ತಿರುವಳ್ಳುವರ್ ತಮಿಳಿನ ಪ್ರಸಿದ್ಧ ಕವಿ ಮತ್ತು ತತ್ವಜ್ಞಾನಿ. ಇವರು ಬರೆದಿರುವ "ತಿರುಕ್ಕುರಳ್" ಎನ್ನುವ ಕೃತಿ ತಮಿಳು ಸಂಗಮ ಸಾಹಿತ್ಯಕ್ಕೆ ಬಹಳ ದೊಡ್ಡ ಕೊಡುಗೆ. ಜೈನರು ಬುಧ್ದರು ಮತ್ತು ಶೈವರು ಇವರನ್ನು ತಮ್ಮ ಧರ್ಮದವರೆಂದು ಹೇಳುತ್ತಾರೆ.

ತಿರುವಳ್ಳುವರ್
The Thiruvalluvar statue in Kanyakumari
ಇತರ ಹೆಸರುಗಳುValluvar, Mudharpaavalar, Deivappulavar, Gnanavettiyaan, Maadhaanupangi, Naanmuganaar, Naayanaar, Poyyirpulavar, Dhevar, Perunaavalar[೧]
ಜನನProbably between 4th and 1st centuries BCE; possible date: 31 BCE (as approved by the Government of Tamil Nadu)
Thirunainar Kuruchi, Valluvanad (present-day Kanyakumari district) or Possibly at Thirumailai (present-day Mylapore, Chennai)
ಕಾಲಮಾನSangam
ಪ್ರದೇಶPresent-day ತಮಿಳುನಾಡು
ಧರ್ಮProbably Hinduism or Jainism
ಗಮನಾರ್ಹ ಚಿಂತನೆಗಳುCommon ethics and morality
ತಿರುವಳ್ಳುವರ್
ಕನ್ಯಾಕುಮಾರಿಯಲ್ಲಿರುವ ತಿರುವಳ್ಳುವರ್ ಪ್ರತಿಮೆ

ಇತಿವೃತ್ತ ಬದಲಾಯಿಸಿ

  • ತಿರುವಳ್ಳುವರ್ ಅವರನ್ನು ನಾನಾ ಹೆಸರುಗಳಿಂದ ಕರೆಯುತ್ತಾರೆ. ಹೇಗೆಂದರೆ, ದೈವ ಪುಲವರ್(ಆಧ್ಯಾತ್ಮಿಕ ಕವಿ), ವಳ್ಳುವರ್, ಪೊಯಮೊಜಿ ಪುಲವರ್, ಸೆನ್ನ ಪೊತರ್, ಜ್ಞಾನ ವೆಟ್ಟಿಯಾನ್,ಅಯ್ಯನ್ ಇತ್ಯಾದಿ. ತಮಿಳಿನ ಸಂಗಮ ಕಾಲದ ಮತ್ತೊಂದು ಪ್ರಸಿದ್ಧ ಕವಿ ಮಲ್ಲುಮನಾರ್ ತಿರುವಳ್ಳುವರ್ ಅವರನ್ನು ತಮಿಳಿನ "ಮಹಾನ್ ಪಂಡಿತ" ಎಂದು ಹೊಗಳಿದ್ದಾರೆ.
  • ಆ ಸಮಯದಲ್ಲಿ ನಂದವಂಶದವರು ರಾಜ್ಯವಾಳುತ್ತಿದ್ದರು ಎಂದೂ ಹೇಳಿದ್ದಾರೆ. ರಾಜ್ಯದ ಬಗ್ಗೆ ಮತ್ತು ತಿರುವಳ್ಳುವರ್ ಬದುಕಿದ್ದ ಕಾಲದ ಬಗ್ಗೆ ಸ್ಪಷ್ಟವಾದ ಸಾಕ್ಷಿ ಮತ್ತು ಮಾಹಿತಿ ಇಲ್ಲದ ಕಾರಣ ತಿರುವಳ್ಳುವರ್ ಕೃತಿಗಳ ಬರವಣಿಗೆ ಶೈಲಿಯನ್ನು ನೋಡಿ ಅವರ ಕಾಲ, ಸ್ಥಳ ಮತ್ತು ವೈಯಕ್ತಿಕ ಜೀವನವು ಹೀಗೆ ಇರಬಹುದೆಂದು ಊಹಿಸಬಹುದು.

