ನಟ ಚೇತನ್[೧] [೨]ಕನ್ನಡ ಚಲನಚಿತ್ರ ನಟ. ಅಮೆರಿಕಾದಲ್ಲಿ ಹುಟ್ಟಿ, ಅಲ್ಲೇ ವ್ಯಾಸಂಗ ಮುಗಿಸಿ, ನಟರಾಗಿದ್ದುಕೊಂಡು ಸಮಾಜಸೇವೆ ಮಾಡುತ್ತಿದ್ದಾರೆ.

ಚೇತನ್

ಜನನ/ವಿದ್ಯಾಭ್ಯಾಸಸಂಪಾದಿಸಿ

 • ಚೇತನ್ ಹುಟ್ಟಿದ್ದು (೨೪ ಫೆಬ್ರವರಿ ೧೯೮೩) ಅಮೆರಿಕೆಯ ಚಿಕಾಗೋ ನಗರದಲ್ಲಿ. ಚಿತ್ರದುರ್ಗ ಮೂಲದ ಲಿಂಗಾಯತ ಸಮಾಜದ ಈ ಕುಟುಂಬ ಸಾಕಷ್ಟು ವರ್ಷಗಳ ಹಿಂದೆ ಅಮೆರಿಕೆಗೆ ಬಂದು ನೆಲೆಸಿದೆ. ಚೇತನ್ ಪ್ರಾಥಮಿಕ ಮತ್ತು ಮಾಧ್ಯಮಿಕ ಶಾಲಾ ಶಿಕ್ಷಣ ಪಡೆದದ್ದು ಅಮೇರಿಕೆಯ ಪ್ರತಿಷ್ಠಿತ ಶಾಲೆಗಳಲ್ಲಿ. ಪದವಿ ಮತ್ತು ಸ್ನಾತಕೋತ್ತರ ವ್ಯಾಸಂಗ ಮಾಡಿದ್ದು ಅಮೇರಿಕೆಯ ವಿಶ್ವ ಪ್ರಸಿದ್ಧ ಯೇಲ್ ವಿಶ್ವವಿದ್ಯಾಲಯದಲ್ಲಿ.
 • ಈ ಯೇಲ್ ವಿಶ್ವವಿದ್ಯಾಲಯ ಅನೇಕ ಕ್ಷೇತ್ರಗಳಲ್ಲಿ ಹಾರ್ವರ್ಡನ್ನೂ ಮೀರಿಸುವಂಥದ್ದು. ಜೀವನದ ಬಹುತೇಕ ವರ್ಷಗಳನ್ನು ಅಮೆರಿಕೆಯಲ್ಲಿ ಕಳೆದಿದ್ದರೂ ಸಾಹಿತಿಗಳನ್ನೂ ನಾಚಿಸುವವಷ್ಟು ಪರಿಶುದ್ಧವಾಗಿ ಕನ್ನಡದಲ್ಲಿ, ಅದರಲ್ಲೂ ತುಂಬು ಕಾಳಜಿ ಹೊತ್ತು ಹೃದಯದಿಂದ ಹೃದಯಕ್ಕೆ ಸಂವಾದ ನಡೆಸುವರು.

