ನಿರ್ಮಲಾ ವಿಶ್ವೇಶ್ವರ ರಾವ್

ಡಾ. ನಿರ್ಮಲಾ ವಿಶ್ವೇಶ್ವರ ರಾವ್ (ಜನನ ೨೯ ಮೇ ೧೯೬೯) ಕೂಚಿಪುಡಿ ಮತ್ತು ಭರತನಾಟ್ಯದಲ್ಲಿ ಶಾಸ್ತ್ರೀಯ ನೃತ್ಯಗಾರ್ತಿ.[]

ಆರಂಭಿಕ ಜೀವನ

ಬದಲಾಯಿಸಿ

ನಿರ್ಮಲಾ ಅವರು ಕಾಮನಾ ರಾಮಚಂದರ್ ರಾವ್ ಮತ್ತು ಸೀತಾ ಮಹಾಲಕ್ಷ್ಮಿ ದಂಪತಿಗಳಿಗೆ ಜನಿಸಿದರು. ಅವರು ತಮ್ಮ ೧೦ ನೇ ವಯಸ್ಸಿನಲ್ಲಿ ಅವರ ಗುರು ಚಿಂತಾ ರಾಮಮೂರ್ತಿ ಅವರಿಂದ ನೃತ್ಯ ಕಲಿಯಲು ಆರಂಭಿಸಿದರು. ಏಪ್ರಿಲ್ ೧೯೮೮ ರಲ್ಲಿ ಕಡಿಮಿ ವಿಶ್ವೇಶ್ವರ ರಾವ್ ಅವರನ್ನು ವಿವಾಹವಾದರು. ಅವರ ಪತಿಯ ಪ್ರೋತ್ಸಾಹದಿಂದ ಅವರು ನೃತ್ಯದಲ್ಲಿ ಪದವಿ, ಎಂಎ ಮತ್ತು ಎಂಫಿಲ್ ಪೂರ್ಣಗೊಳಿಸಿದರು. ಮುಂದೆ ಪಶುಪತಿ ರಾಮಲಿಂಗ ಸತ್ರಿಯವರಲ್ಲಿ ಕಲಿತು ತಮ್ಮ ವೃತ್ತಿಯನ್ನು ಮುಂದುವರೆಸಿದರು. ಅವರು ೧೯೯೮ ರಲ್ಲಿ ನಿರ್ಮಲಾ ನೃತ್ಯ ನಿಕೇತನ ಸಂಸ್ಥೆಯನ್ನು ಪ್ರಾರಂಭಿಸಿದರು. ಈ ಸಂಸ್ಥೆ ಆಂಧ್ರಪ್ರದೇಶ ಸರ್ಕಾರದಿಂದ ಮತ್ತು ಭಾರತದ ಸಾಂಸ್ಕೃತಿಕ ಕಲೆಗಳಿಂದ ಗುರುತಿಸಲ್ಪಟ್ಟಿದೆ.

ವೃತ್ತಿ

ಬದಲಾಯಿಸಿ

ಶೈಕ್ಷಣಿಕ ಅರ್ಹತೆಗಳು

ಅವರು ಅನೇಕ ವಿದ್ಯಾರ್ಹತೆಗಳನ್ನು ಹೊಂದಿದ್ದಾರೆ ಅವೆಂದರೆ: ಬಿ.ಎ ಪದವಿ ( ಆಂಧ್ರ ವಿಶ್ವವಿದ್ಯಾಲಯ ), ಸರ್ಟಿಫಿಕೇಟ್ ಕೋರ್ಸ್ ಇನ್ ಡ್ಯಾನ್ಸ್ ( ತೆಲುಗು ವಿಶ್ವವಿದ್ಯಾಲಯ ), ನೃತ್ಯದಲ್ಲಿ ಎಂ‌ಪಿ‌ಎ ( ಕೇಂದ್ರ ವಿಶ್ವವಿದ್ಯಾಲಯ ), ಎಂ.ಫಿಲ್. ಅನ್ನು ಪಿ‌ಎಸ್ ತೆಲುಗು ವಿಶ್ವವಿದ್ಯಾಲಯ - ಹೈದರಾಬಾದ್ ಹಾಗೂ ೨೦೧೧ ರಲ್ಲಿ ಲಲಿತಕಲೆಗಳಲ್ಲಿ (ಕೂಚಿಪುಡಿ ಮತ್ತು ಗರಗ ನೃತ್ಯಂ) ಪಿ‌ಎಚ್‌ಡಿ ಯನ್ನು ಪಿ‌ಎಸ್ ತೆಲುಗು ವಿಶ್ವವಿದ್ಯಾಲಯ, ಹೈದರಾಬಾದ್‌ನಲ್ಲಿ ಮಾಡಿದ್ದಾರೆ.

