ದೂರವಾಣಿ ಮಾರಾಟಗಾರಿಕೆ

ದೂರವಾಣಿ ಮಾರಾಟಗಾರಿಕೆ (ದೂರವಾಣಿ ಮಾರಾಟ ಎಂದು UK ಮತ್ತು ಐರ್ಲ್ಯಾಂಡ್‌ಗಳಲ್ಲಿ ಕರೆಯಲ್ಪಡುತ್ತದೆ) ಇದೊಂದು ನೇರ ಮಾರಾಟಗಾರಿಕೆ ಇದರಲ್ಲಿ ಮಾರಾಟ ಮಾಡುವವನು ಗ್ರಾಹಕ ರಿಗೆ ಉತ್ಪನ್ನಗಳನ್ನು ಕೊಂಡುಕೊಳ್ಳಲು ಮನವಿ ಮಾಡಿಕೊಳ್ಳುತ್ತಾನೆ ಅಥವಾ ಸೇವೆಗಳನ್ನು ಪಡೆಯಲೂ ಮನವಿ ಮಾಡಿಕೊಳ್ಳುತ್ತಾನೆ, ಇದನ್ನು ದೂರವಾಣಿಯಿಂದಲ್ಲಾದರೂ ಮಾಡುತ್ತಾನೆ ಅಥವಾ ದೂರವಾಣಿಯಲ್ಲಿ ಸಮಯ ನಿಗದಿಪಡಿಸಿಕೊಂಡು ವೆಬ್ ಕಾನ್ಫರೆನ್ಸಿಂಗ್ ಮುಖಾಂತರ ಮುಖಾಮುಖಿಯಾಗಿ ಮಾತುಕತೆ ನಡೆಸಿ ಮಾಡುತ್ತಾನೆ.

ಆಥರ್ ಆಂಡ್ ಆಕ್ಟೀವಿಸ್ಟ್ ಬಾಬ್ ವೂಡ್ ಪ್ಲೇಸಸ್ ಒನ್ ಆಫ್ ಹಿಸ್ ನ್ಯೂಮರಸ್ ಫೋನ್ ಕಾಲ್ಸ್ ಟು ರೆಸಿಡೆಂಟ್ಸ್ ಇನ್ ಮುಸ್ಕೇಗಾನ್ ಕೌಂಟಿ, ಮಿಚಿಗಾನ್.

ದೂರವಾಣಿ ಮಾರಾಟಗಾರಿಕೆಯನ್ನು, ಸ್ವಯಂಚಾಲಿತ ಡಯಲಿಂಗ್ ಮುಖೇನ ಧ್ವನಿ ಮುದ್ರಿತ ಮನವಿಯನ್ನು ಕೇಳಿಸುವ ಮೂಲಕವೂ ಮಾಡಲಾಗುತ್ತದೆ. ದೂರವಾಣಿ ಮಾರಾಟಗಾರಿಕೆಯು ಇತ್ತೀಚಿನ ವರ್ಷಗಳಲ್ಲಿ ಅದು ಮಾಡುವ ಉಪಟಳದಿಂದ ಕಟು ಟೀಕೆಗೆ ಒಳಗಾಗಿದೆ.

ಇತಿಹಾಸ

ಬದಲಾಯಿಸಿ

ಕೆಲವು ಮಂದಿ [who?] ನಂಬುವ ಪ್ರಕಾರ 1950ರಲ್ಲಿ, ಡಯಲ್‌ಅಮೇರಿಕಾ ಮಾರ್ಕೆಟಿಂಗ್, ಇನ್‌ಕಾರ್ಪೊರೇಷನ್ ಪೂರ್ಣಪ್ರಮಾಣದಲ್ಲಿ ಒಳಬರುವ ಮತ್ತು ಹೊರಹೋಗುವ ದೂರವಾಣಿ ಮಾರಾಟ ಹಾಗೂ ಸೇವೆಗಳಿಗೆ ಅರ್ಪಿತವಾದ ಮೊದಲ ಕಂಪನಿಯಾಯಿತು. ಈ ಕಂಪನಿ, ಎಳೆ-ಎಳೆಯಾಗಿ ಹೋದ ಮೇಲೆ ಅದನ್ನು ಟೈಮ್, ಇನ್ ಕಾರ್ಪೊರೇಷನ್ ಮ್ಯಾಗಝೈನ್ ನವರು 1976ರಲ್ಲಿ ಮಾರಿದರು, ಆನಂತರ ಇದು ದೂರವಾಣಿಯ ಮಾರಾಟ ಮತ್ತು ಸೇವೆಗಳನ್ನು ಒದಗಿಸುವ ದೊಡ್ಡ ಮಟ್ಟದ ಮ್ಯಾಗಝೈನ್ ಪ್ರಕಾಶನದ ಕಂಪನಿಯಾಯಿತು. ದೂರವಾಣಿಮಾರಾಟಗಾರಿಕೆ ಎಂಬ ಶಬ್ದವು ಮೊದಲು ವ್ಯಾಪಕವಾಗಿ ಬಳಸಿದ್ದು 1970ರ ಪೂರ್ವದಲ್ಲಿ ಅದನ್ನು ಬಳಸಿದ್ದು ಬೆಲ್ ಸಿಸ್ಟಮ್ ಕಮ್ಯೂನಿಕೇಷನ್ಸ್‌ನವರು, ಇವರು ಹೊರಹೊರಟ WATSಗಳಿಗೆ ಮತ್ತು ಒಳಬರುವ ಟೋಲ್-ಫ್ರೀ ಸೇವೆಗಳನ್ನು ಹೊಸ ಬಳಕೆದಾರರಿಗೆ ಲಭ್ಯ ಮಾಡಿದರು.

