ದಾಮನ್‌ಜೋಡಿ
ದಾಮನ್‌ಜೋಡಿ ಒಡಿಶಾದ ಕೋರಾಪುಟ್ ಜಿಲ್ಲೆಯ ಒಂದು ಊರು. ಬಾಕ್ಸೈಟ್ ಗಣಿ ಪ್ರದೇಶವಾದ ಇಲ್ಲಿ ನಾಲ್ಕೊ (NALCO) ಕಂಪನಿ ಇಲ್ಲಿ ಇದೆ. ಅವರ ಲೋಹದದಿರನ್ನು ದಾಮನ್‌ಜೋಡಿಯಲ್ಲೇ ಸಂಸ್ಕರಿಸಿ ೧೮ ಕಿಲೋಮೀಟರು ದೂರದ ಕೋರಾಪುಟ್ ವರೆಗೆ ಅವರದೇ ರೈಲು ವ್ಯಾಗನ್ನುಗಳಲ್ಲಿ ತಂದು ಸುರಿಯಲಾಗುತ್ತದೆ. ಅಲ್ಲಿ ಆ ಸಂಸ್ಕರಿಸಿದ ಅದಿರನ್ನು ನೀರಿನಲ್ಲಿ ಕಲಸಿ ಕೆಸರಂತೆ ಮಾಡಿ ಕೊಳವೆ ಮಾರ್ಗದಲ್ಲಿ ಕೆಳಮಟ್ಟದಲ್ಲಿರುವ ವಿಶಾಖಪಟ್ಟಣಕ್ಕೆ ರವಾನಿಸಲಾಗುತ್ತದೆ. ಖರ್ಚೂ ಕಡಮೆ, ಅವಘಡವೂ ಇಲ್ಲ, ನಿಸರ್ಗಕ್ಕೂ ಹಾನಿಯಿಲ್ಲ.
ದಾಮನ್‌ಜೋಡಿ | |
ರಾಜ್ಯ - ಜಿಲ್ಲೆ |
ಒಡಿಶಾ - ಕೋರಾಪುಟ್ |
ನಿರ್ದೇಶಾಂಕಗಳು | |
ವಿಸ್ತಾರ | km² |
ಸಮಯ ವಲಯ | IST (UTC+5:30) |
ಜನಸಂಖ್ಯೆ (2001) - ಸಾಂದ್ರತೆ |
8475 - /ಚದರ ಕಿ.ಮಿ. |
ಪೂರ್ವ ಘಟ್ಟಗಳ ಸುಂದರ ಕಣಿವೆಗಳ ದೃಶ್ಯ ವೀಕ್ಷಣೆಯನ್ನು ಒದಗಿಸಿರುವ "ಪಂಚಾತ್ಮಲೀ" ಶ್ರೇಣಿಯ ಬುಡದಲ್ಲಿ ದಾಮನ್‌ಜೋಡಿ ಇದೆ. ಇದು ಸಸ್ಯ ಮತ್ತು ಪ್ರಾಣಿ ಹಾಗೂ ಉತ್ತಮವಾಗಿ ಸಮೃದ್ಧಿಯಾದ ಹಸಿರಿನಿಂದ ಸುತ್ತುವರಿದಿದೆ. ಇದು ಸುಂದರ ಅನುಭವವನ್ನು ನೀಡುವುದಕ್ಕೆ, ಇದನ್ನು ಗಿರಿಧಾಮ ಎಂದು ಕರೆಯಲ್ಪಡುತ್ತದೆ. ಇಲ್ಲಿಯ ವಾತಾವರಣವು ನವೆಂಬರ್ ನಿಂದ ಫ಼ೆಬ್ರುವರಿ ತನಕ ಸುಕ್ತವಾಗಿರುತ್ತದೆ ಮತ್ತು ಚೆನಾಗಿರುತ್ತದೆ. ಇಲ್ಲಿಗೆ ವರ್ಷದಲ್ಲಿ ಯಾವಾಗ ಹೋದರು, ಅಲ್ಲಿಯ ವಾತಾವರಣವು ನಮಗೆ ಒಳ್ಳೆಯ ಅನುಭವ ನೀಡುತ್ತದೆ.