ತುಳುನಾಡಿನ ನದಿಗಳು

ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಮೂಲಕ ಹರಿಯುವ ಕೆಲವು ನದಿಗಳ ಪಟ್ಟಿ ಇದು. ನದಿಯ ಹೆಸರುಗಳು ಅವು ಹರಿಯುವ ಪ್ರದೇಶವನ್ನು ಅವಲಂಬಿಸಿ ಬದಲಾಗುತ್ತದೆ. ಈ ಜಿಲ್ಲೆಗಳ ಬಹುತೇಕ ನದಿಗಳು ಪಶ್ಚಿಮಕ್ಕೆ ಹರಿಯುತ್ತವೆ ಮತ್ತು ಅರೇಬಿಯನ್ ಸಮುದ್ರವನ್ನು ಸೇರುತ್ತವೆ.[೧]

ನೇತ್ರಾವತಿ ಬದಲಾಯಿಸಿ

ನೇತ್ರಾವತಿ ನದಿ

ನೇತ್ರಾವತಿ ನದಿಯ ಮೂಲ ಭಾರತದ ಕರ್ನಾಟಕ ರಾಜ್ಯದ ಪಶ್ಚಿಮ ಘಟ್ಟಗಳು. ಕುಮಾರಧಾರ, ನೇರಿಯಾರೆ, ಮಣಿಹಳ್ಳ ಮತ್ತು ಗುರುಪುರಾ ನದಿಗಳು ನೇತ್ರಾವತಿ ನದಿಗೆ ಸೇರುತ್ತವೆ. ಮಂಗಳೂರು, ಬಂಟ್ವಾಳ, ಪಾಣೆಮಂಗಳೂರು, ಧರ್ಮಸ್ಥಳ ಮತ್ತು ಉಳ್ಳಾಲ ಈ ನದಿಯ ತೀರದಲ್ಲಿರುವ ಕೆಲವು ಸ್ಥಳಗಳಾಗಿವೆ. ಈ ನದಿ ಮಂಗಳೂರಿನಲ್ಲಿ ಅರೇಬಿಯನ್ ಸಮುದ್ರಕ್ಕೆ ಸೇರುತ್ತದೆ. ನೆತ್ರಾವತಿ ನದಿ ದಕ್ಷಿಣ ಕನ್ನಡದ ಜೀವ ನಾಡಿ ಎಂದು ಕರೆಯಲ್ಪಡುತ್ತದೆ. ಇದರ ಉದ್ದವು 103 ಕಿಮೀ. ಇದು ಸುಮಾರು 1352 ಚದರ ಮೈಲುಗಳಷ್ಟು ವಿಸ್ತೀರ್ಣವನ್ನು ಹೊಂದಿದೆ. ಈ ನದಿಯ ನೀರನ್ನು ಕುಡಿಯಲು, ಮೀನುಗಾರಿಕೆ ಹಾಗೂ ವಿದ್ಯುತ್ ಉತ್ಪಾದನೆಗೆ ಬಳಸುತ್ತಾರೆ.[೨]

ಕುಮಾರಧಾರ ಬದಲಾಯಿಸಿ

ಕುಮಾರಧಾರ ನದಿ ಪಶ್ಚಿಮ ಘಟ್ಟಗಳಲ್ಲಿ ಹುಟ್ಟುತ್ತದೆ. ಈ ನದಿಯು ನೇತ್ರಾವತಿ ನದಿಗೆ ಸೇರುತ್ತದೆ. ಕುಕ್ಕೆ ಸುಬ್ರಹ್ಮಣ್ಯ ದೇವಾಲಯವು ಕುಮಾರಧಾರ ನದಿ ತೀರದಲ್ಲಿದೆ.

ಕುಮಾರಧಾರ ನದಿ

ಗುರುಪುರ ಅಥವಾ ಫಲ್ಗುಣಿ ನದಿ ಬದಲಾಯಿಸಿ

ಫಲ್ಗುನಿ ನದಿ

ಗುರುಪುರ ನದಿಯು ಮಂಗಳೂರಿನ ಗುರುಪುರ ಮೂಲಕ ಹರಿಯುತ್ತದೆ. ಬೆಂಗ್ರೆಯ ಬಳಿ ನೇತ್ರಾವತಿ ನದಿಯನ್ನು ಸೇರುತ್ತದೆ.[೩]

ನಂದಿನಿ ಅಥವಾ ಪಾವಂಜೆ ಬದಲಾಯಿಸಿ

ನಂದಿನಿ ಅಥವಾ ಪಾವಂಜೆ ನದಿ ಸಸಿಹಿತ್ಲು ಬಳಿ ಅರೇಬಿಯನ್ ಸಮುದ್ರಕ್ಕೆ ಸೇರುತ್ತದೆ. ಇದು ಕನಕಾಗಿರಿ(ಇರುವೈಲು)ನಲ್ಲಿ ಹುಟ್ಟುತ್ತದೆ. ಕಟೀಲು ಹಾಗೂ ಪಾವಂಜೆ ಮೂಲಕ ಹರಿಯುತ್ತದೆ.

ಶಾಂಭವಿ ಬದಲಾಯಿಸಿ

ಶಾಂಭವಿ ನದಿ ಮುಲ್ಕಿ ಪಟ್ಟಣದ ಮೂಲಕ ಹರಿಯುತ್ತದೆ.

ಪಾಂಗಳ ಬದಲಾಯಿಸಿ

ಈ ನದಿಯು ಪಂಗಳ ಗ್ರಾಮವನ್ನು ಮುಟ್ಟುತ್ತದೆ ಮತ್ತು ಮಟ್ಟಿ ಬಳಿ ಅರೇಬಿಯನ್ ಸಮುದ್ರವನ್ನು ಸೇರುತ್ತದೆ.

ಉದ್ಯಾವರ ಬದಲಾಯಿಸಿ

ಉದ್ಯಾವರ ನದಿಯು ಮಲ್ಪೆ ಬಳಿ ಅರೇಬಿಯನ್ ಸಮುದ್ರಕ್ಕೆ ಸೇರುತ್ತದೆ. ಉದ್ಯಾವರ ಮತ್ತು ಮಲ್ಪೆ ಈ ನದಿಯು ಹರಿಯುವ ಕೆಲವು ಸ್ಥಳಗಳಾಗಿವೆ.

ಸ್ವರ್ಣ ಅಥವಾ ಸುವರ್ಣ ಬದಲಾಯಿಸಿ

ಸ್ವರ್ಣ ನದಿಪರ್ವೂರ್, ಹಿರಿಯಾಡ್ಕ, ಪರಿಕ (ಉದ್ಯಾನ) ಹರ್ಗ, ಮಣಿಪಾಲ್, ಪೆರಾಂಪಳ್ಳಿ, ಉಪ್ಪೂರ್ ಮತ್ತು ಕಲ್ಯಾಣಪುರ ಮೂಲಕ ಬೆಂಗ್ರೆಯಲ್ಲಿ ಅರೇಬಿಯನ್ ಸಮುದ್ರವನ್ನು ಸೇರುತ್ತದೆ. ಏ ನದಿಯು ಉಡುಪಿ ಜಿಲ್ಲೆಯ ಕುಡಿಯುವ ನೀರಿನ ಮುಖ್ಯ ಮೂಲವಾಗಿದೆ.

ಸೀತಾ ಬದಲಾಯಿಸಿ

ನರಸಿಂಹ ಪರ್ವತದ ಮೇಲಿರುವ ಹೆಬ್ರಿಯ ಬಳಿ ಪಶ್ಚಿಮ ಘಟ್ಟಗಳಲ್ಲಿ ಈ ನದಿಯು ಹುಟ್ಟುತ್ತದೆ. ಈ ನದಿ ಉಡುಪಿ ತಾಲ್ಲೂಕಿನ ಮೂಲಕ ಹರಿಯುತ್ತದೆ. ಪ್ರಸಿದ್ಧ ಪಟ್ಟಣ ಬಾರ್ಕೂರು ಸೀತಾ ನದಿಯ ದಡದಲ್ಲಿದೆ.

ಉಲ್ಲೇಖಗಳು ಬದಲಾಯಿಸಿ

  1. https://www.revolvy.com/main/index.php?s=List+of+rivers+of...and+Udupi...
  2. https://www.revolvy.com/main/index.php?s=Netravati+River
  3. "ಆರ್ಕೈವ್ ನಕಲು". Archived from the original on 2017-06-01. Retrieved 2018-06-26.