ಶ್ರೀ ರಾಮಚಂದ್ರಾಪುರ ಮಠ

ಶ್ರೀ ರಾಮಚಂದ್ರಾಪುರ ಮಠ ಅಥವಾ ರಘೋತ್ತಮ ಮಠವು ಆದಿ ಶಂಕರಾಚಾರ್ಯರಿಂದ ಸ್ಥಾಪಿಸಲ್ಪಟ್ಟ ಮಠ. ಇದು ಹೊಸನಗರ ತಾಲೂಕಿನ ಕಾರಣಗಿರಿಯ ಸನಿಹದ ರಾಮಚಂದ್ರಾಪುರದಲ್ಲಿದೆ. ಈಗ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮೀಜಿ ಅವರು ಪೀಠಾರೂಢರಾಗಿದ್ದಾರೆ. ಜಗತ್ತಿನ ಏಕೈಕ ಹಸ್ತಿದಂತ ಸಿಂಹಾಸನವು ಇಲ್ಲಿದೆ.

ರಾಮಚಂದ್ರಾಪುರ ಮಠ, ಹೊಸನಗರ
ರಾಮಚಂದ್ರಾಪುರ ಮಠ, ಹೊಸನಗರ


ಇತಿಹಾಸ

ಬದಲಾಯಿಸಿ

ಒಮ್ಮೆ ಆದಿ ಶಂಕರಾಚಾರ್ಯರು ತಮ್ಮ ಯಾತ್ರೆಯ ಸಮಯದಲ್ಲಿ ಭಾರತದ ಪಶ್ಚಿಮದ ಸಮುದ್ರ ತೀರದಲ್ಲಿರುವ ಗೋಕರ್ಣವನ್ನು ತಲುಪಿದರು. ಅಲ್ಲಿನ ಸ್ಥಳದೇವತೆಯಾದ ಮಹಾಬಲೇಶ್ವರನನ್ನು ಪೂಜಿಸಿದರು. ನಂತರ ಶ್ರೀ ವರದೇಶನನ್ನು ಪೂಜಿಸಲು ತಮ್ಮ ಶಿಷ್ಯರೊಂದಿಗೆ ಶತಶೃಂಗಕ್ಕೆ ತೆರಳಿದರು. ಈ ಸ್ಥಳವು ಶಾಂತಿ-ನೆಮ್ಮದಿಯ ಬೀಡಾಗಿದ್ದಿತು. ವನ್ಯ ಮೃಗಗಳಾದ ಹುಲಿ, ಹಾವುಗಳು ಸಾಧು ಪ್ರಾಣಿಗಳಾದ ಹಸು, ಜಿಂಕೆಗಳೊಂದಿಗೆ ಸಖ್ಯದಿಂದಿದ್ದವು. ವರದ ಮುನಿಗಳು ಪ್ರಾಯಶ್ಚಿತ್ತ ಮಾಡಿಕೊಳ್ಳುತ್ತಿದ್ದ ಅಲ್ಲಿನ ಅಶೋಕ ವನದಲ್ಲಿ ಒಂದು ಹೆಣ್ಣು ಹುಲಿಯು ಅನಾಥವಾಗಿದ್ದ ಜಿಂಕೆಯೊಂದಕ್ಕೆ ತಾಯಿಯ ಮಮತೆಯನ್ನು ತೋರಿಸುತ್ತಿದ್ದಿದ್ದನ್ನು ನೋಡಿ ಶಂಕರಾಚಾರ್ಯರು ವಿಸ್ಮಿತರಾದರು. ವರದ ಮುನಿಗಳು ಶಂಕರಾಚಾರ್ಯರನ್ನು ಸ್ವಾಗತಿಸಿ ಮಹಾತ್ಮರು ಸದಾ ಪೂಜಿಸಲು ಅನುಕೂಲವಾಗುವಂತೆ ತಮಗೆ ತಮ ಗುರುಗಳಾದ ಅಗಸ್ತ್ಯ ಮುನಿಗಳು ಕೊಟ್ಟಿದ್ದ ಪವಿತ್ರವಾದ ರಾಮ, ಲಕ್ಷ್ಮಣ, ಸೀತೆ ಮತ್ತು ಚಂದ್ರಮೌಳೀಶ್ವರ ಲಿಂಗಗಳನ್ನು ಕೊಟ್ಟರು. ಆಗ ಶಂಕರಾಚಾರ್ಯರು ಸಮಾಜದ ಉದ್ಧಾರಕ್ಕಾಗಿ ಮತ್ತು ಆ ಪವಿತ್ರ ವಿಗ್ರಹಗಳ ಪೂಜೆಗಾಗಿ ಅಲ್ಲಿ ರಘೂತ್ತಮ ಮಠವನ್ನು ಸ್ಥಾಪಿಸಿದರು.[]