ತಿರುವಳ್ಳುವರ್ ಹೆಸರಿನ ಬಗ್ಗೆ ಬದಲಾಯಿಸಿ

  • ಈ ತಿರುವಳ್ಳುವರ್ ಎಂಬ ಹೆಸರು ಮೊದಲು ಕೇಳಿ ಬಂದದ್ದು ಹತ್ತನೇ ಶತಮಾನದ 'ತಿರುವಳ್ಳುವರ್ ಮಾಲಯ್' ಎಂಬ ಕೃತಿಯಲ್ಲಿ ಕಾಣಬಹುದು. ಈ 'ತಿರು' ಎಂಬ ಪದ ಪೂಜನೀಯ ಭಾವನೆಯನ್ನು ಸೂಚಿಸುತ್ತದೆ. ಸಂಸ್ಕೃತ ಭಾಷೆಯಲ್ಲಿ ಗೌರವ, ಪೂಜನೀಯ ಭಾವವನ್ನು ಸೂಚಿಸುವುದಕ್ಕೆ ಶ್ರೀ ಎಂಬ ಪದವನ್ನು ಬಳಸುವ ಹಾಗೆ ತಮಿಳಿನಲ್ಲಿ 'ತಿರು' ಪದವನ್ನು ಬಳಸುತ್ತಾರೆ.
  • ತಿರುವಳ್ಳುವರ್ ಪದವು ಸಂಸ್ಕೃತದ 'ಶ್ರೀವಲ್ಲಭನ್' ಎನ್ನುವ ಪದಕ್ಕೆ ಹೋಲಿಕೆಯಾಗುತ್ತದೆ. ಈ ಶ್ರೀವಲ್ಲಭನ್ ಎಂಬ ಹೆಸರು ಚೆನೈನಲ್ಲಿರುವ ಮಯಿಲಾಪುರವನ್ನು ಆಳುತ್ತಿದ್ದ ಪಲ್ಲವ ರಾಜನ ಹೆಸರು. ಇತ್ತೀಚೆಗೆ ಕನ್ಯಾಕುಮಾರಿಯ ಇತಿಹಾಸ ಮತ್ತು ಸಾಂಸ್ಕೃತಿಕ ಸಂಶೋಧನ ಕೇಂದ್ರದವರ ಶೋಧನೆಯ ಪ್ರಕಾರ 'ವಳ್ಳುವರ್' ಎಂಬುವವನು ತಮಿಳುನಾಡಿನ ಕನ್ಯಾಕುಮಾರಿ ಜಿಲ್ಲೆಯ 'ವಳ್ಳುವನಾಡು' ಎಂಬ ರಾಜ್ಯದ ರಾಜನೆಂದು ಹೇಳುತ್ತಾರೆ.
 

