ನೇರ ವ್ಯಾಪಾರೋದ್ಯಮ

ನೇರ ವ್ಯಾಪಾರೋದ್ಯಮ ಇದು ವ್ಯಾಪಾರೋದ್ಯಮದ ಒಂದು ಉಪ-ಶಾಖೆ ಮತ್ತು ಒಂದು ವಿಧ. ಉಳಿದ ಇತರ ವ್ಯಾಪಾರೋದ್ಯಮಗಳಿಂದ ಈ ನೇರ ವ್ಯಾಪಾರೋದ್ಯಮವನ್ನು ಪ್ರತ್ಯೇಕಿಸುವ ಎರಡು ಮುಖ್ಯ ವ್ಯಾಖ್ಯಾತ್ಮಕ ವಿಶೇಷ ಲಕ್ಷಣಗಳಿವೆ. ಅವುಗಳಲ್ಲಿ ಮೊದಲನೆಯದು, ಇದು ಮಾಧ್ಯಮದ ಯಾವುದೇ ಮಧ್ಯಸ್ಥಿಕೆಯನ್ನು ಬಳಸಿಕೊಳ್ಳದೆ ತನ್ನ ಮಾಹಿತಿಗಳನ್ನು ನೇರವಾಗಿ ಅನುಭೋಗಿಗಳಿಗೆ ಕಳುಹಿಸುವ ಪ್ರಯತ್ನವನ್ನು ಮಾಡುತ್ತದೆ. ಇದು ಸಾಮಾನ್ಯವಾಗಿ ಯಾವುದೇ ವಿಜ್ಞಾಪನೆಗಳಿಲ್ಲದೆ ಅನುಭೋಗಿಗಳೊಂದಿಗೆ ಅಥವಾ ವ್ಯವಹಾರಗಳೊಂದಿಗೆ ವಾಣಿಜ್ಯಾತ್ಮಕ ಸಂವಹನಗಳನ್ನು (ಡೈರೆಕ್ಟ್ ಮೇಲ್‌, ಈ-ಮೇಲ್‌, ಟೆಲಿಮಾರ್ಕೇಟಿಂಗ್) ಒಳಗೊಂಡಿರುತ್ತದೆ. ಎರಡನೆಯ ವಿಶೇಷ ಲಕ್ಷಣವೆಂದರೆ, ಇದು ಒಂದು ನಿರ್ಧಿಷ್ಟ "ಕಾಲ್-ಟು-ಆ‍ಯ್‌ಕ್ಷನ್" ಅನ್ನು ಪಡೆಯಲು ಹೆಚ್ಚು ಗಮನವನ್ನು ಹರಿಸುತ್ತದೆ. ಈ ನೇರ ವ್ಯಾಪಾರೋದ್ಯಮದ ಸನ್ನಿವೇಶವು ಜಾಡನ್ನು ಗುರುತಿಸುವ, ಮಾಧ್ಯಮಕ್ಕೆ ಹೆಚ್ಚು ಗಮನ ಕೊಡದೆ ನೀಡುವ ಅನುಭೋಗಿಗಳ (ಉದ್ಯಮಗಳಲ್ಲಿ ಸಾಮಾನ್ಯವಾಗಿ "ಪ್ರತಿಕ್ರಿಯೆ" ಎಂದು ಗುರುತಿಸಲ್ಪಟ್ಟಿರುವ) ಮಾಪನ ಮಾಡಬಹುದಾದ ಗುಣಾತ್ಮಕ (ಆದರೆ ಋಣಾತ್ಮಕವಲ್ಲದ) ಪ್ರತಿಕ್ರಿಯೆಗಳಿಗೆ ಹೆಚ್ಚು ಒತ್ತುಕೊಡುತ್ತದೆ.

ಒಂದು ವೇಳೆ ಜಾಹಿರಾತು ನಿರ್ಧಿಷ್ಟ ಕಾರ್ಯಾಚರಣೆಯನ್ನು ತೆಗೆದುಕೊಳ್ಳಲು ಸಂಭಾವ್ಯ ಲಾಭದ ಕುರಿತು ಕೇಳಿದರೆ, ಆ ಸಂದರ್ಭದಲ್ಲಿ ಉಚಿತ ದೂರವಾಣಿ ಸಂಖ್ಯೆಗೆ ಕರೆ ಮಾಡಿ ಅಥವಾ ಜಾಲತಾಣವನ್ನು ವೀಕ್ಷಿಸಿ, ಆನಂತರದಲ್ಲಿ ಈ ಪ್ರಯತ್ನವನ್ನು ನೇರ ಪ್ರತಿಕ್ರಿಯೆಯ ಜಾಹಿರಾತುಗೊಳಿಸುವಿಕೆ ಎಂದು ಪರಿಗಣಿಸಲಾಗುತ್ತದೆ.

ಇತಿಹಾಸ

ಬದಲಾಯಿಸಿ

ನೇರ ವ್ಯಾಪಾರೋದ್ಯಮ ಎಂಬ ಪದವನ್ನು 1967ರಲ್ಲಿ ಅಮೇರಿಕನ್‌ ಎಕ್ಸ್‌ಪ್ರೆಸ್‌ ಮತ್ತು ಕೊಲಂಬಿಯಾ ರೆಕಾರ್ಡ್ಸ್ ಬ್ರ್ಯಾಂಡ್‌ನೊಂದಿಗೆ ನೇರ ವ್ಯಾಪಾರೋದ್ಯಮದ ಕಾರ್ಯ ಕೌಶಲ್ಯತೆಯನ್ನು ಆವೀಷ್ಕರಿಸಿದ ಲೆಸ್ಟರ್ ವುಂಡರ್‌ಮ್ಯಾನ್ ಅವರ ಭಾಷಣದಲ್ಲಿ ಮೊಟ್ಟ ಮೊದಲ ಬಾರಿಗೆ ಬಳಸಲಾಯಿತು ಎಂದು ನಂಬಲಾಗಿದೆ.

ಈಚೆಗೆ ಅಂಚೇ ಕಛೇರಿಯ ಮೂಲಕ ವಿತರಣೆ ಮಾಡಿದ ಅಥವಾ ನೇರವಾಗಿ ಗ್ರಾಹಕರ ಅಂಚೇ ಪೆಟ್ಟಿಗೆಗಳಲ್ಲಿ ಶೇಖರಿಸಿದ, ವಿಜ್ಞಾಪನೆಗೊಳಪಡದ ವಾಣಿಜ್ಯಾತ್ಮಕ ಜಾಹಿರಾತುಗಳು ಎಂದು ಉಲ್ಲೇಖಿತವಾಗಿರುವ ಜಂಕ್‌ ಮೇಲ್  ಎಂಬ ಪದವನ್ನು 1954ರಲ್ಲಿ ಪತ್ತೆಹಚ್ಚಲಾಯಿತು.[] "ವಿಜ್ಞಾಪನೆಗೊಳಪಡದ ವಾಣಿಜ್ಯಾತ್ಮಕ ಇಮೇಲ್‌" ಎಂಬ ಅರ್ಥವಿರುವ ಸ್ಪ್ಯಾಮ್‌ ಎಂಬ ಪದವನ್ನು 1993, ಮಾರ್ಚ್‌ 31ಕ್ಕಿಂತ ಮುಂಚೆ ಪತ್ತೆಹಚ್ಚಲಾಯಿತು, ಆದಾಗ್ಯೂ ಇದರ ಮೊದಲ ಕೆಲವು ತಿಂಗಳುಗಳಲ್ಲಿ, ಇದನ್ನು ಕೇವಲ UseNetನಲ್ಲಿ ವಿವೇಚನೆಯಿಲ್ಲದೆ ಹಲವಾರು ಬಾರಿ ಲಗತ್ತಿಸಿದ ಮಾಹಿತಿಗಳು ಆ ಮೂಲಕ ಪುನರಾವರ್ತನೆಗೊಂಡ ಸಂಭಾಷಣೆಗಳ ಸಾಮಾನ್ಯ ಪ್ರವಾಹವನ್ನು ಪರಿಣಾಮಕಾರಿಯಾಗಿ ಹೊರತೆಗೆಯಲು ಶಿಫಾರಸ್ಸು ಮಾಡಲಾಯಿತು.[]

