ನೃಪಜಿತ್ ಸಿಂಗ್ ಬೇಡಿ
ನೃಪಜಿತ್ ಸಿಂಗ್ ಬೇಡಿ (ಜನನ ೧ ಜೂನ್ ೧೯೪೦) ಸಾಮಾನ್ಯವಾಗಿ ನಿಪ್ಪಿ ಎಂದು ಕರೆಯಲ್ಪಡುವ ಇವರು ಒಬ್ಬ ವಾಲಿಬಾಲ್ ಆಟಗಾರರಾಗಿದ್ದು ಭಾರತೀಯ ರಾಷ್ಟ್ರೀಯ ತಂಡದ ಸದಸ್ಯರಾಗಿದ್ದರು ಮತ್ತು ೪ ನೇ ಏಷ್ಯನ್ ಕ್ರೀಡಾಕೂಟದಲ್ಲಿ ಬೆಳ್ಳಿ ಪದಕ ವಿಜೇತ ಪ್ರಯತ್ನದಲ್ಲಿ ಸ್ಪರ್ಧಿಸಿದ್ದರು. ಇವರು ೧೯೬೨ ರಲ್ಲಿ ಭಾರತ ಸರ್ಕಾರದಿಂದ ಅರ್ಜುನ ಪ್ರಶಸ್ತಿಯನ್ನು ಪಡೆದರು. ಇವರ ವಾಲಿಬಾಲ್ ವೃತ್ತಿಜೀವನವು ೨೩ ವರ್ಷಗಳ ಕಾಲ ನಡೆಯಿತು. ಅವರು ೧೯೯೫ ರ ನಿವೃತ್ತಿಯ ಮೊದಲು ಪಂಜಾಬ್‍ನ ಗಡಿ ಭದ್ರತಾ ಪಡೆ (ಬಿಎಸ್ಎಫ್) ಯಲ್ಲಿ ಕಮಾಂಡೆಂಟ್ ಆಗಿ ಸೇವೆ ಸಲ್ಲಿಸಿದರು.[೧][೨]
ಆರಂಭಿಕ ಜೀವನ
ಬದಲಾಯಿಸಿಬೇಡಿ ಅವರು ಭಾರತದ ಪಂಜಾಬ್‍ನ ಗುರುದಾಸ್ಪುರ ಜಿಲ್ಲೆಯ ಧರಿವಾಲ್‍ನಲ್ಲಿ ಜನಿಸಿದರು. ಅವರು ೬ ಒಡಹುಟ್ಟಿದವರಲ್ಲಿ ಕಿರಿಯವರಾಗಿದ್ದರು. ಧರಿವಾಲ್‍ನ ಹೊಲಗಳಲ್ಲಿ ಇತರರು ಆಡುವುದನ್ನು ನೋಡುತ್ತಿದ್ದರು, ಹಾಗೂ ಅವರು ೯ ನೇ ವಯಸ್ಸಿನಲ್ಲಿ ಆಡಲು ಪ್ರಾರಂಭಿಸಿದರು. ಅವರು ಹಳೆಯ ಆಟಗಾರರನ್ನು ವೀಕ್ಷಿಸುತ್ತಿದ್ದರು ಮತ್ತು ತಂತ್ರವನ್ನು ಎತ್ತಿಕೊಂಡು ಅದನ್ನು ತಮ್ಮ ವಿಶಿಷ್ಟ ಶೈಲಿಗೆ ಹೊಂದಿಸುತ್ತಿದ್ದರು. ಅವರು ತಮ್ಮ ಶಾಲಾ ಮತ್ತು ಕಾಲೇಜು ತಂಡಕ್ಕಾಗಿ ಆಡಿದರು. ಅವರು ೧೯೫೬ ರಲ್ಲಿ ತಮ್ಮ ೧೬ ನೇ ವಯಸ್ಸಿನಲ್ಲಿ ರೂರ್ಕಿ ಮತ್ತು ಶಹಜಹಾನ್ಪುರ್ ಟಾಟಾ ನಗರದಲ್ಲಿ ತಮ್ಮ ಮೊದಲ ಅಖಿಲ ಭಾರತ ಪಂದ್ಯಾವಳಿ ಪಂದ್ಯವನ್ನು ಆಡಿದರು. ಅವರು ತಂಬಾ ವೇಗವಾಗಿ ಓಡುತ್ತಿದ್ದರಿಂದ ಅವರಿಗೆ ನಿಪ್ಪಿ ಎಂಬ ಹೆಸರನ್ನು ನೀಡಲಾಯಿತು.