ಅವರ ಬಾಲ್ಯ ಪ್ರದರ್ಶನಗಳಾದ (೮ನೇ ತರಗತಿಯಿಂದ ಪ್ರಾರಂಭಿಸಿ) ಪುಷ್ಪಾಂಜಲಿ, ಮಂಡೂಕ ಶಬ್ದ ಮತ್ತು ರಾಮಪಟ್ಟಾಭಿಷೇಕ ವೃತ್ತಿಜೀವನದ ಆರಂಭಕ್ಕೆ ನಾಂದಿಯಾಯಿತು. ತಮ್ಮ ೧೩ ನೇ ವಯಸ್ಸಿನಲ್ಲಿ ಯೇ ಅವರು ಪ್ರದರ್ಶನ ಸ್ಪರ್ಧೆಗಾಗಿ ಚಿನ್ನದ ಪದಕವನ್ನು ಗೆದ್ದರು. ಅಲ್ಲದೇ ೧೯೯೪ ರಲ್ಲಿ ಅವರು ಅಂತಿಮವಾಗಿ ವೃತ್ತಿಪರ ನೃತ್ಯ ಕಲಾವಿದೆಯಾಗಿ ಹೊರಹೊಮ್ಮಿದರು.

ಅಂದಿನಿಂದ ನಿರ್ಮಲಾ ಅವರು ವಿವಿಧ ವೇದಿಕೆಗಳಲ್ಲಿ ಪ್ರದರ್ಶನ ನೀಡಲು ಆರಂಭಿಸಿದರು. ಅವುಗಳು ಕೆಳಗಿನಂತಿವೆ.

  • ಆಂಧ್ರಪ್ರದೇಶ
  • ರವೀಂದ್ರ ಭಾರತಿ
  • ತ್ಯಾಗರಾಯ ಗಾನಸಭಾ
  • ಹರಿ ಹರ ಕಲಾ ಭವನಂ
  • ಲಲಿತಾ ಕಲಾತೋರಣಂ,
  • ಶಿಲ್ಪರಾಮಂ []
  • ಶಿಲ್ಪಕಲಾ ವೇದಿಕೆ, ಲಾಲ್ ಬಹದ್ದೂರ್ ಕ್ರೀಡಾಂಗಣ
  • ಸುಂದರೈ ವಿಜ್ಞಾನ ಕೇಂದ್ರ
  • ಇಂದಿರಾ ಪ್ರಿಯದರ್ಶಿನಿ ಆಡಿಟೋರಿಯಂ.
  • ಸಿಟಿ ಸೆಂಟ್ರಲ್ ಲೈಬ್ರರಿ ಮತ್ತು ಹೈದರಾಬಾದ್‌ನಲ್ಲಿರುವ ಇತರ ಎಲ್ಲಾ ಪ್ರತಿಷ್ಠಿತ ವೇದಿಕೆಗಳು.
  • ದೆಹಲಿ : ಮೂರನೇ ವಿಶ್ವ ತೆಲುಗು ಒಕ್ಕೂಟ ( ಸಿರಿ ಫೋರ್ಟ್ ಆಡಿಟೋರಿಯಂ )
  • ಪಶ್ಚಿಮ ಬಂಗಾಳ: ಸಿಲಿಗುರಿ ಉತ್ಸವ - ಸಿಲಿಗುರಿ

