ತ್ರಿಪುರ
ತ್ರಿಪುರ ಈಶಾನ್ಯ ಭಾರತದ ರಾಜ್ಯಗಳಲ್ಲೊಂದು. ಉತ್ತರ, ದಕ್ಷಿಣ ಮತ್ತು ಪಶ್ಚಿಮದಲ್ಲಿ ಬಾಂಗ್ಲಾದೇಶದಿಂದ ಸುತ್ತುವರಿಯಲ್ಪಟ್ಟಿರುವ ತ್ರಿಪುರದ ಪೂರ್ವಕ್ಕೆ ಅಸ್ಸಾಂ ಮತ್ತು ಮಿಝೊರಾಮ್‌ಗಳಿವೆ. ೨೦೧೨ ರ ಹಿಂದೆ ತ್ರಿಪುರಾದಲ್ಲಿ ಧಲಾಯ್, ಉತ್ತರ ತ್ರಿಪುರ, ದಕ್ಷಿಣ ತ್ರಿಪುರ, ಮತ್ತು ಪಶ್ಚಿಮ ತ್ರಿಪುರ ಎಂಬ ನಾಲ್ಕು ಜಿಲ್ಲೆಗಳಿದ್ದವು. ಜನವರಿ, ೨೦೧೨ ರಲ್ಲಿ ಖೊವಾಯ್, ಉನಾಕೋಟಿ, ಸಿಪಾಹಿ ಜಾಲಾ, ಮತ್ತು ಗೋಮತಿ ಎಂಬ ೪ ಹೊಸ ರಾಜ್ಯಗಳು ಅಸ್ತಿತ್ವಕ್ಕೆ ಬಂದವು. ಅಗರ್ತಲಾ ರಾಜಧಾನಿ ಹಾಗೂ ಅತಿದೊಡ್ಡಪಟ್ಟಣ. ಬಧಾರ್ ಘಾಟ್, ಧರ್ಮನಗರ್, ಜೋಗೇಂದ್ರ ನಗರ್, ಕೈಲಾಶ್ ಶಹರ್, ಪ್ರತಾಪ್ ಘಡ್, ಉದಯ್ ಪುರ್, ಅಮರ್ ಪುರ್, ಭೇಲೋನಿಯಾ, ಗಾಂಧಿ ಗ್ರಾಮ್, ಇಂದ್ರ ನಗರ್, ಕುಮಾರ್ ಘಾಟ್, ರಾಣಿರ್ ಬಜಾರ್, ಸೋನಾಮುರಾ, ತೇಲಿಯಾಮುರಾ.
ತ್ರಿಪುರ ত্রিপুরা | |
ರಾಜಧಾನಿ - ಸ್ಥಾನ |
ಅಗರ್ತಲ - |
ಅತಿ ದೊಡ್ಡ ನಗರ | ಅಗರ್ತಲ |
ಜನಸಂಖ್ಯೆ (2001) - ಸಾಂದ್ರತೆ |
3,191,168 (21st) - 304/km² |
ವಿಸ್ತೀರ್ಣ - ಜಿಲ್ಲೆಗಳು |
10,492 km² (26th) - 4 |
ಸಮಯ ವಲಯ | IST (UTC+5:30) |
ಸ್ಥಾಪನೆ - [[ ತ್ರಿಪುರ ত্রিপুরা ರಾಜ್ಯದ ರಾಜ್ಯಪಾಲರು|ರಾಜ್ಯಪಾಲ]] - ಶಾಸನಸಭೆ (ಸ್ಥಾನಗಳು) |
ಜನವರಿ ೨೧, ೧೯೭೨ - ಸತ್ಯದೇವೋ ನರೇನ್ ಅರ್ಯ chief_minister=ಬಿಪ್ಲಬ್ ಕುಮಾರ್ ದೆಬ್ |
ಅಧಿಕೃತ ಭಾಷೆ(ಗಳು) | ಬಂಗಾಳಿ, ಕೊಕ್ಬೊರೊಕ್ |
