ದಮಯಂತಿ
ಹಿಂದೂ ಪುರಾಣದ ಒಂದು ಪಾತ್ರವಾದ ದಮಯಂತಿ ವಿದರ್ಭ ರಾಜ್ಯದ ರಾಜಕುಮಾರಿಯಾಗಿದ್ದಳು, ಮತ್ತು ಇವಳು ನಿಷಾದ ರಾಜ್ಯದ ರಾಜ ನಳನನ್ನು ಮದುವೆಯಾಗಿದ್ದಳು, ಮತ್ತು ಇವರ ಕಥೆಯು ಮಹಾಭಾರತದಲ್ಲಿ ಹೇಳಲಾಗಿದೆ. ಅವಳು ಎಷ್ಟು ಸುಂದರಿ ಮತ್ತು ಮೋಹಕಳಾಗಿದ್ದಳೆಂದರೆ ದೇವತೆಗಳು ಕೂಡ ಅವಳನ್ನು ಮೆಚ್ಚಿದ್ದರು. ಅವಳು ನಳನನ್ನು ಕೇವಲ ಒಂದು ಸುವರ್ಣ ಹಂಸದಿಂದ ಅವನ ಸದ್ಗುಣಗಳು ಹಾಗು ಸಾಧನೆಗಳನ್ನು ಕೇಳಿ ಪ್ರೀತಿಸಿದಳು.
ಕಥೆ
ಬದಲಾಯಿಸಿವಿದರ್ಭ ರಾಜ್ಯದ ರಾಜ ಭೀಮ ಮಹಾರಾಜನು ತನ್ನ ಪುತ್ರಿಯಾದ ದಮಯಂತಿಗಾಗಿ ಸ್ವಯಂವರವನ್ನು ಏರ್ಪಡಿಸಿದ್ದನು.ಅನೇಕ ರಾಜಕುಮಾರರು ಹಾಗೂ ದೇವರುಗಳಾದ ಇಂದ್ರ,ಅಗ್ನಿ,ವರುಣ ಮತ್ತು ಯಮನು ಸ್ವಯಂವರದಲ್ಲಿ ಭಾಗವಹಿಸಿದ್ದರು.ಸ್ವಯಂವರದಲ್ಲಿ ಭಾಗವಹಿಸಿರುವ ಒಬ್ಬರನ್ನು ದಮಯಂತಿಯು ತನ್ನ ಪತಿಯೆಂದು ಆರಿಸಿಕೊಳ್ಳಬೇಕಾಗಿತ್ತು. ದಮಯಂತಿ ನಳನನ್ನು ತನ್ನ ಪತಿಯನ್ನಾಗಿ ಆಯ್ಕೆಮಾಡಿಕೊಂಡಳು.ಅತಿಮಾನುಷ ಶಕ್ತಿಯುಳ್ಳ ಕಾಳಿಯು ಸಹ ದಮಯಂತಿಯನ್ನು ಮದುವೆಯಾಗಬೇಕೆಂದುಕೊಂಡಿರುತ್ತಾನೆ. ಆದರೆ ಅವನು ಬರುವ ಮುನ್ನವೆ ದಮಯಂತಿಯು ನಳನನ್ನು ತನ್ನ ಪತಿಯೆಂದು ಆಯ್ಕೆಮಾಡಿಕೊಂಡಿರುತ್ತಾಳೆ.ಇದರಿಂದ ಕೋಪಗೊಂಡ ಕಾಳಿಯು ನಳನ ಸಾಮ್ರಾಜ್ಯವನ್ನು ನಾಶಮಾಡುತ್ತೇನೆಂದು ಶಪಥ ಮಾಡುತ್ತಾನೆ.ನಳ ಮತ್ತು ದಮಯಂತಿಯು ಮದುವೆಯಾಗುತ್ತಾರೆ.ಇವರಿಬ್ಬರಿಗೆ ಇಬ್ಬರು ಮಕ್ಕಳು. ಮಹಾರಾಜನಾದ ನಿಷಧನ ನಿಧನದ ಬಳಿಕ ಯುವರಾಜನಾದ ನಳನು ಮಹಾರಾಜನ ಪಟ್ಟಕ್ಕೇರಿದನು.ನಳಮಹಾರಾಜ ಏಳಿಗೆಯನ್ನು ಆತನ ಸಹೋದರನಾದ ಕುವರನು ಸಹಿಸದಾದನು.ನಳಮಹಾರಾಜರ ದೌರ್ಬಲ್ಯವು ಜೂಜು ಎಂದು ತಿಳಿದಿದ್ದ ಕುವರನು ನಳಮಹಾರಾಜರ ಜೊತೆ ಜೂಜಿನ ಆಟವನ್ನು ಆಡುತ್ತಾನೆ.ಜೂಜಿನ ಆಟದಲ್ಲಿ ನಳಮಹಾರಾಜರು ತನ್ನ ಸರ್ವಸ್ವವನ್ನು ಕಳೆದುಕೊಳ್ಳುತ್ತಾರೆ.