ಆದಾಗ್ಯೂ, ನೇರ ವ್ಯಾಪಾರೊಧ್ಯಮ ಎಂಬ ಪದವನ್ನು ಬಳಸಿಕೊಂಡವರಲ್ಲಿ ವುಂಡರ್‌ಮನ್‌ ಮೊಟ್ಟ ಮೊದಲಿಗರಾಗಿರಬಹುದು, ಮೇಲ್ ಲಿಖಿತ ನಿರ್ದೇಶನವನ್ನು ಮಾರಾಟಮಾಡುವ ಪ್ರಯೋಗವು (ಮೇಲ್ ಮೂಲಕ ನೇರ ವ್ಯಾಪಾರೋದ್ಯಮ) 1867ರಲ್ಲಿ ಆವಿಷ್ಕರಿಸಲ್ಪಟ್ಟ ಬೆರಳಚ್ಚು ಯಂತ್ರದಿಂದಾಗಿ U.S.ನಿಂದ ಅವಶ್ಯಕವಾಗಿ ಆರಂಭವಾಯಿತು.[ಸಾಕ್ಷ್ಯಾಧಾರ ಬೇಕಾಗಿದೆ]

ಮೊಟ್ಟ ಮೊದಲ ಆಧುನಿಕ ಮೇಲ್-ಆರ್ಡರ್ ಕ್ರಯಪಟ್ಟಿಯು ಆ‍ಯ್‌ರೋನ್ ಮೊಂಗೊಮೆರಿ ವಾರ್ಡ್‌ನಿಂದ್ 1872ರಲ್ಲಿ ಉತ್ಪಾಧಿಸಲ್ಪಟ್ಟಿತು.[ಸಾಕ್ಷ್ಯಾಧಾರ ಬೇಕಾಗಿದೆ]

ಪ್ರಸ್ತುತ-ದಿನದ ನೇರ ವ್ಯಾಪಾರೋದ್ಯಮ ಸಂಘಟನೆಯ ಪೂರ್ವಾಧಿಕಾರಿಯಾದ  ಡೈರೆಕ್ಟ್ ಮೇಲ್ ಜಾಹಿರಾತುಗಳ ಸಂಘಟನೆಯು ಮೊಟ್ಟ ಮೊದಲು ಆರಂಭಗೊಂಡಿದ್ದು 1917ರಲ್ಲಿ.[ಸಾಕ್ಷ್ಯಾಧಾರ ಬೇಕಾಗಿದೆ]   ಮೂರನೇ ದರ್ಜೆಯ ಬಲ್ಕ್ ಮೇಲ್ ಲಗತ್ತಿಸುವಿಕೆಯ ದರಗಳು 1928ರಲ್ಲಿ ಆರಂಭಗೊಂಡವು.[ಸಾಕ್ಷ್ಯಾಧಾರ ಬೇಕಾಗಿದೆ]

ಯೂರೋಪಿನ ನೇರ ವ್ಯಾಪಾರೋದ್ಯಮಗಳ ಇತಿಹಾವು 15ನೇ ಶತಮಾನದಲ್ಲಿಯೇ ಪತ್ತೆಹಚ್ಚಲ್ಪಟ್ಟಿದ್ದವು. ಗುಟೆನ್‌ಬರ್ಗ್‌ರವರ ಚಲನಾತ್ಮಕ ವಿಧಗಳ ಸಂಶೊಧನೆಯ ಮೇಲೆ, ಪ್ರಿಂಟರ್‌-ಪಬ್ಲಿಶರ್‌ನಿಂದ ಮೊದಲ ವ್ಯಾಪಾರೀ ಕ್ರಯಪಟ್ಟಿಯು ಸರಿಸುಮಾರು 1450ರಲ್ಲಿ ಅಸ್ತಿತ್ವಕ್ಕೆ ಬಂದಿತು.[ಸಾಕ್ಷ್ಯಾಧಾರ ಬೇಕಾಗಿದೆ]

ಪ್ರಯೋಜನಗಳು ಮತ್ತು ಕೊರತೆಗಳು

ಬದಲಾಯಿಸಿ

ನೇರ ವ್ಯಾಪಾರೋದ್ಯಮವು ಹಲವಾರು ವ್ಯಾಪಾರೋದ್ಯಮಗಳಿಗೆ ಆಕರ್ಷಣೀಯವಾಗಿದೆ, ಏಕೆಂದರೆ ಹಲವಾರು ಸನ್ನಿವೇಶಗಳಲ್ಲಿ ಇದರ ಸಕಾರಾತ್ಮಕ ಪರಿಣಾಮವನ್ನು (ಆದರೆ ನಕಾರಾತ್ಮಕ ಪರಿಣಾಮಗಳಲ್ಲ) ನೇರವಾಗಿ ಅಳತೆಮಾಡಬಹುದಾಗಿದೆ. ಉದಾಹರಣೆಗೆ, ಒಂದು ವೇಳೆ ವ್ಯಾಪಾರೋದ್ಯಮಿ ಒಂದು ಮಿಲಿಯನ್ ವಿಜ್ಞಾಪನೆಗಳನ್ನು ಮೇಲ್ ಮೂಲಕ ಕಳುಹಿಸುತ್ತಾನೆ ಎಂದಾದರೆ, ಮತ್ತು ಹತ್ತು ಸಾವಿರ ಗ್ರಾಹಕರು ಈ ಬೆಂಬಲಕ್ಕೆ ಪರ್ತಿಕ್ರಿಯಿಸಿದ್ದಾರೆ ಎಂದು ಪತ್ತೆಹಚ್ಚಬಹುದು, ವ್ಯಾಪಾರೋದ್ಯಮಿ ಕೆಲವು ಆತ್ಮವಿಶ್ವಾಸದಿಂದ ಈ ಕಾರ್ಯಾಚರಣೆಯು ಪ್ರತಿಕ್ರಿಯೆಗಳ ಆಧಾರದಿಂದ ನೇರವಾಗಿ ಪ್ರಾಯೋಜಿಸಲ್ಪಟ್ಟಿದೆ ಎಂದು ಹೇಳಬಹುದು. ಈ ಜಂಕ್‌ ಮೇಲ್‌/ಸ್ಪ್ಯಾಮ್‌ನಿಂದ ಅಸಂತುಷ್ಟರಾದ ಗ್ರಾಹಕರ ಸಂಖ್ಯೆಯನ್ನು, ಏನೇ ಆದರೂ, ಸುಲಭವಾಗಿ ಅಳತೆಮಾಡಲು ಸಾಧ್ಯವಿಲ್ಲ.

ವಿಭಿನ್ನತೆಯಲ್ಲಿ, ಇತರ ಮಾಧ್ಯಮಗಳ ಮಾಪನವು ಯಾವಾಗಲೂ ಪರೋಕ್ಷವಾಗಿರಲೇಬೇಕು, ಹಾಗಾಗಿ ಅನುಭೋಗಿಯಿಂದ ನೇರವಾದ ಪ್ರತಿಕ್ರಿಯೆಗಳು ಲಭ್ಯವಿಲ್ಲ. 
ಪರಿಣಾಮಗಳ ಮಾಪನವು, ಯಶಸ್ವೀ ನೇರ ವ್ಯಾಪಾರೋದ್ಯಮದ ಮೂಲಭೂತ ಲಕ್ಷಣವಾಗಿದೆ, ಮತ್ತು ಇದನ್ನು ಈ ಲೇಖನದಲ್ಲಿ ಹೆಚ್ಚಿನ ಕಡೆಯಲ್ಲಿ ಅತೀ ವಿಸ್ತಾರವಾಗಿ ವವರಿಸಲಾಗಿದೆ.