Abbreviation (ISO) | IN-TR |
ಅಂತರ್ಜಾಲ ತಾಣ: tripura.nic.in | |
ತ್ರಿಪುರ ত্রিপুরা ರಾಜ್ಯದ ಮುದ್ರೆ |
ಭೂಗೋಳ ಹಾಗೂ ಹವಾಮಾನಸಂಪಾದಿಸಿ
ಈಶಾನ್ಯ ಭಾರತದ ಅಸ್ಸಾಮ್, ಅರುಣಾಚಲಪ್ರದೇಶ್, ಮಣಿಪುರ್, ಮೇಘಾಲಯ, ಮಿಜೊರಂ, ನಾಗಾಲ್ಯಂಡ್, ಮತ್ತು ತ್ರಿಪುರ ರಾಜ್ಯಗಳನ್ನು ಜೊತೆಜೊತೆಯಾಗಿ ಸಪ್ತ ಸೋದರಿಯರು ಎನ್ನುತ್ತಾರೆ. ತ್ರಿಪುರದ ಒಟ್ಟು ವಿಸ್ತೀರ್ಣ ೪,೦೫೦.೮೬ ಚದರ ಮೈಲಿಗಳು. ಉತ್ತರದಿಂದ ದಕ್ಷಿಣಕ್ಕೆ ಗರಿಷ್ಠ ದೂರ ೭೦ ಮೈಲಿಗಳು. ಪೂರ್ವದಿಂದ ಪಶ್ಚಿಮಕ್ಕೆ ೧೧೪ ಮೈಲಿಗಳು. ಅಸ್ಸಾಮ್ ನ ಕರೀಮ್ ಗಂಜ್ ಜಿಲ್ಲೆ ಮತ್ತು ಮಿಜೊರಂನ ಐಜ್ವಾಲ್ ಜಿಲ್ಲೆಗಳಿಂದ ತ್ರಿಪುರಾಕ್ಕೆ ಹೋಗಲು ದಾರಿಗಳಿವೆ. ಐದು ಬೆಟ್ಟಗಳ ಸಾಲುಗಳು ರಾಜ್ಯದಲ್ಲಿ ಉತ್ತರದಿಂದ ಕಕ್ಷಿಣಕ್ಕೆ ಸಾಗುತ್ತವೆ. ಈ ಬೆಟ್ಟಗಳ ಹೆಸರು : (ಪಶ್ಚಿಮದಿಂದ ಪೂರ್ವಕ್ಕೆ)-ಬೋರೋಮುರಾ, ಅಥರಾಮುರಾ, ಲೋಂಗ್, ಥರೈ, ಶಾಖಾನ್, ಜಾಮ್ ಪ್ಯು. ಇವುಗಳ ಮಧ್ಯೆ ಅಗರ್ತಲಾ-ಉದಯಪುರ್, ಖೋವಾಇ-ತೆಲಿಯಾಮುರಾ, ಕಮಾಲ್ ಪುರಾ, ಅಂಬಾಸಾ, ಕೈಲಾಸ್ ಶಹರ್-ಮಾನು ಧರ್ಮನಗರ್-ಕಾಂಚನ್ಪುರ್ ಕಣಿವೆಗಳಿವೆ. ಜಾಮ್ ಪ್ಯು ಶ್ರೇಣಿಯಲ್ಲಿರುವ ೯೩೯ ಮೀಟರ್ (೩,೦೮೧ ಅಡಿ) ಎತ್ತರದ 'ಬೆಟ್ಲಿಂಗ್ ಶಿಬ್' ತ್ರಿಪುರದ ಅತಿ ಎತ್ತರದ ಬೆಟ್ಟ. ರಾಜ್ಯದ ತುಂಬಾ ಈಶ್ರೇಣಿಗೆ ಸೇರದ ಒಂಟಿಯಾಗಿರುವ ಹಲವಾರು ಬೆಟ್ಟಗಳೂ ಇವೆ. ಇವುಗಳಿಗೆ 'ತಿಲ್ಲಾ ' ಎಂದು ಹೆಸರು. ಕಣಿವೆಗಳ ನಡುವೆ ಇರುವ ಸಮೃದ್ಧ ಕೃಷಿ ಭೂಮಿಗೆ 'ಲುಂಗಾ' ಎಂಬ ಹೆಸರಿದೆ. ಕಣಿವೆಗಳ ನಡುವೆ ಹರಿಯುವ ಹಲವಾರು ನದಿಗಳು ಬಾಂಗ್ಲಾದೇಶಕ್ಕೆ ಸಾಗುತ್ತವೆ. ಗುಮ್ತಿ ಪಶ್ಚಿಮಕ್ಕೆ ಹರಿದರೆ, ಕೊವ್ರಾ, ಧಾಲೃ, ಮಾನು, ಜುರಿ, ಲಾಂಗಾಯಿ, ಉತ್ತರಕ್ಕೆ ಹರಿಯುತ್ತವೆ. ಮುಹುರಿ, ಮತ್ತು ಫೆನಿ, ನೈಋತ್ಯ ದಿಕ್ಕಿಗೆ ಹರಿಯುತ್ತವೆ. ಚಳಿಗಾಲ : ಡಿಸೆಂಬರ್ ನಿಂದ ಫೆಬ್ರವರಿ ತಿಂಗಳ ನಡುವೆ. ಬೇಸಗೆ : ಮಾರ್ಚ್-ಏಪ್ರಿಲ್. ಮಳೆಗಾಲ : ಮೇ-ಸೆಪ್ಟೆಂಬರ್, ಮಾನ್ಸೂನ್ ಕಾಲದಲ್ಲಿ ನೈಋತ್ಯ ಮಾನ್ಸೂನ್ ಭಾರಿ ಮಳೆ ಸುರಿಸುತ್ತದೆ. ವರ್ಷಕ್ಕೆ ಸರಾಸರಿ ೨,೧೯೪ ಮಿ.ಮೀ. ಮಳೆ ಬೀಳುತ್ತದೆ. ಆಗ ರಾಜ್ಯದುದ್ದಕ್ಕೂ ನೆರೆಯ ಹಾವಳಿ ಆಗುವುದು ಸರ್ವೇ ಸಾಮಾನ್ಯ. ಚಳಿಗಾಲದಲ್ಲಿ ೧೩ ಡಿಗ್ರಿ ಸೆಲ್ಸಿಯಸ್ ಇದ್ದರೆ, ಬೇಸಿಗೆಯಲ್ಲಿ ೩೬ ಡಿಗ್ರಿ ಉಷ್ಣತೆ ಇರುತ್ತದೆ. ಅಕ್ಟೋಬರ್ ನವೆಂಬರ್ ನಡುವೆ ತೇವಭರಿತ ಹವಾಮಾನ ಇರುತ್ತದೆ.
ತ್ರಿಪುರದ ಉತ್ಸವಗಳುಸಂಪಾದಿಸಿ
ಗಾರಿಯಾ ಪೂಜೆಸಂಪಾದಿಸಿ
ಕೇರ್ ಪೂಜಾಸಂಪಾದಿಸಿ
ತ್ರಿಪುರದ ಒಂದು ಬುಡಕಟ್ಟಿನ ಪಂಗಡದವರು ನಡೆಸುವ ಜನಾಂಗೀಯ ಉತ್ಸವ. ಬುಡಕಟ್ಟಿನ ಜನಗಳು ತಮ್ಮ ತಮ್ಮ ಪ್ರದೇಶದ ಗಡಿರೇಖೆಯನ್ನು ಬರೆದು , ಈ ಪೂಜೆ ಆರಂಭಿಸುತ್ತಾರೆ. ಈ ಉತ್ಸವ ಜರುಗುವ ಸಮಯದಲ್ಲಿ ಬೇರೆ ಬೇರೆ ಬುಡಕಟ್ಟುಗಳ ಜನ ಈ ನಿಯಮಿತ ಗಡಿಯ ಉಲ್ಲಂಘನೆ ಮಾಡುವಂತಿಲ್ಲ. ಹೊರಊರಿನಲ್ಲಿರುವ ಪಂಗಡ ದ ಜನ ಗಡಿಯೊಳಗೆ ಬಂದರೆ, ಪೂಜೆ ಮುಗಿಯುವ ತನಕ ಹೊರಗೆ ಹೋಗುವಂತಿಲ್ಲ.
