ಪರಹಿತ ಚಿಂತನೆ

(ನಿಸ್ವಾರ್ಥ ಇಂದ ಪುನರ್ನಿರ್ದೇಶಿತ)

ಆಲ್ಟ್ರುಯಿಸಮ್ (ಪರಹಿತಚಿಂತನೆ)(pronounced /ˈæltruːɪzəm/) ಎಂಬುದು ಇತರರ ಒಳಿತಿಗಾಗಿ ತೋರುವ ನಿಸ್ಸ್ವಾರ್ಥ ಕಾಳಜಿ. ಇದು ಹಲವು ಸಂಸ್ಕೃತಿಗಳಲ್ಲಿ ಕಂಡುಬರುವ ಒಂದು ಸಾಂಪ್ರದಾಯಿಕ ಸದ್ಗುಣವಾಗಿದೆ, ಜೊತೆಗೆ ಜೂಡೆಯಿಸಮ್, ಕ್ರೈಸ್ತಧರ್ಮ, ಇಸ್ಲಾಂ ಧರ್ಮ, ಹಿಂದೂಧರ್ಮ, ಜೈನಧರ್ಮ, ಬೌದ್ಧಧರ್ಮ, ಕನ್ಫ್ಯೂಷಿಯಸ್ ಧರ್ಮ, ಸಿಖ್ ಧರ್ಮ ಹಾಗು ಇತರ ಹಲವಾರು ಧಾರ್ಮಿಕ ಸಂಪ್ರದಾಯಗಳ ಮುಖ್ಯ ಅಂಶವಾಗಿದೆ. ಪರಹಿತಚಿಂತನೆಯು ಸ್ವಾರ್ಥದ ವಿರುದ್ಧ ಗುಣವಾಗಿದೆ.

ಹಲವು ಸಂಸ್ಕೃತಿಗಳು ಹಾಗು ಧರ್ಮಗಳಲ್ಲಿ ಬಡವರಿಗೆ ದಾನಧರ್ಮವನ್ನು ಮಾಡುವುದು ಸಾಮಾನ್ಯವಾಗಿ ಒಂದು ಪರಹಿತಚಿಂತನೆಯ ಕಾರ್ಯವೆಂದು ಪರಿಗಣಿಸಲಾಗುತ್ತದೆ.

ಪರಹಿತಚಿಂತನೆಯನ್ನು ನಿಷ್ಠೆ ಹಾಗು ಕರ್ತವ್ಯದ ಭಾವನೆಗಳಿಂದ ಪ್ರತ್ಯೇಕಿಸಬಹುದಾಗಿದೆ. ಪರಹಿತಚಿಂತನೆಯು ಇತರರಿಗೆ ಸಹಾಯ ಮಾಡುವುದಕ್ಕೆ ಪ್ರೇರಣೆ ನೀಡುತ್ತದೆ ಅಥವಾ ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ಇತರರಿಗೆ ಒಳಿತನ್ನು ಮಾಡುವುದನ್ನು ಬಯಸುತ್ತದೆ. ಕರ್ತವ್ಯವು ಒಬ್ಬ ನಿರ್ದಿಷ್ಟ ವ್ಯಕ್ತಿಯೆಡೆಗೆ(ಉದಾಹರಣೆಗೆ, ದೇವರು, ಒಬ್ಬ ರಾಜ), ಒಂದು ನಿರ್ದಿಷ್ಟ ಸಂಸ್ಥೆ ಎಡೆಗೆ (ಉದಾಹರಣೆಗೆ, ಒಂದು ಸರ್ಕಾರ), ಅಥವಾ ಒಂದು ಅಮೂರ್ತ ಕಲ್ಪನೆಯೆಡೆಗೆ(ಉದಾಹರಣೆಗೆ, ದೇಶಭಕ್ತಿ ಮುಂತಾದವು) ಹೊಂದಿರುವ ಒಂದು ನೈತಿಕ ಜವಾಬ್ದಾರಿಯಾಗಿರುತ್ತದೆ. ಕೆಲವು ವ್ಯಕ್ತಿಗಳಿಗೆ ಪರಹಿತಚಿಂತನೆ ಹಾಗು ಕರ್ತವ್ಯ ಪೂರೈಸಿದ ಎರಡೂ ಭಾವನೆಗಳು ಉಂಟಾಗಬಹುದು. ಉಳಿದವರಿಗೆ ಆ ಭಾವನೆ ಉಂಟಾಗದಿರಬಹುದು. ಪರಿಶುದ್ಧವಾದ ಪರಹಿತಚಿಂತನೆ ಎಂದರೆ ಪ್ರತಿಫಲಾಪೇಕ್ಷೆಯನ್ನು ಬಯಸದೆ ಅಥವಾ ಮಾನ್ಯತೆ ಹಾಗು ಅವಶ್ಯಕತೆಗಳಿಂದ ಉಂಟಾಗುವ ಲಾಭವನ್ನು ಪರಿಗಣಿಸದೆ ಮಾಡುವ ನಿಸ್ವಾರ್ಥ ಸೇವೆ.

"ಪರಹಿತಚಿಂತನೆ" ಎಂಬ ಪದವು ನೈತಿಕ ಸಿದ್ಧಾಂತಕ್ಕೂ ಸಹ ಸೂಚಿತವಾಗಿದೆ. ಈ ಸಿದ್ಧಾಂತವು, ವ್ಯಕ್ತಿಗಳು ನೈತಿಕವಾಗಿ ಇತರರಿಗೆ ಉಪಕಾರವನ್ನು ಮಾಡಲು ಬದ್ಧರಾಗಿರುತ್ತಾರೆಂದು ಪ್ರತಿಪಾದಿಸುತ್ತದೆ. ಈ ದೃಷ್ಟಿಕೋನದಲ್ಲಿ ಪರಿಗಣಿಸಿದಾಗ, ಇದು ಅಹಂಭಾವಕ್ಕೆ ವಿರುದ್ಧವಾಗಿದೆ.

ಪರಹಿತಚಿಂತನೆಯ ಕಲ್ಪನೆ

ಬದಲಾಯಿಸಿ

ಪರಹಿತಚಿಂತನೆ ಎಂಬ ಕಲ್ಪನೆಯು ತತ್ತ್ವಶಾಸ್ತ್ರದ ಹಾಗು ನೈತಿಕ ಚಿಂತನೆಯಲ್ಲಿ ಒಂದು ಸುದೀರ್ಘವಾದ ಇತಿಹಾಸವನ್ನು ಹೊಂದಿದೆ. ಪರಹಿತಚಿಂತನೆ ಎಂಬ ಪದವನ್ನು ಮೂಲತಃ ಸಮಾಜಶಾಸ್ತ್ರದ ಜನಕ ಹಾಗು ವಿಜ್ಞಾನದ ತತ್ವಶಾಸ್ತ್ರಜ್ಞ, ಅಗಸ್ಟ್ ಕಾಮ್ಟೆ ರಚಿಸಿದರು. ಜೊತೆಗೆ ಇದು ಮನೋವಿಜ್ಞಾನಿಗಳು(ಅದರಲ್ಲೂ ವಿಶೇಷವಾಗಿ ವಿಕಾಸಾತ್ಮಕ ಮನೋವಿಜ್ಞಾನ ಸಂಶೋಧಕರು), ವಿಕಾಸಾತ್ಮಕ ಜೀವವಿಜ್ಞಾನಿಗಳು, ಹಾಗು ವರ್ತನೆಶಾಸ್ತ್ರಜ್ಞರಿಗೆ ಒಂದು ಪ್ರಮುಖ ವಿಷಯವಾಯಿತು. ಪರಹಿತಚಿಂತನೆಯ ಬಗೆಗಿನ ಕಲ್ಪನೆಯು ಒಂದು ಕ್ಷೇತ್ರದಿಂದ ಇತರ ಕ್ಷೇತ್ರಗಳ ಮೇಲೆ ಪ್ರಭಾವವನ್ನು ಬೀರಬಹುದು, ಈ ಕ್ಷೇತ್ರಗಳ ವಿಭಿನ್ನ ಪದ್ದತಿಗಳು ಹಾಗು ಅವುಗಳ ಮೇಲೆ ಗಮನ ಕೇಂದ್ರೀಕರಣವು ಪರಹಿತಚಿಂತನೆಯ ವಿವಿಧ ದೃಷ್ಟಿಕೋನಕ್ಕೆ ಎಡೆ ಮಾಡಿಕೊಡಬಹುದು.

ಧಾರ್ಮಿಕ ದೃಷ್ಟಿಕೋನಗಳು

ಬದಲಾಯಿಸಿ

ಬಹುತೇಕವಾಗಿ, ಹೆಚ್ಚು ಕಡಿಮೆ ವಿಶ್ವದ ಎಲ್ಲ ಧರ್ಮಗಳು ಪರಹಿತಚಿಂತನೆಯನ್ನು ಬಹಳ ಮುಖ್ಯವಾದ ಒಂದು ನೈತಿಕ ಮೌಲ್ಯವೆಂದು ಉತ್ತೇಜಿಸುತ್ತವೆ. ಜೂಡೆಯಿಸಮ್, ಹಿಂದೂಧರ್ಮ, ಇಸ್ಲಾಂ ಧರ್ಮ, ಕ್ರೈಸ್ತಧರ್ಮ, ಬೌದ್ಧಧರ್ಮ, ಹಾಗು ಸಿಖ್ ಧರ್ಮ, ಮುಂತಾದವು., ಪರಹಿತಚಿಂತನೆಯ ನೈತಿಕತೆಗೆ ವಿಶಿಷ್ಟವಾದ ಮಹತ್ವವನ್ನು ನೀಡುತ್ತವೆ.

ಬೌದ್ಧ ಧರ್ಮ

ಬದಲಾಯಿಸಿ

ಬೌದ್ಧಧರ್ಮದಲ್ಲಿ ಪರಹಿತಚಿಂತನೆಯು ಒಂದು ಪ್ರಮುಖ ಅಂಶವಾಗಿದೆ. ಬೌದ್ಧಧರ್ಮದ ಎಲ್ಲ ರೂಪಗಳಲ್ಲಿ ಪ್ರೇಮ ಹಾಗು ಕರುಣೆಯು ಪ್ರಮುಖ ಅಂಶಗಳಾಗಿವೆ, ಜೊತೆಗೆ ಈ ಎರಡೂ ಅಂಶಗಳು ಎಲ್ಲ ಜೀವಿಗಳಿಗೆ ಸಮನಾಗಿ ಹಂಚಿಕೆಯಾಗಿರುತ್ತದೆ: ಎಲ್ಲ ಜೀವಿಗಳು ಸಂತೋಷದಿಂದಿರಬೇಕೆಂಬ(ಪ್ರೇಮ) ಅಪೇಕ್ಷೆ ಹಾಗು ಎಲ್ಲ ಜೀವಿಗಳು ಸಂಕಟದಿಂದ ಮುಕ್ತಗೊಳ್ಳಬೇಕೆಂಬ ಹಾರೈಕೆ (ಕರುಣೆ). "ಹಲವು ರೋಗಗಳನ್ನು ಪ್ರೇಮ ಹಾಗು ಕರುಣೆ ಎಂಬ ಒಂದೇ ಔಷಧದಿಂದ ಗುಣಪಡಿಸಬಹುದಾಗಿದೆ. ಈ ಗುಣಗಳು ಮಾನವನ ಸಂತೋಷಕ್ಕಿರುವ ಅಂತಿಮ ಮೂಲ, ಹಾಗು ಅವುಗಳ ಅಗತ್ಯವು ನಮ್ಮೊಳಗೇ ಅಡಗಿದೆ" (ದಲೈ ಲಾಮ).[]

"ಎಲ್ಲ ಜೀವಿಗಳಲ್ಲಿ" ಮಾನವನು ಸೇರುವುದರಿಂದ, ಬೌದ್ಧ ಧರ್ಮದಲ್ಲಿ ಪ್ರೇಮ ಹಾಗು ಕರುಣೆಯು ತಾನು ಹಾಗು ಪರರು ಎಂಬ ವೈದೃಶ್ಯದ ಆಚೆಗೆ ನಿಲ್ಲುತ್ತದೆ. ತಾನು ಹಾಗು ಪರರು ಎಂಬ ಪ್ರತ್ಯೇಕತೆಯೇ ನಮ್ಮ ಸಂಕಟಗಳ ಮೂಲ ಕಾರಣದ ಒಂದು ಭಾಗವೆಂದೂ ಸಹ ಈ ಧರ್ಮವು ಹೇಳುತ್ತದೆ. ಆದಾಗ್ಯೂ, ಕಾರ್ಯತಃ ಪದಗಳಲ್ಲಿ, ನಮ್ಮೊಳಗಿರುವ ಸ್ವಾಭಾವಿಕ ಸ್ವಾರ್ಥಪರತೆಯ ಕಾರಣದಿಂದಾಗಿ, ಬೌದ್ಧಧರ್ಮವು ಇತರರಿಗೆ ಪ್ರೇಮ ಹಾಗು ಕರುಣೆಯನ್ನು ತೋರಲು ಉತ್ತೇಜಿಸುತ್ತದೆ, ಹಾಗು ಈ ರೀತಿಯಾಗಿ ಇದನ್ನು "ಪರಹಿತಚಿಂತನಕಾರಿ" ಎಂದು ವರ್ಣಿಸಲಾಗಿದೆ. ಒಂದು ಧರ್ಮವಾಗಿ ಬೌದ್ಧಧರ್ಮವು ಇತರರೆಡೆ ಕರುಣೆಯನ್ನು ತೋರುತ್ತದೆ ಎಂಬ ದಲೈ ಲಾಮಾರ ಮಾತಿಗೆ ಹಲವರು ಸಮ್ಮತಿ ಸೂಚಿಸುತ್ತಾರೆ.

ಆದಾಗ್ಯೂ, ಈ ರೀತಿಯ ರೂಢಿಯು ನಮ್ಮ ಸಂತೋಷವನ್ನು ಉತ್ತೇಜಿಸುತ್ತದೆ ಎಂಬ ನಂಬಿಕೆಯಿಂದಾಗಿ ಪರಹಿತಚಿಂತನೆಯ ಕಲ್ಪನೆಯು ವಿಶ್ವದ ದೃಷ್ಟಿಕೋನದಲ್ಲಿ ಈ ರೀತಿಯಾಗಿ ಪರಿವರ್ತನೆ ಹೊಂದಿದೆ: "ನಾವು ಬೇರೆಯವರನ್ನು ಸಂತೋಷಪಡಿಸುವ ಕಡೆ ಹೆಚ್ಚು ಗಮನಹರಿಸಿದರೆ, ನಮಗೆ ಹೆಚ್ಚಿನ ಒಳಿತಾಗುತ್ತದೆ" (ದಲೈ ಲಾಮ[]).