ಅಂತರಜಾಲ-ಯುಗದ ಆರಂಭದಿಂದಲೂ, ಇನ್ನೂ ಮುಖ್ಯ ವ್ಯಾಪಾರೋದ್ಯಮ ಅಧಿಕಾರಿಯ ಸವಾಲುಗಳು ನೇರ ವ್ಯಾಪಾರೋದ್ಯಮ ಪ್ರತಿಕ್ರಿಯೆಗಳ ಮತ್ತು ಫಲಿತಾಂಶಗಳ ಮಾಪನಗಳನ್ನು ಹಿಂಬಾಲಿಸುತ್ತಿವೆ.[ಸಾಕ್ಷ್ಯಾಧಾರ ಬೇಕಾಗಿದೆ]

ಆದಾಗ್ಯೂ ಹಲವಾರು ವ್ಯಾಪಾರೋದ್ಯಮಿಗಳು ಈ ವಿಧದ ವ್ಯಾಪಾರೋದ್ಯಮವನ್ನು ಇಷ್ಟಪಡುತ್ತಾರೆ, ನಿರ್ಧಿಷ್ಟವಾದ ಮಾಧ್ಯಮಗಳನ್ನು ಬಳಸಿಕೊಂಡ ಕೆಲವು ನೇರ ವ್ಯಾಪಾರೋದ್ಯಮದ ಪ್ರಯತ್ನಗಳು ಅನಾವಶ್ಯಕ ವಿಜ್ಞಾಪನೆಗಳನ್ನು ಹುಟ್ಟುಹಾಕುತ್ತಿದೆ ಎಂದು ವಿಮರ್ಶೆಗೊಳಪಟ್ಟಿವೆ.

ಉದಾಹರಣೆಗೆ, ಗ್ರಾಹಕರಿಗೆ ಅಗತ್ಯವಿಲ್ಲದ ನೇರವಾದ ಮೇಲ್‌ಗಳನ್ನು ಜಂಕ್ ಮೇಲ್‌  ಎಂದು ಪರಿಗಣಿಸಲಾಗುತ್ತದೆ, ಮತ್ತು ಅನಪೇಕ್ಷಿತ ಇಮೇಲ್‌‌ ಸಂದೇಶಗಳನ್ನು ಸ್ಪ್ಯಾಮ್‌  ಎಂದು ಪರಿಗಣಿಸಲಾಗುತ್ತದೆ. ಕೆಲವು ಅನುಭೋಗಿಳು ಗೌಪ್ಯತೆಯ ಮತ್ತು ಪರಿಸರಕ್ಕೆ ಸಂಬಂಧಿಸಿದ ಕಾರಣದಿಂದಾಗಿ,[ಸಾಕ್ಷ್ಯಾಧಾರ ಬೇಕಾಗಿದೆ] ನೇರ ವ್ಯಾಪಾರೋದ್ಯಮಿಗಳು "opt out" ಪಟ್ಟಿಗಳನ್ನು, ಬದಲಾವಣಾತ್ಮಕ ಮುದ್ರಣ ಮತ್ತು ಹೆಚ್ಚು ಗುರಿನಿರ್ಧೇಶಿತ ಮೇಲ್‌ಗಳ ಯಾದಿಯನ್ನು ಬಳಸಿಕೊಂಡು ಒದಗಿಸಲು ಯೋಗ್ಯವಾಗಿರುವ ನೇರ ವ್ಯಾಪಾರೋದ್ಯಮಕ್ಕೆ ಅಂತ್ಯವನ್ನು ಬಯಸುತ್ತಿದ್ದಾರೆ.

ಜಗತ್ತಿನ ಹಲವಾರು ಅತಿದೊಡ್ಡ ವ್ಯಾಪಾರೋದ್ಯಮ ಮತ್ತು ಜಾಹಿರಾತು ಸಂಸ್ಥೆಗಳು ನೇರ ವ್ಯಾಪಾರೋದ್ಯಮ ಪರಿಣತ ಸಂಸ್ಥೆಗಳೆಂದು ಕಾರ್ಯಾರಂಭ ಮಾಡಿದವು, ಅವುಗಳೆಂದರೆ ಕಾರ್ಲ್‌ಸನ್‌ ವ್ಯಾಪಾರೋದ್ಯಮ, GyroHSR, ಪ್ರೊಕ್ಸಿಮಿಟಿ ಮತ್ತು ಐರಿಶ್ ನೇಶನ್. ಇಳಿಮುಖವಾಗುತ್ತಿರುವ ಗ್ರಾಹಕರ ಬಂಡವಾಳಗಳ ಕಾರಣದಿಂದಾಗಿ ಮತ್ತು ಕೇಳುಗರ ಸಂಖ್ಯೆಯ ಹೆಚ್ಚಳದಿಂದಾಗಿ, ಹಲವಾರು ಈ ರೀತಿಯ ಸಂಸ್ಥೆಗಳು ವೈವಿಧ್ಯೀಕರಣಗೊಂಡವು ಮತ್ತು ಕೇವಲ ಸಾಮಾನ್ಯ DM ಸೇವೆಗಳನ್ನು ಒದಗಿಸುವುದರ ಬದಲಾಗಿ ಸಂಘಟಿತ ವ್ಯಾಪಾರೋದ್ಯಮವನ್ನು ಒದಗಿಸುವ ನಿಟ್ಟಿನಲ್ಲಿ ವಿಸ್ತೃತಗೊಂಡವು. "ಸಂಘಟಿತ ವ್ಯಾಪಾರೋದ್ಯಮ" ಎಂಬ ಪದವು ಡಿಎಮ್, ಡಿಜಿಟಲ್, ಎಸ್‌ಪಿ, ಪಿಆರ್‌, ಘಟನೆಗಳು ಮತ್ತು ಜಾಹಿರಾತುಗಳನ್ನೊಳಗೊಂಡಂತೆ ಸಂಪೂರ್ಣ ವ್ಯಾಪಾರೋದ್ಯಮ ಸಂವಹನಗಳ ಪಟ್ಟಿಯನ್ನು ಅವರು ಹೇಗೆ ಮಾರಾಟಮಾಡುತ್ತಾರೆ ಎಂಬುದನ್ನು ವಿವರಿಸಲು ಸಂಸ್ಥೆಗಳಿಂದ ಬಳಸಲ್ಪಟ್ಟಿತು.

ಮಾಧ್ಯಮಗಳು

ಬದಲಾಯಿಸಿ

ಡೈರೆಕ್ಟ್ ಮೇಲ್‌

ಬದಲಾಯಿಸಿ

ನೇರ ವ್ಯಾಪಾರೋದ್ಯಮದ ಹೆಚ್ಚು ಸಾಮಾನ್ಯವಾದ ಒಂದು ವಿಧವೆಂದರೆ ಡೈರೆಕ್ಟ್ ಮೇಲ್,[ಸಾಕ್ಷ್ಯಾಧಾರ ಬೇಕಾಗಿದೆ] ಕೆಲವೊಮ್ಮೆ ಜಂಕ್ ಮೇಲ್ ಎಂದೂ ಕರೆಯಲಾಗುತ್ತದೆ. ಇದು ಕಾಗದದ ಮೇಲ್‌ಗಳನ್ನು ಆ ಪ್ರದೇಶದ ಎಲ್ಲಾ ಅಂಚೇ ಗ್ರಾಹಕರಿಗೆ ಅಥವಾ ಯಾದಿಯಲ್ಲಿರುವ ಎಲ್ಲಾ ಅಂಚೇ ಗ್ರಾಹಕರಿಗೆ ಕಳುಹಿಸುವ ಜಾಹಿರಾತುದಾರರಿಂದ ಬಳಸಲ್ಪಟ್ಟಿದೆ.

 
ಜಂಕ್‌ಮೇಲ್‌

ಗ್ರಾಹಕರಿಗೆ ಸಂವಹನವನ್ನು ಒದಗಿಸಲು ಬಳಸಬಹುದಾದ ಯಾವುದೇ ಕಡಿಮೆ-ಬಂಡವಾಳದ ಮಾಧ್ಯಮವನ್ನು ನೇರ ವ್ಯಾಪಾರೊಧ್ಯಮದಲ್ಲಿ ಬಳಸಿಕೊಳ್ಳಬಹುದಾಗಿದೆ. ಬಹುಷಹ ನೇರ ವ್ಯಾಪಾರೋದ್ಯಮದಲ್ಲಿ ಸಾಮಾನ್ಯವಾಗಿ ಹೆಚ್ಚು ಬಳಕೆಯಾದ ಮಾಧ್ಯಮವೆಂದರೆ ಮೇಲ್‌, ಇವುಗಳಲ್ಲಿ ವ್ಯಾಪಾರೋದ್ಯಮ ಸಂವನಗಳನ್ನು ಅಂಚೇ ಸೇವೆಯ ಮೂಲಕ ಗ್ರಾಹಕರಿಗೆ ತಲುಪಿಸಲಾಗುತ್ತದೆ.

