ದಕ್ಷಿಣ ಗೋವಾ ಜಿಲ್ಲೆ
ದಕ್ಷಿಣ ಗೋವಾ ಜಿಲ್ಲೆಯು ಭಾರತದ ಗೋವಾ ರಾಜ್ಯದ ಎರಡು ಜಿಲ್ಲೆಗಳಲ್ಲಿ ಒಂದಾಗಿದ್ದು, ಕೊಂಕಣ ಪ್ರದೇಶದಲ್ಲಿದೆ. ಉತ್ತರದಲ್ಲಿ ಉತ್ತರ ಗೋವಾ ಜಿಲ್ಲೆ, ದಕ್ಷಿಣ ಮತ್ತು ಪೂರ್ವದಲ್ಲಿ ಕರ್ನಾಟಕದ ಉತ್ತರ ಕನ್ನಡ ಜಿಲ್ಲೆ ಹಾಗೂ ಪಶ್ಚಿಮದಲ್ಲಿ ಅರಬ್ಬಿ ಸಮುದ್ರದಿಂದ ಆವೃತ್ತವಾಗಿದೆ.
ದಕ್ಷಿಣ ಗೋವಾ ಜಿಲ್ಲೆ | |
---|---|
ದೇಶ | ಭಾರತ |
ರಾಜ್ಯ | ಗೋವಾ |
ಜಿಲ್ಲಾ ಕೇಂದ್ರ | ಮಡಗಾಂವ್ |
ತಾಲ್ಲೂಕುಗಳು | ಸಾಷ್ಟಿ, ಮರ್ಮಗೋವಾ, ಕೆಪೆಂ, ಕಾಣಕೋಣ, ಸಾಂಗೇ, ಧರ್ಬಂದೋರ |
Government | |
• ಜಿಲ್ಲಾಧಿಕಾರಿ | ಅಜಿತ್ ರಾಯ್, ಐ.ಎ.ಎಸ್[೧] |
• ಲೋಕಸಭಾ ಕ್ಷೇತ್ರ | ದಕ್ಷಿಣ ಗೋವಾ |
Area | |
• ಒಟ್ಟು | ೧,೯೬೬ km೨ (೭೫೯ sq mi) |
Population (೨೦೧೧) | |
• ಒಟ್ಟು | ೬೪೦೫೩೭ |
• Density | ೩೩೦/km೨ (೮೪೦/sq mi) |
ಜನಸಂಖ್ಯಾಶಾಸ್ತ್ರ | |
• ಸಾಕ್ಷರತೆ | ೮೫.೫೩% |
• ಲಿಂಗಾನುಪಾತ | ೯೮೦ |
Time zone | UTC+05:30 (ಐ.ಎಸ್.ಟಿ) |
Vehicle registration | GA-02 |
ಪ್ರಮುಖ ಹೆದ್ದಾರಿಗಳು | ೧. ರಾಷ್ಟ್ರೀಯ ಹೆದ್ದಾರಿ 66, ೨. ರಾಷ್ಟ್ರೀಯ ಹೆದ್ದಾರಿ 4A |
Website | southgoa |
ಇತಿಹಾಸ
ಬದಲಾಯಿಸಿಪೋರ್ಚುಗೀಸರು ೧೫೧೦ರಲ್ಲಿ ಗೋವಾದಲ್ಲಿ ವಸಾಹತನ್ನು ಸ್ಥಾಪಿಸಿ, ೧೭ ಮತ್ತು ೧೮ನೇ ಶತಮಾನದಲ್ಲಿ ಈಗಿರುವ ಗೋವಾ ರಾಜ್ಯದಷ್ಟು ವಿಸ್ತರಿಸಿದರು. ಭಾರತವು ೧೯ ಡಿಸೆಂಬರ್ ೨೯೬೧ರಲ್ಲಿ ಗೋವಾ ಪೋರ್ಚುಗೀಸರಿಂದ ವಿಮೋಚಿಸಿತು. ಗೋವಾ ಮತ್ತು ಇತರ ಪೋರ್ಚುಗೀಸ್ ವಸಾಹತುಗಳಾದ ದಮನ್ ಮತ್ತು ದಿಯುವನ್ನು ಕೇಂದ್ರಾಡಳಿತ ಪ್ರದೇಶಗಳಾಗಿ ಮಾಡಲಾಯಿತು. ೧೯೬೫ರಲ್ಲಿ ಗೋವಾವನ್ನು ಪ್ರತ್ಯೇಕ ಜಿಲ್ಲೆಯನ್ನಾಗಿ ಮಾಡಲಾಯಿತು. ೩೦ ಮೇ ೧೯೮೭ರಲ್ಲಿ ಗೋವಾಗೆ ರಾಜ್ಯಪಟ್ಟ ದೊರೆತು, ಉತ್ತರ ಗೋವಾ ಮತ್ತು ದಕ್ಷಿಣ ಗೋವಾ ಎಂಬ ಎರಡು ಜಿಲ್ಲೆಗಳಾಗಿ ವಿಂಗಡಿಸಲಾಯಿತು.
