ಮಾರಾಟ ವ್ಯವಸ್ಥೆ
"ಮಾರ್ಕೆಟ್" ಎಂಬ ಶಬ್ದ "ಮಾರ್ಕಟಸ್" ಎಂಬ ಲ್ಯಾಟಿನ್ ಶಬ್ದದಿಂದ ಬಂದಿದೆ. ಅಂದರೆ "ವ್ಯಾಪಾರ ಮಾಡು" ಎಂದು. ಈ "ಮಾರ್ಕೆಟ್" ಎಂಬ ಶಬ್ದವನ್ನು ಬೇರೆ ಬೇರೆ ಸಂದರ್ಭದಲ್ಲಿ ಬೇರೆ ಬೇರೆಯಾಗಿ ಬಳಸಲಾಗುತ್ತದೆ. ಸಾಮಾನ್ಯ ಅರ್ಥದಲ್ಲಿ "ಮಾರ್ಕೆಟ್" ಅಥವಾ ಮಾರುಕಟ್ಟೆಯೆಂದರೆ ಮಾರುವವರು ಮತ್ತು ಕೊಳ್ಳವವರು ಪರಸ್ಪರ ಭೇಟಿಯಾಗಿ,ಮಾರುವುದು ಮತ್ತು ಕೊಳ್ಳವ ಸ್ಥಳ.
- ಪ್ರೊ.ಫಿಲಿಪ್ ಕೋಟ್ಲರ್:"ಒಂದು ಸಮರ್ಥ ವಿನಿಮಯಕ್ಕೆ ಒಂದು ಪ್ರದೇಶ ಅಥವಾ ವಾತಾವರಣವೇ ಮಾರುಕಟ್ಟೆ."
- ಕ್ಲಾರ್ಕ್ ಮತ್ತು ಕ್ಲಾರ್ಕ್:"ಮಾರುಕಟ್ಟೆ ಒಂದು ನಿರ್ದಿಷ್ಟ ಉತ್ಪನ್ನದ ಕಾರ್ಯಾಚರಣೆಗೆ ಹಕ್ಕನ್ನು ವಿನಿಮಯ ಮಾಡಲು ಮತ್ತು ಯಾವುದರಿಂದ ಯಾವುದರ ಕಡೆಗೆ ವಾಸ್ತವ ಸರಕುಗಳು ಸಾಗುವುದಕ್ಕೆ ದಾರಿ ಮಾಡುವುದೋ ಅಂಥ ಪ್ರದೇಶ."
ಮಾರುಕಟ್ಟೆಗಳ ವರ್ಗೀಕರಣ
ಬದಲಾಯಿಸಿವಿವಿಧ ದೃಷ್ಟಿಕೋನಗಳ ಆಧಾರದ ಮೇಲೆ ಮಾರುಕಟ್ಟೆಯನ್ನು ಹಲವು ರೀತಿಯಲ್ಲಿ ವರ್ಗೀಕರಿಸಲಾಗಿದೆ. ಅವುಗಳಲ್ಲಿ ಕೆಲವನ್ನು ಕೆಳಗೆ ಕೊಟ್ಟಿದೆ.