ಅನಂತರ ಕುವರನು ಅಧಿಕಾರಕ್ಕೆ ಬರುತ್ತಾನೆ ಹಾಗೂ ನಳನನ್ನು ತನ್ನ ರಾಜ್ಯದಿಂದ ಹೊರಗಾಕುತ್ತಾನೆ.ನಳನು ಅರಣ್ಯಕ್ಕೆ ತೆರಳುತ್ತಾನೆ. ದಮಯಂತಿಯು ಮಕ್ಕಳನ್ನು ತನ್ನ ತವರು ಮನೆಗೆ ಕಳುಹಿಸಿ ತಾನೂ ಸಹ ನಳನೊಂದಿಗೆ ಅರಣ್ಯಕ್ಕೆ ಹೋಗುತ್ತಾಳೆ. ಅರಣ್ಯದಲ್ಲಿ ಆಹಾರವಿಲ್ಲದೆ ಇಬ್ಬರು ಆಯಾಸಗೊಂಡಿದ್ದರು ಆಗ ನಳನು ತನ್ನ ಪತ್ನಿಯಾದ ದಮಯಂತಿಗೆ ತನ್ನನ್ನು ಬಿಟ್ಟು ವಿದರ್ಭ ರಾಜ್ಯಕ್ಕೆ ಹೋಗಲು ಮಾರ್ಗದರ್ಶನ ಮಾಡುತ್ತಾನೆ ಆದರೆ ದಮಯಂತಿಯು ವಿದರ್ಭ ರಾಜ್ಯಕ್ಕೆ ಹೋಗಲು ಒಪ್ಪುವುದಿಲ್ಲ.
ಒಂದು ರಾತ್ರಿಯ ವೇಳೆ ದಮಯಂತಿಯು ನಿದ್ರೆಯಲ್ಲಿದ್ದಾಗ ನಳನು ಆಕೆಯನ್ನು ಒಂಟಿಯಾಗಿ ಕಾಡಿನಲ್ಲೆ ಬಿಟ್ಟು ಹೊರಟುಹೋಗುತ್ತಾನೆ. ನಿದ್ರೆಯಿಂದ ಎಚ್ಚರವಾದಾಗ ನಳನು ಇಲ್ಲದಿರುವುದನ್ನು ಕಂಡ ದಮಯಂತಿಯು ನಿರಾಶೆಯಿಂದ ಚೇದಿಯೆಂಬ ರಾಜ್ಯವನ್ನು ತಲುಪಿ ಅಲ್ಲಿಯೇ ಇರುತ್ತಾಳೆ.ನಳನು ಒಂಟಿಯಾಗಿ ಕಾಡಿನಲ್ಲಿ ಸಂಚರಿಸುತ್ತಿದ್ದಾಗ ಯಾವುದೋ ಒಂದು ಧ್ವನಿ ತನ್ನನ್ನು ರಕ್ಷಿಸುವಂತೆ ಬೇಡಿಕೊಳ್ಳುತ್ತಿರುವುದು ಆತನ ಕಿವಿಗೆ ಬೀಳುತ್ತದೆ.ಧ್ವನಿ ಕೇಳಿಬಂದ ದಾರಿಯಲ್ಲಿ ನಳನು ಸಾಗುತ್ತಾನೆ.ಆ ಧ್ವನಿಯು ಸರ್ಪವಿನದ್ದಾಗಿರುತ್ತದೆ. ಆ ಸರ್ಪವು ನಾನೊಂದು ಸರ್ಪರಾಜನಾದ ಕಾರ್ಕೋಟಕ ನನ್ನನ್ನು ಕಾಳ್ಗಿಚ್ಚಿನಿಂದ ರಕ್ಷಿಸಿ ಎಂದು ಬೇಡಿಕೊಳ್ಳುತ್ತದೆ. ನಳನು ಕಾರ್ಕೋಟಕವನ್ನು ರಕ್ಷಿಸುತ್ತಾನೆ.ಕೂಡಲೆ ಆ ಸರ್ಪ ಕಾರ್ಕೋಟಕವು ನಳನನ್ನು ಕಚ್ಚುತ್ತದೆ.ಕಾಕಾರ್ಕೋಟದ ವಿಷದ ಪರಿಣಾಮದಿಂದಾಗಿ ನಳನ ರೂಪವು ವಿರೂಪಗೊಳ್ಳುತ್ತದೆ.ಆಗ ಸರ್ಪವು ಈ ರೂಪವು ನಿನ್ನನ್ನು ನೀನು ನಿನ್ನ ಶತ್ರುಗಳಿಂದ ರಕ್ಷಿಸಿಕೊಳ್ಳುವುದಕ್ಕಾಗಿ ಎಂದು ಹೇಳುತ್ತದೆ.ಕೆಲವು ವಸ್ತ್ರಗಳನ್ನು ಕೊಟ್ಟು ಇದನ್ನು ಧರಿಸಿಕೊಂಡರೆ ನಿನಗೆ ನಿನ್ನ ನಿಜ ರೂಪ ಬರುತ್ತದೆ ಎಂದು ಹೇಳಿ ಮಾಯಾವಾಗುತ್ತದೆ.