ಆಡಳಿತ
ಬದಲಾಯಿಸಿದಕ್ಷಿಣ ಗೋವಾದ ಜಿಲ್ಲಾಕೇಂದ್ರವು ಮಡಗಾಂವ್ ಆಗಿದೆ.[೨] ಜಿಲ್ಲೆಯಲ್ಲಿ ೭ ತಾಲ್ಲೂಕುಗಳಿದ್ದು, ೨೦೫ ಹಳ್ಳಿಗಳಿವೆ. ತಾಲ್ಲೂಕಿಗೆ ಒಬ್ಬರು ಮಾಮ್ಲಾದಾರ್ ಮುಖ್ಯಸ್ಥರಾಗಿರುತ್ತಾರೆ.[೩] ಜಿಲ್ಲಾಧಿಕಾರಿ ಕಛೇರಿಯಾದ ಮತಾನ್ಹಿ ಸಲ್ದಾನ್ಹಾ ಅಡ್ಮಿನಿಸ್ಟ್ರೇಟಿವ್ ಕಾಂಪ್ಲೆಕ್ಸ್ ನಗರದ ಹೊರವಲಯದಲ್ಲಿರುವ ಇಂಟರ್ಸಿಟಿ ಬಸ್ ನಿಲ್ದಾಣದ ಬಳಿ ಇದೆ. [೪]
ವಿಭಾಗಗಳು
ಬದಲಾಯಿಸಿಜಿಲ್ಲೆಯು ಐದು ಉಪವಿಭಾಗಗಳನ್ನು ಒಳಗೊಂಡಿದೆ - ಪೋಂಡ, ಮರ್ಮಗೋವಾ (ವಾಸ್ಕೊ ಡ ಗಾಮ), ಮಡಗಾಂವ್, ಕೆಪೆಂ ಮತ್ತು ಧರ್ಬಂದೋರ. ಜಿಲ್ಲೆಯಲ್ಲಿ ಏಳು ತಾಲ್ಲೂಕುಗಳಿವೆ – ಪೋಂಡ, ಮರ್ಮಗೋವಾ, ಸಾಷ್ಟಿ (ಮಡಗಾಂವ್), ಕೆಪೆಂ, ಕಾಣಕೋಣ, ಸಾಂಗೇ ಮತ್ತು ಧರ್ಬಂದೋರ.
ಪೋಂಡ ತಾಲ್ಲೂಕನ್ನು ಜನವರಿ ೨೦೧೫ರಲ್ಲಿ ಉತ್ತರ ಗೋವಾದಿಂದ ದಕ್ಷಿಣ ಗೋವಾಗೆ ಸೇರಿಸಲಾಯಿತು.