ವರ್ಗೀಕರಣ ಅಥವಾ ವಿಭಾಗಗಳು

ಬದಲಾಯಿಸಿ

ದೂರವಾಣಿ ಮಾರಾಟಗಾರಿಕೆಯಲ್ಲಿ ಎರಡು ದೊಡ್ಡ ವರ್ಗೀಕರಣವೆಂದರೆ ವ್ಯಾಪಾರದಿಂದ-ವ್ಯಾಪಾರಕ್ಕೆ ಮತ್ತು ವ್ಯಾಪಾರದಿಂದ-ಗ್ರಾಹಕರಿಗೆ.

ಉಪವರ್ಗಗಳು

ಬದಲಾಯಿಸಿ
  • ಲೀಡ್ ಜನರೇಷನ್ , ಮಾಹಿತಿ ಒಟ್ಟುಗೂಡಿಸುವುದು
  • ಮಾರಾಟ , ಮನವೊಲಿಸುವ ಮಾರ್ಗವನ್ನು ಬಳಸಿ ಉತ್ಪನ್ನಗಳನ್ನು ಮಾರುವುದು ಅಥವಾ ಸೇವೆಗೆ ಒಪ್ಪಿಸುವುದು.
  • ಹೊರ ಹೋಗುವ , ಪೂರ್ವ ನಿಯಾಮಕ ಮಾರಾಟಗಾರಿಕೆಯಲ್ಲಿ ಭವಿಷ್ಯಾನ್ವಯ ಮತ್ತು ಪೂರ್ವಾಸ್ತಿತ್ವದ ಗ್ರಾಹಕರನ್ನು ನೇರವಾಗಿ ಸಂಪರ್ಕಿಸಲಾಗುತ್ತದೆ.
  • ಒಳಬರುವ , ಒಳಬರುವ ಸೂಚನೆಗೆ ಮತ್ತು ಮಾಹಿತಿಯ ಕೋರಿಕೆಗೆ ಪ್ರತಿಕ್ರಿಯಾಶೀಲ ಎಡೆ ಅಥವಾ ಸ್ಥಳ. ಬೇಡಿಕೆಯನ್ನು ಸಾಮಾನ್ಯವಾಗಿ ಜಾಹೀರಾತುಗಳಿಂದ, ಪ್ರಚಾರ, ಅಥವಾ ಮಾರಾಟದ ಮಂದಿಯ ಪ್ರಯತ್ನಗಳಿಂದ ಸೃಷ್ಟಿಸಲಾಗುತ್ತದೆ.
 
ಟೆಲಿಮಾರ್ಕೆಟಿಂಗ್ ಆಫೀಸ್

ಕಾರ್ಯವಿಧಾನ

ಬದಲಾಯಿಸಿ

ದೂರವಾಣಿ ಮಾರಾಟಗಾರಿಕೆಯನ್ನು ಕಂಪನಿಯ ಕಛೇರಿಯಿಂದ, ಕಾಲ್ ಸೆಂಟರ್ ಗಳಿಂದ ಅಥವಾ ಮನೆಯಿಂದ ಮಾಡಬಹುದಾಗಿದೆ. ಈ ಕಾರ್ಯದಲ್ಲಿ ನೇರವಾಗಿ ಮಾತನಾಡುವವರು ಇರಬಹುದು ಅಥವಾ ಧ್ವನಿ ಮುದ್ರಿತ ಸಂದೇಶಗಳನ್ನು ಹೊತ್ತಿರುವುದರಿಂದಲ್ಲೂ ಇರಬಹುದು, ಧ್ವನಿ ಪ್ರಚಾರದ ಎರಡನೆಯ ಮಾರ್ಗವನ್ನು "ಆಟೋಮೇಟೆಡ್ ಟೆಲಿಮಾರ್ಕೆಟಿಂಗ್" ಎಂದು ಕರೆಯಲಾಗುತ್ತದೆ. "ರೋಬೋಕಾಲ್ ಇಂಗ್" ಎನ್ನುವುದು ಧ್ವನಿ ಪ್ರಸಾರ ಇದರಲ್ಲಿ ಆಗಿಂದಾಗ್ಗೆ ರಾಜಕೀಯ ಸಂದೇಶಗಳೂ ಸೇರಿರುತ್ತದೆ.

