ವಿಷಮಶೀತ ಜ್ವರ
ವಿಷಮಶೀತ ಜ್ವರ, ಅಥವಾ ಸಾಮಾನ್ಯವಾಗಿ ಟೈಫಾಯ್ಡ್ ಎಂದು ಪರಿಚಿತವಾಗಿರುವ, ಸ್ಯಾಲ್ಮನೆಲಾ ಎಂಟರಿಕಾ ಸಿಯರೋವೇರ್ ಟೈಫೈ ಬ್ಯಾಕ್ಟೀರಿಯದಿಂದ ಉಂಟಾಗುವ ಒಂದು ಕಾಯಿಲೆ. ವಿಶ್ವಾದ್ಯಂತ ಸಾಮಾನ್ಯವಾಗಿ ಕಂಡುಬರುವ ಇದು, ಸೋಂಕಿರುವ ವ್ಯಕ್ತಿಯ ಮಲದಿಂದ ಕಲುಷಿತಗೊಂಡ ಆಹಾರ ಅಥವಾ ನೀರಿನ ಸೇವನೆಯಿಂದ ಹರಡುತ್ತದೆ. ಆಮೇಲೆ ಬ್ಯಾಕ್ಟೀರಿಯ ಕರುಳಿನ ಗೋಡೆಯ ಮೂಲಕ ಪ್ರವೇಶಿಸುತ್ತವೆ ಮತ್ತು ಮ್ಯಾಕ್ರಫೇಜ್‌ಗಳಿಂದ ಕಬಳಿಸಲ್ಪಡುತ್ತವೆ. ಸಾಲ್ಮೋನೆಲ್ಲಾ ಟೈಫೀ (salmonella typhi) ಎಂಬ ಹೆಸರಿನ ಬ್ಯಾಕ್ಟೀರಿಯಾದ ಸೋಂಕಿನಿಂದ ಎದುರಾಗುವ ಟೈಫಾಯ್ಡ್ ವಾಸ್ತವದಲ್ಲಿ ಜೀವನದಲ್ಲಿ ಕನಿಷ್ಟ ಒಂದು ಬಾರಿಯಾದರೂ ಬರುವ ಜ್ವರವಾಗಿದ್ದು ಕೆಲವರಲ್ಲಿ ಇದಕ್ಕೂ ಹೆಚ್ಚಿನ ಬಾರಿ ಎದುರಾಗಬಹುದು. ಟೈಫಾಯ್ಡ್ ಎಂದರೆ ವಾಸ್ತವವಾಗಿ ನಮ್ಮ ದೇಹ ನಿರೋಧಕ ವ್ಯವಸ್ಥೆ ಈ ಬ್ಯಾಕ್ಟೀರಿಯಾಕ್ಕೆ ಮುಂದೆಂದೂ ಬಾಧೆಗೊಳಗಾಗದಂತೆ ನಿರ್ಮಿಸಿಕೊಳ್ಳುವ ರಕ್ಷಣಾ ವ್ಯವಸ್ಥೆಯಾಗಿದ್ದು ಈ ಹಂತ ಪೂರ್ಣವಾಗಲು ಒಂದು ವಾರದಿಂದ ಹದಿನೈದು ದಿನಗಳಾದರೂ ಬೇಕಾಗುತ್ತದೆ. ಇದೇ ಕಾರಣಕ್ಕೆ ಈ ಅವಧಿಯಲ್ಲಿ ಭಾರೀ ಜ್ವರ, ಸುಸ್ತು ಮೊದಲಾದವು ಎದುರಾಗುತ್ತವೆ.