ಡೈರೆಕ್ಟ್ ಮೇಲ್  ಎಂಬ ಪದವನ್ನು ನೇರ ವ್ಯಾಪಾರೋದ್ಯಮದಲ್ಲಿ ಸಂವಹನಗಳನ್ನು ಅಂಚೇ ಮಾಧ್ಯಮದ ಮೂಲಕ ತಲುಪಿಸಲು ಬಳಸಿಕೊಳ್ಳಲಾಗುತ್ತದೆ, ಇವುಗಲನ್ನು ಜಂಕ್ ಮೇಲ್ ಅಥವಾ ಆ‍ಯ್‌ಡ್‌ಮೇಲ್ ಅಥವಾ ಕ್ರ್ಯಾಪ್‌ಮೇಲ್ ಎಂದೂ ಕೂಡ ಉಲ್ಲೇಖಿಸಲಾಗುತ್ತದೆ ಮತ್ತು ಇದು ಬಲ್ಕ್ ಮೇಲ್‌ಗಳನ್ನು ಕೂಡ ಒಳಗೊಂಡಿರಬಹುದು.

ಜಂಕ್‌ ಮೇಲ್ ಜಾಹಿರಾತು ಸುತ್ತೋಲೆಗಳನ್ನು, ಕ್ರಯ ಪಟ್ಟಿಗಳನ್ನು, ಉಚಿತ ಪ್ರಯೋಗಗಳ CDಗಳು, ಪೂರ್ವ-ಅನುಮೋದಿತ ಕ್ರೆಡಿಟ್ ಕಾರ್ಡ್ ಮನವಿಪತ್ರಗಳು, ಮತ್ತು ಇತರ ವಿಜ್ಞಾಪನೆಗಳಿಲ್ಲದ ಮೇಲ್ ಮೂಲಕ ವಿತರಿಸಲ್ಪಟ್ಟ ವಾಣಿಜ್ಯ ಸರಕುಗಳ ಆಮಂತ್ರಣಗಳು ಅಥವಾ ಮನೆಗಳಿಗೆ ಮತ್ತು ವ್ಯವಹಾರಗಳಿಗೆ ಅಥವಾ ಗ್ರಾಹಕರ ಮೇಲ್ ಪೆಟ್ಟಿಗೆಗೆ ಅಂಚೆ ಪೆಟ್ಟಿಗೆಯನ್ನು ಹೊರತುಪಡಿಸಿ ಡೆಲಿವರಿ ಸೇವೆಯ ಮೂಲಕ ಕಳುಹಿಸಲ್ಪಟ್ಟ ಮೇಲ್‌ಗಳು ಮುಂತಾದವುಗಳನ್ನು ಒಳಗೊಂಡಿರುತ್ತದೆ. ಬಲ್ಕ್ ಮೇಲ್‌ಗಳು ಪ್ರಮುಖವಾಗಿ ವಿತ್ತ ಸೇವೆಗಳಲ್ಲಿನ ವ್ಯವಹಾರಿಕ ಕಾರ್ಯಾಚರಣೆಗಳು, ಗೃಹ ಗಣಕಯಂತ್ರ ಸೇವೆ, ಯಾತ್ರೆ ಮತ್ತು ಪ್ರವಾಸೋಧ್ಯಮ ಕೈಗಾರಿಕೆಗಳ ಪ್ರಚಾರಗಳಿಗೆ ಜನಪ್ರಿಯವಾದ ವಿಧಾನವಾಗಿದೆ.

ಹಲವಾರು ಅಭಿವೃದ್ಧಿಹೊಂದಿದ ರಾಷ್ಟ್ರಗಳಲ್ಲಿ, ಡೈರೆಕ್ಟ್ ಮೇಲ್ ವಿಶಿಷ್ಟ ವರ್ಗಗಳ ದರಗಳ ಮೂಲಕ ಅಭಿವೃದ್ಧಿಪಡಿಸಲಾದ ಮೇಲ್‌ಗಳ ಒಟ್ಟೂ ಸಂಪುಟಗಳ ಅರ್ಥಗರ್ಭಿತವಾದ ಮ್ಮೌಲ್ಯಗಳನ್ನು ಪ್ರತಿನಿಧಿಸುತ್ತದೆ. ಯುನೈಟೆಡ್‌ ಸ್ಟೇಟ್ಸ್‌ನಲ್ಲಿ ಮತ್ತು ಯುನೈಟೆಡ್‌ ಕಿಂಗ್‌ಡಮ್‌ನಲ್ಲಿ, ಉದಾಹರಣೆಗೆ, ನಿಯಮಿತ ಪ್ರಥಮ-ದರ್ಜೆಯ ದರಗಳಿಗಿಂತ ಗಣನೀಯ ಪ್ರಮಾಣದಲ್ಲಿ ಕಡಿಮೆ ಇರುವ ನಿರ್ಧಿಷ್ಟ ದರದಲ್ಲಿ ವ್ಯಾಪಾರದಾರರಿಗೆ ಮೇಲ್‌ಗಳನ್ನು ಕಳುಹಿಸಲು ಬಲ್ಕ್ ಮೇಲ್ ದರಗಳು ಇವೆ. ಈ ದರಗಳನ್ನು ಅರ್ಹಗೊಳಿಸಲು ವ್ಯಾಪಾರದಾರರು ಈ ಮೇಲ್‌ಗಳನ್ನು ಒಂದು ನಿರ್ಧಿಷ್ಟ ಮಾರ್ಗದಲ್ಲಿ ವಿನ್ಯಾಸಗೊಳಿಸಬೇಕು ಮತ್ತು ವರ್ಗೀಕರಿಸಲೇಬೇಕು-ಇದು ಅಂಚೇ ಸೇವೆಗೆ ಬೇಕಾದ ನಿರ್ವಹಣೆಯನ್ನು (ಹಾಗಾಗಿ ವೆಚ್ಚವನ್ನು) ಕಡಿಮೆಗೊಳಿಸುತ್ತದೆ.

ಜಾಹಿರಾತುದಾರರು ಪದೇ ಪದೇ ಡೈರೆಕ್ಟ್ ಮೇಲ್ ಪ್ರಯೋಗಗಳನ್ನು ಗುರಿನಿರ್ಧೇಶಿತ ಮೇಲ್‌ ಗಳನ್ನಾಗಿ ಪರಿಷ್ಕರಿಸುತ್ತಾರೆ, ಅವುಗಳಲ್ಲಿ ಪ್ರಾಯಶಃ ಸಕಾರಾತ್ಮಕವಾಗಿ ಪ್ರತಿಕ್ರಿಯಿಸುತ್ತಾರೆ ಎಂದು ಪರಿಗಣಿಸಿ ಗ್ರಾಹಕರನ್ನು ಆಯ್ಕೆಮಾಡಿಕೊಳ್ಳುವ ಸಲುವಾಗಿ ಮುಂಬರುವ ದತ್ತಾಂಶ ವಿಶ್ಲೇಷಣೆಯನ್ನು ಮೇಲ್‌ ಮಾಡಲಾಗುತ್ತದೆ. ಉದಾಹರಣೆಗೆ, ಒಬ್ಬ ವ್ಯಕ್ತಿ ತನ್ನ ಗಾಲ್ಪ್‌ ಮೇಲಿನ ಆಸಕ್ತಿಯನ್ನು ಪ್ರದರ್ಶಿಸಿದರೆ ಆತನು ಗಾಲ್ಪ್‌‌ಗೆ ಸಂಬಂಧಿಸಿದ ಉತ್ಪನ್ನಗಳ ಬಗ್ಗೆ ನೇರ ಮೇಲನ್ನು ಸ್ವೀಕರಿಸುತ್ತಾನೆ ಅಥವಾ ಪ್ರಾಯಶಃ ಗಾಲ್ಪರ್‌ಗೆ ಯೋಗ್ಯವಾದ ಸರಕು ಮತ್ತು ಸೇವೆಗಳ ಮಾಹಿತಿಯನ್ನು ಪದೆಯುತ್ತಾನೆ. ಈ ರೀತಿಯ ದತ್ತಾಂಶ ವಿಶ್ಲೇಷಣೆಯು ದತ್ತಾಂಶ ವ್ಯಾಪಾರೋದ್ಯಮದ ಒಂದು ವಿಧ. ಈ ರೀತಿಯ ಮೇಲ್‌ ಗಳನ್ನು ಯುನೈಟೆಡ್ ಅಂಚೇ ಸೇವೆಯು "ಜಾಹಿರಾತು ಮೇಲ್‌" ಎಂದು ಕರೆಯುತ್ತದೆ (ಲಘುವಾಗಿ ಆ‍ಯ್‌ಡ್‌ಮೇಲ್‌ ಎಂದು ಕರೆಯಲಾಗುತ್ತದೆ).