ನೈತಿಕ ಕರ್ಮ ಹಾಗು ವಿವೇಚನೆಯ ವಿಸ್ತೃತ ನೈತಿಕ ಚರ್ಚೆಗಳ ಪರಿಸ್ಥಿತಿಯಲ್ಲಿ, ಬೌದ್ಧಧರ್ಮವು, ನಮ್ಮ ಕ್ರಿಯೆಗಳಿಂದ ಉಂಟಾಗುವ ಋಣಾತ್ಮಕ (ಅಸಂತುಷ್ಟಿ) ಪರಿಸ್ಥಿತಿಗಳು ನೈತಿಕ ವಿವೇಚನೆಯನ್ನು ಆಧರಿಸಿದ ದಂಡನೆ ಅಥವಾ ಸರಿಪಡಿಸುವಿಕೆಯಿಂದ ಉಂಟಾಗಿಲ್ಲ. ಆದರೆ ಕರ್ಮದ ನಿಯಮದಿಂದ ಉಂಟಾಗಿದೆ ಎಂಬ ನಂಬಿಕೆಯನ್ನು ಹೊಂದಿದೆ. ಕಾರಣ ಹಾಗು ಪರಿಣಾಮದ ಸ್ವಾಭಾವಿಕ ನಿಯಮದಂತೆ ಕೆಲಸ ಮಾಡುತ್ತದೆ. ಇಂತಹ ಕಾರಣ ಹಾಗು ಅದರಿಂದ ಉಂಟಾದ ಪರಿಣಾಮದ ಒಂದು ಸರಳ ವಿವರಣೆಯೆಂದರೆ ನಾನೇ ಉಂಟುಮಾಡುವ ಕಾರಣದಿಂದ ಉಂಟಾಗುವ ಪರಿಣಾಮ: ನಾನು ಸಂಕಟವನ್ನು ಉಂಟುಮಾಡಿದರೆ, ಸ್ವಾಭಾವಿಕವಾಗಿ ನಾನು ಸಂಕಟದ ಪರಿಸ್ಥಿತಿಯನ್ನು ಅನುಭವಿಸುತ್ತೇನೆ; ನಾನು ಸಂತೋಷವನ್ನು ಉಂಟು ಮಾಡಿದ್ದೆ ಆದರೆ, ಸ್ವಾಭಾವಿಕವಾಗಿ ನಾನೂ ಸಹ ಸಂತೋಷದ ಪರಿಸ್ಥಿತಿಯನ್ನು ಎದುರುಗೊಳ್ಳುತ್ತೇನೆ.

ಬೌದ್ಧಧರ್ಮದಲ್ಲಿ, ಕರ್ಮ ವನ್ನು(ಪಾಲಿ ಭಾಷೆಯಲ್ಲಿ ಕಮ್ಮ ) ಸಂಪೂರ್ಣವಾಗಿ ವಿಪಾಕ ದಿಂದ ವಿಂಗಡಿಸಲಾಗಿದೆ, ಇದು "ಫಲ" ಅಥವಾ "ಪರಿಣಾಮ" ಎಂಬ ಅರ್ಥವನ್ನು ನೀಡುತ್ತದೆ. ಕರ್ಮವನ್ನು ಕಾರಣ ಹಾಗು ಅದರಿಂದ ಉಂಟಾಗುವ ಪರಿಣಾಮದ ಸರಪಳಿಯಲ್ಲಿ ಕಾರಣ ಅಥವಾ ಕಾರಣದ ಗುಂಪಿನೊಳಗೆ ವರ್ಗೀಕರಿಸಲಾಗಿದೆ (ಪಾಲಿ ಭಾಷೆಯಲ್ಲಿ ಹೇತು ). ಇದರಲ್ಲಿ ಕಾರಣವು "ಇಚ್ಛೆಯ ಚಟುವಟಿಕೆಗಳ" ಅಂಶಗಳನ್ನು ಒಳಗೊಂಡಿರುತ್ತದೆ (ಪಾಲಿ ಭಾಷೆಯಲ್ಲಿ ಸಂಖರ ) ಹಾಗು "ಕ್ರಿಯೆ"(ಪಾಲಿಯಲ್ಲಿ ಭವ ). ಯಾವುದೇ ಕ್ರಿಯೆಯು ಮನಸ್ಸಿನಲ್ಲಿ "ಮೊಳೆತು" ಸೂಕ್ತ ಪರಿಸ್ಥಿತಿಗಳನ್ನು ಎದುರಿಸಿದರೆ ಅದು ಸೂಕ್ತ ಪರಿಣಾಮವನ್ನು ಹುಟ್ಟುಹಾಕುತ್ತದೆ (ಪಾಲಿ ಭಾಷೆಯಲ್ಲಿ ವಿಪಾಕ ) ಎಂದು ತಿಳಿಯಲಾಗಿದೆ. ಒಳಿತು ಅಥವಾ ಕೆಡಕಿನ ಪರಿಣಾಮಗಳನ್ನು ಹೊಂದಿರುವ ಹಲವು ವಿಧದ ಕರ್ಮಗಳು, ಮನುಷ್ಯನನ್ನು ಸಂಸಾರದ ಚಕ್ರದೊಳಗೆ ಬಂಧಿಸುತ್ತವೆ; ಇತರ ಅಂಶಗಳು ವ್ಯಕ್ತಿಯನ್ನು ನಿರ್ವಾಣದೆಡೆಗೆ ವಿಮೋಚನೆಗೊಳಿಸುತ್ತವೆ.

ಬೌದ್ಧದರ್ಮವು ಕರ್ಮಕ್ಕೆ ಕ್ರಿಯೆಯ ಹಿಂದಿನ ಪ್ರೇರಣೆಗಳೇ ನೇರ ಕಾರಣ ಎಂದು ಸಂಬಂಧ ಕಲ್ಪಿಸುತ್ತದೆ. ಸಾಮಾನ್ಯವಾಗಿ ಪ್ರೇರಣೆಯು "ಒಳಿತು" ಹಾಗು "ಕೆಡುಕಿನ" ನಡುವೆ ವ್ಯತ್ಯಾಸವನ್ನು ಉಂಟುಮಾಡುತ್ತದೆ, ಆದರೆ ಪ್ರೇರಣೆಯಲ್ಲಿ ಒಳಗೊಂಡ ಮತ್ತೊಂದು ಅಂಶವೆಂದರೆ ಅಜ್ಞಾನ; ಅಜ್ಞಾನದಿಂದ ರೂಪುಗೊಂಡ ಉದ್ದೇಶಪೂರ್ವಕ ಕ್ರಿಯೆಯು "ಕೆಡುಕಾಗಿರುತ್ತದೆ". ಒಂದು ಅರ್ಥದಲ್ಲಿ ಇದು ಕರ್ಮ ಮಾಡಿದವನಿಗೆ ಅಹಿತಕರ ಪರಿಣಾಮಗಳನ್ನು ಉಂಟುಮಾಡುತ್ತದೆ.

ಬೌದ್ಧಧರ್ಮದಲ್ಲಿ, ಸಂಭವಿಸುವ ಎಲ್ಲ ಘಟನೆಗಳಿಗೆ ಕರ್ಮ ಒಂದೇ ಏಕೈಕ ಕಾರಣವಲ್ಲ. ಪುರಾತನ ಗ್ರಂಥಗಳಲ್ಲಿ ಬರೆದಿರುವಂತೆ ವಿಮರ್ಶಾ ಪರಂಪರೆಯು ಬ್ರಹ್ಮಾಂಡವನ್ನು ಆಳುವ ಕಾರಣಸಂಬಂಧಿ ವಿಧಾನವನ್ನು ಐದು ವರ್ಗಗಳಾಗಿ ವಿಂಗಡಿಸಿದೆ. ಇದನ್ನು ನಿಯಮ ಧಮ್ಮಗಳು ಎಂದು ಕರೆಯಲಾಗುತ್ತದೆ:[][]

  • ಕಮ್ಮ ನಿಯಮ - ವ್ಯಕ್ತಿಯ ಕ್ರಿಯೆಗಳಿಂದ ಉಂಟಾಗುವ ಪರಿಣಾಮಗಳು

ಉಟು(ಸೂರ್ಯದೇವ) ನಿಯಮ - ಋತುಮಾನ ಬದಲಾವಣೆಗಳು ಹಾಗು ಹವಾಮಾನ

  • ಬೀಜ ನಿಯಮ - ಆನುವಂಶಿಕತೆಯ ನಿಯಮಗಳು
  • ಚಿತ್ತ ನಿಯಮ - ಮನಸ್ಸಿನ ಸಂಕಲ್ಪ
  • ಧಮ್ಮ ನಿಯಮ -ಒಂದು ಪರಿಪೂರ್ಣ ಮಾದರಿಯನ್ನು ಉತ್ಪಾದಿಸುವ ನಿಸರ್ಗದ ಪ್ರವೃತ್ತಿ

ಕ್ರೈಸ್ತ ಧರ್ಮ

ಬದಲಾಯಿಸಿ

ಪರಹಿತಚಿಂತನೆಯು ಗಾಸ್ಪೆಲ್(ಸುವಾರ್ತೆ) ನಲ್ಲಿರುವ ಏಸುಕ್ರಿಸ್ತನ ಬೋಧನೆಗಳಲ್ಲಿ ಮುಖ್ಯವಾಗಿ ಕಂಡುಬರುತ್ತದೆ. ಅದರಲ್ಲೂ ವಿಶೇಷವಾಗಿ ಸರ್ಮನ್ ಆನ್ ದಿ ಮೌಂಟ್ ಹಾಗು ಸರ್ಮನ್ ಆನ್ ದಿ ಪ್ಲೈನ್ ನಲ್ಲಿ ಕಂಡುಬರುತ್ತದೆ. ಬೈಬಲ್‌ನಿಂದ ಹಿಡಿದು ಮಧ್ಯಯುಗದ ಕ್ರೈಸ್ತ ಸಂಪ್ರದಾಯಗಳವರೆಗೂ,ಸ್ವಯಂ ದೃಢೀಕರಣ ಹಾಗು ಇತರರ ಆಚರಣೆಗಳ ನಡುವೆ ಉದ್ವಿಗ್ನತೆ ಉಂಟಾಯಿತು. ಇದನ್ನು ಕೆಲವೊಂದು ಬಾರಿ "ನಿರಾಸಕ್ತ ಪ್ರೇಮ" ಎಂಬ ಶೀರ್ಷಿಕೆಯಡಿಯಲ್ಲಿ ಚರ್ಚಿಸಲಾಯಿತು. ಇದು ಪಾಲಿನ್ ರ "ಪ್ರೇಮವು ತನ್ನದೇ ಆದ ಆಸಕ್ತಿಗಳನ್ನು ಅರಸುವುದಿಲ್ಲ" ಎಂಬ ನುಡಿಗಟ್ಟಿನಲ್ಲಿ ಕಂಡುಬರುತ್ತದೆ. ತಮ್ಮ ಪುಸ್ತಕ ಇಂಡೋಡಾಕ್ಟ್ರಿನೇಷನ್ ಅಂಡ್ ಸೆಲ್ಫ್-ಡಿಸೆಪ್ಶನ್ ನಲ್ಲಿ, ರಾಡ್ರಿಕ್ ಹಿಂಡೆರಿ ಈ ಉದ್ವಿಗ್ನತೆ ಮೇಲೆ ಬೆಳಕು ಚೆಲ್ಲಲು ಪ್ರಯತ್ನಿಸುತ್ತಾ, ಅವುಗಳನ್ನು ಪ್ರಾಮಾಣಿಕ ಸ್ವಯಂ ದೃಢೀಕರಣ ಹಾಗು ಪರಹಿತಚಿಂತನೆ ಎಂಬ ಹೆಸರಿನಲ್ಲಿ ನಡೆಯುವ ವಂಚನೆಯ ಜೊತೆಗೆ ವೈಲಕ್ಷಣ್ಯ ತೋರಿಸುವ ಮೂಲಕ, ಆತ್ಮದ ಸೃಷ್ಟಿಶೀಲ ವ್ಯಕ್ತಿತ್ವದೊಳಗೆ ಇತರ ಆಚರಣೆಗಳನ್ನು ವಿಶ್ಲೇಷಿಸುವ ಮೂಲಕ ಹಾಗೂ ಜೊತೆಗೆ ಕೆಲವರೆಡೆಗಿನ ಪ್ರೇಮವನ್ನು ಹಲವರೆಡೆಗಿನ ಪ್ರೇಮದೊಂದಿಗೆ ವ್ಯತ್ಯಾಸ ತೋರಿಸಿದ್ದಾರೆ. ಪ್ರೇಮವು ಇತರರಿಗೆ ಸ್ವಾತಂತ್ರ್ಯವನ್ನು ದೃಢೀಕರಿಸುತ್ತದೆ. ಪ್ರಚಾರಗಳಿಂದ ಹಾಗು ಮುಖವಾಡಗಳಿಂದ ದೂರವಿರಿಸುತ್ತದೆ, ಅದರ ಅಸ್ತಿತ್ವದಿಂದ ಇತರರಿಗೆ ಭರವಸೆ ನೀಡುತ್ತದೆ, ಜೊತೆಗೆ ಇತರರ ಕೇವಲ ಘೋಷಣೆಗಳಿಂದ ಅಂತಿಮವಾಗಿ ದೃಢಪಡುವುದಿಲ್ಲ. ಆದರೆ ಪ್ರತಿಯೊಬ್ಬ ವ್ಯಕ್ತಿಯ ಅನುಭವ ಹಾಗು ಅಂತರ್ಗತ ರೂಢಿಯಿಂದ ದೃಢಪಡುತ್ತದೆ. ಪ್ರಾಯೋಗಿಕ ಕಲೆಗಳಲ್ಲಿರುವಂತೆ, ಪ್ರೇಮದ ಉಪಸ್ಥಿತಿ ಹಾಗು ಅರ್ಥವು ಕೇವಲ ಮಾತುಗಳು ಹಾಗು ಮನಸ್ಸಿನ ಭಾವನೆಗಳಿಂದ ಗ್ರಹಿಸಲ್ಪಡುವುದಿಲ್ಲ, ಆದರೆ ಇವೆರಡರ ನಡುವಿನ ಸಂಬಂಧದಿಂದ ರೂಪುಗೊಳ್ಳುತ್ತದೆ