ತ್ರಿಪುರ ಸುಂದರಿ ದೇವಾಲಯಸಂಪಾದಿಸಿ
ಉದಯಪುರದಲ್ಲಿರುವ 'ತ್ರಿಪುರಸುಂದರಿ ದೇವಾಲಯ' ಭಾರತೀಯ ೫೧ ಶಕ್ತಿಪೀಠಗಳಲ್ಲೊಂದು. ಪುರಾಣಗಳ ಪ್ರಕಾರ, ದಕ್ಷನ ಯಜ್ಞಕುಂಡದಲ್ಲಿ ದಹಿಸಿಹೋದ ಸತಿಯ ಕಳೇಬರವನ್ನು ಎತ್ತಿಕೊಂಡು ಮಹಾದೇವನು ತಾಂಡವ ನೃತ್ಯವನ್ನು ಆರಂಭಿಸಿದ್ದ ಝಳದಲ್ಲಿ ಮೂರು ಲೋಕಗಳೂ ಸುಟ್ಟುಹೋಗುವ ಸ್ಥಿತಿಯಲ್ಲಿದ್ದವು. ಶಿವನ ಆಕ್ರೋಶಕ್ಕೆ ತಡೆಹಾಕಲು ಮಹಾವಿಷ್ಣು ತನ್ನ ಸುದರ್ಶನ ಚಕ್ರದಿಂದ ಸತಿಯ ಕಳೇಬರವನ್ನು ೫೧ ತುಂಡುಗಳಾಗಿ ಕತ್ತರಿಸಿದ ಈ ತುಂಡುಗಳುಕೆಳಗೆ ಬಿದ್ದ ಸ್ಥಳಗಳೇ ಶಕ್ತಿಪೀಠಗಳೆಂದು ಹೆಸರಾದವು. ಹಾಗೆ ಬಿದ್ದ ಸತೀದೇವಿಯ ಬಲಗಾಲು, ಮಾತಾಬಾರಿ ಎಂದು ಹೆಸರುಪಡೆಯಿತು. ದಕ್ಷಿಣ ತ್ರಿಪುರಾ ಜಿಲ್ಲೆಯ ಉದಯಪುರದಲ್ಲಿರುವ ಈ ಕ್ಷೇತ್ರದಲ್ಲಿ ಮಾತಾ ತ್ರಿಪುರಸುಂದರಿ ದೇವಾಲಯ ನಿರ್ಮಾಣವಾಗಿದೆ. ಉದಯಪುರ ಜಿಲ್ಲಾ ಕೇಂದ್ರ. ಪ್ರತಿವರ್ಷವೂ ದೀಪಾವಳಿ ಹಬ್ಬದ ದಿನದಂದು, ಇಲ್ಲಿನ ಜಾತ್ರೆ(ಮೇಳಾ) ಯಲ್ಲಿ ಲಕ್ಷಾಂತರ ಯಾತ್ರಾರ್ಥಿಗಳು ಬಂದು ಸೇರುತ್ತಾರೆ.೧೫೧೦ ರಲ್ಲಿ ಮಹಾರಾಜ ಧನ್ಯಮಾಣಿಕ್ಯ ಈ ದೇವಾಲಯವನ್ನು ಕಟ್ಟಿಸಿದನು. ಬಂಗಾಲಿ ಶೈಲಿಯಲ್ಲಿ ಕಟ್ಟಿರುವ ಈ ದೇವಸ್ಥಾನ ಚೌಕಾಕೃತಿಯ ಗರ್ಭಗುಡಿಯನ್ನು ಹೊಂದಿದೆ. ಅದರ ಮೇಲಿನ ಗೋಪುರ ಶಂಕುವಿನ ಆಕಾರವಿದೆ. ತ್ರಿಪುರಸುಂದರಿಯ ೨ ವಿಗ್ರಹಗಳಿವೆ. ಒಂದು ವಿಗ್ರಹಕ್ಕೆ 'ಛೋಟಿಮಾ' ಎಂದೂ ಮತ್ತೊಂದಕ್ಕೆ 'ತ್ರಿಪುರಸುಂದರೀದೇವಿ' ಎಂದೂ ಹೆಸರಿದೆ. ತ್ರಿಪುರಾದ ರಾಜರು, ಹಿಂದೆ ಮೃಗಯಾ ವಿಹಾರ, ಮತ್ತು ಯುದ್ಧಗಳ ವೇಳೆಯಲ್ಲಿ 'ಛೋಟಿಮಾ' ಮೂರ್ತಿಯನ್ನು ತಮ್ಮೊಂದಿಗೆ ಒಯ್ಯುತ್ತಿದ್ದರು. ದೇವಾಲಯದ ವಾಸ್ತು ರಚನೆ ಆಮೆಯಾಕಾರವಾಗಿರುವುದರಿಂದ ಇದಕ್ಕೆ 'ಕೂರ್ಮಪೀಠ'ವೆಂದೂ ಕರೆಯುತ್ತಾರೆ. ಕೆಂಪು-ಕಪ್ಪು ಕಾಷ್ಠಿ ಶಿಲೆಯ ಮಹಾಕಾಳೀ ವಿಗ್ರಹವನ್ನು 'ಸೋರೋಶೋ' ಎಂಬ ರೂಪದಲ್ಲಿ ಅರ್ಚಿಸಲಾಗುತ್ತದೆ. 'ಕಲ್ಯಾಣ ಸಾಗರ' ಎಂಬ ಸುಪ್ರಸಿದ್ಧ ಕೆರೆ ದೇವಾಲಯದ ಪೂರ್ವ ಭಾಗದಲ್ಲಿದೆ. ಈ ಕೆರೆಯಲ್ಲಿ ಬೃಹದ್ ಗಾತ್ರ ಮೀನುಗಳು ಹಾಗೂ ಆಮೆಗಳನ್ನು ನೋಡಬಹುದು. ಇಲ್ಲಿ ಮೀನುಗಾರಿಕೆಗೆ ಅನುಮತಿ ಇಲ್ಲ. ಭಕ್ತರು ಮಂಡಕ್ಕಿ ಮತ್ತು ಬಿಸ್ಕತ್ ಚೂರುಗಳನ್ನು ಎಸೆಯುತ್ತಾರೆ. ತ್ರಿಪುರ ಸುಂದರಿ ದೇವಾಲಯ, ಉದಯಪುರದಿಂದ ೩ ಕಿ.ಮೀ ಮತ್ತು ಅಗರ್ತಲಾದಿಂದ ೫೫ ಕಿ.ಮೀ. ದೂರದಲ್ಲಿದೆ. ಅಲ್ಲಿಗೆ ತಲುಪಲು, ಬಸ್ಸು ಮತ್ತು ರಿಕ್ಷಾಗಳು ಸಿಕ್ಕುತ್ತವೆ. ಉದಯಪುರದಲ್ಲಿ 'ಭುವನೇಶ್ವರಿ ದೇವಸ್ಥಾನ', 'ಗುಣಬಾಟಿ ದೇವಾಲಯ',ಹಾಗೂ ಸುಂದರ ಕೆರೆಗಳು ಇವೆ.
