ನೂರೊಂದು ನೆನಪು (ಚಲನಚಿತ್ರ)
ಕನ್ನಡ ಚಲನಚಿತ್ರ
ನೂರೊಂದು ನೆನಪು ೨೦೧೭ರ ಕನ್ನಡ ಭಾಷೆಯ ಚಲನಚಿತ್ರ. ಎಂ. ಕುಮರೇಶ್ ಅವರು ಚಿತ್ರವನ್ನು ನಿರ್ದೇಶಿಸಿದ್ದಾರೆ.[೧] ದಿವಂಗತ ಶ್ರೀ ಸುಹಾಸ್ ಶಿರ್ವಲ್ಕರ್ ಅವರು ಬರೆದ ಕಥೆಯನ್ನು ಆಧರಿಸಿದ ಚಿತ್ರ ಇದಾಗಿದೆ. ಪ್ರವೀಣ್ ಸುತರ್ ಅವರ ಸಂಭಾಷಣೆ ಮತ್ತು ಚಿನ್ಮಯ್ ಮಂಡ್ಲೇಕರ್ ಅವರ ಚಿತ್ರಕಥೆ ಈ ಚಿತ್ರಕ್ಕಿದೆ. ಸೂರಜ್ ದೇಸಾಯಿ ಮತ್ತು ಮನೀಶ್ ದೇಸಾಯಿ, ೩ ಲಯನ್ ಪ್ರೊಡಕ್ಷನ್ ಅಡಿಯಲ್ಲಿ ಚಿತ್ರವನ್ನು ನಿರ್ಮಿಸಿದ್ದಾರೆ. ಈ ಚಿತ್ರವು ಮರಾಠಿ ಭಾಷೆಯ "ದುನಿಯಾದಾರಿ" ಚಿತ್ರದ ರೀಮೇಕ್. [೨]ಕನ್ನಡ:ನೂರೊಂದು ನೆನಪು
ನೂರೊಂದು ನೆನಪು | |
---|---|
ಚಿತ್ರ:Noorondu Nenapu Film.jpg | |
Directed by | ಕುಮಾರೇಶ್ ಎಂ |
Written by | ಪ್ರವೀಣ್ ಸುತರ್ ಚಿನ್ಮಯ್ ಮಾಂಡಲೇಕರ್ (ಮರಾಠಿ) |
Produced by | ಸೂರಜ್ ದೇಸಾಯಿ ಮನೀಶ್ ದೇಸಾಯಿ |
Starring | ಚೇತನ್ ಮೇಘನಾ ರಾಜ್ ರಾಜ ವರ್ಧನ್ ಸುಷ್ಮಿತಾ ಜೋಶಿ ಯಶ್ ಶೆಟ್ಟಿ ಅರ್ಚನಾ |
Narrated by | ಮೇಘನಾ ರಾಜ್ |
Cinematography | ಎಸ್.ಕೆ.ರಾವ್ |
Edited by | ಲಾರೆನ್ಸ್ ಕಿಶೋರ್ |
Music by | ಗಗನ್ ಬಡೇರಿಯಾ |
Production company | ೩ ಲಯನ್ ಪ್ರೊಡಕ್ಷನ್ |
Release date |
|
Language | ಕನ್ನಡ |
ಚೇತನ್, ಮೇಘನಾ ರಾಜ್, ರಾಜ ವರ್ಧನ್, ಸುಷ್ಮಿತಾ ಜೋಶಿ, ಯಶ್ ಶೆಟ್ಟಿ ಚಿತ್ರದ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ[೩][೪][೫] ೮೦ರ ದಶಕದಲ್ಲಿ ನಡೆಯುವ ಪ್ರೀತಿ ಮತ್ತು ಸ್ನೇಹದ ಕಥೆ ಇದಾಗಿದೆ.
ಆಗಸ್ಟ್ ೨೦೧೬ ರಲ್ಲಿ ಮುಹೂರ್ತ ನಡೆಯಿತು, ಚಿತ್ರದ ಬಹುತೇಕ ಭಾಗ ನೈಸರ್ಗಿಕ ಸೌಂದರ್ಯ ತಾಣಗಳಿರುವ ಬೆಳಗಾವಿಯಲ್ಲಿ ಚಿತ್ರೀಕರಿಸಲಾಯಿತು.
ತಾರಾಗಣ
ಬದಲಾಯಿಸಿ- ಶ್ರೇಯಸ್ ಬಹದ್ದೂರ್ ಆಗಿ ಚೇತನ್ ಕುಮಾರ್
- ಶೃತಿ ಅರಸ್ ಆಗಿ ಮೇಘನಾ ರಾಜ್
- DSP/ದಿಗಂಬರ್ ಶಂಕರ್ ಪಾಟೀಲ್ ಆಗಿ ರಾಜ ವರ್ಧನ್
- ಮೀನಾಕ್ಷಿ ಆಗಿ ಸುಷ್ಮಿತಾ ಜೋಷಿ
- ಸಾಯಿನಾಥ್ ರಾವ್ ಆಗಿ ಯಶ್ ಶೆಟ್ಟಿ
- ರೇಖಾ ಆಗಿ ಅರ್ಚನಾ
- ಎಮ್ ಕೆ ಆಗಿ ರಾಜೇಶ್ ನಟರಂಗ
- ಜವರೇಗೌಡ ಆಗಿ ಸಿದ್ಲಿಂಗು ಶ್ರೀಧರ್
- ರಾಣಿ ಮಾ ಆಗಿ ವೀಣಾ ಸುಂದರ್
- ಬಹದ್ದೂರ್ ಆಗಿ ಸುಂದರ್
ಉಲ್ಲೇಖ
ಬದಲಾಯಿಸಿ- ↑ "Kannada Movie/Cinema News - NOORONDU NENAPU – MEMORABLE". Chitratara.com. Retrieved 2017-06-23.
- ↑ "Noorondu Nenapu movie review: Boring and slow-paced storytelling". Bangaloremirror.indiatimes.com. 2017-06-10. Retrieved 2017-06-23.
- ↑ "Chethan's new film titled as Noorondu Nenapu". Filmykannada.com. 2016-10-15. Archived from the original on 2017-01-06. Retrieved 2017-06-23.
- ↑ "North Karnataka: Which is Meghana Raj's second home?". Timesofindia.indiatimes.com. Retrieved 2017-06-23.
- ↑ "Just because i am an actor's son,i don't get a red-carpet welcome". The New Indian Express. Retrieved 2017-06-23.