ಆಟಗಾರ
ಬದಲಾಯಿಸಿನಿಪ್ಪಿ ೧೯೫೬ ರಿಂದ ೧೯೫೮ ರವರೆಗೆ ಪಂಜಾಬ್ ವಿಶ್ವವಿದ್ಯಾಲಯದೊಂದಿಗೆ ವಾಲಿಬಾಲ್ ಆಡಿದರು. ಇದರಲ್ಲಿ ರೊಮಾನಿಯ, ಪೋಲೆಂಡ್, ಚೆಕೊಸ್ಲೊವೇಕಿಯಾ, ರಷ್ಯಾ (೩ ಬಾರಿ), ಜಪಾನ್, ದಕ್ಷಿಣ ಕೊರಿಯಾ, ಉತ್ತರ ಕೊರಿಯಾ, ಫಿಲಿಪೈನ್ಸ್, ಇಸ್ರೇಲ್, ಇಂಡೋನೇಷ್ಯಾ, ಫ್ರಾನ್ಸ್, ಶ್ರೀಲಂಕಾ ಮತ್ತು ಪಾಕಿಸ್ತಾನ (೧೯೫೯ ರಿಂದ ೧೯೭೪) ದಂತಹ ಎದುರಾಳಿಗಳ ವಿರುದ್ಧ ೫೯ ಅಂತರರಾಷ್ಟ್ರೀಯ ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ.
೧೯೫೯ ರಿಂದ ೧೯೭೯ ರವರೆಗೆ ಒಟ್ಟು ೨೧ ವರ್ಷಗಳ ಕಾಲ ಪಂಜಾಬ್ ರಾಜ್ಯ, ಪಂಜಾಬ್ ಪೊಲೀಸ್ ಮತ್ತು ಬಿಎಸ್ಎಫ್ ತಂಡಗಳಿಗಾಗಿ ಆಡುವ ಮೂಲಕ ನಿಪ್ಪಿ ದಾಖಲೆ ನಿರ್ಮಿಸಿದ್ದಾರೆ.
ಮುಖ್ಯಾಂಶಗಳು
ಬದಲಾಯಿಸಿ೫ ಅಡಿ ೧೦ ಇಂಚುಗಳ ಎತ್ತರವಿರುವ ನಿಪ್ಪಿಯ ಎತ್ತರವು ೬ ಅಡಿಗಿಂತ ಹೆಚ್ಚಿನ ಎತ್ತರ ಹೊಂದಿರುವ ಸಾಮಾನ್ಯ ಆಕ್ರಮಣಕಾರ ಅಥವಾ ಚೆಂಡಿನ ಸ್ಮಾಷರ್‌ಗಿಂತ ಹೆಚ್ಚಿರಲಿಲ್ಲ. ಅವರು ಲಿಫ್ಟರ್ ಆಗಿ ಪ್ರಾರಂಭಿಸಿದರು ಆದರೆ ಶೀಘ್ರದಲ್ಲೇ ೧೬ ನೇ ವಯಸ್ಸಿನಲ್ಲಿ ಸ್ಮಾಷರ್ ಮತ್ತು ಲಿಫ್ಟರ್ ಆಗಿ ಬೆಳೆದರು. ಅವರು ತಮ್ಮ ತಂತ್ರ, ದೈಹಿಕ ಸಾಮರ್ಥ್ಯದಲ್ಲಿ ಶ್ರಮಿಸಿದರು ಮತ್ತು ಅವರ ಆಹಾರದ ಬಗ್ಗೆ ಬಹಳ ನಿರ್ದಿಷ್ಟವಾಗಿದ್ದರು. ಪ್ರತಿದಿನ ಅವರು ಚೆಂಡನ್ನು