ಜನಸಂಖ್ಯೆ ಮಾಹಿತಿ
ಬದಲಾಯಿಸಿ೨೦೧೧ರ ಜನಗಣತಿಯ ಪ್ರಕಾರ ದಕ್ಷಿಣ ಗೋವಾದ ಜನಸಂಖ್ಯೆಯು ೬೪೦,೫೩೭ ಆಗಿದೆ.[೫] ಇದು ಹೆಚ್ಚು ಕಡಿಮೆ ಮಾಂಟೆನೆಗ್ರೊ ದೇಶದಷ್ಟು,[೬] ಅಥವಾ ಅಮೆರಿಕದ ವರ್ಮಾಂಟ್ ರಾಜ್ಯದಷ್ಟಿದೆ.[೭] ಇದು ಭಾರತದ ಜಿಲ್ಲಾವಾರು ಜನಸಂಖ್ಯೆಯಲ್ಲಿ ೫೧೫ನೇ ಸ್ಥಾನದಲ್ಲಿದೆ (ಒಟ್ಟು ೬೪೦ರಲ್ಲಿ). ಜಿಲ್ಲೆಯ ಜನಸಾಂದ್ರತೆಯು ಚ.ಕಿ.ಮಿ. ಗೆ ೩೨೬ ಜನರು ಆಗಿದೆ. ೨೦೦೧-೨೦೧೧ರ ದಶಕದಲ್ಲಿ ಜನಸಂಖ್ಯಾ ಬೆಳವಣಿಗೆ ಪ್ರಮಾಣವು ೮.೬೩% ಆಗಿತ್ತು. ಲಿಂಗಾನುಪಾತವು ೯೮೦ ಆಗಿದೆ (೧,೦೦೦ ಪುರುಷರಿಗೆ ೯೮೦ ಮಹಿಳೆಯರು). ಸಾಕ್ಷರತಾ ಪ್ರಮಾಣವು ೮೫.೫೩% ಆಗಿದೆ. [೫]
ವರ್ಷ | ಜನಸಂಖ್ಯೆ | ±% ಪ್ರ.ಶ |
---|---|---|
೧೯೦೦ | ೧೮೧,೪೩೯ | - |
೧೯೧೦ | ೧೮೦,೪೨೯ | -೦.೦೬% |
೧೯೨೦ | ೧೮೧,೪೫೫ | +೦.೦೬% |
೧೯೩೦ | ೧೯೧,೬೬೭ | +೦.೫೦% |
೧೯೪೦ | ೨೦೪,೨೯೭ | +೦.೭೧% |
೧೯೫೦ | ೨೧೬,೫೭೪ | -೦.೫೯% |
೧೯೬೦ | ೨೪೦,೩೩೦ | +೧.೦೫% |
೧೯೭೧ | ೩೩೬,೮೦೮ | +೩.೧೨% |
೧೯೮೧ | ೪೩೯,೭೨೮ | +೨.೭೦% |
೧೯೯೧ | ೫೦೪,೯೮೯ | +೧.೩೯% |
೨೦೦೧ | ೫೮೯,೦೯೫ | +೧.೫೫% |
೨೦೧೧ | ೬೪೦,೫೩೭ | +೦.೮೪% |
ಮೂಲ-[೮] |
ಭಾಷೆ
ಬದಲಾಯಿಸಿಕೊಂಕಣಿ ಭಾಷೆಯು ದಕ್ಷಿಣ ಗೋವಾದ ಬಹುತೇಕರ ತಾಯಿನುಡಿಯು ಆಗಿದೆ. ಸಾಕಷ್ಟು ಸಂಖ್ಯೆಯಲ್ಲಿ ಮರಾಠಿ ಭಾಷಿಕರೂ ಇದ್ದಾರೆ. ಇಂಗ್ಲಿಷ್ ಮತ್ತು ಹಿಂದಿ ಭಾಷೆಗಳು ಬಹುತೇಕರಿಗೆ ಅರ್ಥವಾಗುತ್ತದೆ. ಪೋರ್ಚುಗೀಸ್ ಭಾಷಿಕರೂ ಕೂಡ ಸ್ವಲ್ಪ ಸಂಖ್ಯೆಯಲ್ಲಿ ಇದ್ದಾರೆ.
