ಬೇಟೆ

ಆಹಾರ, ಮನರಂಜನೆ ಅಥವಾ ವ್ಯಾಪಾರಕ್ಕಾಗಿ ಸಜೀವ ವಸ್ತುವನು ಕೊಲ್ಲುವುದು
(ಕಿರಾತ ಇಂದ ಪುನರ್ನಿರ್ದೇಶಿತ)

ಬೇಟೆ ಪ್ರಾಣಿಗಳನ್ನು ಕೊಲ್ಲುವ ಅಥವಾ ಬಲೆಗೆ ಬೀಳಿಸುವ, ಅಥವಾ ಅದೇ ಉದ್ದೇಶದಿಂದಲೇ ಅವುಗಳನ್ನು ಬೆನ್ನಟ್ಟಿ ಹೋಗುವ ಅಥವಾ ಹಿಂಬಾಲಿಸುವ ಅಭ್ಯಾಸ. ವನ್ಯಜೀವಿಗಳು ಅಥವಾ ಕಾಡು ಪ್ರಾಣಿಗಳನ್ನು ಬೇಟೆಯಾಡುವುದನ್ನು ಮಾನವರು ಅತ್ಯಂತ ಸಾಮಾನ್ಯವಾಗಿ ಆಹಾರಕ್ಕಾಗಿ, ವಿನೋದಕ್ಕಾಗಿ, ತಮಗೆ ಅಥವಾ ಸಾಕು ಪ್ರಾಣಿಗಳಿಗೆ ಅಪಾಯಕಾರಿಯಾದ ಪರಭಕ್ಷಕಗಳನ್ನು ನಿರ್ನಾಮ ಮಾಡಲು, ಅಥವಾ ವ್ಯಾಪಾರಕ್ಕಾಗಿ ಮಾಡುತ್ತಾರೆ. ನ್ಯಾಯಸಮ್ಮತ ಬೇಟೆಯು ಕಳ್ಳಬೇಟೆಯಿಂದ ಬೇರೆಯಾಗಿದೆ, ಏಕೆಂದರೆ ಕಳ್ಳಬೇಟೆಯು ಬೇಟೆಯಾಡಲಾಗುವ ಪ್ರಾಣಿಯ ಅಕ್ರಮ ಕೊಲೆ, ಬಲೆ ಬೀಳಿಸುವಿಕೆ ಅಥವಾ ಸೆರೆ. ಬೇಟೆಯಾಡಲಾದ ಪ್ರಾಣಿಗಳನ್ನು ಶಿಕಾರಿ ಅಥವಾ ಎರೆ ಎಂದು ಸೂಚಿಸಲಾಗುತ್ತದೆ ಮತ್ತು ಇವು ಸಾಮಾನ್ಯವಾಗಿ ಸಸ್ತನಿಗಳು ಅಥವಾ ಪಕ್ಷಿಗಳಾಗಿರುತ್ತವೆ.

ಕಾಡುಹಂದಿಯ ಬೇಟೆ

ಬೇಟೆಯು ಉಪದ್ರವಕಾರಿ ನಿಯಂತ್ರಣದ ವಿಧಾನವೂ ಆಗಿರಬಹುದು. ಬೇಟೆಯು ಆಧುನಿಕ ವನ್ಯಜೀವಿ ನಿರ್ವಹಣೆಯ ಅಗತ್ಯ ಅಂಶವಾಗಬಲ್ಲದು[] ಎಂದು ಬೇಟೆಯ ಪ್ರತಿಪಾದಕರು ಹೇಳುತ್ತಾರೆ, ಉದಾಹರಣೆಗೆ, ಪರಭಕ್ಷಕಗಳಂತಹ ನೈಸರ್ಗಿಕ ಹತೋಟಿಗಳು ಇಲ್ಲದಿದ್ದಾಗ ಅಥವಾ ಬಹಳ ಅಪರೂಪವಿದ್ದಾಗ ಪರಿಸರದ ಜೀವಾವರಣದ ಒಯ್ಯುವ ಸಾಮರ್ಥ್ಯದೊಳಗೆ ಆರೋಗ್ಯವಂತ ಪ್ರಾಣಿಗಳ ಸಂಖ್ಯೆ ಕಾಪಾಡುವಲ್ಲಿ ಸಹಾಯಮಾಡಲು. ಆದರೆ, ಬೇಟೆಯು ಅನೇಕ ಪ್ರಾಣಿಗಳ ವಿಪತ್ತು, ನಿರ್ಮೂಲನ ಮತ್ತು ಅಳಿವಿಗೆ ಅಗಾಧವಾದ ಕೊಡುಗೆ ನೀಡಿದೆ.

ಉಲ್ಲೇಖಗಳು

ಬದಲಾಯಿಸಿ
  1. Williams, Ted. "Wanted: More Hunters," Audubon magazine, March 2002, copy retrieved 26 October 2007.
"https://kn.wikipedia.org/w/index.php?title=ಬೇಟೆ&oldid=1056965" ಇಂದ ಪಡೆಯಲ್ಪಟ್ಟಿದೆ