ಅವರು ಪ್ರದರ್ಶನ ನೀಡಿದ ಕೆಲವು ನಗರಗಳು ಹೀಗಿವೆ; ಮಹಾರಾಷ್ಟ್ರ, ತಮಿಳುನಾಡು, ಒರಿಸ್ಸಾ (ಕೊನಾರ್ಕ್ ಉತ್ಸವ), ವಿಜಯವಾಡ, ಗುಂಟೂರು, ವಿಶಾಖಪಟ್ಟಣಂ, ತಿರುಪತಿ, ಕಡಪ, ನೆಲ್ಲೂರು, ಭದ್ರಾಚಲಂ, ಗದ್ವಾಲ್, ಪುಣೆ ಮತ್ತು ಭುವನೇಶ್ವರ.

ಅಂತರರಾಷ್ಟ್ರೀಯ ಪ್ರದರ್ಶನಗಳು ಮತ್ತು ಸಾಧನೆಗಳು

ಬದಲಾಯಿಸಿ

ಅಂತರರಾಷ್ಟ್ರೀಯ ಪ್ರದರ್ಶನಗಳು

ನಿರ್ಮಲಾ ಅವರು ಪೋಲೆಂಡ್, ಟರ್ಕಿ, ಬಲ್ಗೇರಿಯಾ, ಆಸ್ಟ್ರಿಯಾ, ಶ್ರೀಲಂಕಾ, ಮಲೇಶಿಯಾ, ಸಿಂಗಾಪುರ, ಮಾರಿಷಸ್, ದೋಹಾ ಕತಾರ್, ಮಸ್ಕತ್, ದುಬೈ ಮತ್ತು ಬಹ್ರೇನ್ ಸೇರಿದಂತೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರದರ್ಶನ ನೀಡಿದ್ದಾರೆ.

ಬ್ಯಾಲೆಗಳು

ಅವರು ಬ್ಯಾಲೆಗಳಲ್ಲಿ ಪ್ರದರ್ಶನ ನೀಡಿದ್ದಾರೆ ಅವೆಂದರೆ:

  • ಮೋಹಿನಿ ಭಸ್ಮಾಸುರ - ಮೋಹಿನಿಯ ಪಾತ್ರ []
  • ಶಕುಂತಲಾ ಪರಿಣಯಮ್ - ಶಕುಂತಲಾ ಪಾತ್ರ []
  • ಆನಂದ ತಾಂಡವಂ - ಪಾರ್ವತಿ ಪಾತ್ರ []
  • ಗಜನನೀಯಂ - ಲಕ್ಷ್ಮಿಯ ಪಾತ್ರ
  • ಶಶಿರೇಖಾ ಪರಿಣಯಂ - ನರ್ತಕಿಯಾಗಿ ಪಾತ್ರ
  • ಶ್ರೀ ರಾಮ ಕಥಾ ಸಾರಂ - ನರ್ತಕಿಯಾಗಿ ಪಾತ್ರ
  • ಕ್ಷಮಯ ಧರಿತ್ರಿ - ಕ್ಷಮಯ ಧರಿತ್ರಿ ಪಾತ್ರ
  • ಶ್ರೀ ರಾಮ ದಾಸು ಚರಿತ್ರ - ಸೀತೆಯ ಪಾತ್ರ
  • ದಶಾವತಾರಂ - ಭಗವಾನ್ ವಿಷ್ಣುವಿನ ಪಟ್ಟಾಭಿಷೇಕ
  • ನವ ದುರ್ಗಾ ಮಹೋತ್ಸವಂ - ದುರ್ಗೆಯ ಪಾತ್ರ
  • ಶ್ರೀ ಕೃಷ್ಣ ವಿಲಾಸಂ - ರಾಧೆಯ ಪಾತ್ರ
  • ರುತು ಶೋಭಾ - ಪ್ರಕೃತಿ ಮಾತಾ (ಪ್ರಕೃತಿ ದೇವತೆ)
  • "ಭಾರತೀಯ ನೃತ್ಯ ಝರಿ" - ಅಖಿಲ ಭಾರತ ಶಾಸ್ತ್ರೀಯ ನೃತ್ಯಗಳು (ಅಥವಾ) ಭಾರತದ ನೃತ್ಯಗಳು.
  • ಲಕುಮಾ ಸ್ವಾಂತನ್ - ರಾಣಿಯ ಪಾತ್ರ.