ಕಲಾವಿದರಾಗಿಸಂಪಾದಿಸಿ

 • ಚೇತನ್ ಸಂಪೂರ್ಣ ಕಲಾವಿದ. ಆಧುನಿಕ ನೃತ್ಯ ಪರಿಣಿತಿಯ ಜೊತೆಗೆ ನೃತ್ಯ ತರಬೇತಿ ಮತ್ತು ನೃತ್ಯ ನಿರ್ದೇಶನದಲ್ಲೂ ಪಳಗಿದ್ದಾರೆ. ಪಾಶ್ಚಾತ್ಯ ಜಾಜ್ ಸಂಗೀತ, ಭಾರತೀಯ ಶಾಸ್ತ್ರೀಯ ಸಂಗೀತ, ಅದರಲ್ಲೂ ಕರ್ನಾಟಕ ಸಂಗೀತವನ್ನು ಅದ್ಭುತವಾಗಿ ಸ್ಯಾಕ್ಸೋಫೋನ್ ವಾದ್ಯದಲ್ಲಿ ನುಡಿಸಬಲ್ಲ ಚೇತನ್ ಒಂದು ಅತ್ಯದ್ಭುತ ಅಚ್ಚರಿ.
 • 2007ರಲ್ಲಿ 'ಆ ದಿನಗಳು' ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿ ಅಪಾರ ಬೇಡಿಕೆಯಿದ್ದರೂ ಇಲ್ಲಿಯವರೆಗೆ ಕೇವಲ 6 ಸಿನೆಮಾಗಳಲ್ಲಿ ನಟಿಸಿ ಸಿನೆಮಾರಂಗದಿಂದ ದೂರವುಳಿದಿದ್ದ ನಟ ಚೇತನ್ ಕುಮಾರ್ ಮತ್ತೆ ಚಿತ್ರರಂಗಕ್ಕೆ ಹಿಂದಿರುಗಲು ಸಕಾಲ ಎಂದಿದ್ದಾರೆ. ನಟನೆಗೆ ತಮ್ಮ ಆದ್ಯತೆಯಾಗಿದ್ದರು ತೆಗೆದುಕೊಂಡಿರುವ ಈ ವಿರಾಮದಲ್ಲಿ ಸಮಾಜಮುಖಿ ಕಾರ್ಯಗಳತ್ತ ತಮ್ಮನ್ನು ತೊಡಗಿಸಿಕೊಂಡಿದ್ದನ್ನು ತಿಳಿಸುತ್ತಾರೆ.

ಜನಪರ ಕಾಳಜಿಸಂಪಾದಿಸಿ

 • ಎಲ್ಲಕ್ಕಿಂತ ಚೇತನ್ ಹೆಚ್ಚು ಆಪ್ತರಾಗಲು ಕಾರಣವಾಗುವುದು ಚೇತನರ ಅವಿರತ ಜನಪರ ಕಾಳಜಿ.[೩] ಒಂದೇ ಒಂದು ದಿನ ತಲೆಯ ಬುಡಕ್ಕಿಟ್ಟುಕೊಳ್ಳುವ ದಿಂಬು ಒಂಚೂರು ಏರುಪೇರಾದರೂ ಸಹಿಸದ ನಮ್ಮಂಥವರಿಗೆ ಧೊಪ್ಪನೆ ಸುರಿಯುವ ಕೊಡಗಿನ ಮಳೆಯಲ್ಲಿ ಬಯಲನ್ನೇ ಹಾಸಿಕೊಂಡು ಮಲಗುವ ಕಲ್ಪನೆಯೇ ಅಸಾಧ್ಯವಾಗದದ್ದು.[೪]
 • ತಲೆಯ ಮೇಲಿನ ಸೂರು ಕಳೆದುಕೊಂಡ ಸುಮಾರು ೩೦೦೦ ಜನ (೫೭೮ ಕುಟುಂಬಗಳು) ಜೇನುಕುರುಬ, ಬೆಟ್ಟಕುರುಬ, ಎರವ. ಶೋಲಿಯ, ಪಣಿಯ ಮತ್ತಿತರ ಆದಿವಾಸಿ ಸಮುದಾಯಗಳ ಜೀವನದ ಸಮಸ್ಯೆಗೆ ತಕ್ಷಣ ಸ್ಪಂದಿಸಿ ಅಲ್ಲೇ ಹೊರಟು ಅವರ ಮಧ್ಯೆಯೇ ಒಬ್ಬನಾಗಿ ಬೆರೆತುಹೋಗಿರುವ ಚೇತನರಂಥವರು ಇಂದಿಗೂ ನಮ್ಮ ನಡುವೆ ಬದುಕಿದ್ದಾರೆ ಎಂದು ನಂಬಿಸಿಕೊಳ್ಳಲು ಸಾಹಸಪಡಬೇಕು.