ದೂರವ್ಯಾಪಾರೋದ್ಯಮ

ಬದಲಾಯಿಸಿ

ನೇರ ವ್ಯಾಪಾರೋದ್ಯಮದ ಎರಡನೆಯ ಅತೀ ಸಾಮಾನ್ಯ ವಿಧವೆಂದರೆ ದೂರವ್ಯಾಪಾರೋದ್ಯಮ,[ಸಾಕ್ಷ್ಯಾಧಾರ ಬೇಕಾಗಿದೆ] ಇಲ್ಲಿ ವ್ಯಾಪಾರದಾರರು ಗ್ರಾಹಕರನ್ನು ದೂರವಾಣಿಯ ಮೂಲಕ ಸಂಪರ್ಕಿಸುತ್ತಾರೆ. ಕೋಲ್ಡ್ ಕಾಲ್‌‌ ದೂರವ್ಯಾಪಾರೋದ್ಯಮದ ಅಜನಪ್ರಿಯತೆಯ ಕಾರಣದಿಂದಾಗಿ (ಇವುಗಳಲ್ಲಿ ಗ್ರಾಹಕರು ವ್ಯಾಪಾರಿ ಕರೆಗಳನ್ನು ನಿರೀಕ್ಷಿಸುವುದಿಲ್ಲ ಮತ್ತು ಅವುಗಳನ್ನು ಆಮಂತ್ರಿಸುವುದಿಲ್ಲ) ಯು.ಎಸ್ ಸ್ಟೇಟ್ಸ್‌ ಮತ್ತು ಯು.ಎಸ್ ಫೆಡರಲ್ ಸರ್ಕಾರಕ್ಕೆ ನೊ-ಕಾಲ್‌-ಯಾದಿಯನ್ನು ಮತ್ತು ಅಧಿಕ ದಂಡವನ್ನೊಳಗೊಂಡ ಶಾಸನವನ್ನು ರಚಿಸಲು ಅನುವುಮಾಡಿಕೊಟ್ಟಿತು

ಈ ರೀತಿಯ ಪ್ರಕ್ರಿಯೆಗಳನ್ನು ಕೆಲವು ಪ್ರಮುಖ ಕಾಲ್ ಸೆಂಟರ್‌ಗಳಿಗೆ ಹೊರಗುತ್ತಿಗೆಯನ್ನು ಕೊಡಲಾಯಿತು.

ಯು.ಎಸ್‌ನಲ್ಲಿನ ರಾಷ್ಟ್ರೀಯ ಡು-ನಾಟ್-ಕಾಲ್ ಯಾದಿಯು 2003ರ ಅಕ್ಟೋಬರ್ 1ರಂದು ಅಧಿಕಾರಕ್ಕೆ ಬಂದಿತ್ತು. ಈ ಕಾನೂನಿಗೆ ಸಂಬಂಧಿಸಿದಂತೆ, ತಾನು ಯಾದಿಯಲ್ಲಿ ನಮೂದಿಸಲ್ಪಟ್ಟ ಯಾವುದೇ ವ್ಯಕ್ತಿಗೆ ದೂರವ್ಯಾಪಾರೋದ್ಧಿಮೆದಾರರು ಕರೆಯನ್ನು ಮಾಡುವುದು ಕಾನೂನಿಗೆ ವಿರುದ್ಧವಾಗಿತ್ತು. ಈ ಪಟ್ಟಿಯ ಒಂದು ವರ್ಷಗಳ ನಿರಂತರ ಕಾರ್ಯಾಚರಣೆಯ ನಂತರ, 62 ಮಿಲಿಯನ್‌ಗಿಂತ ಹೆಚ್ಚು ಜನರು ಇದರಲ್ಲಿ ಸೇರಿಕೊಂಡರು.[] ದೂರವ್ಯಾಪಾರೋದ್ಯಮ ಕೈಗಾರಿಕೆಯು ಈ ಯಾದಿಯ ರಚನೆಯನ್ನು ವಿರೋಧಿಸಿತು,ಆದರೆ ಹೆಚ್ಚಿನ ಸಂಖ್ಯೆಯ ದೂರವ್ಯಾಪಾರೋದ್ಧಿಮೆದಾರರು ಕಾನೂನನ್ನು ಅನುಸರಿಸಿದರು ಮತ್ತು ಯಾರು ಆ ಯಾದಿಯಲ್ಲಿ ಇರುವರೊ ಅವರನ್ನು ಹಿಂದಕ್ಕೆ ಕರೆಯುತ್ತಾ ಅದನ್ನು ನಿಗ್ರಹಿಸತೊಡಗಿದರು.[ಸಾಕ್ಷ್ಯಾಧಾರ ಬೇಕಾಗಿದೆ]

ಡು-ನಾಟ್-ಕಾಲ್‌ಗೆ ಸಮಾನವಾದ ವ್ಯವಸ್ಥೆಯ ರಚನೆಗೆ ಕೆನಡಾ ಸರಕಾರವು ಒಂದು ಕಾನೂನನ್ನು ಪಾಸು ಮಾಡಿತು. ನ್ಯೂಜಿಲೆಂಡಿನ ಹೆಸರು ನಿರ್ಮೂಲನಾ ಸೇವೆಗಳ ರೀತಿ, ಇತರ ರಾಷ್ಟ್ರಗಳಲ್ಲಿ ಇದು ಸ್ವಯಂಪ್ರೇರಿತವಾಗಿದೆ.

ಇಮೇಲ್‌‌ ವ್ಯಾಪಾರೋದ್ಯಮ

ಬದಲಾಯಿಸಿ

ಇಮೇಲ್‌‌ ವ್ಯಾಪಾರೋದ್ಯಮವು ದೂರವ್ಯಾಪಾರೋದ್ಯಮವನ್ನು ದಾಟಿ ಮುಂದೆ ಬಹುದೂರ ಸಾಗಿದೆ,[ಸಾಕ್ಷ್ಯಾಧಾರ ಬೇಕಾಗಿದೆ] ಮತ್ತು ಇದು ನೇರ ವ್ಯಾಪಾರೋದ್ಯಮದ ಮೂರನೆಯ ವಿಧವಾಗಿದೆ. ಪ್ರಮುಖವಾದ ಕಳವಳವೆಂದರೆ ಇಮೇಲ್‌‌ ವ್ಯಾಪಾರೋದ್ಯಮವನ್ನು ಹಿಂದೆ ಹಾಕುತ್ತಿರುವ ಸ್ಪ್ಯಾಮ್‌.

ಸಮೂಹ ಸ್ಪ್ಯಾಮ್ ಪ್ರಸರಣವನ್ನು ನಿಶೇಧಿಸುತ್ತಿರುವ ಪರಿಣಮವಾಗಿ ISPಗಳು ಮತ್ತು ಇಮೇಲ್‌‌ ಸೇವೆ ಒದಗಿಸುವವರು ಪರಿಣಾಮಕಾರಿ ಈ-ಮೇಲ್‌ ಸೋಸುವಿಕೆಯ ಪ್ರೊಗ್ರಾಮ್‌ಗಳನ್ನು ವಿಸ್ತೃತವಾಗಿ ಅಭಿವೃದ್ಧಿಪಡಿಸಿದರು.   
ಒಂದು ವೇಳೆ ವ್ಯಕ್ತಿಯು ಅವುಗಳನ್ನು ಸ್ವೀಕರಿಸಲು ವಂತಿಗೆಯನ್ನು ಕೊಟ್ಟಿದ್ದರೂ ಕೂಡ,[] ಇಮೇಲ್‌‌ ವ್ಯಾಪಾರೋದ್ಯಮವು ಹಾಲ್‌ಮಾಕ್ಸ್‌ಅನ್ನು ಸ್ಪ್ಯಾಮ್‌ ಅಗಿ ಹೊಂದಿರುವಂತ ಈ ಸೋಸುವಿಕೆಯು ಇಮೇಲ್‌ ವ್ಯಾಪಾರೋದ್ಯಮ ವಿತರಣೆಯ ಕಾರ್ಯಾಚರಣೆಯಲ್ಲಿ ಹಸ್ತಕ್ಷೇಪ ಮಾಡಬಹುದು.