ಶಂಕರಾಚಾರ್ಯರು ತಮ್ಮ ಶಿಷ್ಯರಾದ ಸುರೇಶ್ವರಾಚಾರ್ಯರಿಂದ ದೀಕ್ಷೆ ಪಡೆದಿದ್ದ ಶ್ರೀ ವಿದ್ಯಾನಂದರನ್ನು ಅಲ್ಲಿನ ಪ್ರಥಮ ಪೀಠಾಧಿಪತಿಯಾಗಿ ನೇಮಿಸಿದರು. ಹೀಗೆ ಶ್ರೀ ರಾಮಚಂದ್ರಾಪುರ ಮಠ ಎಂದು ಹೆಸರಾಗಿರುವ ರಘೂತ್ತಮ ಮಠದ ಅವಿಚ್ಛಿನ್ನ ಪರಂಪರೆಯು ಆರಂಭವಾಯಿತು.

ಮಠದ ಪೀಠಾಧಿಪತಿಗಳು

ಬದಲಾಯಿಸಿ

೧. ಶ್ರೀಮಜ್ಜಗದ್ಗುರು ಶಂಕರಾಚಾರ್ಯ
೨. ಶ್ರೀ ಸುರೇಶ್ವರಾಚಾರ್ಯ
೩. ಶ್ರೀ ವಿದ್ಯಾನಂದಾಚಾರ್ಯ
೪. ಶ್ರೀ ಚಿದ್ಬೋಧ ಭಾರತೀ - ೧
೫. ಶ್ರೀ ನಿತ್ಯಾನಂದ ಭಾರತೀ
೬. ಶ್ರೀ ನಿತ್ಯಬೋಧಘನೇಂದ್ರ ಭಾರತೀ
೭. ಶ್ರೀ ಸಚ್ಚಿದಾನಂದ ಭಾರತೀ
೮. ಶ್ರೀ ಚಿದ್ಘನೇಂದ್ರ ಭಾರತೀ
೯. ಶ್ರೀ ಸೀತಾರಾಮಚಂದ್ರ ಭಾರತೀ
೧೦. ಶ್ರೀ ಚಿದ್ಬೋಧ ಭಾರತೀ - ೨
೧೧. ಶ್ರೀ ರಾಘವೇಶ್ವರ ಭಾರತೀ - ೧
೧೨. ಶ್ರೀ ರಾಮಚಂದ್ರ ಭಾರತೀ - ೧
೧೩. ಶ್ರೀ ಅಭಿನವರಾಘವೇಶ್ವರ ಭಾರತೀ - ೨
೧೪. ಶ್ರೀ ರಾಮಯೋಗೀಂದ್ರ ಭಾರತೀ
೧೫. ಶ್ರೀ ನೃಸಿಂಹ ಭಾರತೀ
೧೬. ಶ್ರೀ ಅನಂತೇಂದ್ರ ಭಾರತೀ
೧೭. ಶ್ರೀ ರಾಮಭದ್ರ ಭಾರತೀ
೧೮. ಶ್ರೀ ರಾಘವೇಶ್ವರ ಭಾರತೀ - ೩
೧೯. ಶ್ರೀ ವಿದ್ಯಾಧನೇಂದ್ರ ಭಾರತೀ
೨೦. ಶ್ರೀ ರಘುನಾಥ ಭಾರತೀ
೨೧. ಶ್ರೀ ರಾಮಚಂದ್ ಭಾರತೀ - ೨
೨೨. ಶ್ರೀ ರಘೂತ್ತಮ ಭಾರತೀ - ೧
೨೩. ಶ್ರೀ ಪರಮೇಶ್ವರ ಭಾರತೀ
೨೪. ಶ್ರೀ ರಾಘವೇಶ್ವರ ಭಾರತೀ - ೪
೨೫. ಶ್ರೀ ರಘೂತ್ತಮ ಭಾರತೀ - ೨
೨೬. ಶ್ರೀ ರಾಘವೇಶ್ವರ ಭಾರತೀ - ೫
೨೭. ಶ್ರೀ ರಘೂತ್ತಮ ಭಾರತೀ - ೩
೨೮. ಶ್ರೀ ರಾಘವೇಶ್ವರ ಭಾರತೀ - ೬
೨೯. ಶ್ರೀ ರಘೂತ್ತಮ ಭಾರತೀ - ೪
೩೦. ಶ್ರೀ ರಾಘವೇಶ್ವರ ಭಾರತೀ - ೭
೩೧. ಶ್ರೀ ರಾಮಚಂದ್ರ ಭಾರತೀ - ೩
೩೨. ಶ್ರೀ ರಾಘವೇಂದ್ರ ಭಾರತೀ - ೧
೩೩. ಶ್ರೀ ರಾಘವೇಶ್ವರ ಭಾರತೀ - ೮
೩೪. ಶ್ರೀ ರಾಮಚಂದ್ರ ಭಾರತೀ - ೪
೩೫. ಶ್ರೀ ರಾಘವೇಂದ್ರ ಭಾರತೀ - ೨
೩೬. ಶ್ರೀ ರಾಘವೇಶ್ವರ ಭಾರತೀ - ೯ (೧೫/೪/೧೯೯೪ ರಿಂದ)

