು ೩೦-೧೦೦ ಸೆಂ.ಮೀ.ಎತ್ತರವಿರುತ್ತದೆ.ಕೊಂಬೆಗಳು ತೀಕ್ಷ್ಣವಾದ ಚೌಕಾಕಾರ ಹೊಂದಿ ಕೆಲವೊಮ್ಮೆ ಕೆರಿದಾದ ರೆಕ್ಕೆಗಳಂತೆ ಗಿಡದ ತುದಿಯ ಕಡೆಗೆ ಚುಚ್ಚಿರುತ್ತದೆ. ಎಲೆಗಳಿಗೆ ತೊಟ್ಟಿರುತ್ತದೆ.ಹೂಗಳು ಚಿಕ್ಕದಾಗೆದ್ದು ಅವು ಹೂಗೊಂಚಲಿನಲ್ಲಿ ಏಕಾಂತವಾಗಿರುತ್ತವೆ. ಹೂದಳಗಳು ಗುಲಾಬಿ ಬಣ್ಣವಿದ್ದು ಹೊರಭಾಗದಲ್ಲಿ ರೋಮಭರಿತವಾಗಿರುತ್ತದೆ. ಹಣ್ಣಿನ ಎರಡೂ ತುದಿಗಳು ಚೂಪಾಗಿ ಇರುತ್ತವೆ.ಬೀಜಗಳು ಬಹಳವಾಗಿದ್ದು ಅವುಗಳ ಬಣ್ಣ ಹಳದಿಯಿದ್ದು ಮೃದುವಾಗಿರುತ್ತದೆ.
ಉಪಯುಕ್ತ ಭಾಗಗಳು
ಬದಲಾಯಿಸಿನೆಲಬೇವಿನ ಪಂಚಾಂಗಗಳು ಅಂದರೆ ಬೇರು,ಕಾಂಡ,ಎಲೆ,ಹೂ,ಹಣ್ಣು ಎಲ್ಲವೂ ಔಷಧೀಯ ಗುಣ ಹೊಂದಿವೆ.
ರಾಸಾಯನಿಕ ಘಟಕಗಳು
ಬದಲಾಯಿಸಿಆಂಡ್ರೊಗ್ರಾಫೊಲೈಡ್ಸ್, ಆಂಡ್ರೊಗ್ರಾಫಿನ್,ಆಂಡ್ರೊಗ್ರಫಿನ್ ಎ,ಬಿ,ಸಿ,ಡಿ,ಇ,ಮತ್ತು ಎಫ್,ಆಂಡ್ರೊಗ್ರಾಫೊಸೈಡ್,ಜರೊಕ್ಸೈಲಿನ್ ಎ,ವೊಗೊನಿನ್, ನಿಯೊಆಂಡ್ರೊಗ್ರಾಫೊಲೈಡ್,ಪೆನಿಕುಲೈಡ್ಸ್.
ಮಣ್ಣು
ಬದಲಾಯಿಸಿನೆಲಬೇವು ಒಂದು ಗಡುತರ ಸಸ್ಯವಾಗಿರುವುದರಿಂದ ಇದನ್ನು ಹಲವಾರು ವಿಧವಾದ ಮಣ್ಣುಗಳಲ್ಲಿ ಬೆಳೆಯಬಹುದಾಗಿದೆ.ಜೇಡಿಮಣ್ಣಿನಿಂದ ಹಿಡಿದ ಮರಳು ಮಿಶ್ರಿತ ಮಣ್ಣಿನಲ್ಲಿ ಮತ್ತು ಸಾವಯವ ಪದಾರ್ಥ ಹೊಂದಿದ ಮರಳು ಮಿಶ್ರಿತ ಜೇಡಿಮಣ್ಣು,ಈ ಬೆಳೆಗೆ ಬಲು ಸೂಕ್ತವಾಗಿದೆ. ಹೆಚ್ಚು ನೀರು ನಿಲ್ಲುವ ಹಾಗೂ ಸಮಸ್ಯಾತ್ಮಕ ಮಣ್ಣುಗಳು ಈ ಬೆಳೆಗೆ ಸೂಕ್ತವಲ್ಲ.