ಮನೆ ಬಾಗಿಲಿನವರೆಗಿನ ಕರಪತ್ರ ವ್ಯಾಪಾರೋದ್ಯಮ

ಬದಲಾಯಿಸಿ

ಕರಪತ್ರ ವ್ಯಾಪಾರೋದ್ಯಮ ಸೇವೆಗಳು ಫಾಸ್ಟ್‌ಪುಡ್ ಉದ್ದಿಮೆಗಳಿಂದ ಹೆಚ್ಚಾಗಿ ಬಳಸಲ್ಪಟ್ಟವು, ಮತ್ತು ಇತರ ಕೆಲವು ಉದ್ದಿಮೆಗಳು ಸ್ಥಳಿಯ ಆಯಕಟ್ಟು ವ್ಯವಹಾರಗಳಿಗಿಂತ ನೇರ ಮೇಲ್‌ ವ್ಯಾಪಾರೋದ್ಯಮಕ್ಕೆ ಸಮನಾಗಿರುವ ಗ್ರಾಹಕರ ವ್ಯಾವಹಾರ ಮಾದರಿಗಳಿಗೆ ಹೆಚ್ಚು ಗಮನಹರಿಸತೊಡಗಿದರು, ಈ ವಿಧಾನವು ಸಂಪೂರ್ಣವಾಗಿ ಕ್ಷೇತ್ರದಿಂದ ಗುರಿನಿರ್ಧೇಶಿತವಾಗಿದೆ ಮತ್ತು ಸ್ಟ್ಯಾಂಪ್‌ಗಳನ್ನು, ಲಕೋಟೆಗಳನ್ನು ಅಥವಾ ವಿಳಾಸಗಳ ಮತ್ತು ಮನೆಯ ನಿವಾಸಿಗಳ ಯಾದಿಯನ್ನು ಕರೀದಿಸದಿರುವುದರಿಂದ ಇದು ಮೇಲ್‌ಶಾಟ್‌ಗಿಂತ ಅತೀ ಕಡಿಮೆ ವೆಚ್ಚವನ್ನು ಹೊಂದಿದೆ..

ಪ್ಯಾಕ್ಸ್‌ ಪ್ರಸರಣ

ಬದಲಾಯಿಸಿ

ನೇರ ವ್ಯಾಪಾರೋದ್ಯಮದ ನಾಲ್ಕನೆಯ ವಿಧವೆಂದರೆ, ಇತರ ವಿಧಾನಗಳಿಗಿಂತ ಅತೀ ಕಡಿಮೆ ಬಳಕೆಯಲ್ಲಿರುವ ಪ್ಯಾಕ್ಸ್‌ ಪ್ರಸರಣ.[ಸಾಕ್ಷ್ಯಾಧಾರ ಬೇಕಾಗಿದೆ] ಇದು ಬಹುಷಹ ಯುನೈಟೆಡ್‌ ಸ್ಟೇಟ್ಸ್‌ ಮತ್ತು ಇತರಕಡೆಗಳಲ್ಲಿನ ಕಾನೂನುಗಳು ಇದನ್ನು ಕಾನೂನು ಬಾಹಿರಗೊಳಿಸಿವೆ.[ಸಾಕ್ಷ್ಯಾಧಾರ ಬೇಕಾಗಿದೆ]

ವಾಯ್ಸ್‌ಮೇಲ್‌ ವ್ಯಾಪಾರೋದ್ಯಮ

ಬದಲಾಯಿಸಿ

ನೇರ ವ್ಯಾಪಾರೋದ್ಯಮದ ಐದನೆಯ ವಿಧವಾದ ವಾಯ್ಸ್‌ಮೇಲ್‌‌ ವ್ಯಾಪಾರೋದ್ಯಮವು ವೈಯಕ್ತಿಕ ದ್ವನಿ ಮೇಲ್‌ಬಾಕ್ಸ್‌ಗಳು ಮತ್ತು ವ್ಯವಹಾರಿಕ ವಾಯ್ಸ್‌ಮೇಲ್‌‌ ವ್ಯವಸ್ಥೆಯ ಮಾರುಕಟ್ಟೆ ಪ್ರಭುತ್ವದಿಂದಾಗಿ ಅಸ್ತಿತ್ವಕ್ಕೆ ಬಂದಿತು. ಇಮೇಲ್ ವ್ಯಾಪಾರೋದ್ಯಮದ ಸರ್ವವ್ಯಾಪಕತೆ ಮತ್ತು ದುಬಾರಿ ನೇರ ಮೇಲ್ ಮತ್ತು ದೂರವ್ಯಾಪಾರೋದ್ಯಮಗಳ ಕಾರಣದಿಂದ, ವಾಯ್ಸ್‌ಮೇಲ್‌‌ ವ್ಯಾಪಾರೋದ್ಯಮವು ಜನತೆಯನ್ನು ನೇರವಾಗಿ ಧ್ವನಿ ಮೂಲಕ ತಲುಪುವುದಕ್ಕಾಗಿ ಕಡಿಮೆ ವೆಚ್ಚದ ಪರಿಣಾಮಕಾರಿ ವಿಧಾನಗಳನ್ನು ಪರಿಚಯಿಸಿತು.

ವಾಯ್ಸ್‌ಮೇಲ್‌‌ ವ್ಯಾಪಾರೋದ್ಯಮದ ಗ್ರಾಹಕ ವ್ಯಾಪಾರೋದ್ಯಮ ಅಪ್ಲಿಕೇಶನ್‌ಗಳ ನಿಂದನೆಯು ಅಧಿಕವಾದ ವಾಯ್ಸ್‌-ಸ್ಪ್ಯಾಮ್‌ಗಳ ರಚನೆಗೆ ದಾರಿಮಾಡಿಕೊಟ್ಟಿತು, ಮತ್ತು ಹಲವಾರು ಆಡಳಿತ ವ್ಯಾಪ್ತಿಗಳಲ್ಲಿ ಗ್ರಾಹಕ ವಾಯ್ಸ್‌ಮೇಲ್‌‌ ವ್ಯಾಪಾರೋದ್ಯಮವನ್ನು ನಿಯಂತ್ರಿಸಲು ಶಾಸನಗಳನ್ನು ಪಾಸು ಮಾಡಲು ಪ್ರಚೋದನೆ ನೀಡಲಾಯಿತು.

ಇತ್ತೀಚೆಗೆ, ವ್ಯವಹಾರಗಳು ವೈಯಕ್ತಿಕ ಹಿಂದೆ ಕೇವಲ ದೂರವ್ಯಾಪಾರೋದ್ಯಮಕ್ಕೆ ಮೀಸಲಾಗಿದ್ದ ವ್ಯವಹಾರದಿಂದ-ವ್ಯವಹಾರಕ್ಕೆ ವ್ಯಾಪಾರೋದ್ಯಮವನ್ನು ಪೂರ್ಣಗೊಳಿಸಲು ನಿರ್ಧೇಶಿತ ವಾಯ್ಸ್‌ಮೇಲ್‌‌ಅನ್ನು (ಪ್ರಸ್ತುತ ಕರೆಮಾಡುವವರಿಂದ ಮುಂಚಿತವಾಗಿಯೇ ರೆಕಾರ್ಡ್‌ ಮಾಡಲಾಗಿರುವ ವಾಯ್ಸ್‌ಮೇಲ್‌‌‌ ಅಪ್ಲಿಕೇಶನ್‌ಗಳು) ಸರಿಯಾಗಿ ಬಳಸಿಕೊಂಡವು. ಏಕೆಂದರೆ ನಿರ್ಧೇಶಿತ ವಾಯ್ಸ್‌ಮೇಲ್‌‌ಗಳು ವ್ಯವಹಾರಗಳನ್ನು ಸಂಪರ್ಕಿಸಲಷ್ಟೇ ಬಳಸಲ್ಪಡುತ್ತಿದ್ದವು. ಇದು ಇತರ ವಾಯ್ಸ್‌ಮೇಲ್‌‌ ವ್ಯಾಪಾರೋದ್ಯಮಗಳ ವಿಧಗಳ ಡು-ನಾಟ್-ಕಾಲ್‌ ನಿಯಂತ್ರಣದಿಂದ ಪ್ರತ್ಯೇಕವಾಗಿದೆ.

