ದೀಪಾ ರವಿಶಂಕರ್
ಈ ಲೇಖನದಿಂದ ಬೇರೆ ಯಾವುದೇ ಲೇಖನಕ್ಕೆ ಬಾಹ್ಯ ಸಂಪರ್ಕ ಹೊಂದಿಲ್ಲ. |
ಕನ್ನಡ ಹವ್ಯಾಸಿ ರಂಗಭೂಮಿಯಲ್ಲಿ ತಮ್ಮನ್ನು ಬಾಲ್ಯದಿಂದಲೇ ತೊಡಗಿಸಿಕೊಂಡವರು ದೀಪಾ ರವಿಶಂಕರ್.
ಜನನ, ವಿದ್ಯಾಭಾಸ, ಕುಟುಂಬ
ಬದಲಾಯಿಸಿಮೂಲತಃ ಶಿವಮೊಗ್ಗದವರಾದ ದೀಪಾ, ಹುಟ್ಟಿದ್ದು ೧೯೭೭, ಜನವರಿ ೮ರಂದು.
ಪರಿಸರವಾದಿಯಾದ ದೀಪಾ ರವಿಶಂಕರ್ ಅವರ ತಂದೆ ಕುಮಾರಸ್ವಾಮಿ ಶಿವಮೊಗ್ಗದ ಕಾಲೇಜಿನಲ್ಲಿ ಉಪನ್ಯಾಸಕರು, ತಾಯಿ ಶೈಲಾ ಕುಮಾರಸ್ವಾಮಿ ವೃತ್ತಿಯಲ್ಲಿ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸುತಿದ್ದಾರೆ.
ಶಿವಮೊಗ್ಗದಲ್ಲಿ ತಮ್ಮ ಪ್ರಾರ್ಥಮಿಕ ವಿದ್ಯಾಭಾಸವನ್ನು ಮುಗಿಸಿದ ದೀಪಾ, ತಮ್ಮ ತಂದೆ-ತಾಯಿಯ ಪ್ರೋತ್ಸಾಹದಿಂದಾಗಿ ಐದು ವರ್ಷದವರಾಗಿದ್ದಾಗಲೇ ಆಧುನಿಕ ಹವ್ಯಾಸಿ ರಂಗಭೂಮಿಗೆ ಪಾದಾರ್ಪಣೆ ಮಾಡಿದರು. ಶಿಕ್ಷಣದೊಂದಿಗೇ ತಮ್ಮ ಹವ್ಯಾಸವನ್ನು ಮುಂದುವರೆಸಿಕೊಂಡು ಬಂದ ದೀಪಾ, ಮೈಸೂರಿನ ಜೆ ಎಸ್ ಎಸ್ ಕಾಲೇಜಿನಲ್ಲಿ ಬಿ ಎಸ್ಸಿ ಪದವಿ ಪಡೆದರು. ಜೊತೆ ಜೊತೆಗೆ ಕರ್ನಾಟಕ ಶಾಸ್ತ್ರೀಯ ಸಂಗೀತದ ಜ್ಯೂನಿಯರ್ ಹಂತದ ಮತ್ತು ಭರತನಾಟ್ಯದ ಸಿನಿಯರ್ ಹಂತದ ಪರೀಕ್ಷೆಗಳನ್ನು ಶಿವಮೊಗ್ಗದಲ್ಲಿ ಶ್ರೀಮತಿ. ಗೀತಾ ದಾತರ್ ಅವರ ಶಿಷ್ಯೆಯಾಗಿ ಹಾಗೂ ಮೈಸೂರಿನಲ್ಲಿ ಡಾ. ವಸುಂಧರಾ ದೊರೆಸ್ವಾಮಿ ಅವರ ಶಿಷ್ಯೆಯಾಗಿ ಉತ್ತಮ ಅಂಕಗಳೊಂದಿಗೆ ಪಾಸು ಮಾಡಿದ್ದಾರೆ.
ದೀಪಾ ಅವರು ರವಿಶಂಕರ್ ಅವರನ್ನು ಮದುವೆಯಾದ ಮೇಲೆ ಬೆಂಗಳೂರಿನಲ್ಲಿ ನೆಲೆಸಿದ ಮೇಲೆ `ಅನೇಕ' ಹೆಸರಿನ ತಂಡದೊಂದಿಗೆ ಸಕ್ರೀಯವಾಗಿ ತಮ್ಮನ್ನು ತೊಡಗಿಸಿಕೊಂಡು ಅನೇಕ ಉತ್ತಮ ನಾಟಕಗಳಲ್ಲಿ ಅಭಿನಯಿಸಿದ್ದಾರೆ. ಅಭಿನಯಿಸುತ್ತಿದ್ದಾರೆ.