ಸ್ಪೈಕ್ ಮಾಡಲು ಜಂಪ್‍ನಲ್ಲಿ ಅಭ್ಯಾಸ ಮಾಡುತ್ತಿದ್ದರು. ಅವರು ಎಷ್ಟು ಎತ್ತರಕ್ಕೆ ಜಿಗಿಯಲು ಸಾಧ್ಯವಾಯಿತು ಎಂದರೆ ಅವರು ೧೧ ಅಡಿ ೪ ಇಂಚು ಎತ್ತರವನ್ನು ತಲುಪುತ್ತಿದ್ದರು ಮತ್ತು ಇಚ್ಛೆಯಂತೆ ಚೆಂಡನ್ನು ಸ್ಪೈಕ್ ಮಾಡುತ್ತಿದ್ದರು. ಅವರು ಭಾರತೀಯ ವಾಲಿಬಾಲ್‍ನಲ್ಲಿ ತಮ್ಮ ದೇಹವನ್ನು ಗಾಳಿಯಲ್ಲಿ ತಿರುಗಿಸಲು ಮತ್ತು ಚೆಂಡನ್ನು ಸ್ಪೈಕ್ ಮಾಡಲು ಸಾಧ್ಯವಾದ ಏಕೈಕ ಸ್ಪೈಕರ್.
ನಿಪ್ಪಿ ಜಕಾರ್ತಾದಲ್ಲಿ (೧೯೬೨) ನಡೆದ ೪ ನೇ ಏಷ್ಯನ್ ಕ್ರೀಡಾಕೂಟದಲ್ಲಿ ಸ್ಪರ್ಧಿಸಿದರು. ಅಲ್ಲಿ ಭಾರತೀಯ ರಾಷ್ಟ್ರೀಯ ವಾಲಿಬಾಲ್ ತಂಡವು ಬೆಳ್ಳಿ ಪದಕವನ್ನು ಗೆದ್ದಿತು. ಚಾಂಪಿಯನ್‍ಶಿಪ್‍ನಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ಹೆಚ್ಚು ಪೈಪೋಟಿಯ ಪಂದ್ಯದ ಸೆಮಿಫೈನಲ್‍ನಲ್ಲಿ ಭಾರತ ಗೆದ್ದಿತು. ಇದು ಭಾರತೀಯ ವಾಲಿಬಾಲ್ ಇತಿಹಾಸದಲ್ಲಿ ಇದುವರೆಗೆ ಗೆದ್ದ ಅತ್ಯಧಿಕ ಪದಕವಾಗಿದೆ.
ಬ್ಯಾಂಕಾಕ್‍ನಲ್ಲಿ (೧೯೬೬) ನಡೆದ ಏಷ್ಯನ್ ಕ್ರೀಡಾಕೂಟದಲ್ಲಿ ನಿಪ್ಪಿ ಭಾರತವನ್ನು ಪ್ರತಿನಿಧಿಸಿದ್ದರು. ೧೯೬೪ ರ ಉತ್ತರಾರ್ಧದಲ್ಲಿ ನಡೆದ ಟೋಕಿಯೊ ಒಲಿಂಪಿಕ್ಸ್‌ಗೆ ಮುಂಚಿತವಾಗಿ ಭಾರತೀಯ ತಂಡವು ದೆಹಲಿಯಲ್ಲಿ (೧೯೬೩) ನಡೆದ ಪೂರ್ವ ಒಲಿಂಪಿಕ್ ಅರ್ಹತಾ ಚಾಂಪಿಯನ್‍ಶಿಪ್‍ಗಳಲ್ಲಿ ಕಂಚಿನ ಪದಕವನ್ನು ಗೆದ್ದಿತು.