ಶ್ರೀ ಮಠದ ಅಂಗಸಂಸ್ಥೆಗಳು

ಬದಲಾಯಿಸಿ

೧. ಶ್ರೀರಾಮಚಂದ್ರಾಪುರಮಠ ಅಂಚೆ:ಹನಿಯ, ಹೊಸನಗರತಾಲ್ಲೂಕು ಶಿವಮೊಗ್ಗಜಿಲ್ಲೆ

೨. ಶ್ರೀರಾಮಚಂದ್ರಾಪುರಮಠ, ಪೆರಾಜೆ ಅಂಚೆ:ಬುಡೋಳಿ, ಬಂಟ್ವಾಳತಾಲ್ಲೂಕು ದಕ್ಷಿಣಕನ್ನಡಜಿಲ್ಲೆ

೩. ಶ್ರೀ ರಾಮದೇವಮಠ,ಭಾನ್ಕುಳಿ ಅಂಚೆ:ಬೇಡ್ಕಣಿ, ಸಿದ್ದಾಪುರತಾಲ್ಲೂಕು ಉತ್ತರಕನ್ನಡಜಿಲ್ಲೆ

೪. ಶ್ರೀ ರಘೂತ್ತಮಮಠ, ಕೆಕ್ಕಾರು ಅಂಚೆ:ಕೆಕ್ಕಾರು, ಹೊನ್ನಾವರತಾಲ್ಲೂಕು ಉತ್ತರಕನ್ನಡಜಿಲ್ಲೆ

೫. ಶ್ರೀ ರಾಮಾಶ್ರಮ, ಗಿರಿನಗರ ಬೆಂಗಳೂರು- 85

೬. ಶ್ರೀ ರಘೂತ್ತಮಮಠ, ಗೋಕರ್ಣ ಕುಮಟಾತಾಲ್ಲೂಕು, ಉತ್ತರಕನ್ನಡಜಿಲ್ಲೆ

೭. ಶ್ರೀ ರಾಮಚಂದ್ರಾಪುರಮಠ,ತೀರ್ಥಹಳ್ಳಿ ತೀರ್ಥಹಳ್ಳಿತಾಲ್ಲೂಕು, ಶಿವಮೊಗ್ಗಜಿಲ್ಲೆ

೮. ಶ್ರೀ ಅಪ್ಸರಕೊಂಡಮಠ,ಅಂಚೆ:ಅಪ್ಸರಕೊಂಡ ಹೊನ್ನಾವರತಾಲ್ಲೂಕು, ಉತ್ತರಕನ್ನಡಜಿಲ್ಲೆ

೯. ಶ್ರೀ ರಾಮಕೃಷ್ಣಕಾಳಿಕಾಮಠ, ಅಂಬಾಗಿರಿ ಶಿರಸಿತಾಲ್ಲೂಕು,ಉತ್ತರಕನ್ನಡಜಿಲ್ಲೆ

೧೦. ಶ್ರೀ ರಾಮಾಶ್ರಮ, ಚದರವಳ್ಳಿ ಅಂಚೆ:ತುಮರಿ, ಸಾಗರತಾಲ್ಲೂಕು ಶಿವಮೊಗ್ಗಜಿಲ್ಲೆ