ಲಾಸ್ಯ ಮತ್ತು ಪರಮ್ ಎಂಬ ಎರಡು ಮುದ್ದಾದ ಮಕ್ಕಳು ದೀಪಾ ಅವರಿಗೆ.
ದೀಪಾ ರವಿಶಂಕರ್ ಅವರು ಬಾಲ್ಯದಲ್ಲಿ ನಟಿಸಿದ ನಾಟಕಗಳು
ಬದಲಾಯಿಸಿತಂಡ: `ಅಭಿನಯ' ಶಿವಮೊಗ್ಗ
- ಪಂಜರ ಶಾಲೆ
- ಸೊಹ್ರಬ್ ಮತ್ತು ರುಸ್ತುಮ್
- ಕುಂಟ ಕುಂಟ ಕುರುವತ್ತಿ
- ವನ್ಯಾಪಹರಣ
ಮತ್ತು ಇನ್ನಿತರ ನಾಟಕಗಳು.
ನಂತರದ ನಾಟಕಗಳು
ಬದಲಾಯಿಸಿ- ಮದುವೆ ಹೆಣ್ಣು (ರಚನೆ: ಎಚ್.ಎಸ್.ಶಿವಪ್ರಕಾಶ್, ನಿರ್ದೇಶನ: ಪ್ರೊ.ಚಂದ್ರದಾಸನ್, ತಂಡ: ಹೊಳೆರಂಗ, ದದಾವಣಗೆರೆ, ೨೦೦೧)
- ಮದುವೆ ಹೆಣ್ಣು (ರಚನೆ: ಎಚ್.ಎಸ್.ಶಿವಪ್ರಕಾಶ್, ನಿರ್ದೇಶನ: ಸುರೇಶ್ ಆನಗಳ್ಳಿ. ತಂಡ: ಅನೇಕ, ಬೆಂಗಳೂರು)
- ಮಿ. ಎಮ್ ಬಿ ಬಿ ಎಸ್ (A ಮೂಲ :ಮೋಲಿಯರ್, ಕನ್ನಡಕ್ಕೆ ರೂಪಾಂತರಿಸಿ ನಿರ್ದೇಶಿಸಿದವರು: ಸುರೇಶ್ ಆನಗಳ್ಳಿ. ತಂಡಾ: ಅನೇಕ, ಬೆಂಗಳೂರು)
- ಸೂರ್ಯನ ಕುದುರೆ ( ಮೂಲ ಕಥೆ: ಯು.ಆರ್.ಅನಂತಮೂರ್ತಿ, ನಾಟಕಕ್ಕೆ ರೂಪಾಂತರ: ಸಯತ್ಯನಾರಾಯಣ ರಾವ್ ಅಣತಿ, ನಿರ್ದೇಶನ: ರವಿಕುಮಾತರ್, ತಂಡ: ವಟಿ ಕುಟೀರ, ಬೆಂಗಳೂರು)
- ಅಮ್ಮಾವ್ರ ಗಂಡ (ರಚನೇ: ಟಿ.ಪಿ.ಕೈಲಾಸಂ, ನಿರ್ದೇಶನ: ಕಿರಣ ವಟಿ, ತಂಡ: ವಟಿ ಕುಟೀರ, ಬೆಂಗಳೂರು)
- ಮೃಗತೃಷ್ಣ (ರಚನೆ: ವಸುಮತಿ ಉಡುಪ, ನಿರ್ದೇಶನ: ರೇಣುಕಪ್ಪ, ತಂಡ: ಅಭಿನಯ, ಶಿವಮೊಗ್ಗ ೧೯೯೫)
- ಒಥೆಲ್ಲೊ (ಮೂಲ: ವಿಲ್ಲಿಯಮ್ ಶೆಕ್ಸ್^ಪಿಯರ್, ೧೯೮೬ ಕನ್ನಡಕ್ಕೆ ರೂಪಾಂತರ ಮತ್ತು ನಿರ್ದೇಶನ: ಗೌರಿಶಂಕರ್ ತಂಡ: ಅಭಿನಯ,ಶಿವಮೊಗ್ಗ)