ಆದಾಗ್ಯೂ ಯೇಸುವಿನ ಬೋಧನೆಗಳಲ್ಲಿ ಪರಹಿತಚಿಂತನೆಯು ಪ್ರಮುಖವಾದುದೆಂದು ಕಂಡುಬಂದರೂ, ಕ್ರೈಸ್ತಧರ್ಮದ ಒಂದು ಪ್ರಧಾನ ಹಾಗು ಪ್ರಭಾವಿ ಅಂಶವು ಇದನ್ನು ನಿರೂಪಿಸಬಹುದು. St ಥಾಮಸ್ ಅಕ್ವಿನಾಸ್ ಸುಮ್ಮ ಥಿಯಾಲಜಿಕಾ, I:ಈ ಕ್ವಾಯೇಸ್ಟಿಯೋ ೨೬, ವಿಭಾಗ ೪, ನಾವು ನಮ್ಮ ನೆರೆಹೊರೆಯವರಿಗಿಂತ ಸ್ವತಃ ನಮ್ಮನ್ನು ಹೆಚ್ಚು ಪ್ರೀತಿಸಬೇಕು ಎಂದು ನಿರೂಪಿಸುತ್ತದೆ. ಪಾಲಿನ್ ಸೂಕ್ತಿಯ ಅವರ ವ್ಯಾಖ್ಯಾನವೆಂದರೆ ವೈಯಕ್ತಿಕ ಒಳಿತಿಗಿಂತ ಎಲ್ಲರಿಗೂ ಒಳಿತನ್ನು ಬಯಸಬೇಕು ಏಕೆಂದರೆ ಇತರರಿಗೆ ಒಳಿತನ್ನು ಬಯಸುವುದು ಪ್ರತಿಯೊಬ್ಬ ವ್ಯಕ್ತಿಗೂ ಅಪೇಕ್ಷಣೀಯವಾಗಿರುತ್ತದೆ. 'ನೀವು ನಿಮ್ಮನ್ನು ಪ್ರೀತಿಸುವಂತೆ ನಿಮ್ಮ ನೆರೆಹೊರೆಯವರನ್ನು ಪ್ರೀತಿಸಬೇಕು' ಎಂದು ಲೆವಿಟಿಕಸ್ ೧೯ ಹಾಗು ಮ್ಯಾಥ್ಯೂ ೨೨ನಲ್ಲಿ St ಥಾಮಸ್ ವಿವರಿಸಿದ್ದಾರೆ. ಇದರರ್ಥ ನಮ್ಮನ್ನು ನಾವು ಪ್ರೀತಿಸುವಷ್ಟು ಇತರರನ್ನು ಪ್ರೀತಿಸಿದರೆ ಅದು ಅನುಕರಣೀಯವಾಗಿರುತ್ತದೆ. ಈ ರೀತಿಯಾಗಿ ಅವರು ಚಿಂತಿಸಿದರೂ, ನಾವು ನಮಗಿಂತ ಹಾಗು ನಮ್ಮ ನೆರೆಹೊರೆಯವರಿಗಿಂತ ಹೆಚ್ಚಾಗಿ ದೇವರನ್ನು ಪ್ರೀತಿಸಬೇಕೆಂದು, ಒಟ್ಟಾಗಿ ಹೇಳಬಹುದಾದರೆ ನಮ್ಮ ದೇಹದ ಜೀವನಕ್ಕಿಂತ ಹೆಚ್ಚಾಗಿ ಪ್ರೀತಿಸಬೇಕು, ಏಕೆಂದರೆ ನಮ್ಮ ನೆರೆಹೊರೆಯವರನ್ನು ಪ್ರೀತಿಸುವ ಅಂತಿಮ ಉದ್ದೇಶವೆಂದರೆ ಶಾಶ್ವತವಾದ ಪರಮಸೌಖ್ಯವನ್ನು ಹಂಚಿಕೊಳ್ಳುವುದು. ಇದು ದೇಹದ ಕ್ಷೇಮಕ್ಕಿಂತ ಅಧಿಕ ಅಪೇಕ್ಷಣೀಯ ಅಂಶವಾಗಿದೆ. ಬಹುಶಃ ಕಾಮ್ಟೆ ಈ ಥಾಮಿಸ್ಟಿಕ್ ತತ್ತ್ವವನ್ನು ವಿರೋಧಿಸುತ್ತಾರೆ, ಈ ತತ್ತ್ವವು ಕ್ಯಾಥೊಲಿಕ್ ಪಂಗಡದ ಕೆಲವು ಮತಧರ್ಮಶಾಸ್ತ್ರದ ಪರಂಪರೆಗಳಲ್ಲಿ, ಮೇಲೆ ಹೇಳಿರುವಂತೆ ಪರಹಿತಚಿಂತನೆಯ ಪದದ ಸೃಷ್ಟಿಯಲ್ಲಿ ಅಸ್ತಿತ್ವದಲ್ಲಿತ್ತು.

ಥಾಮಸ್ ಜಯ್ ಊರ್ಡ್ ತಮ್ಮ ಹಲವಾರು ಪುಸ್ತಕಗಳಲ್ಲಿ ಪರಹಿತಚಿಂತನೆಯು ಪ್ರೇಮದ ಒಂದು ಸಂಭವನೀಯ ರೂಪವೆಂದು ವಾದಿಸುತ್ತಾರೆ. ಒಂದು ಪರಹಿತಚಿಂತನೆಯ ಕ್ರಿಯೆಯು ಯಾವಾಗಲೂ ಪ್ರೇಮದ ಕ್ರಿಯೆಯಾಗಿರಬೇಕಿಲ್ಲ. ಊರ್ಡ್, ಪರಹಿತಚಿಂತನೆಯನ್ನು ಇತರರಿಗೆ ಒಳಿತನ್ನು ಮಾಡುವ ಕ್ರಿಯೆಯೆಂದು ವಿವರಿಸುತ್ತಾರೆ, ಜೊತೆಗೆ ಇತರರ ಬೇಡಿಕೆಗಳು, ಒಟ್ಟಾರೆ ಒಳಿತನ್ನು ಕುಂಠಿತಗೊಳಿಸಿದರೆ, ಒಬ್ಬರ ಸ್ವಯಂ ಒಳಿತಿಗಾಗಿ ಕೆಲವೊಂದು ಬಾರಿ ಪ್ರೇಮವು ಕಾರ್ಯನಿರ್ವಹಿಸಬೇಕು ಎಂಬ ಸ್ತ್ರೀಸಮಾನತಾವಾದಿಗಳ ವಾದಕ್ಕೆ ಸಮ್ಮತಿಸುತ್ತಾರೆ.

ಇಸ್ಲಾಂಧರ್ಮ ಹಾಗು ಸೂಫಿತತ್ತ್ವ

ಬದಲಾಯಿಸಿ

ಸೂಫಿತತ್ತ್ವದ, ಐ'ತರ್ ನಲ್ಲಿ (ಪರಹಿತಚಿಂತನೆ), 'ತನಗಿಂತ ಹೆಚ್ಚಾಗಿ ಬೇರೆಯವರಿಗೆ ಆದ್ಯತೆ ನೀಡುವುದು ' ಎಂಬ ಕಲ್ಪನೆಯನ್ನು ಒಳಗೊಂಡಿದೆ. ಸೂಫಿಗಳಿಗೆ, ಒಬ್ಬರ ಸ್ವಯಂ ಕಾಳಜಿಗಳನ್ನು ಸಂಪೂರ್ಣ ಮರೆತು ಇತರರ ಬಗ್ಗೆ ನಿಷ್ಠೆಯಿರಿಸುವುದು ಎಂದು ಅರ್ಥ. ಹೆಚ್ಚಿನ ಒಳಿತಿಗಾಗಿ ತ್ಯಾಗವನ್ನು ಮಾಡುವುದರಲ್ಲಿ ಪ್ರಾಮುಖ್ಯತೆಯು ಅಡಗಿದೆ; ಐ'ತರ್ ನಲ್ಲಿ ನಿರತರಾದವರು ಉದಾತ್ತತೆಯ ಅತ್ಯಧಿಕ ಮಟ್ಟಕ್ಕೆ ಬದ್ಧರಾಗಿರುತ್ತಾರೆಂದು ಇಸ್ಲಾಂಧರ್ಮವು ಪರಿಗಣಿಸುತ್ತದೆ.[] ಇದು ಅನಾಥರಕ್ಷಣೆ ಮಾಡುವ ಕಲ್ಪನೆಗೆ ಸದೃಶವಾಗಿದೆ, ಆದರೆ ಯುರೋಪಿಯನ್ ಕಲ್ಪನೆಗೆ ಭಿನ್ನವಾಗಿ ಅಸ್ತಿತ್ವದಲ್ಲಿರುವ ಎಲ್ಲದರ ಮೇಲೂ ಗಮನ ಹರಿಸುವ ಬಗ್ಗೆ ಬೆಳಕು ಚೆಲ್ಲುತ್ತದೆ. ಅಲ್ಲಾಹುವಿನೆಡೆಗೆ ಒಂದು ದೃಢಶ್ರದ್ಧೆಯು ಜನರು, ಪ್ರಾಣಿಗಳು, ಈ ವಿಶ್ವದಲ್ಲಿರುವ ಇತರೆ ಎಲ್ಲ ವಸ್ತುಗಳ ಎಡೆಗೆ ಒಂದು ಶ್ರದ್ಧೆಯ ಮನೋಭಾವನೆಯನ್ನು ಉಂಟುಮಾಡುತ್ತದೆ.[] ಈ ಕಲ್ಪನೆಗೆ ಸೂಫಿ ತತ್ತ್ವದ ಅನುಭಾವಿಗಳಾದ ರಬಿಯಾ ಅಲ್-ಅದವಿಯ್ಯ ಹೆಚ್ಚು ಒತ್ತು ನೀಡಿದರು. ಇವರು ಜನರೆಡೆಗಿನ ಸಮರ್ಪಣಾ ಭಾವ ಹಾಗೂ ಅಲ್ಲಾನೆಡೆಗೆ ಸಮರ್ಪಣಾ ಭಾವದ ವ್ಯತ್ಯಾಸದ ಬಗ್ಗೆ ಗಮನವಹಿಸಿದರು. ೧೩ನೇ ಶತಮಾನದ ಟರ್ಕಿಷ್ ಸೂಫಿ ಕವಿ ಯೂನಸ್ ಎಮ್ರೆ ಈ ತತ್ತ್ವವನ್ನು "Yaratılanı severiz, Yaratandan ötürü" ಎಂದು ವಿವರಿಸಿದರು ಅಥವಾ "ನಾವು ಜೀವಿಯನ್ನು ಏಕೆ ಪ್ರೇಮಿಸುತ್ತೇವೆಂದರೆ, ಸೃಷ್ಟಿಕರ್ತನ ಕಾರಣದಿಂದಾಗಿ" ಎಂದು ಹೇಳುತ್ತಾರೆ.

ಯೆಹೂದ್ಯ ಧರ್ಮ

ಬದಲಾಯಿಸಿ

ಯೆಹೂದ್ಯಧರ್ಮವು ಪರಹಿತಚಿಂತನೆಯನ್ನು ಸೃಷ್ಟಿಯ ಅಪೇಕ್ಷಣೀಯ ಉದ್ದೇಶವೆಂದು ವಿವರಿಸುತ್ತದೆ. ಪ್ರಸಿದ್ಧ ರಬ್ಬಿ ಅಬ್ರಹಾಂ ಐಸ್ಸಾಕ್ ಕೂಕ್, ಪ್ರೇಮವು ಮಾನವಕುಲದ ಅತ್ಯಂತ ಪ್ರಮುಖ ಗುಣವೆಂದು ವಿವರಿಸುತ್ತಾರೆ.[] ಇದನ್ನು ದಾನ, ಅಥವಾ ನೀಡುವಿಕೆ ಎಂದು ಅರ್ಥ ನಿರೂಪಿಸಲಾಗಿದೆ, ಇದು ಪರಹಿತಚಿಂತನೆಯ ಉದ್ದೇಶವೂ ಹೌದು. ಇದು ಮಾನವಕುಲದೆಡೆಗಿನ ಪರಹಿತಚಿಂತನೆಯೂ ಆಗಿರಬಹುದು, ಇದು ಸೃಷ್ಟಿಕರ್ತ ಅಥವಾ ದೇವರೆಡೆಗಿನ ಪರಹಿತಚಿಂತನೆಗೆ ದಾರಿ ಮಾಡಿಕೊಡುತ್ತದೆ. ಕಬ್ಬಲಃ ದೇವರನ್ನು ಅಸ್ತಿತ್ವವನ್ನು ನೀಡುವ ಶಕ್ತಿಯೆಂದು ವಿವರಿಸುತ್ತದೆ. ರಬ್ಬಿ ಮೋಶೆ ಚೈಮ್ ಲುಜ್ಜಟ್ಟೋ ವಿಶೇಷವಾಗಿ 'ಸೃಷ್ಟಿಯ ಉದ್ದೇಶ'ದ ಬಗ್ಗೆ ತಮ್ಮ ಗಮನವನ್ನು ಹರಿಸುತ್ತಾರೆ. ದೇವರ ಇಚ್ಛೆಯು ಈ ಉನ್ನತ ಶಕ್ತಿಯಿಂದ ಸೃಷ್ಟಿಯನ್ನು ಪರಿಪೂರ್ಣತೆಗೆ ಮತ್ತು ಸಂಸಕ್ತಿಗೆ ತರುವುದಾಗಿದೆ.

