ನೀನಾ ಪ್ರಸಾದ್ ಓರ್ವ ಭಾರತೀಯ ನೃತ್ಯಗಾರ್ತಿ.[] ಇವರು ಮೋಹಿನಿಯಾಟ್ಟಂ[] ನೃತ್ಯರೂಪಕದಲ್ಲಿ ಪ್ರಸಿದ್ಧಿಹೊಂದಿದ್ದಾರೆ. ಇವರು ತಿರುವನಂತಪುರಂನಲ್ಲಿರುವ್ ಭರತಾಂಜಲಿ ಅಕಾಡೆಮಿ ಆಫ್ ಇಂಡಿಯನ್ ಡ್ಯಾನ್ಸ್‌ ಮತ್ತು [][]ನ ಸೌಗಂದಿಕಾ ಮೋಹಿನ್ಯಾಟ್ಟಂ ಕೇಂದ್ರದ ಸ್ಥಾಪಕರು ಮತ್ತು ಪ್ರಾಂಶುಪಾಲರು.

ನೀನಾ ಪ್ರಸಾದ್
Born
Occupations
  • ಭಾರತೀಯ ನೃತ್ಯಗಾರ್ತಿ
  • ನೃತ್ಯ ಸಂಯೋಜಕಿ
  • ಶಿಕ್ಷಕಿ
Known forಮೋಹಿನಿಯಾಟ್ಟಂ
Spouseಸುನೀಲ್.ಸಿ.ಕುರಿಯನ್
Websiteneenaprasad.com

ಆರಂಭಿಕ ಜೀವನ ಮತ್ತು ಶಿಕ್ಷಣ

ಬದಲಾಯಿಸಿ

ಇವರು ಭರತನಾಟ್ಯ, ಕೂಚಿಪುಡಿ, ಮೋಹಿನಿಯಾಟ್ಟಂ ಮತ್ತು ಕಥಕ್ಕಳಿ ನೃತ್ಯಗಳಲ್ಲಿ ಪ್ರಾವೀಣ್ಯತೆ ಹೊಂದಿದ್ದಾರೆ. ಇಂಗ್ಲಿಷ್ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಕಲ್ಕತ್ತಾದ ರವೀಂದ್ರ ಭಾರತಿ ವಿಶ್ವವಿದ್ಯಾಲಯದಿಂದ "ದಕ್ಷಿಣ ಭಾರತದ ಶಾಸ್ತ್ರೀಯ ನೃತ್ಯಗಳಲ್ಲಿ ಲಾಸ್ಯ ಮತ್ತು ತಾಂಡವ ಪರಿಕಲ್ಪನೆಗಳು-ಒಂದು ವಿವರವಾದ ಅಧ್ಯಯನ" ಎಂಬ ಪ್ರಬಂಧಕ್ಕಾಗಿ ಅವರಿಗೆ ಪಿಎಚ್‌ಡಿ ನೀಡಲಾಗಿದೆ. ಇವರಿಗೆ ಸರ್ರೆ ವಿಶ್ವವಿದ್ಯಾನಿಲಯದ ಕ್ರಾಸ್ ಕಲ್ಚರಲ್ ಮ್ಯೂಸಿಕ್ ಅಂಡ್ ಡ್ಯಾನ್ಸ್ ಪರ್ಫಾರ್ಮೆನ್ಸ್ಗಾಗಿ ಎಎಚ್ಆರ್‌ಬಿ (AHRB) ಸಂಶೋಧನಾ ಕೇಂದ್ರದಿಂದ ಪೋಸ್ಟ್ ಡಾಕ್ಟರೇಟ್ ಸಂಶೋಧನಾ ಫೆಲೋಶಿಪ್ ಲಭಿಸಿದೆ.

ನೃತ್ಯ ಶಿಕ್ಷಣ

ಬದಲಾಯಿಸಿ

ಮೋಹಿನಿಯಾಟ್ಟಂ - ಕಲಾಮಂಡಲಂ ಸುಗಂಧಿ - ೮ ವರ್ಷಗಳು

ಕಲಾಮಂಡಲಂ ಕ್ಷೇಮಾವತಿ - ೩ ವರ್ಷಗಳು

ಭರತನಾಟ್ಯ - ಪದ್ಮಶ್ರೀ ಅಡ್ಯಾರ್ ಕೆ. ಲಕ್ಷ್ಮಣ್ – ೧೧ ವರ್ಷ

ಕೂಚಿಪುಡಿ - ಪದ್ಮಭೂಷಣ ವೆಂಪಟ್ಟಿ ಚೀನಾ ಸತ್ಯಂ –೧೨ ವರ್ಷ

ಕಥಕ್ಕಳಿ - ವೆಂಬಾಯಂ ಅಪ್ಪುಕುಟ್ಟನ್ ಪಿಳ್ಳೈ – ೧೦ ವರ್ಷ

ಪ್ರಶಸ್ತಿಗಳು

ಬದಲಾಯಿಸಿ

ಪ್ರಸಾದ್ ಅವರು ೨೦೦೭ರಲ್ಲಿ ಕೇರಳ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ [], ಮಾಯಿಲ್ಪೀಲಿ ಪ್ರಶಸ್ತಿ[] ಪಡೆದರು. ೨೦೧೫ ರಲ್ಲಿ "ನಿರ್ತ್ಯ ಚೂಡಾಮಣಿ"[] ಪ್ರಶಸ್ತಿ ಹಾಗೂ ೨೦೧೭ರಲ್ಲಿ ಕೇರಳ ಕಲ್ಮಂಡಲಂ ಪ್ರಶಸ್ತಿ (ಮೋಹಿನಿಯಾಟ್ಟಂ)[] ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ.

ಉಲ್ಲೇಖಗಳು

ಬದಲಾಯಿಸಿ