ನಿಪ್ಪಿ ೧೯೬೨ ರಲ್ಲಿ ಅರ್ಜುನ ಪ್ರಶಸ್ತಿಯನ್ನು ಪಡೆದ ಅತ್ಯಂತ ಕಿರಿಯ ವ್ಯಕ್ತಿ ಮತ್ತು ಪಂಜಾಬ್ ರಾಜ್ಯದ ಮೊದಲ ಪ್ರಶಸ್ತಿ ವಿಜೇತರಾಗಿದ್ದಾರೆ. ಇವರು ವಾಲಿಬಾಲ್‍ನಲ್ಲಿನ ಸಾಧನೆಗಾಗಿ ಪ್ರಶಸ್ತಿ ಪಡೆದ ಪಂಜಾಬ್ ಪೊಲೀಸ್ ಮತ್ತು ಬಿಎಸ್ಎಫ್‍ನ ಮೊದಲ ಸದಸ್ಯರಾಗಿದ್ದಾರೆ.[೩] ಒಂದು ದಶಕದ ನಂತರ, ನಿಪ್ಪಿಯನ್ನು ೧೯೭೪ ರಲ್ಲಿ ಪಂಜಾಬ್ ಸರ್ಕಾರವು ವರ್ಷದ ಕ್ರೀಡಾಪಟು ಎಂದು ಘೋಷಿಸಿತು.
ನಿಪ್ಪಿ ಅವರ ನಾಯಕತ್ವದಲ್ಲಿ, ಬಿಎಸ್ಎಫ್ ೧೯೬೮ ರಿಂದ ೧೯೭೯ ರವರೆಗೆ ರಾಷ್ಟ್ರೀಯ ಚಾಂಪಿಯನ್‍ಶಿಪ್‍ಗಳಾದ ಅಖಿಲ ಭಾರತೀಯ ಪೊಲೀಸ್ ಆಟಗಳು ಮತ್ತು ಭಾರತದಾದ್ಯಂತ ಮುಕ್ತ ಅಖಿಲ ಭಾರತ ಪಂದ್ಯಾವಳಿಗಳು / ಚಾಂಪಿಯನ್‍ಶಿಪ್‍ಗಳಲ್ಲಿ ಸೋಲಲಿಲ್ಲ. ನಿಪ್ಪಿ ೧೯೫೮ ರಿಂದ ೧೯೭೯ ರವರೆಗೆ ನಿರಂತರವಾಗಿ ಅಖಿಲ ಭಾರತ ರಾಷ್ಟ್ರೀಯ ಪಂದ್ಯಗಳನ್ನು ಆಡಿದ ದಾಖಲೆಯನ್ನು ಹೊಂದಿದ್ದಾರೆ. ಅವರು ರಾಷ್ಟ್ರೀಯ ಮಟ್ಟದಲ್ಲಿ ೧೩ ಚಿನ್ನ, ೫ ಬೆಳ್ಳಿ ಮತ್ತು ೧ ಕಂಚಿನ ಪದಕವನ್ನು ಗೆದ್ದಿದ್ದಾರೆ. ೧೯೬೫ ರಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವಿನ ಯುದ್ಧದಿಂದಾಗಿ ನ್ಯಾಷನಲ್ಸ್ ಪಂದ್ಯಗಳು ನಡೆಯಲಿಲ್ಲ.
ಅವರು ೧೯೯೫ ರಲ್ಲಿ ನಿವೃತ್ತರಾಗುವ ಮೊದಲು ಗಡಿ ಭದ್ರತಾ ಪಡೆ (ಬಿಎಸ್ಎಫ್) ಯಲ್ಲಿ ಕಮಾಂಡೆಂಟ್ ಆಗಿ ಸೇವೆ ಸಲ್ಲಿಸಿದರು. ಅವರ ಆಜ್ಞೆಯು ಅವರನ್ನು ಜಮ್ಮು ಕಾಶ್ಮೀರ - ಮೆಂಧೇರ್, ಪಶ್ಚಿಮ ಬಂಗಾಳ - ರಾಯ್ಗಂಜ್, ಮಾಲ್ಡಾ, ರಾಜಸ್ಥಾನ, ಗುಜರಾತ್ - ರಣ್ ಆಫ್ ಕಚ್, ಪಂಜಾಬ್ - ಡೇರಾ ಬಾಬಾ ನಾನಕ್, ಫಾಜಿಲ್ಕಾ ಮುಂತಾದ ಭಾರತದಾದ್ಯಂತ ಕರೆದೊಯ್ದಿತು.