ಬೇಸಾಯ ಕ್ರಮಗಳು
ಬದಲಾಯಿಸಿನೆಲಬೇವನ್ನು ಬೀಜದಿಂದ ಅಥವಾ ಕಾಂಡದ ತುಂಡುಗಳಿಂದ ಅಭಿವೃದ್ಧಿ ಮಾಡಬಹುದು. ಬೀಜವನ್ನು ನೇರವಾಗಿ ಬಿತ್ತನೆ ಮಡಬಹುದು ಅಥವಾ ಸಸಿಮಡಿಗಳಲ್ಲಿ ಸಸಿಗಳನ್ನು ಬೆಳಸಿ, ನಾಟಿ ಮಾಡಬಹುದು. ಸಸಿಗಳನ್ನು ಪಾಲಿಥೀನ್ ಚೀಲಗಳಲ್ಲಿ ೧:೧:೧ರ ಪ್ರಮಾಣ್ದಲ್ಲಿ ಮಣ್ಣು, ಮರಳು ಮತ್ತು ಗೊಬ್ಬರ ತುಂಬಿ ಬೆಳಸಬಹುದು ಅಥವಾ ಸಿಸಿಮಡಿಗಳನ್ನು ಮಾಡಿ ಬೆಳಸಬಹುದು. ಸಸಿಮಡಿಗಳನ್ನು ಚೆನ್ನಾಗಿ ಕೊಳೆತ ಕೊಟ್ಟಿಗೆ ಗೊಬ್ಬರ ಹಾಕಿ ೫ಸೆಂ.ಮೀ. ಅಂತರದ ಸಾಲಿನಲ್ಲಿ ಬೀಜ ಬಿತ್ತಬೇಕು. ಬಿತ್ತನೆ ಮಡಿದ ಕೂಡಲೇ ಪಾಲಿಥೀನ್ ಚೀಲಗಳಿಗೆ ಅಥವಾ ಸಸಿಮಡಿಗಳಿಗೆ ನೀರು ಕೊಡಬೇಕು. ಬಿತ್ತನೆ ಬೀಜಗಳು೮-೧೦ ದಿನಗಳಲ್ಲಿ ಮೊಳೆಯುತ್ತದೆ. ಸಸಿ ಮಡಿಗಳಲ್ಲಿ ೪೫-೬೦ದಿನಗಳ ಕಾಲ ಬೆಳೆಸಿದ ಸಸಿಗಳು ನಾಟಿ ಮಾಡಲು ಸಿದ್ಧವಾಗುತ್ತವೆ.[೩]
ಔಷಧೀಯ ಗುಣಗಳು
ಬದಲಾಯಿಸಿ- ಜ್ವರ:ಮಲೇರಿಯಾ,ಟೈಫಾಯ್ಡ್ ಮತ್ತು ಯವುದೇ ದೀರ್ಘಕಾಲೀನ ಜ್ವರದಲ್ಲಿಯೂ ನೆಲಬೇವು ತುಂಬಾ ಉಪಯುಕ್ತವಾದುದು.
- ಕಾಲರಾ: ನೆಲಬೇವಿನ ಎಲೆಗಳರಸದೊಂದಿಗೆ ಬೇವು ಮತ್ತು ಅಮೃತಬಳ್ಳಿ ಎಲೆಗಳ ರಸವನ್ನು ಸಮಭಾಗ ತೆಗೆದುಕೊಂಡು ಅದಕ್ಕೆ ಜೇನು ಬೆರಸಿ ಕುಡಿಯುವುದರಿಂದ ಕಾಲರಾ ನಿಯಂತ್ರಣಕ್ಕೆ ಬರುತ್ತದೆ.
- ಜಂತುಹುಳುವಿನ ತೊಂದರೆಯಿದ್ದಲ್ಲಿ ಪ್ರತಿದಿನ ರಾತ್ರಿಮಲಗುವ ಮುಂಚೆ ಏಳುದಿನಗಳ ಕಾಲ ನೆಲಬೇವಿನ ಕಷಾಯ ಕುಡಿಯಬೇಕು.
- ಬಾಣಂತಿಯರಲ್ಲಿ ಎದೆಹಾಲಿನ ಉತ್ಪತ್ತಿ ಹೆಚ್ಚಿಸಲು ನೆಲಬೇವಿನ ಕಷಾಯ ಕುಡಿಸಬೇಕು. ನೆಲಬೇವಿನ ಕಷಾಯಕ್ಕೆ ಜೇನು ಬೆರೆಸಿ ಕುಡಿಸಬಹುದು.[೪]
- ಬಾಯಿಹುಣ್ಣಿನ ತೊಂದರೆಯಿಂದ ಬಳಲುವವರು ನೆಲಬೇವಿನ ಕಾಂಡವನ್ನು ಒಂದು ರಾತ್ರಿ ಮಜ್ಜಿಗೆಯಲ್ಲಿ ನೆನೆಯಿಟ್ಟು ನಂತರ ಒಣಗಿಸಿ ಪುಡಿಮಾಡಿಟ್ಟುಕೊಳ್ಳಬೇಕು. ಈ ಪುಡಿಯನ್ನು ಒಂದು ಚಮಚೆಯಷ್ಟುತೆಗೆದುಕೊಂಡು ತುಪ್ಪದಲ್ಲಿ ಹುರಿದು ಊಟ ಮಾಡುವಾಗ ಅನ್ನದೊಂದಿಗೆ ಬೆರೆಸಿ ತಿನ್ನಬೇಕು.
- ಕಾಮಾಲೆ ಮತ್ತು ಇತರ ಯಕೃತ್ತಿನತೊಂದರೆಗಳಿಂದ ಬಳಲುವವರಿಗೆ ನೆಲಬೇವಿನ ಇಡೀ ಗಿಡದ ಕಷಾಯ ತುಂಬ ಉಪಯುಕ್ತ.
- ಹಾವುಕಡಿತದಲ್ಲಿಯೂನೆಲಬೇವಿನ ಕಷಾಯ ತುಂಬ ಉಪಯುಕ್ತ.ಇದು ವಿಷಹರವಾಗಿ ಕೆಲಸ ಮಾಡುತ್ತದೆ.
- ಅತಿರಕ್ತಸ್ರಾವ: ಸ್ತ್ರೀಯರಲ್ಲಿ ಮಾಸಿಕ ಸ್ರಾವವು ಅಧಿಕವಾಗುತ್ತಿದ್ದಲ್ಲಿ ನೆಲಬೇವಿನ ಕಷಾಯ ಮತ್ತು ಶ್ರೀಗಂಧದ ಕಷಾಯವನ್ನು ದಿನಕ್ಕೆ ೩ಬಾರಿ ಕುಡಿಯಬೇಕು.
- ಸಕ್ಕರೆ ಕಾಯಿಲೆಂದ ಬಳಲುವವರು:ಪ್ರತಿದಿನ ಬೆಳಗ್ಗೆ ಖಾಲಿಹೊಟ್ಟೆಯಲ್ಲಿ ನೆಲಬೇವಿನ ಎಲೆಗಳನ್ನು ಹಾಗೆಯೇ ತಿನ್ನಬಹುದು ಇಲ್ಲವೇ ನೆಲಬೇವಿನ ರಸ ಅಥವಾ ಕಷಾಯ ಸೇವನೆ ಮಾಡಿದಲ್ಲಿ ರಕ್ತದಲ್ಲಿ ಸಕ್ಕರೆಯ ಅಂಶ ಕಡಿಮೆಯಾಗುತ್ತದೆ.
- ಅರ್ಧ ತಲೆನೋವು:ನೆಲಬೇವು,ಅಮೃತಬಳ್ಳಿ,ಬೇವಿನ ತೊಗಟೆ,ಅರಶಿನ ಸಮವಾಗಿ ಬೆರಸಿ ಕುಟ್ಟಿಪುಡಿ ಮಾಡಿ ನೀರಿನಲ್ಲಿ ಹಾಕಿ ಕುದಿಸಿ ಕಷಾಯ ತಯಾರಿಸಿ ದಿನಕ್ಕೆರಡು ಬಾರಿ ಕುಡಿಯಬೇಕು.
- ಎದೆಯುರಿ,ತಲೆಸುತ್ತುಇದ್ದಲ್ಲಿ ಕಾಲು ಚಮಚೆ ಒಣಗಿದ ನೆಲಬೇವಿನ ನಯವಾದ ಪುಡಿಗೆ ಸಕ್ಕರೆ ಇಲ್ಲವೇ ಜೇನುತುಪ್ಪ ಬೆರೆಸಿ ಸೇವಿಸಬೇಕು.
ಇತರ ಭಾಷೆಗಳಲ್ಲಿ
ಬದಲಾಯಿಸಿ- ಸಂಸ್ಕೃತ-ಭೂನಿಂಬ,ಚಿರಾಯತ,ಕಿರಾತತಿಕ್ತ,ಮಹಾತಿಕ್ತ,ತಿಕ್ತ,ಅನಾರ್ಯತಿಕ್ತ
- ಹಿಂದಿ-ಚಿರಾಯತ
- ತಮಿಳು-ಶಿರತ್ಕುಚ್ಚಿ,ಚಿರಾಯತು
- ಮರಾತಠಿ-ಕಿರಾಯಿತ್,ಕಡೆ ಚಿರಾಯಿತ್
- ತೆಲುಗು-ನೆಲಮೇಮು
- ಇಂಗ್ಲಿಷ್-Chiretta,king of bitters
- ವೈಜ್ಞಾನಿಕ ಹೆಸರು-Andrographis paniculata(N.Burman)Wall.ex nees.
ಉಲ್ಲೇಖ
ಬದಲಾಯಿಸಿ- ↑ GRIN Species Profile
- ↑ "The Plant List: A Working List of All Plant Species". Retrieved 12 April 2015.
- ↑ ಮನೆಯಂಗಳದಲ್ಲಿ ಔಷಧಿವನ,ಡಾ|| ಎಂ ವಸುಂಧರ, ಡಾ|| ವಸುಂಧರಾ ಭೂಪತಿ, ೭ನೇ ಮುದ್ರಣ ೨೦೧೩, ನವ ಕರ್ನಾಟಕ ಪ್ರಕಾಶನ, ಪುಟ ಸಂಖ್ಯೆ೧೦೧
- ↑ http://surahonne.com/?p=10979