ಕೂಪನಿಂಗ್

ಬದಲಾಯಿಸಿ
ಕೂಪನಿಂಗ್ ಅನ್ನು ಮುದ್ರಣ ಮಾಧ್ಯಮದಲ್ಲಿ ಓದುಗರ ಗಮನವನ್ನು ಸೆಳೆಯುವ ಕಾರಣಕ್ಕಾಗಿ ಬಳಸಲಾಗುತ್ತದೆ.  ಉದಾಹರಣೆಯಾಗಿ ಹೇಳುವುದಾದರೆ ಪತ್ರಿಕೆಯಲ್ಲಿ ಬರುವ ಕೂಪನ್ ಅನ್ನು ಓದುಗನು ಕತ್ತರಿಸಿ ಅದನ್ನು ಯಾವುದಾದರೂ ಅಂಗಡಿಯಲ್ಲಿ ನೀಡಿ ರಿಯಾಯಿತಿ ಪಡೆದುಕೊಳ್ಳುವುದು.  ದಿನಪತ್ರಿಕೆಗಳು ಮತ್ತು ನಿಯತಕಾಲಿಕೆಗಳಲ್ಲಿ ಬರುವ ಕೂಪನ್‌ಗಳನ್ನು ನೇರ ವ್ಯಾಪಾರೋದ್ಯಮ ಎಂದು ಕರೆಯಲಾಗುವುದಿಲ್ಲ. ಏಕೆಂದರೆ ಮಾರಾಟ ಮಾಡುವವನು ಆ ಮಾಧ್ಯಮಗಳಿಗೆ ಹಣ ನೀಡಬೇಕಾಗುತ್ತದೆ. ನೇರ ವ್ಯಾಪಾರೋದ್ಯಮವು ಪತ್ರಿಕೆಗೆ ಯಾವುದೇ ಸಹಾಯ ಮಾಡದೇ ಓದುಗರಿಗೆ ಅಗತ್ಯವಲ್ಲದ ವ್ಯಾಪಾರ ಸಂದೇಶಗಳನ್ನು ಆ ಪತ್ರಿಕೆಗಳಲ್ಲಿ ಪ್ರಕಟಿಸುವಂತೆ ಮಾಡುವ ಮೂಲಕ ಅಷ್ಟಕ್ಕಾಗಿ ಮಾತ್ರ ತನ್ನ ಪ್ರಚಾರದ ಹಣವನ್ನು ಬಳಸುತ್ತದೆ.

ನೇರ ಪ್ರತಿಕ್ರಿಯೆ ದೂರದರ್ಶನ ಮಾರ್ಕೆಟಿಂಗ್

ಬದಲಾಯಿಸಿ

ಟಿವಿಯಲ್ಲಿ ನೇರ ವ್ಯಾಪಾರೋದ್ಯಮವು (ಸಾಮಾನ್ಯವಾಗಿ DRTV ಎಂದು ಕರೆಯಲಾಗುತ್ತದೆ) ಎರಡು ಮೂಲ ಪ್ರಕಾರಗಳನ್ನು ಹೊಂದಿದೆ: ದೀರ್ಘಾವಧಿಯ ಪ್ರಕಾರ (ಸಾಮಾನ್ಯವಾಗಿ ಅರ್ಧದಿಂದ ಒಂದು ಗಂಟೆಯ ಅವಧಿಯ ಕಂತು ಇದಾಗಿದ್ದು, ಇದು ಒಂದು ಉತ್ಪನ್ನದ ಕುರಿತು ಪೂರ್ಣವಾಗಿ ವಿವರಿಸುತ್ತದೆ ಮತ್ತು ಅವುಗಳನ್ನು ಸಾಮಾನ್ಯವಾಗಿ ಇನ್ಫೋಮರ್ಶಿಯಲ್ಸ್ ಅಥವಾ ಮಾಹಿತಿ ಜಾಹೀರಾತು ಎಂದು ಕರೆಯಲಾಗುತ್ತದೆ.) ಮತ್ತು ಎರಡನೆಯದು ಹೃಸ್ವಾವಧಿಯ ಪ್ರಕಾರ. ಇದು ಸಾಮಾನ್ಯವಾಗಿ 0:30 ಸೆಕೆಂಡು ಅಥವಾ 0:60 ಸೆಕೆಂಡು ಕಾಲಾವಧಿಯ ಜಾಹೀರಾತುಗಳನ್ನು ಒಳಗೊಂಡಿದ್ದು, ವೀಕ್ಷಕರಿಂದ ತಕ್ಷಣದ ಪ್ರತಿಕ್ರಿಯೆಯನ್ನು ಬಯಸುತ್ತದೆ (ವಿಶೇಷವಾಗಿ ತೆರೆಯ ಮೇಲಿರುವವರಿಗೆ ಒಂದು ದೂರವಾಣಿ ಕರೆ ಮಾಡುವುದು ಅಥವಾ ಯಾವುದೋ ಒಂದು ವೆಬ್‌ಸೈಟ್‌ಗೆ ಹೋಗುವುದು).

ಟಿವಿ-ಪ್ರತಿಕ್ರಿಯೆ ಪ್ರಚಾರ- ಅಂದರೆ ಇನ್ಫೋಮರ್ಶಿಯಲ್‌ಗಳನ್ನು—ನೇರ ವ್ಯಾಪಾರೋದ್ಯಮದ ಪ್ರಕಾರವೆಂದು ಹೇಳಬಹುದಾಗಿದೆ, ಏಕೆಂದರೆ ಇಲ್ಲಿ ಪ್ರತಿಕ್ರಿಯೆಗಳು ದೂರವಾಣಿ ಮೂಲಕ ಒಂದು ನಿರ್ಧಿಷ್ಟ ದೂರವಾಣಿ ಸಂಖ್ಯೆಗೆ ಬರುತ್ತವೆ.  ಪ್ರಚಾರಕರ್ತರು ಇದನ್ನು ಒಂದು ನಿರ್ಧಿಷ್ಟ ಪ್ರಚಾರದ ಕಾರಣಕ್ಕಾಗಿ ಈ ಕರೆಗಳು ಬರುತ್ತವೆಂದು ನಿರ್ಧರಿಸುವಂತೆ ಮಾಡುತ್ತದೆ, ಮತ್ತು ಅವರಿಗೆ ದೂರವ್ಯಾಪಾರೋದ್ಯಮಕ್ಕೆ ಸಹಾಯ ಮಾಡಲು ಬಳಕೆದಾರರ ದೂರವಾಣಿ ಸಂಖ್ಯೆ ದೊರೆಯುವಂತೆ ಮಾಡುತ್ತದೆ.  ಯುಎಸ್‌ನ ಫೆಡರಲ್ ಕರೆ-ಮಾಡ-ಬೇಡಿ ನಿಯಮ ಪಟ್ಟಿಗಳ ಅಡಿಯಲ್ಲಿ, ಒಬ್ಬ ಕರೆ ಮಾಡುವವನು ಏನನ್ನಾದರೂ ಕೊಂಡುಕೊಳ್ಳುತ್ತಾನಾದರೆ, ಆ ಪ್ರಚಾರಕರ್ತನಿಗೆ ಕರೆ-ಮಾಡ-ಬೇಡಿ ನಿಯಮ ಪಟ್ಟಿಗಳ ನಿರ್ಬಂಧವನ್ನು ಸಡಲಿಸಲಾಗುತ್ತದೆ, ಏಕೆಂದರೆ ಆ ಪ್ರಚಾರಕರ್ತ ಆ ಗ್ರಾಹಕನೊಂದಿಗೆ ಆ ಮೊದಲೇ ವ್ಯವಹಾರ ಸಂಬಂಧವನ್ನು ಹೊಂದಿರುತ್ತಾನೆ. QVC, ಥಾನೆ ಡೈರೆಕ್ಟ್, ಮತ್ತು ಇಂಟರ್‌ವುಡ್ ಮಾರ್ಕೆಟಿಂಗ್ ಗ್ರೂಪ್‌‍ನಂತಹ ಸಂಸ್ಥೆಗಳು ಈ ಪ್ರಚಾರದಲ್ಲಿ ಮುಖ್ಯವಾಹಿನಿಯಲ್ಲಿದ್ದು ಅವು ಕರೆ ಮಾಡುವವರ ಮೇಲೆ ಕ್ರಾಸ್-ಸೆಲ್ ಮತ್ತು ಅಪ್-ಸೆಲ್ ಮುಂತಾದ ಪ್ರಕಾರಗಳನ್ನು ಬಳಸುತ್ತವೆ.
ಅತ್ಯಂತ ಪ್ರಸಿದ್ಧವಾದ DRTV ಜಾಹೀರಾತು ಎಂದರೆ RI ನ Ginsu Products, Inc.ನ ಗಿನ್ಸು ಚಾಕುಗಳು. ಈ ಜಾಹೀರಾತಿನ ಅನೇಕ ವಿಷಯಗಳು, ಉದಾಹರಣೆಗೆ ಇದು ಕೊಡುಗೆಗೆ ಹೆಚ್ಚಿನದನ್ನು ಸೇರಿಸಿದ್ದು ಮತ್ತು ತೃಪ್ತಿಯನ್ನು ಖಚಿತಪಡಿಸಿದ್ದು, ಇತ್ಯಾದಿಗಳನ್ನು ಹೆಚ್ಚಿನ ಇತರ ಜಾಹೀರಾತುಗಳು ಬಳಸಿಕೊಂಡವು ಮತ್ತು ಇದು ಹೃಸ್ವರೂಪದ ನೇರ ಪ್ರತಿಕ್ರಿಯೆ TV ಜಾಹೀರಾತಿನ (DRTV) ಭಾಗವೇ ಆಗಿಹೋಯಿತು.