ದೇವಾಲಯಗಳು

ಬದಲಾಯಿಸಿ

೧. ಸಂಸ್ಥಾನ ಶ್ರೀ ಮಹಾಬಲೇಶ್ವರದೇವ, ಗೋಕರ್ಣ ಕುಮಟಾತಾಲ್ಲೂಕು, ಉತ್ತರಕನ್ನಡಜಿಲ್ಲೆ

೨. ಶ್ರೀ ಸ್ವಯಂಭೂ ದೇವಾಲಯ, ಕಡತೋಕ ಹೊನ್ನಾವರತಾಲ್ಲೂಕು, ಉತ್ತರಕನ್ನಡಜಿಲ್ಲೆ

೩. ಶ್ರೀ ಮಲ್ಲಿಕಾರ್ಜುನ ದೇವಸ್ಥಾನ, ಅಶೋಕೆ ಗೋಕರ್ಣ, ಕುಮಟಾತಾಲ್ಲೂಕು, ಉತ್ತರಕನ್ನಡಜಿಲ್ಲೆ

೪. ಶ್ರೀ ದುರ್ಗಾದೇವಿ ದೇವಾಲಯ,ರಾಗಿಹೊಸಳ್ಳಿ ಶಿರಸಿತಾಲ್ಲೂಕು, ಉತ್ತರಕನ್ನಡಜಿಲ್ಲೆ

೫. ಶ್ರೀ ರಾಜರಾಜೇಶ್ವರಿ ದೇವಾಲಯ,ಸಂಡಳ್ಳಿ ಕುಮಟಾತಾಲ್ಲೂಕು, ಉತ್ತರಕನ್ನಡಜಿಲ್ಲೆ

೬. ಶ್ರೀ ಬಟ್ಟೇವಿನಾಯಕ ದೇವಾಲಯ, ಕೆಕ್ಕಾರು ಹೊನ್ನಾವರತಾಲ್ಲೂಕು, ಉತ್ತರಕನ್ನಡಜಿಲ್ಲೆ

೭. ಶ್ರೀ ಮಹಾಗಣಪತಿ ದೇವಾಲಯ, ಗಿರಿನಗರ ಬೆಂಗಳೂರು – 85

೮. ಶ್ರೀ ದುರ್ಗಾಪರಮೇಶ್ವರಿದೇವಿ ದೇವಸ್ಥಾನ, ದೇವಿಮನೆ ಅಂಚೆ: ಮಾರುಕೇರಿ, ಭಟ್ಕಳತಾಲ್ಲೂಕು, ಉತ್ತರಕನ್ನಡಜಿಲ್ಲೆ

೯. ಶ್ರೀ ದುರ್ಗಾಬಿಂಕಾಅಮ್ಮನವರ ದೇವಸ್ಥಾನ,ಹೈಗುಂದ ಅಂಚೆ: ಹೆರಂಗಡಿ, ಹೊನ್ನಾವರತಾಲ್ಲೂಕು, ಉತ್ತರಕನ್ನಡಜಿಲ್ಲೆ