ಪರಿಣಾಮಕಾರಿ ದೂರವಾಣಿ ಮಾರಾಟಗಾರಿಕೆಯ ಪ್ರಕ್ರಿಯೆಯಲ್ಲಿ ಎರಡು ಅಥವಾ ಮೂರು ಕರೆಗಳಿರುತ್ತದೆ. ಮೊದಲ ಕರೆ (ಅಥವಾ ಸರಣಿ ಕರೆಗಳು) ಗ್ರಾಹಕರ ಅಗತ್ಯಗಳನ್ನು ತೀರ್ಮಾನಿಸುತ್ತದೆ. ಕೊನೆಯ ಕರೆ (ಅಥವಾ ಸರಣಿ ಕರೆಗಳು) ಗ್ರಾಹಕರು ಉತ್ಪನ್ನಗಳನ್ನು ಕೊಂಡುಕೊಳ್ಳುವುದಕ್ಕೆ ಪ್ರೇರೇಪಿಸುತ್ತದೆ.

ಭವಿಷ್ಯದ ಗ್ರಾಹಕರನ್ನು ಅನೇಕ ಮಾರ್ಗಗಳಿಂದ ಗುರುತಿಸಬಹುದು, ಕಳೆದ ಕಾಲದ ಚರಿತ್ರೆಯಿಂದ, ಹಿಂದೆ ಮಾಹಿತಿಯನ್ನು ಕೇಳಿದ್ದರಿಂದ, ಸಾಲದ ಮಿತಿಯಿಂದ, ಸ್ಪರ್ಧಾಪ್ರವೇಶದ ಅರ್ಜಿಗಳಿಂದ ಮತ್ತು ಅರ್ಜಿಗಳಿಂದ. ಹೆಸರುಗಳನ್ನೂ ಕೂಡ ಮತ್ತೊಂದು ಕಂಪನಿಯ ಗ್ರಾಹಕರ ಡಾಟಾಬೇಸ್ ನಿಂದ ಕೊಂಡುಕೊಳ್ಳಬಹುದಾಗಿದೆ ಅಥವಾ ದೂರವಾಣಿ ನಿರ್ದೇಶಿಕೆಯಿಂದ ಪಡೆಯಬಹುದಾಗಿದೆ ಅಥವಾ ಮತ್ತೊಂದು ಸಾರ್ವಜನಿಕ ಪಟ್ಟಿಯಿಂದಲ್ಲೂ ಪಡೆಯಬಹುದು. ಆರ್ಹತಾ ಪ್ರಕ್ರಿಯೆಯಿಂದ ಗ್ರಾಹಕರು ಉತ್ಪನ್ನಗಳನ್ನು ಕೊಂಡುಕೊಳ್ಳುತ್ತಾರೋ ಅಥವಾ ಸೇವೆಯನ್ನು ಪಡೆಯಲು ಇಚ್ಛಿಸುತ್ತಾರೋ ತೀರ್ಮಾನವಾಗುತ್ತದೆ.

ಧರ್ಮಾರ್ಥದ ಸಂಘಟನೆಗಳು, ಅಲ್ಯೂಮ್ನಿ ಸಂಘಟನೆಗಳು ಮತ್ತು ರಾಜಕೀಯ ಪಕ್ಷಗಳು ಆಗಾಗ್ಗೆ ಈ ದೂರವಾಣಿ ಮಾರಾಟಗಾರಿಕೆಯನ್ನು ದೇಣಿಗೆಗಾಗಿ ಮನವಿ ಮಾಡಿಕೊಳ್ಳುವುದಕ್ಕೂ ಉಪಯೋಗಿಸುತ್ತಾರೆ. ಮಾರಾಟ ಸಂಶೋಧನೆ ಕಂಪನಿಗಳು ದೂರವಾಣಿ ಮಾರಾಟಗಾರಿಕೆಯನ್ನು ಯಾವುದಾದರು ಕಂಪನಿಯ ಬಗ್ಗೆ ಸಮೀಕ್ಷೆ ನಡೆಸಲು ಬಳಸುತ್ತವೆ, ಅವರ ವರದಿಯಲ್ಲಿ ಈ ಜವಾಬ್ದಾರಿ ವಹಿಸಿಕೊಟ್ಟ ಕಂಪನಿಯ ಉತ್ಪನ್ನಗಳ ಬಗ್ಗೆ ಗ್ರಾಹಕನ ತೃಪ್ತಿ ಎಷ್ಟು, ಸೇವೆಗಳ ಬಗ್ಗೆ ಏನಾದರು ಅತೃಪ್ತಿ ಇದೆಯೇ ಇತ್ಯಾದಿಗಳ ಬಗ್ಗೆ ಮಾಹಿತಿ ಇರಬೇಕಾಗುತ್ತದೆ. ಸಾರ್ವಜನಿಕ ಅಭಿಪ್ರಾಯ ಮತಗಳೂ ಇದೇ ರೀತಿ ಮಾಡಲಾಗುತ್ತದೆ.