ಪ್ರಶಸ್ತಿಗಳು ಮತ್ತು ಸಾಧನೆಗಳು

ನಿರ್ಮಲ ಅವರು ಹಲವಾರು ಸಾಧನೆಗಳನ್ನು ಮಾಡಿದ್ದು ಅನೇಕ ಪ್ರಶಸ್ತಿಗಳನ್ನು ಪಡೆದಿದ್ದಾರೆ ಅವೆಂದರೆ:

  • ಆಲ್ ಇಂಡಿಯಾ ತೆಲುಗು ಅಸೋಸಿಯೇಶನ್‌ನಿಂದ "ನಾಟ್ಯ ಕಲಾ ವಿದ್ವಾನ್ಮಣಿ" - ೯ ಮೇ ೨೦೦೮ ರಂದು ದೋಹಾ ಕಟ್ಟರ್.
  • ಮನೋರಂಜನಿಯಿಂದ ನೃತ್ಯ ಕೌಮುದಿ – ರಾಜ್ಯಾದ್ಯಂತ ಸಂಸ್ಥೆ – ೨೩ ಜೂನ್ ೨೦೦೩.
  • ತೆಲುಗು ಅಸೋಸಿಯೇಷನ್‌ನಿಂದ "ಅತ್ಯುತ್ತಮ ನರ್ತಕಿ" ಪ್ರಶಸ್ತಿ - ಮಸ್ಕಟ್
  • ೬ ಜೂನ್ ೨೦೦೮ ರಂದು ೬ ನೇ ಜಾಗತಿಕ ಅಂತರರಾಷ್ಟ್ರೀಯ ಶಾಪಿಂಗ್ ಉತ್ಸವದಿಂದ "ಅತ್ಯುತ್ತಮ ನೃತ್ಯಗಾರ" ಪ್ರಶಸ್ತಿ.
  • ಗೋಲ್ಡನ್ ಜುಬಿಲಿ ಆಚರಣೆಗಾಗಿ ಮಲೇಷ್ಯಾದಲ್ಲಿ ತೆಲುಗು ಅಸೋಸಿಯೇಷನ್‌ನಿಂದ "ಗೋಲ್ಡನ್" ಪ್ರಶಸ್ತಿ.
  • ಸಂಸ್ಕಾರ ಭಾರತಿ - ಅಖಿಲ ಭಾರತ ಮಟ್ಟದ ಸಂಸ್ಥೆ (ಅಖಿಲ ಭಾರತ ನೃತ್ಯ ಉತ್ಸವಂ).
  • ಆಂಧ್ರಪ್ರದೇಶದ ಗೌರವಾನ್ವಿತ ರಾಜ್ಯಪಾಲರಾದ ಸಿ ರಂಗರಾಜನ್ ಅವರಿಂದ ಯುಗಾದಿ ಆಚರಣೆಯಲ್ಲಿ ಅತ್ಯುತ್ತಮ ಪ್ರದರ್ಶನಕ್ಕಾಗಿ ಸ್ಮರಣಿಕೆಯನ್ನು ಸ್ವೀಕರಿಸಲಾಗಿದೆ.
  • ಡಾ. ಅಕ್ಕಿನೇನಿ ನಾಗೇಶ್ವರ ರಾವ್ ಅವರಿಂದ (ದಾದಾ ಸಾಹೇಮ್ ಫಾಲ್ಕೆ ಪ್ರಶಸ್ತಿ ವಿಜೇತ) ಸಿನಿ ಪ್ರೇಕ್ಷಕರ ಪ್ರಶಸ್ತಿಯನ್ನು ಪಡೆದರು.
  • ಹೈದರಾಬಾದ್‌ನ ಅಭಿನಂದನಾ ಮುಂತಾದ ವಿವಿಧ ಸಾಂಸ್ಕೃತಿಕ ಸಂಸ್ಥೆಗಳಿಂದ ಯುಗಾದಿ ;ಪುರಸ್ಕಾರ ಪ್ರಶಸ್ತಿ.
  • 6 ಡಿಸೆಂಬರ್ ೨೦೦೩ ರಲ್ಲಿ ಅಭಿನಯ ನೃತ್ಯ ಭಾರತಿ – ಏಲೂರು ಅವರಿಂದ ಅತ್ಯುತ್ತಮ ಯುವ ಶಾಸ್ತ್ರೀಯ ನೃತ್ಯಗಾರ ಪ್ರಶಸ್ತಿಯನ್ನು ಪಡೆದರು.
  • 5 ಫೆಬ್ರುವರಿ ೨೦೦೪ ರಂದು ಆರಾಧನಾ - ರಾಜ್ಯಾದ್ಯಂತ ಸಂಸ್ಥೆಯಿಂದ "ನಾಟ್ಯ ಸಿರೋಮಣಿ" ಪ್ರಶಸ್ತಿಯನ್ನು ಪಡೆದರು.
  • ೨೫.೦೨.೨೦೦೫ ರಂದು ಹೈದರಾಬಾದ್‌ನಲ್ಲಿ ೧೦ ನೇ ಯುವಜನೋತ್ಸವದಲ್ಲಿ ಭಾಗವಹಿಸಿದರು.