- ಈಡಿಪಸ್ (ಮೂಲ: ವಿಲ್ಲಿಯಮ್ ಶೆಕ್ಸ್^ಪಿಯರ್, ೧೯೮೭ ಕನ್ನಡಕ್ಕೆ ರೂಪಾಂತರ ಮತ್ತು ನಿರ್ದೇಶನ: ಗೌರಿಶಂಕರ್ ತಂಡ: ಅಭಿನಯ, ಶಿವಮೊಗ್ಗ)
- ನಮ್ಮ ನಿಮ್ಮೊಳಗೊಬ್ಬ (ರಚನೆ: ರಾಜೇಂದ್ರ ಕಾರಂತ, ನಿರ್ದೇಶನ:ಎಸ್ ಆರ್ ಗಿರೀಶ್, ತಂಡ: ಗೆಳೇಯರ ಬಳಗ, ಶಿವಮೊಗ್ಗ ೧೯೯೮)
- ಅದೇಶಿ ಪರ್ದೇಶಿ ಆದ ( ರಚನೆ: ಹೊ.ನಾ. ಸತ್ಯ, ನಿರ್ದೇಶನ: ಮಂಜು ಹೆಗ್ಡೆ, ತಂಡ: ಕಲಾಜ್ಯೋತಿ ಶಿವಮೊಗ್ಗ, ೧೯೯೮)
- ಗಾಂಧಾರಿ, (ರಚನೆ ಮತ್ತು ನಿರ್ದೇಶನ: ಮಧುಸೂದನ್ ಘಾಟೆ, ತಂಡ: ಕಲಾಜ್ಯೋತಿ, ಶಿವಮೊಗ್ಗ, ೧೯೯೯)
- ಅಲ್ಲಮನ ಆಟ (ರಚನೆ ಮತ್ತು ನಿರ್ದೇಶನ : ಎ. ಜಿ ಗೋಪಾಲಕೃಷ್ಣ, ತಂಡ: ಅಲ್ಲಮ ರಂಗ ೨೦೦೦)
- ಅಜಗ ದರುಶನ (ರಚನೆ ಮತ್ತು ನಿರ್ದೇಶನ : ಎ. ಜಿ ಗೋಪಾಲಕೃಷ್ಣ, ತಂಡ: ಅಲ್ಲಮ ರಂಗ ೨೦೦೦)
- ಮೋಟೆರಾಮನ ಉಪವಾಸ ಪ್ರಸಂಗ (ರಚನೆ: ವೆಂಕಟ್ರಾಮ್. ನಿರ್ದೇಶನ: ಶ್ರೀ. ವೈದ್ಯ, ತಂಡ: ರಂಗಸುಗ್ಗಿ ೨೦೦೧)
- ವಿಜಯೀಭವ (ರಚನೆ: ದಯಾನಂದ್ ಠೋರ್ಕೆ, ನಿರ್ದೇಶನ: ಪದ್ಮನಾಭ, ತಂಡ: ರಂಗ ಗೋಕುಲ ೨೦೦೧)
- ಅಂಬೆ-ಅಂಬಿಕೆ (ರಚನೆ: ಅಭಿಲಾಶಾ ಎಸ್, ನಿರ್ದೇಶನ: ಸುರೇಶ್ ಆನಗಳ್ಳಿ, ತಂಡ: ಅನೇಕ, ಬೆಂಗಳೂರು)
- ಮ್ಯಾಕ್^ಬೆತ್ ಆಟ (ರಚನೆ: ಎಚ್.ಎಸ್.ಶಿವಪ್ರಕಾಶ್, ನಿರ್ದೇಶನ: ಸುರೇಶ್ ಆನಗಳ್ಳಿ, ತಂಡ: ಅನೇಕ, ಬೆಂಗಳೂರು)
ರಂಗಭೂಮಿಯಲ್ಲಿ ನಿರ್ವಹಿಸಿದ ಇನ್ನಿತರ ಕಾರ್ಯಗಳು
ಬದಲಾಯಿಸಿ- ೨೦೦೧ ಪ್ರೊ. ಚಂದ್ರದಾಸನ್ ಅವರು ನಿರ್ದೇಶಿಸಿದ `ಮದುವೆ ಹೆಣ್ಣು' ನಾಟಕದ ಸಹ ನಿರ್ದೇಶನ.
- `ಗೋವಿನ' ಹಾಡು ಹಾಗೂ `ಭಾರತ ದರ್ಶನ' ಎಂಬ ಎರೆಡು ಮಕ್ಕಳ ನಾಟಕಗಳ ನಿರ್ದೇಶನ.