ದೂರವಾಣಿ ಮಾರಾಟಗಾರಿಕೆಯ ತಂತ್ರಗಾರಿಕೆಯನ್ನು ಇನ್ನಿತರ ಎಲೆಕ್ಟ್ರಾನಿಕ್ ಮಾರಾಟಕ್ಕೂ ಉಪಯೋಗಿಸಲ್ಪಡುವುದಿದೆ ಇದಕ್ಕಾಗಿ ಇ-ಮೇಲ್ ಅಥವಾ ಫ್ಯಾಕ್ಸ್ ಸಂದೇಶಗಳನ್ನು ಬಳಸಲಾಗುತ್ತದೆ, ಇದನ್ನು ಇತರರು ಸ್ಪ್ಯಾಮ್ ಎಂದು ಪರಿಗಣಿಸುತ್ತಾರೆ.

 
ಟೆಲಿಮಾರ್ಕೆಟಿಂಗ್ ಏಜೆಂಟ್ ಸಿಟ್ಟಿಂಗ್ ಇನ್ ಎ ಕ್ಯೂಬಿಕಲ್. ದಿ ಬ್ರೈಟ್ಲಿ ಕಲರ್ಡ್ ರಿಬ್ಯೂಟಲ್ ಶೀಟ್ಸ್ ಆರ್ ಯೂಸ್ಡ್ ಟು ಆನ್ಸರ್ ಮೋಸ್ಟ್ ಕ್ವೆಶನ್ಸ್ ಎ ಕಸ್ಟಮರ್ ಮೈಟ್ ಹ್ಯಾವ್ಸ್.

ನಕಾರಾತ್ಮಕ ಗ್ರಹಿಕೆಗಳು ಮತ್ತು ಟೀಕೆಗಳು

ಬದಲಾಯಿಸಿ

ದೂರವಾಣಿ ಮಾರಾಟಗಾರಿಕೆಯು ನಕಾರಾತ್ಮಕವಾಗಿ ವಿವಿಧ ಮೋಸ ಮತ್ತು ವಂಚನೆಗಳ ಜೊತೆ ಕಂಡು ಬಂದಿದೆ, ಅವುಗಳಲ್ಲಿ ಪಿರಾಮಿಡ್ ಯೋಜನೆಗಳು ಮತ್ತು ತಪ್ಪುದಾರಿಗೆಳೆಯುವ ಉತ್ಪನ್ನಗಳು ಮತ್ತು ಸೇವೆಗಳು ಸೇರಿವೆ. ಮೋಸ ಮಾಡುವ ದೂರವಾಣಿ ಮಾರಾಟಗಾರಿಕೆಯ ಕಂಪನಿಗಳನ್ನು "ದೂರವಾಣಿ ಮಾರಾಟಗಾರಿಕೆಯ ಬಾಯ್ಲರ್ ರೂಮ್‌ಗಳು" ಅಥವಾ ಸರಳವಾಗಿ "ಬಾಯ್ಲರ್ ರೂಮ್‌ಗಳು" ಎಂದು ಕರೆಯಲಾಗುತ್ತದೆ. ಬೇಡದ ಸಂದರ್ಭದಲ್ಲಿ ಅಧಿಕ ಒತ್ತಡವನ್ನು ಮಾಡುವ ದೂರವಾಣಿ ಮಾರಾಟಗಾರಿಕೆಯನ್ನು ಸೈದ್ಧಾಂತಿಕವಲ್ಲದ ವ್ಯಾಪಾರೀ ಮಾರ್ಗ ಎಂದು ಆಗಾಗ್ಗೆ ಟೀಕೆಗೆ ಒಳಪಟ್ಟಿದೆ. ದೂರವಾಣಿ ಕಂಪನಿಗಳಲ್ಲಿ ಮಾರಾಟ ಕಾರ್ಯವನ್ನು ಮಾಡುವ ದೂರವಾಣಿ ಮಾರಾಟಗಾರರು ದೂರವಾಣಿ ಸ್ಲ್ಯಾಮಿಂಗ್ ನಲ್ಲಿ ಭಾಗವಹಿಸಬಹುದು, ಇದೊಂದು ಗ್ರಾಹಕರ ದೂರವಾಣಿ ಸೇವೆಯನ್ನು ಅವರ ಅರಿವಿಗೆ ತಾರದೆಯೇ ಅಥವಾ ಅನಧಿಕೃತವಾಗಿ ದೂರವಾಣಿಯಲ್ಲಿ ದಿಢೀರನೆ ಬಂದುಬಿಡುವುದು.

ದೂರವಾಣಿ ಮಾರಾಟಗಾರಿಕೆಯ ಕರೆಗಳನ್ನು ಹೆಚ್ಚಿನಂಶ ಉಪಟಳವೆಂದೇ ಭಾವಿಸಲಾಗುತ್ತದೆ ವಿಶೇಷವಾಗಿ ರಾತ್ರಿಯೂಟದ ಸಮಯದಲ್ಲಿ, ಬೆಳ್ಳಂಬೆಳಗೆ ಅಥವಾ ರಾತ್ರಿ ವೇಳೆಯಲ್ಲಿ.