ವೈಯಕ್ತಿಕ ಜೀವನ ಬದಲಾಯಿಸಿ

  • ತಿರುವಳ್ಳುವರ್ ಅವರ ಕಾಲ ಕ್ರಿ.ಶ. ಮೂರನೇ ಶತಮಾನ ಎಂದು ಹೇಳಲಾಗುತ್ತದೆ. ಇವರು ಹುಟ್ಟಿದ ಸ್ಥಳ ತಮಿಳುನಾಡಿಲ್ಲಿರುವ ಚೆನೈ ಪ್ರಾಂತ್ಯದ ಮಯಿಲಾಪುರ ಅಥವಾ ಕನ್ಯಾಕುಮಾರಿ ಜಿಲ್ಲೆಯ ತಿರುನಯನಾರ್ ಅಲ್ಲಿರುವ ಕುರುಚಿ ಎಂಬ ಊರು. ಅವರ ಬರವಣಿಗೆಯ ಶೈಲಿ ನೋಡಿ, ಕಾಲ ಮತ್ತು ಸ್ಥಳವನ್ನು ಊಹಿಸಲಾಗಿದೆ. ಆದರೆ ಕೆಲವು ಪುರಾಣಗಳಿಂದ ತಿರುವಳ್ಳುವರ್ ಅವರ ವೈಯಕ್ತಿಕ ಜೀವನದ ಬಗ್ಗೆ ಕೆಲವು ಮಾಹಿತಿ ಸಿಗುತ್ತದೆ.
  • ತಿರುವಳ್ಳುವರ್ ಅವರ ತಾಯಿಯ ಹೆಸರು ಆದಿ ಹಾಗು ಅವರ ತಂದೆಯ ಹೆಸರು ಭಗವಾನ್. ಅವರ ಹೆಂಡತಿಯ ಹೆಸರು ವಾಸುಕಿ ಅಮ್ಮೈಯಾರ್ ಮತ್ತು ಅವರ ವೃತ್ತಿ ನೇಕಾರಿಕೆಯಾಗಿತ್ತು. ಹಾಗೆಯೆ ಇನ್ನು ಕೆಲವು ಪುರಾಣಗಳಿಂದ ತಿರುವಳ್ಳುವರ್ ವಾಸವಾಗಿದ್ದಂಥ ಮನೆಯು ಈಗ ದೇವಸ್ಥಾನವಾಗಿದೆ. ಇನ್ನು ತಿರುವಳ್ಳುವರ್ ಮತ್ತು ಅವರ ಪತ್ನಿ ವಾಸುಕಿ ಯವರ ಬಗ್ಗೆ ಸಾಕಷ್ಟು ದಂತ ಕಥೆಗಳಿವೆ.
  • ಅವುಗಳಲ್ಲಿ ಒಂದು, ಒಮ್ಮೆ ವಾಸುಕಿರವರು ಬಾವಿಯಲ್ಲಿ ನೀರು ಸೇದುತ್ತಿರುವಾಗ ಗಂಡ ಕರೆದರು ಎಂದು ಹಗ್ಗದಲ್ಲಿ ಕಟ್ಟಿದ್ದ ಬಿಂದಿಗೆಯನ್ನು ಬಾವಿಯೊಳಗಡೆಯೆ ಬಿಟ್ಟು ತನ್ನ ಪತಿಯ ಯೋಗಕ್ಷೇಮ ವಿಚಾರಿಸಲು ಹೊರಡುತ್ತಾರೆ, ಹೀಗೆ ಪತ್ನಿ ವಾಸುಕಿ ಗಂಡನಿಗೆ ತನ್ನ ಸಂಯಮವನ್ನು ಸಮರ್ಪಣೆ ಮಾಡಿದಳು. ಎರಡು, ತಿರುವಳ್ಳುವರ್ ಪ್ರತಿದಿನವು ಊಟಕ್ಕೆ ಕುಳಿತಾಗ ಬಾಳೆ ಎಲೆಯ ಜೊತೆಗೆ ಒಂದು ಚೊಂಬಿನಲ್ಲಿ ನೀರು ಮತ್ತು ಒಂದು ಮರದ ಕಡ್ಡಿಯನ್ನು ಜೊತೆಯಲ್ಲಿ ಇಟ್ಟುಕೊಳುತ್ತಿದ್ದರು.
  • ಈ ಮರದ ಕಡ್ಡಿ ಏಕೆಂದರೆ, ವಾಸುಕಿ ಅನ್ನ ಬಡಿಸುವಾಗ ಬಾಳೆಎಲೆಯಿಂದ ಆಚೆ ಬೀಳುವ ಅನ್ನದ ಅಗಳನ್ನು ತೆಗೆಯಲು ಇಟ್ಟುಕೊಳ್ಳುತ್ತಿದ್ದರು ಎಂಬ ಪ್ರತೀತಿ ಇದೆ. ಆದರೆ ಒಂದು ದಿನವೂ ತಿರುವಳ್ಳುವರ್ ರವರಿಗೆ ಆ ಅವಕಾಶ ಸಿಗಲೇ ಇಲ್ಲ. ಇದರಿಂದ ವಾಸುಕಿ ತನ್ನ ಪತಿಯ ಮೇಲೆ ಇಟ್ಟುಕೊಂಡ್ಡಿದ್ದ ಪ್ರೀತಿ, ಭಕ್ತಿ, ಶ್ರದ್ಧೆಯೆಲ್ಲವು ತಿಳಿಯುತ್ತದೆ. ತಿರುವಳ್ಳುವರ್ ತಮ್ಮ ಜೀವನದ ಕೆಲವು ಸಮಯವನ್ನು ಮಧುರೈಯನ್ನು ಆಳುತ್ತಿದ್ದ ಪಾಂಡ್ಯ ವಂಶದ ರಾಜನ ಆಸ್ಥಾನದಲ್ಲಿ ಕವಿಯಾಗಿದ್ದರು.
 