ನಿಪ್ಪಿ ಅವರು ೧೯೯೨ ರಲ್ಲಿ ಶ್ಲಾಘನೀಯ ಸೇವೆಗಾಗಿ ರಾಷ್ಟ್ರಪತಿಗಳ ಪೊಲೀಸ್ ಪದಕ ಮತ್ತು ಪಂಜಾಬ್ ಪೊಲೀಸರಿಂದ ಜೀವಮಾನ ಸಾಧನೆ ಪ್ರಶಸ್ತಿಗೆ ಭಾಜನರಾಗಿದ್ದರು. ೨೦೧೯ ರಲ್ಲಿ ಗುರುನಾನಕ್ ದೇವ್ ಜಿ ಅವರ ೫೫೦ ನೇ ಜನ್ಮ ದಿನಾಚರಣೆಯ ಭಾಗವಾಗಿ ವಾಲಿಬಾಲ್‍ಗೆ ನೀಡಿದ ಅತ್ಯುತ್ತಮ ಕೊಡುಗೆಗಳಿಗಾಗಿ ಪಂಜಾಬ್ ಸರ್ಕಾರ ನಿಪ್ಪಿ ಅವರನ್ನು ಗೌರವಿಸಿತು.
ಪ್ರಸಿದ್ಧ ಆಂಗ್ಲೋ ಇಂಡಿಯಾ ಮೆಲೊಡಿ ಮೆಲೊ ತನ್ನ ವಿಶ್ವ ಕ್ರೀಡಾಪಟುಗಳ ಪುಸ್ತಕದಲ್ಲಿ "ಭಾರತವು ಕೇವಲ ಒಂದು ನಿಪ್ಪಿ ಅವರನ್ನು ಉತ್ಪಾದಿಸಿದೆ ಮತ್ತು ಮತ್ತೊಂದು ನಿಪ್ಪಿ ಇರಲು ಸಾಧ್ಯವಿಲ್ಲ" ಎಂದು ಹೇಳಿದ್ದಾರೆ.
ಕೋಚ್
ಬದಲಾಯಿಸಿನಿಪ್ಪಿ ಬಿಎಸ್ಎಫ್ ವಾಲಿಬಾಲ್ ತಂಡದ ನಾಯಕನೊಂದಿಗೆ ತರಬೇತುದಾರರಾಗಿದ್ದರು. ಅವರ ನಾಯಕತ್ವದಲ್ಲಿ ಬಿಎಸ್ಎಫ್ ತಂಡವು ಸೋಲಿಸಲಾಗದ ಶಕ್ತಿಯಾಗಿ ಮಾರ್ಪಟ್ಟಿತು. ಅವರು ಏಕಕಾಲದಲ್ಲಿ ತರಬೇತುದಾರ ಮತ್ತು ನಾಯಕನ ಜವಾಬ್ದಾರಿಗಳನ್ನು ಗಮನಾರ್ಹವಾಗಿ ಸಮತೋಲನಗೊಳಿಸಿದರು. ನಿಪ್ಪಿ ಭಾರತೀಯ ವಾಲಿಬಾಲ್ ತಂಡಕ್ಕೆ ತರಬೇತುದಾರರಾಗಿ ನೇಮಕಗೊಂಡರು ಮತ್ತು ೧೯೮೩ ರಲ್ಲಿ ಜಪಾನ್‍ನಲ್ಲಿ ನಡೆದ ಏಷ್ಯನ್ ಪುರುಷರ ವಾಲಿಬಾಲ್ ಚಾಂಪಿಯನ್‍ಶಿಪ್‍ಗೆ ತಂಡವನ್ನು ಮುನ್ನಡೆಸಿದರು. ಅವರು ೧೯೬೭, ೧೯೭೪ ಮತ್ತು ೧೯೮೩ ರಲ್ಲಿ ಭಾರತೀಯ ಪೊಲೀಸ್ ತಂಡಕ್ಕೆ ತರಬೇತುದಾರರಾಗಿದ್ದರು ಮತ್ತು ೧೫ ವರ್ಷಗಳ ಅವಧಿಗೆ ಬಿಎಸ್ಎಫ್ ತಂಡದೊಂದಿಗೆ ಅದೇ ಸ್ಥಾನವನ್ನು ತುಂಬಿದರು.