ನಟಿಸಿದ ಚಿತ್ರಗಳುಸಂಪಾದಿಸಿ

 1. ಆ ದಿನಗಳು
 2. ಮೈನಾ[೫]
 3. ಬಿರುಗಾಳಿ[೬]
 4. ಹೊಸ ಚಿತ್ರ- ರಾಜ ರಾಣಿ [೭]

ವಿಭಿನ್ನ ಚಿತ್ರವೊಂದರಲ್ಲಿ ನಾಯಕ ನಟನಾಗಿಸಂಪಾದಿಸಿ

 • ಸುಮಾರು 3 ವರ್ಷಗಳ ಬಳಿಕ ಬಣ್ಣ ಹಚ್ಚಲು ತಯಾರಾಗಿರುವ ನಟ ಚೇತನ್ ಅವರು ಈ ಬಾರಿ ಮರಾಠಿ ಕಾದಂಬರಿ ಆಧಾರಿತ 'ನೂರೊಂದು ನೆನಪು'[೮] ವಿಭಿನ್ನ ಚಿತ್ರವೊಂದರಲ್ಲಿ ನಾಯಕ ನಟನಾಗಿ ಕಾಣಿಸಿಕೊಳ್ಳಲಿದ್ದಾರೆ. ಇವರಿಗೆ ಡಿಂಗ್ರಿ ನಾಗರಾಜ್ ಅವರ ಮಗ ರಾಜ್ ವರ್ಧನ್ ಅವರು ಸಾಥ್ ನೀಡಲಿದ್ದಾರೆ.
 • ಖ್ಯಾತ ಬರಹಗಾರ ಸುಹಾಸ್ ಶಿರ್ವಾಲ್ಕರ್ ಅವರು ಬರೆದಿರುವ ‘ದುನಿಯಾದಾರಿ’ ಎಂಬ ಮರಾಠಿ ಕಾದಂಬರಿಯನ್ನು ಆಧರಿಸಿರುವ ಈ ಕಥೆಯನ್ನು ಕನ್ನಡದ ನೇಟಿವಿಟಿಗೆ ತಕ್ಕಂತೆ ಬಳಸಿಕೊಂಡು ಸಿನಿಮಾ ಮಾಡಲಾಗುತ್ತಿದೆ. ಕುಮರೇಶ್ ಎನ್ನುವವರು ಚಿತ್ರಕ್ಕೆ ಆಕ್ಷನ್-ಕಟ್ ಹೇಳುತ್ತಿದ್ದು, ಬೆಳಗಾವಿಯ ಸೂರಜ್ ದೇಸಾಯಿ ಮತ್ತು ಮಂಗೇಶ್ ದೇಸಾಯಿ ಎನ್ನುವವರು ಬಂಡವಾಳ ಹೂಡಲಿದ್ದಾರೆ.
 • ಇಷ್ಟು ದಿನಗಳ ಕಾಲ ವಿದ್ಯಾರ್ಥಿಗಳ ಮತ್ತು ಯುವಕರ ಸಬಲೀಕರಣ ಅಂತ ಸಮಾಜ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದ ನಟ ಚೇತನ್ ಅವರು ಇದೀಗ ಮತ್ತೆ ಸಿನಿಮಾದತ್ತ ಮುಖ ಮಾಡಿದ್ದಾರೆ. ಈ ಚಿತ್ರದಲ್ಲಿ ನಟ ಚೇತನ್ ಅವರ ಜೊತೆ ನಾಯಕಿ ನಟಿಯರಾಗಿ ನಟಿ ಮೇಘನಾ ರಾಜ್ ಮತ್ತು ‘ರನ್ ಆಂಟನಿ’ ಖ್ಯಾತಿಯ ನಟಿ ಸುಶ್ಮಿತಾ ಜೋಷಿ ಅವರು ಮಿಂಚಲಿದ್ದಾರೆ.

ಉಲ್ಲೇಖಸಂಪಾದಿಸಿ

 1. http://www.thenewsism.com/2016/12/17/chethan_actor/
 2. http://www.justkannada.in/kannada-film-actor-a-dinagalu-fame-chethan-participated-in-a-book-release-function-in-mysore/
 3. http://kannada.citytoday.news/15626
 4. http://kannada.eenaduindia.com/Entertainment/Sandalwood/2016/12/17225756/Kodagu-Actor-Chetan-Support-to-Tribal-Peoples-Fight.vpf
 5. http://kannada.filmibeat.com/news/nagashekhar-myna-completes-100-days-074514.html
 6. http://kannada.filmibeat.com/news/actress-mlc-tara-hits-back-against-aa-dinagalu-chethan-017717.html
 7. http://kannada.filmibeat.com/news/myna-nagashekar-teams-up-again-with-chetan-kumar-018444.html
 8. http://m.vijaykarnataka.com/entertainment/gossip/chethan-in-noorondu-nepa-kannada-movie/articleshow/54879183.cms