ತಿರುಕ್ಕುರಳ್

ತಿರುಕ್ಕುರಳ್ ಕೃತಿಯ ಬಗ್ಗೆ ಬದಲಾಯಿಸಿ

  • ತಿರುವಳ್ಳುವರ್ ಅವರು ಬರೆದಿರುವ ತಿರುಕ್ಕುರಳ್ ಕೃತಿ ತಮಿಳು ಭಾಷೆಯ ಅತ್ಯಂತ ಪೂಜ್ಯ ಮತ್ತು ಪ್ರಾಚೀನ ಕೃತಿಗಳಲ್ಲಿ ಒಂದಾಗಿದೆ. ಇದು ಜೀವನದಲ್ಲಿ ನೀತಿ ಮತ್ತು ಸುಧಾರಣೆ ಹೊಂದಲು ಒಂದು ಸೂಕ್ತ ಮಾರ್ಗದರ್ಶಕ ಕೃತಿಯಾಗಿದೆ. ಈ ತಿರುಕ್ಕುರಳ್ ಕೃತಿಯನ್ನು "ಸಾಮಾನ್ಯ ಮತ" ವೆಂದು ಪರಿಗಣಿಸಲಾಗುತ್ತದೆ. ಒಬ್ಬ ಮನುಷ್ಯ ಉತ್ತಮ ಜೀವನ ನಡೆಸಲು ಬೇಕಾದಂತಹ ತಿಳುವಳಿಕೆ ಈ ಕೃತಿಯನ್ನು ಓದುವುದರ ಮೂಲಕ ಗಳಿಸಬಹುದು.
  • ಈ ತಿರುಕ್ಕುರಳ್ ಕೃತಿಯು ಬಹಳಷ್ಟು ಬೇರೆ ಭಾಷೆಗಳಿಗೆ ಅನುವಾದಗೊಂಡಿದೆ. ಇದರಲ್ಲಿ ವಿಶೇಷವೆಂದರೆ ಈ ಕೃತಿಯು "ಲ್ಯಾಟಿನ್" ಭಾಷೆಗೂ ಸಹ ಅನುವಾದಗೊಂಡಿದೆ. ೧೭೩೦ರಲ್ಲಿ ಕಾನ್ಸ್ಟಂಟೈನ್ ಜೋಸೆಫ್ ಬೆಸ್ಚೀರವರು ಈ ತಿರುಕ್ಕುರಳ್ ಕೃತಿಯನ್ನು ಲ್ಯಾಟಿನ್ ಭಾಷೆಗೆ ಅನುವಾದಿಸಿದರು. ಇದರಿಂದ ಯೂರೋಪಿಯನ್ ತತ್ವಜ್ಞಾನಿಗಳಿಗೆ ಭಾರತದ ಪ್ರಾಚೀನ ಕೃತಿಯ ಪರಿಚಯವಾಯಿತು.