ಖಾರ್ಚಿ ಪೂಜಾಸಂಪಾದಿಸಿ
ಚದುರ್ದಶ ದೇವತೆಗಳ ಖಾಂದಾನಿ ಪೂಜೆಗೆ ಖಾರ್ಚಿ ಪೂಜೆ ಎನ್ನುವ ಹೆಸರಿದೆ. ಜುಲೈ-ಆಗಸ್ಟ್ ತಿಂಗಳ ನಡುವೆ ಅಮಾವಾಸ್ಯೆಯ ಬಳಿಕ ಎಂಟನೆಯ ದಿನ ಈ ಪೂಜೆ ನಡೆಯುತ್ತದೆ. ಚದುರ್ದಶ ದೇವತಾ ಮಂದಿರದಲ್ಲಿ ತ್ರಿಪುರಿ ಮೂಲದ ಚಾಂತಾಯಿ ವಂಶದ ಅರ್ಚಕರು ಪಾರಂಪರಿಕವಾಗಿ ಪೂಜೆಯನ್ನು ಮಾಡುತ್ತಾರೆ. ಇದೊಂದೇ ದೇವಾಲಯದಲ್ಲಿ ತ್ರಿಪುರಿ ಪೂಜಾರಿಗಳು ಇರುವುದು. ಚಂತಾಯ್ ಪೂಜಾರಿಗಳು ದೇವತೆಗಳನ್ನು ಸೈದ್ರಾ ನದಿಗೆ ಒಯ್ದು ಪವಿತ್ರ ಸ್ನಾನ ಮಾಡಿಸಿ ದೇವಾಲಯಕ್ಕೆ ತರುತ್ತಾರೆ. ದೇವಿಯರ ಅಲಂಕಾರದ ಬಳಿಕ ಪೂಜೆ ನಡೆಯುತ್ತದೆ. ಖಾರ್ ಪಾಪ. ಮತ್ತು ಚಿ ಅಂದರೆ ಶುಭ್ರಗೊಳಿಸುವುದು. ಈ ಎರಡು ಶಬ್ದಗಳು ಸೇರಿ 'ಖಾರ್ಚಿ' ಎಂಬ ಹೆಸರು ಬಂದಿದೆ. ರಾಜ್ಯದ ಜನರೆಲ್ಲರ ಪಾಪ ಪರಿಹಾರಾರ್ಥವಾಗಿ ಈ ಪೂಜೆ ನಡೆಯುತ್ತದೆ. ಅಮಾ ಪೇಚಿ (ಮಾತೃದೇವತೆ ಋತುಮತಿಯಾಗುವ ದಿನದ ಆಚರಣೆ)ಯ ೧೫ ದಿನಗಳ ತರುವಾಯ ಈ ಹಬ್ಬ ಜರುಗುತ್ತದೆ. ಈ ೧೫ ದಿನಗಳಲ್ಲಿ ಉಳುವುದು, ನೆಲ ಅಗಿಯುವುದು ನಿಶಿದ್ಧ. ಖಾರ್ಚಿ ಪೂಜೆ ೭ ದಿನಗಳ ತನಕ ಜರುಗುತ್ತದೆ. ಈ ವೇಳೆ ಪುರಾತನ ಅಗರ್ತಲಾ ನಗರದ ಚತುರ್ದಶ ದೇವತಾ ಮಂದಿರದಲ್ಲಿ ಸತತವಾಗಿ ಪೂಜೆ ನಡೆಯುತ್ತದೆ. ತ್ರಿಪುರಿಗಳಲ್ಲದೆ ಇತರರೂ ಈ ಪೂಜೆಯಲ್ಲಿ ಸಂಭ್ರಮದಿಂದ ಭಾಗಗೊಳ್ಳುತ್ತಾರೆ. ಜನರು ದೇವಿಗೆ ಸಿಹಿತಿಂಡಿಗಳ ನೈವೇದ್ಯವನ್ನು ಸಮರ್ಪಿಸುತ್ತಾರೆ. ಕೋಳಿ, ಕುರಿ, ಆಡು, ಕೋಣಗಳ ಬಲಿಯನ್ನೂ ಕೊಡುವ ಸಂಪ್ರದಾಯವಿದೆ.