ರಬ್ಬಿ ಯೆಹುದ ಅಶ್ಲಾಕ್ ಆಧುನಿಕ ಕಬ್ಬಲಃವನ್ನು ಅಭಿವೃದ್ಧಿಪಡಿಸಿದರು, ಭವಿಷ್ಯದ ಪೀಳಿಗೆಯ ಬಗ್ಗೆ ತಮ್ಮ ಬರವಣಿಗೆಗಳಲ್ಲಿ, ಹೇಗೆ ಸಮಾಜವು ಒಂದು ಪರಹಿತಚಿಂತನೆಯ ಸಾಮಾಜಿಕ ಚೌಕಟ್ಟನ್ನು ರೂಪಿಸಬಹುದು ಎಂಬುದರ ಬಗ್ಗೆ ಬರೆಯುತ್ತಾರೆ.[] ಇಂತಹ ಸಾಮಾಜಿಕ ಚೌಕಟ್ಟು ಸೃಷ್ಟಿಯ ಉದ್ದೇಶವೆಂದು ಆಶ್ಲಾಗ್ ಸೂಚಿಸುತ್ತಾರೆ, ಹಾಗು ಜರುಗುವ ಸಂಗತಿಗಳು ಮಾನವಕುಲವನ್ನು ಪರಹಿತಚಿಂತನೆಯ ಮಟ್ಟಕ್ಕೆ ಏರಿಸುವ, ಪರಸ್ಪರ ಪ್ರೇಮವಾಗಿದೆ. ಆಶ್ಲಾಕ್ ಸಮಾಜದ ಹಾಗು ದೈವತ್ವದೊಂದಿಗಿನ ಅದರ ಸಂಬಂಧದ ಬಗ್ಗೆ ಗಮನವನ್ನು ಹರಿಸುತ್ತಾರೆ.[]

ಸಿಖ್ ಧರ್ಮ

ಬದಲಾಯಿಸಿ

ಸಿಖ್ ಧರ್ಮದಲ್ಲಿ ಪರಹಿತಚಿಂತನೆಯು ಒಂದು ಮೂಲಭೂತ ಅಂಶವಾಗಿದೆ. ಸುಮಾರು ೧೬೦೦ರ ದಶಕದ ಕೊನೆಯಲ್ಲಿ, ಗುರು ಗೋಬಿಂದ್ ಸಿಂಗ್ ಜಿ (ಸಿಖ್ ಧರ್ಮದ ಹತ್ತನೇ ಗುರು), ವಿವಿಧ ಧರ್ಮಗಳ ಜನರನ್ನು ರಕ್ಷಿಸಲು ಮೊಘಲ್ ದೊರೆಗಳ ಜೊತೆಗೆ ಯುದ್ಧವನ್ನು ನಡೆಸಿದರು, ಅದೇ ಸಮಯದಲ್ಲಿ ಅವರ ಸಿಖ್ ಒಡನಾಡಿಯಾಗಿದ್ದ ಭಾಯಿ ಕನ್ಹೈಯ, ಅವರ ಶತ್ರು ಪಡೆಗೆ ನೆರವನ್ನು ಒದಗಿಸಿದರು. ಯುದ್ಧರಂಗದಲ್ಲಿ ಗಾಯಗೊಂಡಿದ್ದ ಅವರ ಸ್ನೇಹಿತರು ಹಾಗು ಶತ್ರುಗಳು ಇಬ್ಬರಿಗೂ ಅವರು ನೀರನ್ನು ನೀಡಿ ಉಪಚರಿಸಿದರು. ಅವರ ಶತ್ರುಗಳಲ್ಲಿ ಕೆಲವರು ಮತ್ತೆ ಕದನವನ್ನು ಆರಂಭಿಸಿದರು ಹಾಗು ಕೆಲವು ಸಿಖ್ ಯೋಧರು ಭಾಯಿ ಕನ್ಹೈಯ ಶತ್ರುಪಡೆಗೆ ನೆರವು ನೀಡಿದ್ದರಿಂದ ಬೇಸರಗೊಂಡರು. ಸಿಖ್ ಯೋಧರು ಭಾಯಿ ಕನ್ಹೈಯರನ್ನು ಗುರು ಗೋಬಿಂದ್ ಸಿಂಗ್ ಜಿ ಎದುರು ನಿಲ್ಲಿಸಿ ಅವರ ಕಾರ್ಯಗಳ ಬಗ್ಗೆ ಗುರುಗಳಲ್ಲಿ ದೂರು ನೀಡಿದರು. ಅವರ ಈ ಕಾರ್ಯವು ಯುದ್ಧರಂಗದಲ್ಲಿನ ಸಿಖ್ ಯೋಧರ ಹೋರಾಟಕ್ಕೆ ವಿರುದ್ಧ ಪರಿಣಾಮವನ್ನು ಬೀರುತ್ತದೆಂಬ ಅನಿಸಿಕೆಯನ್ನು ಹೊಂದಿದ್ದರು. "ನೀವು ಏನನ್ನು ಮಾಡುತ್ತಿರುವಿರಿ, ಹಾಗು ಏಕೆ?" ಗುರು ಅವರನ್ನು ಪ್ರಶ್ನಿಸುತ್ತಾರೆ. "ನಾನು ಯುದ್ಧದಲ್ಲಿ ಗಾಯಗೊಂಡವರಿಗೆ ನೀರನ್ನು ಕೊಟ್ಟು ಉಪಚರಿಸುತ್ತಿದ್ದೆ ಏಕೆಂದರೆ ಅವರೆಲ್ಲರ ಮುಖಗಳಲ್ಲಿ ನಾನು ನಿಮ್ಮನ್ನು ಕಂಡೆ," ಎಂದು ಭಾಯಿ ಕನ್ಹೈಯ ಉತ್ತರಿಸಿದರು. ಗುರುಗಳು ಅವರಿಗೆ ಪ್ರತಿಕ್ರಯಿಸುತ್ತಾ, "ಹಾಗಾದರೆ ಅವರ ಗಾಯಗಳನ್ನು ವಾಸಿ ಮಾಡಲು ಅವರಿಗೆ ನೀವು ಮುಲಾಮನ್ನೂ ಸಹ ನೀಡಬೇಕು. ನೀವು ಗುರುಗಳ ಮನೆಯಲ್ಲಿ ಏನನ್ನು ತರಬೇತಿ ಪಡೆದಿದ್ದರೋ ಅದನ್ನು ನೀವು ಇಲ್ಲಿ ಕಾರ್ಯರೂಪದಲ್ಲಿ ಮಾಡುತ್ತಿರುವಿರಿ."

ಭಾಯಿ ಕನ್ಹೈಯ ಗುರುಗಳ ಮಾರ್ಗದರ್ಶನದಡಿಯಲ್ಲಿ ತರುವಾಯ ಪರಹಿತಚಿಂತನೆಯ ಒಂದು ಸ್ವಯಂಸೇವಕ ಪಡೆಯನ್ನು ಸ್ಥಾಪನೆ ಮಾಡಿದರು. ಈ ಸ್ವಯಂಸೇವಕ ಪಡೆಯು ಇಂದಿಗೂ ಇತರರಿಗೆ ಒಳಿತನ್ನು ಮಾಡುವುದರಲ್ಲಿ ನಿರತವಾಗಿದೆ ಹಾಗು ಇದೆ ರೀತಿಯಾದ ಒಳ್ಳೆಯ ಕಾರ್ಯಗಳನ್ನು ಮಾಡಲು ಹೊಸ ಸ್ವಯಂ ಸೇವಕರಿಗೆ ತರಬೇತಿಯನ್ನು ನೀಡುತ್ತಿದೆ.[]

ವೇದಾಂತ

ಬದಲಾಯಿಸಿ

ವೇದಾಂತವು, ಕಾರಣ ಹಾಗೂ ಅದರಿಂದ ಉಂಟಾಗುವ ಪರಿಣಾಮವು ಕರ್ಮದ ನಿಯಮ ಎಂಬ ದೃಷ್ಟಿಕೋನಕ್ಕೆ ವಿಭಿನ್ನ ನಿಲುವನ್ನು ಹೊಂದಿದೆ. ಆದರೆ ಇದರ ಬದಲಿಗೆ ಕರ್ಮದಲ್ಲಿ ವೈಯಕ್ತಿಕ ಸರ್ವೋತ್ಕೃಷ್ಟ ದೇವರ ಇಚ್ಛೆಯು ಮಧ್ಯವರ್ತಿ ಪಾತ್ರ ವಹಿಸುತ್ತದೆ ಎಂಬ ಹೆಚ್ಚುವರಿ ನಿಯಮ ಹೊಂದಿದೆ. ಕರ್ಮದ ಈ ದೃಷ್ಟಿಕೋನವು ಬೌದ್ಧಧರ್ಮ, ಜೈನಧರ್ಮ ಹಾಗು ಇತರ ಹಿಂದೂ ಧರ್ಮಗಳಿಗೆ ವಿರೋಧವಾಗಿದೆ. ಕಾರಣ ಮತ್ತು ಪರಿಣಾಮದ ನಿಯಮವೇ ಕರ್ಮ ಎಂದು ಬೌದ್ಧ, ಜೈನ ಮತ್ತು ಇತರೆ ಹಿಂದು ಧರ್ಮಗಳು ದೃಷ್ಟಿಕೋನವನ್ನು ಹೊಂದಿವೆ.

ಅದ್ವೈತ ಪರಂಪರೆಯ ವಿದ್ವಾಂಸರಾದ ಸ್ವಾಮಿ ಶಿವಾನಂದ, ತಮ್ಮ ವ್ಯಾಖ್ಯಾನದಲ್ಲಿ ಬ್ರಹ್ಮ ಸೂತ್ರಗಳು ಕುರಿತ ವೇದಾಂತ ದೃಷ್ಟಿಕೋನಗಳೊಂದಿಗೆ ಸಂಯೋಜಿಸಿ ಇದೇ ರೀತಿಯಾದ ದೃಷ್ಟಿಕೋನವನ್ನು ಪುನರುಚ್ಚರಿಸಿದ್ದಾರೆ. ಬ್ರಹ್ಮ ಸೂತ್ರಗಳ ಮೂರನೇ ಅಧ್ಯಾಯ ಕುರಿತ ತಮ್ಮ ವ್ಯಾಖ್ಯಾನದಲ್ಲಿ, ಶಿವಾನಂದರು ಕರ್ಮವು ಅಚೇತನ ಹಾಗು ಅಲ್ಪಾವಧಿ ಎಂದು ಹೇಳುತ್ತಾರೆ, ಜೊತೆಗೆ ಕರ್ಮವು ನೆರವೇರಿದ ನಂತರ ಅದರ ಅಸ್ತಿತ್ವವು ಕೊನೆಗೊಳ್ಳುತ್ತದೆ. ಈ ರೀತಿಯಾಗಿ, ಕರ್ಮವು ಒಬ್ಬರ ಅರ್ಹತೆಗೆ ಅನುಗುಣವಾಗಿ ಭವಿಷ್ಯದಲ್ಲಿ ಅವರ ಕ್ರಿಯೆಗಳಿಗೆ ಫಲವನ್ನು ನೀಡುವುದಿಲ್ಲ. ಇದಲ್ಲದೆ, ಕರ್ಮವು, ಫಲವನ್ನು ನೀಡುವ ಅಪೂರ್ವ ಅಥವಾ ಪುಣ್ಯವನ್ನು ಹುಟ್ಟುಹಾಕುತ್ತದೆ ಎಂದು ವಾದಿಸಲಾಗುವುದಿಲ್ಲ. ಅಪೂರ್ವವು ಅಚೇತನವಾಗಿರುವ ಕಾರಣದಿಂದಾಗಿ, ದೇವರಂತಹ ಬೌದ್ಧಿಕ ಸ್ವರೂಪದ ಚಲನೆಯ ಹೊರತು ಅದು ಕಾರ್ಯಪ್ರವೃತ್ತವಾಗುವುದಿಲ್ಲ. ಇದು ಸ್ವತಂತ್ರವಾಗಿ ಪ್ರತಿಫಲವನ್ನಾಗಲಿ ಅಥವಾ ಶಿಕ್ಷೆಯನ್ನಾಗಲಿ ನೀಡಲು ಸಾಧ್ಯವಿಲ್ಲ.[೧೦]

ಸಿದ್ಧಾಂತ

ಬದಲಾಯಿಸಿ

ವೈಜ್ಞಾನಿಕ ದೃಷ್ಟಿಕೋನಗಳು

ಬದಲಾಯಿಸಿ

ಮಾನವಶಾಸ್ತ್ರ

ಬದಲಾಯಿಸಿ

ಮಾರ್ಸೆಲ್ ಮೌಸ್ಸ್ ರ ಪುಸ್ತಕ "ದಿ ಗಿಫ್ಟ್" "ದಾನಧರ್ಮಗಳ ಬಗ್ಗೆ ಟಿಪ್ಪಣಿ"ಯ ಒಂದು ಚಿಕ್ಕಭಾಗವನ್ನು ಒಳಗೊಂಡಿದೆ.

ಈ ಟಿಪ್ಪಣಿಯು ದಾನಧರ್ಮಗಳ ಕಲ್ಪನೆಯ ವಿಕಾಸವನ್ನು ವಿವರಿಸುತ್ತದೆ (ಹಾಗು ಪರಹಿತಚಿಂತನೆಯ ವಿಸ್ತೃತ ರೂಪವನ್ನು ಒಳಗೊಂಡಿದೆ) ತ್ಯಾಗದ ಕಲ್ಪನೆಯಿಂದ.

"ದಾನಧರ್ಮಗಳು ಒಂದು ವಿಧದಲ್ಲಿ, ಕೊಡುಗೆ ಹಾಗೂ ಅದೃಷ್ಟದ ನೈತಿಕ ಕಲ್ಪನೆಯ ಫಲಗಳು. ಹಾಗು ಮತ್ತೊಂದು ವಿಧದಲ್ಲಿ ತ್ಯಾಗದ ಒಂದು ಕಲ್ಪನೆಯಾಗಿದೆ. ಔದಾರ್ಯವೆಂಬುದು ಒಂದು ಕರ್ತವ್ಯವಾಗಿದೆ, ಇದಕ್ಕೆ ಕಾರಣ ದುಷ್ಕರ್ಮ ಫಲವು, ಅತಿವಿಪುಲ ಸಂತೋಷ ಹಾಗು ಸಂಪತ್ತಿನ ಕಾರಣದಿಂದಾಗಿ ಬಡವರು ಹಾಗು ದೇವರುಗಳಿಗೆ ಪರಿಹಾರವನ್ನು ನೀಡುತ್ತದೆ. ಈ ನಿರ್ದಿಷ್ಟ ಜನರು ಸಂತೋಷ ಹಾಗೂ ಸಂಪತ್ತಿನ ವಿಪುಲತೆಯಿಂದ ತಮ್ಮನ್ನು ತಾವು ಮುಕ್ತಗೊಳಿಸಿಕೊಳ್ಳಬೇಕು. ಇದು ದಾನದ ಪುರಾತನ ನೈತಿಕತೆಯಾಗಿದೆ ಇದು ನ್ಯಾಯದ ಒಂದು ಆಧಾರ ತತ್ತ್ವವಾಗಿದೆ. ದೇವರು ಹಾಗು ಆತ್ಮಗಳು ಅವರಿಗೆ ಅರ್ಪಿಸುವ ಸಂಪತ್ತು ಹಾಗು ಸಂತೋಷದ ಹಂಚಿಕೆ ಹಾಗೂ ಈವರೆಗೂ ಅಪ್ರಯೋಜನಕಾರಿ ತ್ಯಾಗಗಳ ಮೂಲಕ ನಾಶಮಾಡಿರುವುದನ್ನು ಬಡವರು ಮತ್ತು ಮಕ್ಕಳ ಸೇವೆಗೆ ನೀಡಬೇಕು."ಎನ್ನುವುದಕ್ಕೆ ಸಮ್ಮತಿಸುತ್ತಾರೆ.