ಚಟುವಟಿಕೆಗಳು ಮತ್ತು ವಿವಿಧ ಏಕವ್ಯಕ್ತಿ ಪ್ರಸ್ತುತಿಗಳು

ಅವರು ವಿವಿಧ ಚಟುವಟಿಕೆಗಳು, ಪ್ರದರ್ಶನಗಳಲ್ಲಿ ಭಾಗವಹಿಸಿದ್ದಾರೆ ಮತ್ತು ಏಕವ್ಯಕ್ತಿ ಪ್ರಸ್ತುತಿಗಳನ್ನು ನೀಡಿದ್ದಾರೆ ಅವೆಂದರೆ:

  • ಶಬ್ದಗಳು ೧) ಭಕ್ತಿ, ೨) ಸಾಂಪ್ರದಾಯಿಕ ಹೊಗಳಿಕೆ
  • ತರಂಗಲು
  • ಜಾವಲೀಸ್
  • ಪಾದಂ / ಪಾದಲು / ಪದವರ್ಣಂ
  • ಕೀರ್ತನೆಗಳು - ಅನ್ನಮಾಚಾರ್ಯ ಮತ್ತು ತ್ಯಾಗರಾಜು ಬರೆದಿದ್ದಾರೆ
  • ಸ್ಲೋಕಗಳು
  • ಶಿವ ಸ್ತುತಿ ಮತ್ತು ಶಿವಾಸ್ತಮ
  • ಜಾತಿ ಸ್ವರಂ / ತಿಲ್ಲಾನಗಳು
  • ಅಷ್ಟಪದುಲು.
  • ೨೦೦೨ ಮತ್ತು ೨೦೦೫ ರಲ್ಲಿ ಭದ್ರಾಚಲಂನಲ್ಲಿ ವಾಗ್ಗೇಯಕರ ಉತ್ಸವ.
  • ಕಿನ್ನೇರ ಆರ್ಟ್ಸ್ ಥಿಯೇಟರ್ ಆಂಧ್ರಪ್ರದೇಶ "ನಾಟ್ಯಸವಲು" ನಲ್ಲಿ ೧೦ ನವೆಂಬರ್ ನಿಂದ ೭ ಡಿಸೆಂಬರ್ ೨೦೦೫ ರವರೆಗೆ ಪ್ರದರ್ಶಿಸಲಾಯಿತು.
  • ೨೦೦೬ ರಲ್ಲಿ ಸಿಂಗಾಪುರ ತೆಲುಗು ಸಂಸ್ಕೃತಿ ಉತ್ಸವದಲ್ಲಿ ಪ್ರದರ್ಶನ ನೀಡಿದರು.
  • ಬಾಹ್ಯಾಕಾಶ ಮಹಿಳಾ ಸಂಘದಲ್ಲಿ (ಸ್ವಾಸ್) ಭಾಗವಹಿಸಿ ೮ ಮಾರ್ಚ್ ೨೦೦೭ ರಂದು ಬ್ರಹ್ಮಪ್ರಕಾಶ್ ಸಭಾಂಗಣ, ಶಾರ್ ಸೆಂಟರ್‌ನಲ್ಲಿ ಸಮಾರಂಭದ ಮುಖ್ಯ ಅತಿಥಿಯಾಗಿ ಅಂತರರಾಷ್ಟ್ರೀಯ ಮಹಿಳಾ ದಿನವನ್ನು ಆಚರಿಸಲಾಯಿತು.
  • ೨೦೦೭ ರ ಅಕ್ಟೋಬರ್ ೨೫ ರಿಂದ ನವೆಂಬರ್ ೧ ರವರೆಗೆ ಮಾರಿಷಸ್‌ನಲ್ಲಿ ಆಂಧ್ರ ದಿನಾಚರಣೆಯಲ್ಲಿ ಭಾಗವಹಿಸಿದರು.
  • ೨೩ ಆಗಸ್ಟ್ ೨೦೦೮ ರಂದು ಪುಣೆಯಲ್ಲಿ ಆಂಧ್ರ ಅಸೋಸಿಯೇಷನ್ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದರು.