ನಳನು ಬೇರೊಂದು ರಾಜ್ಯಕ್ಕೆ ಹೋಗಲು ತಾಯಾರಾಗುತ್ತಾನೆ.ನಿದ್ರೆಯಿಂದ ಎಚ್ಚರವಾದ ದಮಯಂತಿಗೆ ನಳನು ಬರೆದಿಟ್ಟಿರುವ ಕಾಗದವೊಂದು ಸಿಗುತ್ತದೆ.ಆ ಕಾಗದದಲ್ಲಿ ನಳನು ಆಕೆಗೆ ತನ್ನ ತವರು ಮನೆಗೆ ಹೋಗುವಂತೆ ಹೇಳಿರುತ್ತಾನೆ.ದಮಯಂತಿಯು ದಟ್ಟ ಅರಣ್ಯದ ಮುಂದೆ ಹೋಗುತ್ತಿದ್ದಾಗ ರಾಕ್ಷಸನೊಬ್ಬನು ದಮಯಂತಿಗೆ ಎದುರಾಗಿ ಆಕೆಯನ್ನು ತಿಂದುಬಿಡುವೆನೆಂದು ಬೆದರಿಸುತ್ತಾನೆ. ಆದರೆ ದಮಯಂತಿ ಹೆದರುವುದಿಲ್ಲ. ಆಕೆಯ ಧೈರ್ಯವನ್ನು ಮೆಚ್ಚಿದ ರಾಕ್ಷಸ ತನ್ನ ನಿಜರೂಪದಲ್ಲಿ ದಮಯಂತಿಗೆ ಕಾಣಿಸಿಕೊಳ್ಳುತ್ತಾನೆ.ಆತನೊಬ್ಬ ದೇವತೆಯಾಗಿದ್ದು ಹನ್ನೆರಡು ವರ್ಷಗಳ ಬಳಿಕ ದಮಯಂತಿಯು ತನ್ನ ಪತಿಯನ್ನು ಕೂಡಿಕೊಳ್ಳುವ ಸಮಯ ಒದಗಿಬರುತ್ತದೆ ಎಂದು ತಿಳಿಸುತ್ತಾನೆ.ಸ್ವಲ್ಪ ವರ್ಷಗಳ ಬಳಿಕ ದಮಯಂತಿಯನ್ನು ಹುಡುಕಿ ತನ್ನ ತಂದೆಯ ಮನೆಗೆ ಕರೆದುಕೊಂಡು ಹೋಗುತ್ತಾರೆ.ನಳನನ್ನು ಹುಡುಕುತ್ತಾರೆ ಆದರೆ ನಳನು ಸಿಗುವುದಿಲ್ಲ.ದಮಯಂತಿಯು ನಳನು ಇಲ್ಲಿಗೆ ಮತ್ತೆ ಬರಬೇಕಾದರೆ ಏನೂ ಮಾಡಬೇಕೆಂದು ಯೋಚಿಸುತ್ತಾಳೆ.ಅನಂತರ ಆಕೆಯು ಎರಡನೆಯ ಸುಳ್ಳಿನ ಸ್ವಯಂವರವನ್ನು ಏರ್ಪಡಿಸುತ್ತಾಳೆ. ಸ್ವಯಂವರಕ್ಕೆ ನಳನ ಗುರುವು ಸಹ ಹೋಗುತ್ತಾನೆ.ನಳನು ತನ್ನ ಗುರುವಿನೊಂದಿಗೆ ಸ್ವಯಂವರಕ್ಕೆ ಬಂದಿರುತ್ತಾನೆ.ದಮಯಂತಿಯು ನಳನನ್ನು ಕಂಡುಹಿಡಿಯುತ್ತಾಳೆ. ನಳನು ಕೂಡ ಸರ್ಪವು ಕೊಟ್ಟ ವಸ್ತ್ರವನ್ನು ಧರಿಸಿಕೊಂಡು ತನ್ನ ನಿಜ ರೂಪಕ್ಕೆ ಬರುತ್ತಾನೆ. ಕಾಡಿನಲ್ಲಿ ಅವಳೊಬ್ಬಳನ್ನೆ ಬಿಟ್ಟು ಹೋಗಿದ್ದಕ್ಕೆ ದಮಯಂತಿಯು ನಳನನ್ನು ಕ್ಷಮಿಸುತ್ತಾಳೆ.
ಭಾಹ್ಯ ಸಂಪರ್ಕ
ಬದಲಾಯಿಸಿ- ನಳ ಮತ್ತು ದಮಯಂತಿಯರ ಕಥೆ Archived 2017-03-13 ವೇಬ್ಯಾಕ್ ಮೆಷಿನ್ ನಲ್ಲಿ.
- ಮಹಾಭಾರತದ ನಳ ಮತ್ತು ದಮಯಂತಿಯರ ಕಥೆ