ತಿರುಕ್ಕುರಳ್ ಪದ ನಿಷ್ಪತ್ತಿ ಬದಲಾಯಿಸಿ

  • ತಿರುಕ್ಕುರಳ್ ಪದವು ತಿರು ಮತ್ತು ಕುರಳ್ ಎಂಬ ಎರಡು ಪದಗಳಿಂದ ರೂಪುಗೊಂಡಿದೆ. ಇಲ್ಲಿ 'ತಿರು' ಎಂದರೆ ಪೂಜನೀಯ ಭಾವ ಮತ್ತು 'ಕುರಳ್' ಎಂದರೆ ಆಂಗ್ಲ ಭಾಷೆಯಲ್ಲಿ ಬ್ಯಾಲಡ್ ಎಂಬುದು ಒಂದು ಬಗೆಯ ಪದ್ಯ ಅಥವಾ ಕವಿತೆ ಬರೆಯುವ ಶೈಲಿ. ತಮಿಳಿನಲ್ಲಿ ಹಲವು ಬಗೆಯ ಪದ್ಯ ಅಥವಾ ಕವಿತೆ ಬರವಣಿಗೆ ಶೈಲಿಗಳಿವೆ, ಉದಾಹರಣೆಗೆ ವೆಂಪ, ಯಪ್ಪು ಇತ್ಯಾದಿ. ತಿರುಕ್ಕುರಳ್ ಗ್ರಂಥವನ್ನು ಮೂರು ವಿಭಾಗಗಳಾಗಿ ವಿಂಗಡಿಸಲಾಗಿದೆ.
  • ಅದರಲ್ಲಿ ಮೊದಲನೆಯದು ಅರಮ್, ಎರಡನೆಯ ವಿಭಾಗ ಪೊರಲ್ ಮತ್ತು ಮೂರನೇ ಹಾಗು ಕೊನೆಯ ವಿಭಾಗ ಕಾಮಮ್. ಮೊದಲನೆಯ ಅರಮ್ ಭಾಗವು ಆತ್ಮಸಾಕ್ಷಿ, ಗೌರವ ಮತ್ತು ಉತ್ತಮ ನಡೆವಳಿಕೆಗಳ ಬಗ್ಗೆ ತಿಳಿಸುತ್ತದೆ. ಎರಡನೆಯ ಪೊರಲ್ ಭಾಗವು ಲೌಕಿಕ ವ್ಯವಹಾರಗಳಲ್ಲಿ ಅನುಸರಿಸಬೇಕಾದ ಮಾರ್ಗ ಮತ್ತು ಸೂಚನೆಗಳ ಬಗ್ಗೆ ಸರಿಯಾದ ರೀತಿಯಲ್ಲಿ ಚರ್ಚಿಸುತ್ತದೆ ಮತ್ತು ಕಾಮಮ್ ವಿಭಾಗದಲ್ಲಿ ಹೆಣ್ಣು ಮತ್ತು ಗಂಡಿನ ನಡುವೆ ಇರುವ ಪ್ರೀತಿ ಬಗ್ಗೆ ತಿಳಿಸಿಕೊಡುತ್ತದೆ.
  • ಮೊದಲ ವಿಭಾಗದಲ್ಲಿ ೩೮ ಅಧ್ಯಾಯಗಳು, ಎರಡನೇ ವಿಭಾಗದಲ್ಲಿ ೭೦ ಅಧ್ಯಾಯಗಳು ಮತ್ತು ಮೂರನೇ ವಿಭಾಗದಲ್ಲಿ ೨೫ ಅಧ್ಯಾಯಗಳನ್ನು ಹೊಂದಿವೆ. ಪ್ರತಿ ಅಧ್ಯಾಯ 10 ದ್ವಿಪದಿಗಳನ್ನು ಅಥವಾ ಕುರಳ್‌ಗಳನ್ನು ಒಳಗೊಂಡಿದೆ. ಒಟ್ಟಾರೆ ೧೩೩೦ ದ್ವಿಪದಿಗಳು ತಿರುಕ್ಕುರಳ್ ಕೃತಿಯಲ್ಲಿದೆ.[೨]