  • ಸದೃಶ ಪರಹಿತಚಿಂತನೆ(ನೀತಿಸೂತ್ರಗಳು) - ಸ್ವಾರ್ಥ ತ್ಯಾಗವಾಗಿ ಪರಹಿತಚಿಂತನೆಯ ಗ್ರಹಿಕೆ.
  • ಹಲವಾರು ಗ್ರಂಥಗಳಲ್ಲಿ ದಾನಧರ್ಮಗಳ ಬಗೆಗಿನ ವಿವರಣೆಯಹೋಲಿಕೆ.

ವಿಕಾಸಾತ್ಮಕ ವಿವರಣೆಗಳು

ಬದಲಾಯಿಸಿ

ವರ್ತನೆಶಾಸ್ತ್ರ ವಿಜ್ಞಾನದಲ್ಲಿ(ಪ್ರಾಣಿಗಳ ನಡವಳಿಕೆಯ ಬಗೆಗಿನ ಅಧ್ಯಯನ), ಹಾಗು ಸಾಧಾರಣವಾಗಿ ಸಾಮಾಜಿಕ ವಿಕಸನದ ಅಧ್ಯಯನದಲ್ಲಿ, ಪರಹಿತಚಿಂತನೆಯು ವ್ಯಕ್ತಿಯ ನಡವಳಿಕೆಗೆ ಸೂಚಿತವಾಗಿದೆ. ಇದು ಪಾತ್ರಧಾರಿಯ ಸಾಮರ್ಥ್ಯವನ್ನು ತಗ್ಗಿಸಿದರೆ, ಮತ್ತೊಬ್ಬನ ಸಾಮರ್ಥ್ಯವನ್ನು ಅಧಿಕಗೊಳಿಸುತ್ತದೆ.[೧೧] ಪ್ರಾಣಿಗಳ ನಡುವೆ ಪರಹಿತಚಿಂತನಕಾರಿ ನಡವಳಿಕೆಗಳನ್ನು ಕುರಿತ ಸಂಶೋಧಕರು ಸೈದ್ಧಾಂತಿಕವಾಗಿ ಸಮಾಜಶಾಸ್ತ್ರದ ಸೋಶಿಯಲ್ ಡಾರ್ವಿನಿಸ್ಟ್ ರ "ಸರ್ವೈವಲ್ ಆಫ್ ನೈಸೆಸ್ಟ್" ಹೆಸರಲ್ಲಿ "ಅರ್ಹತಮದ ಉಳಿವು" ಕಲ್ಪನೆಯನ್ನು ವಿರೋಧಿಸುತ್ತಾರೆ.-ಇದನ್ನು ಡಾರ್ವಿನ್‌ರ ಜೀವವಿಜ್ಞಾನದ ಕಲ್ಪನೆಯಾದ ವಿಕಾಸವಾದದೊಂದಿಗೆ ತಪ್ಪಾಗಿ ಗ್ರಹಿಸಬಾರದು. ಪ್ರಾಣಿಗಳ ನಡುವಿನ ಇಂತಹ ಸಹಕಾರಿ ನಡವಳಿಕೆಯ ಬಗ್ಗೆ ಸಮರ್ಥನೆಯನ್ನು ಮೊದಲ ಬಾರಿಗೆ ರಷ್ಯಾದ ಪ್ರಾಣಿವಿಜ್ಞಾನಿ ಹಾಗು ಕ್ರಾಂತಿಕಾರಿ ಪೀಟರ್ ಕ್ರೋಪಾಟ್ಕಿನ್ ೧೯೦೨ರ ತಮ್ಮ ಪುಸ್ತಕದಲ್ಲಿ ಬಹಿರಂಗಗೊಳಿಸಿದರು,Mutual Aid: A Factor of Evolution

ಸ್ಪಷ್ಟವಾದ ಪರಹಿತಚಿಂತನಕಾರಿ ನಡವಳಿಕೆಯ ಸಿದ್ಧಾಂತಗಳನ್ನು ವಿಕಾಸವಾದದ ವ್ಯುತ್ಪತ್ತಿಗಳಿಗೆ ಹೊಂದಿಕೆಯಾಗುವ ಸಿದ್ಧಾಂತಗಳನ್ನು ಸ್ಥಾಪಿಸುವ ಅಗತ್ಯದಿಂದ ತ್ವರಿತಗೊಳಿಸಲಾಯಿತು. ಪರಹಿತಚಿಂತನೆಯ ಬಗ್ಗೆ ನಡೆಸಿದ ಸಂಶೋಧನೆಗೆ ಸಂಬಂಧಿಸಿದಂತೆ ಸಾಂಪ್ರದಾಯಿಕ ವಿಕಸನೀಯ ವಿಶ್ಲೇಷಣೆಗಳಿಂದ ಹಾಗೂ ಗೇಂ ಥಿಯರಿಯಿಂದ ಕ್ರಮವಾಗಿ ಎರಡು ಸಂಬಂಧಿತ ಅಂಶಗಳು ಕ್ರಮವಾಗಿ ಹೊರಬಿದ್ದವು.

ಪ್ರಸ್ತಾಪಿಸಲಾದ ವಿಧಾನಗಳಲ್ಲಿ ಮುಖ್ಯವಾದುದೆಂದರೆ:

  • ವರ್ತನೆಯ ಬದಲಾವಣೆ (ಉದಾಹರಣೆಗೆ,ಕೆಲವು ನಿರ್ದಿಷ್ಟ ಪರೋಪಜೀವಿಗಳು ಪರಪೋಷಿಗಳ ನಡವಳಿಕೆಯನ್ನು ಬದಲಾಯಿಸಬಹುದು)[ಸೂಕ್ತ ಉಲ್ಲೇಖನ ಬೇಕು]
  • ಪರಿಮಿತ ವಿಚಾರಪರತೆ (ಉದಾಹರಣೆಗೆ, ಹರ್ಬರ್ಟ್ ಸೈಮನ್)[ಸೂಕ್ತ ಉಲ್ಲೇಖನ ಬೇಕು]
  • ಆತ್ಮಸಾಕ್ಷಿ[ಸೂಕ್ತ ಉಲ್ಲೇಖನ ಬೇಕು]
  • ರಕ್ತಸಂಬಂಧಿಗಳ ಆಯ್ಕೆ ಇದರಲ್ಲಿ ಯುಸೋಷಿಯಾಲಿಟಿ(ವ್ಯಾಪಕವಾಗಿ ಅಧ್ಯಯನ ಮಾಡಲಾಗುವ ಸಾಮಾಜಿಕ ವ್ಯವಸ್ಥೆ) ("ಸೆಲ್ಫಿಶ್ ಜೀನ್" ನನ್ನೂ ಸಹ ನೋಡಿ)[ಸೂಕ್ತ ಉಲ್ಲೇಖನ ಬೇಕು]
  • ಮೆಮೆಸ್ (ನಡವಳಿಕೆಯ ಮೇಲೆ ಪ್ರಭಾವ ಬೀರುವ ಮೂಲಕ ತಮ್ಮ ವಿಸ್ತರಣೆ ಪರವಾಗಿರುವುದು ಧರ್ಮ)[೧೨]
  • ಪರಸ್ಪರ ಪರಹಿತಚಿಂತನೆ, ಪರಸ್ಪರ ಸಹಾಯ [ಸೂಕ್ತ ಉಲ್ಲೇಖನ ಬೇಕು]
  • ಆಯ್ದ ಬಂಡವಾಳ ಸಿದ್ಧಾಂತ[೧೩] - ದೀರ್ಘಕಾಲಿಕ, ಅಧಿಕ ವೆಚ್ಚದ ಪರಹಿತಚಿಂತನೆಯ ವಿಕಾಸದ ಬಗ್ಗೆ ಸೈದ್ಧಾಂತಿಕ ಪ್ರಸ್ತಾಪ
  • ಲಿಂಗದ ಆಯ್ಕೆ, ನಿರ್ದಿಷ್ಟವಾಗಿ ಹ್ಯಾಂಡಿಕ್ಯಾಪ್ ನಿಯಮ[೧೪]
  • ಪರಸ್ಪರತೆ (ಕೊಡುಕೊಳಿಕೆ)
    • ನೇರ ಪರಸ್ಪರತೆ (ಪುನರಾವರ್ತಿತ ಸಂಧಿಗಳು)[೧೫]
    • ಪರೋಕ್ಷ ಪರಸ್ಪರತೆ(ಉದಾಹರಣೆಗೆ, ಖ್ಯಾತಿ)[೧೬]
    • ಪ್ರಬಲ ಪರಸ್ಪರತೆ[೧೭]
    • ಕೃತಕ-ಪರಸ್ಪರತೆ[೧೮]

ಪರಹಿತಚಿಂತನೆಯ ಅಧ್ಯಯನವು ಜಾರ್ಜ್ R. ಪ್ರೈಸ್ ರ ಬೆಲೆ ಸಮೀಕರಣದ ಅಭಿವೃದ್ಧಿಯ ಹಿಂದಿರುವ ಆರಂಭಿಕ ಪ್ರಚೋದನೆಯಾಗಿದೆ. ಇದು ವಂಶವಾಹಿ ವಿಕಾಸವಾದದ ಅಧ್ಯಯನದಲ್ಲಿ ಬಳಕೆಯಾಗುವ ಒಂದು ಗಣಿತ ಸಮೀಕರಣವಾಗಿದೆ. ಪರಹಿತಚಿಂತನೆ ಬಗ್ಗೆ ಒಂದು ಕುತೂಹಲಕಾರಿ ಉದಾಹರಣೆಯು ಕೋಶೀಯ ಲೋಳೆ ಜೀವಿಗಳಾದ ಡೈಕ್ಟೋಸ್ಟೇಲಿಯಂ ಮ್ಯೂಕೋರಾಯ್ಡ್ ಗಳಲ್ಲಿ ಪತ್ತೆಯಾಗಿದೆ. ಈ ಪ್ರೋಟಿಸ್ಟ್‌ಗಳು (ಪ್ರಟಿಸ್ಟ ಜೀವಿರಾಜ್ಯದ ಯಾವುದೇ ಏಕಕೋಶ ಜೀವಿ) ಆಹಾರಾಭಾವದಿಂದ ಸಾಯುವ ತನಕವೂ ಪ್ರತ್ಯೇಕ ಅಮೀಬೆ(ಏಕಕೋಶ ಜೀವಿ)ಗಳಾಗಿ ಜೀವಿಸುತ್ತದೆ. ಈ ಹಂತದಲ್ಲಿ ಅವುಗಳು ಒಟ್ಟುಗೂಡುವುದರ ಜೊತೆಗೆ ಬಹುಕೊಶೀಯ ಬೀಜಾಣು ಕಾಯವಾಗಿ ರೂಪುಗೊಳ್ಳುತ್ತವೆ. ಬೀಜಾಣುಕಾಯದ ಕೆಲವು ಕೋಶಗಳು ಇತರ ಕೋಶಗಳ ಉಳಿವಿಗಾಗಿ ತಮ್ಮನ್ನು ತಾವು ತ್ಯಾಗ ಮಾಡಿಕೊಳ್ಳುತ್ತವೆ. ಒಂದು ಜೀವಿಯ ಹಲವು ಭಾಗಗಳ (ಕೋಶಗಳು, ಜೀನುಗಳು) ನಡುವೆ ನಡೆಯುವ ಪರಸ್ಪರ ಕ್ರಿಯೆಯು ಸಾಮಾಜಿಕ ನಡವಳಿಕೆ ಹಾಗು ಪರಹಿತಚಿಂತನೆಯ ಹಲವು ಸದೃಶತೆಗಳನ್ನು ಹಂಚಿಕೊಳ್ಳುತ್ತವೆ. ಆದರೆ ಇದು ತನ್ನ ನೆರೆಯ ಜೀವಿಗಳ ಸಂಪೂರ್ಣ ಅಗತ್ಯವಿಲ್ಲದೇ ಅನಿರ್ದಿಷ್ಟವಾಗಿ ಸಂತಾನೋತ್ಪತ್ತಿ ಮಾಡುವ ಪ್ರತಿ ಜೀವಿಯ ಸಾಮರ್ಥ್ಯದ ವೈಲಕ್ಷ್ಯಣ್ಯದಿಂದ ಕೂಡಿದೆ.