೧೦. ಶ್ರೀ ರಾಮದೇವಾಲಯ, ಚೊಕ್ಕಾಡಿ ಅಂಚೆ: ಬೆಳ್ಳಾರೆ, ಸುಳ್ಯತಾಲ್ಲೂಕು, ದಕ್ಷಿಣಕನ್ನಡಜಿಲ್ಲೆ

೧೧. ಶ್ರೀ ಚಂದ್ರಮೌಳೀಶ್ವರ ದೇವಸ್ಥಾನ, ಶ್ರೀರಾಮಚಂದ್ರಾಪುರಮಠ ಅಂಚೆ:ಹನಿಯ, ಹೊಸನಗರತಾಲ್ಲೂಕು

೧೨. ಶ್ರೀ ಗೋವರ್ಧನಗಿರಿಧಾರಿ ದೇವಸ್ಥಾನ ಅಂಚೆ:ಹನಿಯ, ಹೊಸನಗರತಾಲ್ಲೂಕು ಶಿವಮೊಗ್ಗಜಿಲ್ಲೆ

೧೩. ಶ್ರೀ ಉಮಾಶಿವ ಕ್ಷೇತ್ರ, ಗೇರುಕಟ್ಟೆ ಅಂಚೆ:ಕಲ್ಲಡ್ಕ, ಬಂಟ್ವಾಳತಾಲ್ಲೂಕು ದಕ್ಷಿಣಕನ್ನಡಜಿಲ್ಲೆ

೧೪. ಬೆನ್ನಟ್ಟಿಶ್ರೀಗುತ್ತಮ್ಮದೇವಿಟ್ರಸ್ಟ್, ನಿಟ್ಟೂರು ಹೊಸನಗರತಾಲ್ಲೂಕು, ಶಿವಮೊಗ್ಗಜಿಲ್ಲೆ

೧೫. ಮೂಲಾಪುರ ಪರಮೇಶ್ವರ ದೇವಸ್ಥಾನ, ಮುಳ್ಳೂರು ಬಂಟ್ವಾಳತಾಲ್ಲೂಕು, ದಕ್ಷಿಣಕನ್ನಡಜಿಲ್ಲೆ

೧೬. ಶ್ರೀ ದತ್ತಮಂದಿರ, ನಾಯಕನಕೆರೆ ಯಲ್ಲಾಪುರ, ಉತ್ತರಕನ್ನಡಜಿಲ್ಲೆ

ವಿದ್ಯಾಸಂಸ್ಥೆಗಳು

ಬದಲಾಯಿಸಿ

೧. ಶ್ರೀ ಭಾರತೀ ಕಾಲೇಜು, ನಂತೂರು ಮಂಗಳೂರು, ದಕ್ಷಿಣಕನ್ನಡಜಿಲ್ಲೆ

೨. ಶ್ರೀ ರಾಮಸಂಸ್ಕೃತ ವೇದಪಾಠಶಾಲಾ, ಪೆರಾಜೆ ಅಂಚೆ:ಬುಡೋಳಿ, ಮಾಣಿ,ಬಂಟ್ವಾಳತಾಲ್ಲೂಕು ದಕ್ಷಿಣಕನ್ನಡಜಿಲ್ಲೆ