ಭೌಗೋಳಿಕ ಪ್ರದೇಶದ ಅನುಸಾರ
ಬದಲಾಯಿಸಿಭೌಗೋಳಿಕ ಪ್ರದೇಶದ ಆಧಾರದ ಮೇಲೆ ಮಾರುಕಟ್ಟೆಗಳನ್ನು ನಾಲ್ಕು ಬಗೆಯಾಗಿ ವರ್ಗೀಕರಿಸಬಹುದು.ಅವು
- ಸ್ಥಳೀಯ ಮಾರುಕಟ್ಟೆ
- ಪ್ರಾದೇಶಿಕ ಮಾರುಕಟ್ಟೆ
- ರಾಷ್ಟ್ರೀಯ ಮಾರುಕಟ್ಟೆ
- ವಿಶ್ವ ಅಥವಾ ರಾಷ್ಟ್ರೀಯ ಮಾರುಕಟ್ಟೆ
ಮಾರಾಟಗಾರರ ಸ್ಥಾನದ ಆಧಾರದ ಮೇಲೆ
ಬದಲಾಯಿಸಿಮಾರುಕಟ್ಟೆಗಳಲ್ಲಿ ಮಾರಾಟಗಾರರ ಸ್ಥಾನದ ಆಧಾರದ ಮೇಲೆ, ಮಾರುಕಟ್ಟೆಗಳನ್ನು ಮೂರು ವಿಧಗಳಾಗಿ ವರ್ಗೀಕರಿಸಲಾಗಿದೆ. ಅವು
- ಪ್ರಾಥಮಿಕ ಮಾರುಕಟ್ಟೆ
- ದ್ವಿತೀಯ ಮಾರುಕಟ್ಟೆ
- ಅಂತಿಮ ಮಾರುಕಟ್ಟೆ
ಅವಧಿಯ ಆಧಾರದ ಮೇಲೆ
ಬದಲಾಯಿಸಿಅವಧಿಯ ಆಧಾರದ ಮೇಲೆ, ಮಾರುಕಟ್ಟೆಗಳನ್ನು ಮೂರು ವಿಧಗಳಾಗಿ ವರ್ಗೀಕರಿಸಲಾಗಿದೆ. ಅವು
- ಅತ್ಯಲ್ಪ ಅವಧಿಯ ಮಾರುಕಟ್ಟೆ
- ಅಲ್ಪಾವಧಿಯ ಮಾರುಕಟ್ಟೆ
- ದೀರ್ಘಾವಧಿಯ ಮಾರುಕಟ್ಟೆ
ವ್ಯವಹಾರದ ಗಾತ್ರ ಅಥವಾ ಪ್ರಮಾಣದ ಮೇಲೆ
ಬದಲಾಯಿಸಿವಹಿವಾಟಿನ ಆಧಾರದ ಮೇಲೆ, ಮಾರುಕಟ್ಟೆಗಳನ್ನು ಎರಡು ವಿಧಗಳಾಗಿ ವರ್ಗೀಕರಿಸಬಹುದು. ಅವು
- ಸಗಟು ಮಾರುಕಟ್ಟೆ
- ಚಿಲ್ಲರೆ ಮಾರುಕಟ್ಟೆ
ವಹಿವಾಟಿನ ಲಕ್ಷಣದ ಆಧಾರದ ಮೇಲೆ
ಬದಲಾಯಿಸಿವಹಿವಾಟಿನ ಆಧಾರದ ಮೇಲೆ, ಮಾರುಕಟ್ಟೆಗಳನ್ನು ಎರಡು ವಿಧಗಳಾಗಿ ವರ್ಗೀಕರಿಸಬಹುದು. ಅವು
- ಸ್ಥಾನಿಕ ಮಾರುಕಟ್ಟೆ
- ಭವಿಷ್ಯದ ಮಾರುಕಟ್ಟೆ
ವಹಿವಾಟು ನಡೆಸಿದ ಸರಕಿನ ಆಧಾರದ ಮೇಲೆ
ಬದಲಾಯಿಸಿವಹಿವಾಟು ನಡೆಸಿದ ಸರಕಿನ ಆಧಾರದ ಮೇಲೆ ಮಾರುಕಟ್ಟೆಗಳನ್ನು ಎರಡು ವಿಧಗಳಾಗಿ ವರ್ಗೀಕರಿಸಬಹುದು. ಅವು
ನಿಯಂತ್ರಣದ ಆಧಾರದ ಮೇಲೆ
ಬದಲಾಯಿಸಿನಿಯಂತ್ರಣದ ಆಧಾರದ ಮೇಲೆ ಮಾರುಕಟ್ಟೆಗಳನ್ನು ಎರಡು ವಿಧಗಳಾಗಿ ವರ್ಗೀಕರಿಸಬಹುದು. ಅವು
- ನಿಯಂತ್ರಿತ ಮಾರುಕಟ್ಟೆ
- ಅನಿಯಂತ್ರಿತ ಅಥವಾ ಮುಕ್ತ ಮಾರುಕಟ್ಟೆ
ಆರ್ಥಿಕತೆಯ ಆಧಾರದ ಮೇಲೆ
ಬದಲಾಯಿಸಿಆರ್ಥಿಕತೆಯ ಆಧಾರದ ಮೇಲೆ ಮಾರುಕಟ್ಟೆಗಳನ್ನು ಮೂರು ವಿಧಗಳಾಗಿ ವರ್ಗೀಕರಿಸಲಾಗಿದೆ. ಅವು
- ಸಮರ್ಪಕ ಮಾರುಕಟ್ಟೆ
- ಅಸಮರ್ಪಕ ಮಾರುಕಟ್ಟೆ
- ಏಕಸ್ವಾಮ್ಯ ಮಾರುಕಟ್ಟೆ