ನರಜೀವಶಾಸ್ತ್ರ

ಬದಲಾಯಿಸಿ

ನ್ಯಾಷನಲ್ ಇನ್ಸ್ಟಿಟ್ಯೂಟ್ಸ್ ಆಫ್ ಹೆಲ್ತ್ ಹಾಗು LABS-D'or ಹಾಸ್ಪಿಟಲ್ ನೆಟ್ವರ್ಕ್ (J.M.)ನ ನರವಿಜ್ಞಾನಿಗಳಾದ ಜೋರ್ಗೆ ಮೊಲ್ ಹಾಗು ಜಾರ್ಡನ್ ಗ್ರಾಫ್ಮನ್, ಫಂಕ್ಷನಲ್ ಮ್ಯಾಗ್ನೆಟಿಕ್ ರೆಸೋನೆನ್ಸ್ ಇಮೇಜಿಂಗ್ ನ್ನು ಬಳಸಿಕೊಂಡು ಸಾಮಾನ್ಯವಾಗಿ ಆರೋಗ್ಯಕರ ಸ್ವಯಂಸೇವಕರ ಪರಹಿತಚಿಂತನೆಯ ನರವ್ಯೂಹದ ಆಧಾರಗಳ ಮೂಲಕ ಮೊದಲ ಬಾರಿಗೆ ಸಾಕ್ಷ್ಯಗಳನ್ನು ಒದಗಿಸಿದರು. ಪ್ರೊಸೀಡಿಂಗ್ ಆಫ್ ದಿ ನ್ಯಾಷನಲ್ ಅಕ್ಯಾಡೆಮಿ ಆಫ್ ಸೈನ್ಸಸ್ USAನಲ್ಲಿ ಅಕ್ಟೋಬರ್, ೨೦೦೬ರಲ್ಲಿ[೧೯] ಪ್ರಕಟವಾದ ಅವರ ಸಂಶೋಧನೆಯಲ್ಲಿ ಪರಿಶುದ್ಧವಾಗಿ ಹಣದ ಕೊಡುಗೆಗಳು ಹಾಗು ದಾನಧರ್ಮದ ಕೊಡುಗೆಗಳು ಮೆಸೋಲಿಂಬಿಕ್ ಪ್ರೇರಣೆ ಮಾರ್ಗವನ್ನು ಸಕ್ರಿಯಗೊಳಿಸುತ್ತದೆ, ಮಿದುಳಿನ ಆದಿಮ ಭಾಗವಾದ ಇದು ಸಾಮಾನ್ಯವಾಗಿ ಆಹಾರ ಹಾಗು ಲೈಂಗಿಕತೆಗೆ ಪ್ರತಿಕ್ರಿಯೆಯಾಗಿ ಚುರುಕುಗೊಳ್ಳುತ್ತದೆ. ಆದಾಗ್ಯೂ, ಸ್ವಯಂಸೇವಕರು ದಾನಧರ್ಮಗಳನ್ನು ಮಾಡುವ ಮೂಲಕ ತಮಗಿಂತ ಹೆಚ್ಚಾಗಿ ಇತರರ ಹಿತಾಸಕ್ತಿಯ ಬಗ್ಗೆ ಗಮನ ಹರಿಸಿದಾಗ, ಮಿದುಳಿನ ಮತ್ತೊಂದು ಮಂಡಲವು ಸಕ್ರಿಯಗೊಳ್ಳುತ್ತದೆ: ಇದು ಮಿದುಳಿನ ಹೊರಪದರ/ವಿಭಾಜಕ ಭಿತ್ತಿ. ಈ ರಚನೆಗಳು ಇತರ ಪ್ರಭೇದಗಳಲ್ಲಿ ಸಾಮಾಜಿಕ ಸಾಮೀಪ್ಯ ಹಾಗೂ ಬೆಸುಗೆಗೆ ನಿಕಟವಾಗಿ ಸಂಬಂಧಿಸಿದೆ. ಪರಹಿತಚಿಂತನೆ, ಪ್ರಯೋಗವು ಸೂಚಿಸಿದಂತೆ, ಮೂಲಭೂತ ಸ್ವಾರ್ಥದ ಪ್ರಚೋದನೆಗಳನ್ನು ದಮನಿಸುವ ಶ್ರೇಷ್ಠ ನೈತಿಕ ಸಾಮರ್ಥ್ಯವಲ್ಲ ಆದರೆ ಇದು ಮಿದುಳಿಗೆ ಮೂಲಾಧಾರವಾಗಿದೆ ಹಾಗೂ ಸಂತೋಷಕರವಾಗಿರುತ್ತದೆ.[೨೦]

ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಹೆಲ್ತ್ ಆರ್ಥಿಕನೆರವಿನ ೨೦೦೭ರಲ್ಲಿ ಡರ್ಹಾಮ್, ಉತ್ತರ ಕ್ಯಾರೊಲಿನದ ಡ್ಯೂಕ್ ವಿಶ್ವವಿದ್ಯಾಲಯದಲ್ಲಿ ಆಯೋಜಿಸಿದ ಮತ್ತೊಂದು ಪ್ರಯೋಗವು ಒಂದು ವಿಭಿನ್ನ ದೃಷ್ಟಿಕೋನವನ್ನು ಹೊಂದಿದೆ, "ಪರಹಿತಚಿಂತನೆಯ ನಡವಳಿಕೆಯು ಜನರು ಜಗತ್ತಿನಲ್ಲಿ ಹೇಗೆ ಕಾರ್ಯನಿರ್ವಹಿಸುತ್ತಾರೆ ಎನ್ನುವುದಕ್ಕಿಂತ ಜಗತ್ತನ್ನು ಯಾವ ದೃಷ್ಟಿಕೋನದಿಂದ ನೋಡುತ್ತಾರೆ ಎನ್ನುವದರಿಂದ ಪರಹಿತಚಿಂತನೆ ನಡವಳಿಗೆ ಹುಟ್ಟಿಕೊಂಡಿದೆ.".[೨೧] ಫೆಬ್ರವರಿ ೨೦೦೭ರಲ್ಲಿ ನೇಚರ್ ನ್ಯೂರೋಸೈನ್ಸ್ ನಲ್ಲಿ ಮುದ್ರಣಗೊಂಡ ಅಧ್ಯಯನದಲ್ಲಿ, ಪರಹಿತಚಿಂತನೆಯ ಜನರು ಹಾಗು ಸ್ವಾರ್ಥಿ ಜನರ ಮಿದುಳಿನ ಒಂದು ಭಾಗವು ವಿಭಿನ್ನವಾಗಿ ವರ್ತಿಸುತ್ತದೆಂದು ಸಂಶೋಧಕರು ಪತ್ತೆಹಚ್ಚಿದ್ದಾರೆ.

ಸಂಶೋಧಕರು ೪೫ ಜನ ಸ್ವಯಂಸೇವಕರಿಗೆ ಕಂಪ್ಯೂಟರ್ ನಲ್ಲಿ ಆಟವನ್ನು ಆಡುವುದರ ಜೊತೆಗೆ ಕಂಪ್ಯೂಟರ್ ಆಟ ಆಡುವುದನ್ನು ವೀಕ್ಷಿಸಲೂ ಸಹ ಆಹ್ವಾನಿಸಿದರು. ಕೆಲವು ನಿದರ್ಶನಗಳಲ್ಲಿ, ಆಟವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದಕ್ಕೆ ತಮಗಾಗಿ ಹಣವನ್ನು ಗೆದ್ದುಕೊಂಡರು. ಹಾಗು ಇತರೆ ನಿದರ್ಶನಗಳಲ್ಲಿ, ಆಯ್ಕೆಯಾದ ಪ್ರತಿ ವ್ಯಕ್ತಿ ತಾನು ಗೆದ್ದ ಹಣವನ್ನು ಧರ್ಮಾರ್ಥ ಸಂಸ್ಥೆಗಳಿಗೆ ದಾನ ಮಾಡುವುದರಲ್ಲಿ ಫಲಿತಾಂಶ ಕಂಡಿತು. ಈ ಚಟುವಟಿಕೆಗಳಲ್ಲಿ, ಸಂಶೋಧಕರು ಪಾಲ್ಗೊಂಡವರ ಮಿದುಳಿನ ಫಂಕ್ಷನಲ್ ಮ್ಯಾಗ್ನೆಟಿಕ್ ರೆಸೋನನ್ಸ್ ಇಮೇಜಿಂಗ್ (fMRI) ಸ್ಕ್ಯಾನ್ ಗಳನ್ನು ತೆಗೆದುಕೊಂಡರು ಹಾಗು ಅದರಿಂದ ಹೊರಬಿದ್ದ "ಫಲಿತಾಂಶಗಳಿಂದ ಆಶ್ಚರ್ಯಚಕಿತರಾಗಿದ್ದರು" ಆದಾಗ್ಯೂ ಅವರು "ಮಿದುಳಿನ ಪ್ರೇರಣೆ ಕೇಂದ್ರದ ಚಟುವಟಿಕೆಯನ್ನು ವೀಕ್ಷಿಸುವ ನಿರೀಕ್ಷೆಯಲ್ಲಿದ್ದರು" ಹಾಗು "ಜನರು ಪರಹಿತಚಿಂತನೆಯ ಕಾರ್ಯಗಳನ್ನು ಒಳ್ಳೆಯದೆಂದು ಪರಿಗಣಿಸಿದ್ದರಿಂದ ಅದನ್ನು ನಿರ್ವಹಿಸುತ್ತಿದ್ದರು" ಎಂದು ಭಾವಿಸಿದ್ದರು. ಆದರೆ, ಸಂಶೋಧಕರು ಪತ್ತೆ ಮಾಡಿದ ಅಂಶವೆಂದರೆ "ಮಿದುಳಿನ ಮತ್ತೊಂದು ಭಾಗವೂ ಸಹ ಇದರಲ್ಲಿ ಭಾಗಿಯಾಗಿತ್ತು, ಹಾಗು ಇದು ವೈಯಕ್ತಿಕ ಒಳಿತಿಗಾಗಿ ಮಾಡುವ ಕಾರ್ಯ ಹಾಗು ಇತರರ ಒಳಿತಿಗಾಗಿ ಮಾಡುವ ಕಾರ್ಯದ ನಡುವೆ ವ್ಯತ್ಯಾಸಕ್ಕೆ ಸಂವೇದಕವಾಗಿತ್ತು". ಆ ಭಾಗದ ಮಿದುಳನ್ನು ಪಾಸ್ಟೀರಿಯರ್ ಸುಪೀರಿಯರ್ ಟೆಂಪರಲ್ ಕಾರ್ಟೆಕ್ಸ್ (pSTC) ಎಂದು ಕರೆಯಲಾಗುತ್ತದೆ.

ಅದರ ಮುಂದಿನ ಹಂತದಲ್ಲಿ, ವಿಜ್ಞಾನಿಗಳು ಪಾಲ್ಗೊಂಡವರಿಗೆ ಅವರ ಪರಹಿತಚಿಂತನೆ ಅಥವಾ ಸಹಾಯಕಾರಿ ನಡವಳಿಕೆಯ ಮಾದರಿ ಹಾಗು ಆವರ್ತನದ ಬಗ್ಗೆ ಕೆಲವು ಪ್ರಶ್ನೆಗಳನ್ನು ಹಾಕಿದರು. ಅವರು ನಂತರ ಹೊರಬಿದ್ದ ಪ್ರತಿಕ್ರಿಯೆಗಳನ್ನು ವಿಶ್ಲೇಷಿಸಿ ಒಬ್ಬ ವ್ಯಕ್ತಿಯ ಪರಹಿತಚಿಂತನಕಾರಿಯಾಗಿ ವರ್ತಿಸುವ ಪ್ರವೃತ್ತಿಯ ಅಂದಾಜು ಹಾಗು fMRI ಮಿದುಳು ಸ್ಕ್ಯಾನ್ ಗೆ ಅನುಸಾರವಾಗಿ ಪ್ರತಿ ವ್ಯಕ್ತಿಯ ಮಟ್ಟವನ್ನು ಹೋಲಿಕೆ ಮಾಡಿದರು. ಇದರಿಂದ ಹೊರಬಿದ್ದ ಪರಿಣಾಮಗಳು pSTC ಚಟುವಟಿಕೆಯು ಒಬ್ಬ ವ್ಯಕ್ತಿಯ ಪರಹಿತಚಿಂತನೆಯ ಅಂದಾಜಿನ ಮಟ್ಟಕ್ಕೆ ಪ್ರಮಾಣಾಗುಣವಾಗಿ ಏರಿಕೆಯಾಗಿದ್ದನ್ನು ತೋರಿಸಿದವು. ಸಂಶೋಧಕರ ಪ್ರಕಾರ, ಜನರು ಜಗತ್ತಿನಲ್ಲಿ ಯಾವ ರೀತಿ ನಡೆದುಕೊಳ್ಳುತ್ತಾರೆ ಎಂಬುದಕ್ಕಿಂತ ಹೆಚ್ಚಾಗಿ ಜಗತ್ತನ್ನು ಯಾವ ದೃಷ್ಟಿಕೋನದಲ್ಲಿ ನೋಡುತ್ತಾರೆ ಎನ್ನುವುದರಿಂದ ಪರಹಿತಚಿಂತನೆಯ ನಡವಳಿಕೆ ಹುಟ್ಟಿಕೊಂಡಿದೆ ಎಂದು ಫಲಿತಾಂಶಗಳು ತೋರಿಸುತ್ತದೆ.