  • ೪ ಸೆಪ್ಟೆಂಬರ್ ೨೦೦೮ ರಂದು "ಶಾರ್ ಸೆಂಟರ್ (ಇಸ್ರೋ)" ನಲ್ಲಿ ಗಣೇಶ ಉತ್ಸವದ ಸಂದರ್ಭದಲ್ಲಿ ಪ್ರದರ್ಶನಗೊಂಡಿತು.
  • ಹೈದರಾಬಾದ್‌ನ ಖೈರತಾಬಾದ್‌ನ ಅಡ್ಮಿನಿಸ್ಟ್ರೇಷನ್ ಸ್ಟಾಫ್ ಕಾಲೇಜ್ ಆಫ್ ಇಂಡಿಯಾ (ಎ‌ಎಸ್‌ಸಿ‌ಐ) ನಲ್ಲಿ ಪ್ರದರ್ಶನ.

ಉಲ್ಲೇಖಗಳು

ಬದಲಾಯಿಸಿ
  1. "Recital info". www.fullhyderabad.com. Archived from the original (PDF) on 2011-09-29. Retrieved 2023-10-15.
  2. Varshita. (2013, February 19). Kuchipudi Dance Recital By K Nirmala Visweswara Rao: Events in Hyderabad - fullhyd.com. Fullhyd.Com. https://events.fullhyderabad.com/kuchipudi-dance-recital-by-k-nirmala-visweswara-rao/2006-september/tickets-dates-videos-reviews-17247-1.html
  3. ೩.೦ ೩.೧ ೩.೨ Rangarajaan, A. D. (2015, October 29). Dance of the Vedic times. The Hindu. https://www.thehindu.com/features/friday-review/dance/nirmala-visweswara-rao-is-making-all-efforts-to-promote-sanatana-nartanam/article7818196.ece Retrieved 7 April 2021.


ಬಾಹ್ಯ ಕೊಂಡಿಗಳು

ಬದಲಾಯಿಸಿ