ತಿರುವಳ್ಳುವರ್ ಪ್ರತಿಮೆ ಬದಲಾಯಿಸಿ

  • ತಿರುವಳ್ಳುವರ್ ಪ್ರತಿಮೆ ಜನವರಿ ೧, ೨೦೦೦ ರಂದು ಸ್ಥಾಪಿಸಲಾಯಿತು. ಕನ್ಯಾಕುಮಾರಿ ಪಟ್ಟಣದ ಸಮೀಪವಿರುವ ಒಂದು ಸಣ್ಣ ದ್ವೀಪದ ಮೇಲೆ ಈ ಪ್ರತಿಮೆ ಇದೆ. ಇದು ೧೩೩ ಅಡಿ ಎತ್ತರದ (೪೦.೬ ಮೀಟರ್) ಕಲ್ಲಿನ ಶಿಲ್ಪ ಕೃತಿ. ಈ ದ್ವೀಪದ ವಿಶೇಷವೇನೆಂದರೆ, ಇಲ್ಲಿ ಎರಡು ಸಮುದ್ರ ಮತ್ತು ಸಾಗರಗಳ ಮಿಲನವಾಗುತ್ತದೆ.
  • ಈ ಪ್ರತಿಮೆಯು ೯೫ ಅಡಿ ( ೨೯ ಮೀಟರ್) ಎತ್ತರವನ್ನು ಹೊಂದಿದ್ದು, ತಿರುಕ್ಕುರಳ್ ನಲ್ಲಿರುವ ೩೮ ಅಧ್ಯಾಯಗಳನ್ನು ಪ್ರತಿನಿಧಿಸುವ ಒಂದು ೩೮ ಅಡಿ ಎತ್ತರದ( ೧೧.೫ ಮೀಟರ್) ಪೀಠದ ಮೇಲೆ ನಿಂತಿದೆ. ಪೀಠದ ಮೇಲೆ ನಿಂತಿರುವ ಈ ಪ್ರತಿಮೆ ಸಂಪತ್ತು ಮತ್ತು ಪ್ರೀತಿಯನ್ನು ಗಳಿಸಿ, ಘನ ಗುಣಗಳನ್ನು ಅಡಿಪಾಯವನ್ನಾಗಿ ಮಾಡಿಕೊಂಡು ಜೀವನವನ್ನು ಅನುಭವಿಸುವ, ವ್ಯಕ್ತಿಗಳನ್ನು ಪ್ರತಿನಿಧಿಸುತ್ತದೆ.
  • ಈ ಪ್ರತಿಮೆಯು ಮನುಷ್ಯನ ದೇಹದಲ್ಲಿ ಆಸ್ತಿ ಹೇಗೆ ಒಳಗೊಂಡಿರುತ್ತದೊ ಹಾಗೆಯೇ ಮಾನವ ಸಂತೋಷವನ್ನು ಪ್ರತಿನಿಧಿಸುತ್ತದೆ. ಪ್ರತಿಮೆ ಮತ್ತು ಪೀಠದ ಸಂಯೋಜಿತ ಎತ್ತರ ತಿರುಕ್ಕುರಳ್ ೧೩೩ ಅಧ್ಯಾಯಗಳು ಸೂಚಿಸುವ ೧೩೩ ಅಡಿ ಆಗಿದೆ. ಇದು ೭೦೦೦ ಟನ್ ಒಟ್ಟು ತೂಕವನ್ನು ಹೊಂದಿದೆ. ಸೊಂಟದ ಸುತ್ತ ಸ್ವಲ್ಪ ಬಾಗಿದ ಈ ಪ್ರತಿಮೆಯನ್ನು ನೋಡಿದರೆ, ನರ್ತಿಸುವ ನಟರಾಜನಂತಹ ಪುರಾತನ ಭಾರತೀಯ ದೇವತೆಗಳ ಭಂಗಿಯನ್ನು ನೆನಪಿಗೆ ತರುತ್ತದೆ.[೩]

ಇತರೆ ಕೃತಿಗಳು ಬದಲಾಯಿಸಿ

  • ತಿರುವಳ್ಳುವರ್, ತಿರುಕ್ಕುರಳ್ ಕೃತಿ ಬರೆದಿರುವುದಲ್ಲದೆ ತಮಿಳಿನಲ್ಲಿ ಇನ್ನೆರಡು ಕೃತಿಗಳನ್ನು ರಚಿಸಿದ್ದಾರೆ. ಅದ್ಯಾವುದೆಂದರೆ "ಜ್ಞಾನ ವೆಟ್ಟಿಯಾನ್" ಮತ್ತು "ಪಂಚರತ್ನಮ್". ಇವುಗಳು ಔಷಧಿಗಳಿಗೆ ಸಂಬಂಧ ಪಟ್ಟ ಕೃತಿಗಳಾಗಿವೆ. ಆದರೆ ಕೆಲವರು ಅದೇ ಹೆಸರಿನ ಬೇರೊಬ್ಬ ಲೇಖಕ ಈ ಕೃತಿಗಳನ್ನು ರಚಿಸಿದ್ದಾನೆ ಎಂದು ಹೇಳುತ್ತಾರೆ.
  • ಆದರೆ ಈ ಕೃತಿಗಳು ಹದಿನಾರನೆ ಶತಮಾನದಲ್ಲಿ ರಚನೆಯಾಗಿರುವುದರಿಂದ, ಇದು ತಿರುವಳ್ಳುವರ್ ಅವರ ಕೃತಿಯೇ ಎಂದು ಹೇಳಲಾಗುತ್ತಿದೆ. ಈ ಕೃತಿಗಳು ತಮಿಳು ವಿಜ್ಞಾನ, ಸಾಹಿತ್ಯ, ಆರ್ಯುವೇದ ಮತ್ತು ಔಷಧಕ್ಕೆ ಬೃಹತ್ ಕೊಡುಗೆಯಾಗಿದೆ.
 