ಸೇವಿಸಬೇಕಾದ ಆಹಾರ
ಬದಲಾಯಿಸಿಸಾಕಷ್ಟು ದ್ರವಾಹಾರವನ್ನು ಸೇವಿಸಬೇಕು.. ರೋಗ ಪೂರ್ಣವಾಗಿ ಗುಣವಾಗುವವರೆಗೂ ದಿನದ ಎಚ್ಚರವಾಗಿದ್ದಷ್ಟೂ ಕಾಲ ಸಾಕಷ್ಟು ದ್ರವಾಹಾರವನ್ನು ಸೇವಿಸಬೇಕು. ಏಕೆಂದರೆ ಟೈಫಾಯ್ಡ್ ಜ್ವರ ಅತಿಯಾದ ಪ್ರಮಾಣದಲ್ಲಿ ರೋಗಿ ಅತಿಸಾರದ ತೊಂದರೆಯನ್ನು ಅನುಭವಿಸಬೇಕಾಗುತ್ತದೆ. ದೇಹದಿಂದ ನಷ್ಟವಾದ ದ್ರವವನ್ನು ಮರುತುಂಬಿಸದೇ ಇದ್ದರೆ ತೀವ್ರ ನಿರ್ಜಲೀಕರಣಕ್ಕೆ ಒಳಗಾಗಬಹುದು. ಒಂದು ವೇಳೆ ಈ ಜ್ವರದ ಸಮಯದಲ್ಲಿಯೇ ನಿರ್ಜಲೀಕರಣವೂ ಎದುರಾದರೆ ಪರಿಣಾಮ ಭೀಕರ ಸ್ವರೂಪಕ್ಕೆ ತಿರುಗುತ್ತದೆ. ರೋಗಿ ಪ್ರಜ್ಞಾಶೂನ್ಯನೂ ಆಗಬಹುದು. ಹಾಗಾಗಿ ದಿನದಲ್ಲಿ ಹಲವಾರು ಬಾರಿ ನೀರಿನಂಶ ಹೆಚ್ಚಿರುವ ಆಹಾರಗಳು, ತಾಜಾ ಹಣ್ಣಿನ ರಸ ಮೊದಲಾದವುಗಳನ್ನು ಸೇವಿಸುತ್ತಿರಬೇಕು.
ಟೈಫಾಯ್ಡ್ ಜ್ವರ ಪೂರ್ಣವಾಗಿ ಗುಣವಾಗುವವರೆಗೂ ಸೇವಿಸಬಾರದ ಆಹಾರಗಳು:
ಬದಲಾಯಿಸಿಕೋಸು, ಹೂಕೋಸು, ದೊಣ್ಣೆ ಮೆಣಸು, ಬದನೆ, ಮೂಲಂಗಿ, ಕಡ್ಲೆಬೇಳೆ, ಕಡ್ಲೆಕಾಳು, ಗೆಣಸು, ಹಲಸಿನ ಬೀಜ ಮೊದಲಾದ ವಾಯುಪ್ರಕೋಪವುಂಟುಮಾಡುವ ಯಾವುದೇ ಆಹಾರ ಬೇಡ. ಇದರಿಂದ ಹೊಟ್ಟೆಯುಬ್ಬರಿಕೆಯುಂಟಾಗಿ ರೋಗಿ ಇನ್ನಷ್ಟು ತೊಂದರೆ ಅನುಭವಿಸಬಹುದು.
ಖಾರವಾದ ಮತ್ತು ಆಮ್ಲೀಯ ಅಹಾರಗಳು ಬೇಡ. ಹಸಿಮೆಣಸು, ಒಣಮೆಣಸು, ಶಿರ್ಕಾ, ಲಿಂಬೆರಸ ಮೊದಲಾದವು ಜೀರ್ಣವ್ಯವಸ್ಥೆಯನ್ನು ಕದಡಬಹುದು. ಒಣಮೆಣಸು ಟೈಫಾಯ್ಡ್ ರೋಗಿಗಳ ಚೇತರಿಸುವಿಕೆಯ ಮೇಲೆ ಅಪಾರ ಪ್ರಭಾವವುಂಟುಮಾಡುತ್ತದೆ.