ನೇರ ಮಾರಾಟ

ಬದಲಾಯಿಸಿ

ನೇರ ಮಾರಾಟ ಇದು ಗ್ರಾಹಕರೊಂದಿಗೆ ಮೌಕಿಕ ಸಂಪರ್ಕಗಳ ಮೂಲಕ ಉತ್ಪನ್ನಗಳ ಮಾರಾಟಮಾಡುವಿಕೆ, ಮಾರಾಟಗಾರರ ಮೂಲಕ ಸಂಭಾವ್ಯ ಗ್ರಾಹಕರನ್ನು ನೇರವಾಗಿ ಅಥವಾ ಪರೋಕ್ಷವಾಗಿ ಟಪ್ಪರ್‌ವೇರ್ ಪಾರ್ಟಿಗಳ ಮೂಲಕ ಪ್ರಚೋಧಿಸುವುದು

ಸಂಘಟಿತ ಕಾರ್ಯಾಚರಣೆ

ಬದಲಾಯಿಸಿ

ಹಲವು ವ್ಯಾಪಾರೋದ್ದಿಮೆಗಳಲ್ಲಿ, ಒಂದು ವಿಸ್ತಾರವಾದ ನೇರ ವ್ಯಾಪಾರೋದ್ಯಮ ಕಾರ್ಯಾಚರಣೆಯು ಮಿಶ್ರ ಮಾಧ್ಯಮಗಳನ್ನು ಬಳಸಿಕೊಳ್ಳುತ್ತದೆ ನೇರ ಮೇಲ್‌, ದೂರವ್ಯಾಪಾರೋದ್ಯಮ, ರೇಡಿಯೋ ಮತ್ತು ಟಿವಿ ಪ್ರಸರಣ, ಜೊತೆಗೆ ಆನ್‌ಲೈನ್‌ ಮಾಧ್ಯಮಗಳಾದ ಇಮೇಲ್‌, ವೀಡಿಯೋ, ಸಾಮಾಜಿಕ ಕೊಂಡಿ, ಸರ್ಚ್‌ ವ್ಯಾಪಾರೋದ್ಯಮಗಳನ್ನು ಹೊಂದಿಸುವುದು ವಿಶಾಲವಾದ ಕಾರ್ಯಾಚರಣೆಗೆ ಅಪರೂಪವಲ್ಲ. ನೇರ ವ್ಯಾಪಾರೋದ್ಯಮ ಸಂಘಟನೆ ನಡೆಸಿದ ಒಂದು ವರದಿಯಲ್ಲಿ[] ಅಧ್ಯಯನ ಮಾಡಿದ ಪ್ರಚಾರಗಳಲ್ಲಿ 57% ಭಾಗದಷ್ಟು ಅಂತರ್ಗತ ಕೌಶಲವನ್ನು ಬಳಸಲಾಯಿತು ಎಂಬುದನ್ನು ಕಂಡುಕೊಳ್ಳಲಾಯಿತು. ಅವುಗಳಲ್ಲಿ, ಸುಮಾರು ಅರ್ಧದಷ್ಟು (47%) ನೇರ ಮೇಲ್ ಪ್ರಚಾರದೊಂದಿಗೆ ಪ್ರಾರಂಭಿಸಿದ್ದವು ಮತ್ತು ವಿಶಿಷ್ಟವಾಗಿ ಇಮೇಲ್ ಮತ್ತು ದೂರವ್ಯಾಪಾರೋದ್ಯಮದೊಂದಿಗೆ ಮುಂದುವರೆಸಿದ್ದವು.

ಇದನ್ನೂ ಗಮನಿಸಿ

ಬದಲಾಯಿಸಿ
  • [[ಮಾರ್ಕೆಟಿಂಗ್

ಕೃತಕ ಬುದ್ಧಿಮತ್ತೆ ವ್ಯಾಪಾರೋದ್ಯಮ]]

ಆಕರಗಳು

ಬದಲಾಯಿಸಿ
  1. ಜಂಕ್‌ಗೆ ಪ್ರವೇಶ, ಅಂತರಜಾಲ ವ್ಯುತ್ಪತ್ತಿ ಶಾಸ್ತ್ರ ಶಬ್ದಕೋಶ. 2009ರ ಫೆಬ್ರುವರಿ 14ರಂದು ಮತ್ತೆ ಪಡೆಡದ್ದು.
  2. ಸ್ಪ್ಯಾಮ್‌ ಎಂಬ ಪದದ ಮೂಲ ಅರ್ಥ ಜಾಲತಾಣದ ನಿಂದನೆ, ಬ್ರಾಡ್ ಟೆಂಪ್ಲಿಟನ್‌ನ ಜಾಲತಾಣ. ಮತ್ತೆ ಪಡೆಡದ್ದು 2009ರ ಫೆಬ್ರುವರಿ 14ರಂದು.
  3. ರಾಷ್ಟ್ರೀಯ ಡು ನಾಟ್ ಕಾಲ್ ದಾಖಲಾತಿಯು ಒಂದು ವರ್ಷದ ವಾರ್ಷಿಕೋತ್ಸವವನ್ನು ಆಚರಿಸಿಕೊಳ್ಳುತ್ತದೆ, ಫೆಡರಲ್ ಟ್ರೇಡ್ ಕಮೀಶನ್, ಜೂನ್ 24, 2004. ಮತ್ತೆ ಪಡೆದದ್ದು 2009ರ ಫೆಬ್ರುವರಿ 14ರಂದು.
  4. ""ವೈಟ್‌ಲಿಸ್ಟ್" ಎಂದರೇನು ಮತ್ತು ನಾನೇಕೆ ಈ "ವೈಟ್‌ಲಿಸ್ಟೆಡ್" ಮೇಲ್ ವಿತರಕರರೊಂದಿಗೆ ಕೆಲಸ ನಿರ್ವಹಿಸಲು ಇಚ್ಚಿಸುತ್ತಿದ್ದೇನೆ?". Archived from the original on 2011-05-01. Retrieved 2010-01-21.
  5. "ದಿ ಇಂಟಿಗ್ರೇಟೆಡ್ ಮಾರ್ಕೆಟಿಂಗ್ ಮಿಕ್ಸ್‌," ಡಿಜಿಟಲ್ ಮಾಧ್ಯಮದ ಬಳಕೆಯಿಂದ ಬೆಳೆಯುತ್ತಿರುವ, 'BtoB ನಿಯತಕಾಲಿಕೆ Archived 2009-09-07 ವೇಬ್ಯಾಕ್ ಮೆಷಿನ್ ನಲ್ಲಿ.,' ಜುಲೈ 14, 2008


ಬಾಹ್ಯ ಕೊಂಡಿಗಳು

ಬದಲಾಯಿಸಿ