೩. ಶ್ರೀ ಭಾರತೀವಿದ್ಯಾಸಂಸ್ಥೆ, ಉರುವಾಲು ಬೆಳ್ತಂಗಡಿತಾಲ್ಲೂಕು, ದಕ್ಷಿಣಕನ್ನಡಜಿಲ್ಲೆ

೪. ಶ್ರೀ ಭಾರತೀವಿದ್ಯಾಪೀಠ, ಮುಜಂಗಾವು ಅಂಚೆ:ಎಡನಾಡು, ಕಾಸರಗೋಡು, ಕೇರಳ

೫. ಶ್ರೀ ಭಾರತೀವಿದ್ಯಾಪೀಠ, ಬದಿಯಡ್ಕ ಕಾಸರಗೋಡು, ಕೇರಳ

೬. ಶ್ರೀ ಸಾಯಿಸರಸ್ವತಿ ವಿದ್ಯಾಕೇಂದ್ರ ಗುರುಕುಲ ಯೋಗಾಶ್ರಮಟ್ರಸ್ಟ್ ಬೋಗಾದಿ, ಮೈಸೂರು

೭. ಶ್ರೀ ಭಾರತೀ ವಿದ್ಯಾನಿಕೇತನ, ಚದರವಳ್ಳಿ ಅಂಚೆ:ತುಮರಿ, ಸಾಗರತಾಲ್ಲೂಕು ಶಿವಮೊಗ್ಗಜಿಲ್ಲೆ

೮. ಶ್ರೀ ವಿದ್ಯಾರಣ್ಯ ಸಂಸ್ಕೃತ ಪಾಠಶಾಲಾ, ಕೆಕ್ಕಾರು ಹೊನ್ನಾವರತಾಲ್ಲೂಕು, ಉತ್ತರಕನ್ನಡಜಿಲ್ಲೆ

೯. ವೈದಿಕ ವಿದ್ಯಾಶಾಲೆ, ಗೋಕರ್ಣ ಕುಮಟಾತಾಲ್ಲೂಕು, ಉತ್ತರಕನ್ನಡಜಿಲ್ಲೆ

೧೦. ಶ್ರೀ ರಾಘವೇಂದ್ರಭಾರತೀ ಸವೇದ ಸಂಸ್ಕೃತ ಮಹಾವಿದ್ಯಾಲಯ ಕವಲಕ್ಕಿ, ಹೊನ್ನಾವರತಾಲ್ಲೂಕು, ಉತ್ತರಕನ್ನಡಜಿಲ್ಲೆ

೧೧. ಪ್ರಗತಿ ವಿದ್ಯಾಲಯ, ಮೂರೂರು ಕುಮಟಾತಾಲ್ಲೂಕು, ಉತ್ತರಕನ್ನಡಜಿಲ್ಲೆ

೧೨. ಶ್ರೀ ಭಾರತೀ ವಿದ್ಯಾಲಯ, ಬೆಂಗಳೂರು ಆರ್ಪಿಸಿಲೇಔಟ್, ವಿಜಯನಗರ

ಗೋಶಾಲೆಗಳು

ಬದಲಾಯಿಸಿ

೧. ಮಹಾನಂದಿ ಗೋಲೋಕ, ಶ್ರೀರಾಮಚಂದ್ರಾಪುರಮಠ ಅಂಚೆ:ಹನಿಯ, ಹೊಸನಗರತಾಲ್ಲೂಕು ಶಿವಮೊಗ್ಗಜಿಲ್ಲೆ

೨. ಗೋಸ್ವರ್ಗ,ಭಾನ್ಕುಳಿ ಅಂಚೆ:ಬೇಡ್ಕಣಿ, ಸಿದ್ದಾಪುರತಾಲ್ಲೂಕು ಉತ್ತರಕನ್ನಡಜಿಲ್ಲೆ

೩. ಅಮೃತಧಾರಾ ಗೋಲೋಕ, ಕಗ್ಗಲೀಪುರ ಕನಕಪುರರಸ್ತೆ, ಬೆಂಗಳೂರು– 83

೪. ಶ್ರೀ ರಾಘವೇಂದ್ರ ಗೋ ಆಶ್ರಮ,ಮಾಲೂರು ಗಂಗಾಪುರ, ಅಂಚೆ : ಯಶವಂತಪುರ ಮಾಲೂರುತಾಲ್ಲೂಕು, ಕೋಲಾರಜಿಲ್ಲೆ