ಇತರರ ಕಾರ್ಯಗಳನ್ನು ಅರ್ಥಪೂರ್ಣವೆಂದು ಗ್ರಹಿಸುವ ಸಾಮರ್ಥ್ಯವು ಪರಹಿತಚಿಂತನೆಗೆ ವಿಮರ್ಶಾತ್ಮಕ ಎಂದು ನಂಬಿರುವುದಾಗಿ" ಅಧ್ಯಯನದ ಪ್ರಮುಖ ಪರೀಕ್ಷಕ ಧರೋಲ್ ಟ್ಯಾನ್ಕರ್ಸ್ಲೆಯ್ ಹೇಳುತ್ತಾರೆ.[೨೨]

ತಳಿಶಾಸ್ತ್ರ

ಬದಲಾಯಿಸಿ

ನ್ಯೂ ಮೆಕ್ಸಿಕೋ, USನ ಸಾಂಟಾ ಫೆ ಇನ್ಸ್ಟಿಟ್ಯೂಟ್‌ನಲ್ಲಿ ಸ್ಯಾಮ್ಯುಯೆಲ್ ಬೌಲೆಸ್ ನಡೆಸಿದ ಒಂದು ಅಧ್ಯಯನವನ್ನು ಪರಹಿತಚಿಂತನೆಯ ಸಮೂಹ ಆಯ್ಕೆ ಮಾದರಿಗೆ ಹೊಸ ಜೀವ ತುಂಬಿದೆ ಎಂದು ಕೆಲವರು ಅಭಿಪ್ರಾಯಪಡುತ್ತಾರೆ, ಇದನ್ನು "ಸರ್ವೈವಲ್ ಆಫ್ ದಿ ನೈಸೆಸ್ಟ್" ಎಂದು ಕರೆಯಲಾಗಿದೆ. ಬೌಲೆಸ್ ಸಮಕಾಲೀನ ಅನ್ವೇಷಕ ಗುಂಪುಗಳ ಒಂದು ತಳಿಶಾಸ್ತ್ರ ವಿಶ್ಲೇಷಣೆಯನ್ನು ನಡೆಸಿದರು, ಇದರಲ್ಲಿ ಆಸ್ಟ್ರೇಲಿಯಾದ ಮೂಲನಿವಾಸಿಗಳು, ಸ್ಥಳೀಯಸೈಬೀರಿಯನ್ ಇನ್ಯುಇಟ್ ಜನರು ಹಾಗು ಆಫ್ರಿಕಾದ ಸ್ಥಳೀಯ ಬುಡಕಟ್ಟಿನ ಗುಂಪುಗಳು ಸೇರಿದ್ದವು. ೩೦ ಜನ ವ್ಯಕ್ತಿಗಳನ್ನು ಒಳಗೊಂಡಿದ್ದ ಬೇಟೆಗಾರ-ಸಂಗ್ರಾಹಕ ತಂಡಗಳು ಹಿಂದೆ ಭಾವಿಸಲಾಗಿದ್ದಕ್ಕಿಂತ ಗಮನಾರ್ಹ ರೀತಿಯಲ್ಲಿ ನಿಕಟವಾದ ಸಂಬಂಧವನ್ನು ಹೊಂದಿದ್ದರು. ಮಧ್ಯ ಹಾಗು ಮೇಲಿನ ಪ್ರಾಚೀನ ಶಿಲಾಯುಗಕ್ಕೆ ಸದೃಶವೆಂದು ಭಾವಿಸಲಾದ ಈ ಪರಿಸ್ಥಿತಿಗಳನ್ವಯ, ಇತರ ಗುಂಪಿನ ಸದಸ್ಯರೆಡೆಗೆ ಪರಹಿತಚಿಂತನೆಯನ್ನು ತೋರುವುದರಿಂದ ಇದು ಗುಂಪಿನ ಒಟ್ಟಾರೆ ಸಾಮರ್ಥ್ಯವನ್ನು ಸುಧಾರಿಸುತ್ತದೆ. ಆದಾಗ್ಯೂ ಇದು ಕೇವಲ ಅಂತರ್ಗತ ಸಾಮರ್ಥ್ಯದ ಒಂದು ರೂಪವಾಗಿದೆ - ಇತರ ಸಾಧನಗಳಿಗೆ ಸಹಾಯ ಮಾಡುವ ಒಂದು ಸಾಧನವು ಸಂಭವನೀಯವಾಗಿ ಒಂದೇ ರೀತಿಯ ವಂಶವಾಹಿಗಳನ್ನು ಹೊಂದಿರಬಹುದು.

ಒಂದು ಜೀವಿಯು ತನ್ನ ಸಾವಿನ ಅಪಾಯದ ನಡುವೆಯೂ ಸಮೂಹವನ್ನು ರಕ್ಷಿಸಿದರೆ ಅಥವಾ ತನ್ನ ಸಂತಾನೋತ್ಪತ್ತಿ ಸಾಮರ್ಥ್ಯವನ್ನು ಇಳಿಮುಖಗೊಳಿಸಿದರೆ, ಜೀವಿಯು ವಂಶವಾಹಿಯನ್ನು ಹಂಚಿಕೊಂಡು, ಯಶಸ್ವಿಯಾಗಿ ರಕ್ಷಣೆಯಾದವರು (ಗುಂಪಿನ ಸದಸ್ಯರು)ಆವರ್ತನವನ್ನು ವೃದ್ಧಿಸುತ್ತಾರೆ(ಅವರ ಸಂತಾನೋತ್ಪತ್ತಿಗೆ ನೆರವಾದ ಜೀವಿಯ ರಕ್ಷಣೆಗೆ ಅಭಿನಂದನೆಗಳು) ಇಂತಹ ಸಹಾಯಕಾರಿ ಕೃತ್ಯಗಳನ್ನು ಆಹಾರ ಹಂಚಿಕೆ, ಲೈಂಗಿಕ ಅವಕಾಶ, ಏಕವಿವಾಹ ಅಥವಾ ಇತರ ಅನುಕೂಲಗಳಿಂದ ಪ್ರತಿಫಲ ನೀಡಿದ್ದರೆ, ಪ್ರತಿಫಲ ನೀಡಬೇಕಾದ ಪರಹಿತಕಾರಿ ನಡುವಳಿಕೆಯ ಸರಾಸರಿ "ವೆಚ್ಚ" ಇರುವುದಿಲ್ಲ. ಬೌಲೆಸ್ ತಳಿಶಾಸ್ತ್ರಕ್ಕೆ, ಹವಾಮಾನಕ್ಕೆ, ಪ್ರಾಕ್ತನಶಾಸ್ತ್ರಕ್ಕೆ, ಜನಾಂಗೀಯ ಹಾಗು ಪ್ರಾಯೋಗಿಕ ದತ್ತಾಂಶವನ್ನು ಒಟ್ಟುಗೂಡಿಸಿ ಪುರಾತನ ಕಾಲದ ಜನಸಂಖ್ಯೆಯಲ್ಲಿ ಮಾನವ ಸಹಕಾರದ ವೆಚ್ಚ-ಲಾಭದ ಸಂಬಂಧವನ್ನು ಪರೀಕ್ಷಿಸಿದರು. ಈ ಮಾದರಿಯಲ್ಲಿ, ಪರಹಿತಚಿಂತನೆಯನ್ನು ಆಯ್ಕೆಮಾಡಿಕೊಂಡು, ಪರಿಹಿತಚಿಂತನೆ ನಡುವಳಿಕೆಯ ವಂಶವಾಹಿ ಹೊಂದಿರುವ ಗುಂಪುಗಳು ತಮ್ಮ ಸಂತಾನೋತ್ಪತ್ತಿ ಅವಕಾಶಗಳನ್ನು ಸೀಮಿತಗೊಳಿಸುವ ಬೆಲೆ ತೆರುವ ಮೂಲಕ ವೆಚ್ಚ ಪಾವತಿ ಮಾಡುವುದು - ಆದರೆ ಆಹಾರ ಹಾಗು ಮಾಹಿತಿಯನ್ನು ಹಂಚಿಕೆಯ ಅನುಕೂಲವನ್ನು ಪಡೆದುಕೊಳ್ಳುವುದು. ಅವುಗಳ ಕಾರ್ಯವು ಗುಂಪಿನ ಸದಸ್ಯರ ಸರಾಸರಿ ಸಾಮರ್ಥ್ಯವನ್ನು ಹೆಚ್ಚಿಸಿದರೆ, ಗುಂಪಿನ ಸದಸ್ಯರು ಅವರ ನಡುವಿನ ಪರಸ್ಪರ ಸಂಬಂಧಗಳನ್ನು ಉಳಿಸಿಕೊಳ್ಳುವ ಅಥವಾ ಅಧಿಕಗೊಳಿಸುವವರೆಗೂ ಪರಿಹಿತಚಿಂತನೆಯು ಹೆಚ್ಚಿತು (ಗುಂಪಿನೊಳಗೆ ವಿವಾಹದಲ್ಲಿ). ಇಂತಹ ಪರಹಿತಚಿಂತನೆಯನ್ನು ಹೊಂದಿರುವ ಗುಂಪಿನ ಸದಸ್ಯರು, ಇತರ ಗುಂಪುಗಳಿಂದ ಸಂಪನ್ಮೂಲಗಳನ್ನು ಗಳಿಸಿಕೊಳ್ಳಲು ಕೇವಲ ರಕ್ಷಣಾತ್ಮಕವಾಗಿಯಲ್ಲದೆ ಆಕ್ರಮಣಶೀಲರಾಗಿಯೂ ಸಹ ಒಟ್ಟಾಗಿ ಹೋರಾಡುತ್ತಿದ್ದರು.[೨೩]

ವಿಕಾಸಾತ್ಮಕ ಜೀವವಿಜ್ಞಾನದಲ್ಲಿನ ಪರಹಿತಚಿಂತನಕಾರಿ ಸಿದ್ಧಾಂತಗಳನ್ನು, ಸಂಕೇತ ಸಿದ್ಧಾಂತ ಹಾಗು ಅದರ ಸಹಸಂಬಂಧಹ್ಯಾಂಡಿಕ್ಯಾಪ್ ಆಧಾರತತ್ತ್ವದ ಸಂಶೋಧಕ ಅಮೊಟ್ಜ್ ಜಹಾವಿ ವಿರೋಧಿಸಿದರು. ಇದು ಮುಖ್ಯವಾಗಿ ಅರೇಬಿಯನ್ ಬಾಬ್ಲಾರ್ ಎಂಬ ಹಕ್ಕಿಯ ಬಗ್ಗೆ ಅವರ ವೀಕ್ಷಣೆಗಳನ್ನು ಆಧರಿಸಿದೆ. ಈ ಹಕ್ಕಿಯು ಸಾಮಾನ್ಯವಾಗಿ ತನ್ನ ಆಶ್ಚರ್ಯಕರ (ಎಂದು ಹೇಳಲಾಗಿರುವ) ಪರಹಿತಚಿಂತನಕಾರಿ ನಡವಳಿಕೆಗೆ ಹೆಸರಾಗಿದೆ.

ಇವನ್ನೂ ನೋಡಿ

ಬದಲಾಯಿಸಿ
  • ಪ್ರಾಣಿಗಳಲ್ಲಿ ಪರಹಿತಚಿಂತನೆ
  • ಆಲ್ಟ್ರುರಿಯ
  • ದಾನ(ರೂಢಿ)
  • ಧರ್ಮಾರ್ಥ ಸಂಸ್ಥೆ
  • ಅಹಂಭಾವ
  • ಪರಾನುಭೂತಿಶಕ್ತಿ -ಪರಹಿತಚಿಂತನೆ
  • ಅನುಭೂತಿ
  • ಕೌಟುಂಬಿಕ ಅರ್ಥಶಾಸ್ತ್ರ
style="width:37%;"
  • ವಂಶವಾಹಿ-ಕೇಂದ್ರೀಕೃತ ವಿಕಸನದ ದೃಷ್ಟಿಕೋನ
  • ನ್ಯಾಯ (ಅರ್ಥಶಾಸ್ತ್ರ)
  • ಅಂತರ್ಗತ ಸಾಮರ್ಥ್ಯ
  • ರಕ್ತಸಂಬಂಧದ ಆಯ್ಕೆ
  • ಮಾನವದ್ವೇಷ
  • ಪರಸ್ಪರ ಸಹಾಯ
  • ಲೋಕೋಪಕಾರ
  • ಸಾಮಾಜಿಕಪರ ನಡವಳಿಕೆ
style="width:31%;"
  • ಕರುಣೆಯ ಸ್ವೇಚ್ಛಾ ಕ್ರಿಯೆಗಳು
  • ಪರಸ್ಪರ ಪರಹಿತಚಿಂತನೆ
  • ಪ್ರಸಿದ್ಧ ಬಂಡವಾಳ
  • ರಿವರ್ಸ್ ಕಾಮನ್ಸ್
  • ಸ್ವಾರ್ಥ
  • ಸಾಮಾಜಿಕ ಮನೋವಿಜ್ಞಾನ
  • ಐಕ್ಯಮತ (ಸಮಾಜಶಾಸ್ತ್ರ)
  • ಪ್ರತೀಕಾರ