ದುರ್ಗಾಪೂಜಾಸಂಪಾದಿಸಿ
ತ್ರಿಪುರದ ಬಂಗಾಳಿಗಳು, ಅಕ್ಟೋಬರ್, ನವೆಂಬರ್ ತಿಂಗಳ ಸಮಯದಲ್ಲಿ ನವರಾತ್ರಿಯ ವೇಳೆ ಅತ್ಯಂತ ಸಂಭ್ರಮದಿಂದ ದುರ್ಗಾಪೂಜೆಯನ್ನು ಆಚರಿಸುತ್ತಾರೆ. ದುರ್ಗೆಯ ಮೂರ್ತಿಯನ್ನು ಕೊನೆಯದಿನ ನಗರದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆಯಲ್ಲಿ ಕೊಂಡೊಯ್ದು ಕೊಳದಲ್ಲಿ ವಿಸರ್ಜನೆ ಮಾಡುತ್ತಾರೆ.
ತೀರ್ಥ ಮುಖಸಂಪಾದಿಸಿ
ಗೋಮತಿ ನದಿಯ ಉಗಮ ಸ್ಥಾನಕ್ಕೆ ತೀರ್ಥಮುಖ ಎಂದು ಹೆಸರು. ಪುರಾತನ ಕಾಲದಿಂದಲೂ ತ್ರಿಪುರಿ ಜನರಿಗೆ ಇದು ಪವಿತ್ರ ತೀರ್ಥ ಕ್ಷೇತ್ರವಾಗಿತ್ತು. ಜನವರಿ-ಫೆಬ್ರವರಿ ತಿಂಗಳ ಮಧ್ಯೆ ಉತ್ತರಾಯಣ ಸಂಕ್ರಾಂತಿಯದಿನ ತ್ರಿಪುರಿ ಬುಡಕಟ್ಟಿನ ಜನರೇ ಅಲ್ಲದೆ ತ್ರಿಪುರದ ಎಲ್ಲಾ ವರ್ಗದ ಜನರೂ ಜಾತಿ, ಪಂಥಗಳ ಭೇದವಿಲ್ಲದೆ ಕೆರೆಗಳಲ್ಲಿ ತೀರ್ಥಸ್ನಾನ ಮಾಡಿ ಸಂಭ್ರಮದಿಂದ ಪೂಜೆಮಾಡುತ್ತಾರೆ. ಇಲ್ಲಿ ಜರುಗುವ ೨ ದಿನಗಳ ಜಾತ್ರೆಯ ಪೂಜೆಯಲ್ಲಿ ತಲೆ ಕೂದಲು ಬೋಳಿಸಿ, ಭಕ್ತಿ, ಶ್ರದ್ಧೆಗಳಿಂದ ದೇವತೆಗಳ ಪೂಜೆಯನ್ನು ಮಾಡುತ್ತಾರೆ.
ತ್ರಿಪುರ-ವಿಧಾನ ಸಭೆಸಂಪಾದಿಸಿ
- ವಿಧಾನ ಸಭೆ : 60 ಸ್ಥಾನಗಳು
- ತ್ರಿಪುರ ಮಾಣಿಕ್ ಸರ್ಕಾರ್ 03-11-1998
- ದಿನಾಂಕ 14-2-2013 ರ 11ನೇ ವಿಧಾನ ಸಭೆ ಚುನಾವಣೆ ; 93.57% ಮತದಾನ -ಧಾಖಲೆ
ಭಾರತೀಯ ಕಮ್ಯುನಿಸ್ಟ್ ಪಕ್ಷ(ಮಾರ್ಕ್ಸವಾದಿ)
- ತ್ರಿಪುರಾ ಸಿಪಿಎಮ್ =49 ( 2008ರಲ್ಲಿ 46ಕ್ಕೆ +3);
- ಭಾರತೀಯ ರಾಷ್ಟ್ರೀಯ ಕಾಂಗ್ರೆ 10:
- ಸಿಪಿಐ 1;
- ಇತರೆ 0;
- ಒಟ್ಟು 60
- ಲೋಕ ಸಭೆ --
- ಸಿಪಿಎಮ್ = 2 ಸ್ಥಾನ