ದೂರವಾಣಿ ಮಾರಾಟಗಾರಿಕೆಯ ಇತ್ತೀಚಿನ ಹೊಸ ಬೆಳವಣಿಗೆ ಎಂದರೆ ಅದು ರೋಬೋಕರೆಗಳ ಬಳಕೆ: ಕಂಪ್ಯೂಟರೀಕರಣಗೊಂಡ ಆಟೋಡೈಲರ್ ಗಳನ್ನು ಮತ್ತು ಕಂಪ್ಯೂಟರ್-ರವಾನಿಸುವ-ಪೂರ್ವ-ಧ್ವನಿ ಮುದ್ರಿತ ಸಂದೇಶಗಳೆರಡನ್ನೂ ಸ್ವಯಂಚಾಲಿತ ದೂರವಾಣಿ ಕರೆಗಳು ಬಳಸುತ್ತವೆ. ಇವುಗಳಲ್ಲಿ ಅನೇಕ ಬಾರಿ ಉದ್ದೇಶಪೂರಿತ ವಂಚನೆಯ ತಂತ್ರಗಾರಿಕೆಯಿಂದ ಕೂಡಿರುತ್ತದೆ, ಕಂಪ್ಯೂಟರ್ ಧ್ವನಿ ಮುದ್ರಿತ ಸಂದೇಶಗಳು ಹೀಗಿರುತ್ತದೆ "ಗಾಭರಿಗೊಳ್ಳಬೇಡಿ ಇದು ನಾವು ನಿಮಗೆ ಕೊಡುವ ಕೊನೆಯ ಸೂಚನೆ" ಅಥವಾ "ನಾವೀಗಾಗಲೇ ಪತ್ರದ ಮೂಲಕ ನಿಮ್ಮನ್ನು ಸಂಪರ್ಕಿಸಿದ್ದೇವೆ." ಈ ಸಂದೇಶಗಳು ಸಾರಾಸಗಟಾಗಿ ಸುಳ್ಳಾಗಿರುತ್ತದೆ, ಉದ್ರೇಕವನ್ನು ಅಥವಾ ಭಯವನ್ನು ಸಂಭಾವ್ಯ ಗ್ರಾಹಕರಲ್ಲಿ ಉಂಟು ಮಾಡಲು ಉದ್ದೇಶಿಸಿರುತ್ತದೆ.

’ಇನ್ನು ಮುಂದೆ ಕರೆ ಮಾಡಬೇಡಿ’ ಎಂಬ ಪಟ್ಟಿಗೆ ಹೆಸರುಗಳನ್ನು ಸೇರಿಸಲು ಮತ್ತು ಮತ್ತೆ-ಮತ್ತೆ ವ್ಯಕ್ತಿಗಳಿಗೆ ಎಲ್ಲಾ ಸಮಯದಲ್ಲೂ ತೊಂದರೆ ಕೊಡದೆ ಇರುವುದಕ್ಕೆ ರೋಬೋಕರೆಗಳು ಖ್ಯಾತಿ ಪಡೆದಿದೆ.

ನಿಯಂತ್ರಣಗಳು

ಬದಲಾಯಿಸಿ

ಕೆಲವು ದೇಶಗಳಲ್ಲಿ ದೂರವಾಣಿ ಮಾರಾಟಗಾರಿಕೆಯನ್ನು, ಶಾಸನ ಸಭೆಗಳಲ್ಲಿ, ಗ್ರಾಹಕ ಗೌಪ್ಯತೆ ಮತ್ತು ರಕ್ಷಣೆಯ ವಿಧಾಯಕಕ್ಕೆ ಒಳಪಡಿಸಲಾಗಿದೆ.

ಅಮೇರಿಕಾ ಸಂಯುಕ್ತ ಸಂಸ್ಥಾನ

ಬದಲಾಯಿಸಿ

ಅಮೇರಿಕಾ ಸಂಯುಕ್ತ ಸಂಸ್ಥಾನದಲ್ಲಿ ದೂರವಾಣಿ ಮಾರಾಟಗಾರಿಕೆಯು ಎಂದು ಅಧಿಕೃತವಾಗಿ ಕಾನೂನುಬದ್ಧವಾಗಿದೆ (ಅಥವಾ ಆಗಿಲ್ಲ) ಎಂದು ಸ್ಪಷ್ಟವಾಗಿ ಗೊತ್ತಿಲ್ಲ. ದೂರವಾಣಿ ಮಾರಾಟಗಾರಿಕೆಯು ಅಮೇರಿಕಾ ಸಂಯುಕ್ತ ಸಂಸ್ಥಾನದಲ್ಲಿ 1991ರ ದೂರವಾಣಿ ಗ್ರಾಹಕ ರಕ್ಷಣೆಯ ಕಾಯಿದೆ (TCPA) (47 U.S.C. § 227) ಮತ್ತು FTC'ಯ ದೂರವಾಣಿ ಮಾರಾಟಗಾರಿಕೆಯ ಮಾರಾಟ ನಿಯಮ (TSR) ಅನ್ವಯ ಫೆಡರಲ್ ಹಂತದಲ್ಲಿ ನಿರ್ಬಂಧಿಸಲಾಗಿದೆ. CFR 64.1200 ಎಂದು ಸ್ವೀಕೃತವಾಗಿರುವ ನಿಯಂತ್ರಕ ಅಧಿಕಾರವನ್ನು TCPAಯಿಂದ FCCಯು ಜನ್ಯ ಮಾಡಿರುತ್ತದೆ. ಸಾರ್ವಜನಿಕರ ನಂಬಿಕೆಯನ್ನು ಮರಳಿ ಪಡೆಯಲು ದೂರವಾಣಿ ಮಾರಾಟಗಾರಿಕೆಯ ಅನೇಕ ವೃತ್ತಿಪರ ಸಂಘಟನೆಗಳು ತನ್ನ ಸದಸ್ಯ ವ್ಯಾಪಾರಿಗಳಿಗೆ ನೈತಿಕತೆಯ ನಿಯಮಾವಳಿಗಳನ್ನು ಮತ್ತು ಗುಣಮಟ್ಟವನ್ನು ಅನುಸರಿಸಲು ಸೂಚಿಸುತ್ತದೆ.

