ನಮಕ್ ಪಾರಾ (ನಿಮ್ಕಿ, ನಿಮ್ಕಿನ್) ಭಾರತೀಯ ಉಪಖಂಡದಲ್ಲಿ ತಿನ್ನಲ್ಪಡುವ ಗರಿಗರಿಯಾದ ಉಪ್ಪುಖಾರವಿರುವ ಲಘು ಆಹಾರವಾಗಿದೆ. ಪಂಜಾಬ್ ಮತ್ತು ಉತ್ತರ ಪ್ರದೇಶದ ಕೆಲವು ಭಾಗಗಳಲ್ಲಿ ಕೆಲವೊಮ್ಮೆ ಇದನ್ನು ಮಠರಿ ಎಂದು ಕೂಡ ಕರೆಯಲಾಗುತ್ತದೆ.

ನಮಕ್ ಪಾರಾ (ಮೈದಾ, ಎಣ್ಣೆ ಮತ್ತು ನೀರಿನಿಂದ ತಯಾರಿಸಲಾದ) ಹಿಟ್ಟಿನ ರಿಬ್ಬನ್‍ನಂತಹ ಪಟ್ಟಿಯಾಗಿರುತ್ತದೆ. ಇದನ್ನು ಸ್ವಲ್ಪ ಪ್ರಮಾಣದಲ್ಲಿ ಅಜವಾನ ಮತ್ತು ಜೀರಿಗೆ ಬೀಜಗಳನ್ನು ಶುದ್ಧ ತುಪ್ಪ ಅಥವಾ ಎಣ್ಣೆಯಲ್ಲಿ ಕರಿದು ಹಾಕಿ ರುಚಿಗೊಳಿಸಲಾಗುತ್ತದೆ. ಇದನ್ನು ಸಿದ್ಧಮಾಡಿಕೊಳ್ಳಲು ಸುಮಾರು ೧೦ ನಿಮಿಷಗಳು ಬೇಕಾಗುತ್ತದೆ ಮತ್ತು ಬೇಯಿಸಿಕೊಳ್ಳಲು ೨೦ ನಿಮಿಷಗಳು ಬೇಕಾಗುತ್ತದೆ. ಇದರ ನೋಟ, ರುಚಿ ಮತ್ತು ರಚನೆಯನ್ನು ಸಮೋಸಾ ಪೇಸ್ಟ್ರಿಗೆ ಹೋಲಿಸಬಹುದು.

ನಮಕ್ ಪಾರಾಗೆ ಇತರ ರುಚಿಕಾರಗಳನ್ನು ಕೂಡ ಸೇರಿಸಬಹುದು, ಉದಾ. ಒಣಗಿಸಿದ ಮೆಂತೆ ಎಲೆಗಳು, ಒಣಗಿಸಿದ ಪುದೀನಾ ಎಲೆಗಳು, ಇತ್ಯಾದಿ.

ಹೊರಗಿನ ಕೊಂಡಿಗಳು ಬದಲಾಯಿಸಿ