೫. ಶ್ರೀ ಅಮೃತಧಾರಾ ಗೋಶಾಲಾ, ಮುಳಿಯ ಬಂಟ್ವಾಳತಾಲ್ಲೂಕು, ದಕ್ಷಿಣಕನ್ನಡಜಿಲ್ಲೆ

೬. ನಂದಿನಿ ಗೋಶಾಲೆ, ಗಿರಿನಗರ ಬೆಂಗಳೂರು–೮೫

೭. ಕಾವೇರಮ್ಮ ಅಮೃತಧಾರಾ ಗೋಶಾಲೆ,ವೇಣೂರು ಬೆಳ್ತಂಗಡಿತಾಲ್ಲೂಕು, ದಕ್ಷಿಣಕನ್ನಡಜಿಲ್ಲೆ

೮. ಶ್ರೀ ಅಮೃತಧಾರಾ ಗೋಶಾಲಾ, ಬಜಕೂಡ್ಲು ಅಂಚೆ: ಪೆರ್ಲ, ಕಾಸರಗೋಡು, ಕೇರಳ

೯. ಶ್ರೀ ಅಮೃತಧಾರಾ ಗೋಶಾಲಾ, ಪೆರಾಜೆ ಬಂಟ್ವಾಳತಾಲ್ಲೂಕು, ದಕ್ಷಿಣಕನ್ನಡಜಿಲ್ಲೆ

೧೦. ಶ್ರೀ ಅಮೃತಧಾರಾ ಗೋಬ್ಯಾಂಕ್, ಹೊಸಾಡ ಕುಮಟಾತಾಲ್ಲೂಕು, ಉತ್ತರಕನ್ನಡಜಿಲ್ಲೆ

೧೧. ಶ್ರೀ ಅಮೃತಧಾರಾ ಗೋಶಾಲೆ, ಕೈರಂಗಳ ಬಂಟ್ವಾಳತಾಲ್ಲೂಕು, ದಕ್ಷಿಣಕನ್ನಡಜಿಲ್ಲೆ

೧೨. ಶ್ರೀ ಅಮೃತಧಾರಾ ಗೋಶಾಲೆ, ಗಂಗಾಪುರ ರಾಣಿಬೆನ್ನೂರು, ಹಾವೇರಿಜಿಲ್ಲೆ

ಆಸ್ಪತ್ರೆ

ಬದಲಾಯಿಸಿ

೧. ಶ್ರೀ ಭಾರತೀ ನೇತ್ರ ಚಿಕಿತ್ಸಾಲಯ,ಮುಜ0ಗಾವು ಕಾಸರಗೋಡು, ಕೇರಳ

ಇತರೇಅಂಗಸಂಸ್ಥೆಗಳು

ಬದಲಾಯಿಸಿ

೧. ಶ್ರೀ ಶಂಕರ ಧ್ಯಾನಮಂದಿರ ಪೊಸಡಿಗುಂಪೆ, ಕಾಸರಗೋಡು, ಕೇರಳ

೨. ನಮ್ಮ ಮನೆ ಹವ್ಯಕ ಸಭಾಭವನ, ಗುರುವಾಯನಕೆರೆ ಬೆಳ್ತಂಗಡಿತಾಲ್ಲೂಕು, ದಕ್ಷಿಣಕನ್ನಡಜಿಲ್ಲೆ

೩. ಧರ್ಮಾರಣ್ಯ ಅಭಿವೃದ್ಧಿ ಸಮಿತಿ ಕೃಷ್ಣನಗರ, ಸುಳ್ಯತಾಲ್ಲೂಕು, ದ.ಕಜಿಲ್ಲೆ

೪. ಶ್ರೀ ಭಾರತೀ ಪ್ರಕಾಶನ, ಗಿರಿನಗರ ಬೆಂಗಳೂರು– 85

೫. ಮಹಿಳೋದಯ, ಬದಿಯಡ್ಕ ಕಾಸರಗೋಡು, ಕೇರಳ

೬. ಕುದ್ರೆಬೆಟ್ಟುಫಾರ್ಮ್ಸ್, ಬಾಳ್ತಿಲ ಕಲ್ಲಡ್ಕ, ಬೆಳ್ತಂಗಡಿತಾಲ್ಲೂಕು, ದ.ಕ

ಉಲ್ಲೇಖಗಳು

ಬದಲಾಯಿಸಿ
  1. "ಮಠದ ಅಧಿಕೃತ ಜಾಲತಾಣದಲ್ಲಿ ಮಠದ ಇತಿಹಾಸದ ಮಾಹಿತಿ". Archived from the original on 2012-03-12. Retrieved 2012-03-27.


ಇವನ್ನೂ ನೋಡಿ

ಬದಲಾಯಿಸಿ

ಹವ್ಯಕ