ಕೆಲವು ನ್ಯಾಯಾಡಳಿತವು "ಕರೆ ಮಾಡಬೇಡಿ" ಪಟ್ಟಿಯನ್ನು ಕೈಗಾರಿಕಾ ಸಂಘಟನೆಗಳು ಅಥವಾ ಶಾಸನಗಳ ಮುಖಾಂತರ ಜಾರಿಮಾಡಿರುತ್ತದೆ; ಈ ಪಟ್ಟಿಯಲ್ಲಿನ ಗ್ರಾಹಕರನ್ನು ದೂರವಾಣಿ ಮಾರಾಟಗಾರರು ಸಂಪರ್ಕಿಸಲು ನಿರ್ಬಂಧಿಸಲಾಗಿದೆ. ಈ ಪಟ್ಟಿಯಲ್ಲಿರುವವರನ್ನು, ಈ ಶಾಸನವನ್ನು ಮೀರಿ ಸಂಪರ್ಕಿಸಿದ್ದೇ ಆದರೆ ಆ ಕಂಪನಿಯವರು ಅಧಿಕ ದಂಡನೆಗೆ ಒಳಗಾಗುತ್ತಾರೆ. ದೂರವಾಣಿ ಮಾರಾಟಗಾರಿಕೆಯು ಕರೆಗಳು ಒಳನುಗ್ಗುವುದನ್ನು ರಾಷ್ಟ್ರಾದ್ಯಂತ ಕಡಿತಗೊಳ್ಳಲು U.S. ಫೆಡರಲ್ ಟ್ರೇಡ್ ಕಮೀಷನ್ ನವರು ರಾಷ್ಟ್ರ‍ೀಯ ’ಕರೆ ಮಾಡಬೇಡಿ ನೊಂದಣಿ’ಯನ್ನು ಜಾರಿ ಮಾಡಿರುತ್ತದೆ. ದೂರವಾಣಿ ಮಾರಾಟಗಾರಿಕೆ ಕಾರ್ಪೊರೇಷನ್ಸ್‌ನವರು ಮತ್ತು ಟ್ರೇಡ್ ಗುಂಪು ಇದನ್ನು ಕಮರ್ಷಿಯಲ್ ಸ್ಪೀಚ್ ಹಕ್ಕುಗಳನ್ನು ಉಲ್ಲಂಘಿಸುತ್ತದೆ ಎಂದು ನ್ಯಾಯಾಲಯದಲ್ಲಿ ಪ್ರಶ್ನಿಸಿದರು.[] ಆದಾಗ್ಯೂ, U.S.ನ 10ನೇ ಸರ್ಕ್ಯೂಟ್ ಕೋರ್ಟ್ ಆಫ್ ಅಪೀಲ್ಸ್‌ನವರು ರಾಷ್ಟ್ರೀಯ ’ಡು ನಾಟ್ ಕಾಲ್ ರಿಜಿಸ್ಟ್ರಿ’ ಯನ್ನು ಫೆಬ್ರವರಿ 17, 2004ರಂದು ಎತ್ತಿ ಹಿಡಿದರು.[]