ಉಲ್ಲೇಖಗಳು

ಬದಲಾಯಿಸಿ

ಟಿಪ್ಪಣಿಗಳು

ಬದಲಾಯಿಸಿ
  1. ೧.೦ ೧.೧ "ಸ್ಪೀಚ್ ಬೈ ದಿ ದಲೈ ಲಾಮ". Archived from the original on 2009-10-03. Retrieved 2010-09-03.
  2. ಕ್ಯಾರೊಲಿನ್ ಅಗಸ್ಟ ಫೋಲೆಯ್ ರೈಸ್ ಡೇವಿಡ್ಸ್, ಬುದ್ಧಿಸಂ. ರೀಡ್ ಬುಕ್ಸ್ ನಿಂದ ಮರುಮುದ್ರಣಗೊಂಡಿದೆ, ೨೦೦೭, [೧].
  3. ಪದ್ಮಸಿರಿ ಡಿ ಸಿಲ್ವ, ಎನ್ವಿರೋನ್ಮೆಂಟಲ್ ಫಿಲಾಸಫಿ ಅಂಡ್ ಎಥಿಕ್ಸ್ ಇನ್ ಬುದ್ಧಿಸಂ. ಮ್ಯಾಕ್ಮಿಲನ್, ೧೯೯೮, ಪುಟ ೪೧. [೨].
  4. M (2004). Key concepts in the practice of Sufism: emerald hills of the heart. Rutherford, N.J.: Fountain. pp. 10–11. ISBN 1932099751.
  5. Neusner, Jacob Eds (2005). Altruism in world religions. Washington, D.C.: Georgetown Univ. Press. pp. 79–80. ISBN 1589010655.
  6. Kook, Abraham Isaac (1978). Abraham Isaac Kook: The lights of penitence, The moral principles, Lights of holiness, essays, letters, and poems. Paulist Press. pp. 135–136. ISBN 9780809121595. {{cite book}}: Unknown parameter |coauthors= ignored (|author= suggested) (help)
  7. Ashlag, Yehuda (2006). Building the Future Society. Thornhill, Canada: Laitman Kabbalah Publishers. pp. 120–130. ISBN 9657065348. {{cite book}}: Cite has empty unknown parameter: |coauthors= (help)
  8. Ashlag, Yehuda (2006). Building the Future Society. Thornhill, Canada: Laitman Kabbalah Publishers. pp. 175–180. ISBN 9657065348. {{cite book}}: Cite has empty unknown parameter: |coauthors= (help)
  9. The great gurus of the Sikhs, pg, 253. New Delhi: Anmol Publications Pvt Ltd. 1997. ISBN 8174884793.
  10. ಶಿವಾನಂದ, ಸ್ವಾಮಿ. ಫಲಾದಿಕಾರಣಂ, ಪ್ರಸಂಗ ೮ , ಸೂತ್ರಗಳು ೩೮-೪೧.
  11. Bell, Graham (2008). Selection: the mechanism of evolution. Oxford: Oxford University Press. pp. 367–368. ISBN 0198569726.
  12. ಡಾಕಿನ್ಸ್, R (೨೦೦೬). ದಿ ಗಾಡ್ ಡೆಲ್ಯೂಷನ್. ಬಂಟಂ ಪ್ರೆಸ್, ಲಂಡನ್, UK. ISBN ೦೫೯೩೦೫೫೪೮೯
  13. ಬ್ರೌನ್, S.L. & ಬ್ರೌನ್, R.M.(೨೦೦೬). ಸೆಲೆಕ್ಟೀವ್ ಇನ್ವೆಸ್ಟ್ಮೆಂಟ್ ಥಿಯರಿ: ರೀಕ್ಯಾಸ್ಟಿಂಗ್ ದಿ ಫಂಕ್ಷನಲ್ ಸಿಗ್ನಿಫಿಕೆನ್ಸ್ ಆಫ್ ಕ್ಲೋಸ್ ರಿಲೇಶನ್ಶಿಪ್ಸ್. Archived 2009-03-25 ವೇಬ್ಯಾಕ್ ಮೆಷಿನ್ ನಲ್ಲಿ. ಸೈಕಾಲಜಿಕಲ್ ಇನ್ಕ್ವೈರಿ, ೧೭, ೧-೨೯.
  14. ಜಹಾವಿ, A. (೧೯೯೫). ಆಲ್ಟ್ರುಯಿಸಂ ಆಸ್ ಏ ಹ್ಯಾಂಡಿಕ್ಯಾಪ್ - ದಿ ಲಿಮಿಟೇಷನ್ಸ್ ಆಫ್ ಕಿನ್ ಸೆಲೆಕ್ಷನ್ ಅಂಡ್ ರೆಸಿಪ್ರೋಸಿಟಿ. ಅವಿಯನ್ ಬಿಯೋಲ್ . ೨೬ : ೧-೩.
  15. R Axelrod and WD Hamilton (1981). "The evolution of cooperation". Science. 211 (4489): 1390–1396. doi:10.1126/science.7466396. {{cite journal}}: Unknown parameter |month= ignored (help)
  16. Martin Nowak & Karl Sigmund (2005). "Evolution of indirect reciprocity". Nature. 437 (27): 1291–1298. doi:10.1038/nature04131. PMID 16251955. {{cite journal}}: Unknown parameter |month= ignored (help)
  17. Herbert Gintis (2000). "Strong Reciprocity and Human Sociality". Journal of Theoretical Biology. 206 (2): 169–179. doi:10.1006/jtbi.2000.2111. PMID 10966755. {{cite journal}}: Unknown parameter |month= ignored (help)
  18. "Genetic and Cultural Evolution of Cooperation, Chapter 11". Berlin: Dahlem Workshop Reports. 2003. ISBN 0262083264. {{cite journal}}: Cite journal requires |journal= (help)
  19. ಹ್ಯೂಮನ್ ಫ್ರನ್ಟೋ-ಮೆಸೋಲಿಂಬಿಕ್ ನೆಟ್ವರ್ಕ್ಸ್ ಗೈಡ್ ಡಿಸಿಷನ್ಸ್ ಅಬೌಟ್ ಚ್ಯಾರಿಟಬಲ್ ಡೊನೇಶನ್, PNAS ೨೦೦೬:೧೦೩(೪೨);೧೫೬೨೩-೧೫೬೨೮)
  20. Vedantam, Shankar (May 2007). "If It Feels Good to Be Good, It Might Be Only Natural". Washington Post. Retrieved 23 April 2010.
  21. ಬ್ರೈನ್ ಸ್ಕ್ಯಾನ್ ಪ್ರಿಡಿಕ್ಟ್ಸ್ ಡಿಫರೆನ್ಸ್ ಬಿಟ್ವೀನ್ ಆಲ್ಟ್ರುಯಿಸ್ಟಿಕ್ ಅಂಡ್ ಸೆಲ್ಫಿಶ್ ಪೀಪಲ್"
  22. "ಆಕ್ಟಿವೇಷನ್ ಆಫ್ ಬ್ರೈನ್ ರೀಜನ್ ಪ್ರಿಡಿಕ್ಟ್ಸ್ ಆಲ್ಟ್ರುಯಿಸಂ"
  23. ಫಿಷರ್, ರಿಚರ್ಡ್ (೭ ಡಿಸೆಂಬರ್ ೨೦೦೬) "ವೈ ಆಲ್ಟ್ರುಯಿಸಂ ಪೈಡ್ ಆಫ್ ಅವರ್ ಆನ್ಸಿಸ್ಟರ್ಸ್"(NewScientist.com ನ್ಯೂಸ್ ಸರ್ವೀಸ್) [೩]


ಗ್ರಂಥಸೂಚಿ

ಬದಲಾಯಿಸಿ
  • ಊರ್ಡ್, ಥಾಮಸ್ ಜಯ್ (೨೦೦೭).

ದಿ ಆಲ್ಟ್ರುಸಿಯಮ್ ರೀಡರ್: ಸೆಲೆಕ್ಷನ್ಸ್ ಫ್ರಮ್ ರೈಟಿಂಗ್ಸ್ ಆನ್ ಲವ್, ರಿಲಿಜಿಯನ್, ಅಂಡ್ ಸೈನ್ಸ್ (ಫಿಲಾಡೆಲ್ಫಿಯಾ: ಟೆಂಪ್ಲೇಟನ್ ಫೌಂಡೆಶನ್ ಪ್ರೆಸ್) ISBN ೯೭೮-೧೫೯೯೪೭೧೨೭೩

  • ಥಾಮಸ್ ಜಯ್ ಊರ್ಡ್ Defining Love: A Philosophical, Scientific, and Theological Engagement ಬ್ರಜೋಸ್ ಪ್ರೆಸ್, ೨೦೧೦. ೧-೫೮೭೪೩-೨೫೭-೯
  • ಬ್ಯಾಟ್ಸನ್, C.D. (೧೯೯೧). ದಿ ಆಲ್ಟ್ರುಸಿಯಮ್ ಕೊಶ್ಚನ್ . ಹಿಲ್ಸ್ಡೇಲ್, NJ: ಲಾರೆನ್ಸ್ ಎರ್ಲ್ಬೂಮ್ ಅಸೋಸಿಯೇಟ್ಸ್. ISBN ೯೭೮-೦೮೦೫೮೦೨೪೫೦
  • ನೋವಾಕ್ MA (೨೦೦೬). ಫೈವ್ ರೂಲ್ಸ್ ಫಾರ್ ದಿ ಎವಲ್ಯೂಶನ್ ಆಫ್ ಕೋಆಪರೇಶನ್ Archived 2011-05-18 ವೇಬ್ಯಾಕ್ ಮೆಷಿನ್ ನಲ್ಲಿ.. ಸೈನ್ಸ್ ೩೧೪: ೧೫೬೦-೧೫೬೩.
  • ಫೆಹ್ರ್, E. & ಫಿಸ್ಚ್ಬಚೆರ್, U. (೨೩ ಅಕ್ಟೋಬರ‍್ ೨೦೦೩). ಮಾನವ ಪರಹಿತಚಿಂತನೆಯ ಸ್ವರೂಪ. ಇನ್ ನೇಚರ್, ೪೨೫ , ೭೮೫– ೭೯೧.
  • ಕಾಮ್ಟೆ, ಅಗಸ್ಟ್, ಕಾಟೆಚಿಸ್ಮೆ ಪಾಸಿಟಿವಿಸ್ಟೆ (೧೮೫೨) ಅಥವಾ ಕಾಟೆಚಿಸ್ಮ್ ಆಫ್ ಪಾಸಿಟಿವಿಸಂ, ಅನುವಾದ.

R. ಕಾಂಗ್ರೀವ್, (ಲಂಡನ್: ಕೇಗನ್ ಪಾಲ್, ೧೮೯೧)

  • ನಾಕ್ಸ್, ಟ್ರೆವೋರ್, ದಿ ವಾಲೆನ್ಟೀರ್'ಸ್ ಫಾಲ್ಲಿ ಅಂಡ್ ಸೋಶಿಯೋ-ಎಕನಾಮಿಕ್ ಮ್ಯಾನ್: ಸಮ್ ಥಾಟ್ಸ್ ಆನ್ ಆಲ್ಟ್ರುಯಿಸಂ, ರಾಷನಾಲಿಟಿ, ಅಂಡ್ ಕಮ್ಯೂನಿಟಿ , ಜರ್ನಲ್ ಆಫ್ ಸೋಶಿಯೋ-ಎಕನಾಮಿಕ್ಸ್ ೨೮ (೧೯೯೯), ೪೭೫-೪೯೨
  • ಕ್ರೊಪಾಟ್ಕಿನ್, ಪೀಟರ್, Mutual Aid: A Factor of Evolution (೧೯೦೨)
  • ಊರ್ಡ್, ಥಾಮಸ್ ಜಯ್, ಸೈನ್ಸ್ ಆಫ್ ಲವ್: ದಿ ವಿಸ್ಡಮ್ ಆಫ್ ವೆಲ್-ಬೀಯಿಂಗ್. (ಫಿಲಾಡೆಲ್ಫಿಯಾ: ಟೆಂಪ್ಲೇಟನ್ ಫೌಂಡೆಶನ್ ಪ್ರೆಸ್, ೨೦೦೪). ISBN ೯೭೮-೧೯೩೨೦೩೧೭೦೬

ನಿಯೆಟ್ಜ್ಸ್ಚೆ, ಫ್ರೆಡ್ರಿಚ್, ಬಿಯಾಂಡ್ ಗುಡ್ ಅಂಡ್ ಇವಿಲ್

  • ಪಿಯೇರ್ರೆ-ಜೋಸೆಫ್ ಪ್ರೌಧೋನ್, ದಿ ಫಿಲಾಸಫಿ ಆಫ್ ಪಾವರ್ಟಿ (೧೮೪೭)
  • ಲಿಸಾಂಡರ್ ಸ್ಪೂನರ್, ನ್ಯಾಚುರಲ್ ಲಾ
  • ಮ್ಯಾಟ್ ರಿಡ್ಲೆ, ದಿ ಆರಿಜಿನ್ಸ್ ಆಫ್ ವರ್ಚ್ಯೂ
  • ಒಲಿನೆರ್, ಸ್ಯಾಮ್ಯುಯೆಲ್ P. ಹಾಗು ಪರ್ಲ್ M. ಟುವರ್ಡ್ಸ್ ಏ ಕೇರಿಂಗ್ ಸೊಸೈಟಿ: ಐಡಿಯಾಸ್ ಇಂಟು ಆಕ್ಷನ್. ವೆಸ್ಟ್ ಪೋರ್ಟ್, CT: ಪ್ರೆಗೆರ್, ೧೯೯೫.

ದಿ ಎವಲ್ಯೂಶನ್ ಆಫ್ ಕೋಆಪರೇಶನ್ , ರಾಬರ್ಟ್ ಅಕ್ಸೆಲ್ರಾಡ್, ಬೇಸಿಕ್ ಬುಕ್ಸ್, ISBN ೦-೪೬೫-೦೨೧೨೧-೨

  • ದಿ ಸೆಲ್ಫಿಶ್ ಜಿನಿ , ರಿಚರ್ಡ್ ಡಾಕಿನ್ಸ್, (೧೯೯೦), ಎರಡನೇ ಆವೃತ್ತಿ-ಸಹಕಾರದ ಅಸ್ತಿತ್ವದ ಬಗ್ಗೆ ಎರಡು ಅಧ್ಯಾಯಗಳನ್ನು ಒಳಗೊಂಡಿದೆ, ISBN ೦-೧೯-೨೮೬೦೯೨-೫

ರಾಬರ್ಟ್ ರೈಟ್, ದಿ ಮಾರಲ್ ಅನಿಮಲ್ , ವಿಂಟೇಜ್, ೧೯೯೫, ISBN ೦-೬೭೯-೭೬೩೯೯-೬.

  • ಮಾಡ್ಸೆನ್, E.A., ಟನ್ನಿ, R., ಫೀಲ್ಡ್ಮನ್, G., ಪ್ಲಾಟ್ಕಿನ್, H.C., ಡನ್ಬಾರ್, R.I.M., ರಿಚರ್ಡ್ಸನ್, J.M., & ಮ್ಯಾಕ್ಫಾರ್ಲ್ಯಾಂಡ್, D.( ೨೦೦೬) ರಕ್ತಸಂಬಂಧ ಹಾಗು ಪರಹಿತಚಿಂತನೆ: ವಿಭಿನ್ನ ಸಂಸ್ಕೃತಿಗಳ ಪ್ರಾಯೋಗಿಕ ಅಧ್ಯಯನ. ಬ್ರಿಟೀಷ್ ಜರ್ನಲ್ ಆಫ್ ಸೈಕಾಲಜಿ
  • ವೆಡೆಕಿಂಡ್, C. ಹಾಗು ಮಿಲಿನ್ಸ್ಕಿ, M. ಹ್ಯೂಮನ್ ಕೋಆಪರೇಶನ್ ಇನ್ ದಿ ಸೈಮಲ್ಟೆನಿಯಸ್ ಅಂಡ್ ದಿ ಆಲ್ಟರ್ನೆಟಿಂಗ್ ಪ್ರಿಸನರ್'ಸ್ ಡೈಲೆಮ: ಪಾವ್ಲೊವ್ ವರ್ಸಸ್ ಜೆನರಸ್ ಟಿಟ್-ಫಾರ್-ಟ್ಯಾಟ್. ಎವಲ್ಯೂಶನ್ , ಸಂಪುಟ. ೯೩, ಪುಟಗಳು ೨೬೮೬–೨೬೮೯, ಏಪ್ರಿಲ್ ೧೯೯೬.
  • ಮಾಂಕ್-ಟರ್ನರ್, E., ಬ್ಲೇಕ್, V., ಚ್ನಿಯೆಲ್, F., ಫೋರ್ಬ್ಸ್, S., ಲೆನ್ಸೆಯ್, L., ಮಾಡ್ಜುಮ, J., ಜೆನ್ಡರ್ ಇಷ್ಯೂಸ್, ಹೆಲ್ಪಿಂಗ್ ಹ್ಯಾಂಡ್ಸ್: ಏ ಸ್ಟಡಿ ಆಫ್ ಆಲ್ಟ್ರುಯಿಸ್ಟಿಕ್ ಬಿಹೇವಿಯರ್, ಫಾಲ್ ೨೦೦೨, ಪುಟಗಳು ೬೫-೭೦

ಬಾಹ್ಯ ಕೊಂಡಿಗಳು

ಬದಲಾಯಿಸಿ