ವಸುಮತಿ ಉಡುಪ
ವಸುಮತಿ ಉಡುಪ (ಏಪ್ರಿಲ್ ೧೮, ೧೯೪೮) ಕನ್ನಡದ ಪ್ರಸಿದ್ಧ ಕಥೆಗಾರ್ತಿಯರಲ್ಲಿ ಒಬ್ಬರು.
ವಸುಮತಿ ಉಡುಪ | |
---|---|
ಜನನ | ಏಪ್ರಿಲ್ ೧೮, ೧೯೪೮ ನಗರ ಗ್ರಾಮ, ಹೊಸನಗರ ತಾಲೂಕು, ಶಿವಮೊಗ್ಗ, ಕರ್ನಾಟಕ |
ವೃತ್ತಿ | ಕಥೆಗಾರ್ತಿ |
ವಿಷಯ | ಕನ್ನಡ ಸಾಹಿತ್ಯ |
ವೈಯಕ್ತಿಕ ಜೀವನ
ಬದಲಾಯಿಸಿವಸುಮತಿ ಉಡುಪ ಅವರು ಏಪ್ರಿಲ್ 18, 1948ರಂದು ಹೊಸನಗರ ತಾಲ್ಲೂಕಿನ ‘ನಗರ’ ಎಂಬ ಗ್ರಾಮದಲ್ಲಿ ಜನಿಸಿದರು. ಅವರ ತಂದೆ ಕಿರಣಗೆರೆ ರಂಗಾಭಟ್ಟ ಮತ್ತು ತಾಯಿ ತ್ರಿಪುರಾಂಬ. ತೀರ್ಥಹಳ್ಳಿಯಲ್ಲಿ ಪಿಯುಸಿವರೆಗೆ ಓದಿದ ವಸುಮತಿ ಮದುವೆಯಿಂದಾಗಿ ಮುಂದೆ ಓದಲಿಲ್ಲ.
ಕೃತಿಗಳು
ಬದಲಾಯಿಸಿಉಡುಪ ಬರೆದ ಕಥೆಗಳ ಸಂಖ್ಯೆ ಇನ್ನೂರಕ್ಕೂ ಹೆಚ್ಚು. ಇವರ ಅನೇಕ ಕಥೆಗಳು ಹಿಂದಿ, ತೆಲುಗು ಮುಂತಾದ ಹಲವಾರು ಭಾಷೆಗಳಿಗೆ ತರ್ಜುಮೆಗೊಂಡು ಜನಪ್ರಿಯವಾಗಿವೆ. ಇವರ ಬರಹಗಳು ದೂರದರ್ಶನದಲ್ಲಿ ಮೂಡಿಬಂದಿವೆಯಲ್ಲದೆ, 'ಮೃಗತೃಷ್ಣ' ಮತ್ತು ಇನ್ನಿತರ ಕೃತಿಗಳು ನಾಟಕಗಳಾಗಿ ಸಹ ಪರಿವರ್ತನೆಗೊಂಡಿವೆ.[೧]
ಕಥಾವಸ್ತು-ಶೈಲಿ
ಬದಲಾಯಿಸಿಸರಳ ಭಾಷೆ, ನೇರ ನಿರೂಪಣೆ ವಸುಮತಿಯವರ ಶೈಲಿ. ಕಾದಂಬರಿ, ಕಥೆ, ಪ್ರಬಂಧ ಅವರ ನೆಚ್ಚಿನ ಪ್ರಕಾರಗಳು. ಉಡುಪ ಅವರು ಕತೆ ಹೇಳುವ ರೀತಿಯಲ್ಲಿ ಕ್ಲಿಷ್ಟತೆಯಿಲ್ಲ. ಮಹಿಳಾ ಓದುಗರಿಗಂತೂ ಅವರ ಕಥೆಗಳು ಅಚ್ಚುಮೆಚ್ಚು. ಮಲೆನಾಡಿನ ಪರಿಸರ, ಭಾಷೆ, ಜೀವನ ಶೈಲಿ ಇವರ ಬಹುತೇಕ ಕಥೆಗಳ ವಸ್ತು. ಸುತ್ತಮುತ್ತಲಿನ ಪ್ರಪಂಚದಲ್ಲಿ ಕಾಣಸಿಗುವ ಮಧ್ಯಮ, ಕೆಳಮಧ್ಯಮ ವರ್ಗದ ನೋವು ನಲಿವುಗಳೇ ಇವರ ಕಥೆಯ ಜೀವಾಳ.
- ಕಾದಂಬರಿಗಳು
- ಪರಿವರ್ತನೆ
- ಸಂಬಂಧಗಳು
- ಅನವರತ
- ಅವ್ಯಕ್ತ
ಮುಂತಾದುವು
- ಕಥಾಸಂಕಲನಗಳು
- ಬಂದನಾ ಹುಲಿರಾಯನು
- ವಿಕಲ್ಪ
- ಶೇಷ ಪ್ರಶ್ನೆ
- ಸಂಕ್ರಮಣ
- ಅಂತರಂಗದ ಪಿಸುನುಡಿ
- ಬದುಕು ಮಾಯೆಯ ಮಾಟ
ಮುಂತಾದವು
- ಪ್ರಬಂಧ ಸಂಕಲನ
- ಸೀತಾಳದಂಡೆ
ಪ್ರಶಸ್ತಿ-ಗೌರವಗಳು
ಬದಲಾಯಿಸಿಉಲ್ಲೇಖ
ಬದಲಾಯಿಸಿ- ↑ "ವಸುಮತಿ ಉಡುಪ, Vasumathi Udupa (3)ಸಂಕ್ರಮಣ ;ಅಂತರಂಗದ ಪಿಸುನುಡಿ ;ಮನ್ವಂತರ (ಕಾದಂಬರಿ) ;ವಸುಮತಿ ಉಡುಪ, Vasumathi Udupa". Archived from the original on 2020-09-21. Retrieved 2018-12-15.
- ↑ ವಸುಮತಿ ಉಡುಪ April 18:ಕಣಜ - ಫೋಟೋ ಸಹಿತ ಲೇಖನ[ಶಾಶ್ವತವಾಗಿ ಮಡಿದ ಕೊಂಡಿ]
- ↑ "'ವರ್ಷದ ಲೇಖಕಿ ಪುರಸ್ಕಾರ'ಕ್ಕೆ ವಸುಮತಿ ಉಡುಪ ಆಯ್ಕೆ". Avadhimag.com. 23 Sep 2019. Retrieved 7 Oct 2020.[ಶಾಶ್ವತವಾಗಿ ಮಡಿದ ಕೊಂಡಿ]