ದೂರವಾಣಿ ಮಾರಾಟಗಾರಿಕೆಯನ್ನು ಒಂದು ಆಯುಧವನ್ನಾಗಿ ಬಳಸುವ ಕಂಪನಿಗಳನ್ನು ನಿಯಂತ್ರಿಸುವುದು ಯುನೈಟೆಡ್ ಸ್ಟೇಟ್ಸ್ ಫೆಡರಲ್ ರೆಗ್ಯೂಲೇಷನ್ಸ್‌ಗಳು, ಇದರ ರೂಪುರೇಖೆಯನ್ನು TSR ಮತ್ತು TCPAನಲ್ಲಿ ಮಾಡಲಾಗಿರುತ್ತದೆ (ಮೂಲಭೂತವಾಗಿ 1995ರಲ್ಲಿ ಬಿಡುಗಡೆಯಾಗಿರುತ್ತದೆ ಮತ್ತು ಜನವರಿ 29, 2003ರಂದು ತಿದ್ದುಪಡಿಯಾಗಿರುತ್ತದೆ). ಅನೇಕ ರಾಜ್ಯಗಳು ತಮ್ಮದೇ ಆದ "ಡು ನಾಟ್ ಕಾಲ್" ಪಟ್ಟಿಯನ್ನು ಮಾಡಿಕೊಂಡರೆ ಕೆಲವು ರಾಜ್ಯಗಳು ಮಾತ್ರ U.S. ಫೆಡರಲ್‌ನ ಪಟ್ಟಿ ಜೊತೆ ಹಂಚಿಕೊಂಡಿರುತ್ತದೆ. ಪ್ರತಿ U.S. ರಾಜ್ಯವು ತನ್ನದೇ ಆದ ನಿಯಂತ್ರಣಗಳನ್ನು ಹೊಂದಿರುತ್ತದೆ : ಧ್ವನಿ ಮುದ್ರಿಸಲು ಅನುಮತಿ, ಮುಂದುವರೆಸಲು ಅನುಮತಿ, ನಿರಾಕರಣೆಯಿಲ್ಲದ ಶಾಸನ, ಭಾನುವಾರ ಮತ್ತು ರಜೆದಿನದ ಕರೆಗಳು; ಜೊತೆಗೆ ಉಲಂಘನೆಗಳಿಗೆ ದಂಡನೆ ಮತ್ತು ಶಿಕ್ಷೆಯನ್ನು ಒತ್ತಾಯ ಪೂರ್ವಕವಾಗಿ ವಸೂಲು ಮಾಡುವುದು. ಸೆಪ್ಟೆಂಬರ್ 1, 2009ರಂದು, ಅನೇಕ ರೋಬೋಕರೆ ಅನ್ನು ನಿಷೇಧಿಸುವ FTC ನಿಯಂತ್ರಣಗಳು ಜಾರಿಗೆ ಬಂದವು.

ದೂರವಾಣಿ ಮಾರಾಟಗಾರಿಕೆ ತಂತ್ರಗಾರಿಕೆಯನ್ನು ರಾಜಕೀಯ ಪ್ರಚಾರದ ಅಭಿಯಾನಕ್ಕೆ ಬಳಸುವುದು ಹೆಚ್ಚಿದೆ. ಮುಕ್ತ-ಭಾಷಣದ ಕಾರಣ, ವಾಣಿಜ್ಯ ಜಾಹೀರಾತುವಿನ ಸಂದೇಶಕ್ಕಿಂತ ರಾಜಕೀಯ ದೂರವಾಣಿ ಕರೆಗಳ ಬಗ್ಗೆ ಇರುವ ನಿಯಂತ್ರಣವು ಕಡಿಮೆ ಕಟ್ಟುನಿಟ್ಟಾಗಿರುತ್ತದೆ. ಹೀಗಿದ್ದರೂ, ಕೆಲ ರಾಜ್ಯಗಳು ರಾಜಕೀಯ ರೋಬೋಕರೆಗಳನ್ನು ನಿಷೇಧಿಸಿವೆ ಅಥವಾ ನಿರ್ಬಂಧಿಸಿದೆ.

ಕೆನಡಾದಲ್ಲಿ, ದೂರವಾಣಿ ಮಾರಾಟಗಾರಿಕೆಯನ್ನು ಫೆಡರಲ್ ಸರಕಾರವು ನಿಯಂತ್ರಿಸುತ್ತದೆ, ನಿರ್ದಿಷ್ಟವಾಗಿ ಕೆನೇಡಿಯನ್ ರೇಡಿಯೋ-ಟೆಲಿವಿಷನ್ ಆಂಡ್ ಟೆಲಿಕಮ್ಯೂನಿಕೇಷನ್ಸ್ ಕಮೀಷನ್ ನವರು ಈ ಕಾರ್ಯ ಮಾಡುತ್ತಾರೆ.

ಆಸ್ಟ್ರೇಲಿಯಾ

ಬದಲಾಯಿಸಿ

ದೂರವಾಣಿ ಮಾರಾಟಗಾರಿಕೆಯನ್ನು ಆಸ್ಟ್ರೇಲಿಯಾದಲ್ಲಿ ಆಸ್ಟ್ರೇಲಿಯನ್ ಫೆಡರಲ್ ಸರಕಾರವು ನಿರ್ಬಂಧಿಸುತ್ತದೆ ಮತ್ತು ಆಸ್ಟ್ರೇಲಿಯನ್ ಕಮ್ಯೂನಿಕೇಷನ್ಸ್ ಮತ್ತು ಮೀಡಿಯಾ ಅಥಾರಿಟಿ (ACMA)ದವರು ನಿಯಮ ರೂಪಿಸುತ್ತಾರೆ. ಆಸ್ಟ್ರೇಲಿಯನ್ ಫೆಡರಲ್ ಲೆಗೀಸ್ಲೇಷನ್‌ನವರು ಸಂಶೋಧನೆ ಮತ್ತು ಮಾರಾಟಗಾರಿಕೆ ಕರೆಗಳ ಅವಧಿಯನ್ನು ನಿರ್ಬಂಧಿಸುತ್ತದೆ.[]