ಭಾರತದ ೨೦೧೧ರ ಜನಗಣತಿಯ ಪ್ರಕಾರ, ಜಿಲ್ಲೆಯ ೬೬.೪೪% ಜನರು ಕೊಂಕಣಿ, ೧೨.೩೮% ಹಿಂದಿ, ೬.೪೫% ಮರಾಠಿ, ೫.೯೮% ಕನ್ನಡ, ೩.೩೯% ಉರ್ದೂ ಹಾಗೂ ಉಳಿದ ೫.೩೬% ಜನರು ಬೇರೆ ಭಾಷೆಗಳನ್ನು ತಾಯಿನುಡಿಯಾಗಿ ಹೊಂದಿದ್ದಾರೆ.[೯]
ಧರ್ಮ
ಬದಲಾಯಿಸಿಹಿಂದೂ ಧರ್ಮವು (೫೩%) ದಕ್ಷಿಣ ಗೋವಾದಲ್ಲಿ ಅತಿಹೆಚ್ಚು ಜನರು ಅನುಸರಿಸುವ ಧರ್ಮವಾಗಿದೆ. ಕ್ರೈಸ್ತರು (೩೬%) ಕೂಡ ಸಾಕಷ್ಟು ಸಂಖ್ಯೆಯಲ್ಲಿದ್ದಾರೆ.[೧೦]
ಶಿಕ್ಷಣ
ಬದಲಾಯಿಸಿದಕ್ಷಿಣ ಗೋವಾದಲ್ಲಿ ಹಲವು ಶೈಕ್ಷಣಿಕ ಸಂಸ್ಥೆಗಳಿವೆ. ಕೆಲ ಪ್ರಮುಖವುಗಳ ಪಟ್ಟಿ-
ಉಲ್ಲೇಖಗಳು
ಬದಲಾಯಿಸಿ- ↑ "Goa News Hub: R Menaka appointed North Goa Collector".[ಶಾಶ್ವತವಾಗಿ ಮಡಿದ ಕೊಂಡಿ]
- ↑ "Archived copy". Archived from the original on 28 May 2014. Retrieved 17 April 2014.
{{cite web}}
: CS1 maint: archived copy as title (link) - ↑ "Tehsil | South Goa District | India" (in ಅಮೆರಿಕನ್ ಇಂಗ್ಲಿಷ್). Retrieved 2020-04-09.
- ↑ TNN (31 May 2013). "South Goa collectorate named after Matanhy". ದಿ ಟೈಮ್ಸ್ ಆಫ್ ಇಂಡಿಯಾ. ಮಡಗಾಂವ್: The Times Group. Retrieved 10 December 2019.
- ↑ ೫.೦ ೫.೧ "District Census 2011". Census2011.co.in. 2011. Retrieved 30 September 2011.
- ↑ US Directorate of Intelligence. "Country Comparison:Population". Archived from the original on 27 ಸೆಪ್ಟೆಂಬರ್ 2011. Retrieved 1 October 2011.
Montenegro 661,807 July 2011 est.
- ↑ "2010 Resident Population Data". United States Census Bureau. Archived from the original on 27 ಡಿಸೆಂಬರ್ 2010. Retrieved 30 September 2011.
Vermont 625,741
- ↑ "Census of India Website : Office of the Registrar General & Census Commissioner, India". www.censusindia.gov.in.
- ↑ "C-16 Population By Mother Tongue - Goa". censusindia.gov.in. Retrieved 4 October 2019.
- ↑ ೧೦.೦ ೧೦.೧ "C-1 Population By Religious Community". census.gov.in. Retrieved 15 September 2020.
- ↑ "Archived copy". Archived from the original on 25 April 2014. Retrieved 25 April 2014.
{{cite web}}
: CS1 maint: archived copy as title (link) - ↑ "Archived copy". Archived from the original on 28 May 2014. Retrieved 9 May 2014.
{{cite web}}
: CS1 maint: archived copy as title (link) - ↑ "Padre Conceição College Of Engineering". www.pccegoa.org. Archived from the original on 2014-05-15. Retrieved 2021-01-10.
- ↑ User, Super. "M.E.S. College of Arts & Commerce". www.mescollege.org. Archived from the original on 2018-07-21. Retrieved 2021-01-10.
{{cite web}}
:|last=
has generic name (help)