- ರಾಷ್ಟ್ರೀಯ ರಂಗ ಉತ್ಸವದಲ್ಲಿ ಪ್ರಸ್ತುತಪಡಿಸಲಾದ ನೃತ್ಯ ರೂಪಕಗಳಾದ `ದಾಸರು ಕಂಡ ಶ್ರೀಕೃಷ್ಣ' (ಕಾದಂಬರಿ ರಚನೆ: ಗಜಾನನ ಶರ್ಮ) ಮತ್ತು `ನನ್ನ ಗೋಪಾಲ' (ರಚನೆ: ಕುವೆಂಪು) ನೃತ್ಯ ಸಂಯೋಜನೆ.
- ಶಿವಮೊಗ್ಗದಲ್ಲಿರುವ ‘ಭೂಮಿಕಾ ಸಂಸ್ಥೆಯ ಮೊದಲ ನಿರ್ದೇಶಕರಲ್ಲಿ ಒಬ್ಬರು.
ಪ್ರಶಸ್ತಿ, ಪ್ರಶಂಸೆಗಳು
ಬದಲಾಯಿಸಿಕನ್ನಡ ಹಲವಾರು ಟಿವಿ ಧಾರಾವಾಹಿಗಳಲ್ಲಿಯೂ ನಟಿಸಿದ ದೀಪಾ ರವಿಶಂಕರ್, ಬರಹಗಾರ್ತಿಯೂ ಹೌದು. ಇವರ ಕೆಲವು ಕವನಗಳು ಹಾಗೂ ಲೇಖನಗಳು ವೃತ್ತಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ.
- ರಂಗಭೂಮಿ ಸೇವೆಗಾಗಿ, ಪ್ರತಿಷ್ಠಿತ ‘ಭಾರತದ ಕೇಂದ್ರ ಸಂಸ್ಕೃತಿ ಇಲಾಖೆಯ, ರಾಷ್ಟ್ರೀಯ ಮಟ್ಟದ ಸ್ಕಾಲರ‍್ಶಿಪ್ ಪಡೆದುಕೊಂಡಿದ್ದಾರೆ.
- ಜೋಗ್ ನಲ್ಲಿ ಆಯೋಜಿಸಿದ ಕರ್ನಾಟಕ ರಾಜ್ಯಮಟ್ಟದ ನಾಟಕ ಸ್ಪರ್ಧೆಯಲ್ಲಿ ಉತ್ತಮ ಅಭಿನಯಕ್ಕಾಗಿ ಪ್ರಥಮ ಬಹುಮಾನ ಪಡೆದಿದ್ದಾರೆ.
- ಉಡುಪಿಯಲ್ಲಿ ಆಯೋಜಿಸಿದ ಕರ್ನಾಟಕ ರಾಜ್ಯಮಟ್ಟದ ನಾಟಕ ಸ್ಪರ್ಧೆಯಲ್ಲಿ ಉತ್ತಮ ಅಭಿನಯಕ್ಕಾಗಿ ಪ್ರಥಮ ಬಹುಮಾನ ಪಡೆದಿದ್ದಾರೆ.
- ರಾಜಸ್ಥಾನದ ಜೈಪುರ್ ನಲ್ಲಿ ನಡೆದ ರಾಷ್ಟ್ರೀಯ ಮಟ್ಟದ ಚರ್ಚಾಸ್ಪರ್ಧೆಯಲ್ಲಿ ಮೈಸೂರು ವಿಶ್ವವಿದ್ಯಾಲಯವನ್ನು ಪ್ರತಿನಿಧಿಸಿದ್ದಾರೆ.
- ಹರಿಯಾಣದಲ್ಲಿ ನಡೆದ ರಾಷ್ಟ್ರೀಯ ಸಾಂಸ್ಕೃತಿಕ ಶಿಬಿರದಲ್ಲಿ, ತಮ್ಮ ಉತ್ತಮ ಮೂಕಾಭಿನಯಕ್ಕಾಗಿ (ಮೈಮ್) ಮೊದಲ ಬಹುಮಾನ ಪಡೆದಿದ್ದಾರೆ.
- ಹರಿಯಾಣದಲ್ಲಿ ನಡೆದ ರಾಷ್ಟ್ರೀಯ ಸಾಂಸ್ಕೃತಿಕ ಶಿಬಿರದಲ್ಲಿ, ತಮ್ಮ ಉತ್ತಮ ವಾಕ್ಚಾತುರ್ಯದಿಂದ ಚರ್ಚಾಸ್ಪರ್ಧೆಯಲ್ಲಿ ಎರಡನೆಯ ಬಹುಮಾನ ಪಡೆದಿದ್ದಾರೆ.