2007ರಲ್ಲಿ ಡು ನಾಟ್ ಕಾಲ್ ರಿಜಿಸ್ಟರ್ ಅನ್ನು ಆಸ್ಟ್ರೇಲಿಯನ್ ಒಳಬರುವ ದೂರವಾಣಿ ಸಂಖ್ಯೆಗಳಿಗಾಗಿ ಸ್ಥಾಪಿಸಲಾಯಿತು. ಈ ನೊಂದಣಿಯು ಒಬ್ಬ ಬಳಕೆದಾರನಿಗೆ ಖಾಸಗಿ ಬಳಕೆಯ ದೂರವಾಣಿ ಸಂಖ್ಯೆಯನ್ನು ನೊಂದಣಿ ಮಾಡಲು ಅವಕಾಶಕೊಡುತ್ತದೆ. ಆಸ್ಟ್ರೇಲಿಯನ್ ಫೆಡರಲ್ ಲೆಗಿಸ್ಲೇಷನ್, ನೊಂದಣಿಯಾಗಿರುವ ದೂರವಾಣಿ ಕರೆಗಳಿಗೆ, ಮಾರಾಟಗಾರಿಕೆ ಶೈಲಿಯ ಕರೆಗಳ ಸಂಖ್ಯೆಯನ್ನು ಸೀಮಿತಗೊಳಿಸುತ್ತದೆ ; ಆದಾಗ್ಯೂ, ಸಂಶೋಧನಾ ಕರೆಗಳನ್ನು ಒಳ ಬಿಡಲಾಗುತ್ತದೆ. ಇನ್ನಿತರ ವಿನಾಯಿತಿಗಳೆಂದರೆ ಧರ್ಮಾರ್ಥ ಸಂಘಟನೆಗಳಿಂದ ರಾಜಕೀಯ ಸದಸ್ಯರಿಂದ, ರಾಜಕೀಯ ಪಕ್ಷಗಳಿಂದ ಮತ್ತು ಅದರ ಅಭ್ಯರ್ಥಿಗಳಿಂದ ಬರುವ ಕರೆಗಳು[]

ಒಳಬರುವ ದೂರವಾಣಿ ಮಾರಾಟಗಾರಿಕೆಯು ಮತ್ತೊಂದು ದೊಡ್ಡ ಉದ್ಯಮ[ಸೂಕ್ತ ಉಲ್ಲೇಖನ ಬೇಕು]. ಇದರಲ್ಲಿ ನೇರ ಪ್ರಸಾರದ ನಿರ್ವಾಹಕರು ಮತ್ತು IVR—ಇಂಟರಾಕ್ಟೀವ್ ವಾಯ್ಸ್ ರೆಸ್ಪಾನ್ಸ್ ಎರಡನ್ನೂ ಒಳಗೊಂಡಿರುತ್ತದೆ. IVR ಅನ್ನು ಆಡಿಯೋಟೆಕ್ಸ್‌ಟ್ ಅಥವಾ ಸ್ವಯಂಚಾಲಿತ ಕರೆಯ ಸಂಸ್ಕರಣ. ಸಾಮಾನ್ಯವಾಗಿ, ದೊಡ್ಡ ದೂರದರ್ಶನ ಅಭಿಯಾನಗಳು ಮತ್ತು ಜಾಹೀರಾತುದಾರರು IVR ಸೇವೆಯ ಕೇಂದ್ರಗಳು ಉತ್ತರಿಸುವ ಟೋಲ್-ಫ್ರೀ ಟೆಲಿಫೋನ್ ನಂಬರ್ ಅನ್ನು ಬಳಸುತ್ತವೆ[ಸೂಕ್ತ ಉಲ್ಲೇಖನ ಬೇಕು]. ದೂರದರ್ಶನದಲ್ಲಿ ಟೋಲ್-ಫ್ರೋ ಟೆಲಿಫೋನ್ ಸಂಖ್ಯೆಯನ್ನು ಪ್ರಸಾರ ಮಾಡಿದಾಗಲೆಲ್ಲಾ ಬರುವ ಅಸಂಖ್ಯಾತ ಸಂಖ್ಯೆಗಳನ್ನು ನಿಭಾಯಿಸಲು ಈ ಸೇವಾ ಕೇಂದ್ರಗಳು ಉನ್ನತ ತಂತ್ರಜ್ಞಾನವನ್ನು ಮತ್ತು ಕರೆ ಸ್ವೀಕರಿಸುವ ಸಾಮರ್ಥ್ಯವನ್ನು ಪಡೆದಿರುತ್ತವೆ.[ಸೂಕ್ತ ಉಲ್ಲೇಖನ ಬೇಕು].

ತಂತ್ರಜ್ಞಾನ

ಬದಲಾಯಿಸಿ

ಉಲ್ಲೇಖಗಳು

ಬದಲಾಯಿಸಿ


ಇವನ್ನೂ ನೋಡಿ

ಬದಲಾಯಿಸಿ

ಬಾಹ್ಯ ಕೊಂಡಿಗಳು

ಬದಲಾಯಿಸಿ