ದಂತ ಸಿಂಹಾಸನವು ಆನೆಯ ದಂತದಿಂದ ಕೆತ್ತಲ್ಪಟ್ಟ ಸಿಂಹಾಸನ. ಜಗತ್ತಿನ ಏಕೈಕ ದಂತ ಸಿಂಹಾಸನವು ಶ್ರೀ ರಾಮಚಂದ್ರಾಪುರ ಮಠದಲ್ಲಿದೆ.

ಇತಿಹಾಸಸಂಪಾದಿಸಿ

ದಂತ ಸಿಂಹಾಸನವು ಶ್ರೀ ರಾಮಚಂದ್ರಾಪುರ ಮಠದ ೩೪ನೇ ಪೀಠಾಧಿಪತಿಯಾಗಿದ್ದ ಶ್ರೀ ರಾಮಚಂದ್ರ ಭಾರತಿ ಸ್ವಾಮಿಗಳ ಕಾಲದಲ್ಲಿ ಕೆತ್ತಲ್ಪಟ್ಟಿತು. ೩೩ನೇ ಪೀಠಾಧಿಪತಿಯಾಗಿದ್ದ ರಾಘವೇಶ್ವರ ಭಾರತಿ ಸ್ವಾಮಿಗಳ ಅಕ್ಕರೆಯ ಆನೆಯ ದಂತದಿಂದ ಮಾಡಲಾಗಿದೆ. ಈ ಸಿಂಹಾಸನವು ಆ ಆನೆಯ ಗುಣಗಳಾಗಿದ್ದ ಸ್ವಾಮಿನಿಷ್ಠೆ ಮತ್ತು ಮಮತೆಯ ದ್ಯೋತಕವಾಗಿದೆ. ಈ ಅಪೂರ್ವವಾದ ಸಿಂಹಾಸನವು ರಚನೆ ಮತ್ತು ಸೊಬಗಿನಲ್ಲಿ ಅಪ್ರತಿಮವಾಗಿದ್ದು ರಾಮಾಯಣ ಮತ್ತು ಮಹಾಭಾರತಕ್ಕೆ ಸಂಬಂಧಪಟ್ಟ ಚಿತ್ರಗಳನ್ನು ಹೊಂದಿದೆ.[೧]

ಈ ಸಿಂಹಾಸನವು ಸೊರಬದ ಗುಡಿಗಾರ ಮೂಡುಗೋಡು ಹಿರಣ್ಯಪ್ಪ ಮತ್ತು ಇತರ ೯ ಜನ ಕುಶಲಕರ್ಮಿಗಳಿಂದ ಕೆತ್ತಲ್ಪಟ್ಟಿತು. ಇದನ್ನು ಕೆತ್ತಲು ೧೮ ವರ್ಷಗಳ ಅವಧಿ ಹಿಡಿಯಿತು.

ಉಲ್ಲೇಖಗಳುಸಂಪಾದಿಸಿ