ಬಲ್ವಂತ್ ಸಿಂಗ್ ಬಾಲು ಸೇರಿದಂತೆ ಭಾರತವನ್ನು ಪ್ರತಿನಿಧಿಸಿದ ಅನೇಕ ಆಟಗಾರರಿಗೆ ನಿಪ್ಪಿ ತರಬೇತಿ ನೀಡಿದರು. ನಿಪ್ಪಿ ಸ್ಪೋರ್ಟ್ಸ್ ಕೌನ್ಸಿಲ್ ಆಫ್ ಇಂಡಿಯಾದ ಸದಸ್ಯರಾಗಿದ್ದರು, ಭಾರತೀಯ ಕ್ರೀಡಾ ಪ್ರಾಧಿಕಾರದ (ಸಾಯ್) ಆಯ್ಕೆಗಾರ ಮತ್ತು ಡಿವಿಎ ಅಧ್ಯಕ್ಷರಾಗಿದ್ದರು.
ನಿವೃತ್ತಿ
ಬದಲಾಯಿಸಿನಿವೃತ್ತಿಯ ನಂತರ ನಿಪ್ಪಿ ಜಲಂಧರ್‌ನಲ್ಲಿ ನೆಲೆಸಿದ್ದಾರೆ.[೧] ಅವರು ಇನ್ನೂ ಯುವಕರಿಗೆ ಉಚಿತ ತರಬೇತಿ ನೀಡುವಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ವಾಲಿಬಾಲ್ ಕ್ಷೇತ್ರದಲ್ಲಿ ಉದಯೋನ್ಮುಖ ಆಟಗಾರರಿಗೆ ಸಲಹೆಗಳನ್ನು ನೀಡಲು ಅವರು ತರಬೇತಿ ಶಿಬಿರಗಳಲ್ಲಿ ಭಾಗವಹಿಸುತ್ತಾರೆ.
ಪ್ರಶಸ್ತಿಗಳು
ಬದಲಾಯಿಸಿ- ೧೯೬೨ ಅರ್ಜುನ ಪ್ರಶಸ್ತಿ
- ೧೯೭೪ ವರ್ಷದ ಕ್ರೀಡಾಪಟು; ಪಂಜಾಬ್ ಸರ್ಕಾರ
- ೧೯೯೨ ಶ್ಲಾಘನೀಯ ಸೇವೆಗಳಿಗಾಗಿ ರಾಷ್ಟ್ರಪತಿಗಳ ಪೊಲೀಸ್ ಪದಕ (ಗಡಿ ಭದ್ರತಾ ಪಡೆ)
- ೨೦೦೭ ಪಂಜಾಬ್ ಪೊಲೀಸರಿಂದ ಜೀವಮಾನ ಸಾಧನೆ ಪ್ರಶಸ್ತಿ
- ೨೦೧೯ ರಲ್ಲಿ ಗುರುನಾನಕ್ ದೇವ್ ಜಿ ಅವರ ೫೫೦ ನೇ ಜನ್ಮ ದಿನಾಚರಣೆಯಂದು ಪಂಜಾಬ್ ಸರ್ಕಾರವು ಇವರನ್ನು ಗೌರವಿಸಿದೆ.
ಉಲ್ಲೇಖಗಳು
ಬದಲಾಯಿಸಿ- ↑ ೧.೦ ೧.೧ "Controversy refuses to die down". The Tribune. 20 May 2010.
- ↑ Achievements in the field of Sports Archived 2012-03-02 ವೇಬ್ಯಾಕ್ ಮೆಷಿನ್ ನಲ್ಲಿ. Border Security Force (BSF) website.
- ↑ "List of Award winners up to 2004". Archived from the original on 25 ಡಿಸೆಂಬರ್ 2007. Retrieved 25 ಡಿಸೆಂಬರ್ 2007. Ministry of Sports Affairs and Sports, Government of India.