ವಳ್ಳುವರ್ ಕೋಟ್ಟಮ್

ತಿರುವಳ್ಳುವರ್ ಜ್ಞಾಪಕಾರ್ಥ ಬದಲಾಯಿಸಿ

  • ತಿರುವಳ್ಳುವರ್ ಜ್ಞಾಪಕಾರ್ಥವಾಗಿ "ವಳ್ಳುವರ್ ಕೋಟ್ಟಮ್" ಎಂಬ ದೇವಸ್ಥಾನವನ್ನು ಚೆನೈನಲ್ಲಿ ೧೯೭೬ರಲ್ಲಿ ನಿರ್ಮಿಸಲಾಯಿತು. ಈ ಸ್ಮಾರಕವು ದ್ರಾವಿಡ ದೇವಸ್ಥಾನಗಳಲ್ಲಿ ಕಂಡು ಬರುವಂತಹ ಶೈಲಿಯ ಕೆತ್ತನೆಯನ್ನು ಒಳಗೊಂಡಿದೆ.ಸ್ಮಾರಕದ ಪಕ್ಕದಲ್ಲಿರುವ ಸಭಾಂಗಣವು ಏಷ್ಯಾದಲ್ಲೇ ಅತಿ ದೊಡ್ದ ಸಭಾಂಗಣವಾಗಿದೆ. ಅದರಲ್ಲಿ ೪೦೦೦ ಸಾವಿರ ಆಸನಗಳ ವ್ಯವಸ್ಥೆ ಇದೆ.
  • ಅರಬ್ಬೀ ಸಮುದ್ರ, ಬಂಗಾಳ ಕೊಲ್ಲಿ ಮತ್ತು ಹಿಂದೂ ಮಹಾಸಾಗರ ಒಮ್ಮುಖವಾಗಿರುವ ಭಾರತೀಯ ಉಪಖಂಡದ, ದಕ್ಷಿಣ ತುದಿಯಲ್ಲಿರುವ ಕನ್ಯಾಕುಮಾರಿಯಲ್ಲಿ ನಿರ್ಮಿಸಲಾದ ತಿರುವಳ್ಳುವರ್ ಪ್ರತಿಮೆ ೧೩೩ ಅಡಿ ಎತ್ತರವಿದೆ. ಈ ಪ್ರತಿಮೆ ಯನ್ನು ಹೀಗೆಯೇ ಇರಬೇಕೆಂದು ಚಿತ್ರಿಸಿದವರು ವಿ. ಗಣಪತಿ ಸ್ಥಪತಿಯವರು. ಇವರು ತಮಿಳುನಾಡಿನ ದೇವಾಲಯಗಳ ವಿನ್ಯಾಸಕರು. ಇವರ ಪ್ರತಿಮೆ ಇತರೆ ದೇಶಗಳಲ್ಲೂ ಸಹ ಇವೆ, ಲಂಡನ್ ಓರಿಯಂಟಲ್ ಅಂಡ್ ಆಫ್ರಿಕನ್ ಸ್ಟಡೀಸ್ ಸ್ಕೂಲ್ ಹೊರಗೆ ತಿರುವಳ್ಳುವರ್ ಪ್ರತಿಮೆಯನ್ನು ಇಡಲಾಗಿದೆ.

ಉಲ್ಲೇಖಗಳು ಬದಲಾಯಿಸಿ

  1. Natarajan, P. R. (December 2008). Thirukkural: Aratthuppaal (in Tamil) (First ed.). Chennai: Uma Padhippagam. p. 2.{{cite book}}: CS1 maint: unrecognized language (link)
  2. "ತಿರುಕ್ಕುರಳ್". Archived from the original on 2015-09-24. Retrieved 2015-09-10.
  3. giganticstatues.com/kanyakumari/ ಕನ್ಯಾಕುಮಾರಿಯಲ್ಲಿರುವ ತಿರುವಳ್ಳುವರ್ ಪ್ರತಿಮೆ