ಸಿಂಹಾಸನವು ದೊರೆ ಅಥವಾ ಗಣ್ಯವ್ಯಕ್ತಿಯ ಅಧಿಕಾರದ ಪೀಠವಾಗಿರುತ್ತದೆ, ವಿಶೇಷವಾಗಿ ರಾಜ್ಯಾಧಿಕಾರದ ಸಂದರ್ಭಗಳಲ್ಲಿ ಸಾರ್ವಭೌಮನು ಕುಳಿತುಕೊಳ್ಳುವ ಪೀಠ.[] ಸಾಮಾನ್ಯವಾಗಿ ಸಿಂಹಾಸನವು ಉಳಿದ ಪೀಠಗಳಿಗಿಂತ ಎತ್ತರವಾಗಿದ್ದು ವೇದಿಕೆ ಅಥವಾ ಜಗಲಿ ಮೇಲೆ ಕರೆದೊಯ್ಯಲು ಮೆಟ್ಟಿಲುಗಳಿರುತ್ತವೆ.

ನೆಪೋಲಿಯನ್ ಬೋನಪಾರ್ತ್‌ನ ಸಿಂಹಾಸನ

ಹಲವುವೇಳೆ (ಆದರೆ ಯಾವಾಗಲೂ ಅಲ್ಲ), ಸಿಂಹಾಸನವು ರಾಷ್ಟ್ರ ಅಥವಾ ಅಲ್ಲಿನ ಜನರು ನಂಬಿರುವ ಒಂದು ತತ್ವಶಾಸ್ತ್ರ ಸಂಬಂಧಿ ಅಥವಾ ಧಾರ್ಮಿಕ ಸಿದ್ಧಾಂತಕ್ಕೆ ಕಟ್ಟಲ್ಪಟ್ಟಿರುತ್ತದೆ. ಇದು ಎರಡು ಪಾತ್ರಗಳನ್ನು ವಹಿಸುತ್ತದೆ, ಆಳುತ್ತಿರುವ ರಾಜನ ಕೆಳಗೆ ಜನರನ್ನು ಒಟ್ಟುಗೂಡಿಸುವುದು ಮತ್ತು ಸಿಂಹಾಸನದ ಮೇಲಿರುವ ರಾಜನನ್ನು ಅವನ ಪೂರ್ವಾಧಿಕಾರಿಗಳೊಂದಿಗೆ ಸಂಬಂಧಿಸುವುದು. ಹಾಗಾಗಿ, ಸಾಮಾನ್ಯವಾಗಿ ಅನೇಕ ಸಿಂಹಾಸನಗಳನ್ನು ಆ ನಾಡಿಗೆ ಅಮೂಲ್ಯವಾದ ಅಥವಾ ಮುಖ್ಯವಾದ ಅಪರೂಪದ ಅಥವಾ ದೊರೆಯಲು ಕಷ್ಟವಾದ ವಸ್ತುಗಳಿಂದ ನಿರ್ಮಿಸಲಾಗಿತ್ತು ಅಥವಾ ರಚಿಸಲಾಗಿತ್ತು ಎಂದು ಭಾವಿಸಲಾಗಿದೆ. ಸಿಂಹಾಸನದ ಗಾತ್ರವನ್ನು ಅವಲಂಬಿಸಿ ಅದು ದೊಡ್ಡದಾಗಿರಬಹುದು ಮತ್ತು ರಾಷ್ಟ್ರದ ಶಕ್ತಿಯ ಸ್ಥಾಪಿತ ಸಾಧನವಾಗಿ ಅಲಂಕಾರಮಯವಾಗಿ ವಿನ್ಯಾಸಗೊಂಡಿರಬಹುದು, ಅಥವಾ ಅದು ವಿನ್ಯಾಸದೊಳಗೆ ಬಹಳ ಕಡಿಮೆ ಅಮೂಲ್ಯ ವಸ್ತುಗಳನ್ನು ಹೊಂದಿರುವ ಅಥವಾ ಏನೂ ಹೊಂದಿರದ ಸಾಂಕೇತಿಕ ಪೀಠವಾಗಿರಬಹುದು.

ಉಲ್ಲೇಖಗಳು

ಬದಲಾಯಿಸಿ
"https://kn.wikipedia.org/w/index.php?title=ಸಿಂಹಾಸನ&oldid=962721" ಇಂದ ಪಡೆಯಲ್ಪಟ್ಟಿದೆ